Tag: radhika apte

  • ನಿರ್ದೇಶನದತ್ತ ಬಾಲಿವುಡ್ ನಟಿ ರಾಧಿಕಾ ಆಪ್ಟೆ

    ನಿರ್ದೇಶನದತ್ತ ಬಾಲಿವುಡ್ ನಟಿ ರಾಧಿಕಾ ಆಪ್ಟೆ

    ಬಾಲಿವುಡ್ ಬೆಡಗಿ ಕಂಗನಾ ರಣಾವತ್, ಪೂಜಾ ಭಟ್, ಕೊಂಕಣ್ ಸೇನ್, ನಂದಿತಾ ದಾಸ್ ಹಾದಿಯನ್ನೇ ನಟಿ ರಾಧಿಕಾ ಆಪ್ಟೆ (Radhika Apte) ಅನುಸರಿಸುತ್ತಿದ್ದಾರೆ. ನಟಿಯಾಗಿ ಗೆದ್ದಿದ್ದ ರಾಧಿಕಾ ಈಗ ನಿರ್ದೇಶನದತ್ತ  (Direction) ಒಲವು ತೋರಿಸಿದ್ದಾರೆ. ಆ್ಯಕ್ಷನ್ ಕಮ್ ಫ್ಯಾಂಟಸಿ ಚಿತ್ರಕ್ಕೆ ಡೈರೆಕ್ಷನ್ ಮಾಡಲು ಹೊರಟಿದ್ದಾರೆ.

    ನಟನೆಯ ಜೊತೆ ನಿರ್ದೇಶನ ಮಾಡಲು ರಾಧಿಕಾ ದಿಟ್ಟ ನಿರ್ಧಾರ ಮಾಡಿದ್ದಾರೆ.‌ ತಮ್ಮ ನಿರ್ದೇಶನದ ಪ್ರಾಜೆಕ್ಟ್‌ಗೆ ‘ಕೋಟ್ಯ’ ಎಂದು ಹೆಸರಿಡಲಾಗಿದೆ. ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ. ನಿರ್ದೇಶನದ ಮೊದಲ ಸಿನಿಮಾದಲ್ಲೇ ಆ್ಯಕ್ಷನ್ ಕಮ್ ಫ್ಯಾಂಟಸಿ ಕಥೆ ಹೇಳೋಕೆ ಹೊರಟಿದ್ದಾರೆ. ಇದನ್ನೂ ಓದಿ:‘ಜೊತೆಯಲಿ ಇರುವೆನು ಹೀಗೆ ಎಂದು’ ಪತ್ನಿಗಾಗಿ ಹಾಡು ಹಾಡಿದ ಯಶ್

    ಕಬ್ಬು ಕಡಿಯುವ ವಲಸೆ ಕಾರ್ಮಿಕಳೊಬ್ಬಳು ವೈದ್ಯಕೀಯ ಚಿಕಿತ್ಸೆಯಿಂದ ಅಸಾಧಾರಣ ಶಕ್ತಿ ಪಡೆಯುತ್ತಾಳೆ. ಇದರಿಂದ ತನ್ನ ಕುಟುಂಬವನ್ನು ಸಾಲದಿಂದ ಹೇಗೆ ಮುಕ್ತಗೊಳಿಸುತ್ತಾಳೆ ಎಂಬುದು ಚಿತ್ರದ ಆನ್‌ಲೈನ್ ಕಥೆಯಾಗಿದೆ. ಈ ಮಹಿಳಾ ಪ್ರಧಾನ ಚಿತ್ರವನ್ನು ನಿರ್ದೇಶನ ವಿಕ್ರಮಾದಿತ್ಯ ಮೋಟ್ವಾನೆ ನಿರ್ಮಾಣ ಮಾಡಲಿದ್ದಾರೆ.

    ಹಿಂದಿಯ ಪ್ಯಾಡ್‌ಮ್ಯಾನ್, ಅಂಧಾದುನ್, ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಧಿಕಾ ನಟಿಸಿದ್ದಾರೆ. ತೆಲುಗು, ತಮಿಳಿನಲ್ಲಿ ಅವರು ನಟಿಸಿ ಸೈ ಎನಿಸಿಕೊಂಡಿದ್ದಾರೆ.

  • ಮದುವೆಯಾದ 12 ವರ್ಷಗಳ ಬಳಿಕ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ರಾಧಿಕಾ ಆಪ್ಟೆ

    ಮದುವೆಯಾದ 12 ವರ್ಷಗಳ ಬಳಿಕ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ರಾಧಿಕಾ ಆಪ್ಟೆ

    ಬಾಲಿವುಡ್ ಬೆಡಗಿ ರಾಧಿಕಾ ಆಪ್ಟೆ (Radhika Apte) ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಮದುವೆಯಾದ 12 ವರ್ಷಗಳ ಬಳಿಕ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ದೀಪಿಕಾ ಪಡುಕೋಣೆ ಜೊತೆ ಕೆಲಸ ಮಾಡುವುದು ಸುಲಭ- ಹೊಗಳಿದ ಇಮ್ತಿಯಾಜ್ ಅಲಿ

    ರಾಧಿಕಾ ಆಪ್ಟೆ ಅವರು ಇತ್ತೀಚೆಗೆ ಲಂಡನ್ ಫಿಲ್ಮ್ ಫೆಸ್ಟಿವಲ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ, ಬೇಬಿ ಬಂಪ್ ತೋರಿಸಿದ್ದಾರೆ. ಈ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಮಗುವಿನ ನಿರೀಕ್ಷೆಯಲ್ಲಿರುವ ರಾಧಿಕಾಗೆ ಫ್ಯಾನ್ಸ್, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ.

     

    View this post on Instagram

     

    A post shared by Radhika (@radhikaofficial)

    ಅಂದಹಾಗೆ, 2012ರಲ್ಲಿ ಬ್ರಿಟಿಷ್ ಮ್ಯೂಸಿಕ್ ಡೈರೆಕ್ಟರ್ ಬೆನೆಡಿಕ್ಟ್ ಟೇಲರ್ ಅವರನ್ನು ನಟಿ ಮದುವೆಯಾದರು. ಆದರೆ‌ ಈ ಮದುವೆಯ ಬಗ್ಗೆ ಎಲ್ಲೂ ನಟಿ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ. ಸದ್ಯ ನಟಿಯ ಪ್ರೆಗ್ನೆನ್ಸಿ ವಿಚಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

  • ಅಶ್ಲೀಲವನ್ನು ಪ್ರಚಾರ ಮಾಡಿದ ರಾಧಿಕಾ ಆಪ್ಟೆ ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಅಶ್ಲೀಲವನ್ನು ಪ್ರಚಾರ ಮಾಡಿದ ರಾಧಿಕಾ ಆಪ್ಟೆ ಟ್ವಿಟ್ಟರ್‌ನಲ್ಲಿ ಟ್ರೆಂಡ್

    ಮುಂಬೈ: ಪರಭಾಷಾ ನಟಿ ರಾಧಿಕಾ ಆಪ್ಟೆ ವಿಭಿನ್ನ ಮತ್ತು ಕಲಾತ್ಮಕ ಚಲನಚಿತ್ರಗಳಲ್ಲಿ ನಟಿಸುತ್ತಾರೆ. ಈ ಇದೀಗ ಅವರು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗುತ್ತಿದ್ದಾರೆ.

    ಕಲಾತ್ಮಕ ಸಿನಿಮಾ, ವಿಭಿನ್ನವಾದ ಪಾತ್ರ ಮಾಡುತ್ತಿದ್ದ ರಾಧಿಕಾ ಆಪ್ಟೆ, ಇಂದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‍ನಲ್ಲಿದ್ದಾರೆ. ಆದರೆ ಚಲನಚಿತ್ರ ಅಥವಾ ಹೊಸ ಪ್ರಾಜೆಕ್ಟ್‍ಗಾಗಿ ರಾಧಿಕಾ ಸುದ್ದಿಯಾಗಿಲ್ಲ. ಬದಲಾಗಿ ಅಶ್ಲೀಲ ವಿಷಯವನ್ನು ಪ್ರಚಾರ ಮಾಡಿದ್ದಕ್ಕಾಗಿ ನೆಟ್ಟಿಗರು ರಾಧಿಕಾ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

    ರಾಧಿಕಾ ಆಪ್ಟೆ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ ಏಕೆಂದರೆ ಆಕೆ ಪರ್ಚೆಡ್ ಸಿನಿಮಾದ ಲವ್ ದೃಶ್ಯದಲ್ಲಿ ತೆರೆ ಮೇಲೆ ಟಾಪ್ ಬೇತ್ತಳಾಗಿದ್ದಾಳೆ. ಕೆಲವು ಸಿನಿಮಾಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಧಿಕಾ ವಿರುದ್ಧ ನೆಟ್ಟಿಗರು ವಾಗ್ದಾಳಿ ನಡೆಸಿದ್ದಾರೆ. ಸೆಲೆಬ್ರಿಟಿಗಳು ಅನ್ಯಾಯದ ಬಗ್ಗೆ ಮಾತನಾಡುವಾಗ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಾಗ ಮಾತ್ರ ಸಾಮಾಜಿಕ ಜಾಲತಾಣಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇದನ್ನೂ ಓದಿ:  ಚಾಮರಾಜನಗರದಲ್ಲಿ ಮೊದಲ ಬಾರಿಗೆ ಜಿಪ್ ಲೈನ್- ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆ ಪ್ಲಾನ್

    ಇತ್ತೀಚೆಗೆ ರಾಧಿಕಾ ಆಪ್ಟೆಯ ಬೆತ್ತಲೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಿಂದ ನಟಿ ಗಾಬರಿಗೊಂಡು ಸ್ಕ್ರಿಪ್ಟ್‌ಗೆ ಇದು ಅಗತ್ಯವೆಂದು ಹೇಳಿದ್ದರು. ಈ ವೀಡಿಯೋ ಆನ್‍ಲೈನ್‍ನಲ್ಲಿ ಸೋರಿಕೆಯಾದ ನಂತರ ನಾನು ಕೆಲವು ದಿನಗಳವರೆಗೆ ಹೊರಹೋಗಲಿಲ್ಲ ಎಂದು ರಾಧಿಕಾ ಆಪ್ಟೆ ಬಹಿರಂಗಪಡಿಸಿದ್ದರು. ಏಕೆಂದರೆ ಚಾಲಕನಿಂದ ಹಿಡಿದು ಸ್ಟೈಲಿಸ್ಟ್ ವರೆಗಿನವರೆಲ್ಲರೂ ಅವಳನ್ನು ಗುರುತಿಸುತ್ತಾರೆ ಎನ್ನುವ ಭಯ ಕಾಡಿತ್ತು.

  • ವಿವಾಹದಲ್ಲಿ ನಂಬಿಕೆ ಇಲ್ಲ, ಆದ್ರೂ ಮದ್ವೆಯಾದೆ: ರಾಧಿಕಾ ಆಪ್ಟೆ

    ವಿವಾಹದಲ್ಲಿ ನಂಬಿಕೆ ಇಲ್ಲ, ಆದ್ರೂ ಮದ್ವೆಯಾದೆ: ರಾಧಿಕಾ ಆಪ್ಟೆ

    – ಮದುವೆ ಆಗಿದ್ಯಾಕೆ ರಾಧಿಕಾ ಆಪ್ಟೆ?

    ಮುಂಬೈ: ವಿವಾಹ ಮತ್ತು ಸಂಪ್ರದಾಯದಲ್ಲಿ ನನಗೆ ಯಾವುದೇ ರೀತಿಯ ವಿಶ್ವಾಸ ಮತ್ತು ನಂಬಿಕೆಗಳಿಲ್ಲ. ಆದ್ರೆ ವೀಸಾಗಾಗಿ ನಾನು ಮದುವೆ ಆಗಬೇಕಾದ ಪರಿಸ್ಥಿತಿ ಎದುರಾಯ್ತ ಎಂದು ಬಾಲಿವುಡ್ ನಟಿ ರಾಧಿಕಾ ಆಪ್ಟೆ ಹೇಳಿದ್ದಾರೆ.

    ರಾಧಿಕಾ ಆಪ್ಟೆ ನಟನೆಯ ಸಿನಿಮಾಗಳು ಓಟಿಟಿ ಪ್ಲಾಟ್‍ಫಾರಂನಲ್ಲಿ ಸಖತ್ ಸದ್ದು ಮಾಡುತ್ತಿವೆ. ಹಿಂದಿ, ಮರಾಠಿ, ತಮಿಳು, ತೆಲಗು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಸಿನಿಮಾಗಳಲ್ಲಿ ದೊಡ್ಡ ಸ್ಟಾರ್ ಗಳ ಜೊತೆಯಲ್ಲಿ ರಾಧಿಕಾ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಲಂಡನ್ ಮೂಲದ ಸಂಗೀತಗಾರ ಬೆನೆಡಿಕ್ಟ್ ಟೇಲರ್ ಅವರನ್ನ ರಾಧಿಕಾ 2012ರಲ್ಲಿ ಮದುವೆಯಾಗಿದ್ದರು.

    ಸಂದರ್ಶನದಲ್ಲಿ ವೇಳೆ ರಾಧಿಕಾ ಆಪ್ಟೆಯವರಿಗೆ ವೈಯಕ್ತಿಕ ಜೀವನದ ಕುರಿತು ಕೆಲ ಪ್ರಶ್ನೆಗಳನ್ನ ಕೇಳಲಾಗಿತ್ತು. ಮದುವೆಯಲ್ಲಿ ನಂಬಿಕೆ ಇಲ್ಲ ಅಂತಾ ಹೇಳುವ ನೀವು ಮದುವೆ ಆಗಿದ್ದೀರಾ ಅಲ್ವಾ ಎಂದು ಪ್ರಶ್ನೆಗೆ ರಾಧಿಕ ಹಾಸ್ಯಮಯವಾಗಿ ಉತ್ತರಿಸಿದ್ದಾರೆ. ನನಗೆ ಮದುವೆಯಾದ್ರೆ ವೀಸಾ ಬೇಗ ಸಿಗುತ್ತೆ ಎಂಬ ವಿಷಯ ತಿಳಿಯಿತು. ನಾನು ಮತ್ತು ಬೆನೆಡಿಕ್ಟ್ ಜೊತೆಯಾಗಿ ಇರಬೇಕೆಂದು ನಿರ್ಧರಿಸಿದಾಗ ನನಗೆ ವೀಸಾದ ಸಮಸ್ಯೆಯುಂಟಾಯ್ತು. ಮದುವೆ ಆಗಿದ್ದರಿಂದ ವೀಸಾ ಸುಲಭವಾಗಿ ಸಿಕ್ಕಿತು. ಹಾಗಂತ ಮದುವೆ ಮತ್ತು ಸಂಪ್ರದಾಯಗಳನ್ನ ಒಪ್ಪುತ್ತೇನೆ ಎಂದರ್ಥವಲ್ಲ ಎಂದಿದ್ದಾರೆ.

    ರಾಧಿಕಾ ಮತ್ತು ಬೆನೆಡಿಕ್ಟ್ ಬಹುದೀರ್ಘ ಸಮಯದಿಂದ ರಿಲೇಶನ್ ಶಿಪ್ ನಲ್ಲಿದ್ದರು. ಕೆಲಸದ ನಿಮಿತ್ತ ರಾಧಿಕಾ ಹೆಚ್ಚಿನ ದಿನಗಳನ್ನ ಭಾರತದಲ್ಲಿ ಕಳೆಯವಂತಾಗಿತ್ತು. ನಂತರ ಇಬ್ಬರು 2012ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

  • ನಿರ್ದೇಶಕರ ಬಗ್ಗೆ ರಾಧಿಕಾ ಅಸಮಾಧಾನ

    ನಿರ್ದೇಶಕರ ಬಗ್ಗೆ ರಾಧಿಕಾ ಅಸಮಾಧಾನ

    ನವದೆಹಲಿ: ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ಬಾಲಿವುಡ್ ಬೆಡಗಿ ರಾಧಿಕಾ ಆಪ್ಟೆ ಇದೀಗ ನಿರ್ದೇಶಕರ ವಿರುದ್ಧ ಅಸಮಾಧಾನ ಹೊರ ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ಬಹುತೇಕ ನಟ, ನಟಿಯರಿಗೆ ಸಿನಿಮಾ ಸೆಟ್‍ಗಳಲ್ಲಿ ಕಹಿ ಅನುಭವಗಳು ಆಗಿರುತ್ತವೆ. ಕೆಲವರು ಇವನ್ನು ಬಹಿರಂಗಪಡಿಸುತ್ತಾರೆ, ಇನ್ನೂ ಕೆಲವರು ಹೇಳಿಕೊಳ್ಳುವುದಿಲ್ಲ. ಇದೀಗ ರಾಧಿಕಾ ಆಪ್ಟೆ ಅವರು ಸೆಟ್‍ನಲ್ಲಿ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

    ರಾಧಿಕಾ ಆಪ್ಟೆ ಬಾಲಿವುಡ್‍ನ ಬದ್ಲಾಪುರ್, ಪಾಚ್ರ್ಡ್ ಹಾಗೂ ಅಂಧಾದುನ್ ಸಿನಿಮಾಗಳಲ್ಲಿ ನಟಿಸಿದ್ದು, ಈ ಸಿನಿಮಾಗಳ ಮೂಲಕವೇ ಅವರು ಪ್ರತಿಭಾನ್ವಿತ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಈ ಚಿತ್ರಗಳಲ್ಲಿನ ಅವರ ನಟನೆಯನ್ನು ಮೆಚ್ಚದವರಿಲ್ಲ. ಸಾಲು ಸಾಲು ಬಾಲಿವುಡ್ ಸಿನಿಮಾ ಮಾತ್ರವಲ್ಲದೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದಲ್ಲಿ ಸಹ ನಟಿಸಿದ್ದಾರೆ. ಹೀಗೆ ಯಶಸ್ವಿ ಚಿತ್ರಗಳಲ್ಲಿ ನಟಿಸಿದರೂ ರಾಧಿಕಾ ಹೆಚ್ಚು ಸುದ್ದಿಯಾಗುವುದು ವಿವಾದಗಳಿಂದಲೇ ಎನ್ನುವುದು ಬೇಸರದ ಸಂಗತಿ.

    ತಮ್ಮ ಮಾತುಗಳಿಂದಲೇ ಆಗಾಗ ವಿವಾದದ ಸುಳಿಗೆ ರಾಧಿಕಾ ಸಿಲುಕುತ್ತಾರೆ. ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲಿನ ಲಿಂಗ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ನಿರ್ದೇಶಕರ ವಿರುದ್ಧ ಹರಿಹಾಯ್ದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಬಹುತೇಕ ನಿರ್ದೇಶಕರು `ಎ’ ಗ್ರೇಡ್ ಕಂಟೆಂಟ್ ಇರುವ ಸಿನಿಮಾಗಳಿಗೇ ಆಫರ್ ನೀಡುತ್ತಾರೆ. ಸಿನಿಮಾದ ಸ್ಕ್ರಿಪ್ಟ್ ಬೇಡಿದರಷ್ಟೇ ಮಾದಕ ದೃಶ್ಯಗಳಲ್ಲಿ ನಟಿಸುತ್ತೇನೆ. ಆದರೆ ನಿರ್ದೇಶಕರು ನನಗೆ ಅಂತಹದ್ದೇ ಆಫರ್ ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇಷ್ಟು ಮಾತ್ರವಲ್ಲದೆ ಲಿಂಗ ತಾರತಮ್ಯ ಅಂದರೆ ಹೀರೋ, ಹೀರೋಯಿನ್‍ಗಳನ್ನು ಸೆಟ್‍ನಲ್ಲಿ ನಡೆಸಿಕೊಳ್ಳುವುದರ ಕುರಿತು ಸಹ ಅವರು ಮಾತನಾಡಿದ್ದಾರೆ. ಎಲ್ಲ ಸಿನಿಮಾಗಳಲ್ಲಿ ಲಿಂಗ ತಾರತಮ್ಯ ಇರುವುದಿಲ್ಲ. ಆದರೆ ನಾನು ನಟಿಸಿರುವ ಸಿನಿಮಾಗಳಲ್ಲಿ ಇಂತಹ ಅನುಭವವಾಗಿದೆ. ಹೀರೊಗಳೇ ಪವರ್‍ಫುಲ್ ಆಗಿರುತ್ತಾರೆ. ಶೂಟಿಂಗ್ ಆರಂಭವಾಗುವುದಕ್ಕೂ ಎರಡು ಗಂಟೆ ಮೊದಲೇ ನಟಿಯರನ್ನು ಸೆಟ್‍ಗೆ ಕರೆಸುತ್ತಾರೆ. ಹೀರೋ ಬರೋವರೆಗೂ ಕಾಯಿಸುತ್ತಾರೆ. ಅಲ್ಲದೆ ನಟಿಯರೊಂದಿಗೆ ನಡೆದುಕೊಳ್ಳುವ ವಿಧಾನದಲ್ಲಿಯೇ ವ್ಯತ್ಯಾಸವಿರುತ್ತದೆ ಅಸಮಾಧಾನ ಹೊರ ಹಾಕಿದ್ದಾರೆ.

    ಅಲ್ಲದೆ ಸಿನಿಮಾ ರಂಗದಲ್ಲಿ ತಾವು ಪಟ್ಟ ಕಷ್ಟದ ಕುರಿತು ಸಹ ಮಾತನಾಡಿರುವ ಅವರು, ಬಣ್ಣದ ಲೋಕದಲ್ಲಿ ಕೆಲಸ ಮಾಡಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಚಿತ್ರರಂಗ ಪ್ರವೇಶಿಸಿದ ಆರಂಭದ ದಿನಗಳು ಕಠಿಣವಾಗಿದ್ದವು. ಹೀಗೆ ಕಷ್ಟ ಪಟ್ಟು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ. ರಾಧಿಕಾ ಆಪ್ಟೆ ಇತ್ತೀಚೆಗೆ ತಮ್ಮದೇಯಾದ ಫ್ಯಾಷನ್ ಬ್ರಾಂಡ್‍ಗೂ ಚಾಲನೆ ನೀಡಿದ್ದು, ಚಿತ್ರರಂಗದ ಹೊರತಾಗಿ ಇದನ್ನೂ ನಿಭಾಯಿಸುತ್ತಾರೆ.

  • ಬೋಲ್ಡ್ ಸೀನ್ ಲೀಕ್ – ನಾವು ಸೈಕೋ ಸೊಸೈಟಿಯಲ್ಲಿದ್ದೇವೆ ಎಂದು ರಾಧಿಕಾ ಗರಂ

    ಬೋಲ್ಡ್ ಸೀನ್ ಲೀಕ್ – ನಾವು ಸೈಕೋ ಸೊಸೈಟಿಯಲ್ಲಿದ್ದೇವೆ ಎಂದು ರಾಧಿಕಾ ಗರಂ

    ಮುಂಬೈ: ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ನಟಿಸಿದ ‘ದಿ ವೆಡ್ಡಿಂಗ್ ಗೆಸ್ಟ್’ ಚಿತ್ರದಲ್ಲಿ ಇರುವ ಬೋಲ್ಡ್ ಸೀನ್ ಲೀಕ್ ಆಗಿದೆ. ಬೋಲ್ಡ್ ಸೀನ್ ಲೀಕ್ ಆಗಿದ್ದಕ್ಕೆ ನಾವು ಸೈಕೋ ಸೊಸೈಟಿಯಲ್ಲಿ ಇದ್ದೇವೆ ಎಂದು ನಟಿ ಗರಂ ಆಗಿದ್ದಾರೆ.

    ರಾಧಿಕಾ ‘ಸ್ಲಂಡಾಗ್ ಮಿಲೇನಿಯರ್’ ಚಿತ್ರದ ಕಲಾವಿದ ದೇವ್ ಪಟೇಲ್ ಅವರ ಜೊತೆ ದಿ ವೆಡ್ಡಿಂಗ್ ಗೆಸ್ಟ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ರಿಲೀಸ್ ಆಗುವ ಮೊದಲೇ ದೇವ್ ಹಾಗೂ ರಾಧಿಕಾ ಅವರ ಬೋಲ್ಡ್ ಸೀನ್ ಲೀಕ್ ಆಗಿದೆ. ಇದರಿಂದ ರಾಧಿಕಾ ಗರಂ ಆಗಿ ಜನರ ಮನಸ್ಥಿತಿ ಬಗ್ಗೆ ಪ್ರಶ್ನಿಸಿದ್ದಾರೆ.

    ಬೋಲ್ಡ್ ಸೀನ್ ಲೀಕ್ ಆಗಿದ್ದಕ್ಕೆ ರಾಧಿಕಾ ಬೇಸರಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ವೆಡ್ಡಿಂಗ್ ಗೆಸ್ಟ್ ಚಿತ್ರದಲ್ಲಿ ಹಲವು ಸುಂದರವಾದ ಸೀನ್‍ಗಳು ಇದೆ. ಆದರೆ ಬೋಲ್ಡ್ ಸೀನ್ ಲೀಕ್ ಆಗಿದೆ. ಏಕೆಂದರೆ ಜನರ ಮನಸ್ಥಿತಿ ಸರಿಯಿಲ್ಲ. ಹೀಗೆ ಮಾಡುವುದರಿಂದ ಜನರ ಮನಸ್ಥಿತಿ ಹಾಗೂ ಎಂತಹ ಸೈಕೋ ಸೊಸೈಟಿಯಲ್ಲಿ ಇದ್ದೇವೆ ಎಂದು ತೋರಿಸುತ್ತದೆ. ಲೀಕ್ ಆಗಿರುವ ದೃಶ್ಯದಲ್ಲಿ ದೇವ್ ಕೂಡ ನಟಿಸಿದ್ದಾರೆ. ಆದರೆ ಇಲ್ಲಿ ನನ್ನ ಹೆಸರು ಮಾತ್ರ ಕೇಳಿ ಬರುತ್ತಿದೆ ಎಂದರು.

    ರಾಧಿಕಾ ಅವರು ಬೋಲ್ಡ್ ಸೀನ್‍ನಲ್ಲಿ ನಟಿಸಿರುವ ದೃಶ್ಯ ಇದು ಮೊದಲ ಬಾರಿಗೆ ಲೀಕ್ ಆಗಿಲ್ಲ. ಈ ಹಿಂದೆ ರಾಧಿಕಾ ‘ಪಾಚರ್ಡ್’ ಚಿತ್ರದಲ್ಲಿ ಬೋಲ್ಡ್ ಸೀನ್‍ನಲ್ಲಿ ನಟಿಸಿದ್ದರು. ಈ ಚಿತ್ರದ ದೃಶ್ಯ ಕೂಡ ಲೀಕ್ ಆಗಿತ್ತು.

  • ಒಂದ್ಸಾರಿ ಅಮ್ಮನಿಗೆ ನನ್ನ ಬೆತ್ತಲೆ ವಿಡಿಯೋ ಕಳಿಸಿದ್ರು: ರಾಧಿಕಾ ಆಪ್ಟೆ

    ಒಂದ್ಸಾರಿ ಅಮ್ಮನಿಗೆ ನನ್ನ ಬೆತ್ತಲೆ ವಿಡಿಯೋ ಕಳಿಸಿದ್ರು: ರಾಧಿಕಾ ಆಪ್ಟೆ

    ಮುಂಬೈ: ಒಂದು ಸಾರಿ ತಾಯಿಗೆ ವಾಟ್ಸಪ್ ಮೂಲಕ ನನ್ನ ಬೆತ್ತಲೆ ವಿಡಿಯೋವನ್ನು ಕಳುಹಿಸಿದ್ದರು ಎಂದು ನಟಿ ರಾಧಿಕಾ ಆಪ್ಟೆ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.

    ವಿಡಿಯೋ ಲೀಕ್ ಆದ್ಮೇಲೆ ನನ್ನ ತಾಯಿಗೆ ಯಾರೋ ಕಳುಹಿಸಿದ್ದರು. ವಿಡಿಯೋ ಲೀಕ್ ಆಗಿದ್ದನ್ನು ಮೊದಲಿಗೆ ತಾಯಿ ನನಗೆ ತಿಳಿಸಿದರು. ನಂತರ ಡ್ರೈವರ್ ವಿಡಿಯೋ ಲೀಕ್ ಆಗಿದ್ದನ್ನು ನನ್ನ ಗಮನಕ್ಕೆ ತಂದಿದ್ದರು. ಸದ್ಯ ನಾನು ಯಾವುದನ್ನು ಮುಚ್ಚಿಕೊಳ್ಳುವುದಿಲ್ಲ. ಇವಾಗ ಏನಾಬೇಕಾದರೂ ಮಾಡುತ್ತೇನೆ. ಆದ್ರೆ ಜನರು ಇಂದು ಅದನ್ನು ಸುದ್ದಿ ಮಾಡಲ್ಲ ಅಂತಲೂ ಹೇಳಿದರು.

    2015ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ಕಿರು ಚಿತ್ರದ ವಿಡಿಯೋ ಕ್ಲಿಪ್ ಲೀಕ್ ಆಗಿತ್ತು. ಆ ವಿಡಿಯೋ ಅಂದು ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 2016ರಲ್ಲಿಯೂ ರಾಧಿಕಾ ಆಪ್ಟೆ ಮತ್ತು ಆದಿಲ್ ಹುಸೈನ್ ಜೊತೆಗಿನ ಸೆಕ್ಸ್ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿತ್ತು.

    ಇತ್ತೀಚೆಗೆ ಮೀಟೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಧಿಕಾ, ಶೂಟಿಂಗ್ ವೇಳೆ ನನಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು. ಬೆನ್ನು ನೋವಿನ ನಡುವೆಯೂ ನನಗೆ ಕೊಟ್ಟ ಪಾತ್ರವನ್ನು ನಾನು ಅಚ್ಚುಕಟ್ಟಾಗಿ ನಿಭಾಯಿಸಿದ್ದೆ. ಶೂಟಿಂಗ್ ನಂತರ ನಾನು ಲಿಫ್ಟ್ ನಲ್ಲಿ ರೂಮಿಗೆ ಹೋಗುವಾಗ ನನ್ನ ಜೊತೆಯಲ್ಲಿ ಸಹನಟ ಕೂಡ ಇದ್ದ. ಲಿಫ್ಟ್ ನಲ್ಲಿ ನಾವು ಹೋಗುವಾಗ ಆತ `ನಿಮಗೆ ಏನಾದರೂ ಸಹಾಯ ಬೇಕೆಂದರೆ ನನ್ನಲ್ಲಿ ಹೇಳಿ. ಮಧ್ಯರಾತ್ರಿ ಆದರೂ ಪರವಾಗಿಲ್ಲ. ನಾನು ಬಂದು ನಿಮಗೆ ಸೊಂಟ ಮಸಾಜ್ ಮಾಡುತ್ತೀನಿ’ ಎಂದು ಹೇಳಿದ್ದ. ಆತನ ಮಾತು ಕೇಳಿ ನಾನು ಒಂದು ಕ್ಷಣ ಬೆಚ್ಚಿಬಿದ್ದೆ. ಅಲ್ಲದೇ ಮಾರನೇ ದಿನ ನಾನು ಆ ಸಹನಟನ ವಿಷಯವನ್ನು ನನ್ನ ಚಿತ್ರತಂಡದ ಕೆಲವು ಜನರ ಬಳಿ ಹೇಳಿಕೊಂಡೆ. ಆಗ ಚಿತ್ರತಂಡದಲ್ಲಿದ್ದ ಹಿರಿಯರು ಆತನನ್ನು ಕರೆದು ಮಾತನಾಡಿದರು. ಆಗ ಆತ ನನ್ನ ಬಳಿ ಕ್ಷಮೆ ಕೇಳಿದ ಅಂತಾ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮಧ್ಯರಾತ್ರಿಯಾದ್ರೂ ಪರ್ವಾಗಿಲ್ಲ ಬಂದು ಸೊಂಟ ಮಸಾಜ್ ಮಾಡ್ತೀನಿ- ರಾಧಿಕಾ ಆಪ್ಟೆಗೆ ಸಹನಟನಿಂದ ಕಿರುಕುಳ!

    ಮಧ್ಯರಾತ್ರಿಯಾದ್ರೂ ಪರ್ವಾಗಿಲ್ಲ ಬಂದು ಸೊಂಟ ಮಸಾಜ್ ಮಾಡ್ತೀನಿ- ರಾಧಿಕಾ ಆಪ್ಟೆಗೆ ಸಹನಟನಿಂದ ಕಿರುಕುಳ!

    ಮುಂಬೈ: ಬಾಲಿವುಡ್ ನಟಿ ರಾಧಿಕಾ ಆಪ್ಟೆ ಈ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಇದೀಗ ಸಹನಟನೊಬ್ಬ ತನಗೆ ಕಿರುಕುಳ ನೀಡಿದ್ದಾನೆ ಅಂತ ಆರೋಪ ಮಾಡಿದ್ದಾರೆ.

    `ಮೀಟೂ’ ಎಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಆಪ್ಟೆ ಸದ್ಯ ಸಹ ನಟನೊಬ್ಬ ತನ್ನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದನು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

    ರಾಧಿಕಾ ಆಪ್ಟೆ ಹೇಳಿದ್ದೇನು?:
    ಇತ್ತೀಚೆಗೆ ಶೂಟಿಂಗ್ ವೇಳೆ ನನಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು. ಬೆನ್ನು ನೋವಿನ ನಡುವೆಯೂ ನನಗೆ ಕೊಟ್ಟ ಪಾತ್ರವನ್ನು ನಾನು ಅಚ್ಚುಕಟ್ಟಾಗಿ ನಿಭಾಯಿಸಿದ್ದೆ. ಶೂಟಿಂಗ್ ನಂತರ ನಾನು ಲಿಫ್ಟ್ ನಲ್ಲಿ ರೂಮಿಗೆ ಹೋಗುವಾಗ ನನ್ನ ಜೊತೆಯಲ್ಲಿ ಸಹನಟ ಕೂಡ ಇದ್ದ. ನಾನು ನಟಿಸುತ್ತಿರುವ ಚಿತ್ರದಲ್ಲಿ ಆತ ಕೂಡ ನಟಿಸುತ್ತಿದ್ದಾನೆ ಎಂಬುದು ಗೊತ್ತು. ಅದು ಬಿಟ್ಟರೆ ನನಗೆ ಆತನ ಬಗ್ಗೆ ಯಾವುದೇ ವಿಷಯ ಗೊತ್ತಿರಲಿಲ್ಲ. ಇದೂವರೆಗೂ ನಾನು ಆತನ ಜೊತೆ ಮಾತನಾಡಿರಲಿಲ್ಲ ಹಾಗೂ ನನಗೆ ಆತನ ಪರಿಚಯ ಕೂಡ ಇರಲಿಲ್ಲ ಎಂದ್ರು.

    ಲಿಫ್ಟ್ ನಲ್ಲಿ ನಾವು ಹೋಗುವಾಗ ಆತ `ನಿಮಗೆ ಏನಾದರೂ ಸಹಾಯ ಬೇಕೆಂದರೆ ನನ್ನಲ್ಲಿ ಹೇಳಿ. ಮಧ್ಯರಾತ್ರಿ ಆದರೂ ಪರವಾಗಿಲ್ಲ. ನಾನು ಬಂದು ನಿಮಗೆ ಸೊಂಟ ಮಸಾಜ್ ಮಾಡುತ್ತೀನಿ’ ಎಂದು ಹೇಳಿದ್ದ. ಆತನ ಮಾತು ಕೇಳಿ ನಾನು ಒಂದು ಕ್ಷಣ ಬೆಚ್ಚಿಬಿದ್ದೆ. ಅಲ್ಲದೇ ಮಾರನೇ ದಿನ ನಾನು ಆ ಸಹನಟನ ವಿಷಯವನ್ನು ನನ್ನ ಚಿತ್ರತಂಡದ ಕೆಲವು ಜನರ ಬಳಿ ಹೇಳಿಕೊಂಡೆ. ಆಗ ಚಿತ್ರತಂಡದಲ್ಲಿದ್ದ ಹಿರಿಯರು ಆತನನ್ನು ಕರೆದು ಮಾತನಾಡಿದರು. ಆಗ ಆತ ನನ್ನ ಬಳಿ ಕ್ಷಮೆ ಕೇಳಿದ ಎಂದು ರಾಧಿಕಾ ಆಪ್ಟೆ ತಿಳಿಸಿದರು.

    ಮೀಟೂ ಲೈಂಗಿಕ ಕಿರುಕುಳದ ಬಗ್ಗೆ ಸಾರ್ವಜನಿಕರ ಮುಂದೆ ಹೇಳುವ ಕಾರ್ಯಕ್ರಮವಾಗಿದೆ. ಹಾಲಿವುಡ್ ಕಲಾವಿದರು ಈ ಕಾರ್ಯಕ್ರಮವನ್ನು ಶುರು ಮಾಡಿದ್ದರು.

    ಈ ಹಿಂದೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಧಿಕಾ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಅದು ನನ್ನ ಮೊದಲ ದಿನದ ಚಿತ್ರೀಕರಣವಾಗಿತ್ತು. ಶೂಟಿಂಗ್‍ಗೆ ಹೋದಾಗ ಮೊದಲ ದಿನವೇ ನನ್ನ ಪಕ್ಕ ಬಂದ ಕುಳಿತ ಆ ನಟ ತನ್ನ ಕಾಲಿಂದ ನನ್ನ ಕಾಲಿಗೆ ಉಜ್ಜಿ ಅಸಭ್ಯವಾಗಿ ನಡೆದುಕೊಂಡನು. ಕೂಡಲೇ ನಾನು ಆತನ ಕೆನ್ನೆಗೆ ಬಾರಿಸಿದೆ ಅಂತಾ ರಾಧಿಕಾ ಆಪ್ಟೆ ಹೇಳಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಮಿಳು ಸಿನಿಮಾದ ನಾಯಕನ ಕೆನ್ನೆಗೆ ಹೊಡೆದಿದ್ದೆ: ನಟಿ ರಾಧಿಕಾ ಆಪ್ಟೆ

    ತಮಿಳು ಸಿನಿಮಾದ ನಾಯಕನ ಕೆನ್ನೆಗೆ ಹೊಡೆದಿದ್ದೆ: ನಟಿ ರಾಧಿಕಾ ಆಪ್ಟೆ

    ಮುಂಬೈ: ಕಾಲಿವುಡ್ ಮತ್ತು ಬಾಲಿವುಡ್ ಗ್ಲಾಮರಸ್ ಬ್ಯೂಟಿ ರಾಧಿಕಾ ಆಪ್ಟೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ತಾನು ದಕ್ಷಿಣ ಭಾರತ ಸಿನಿಮಾದ ಖ್ಯಾತ ನಟರೊಬ್ಬರ ಕೆನ್ನೆ ಗೆ ಬಾರಿಸಿದ್ದೇನೆ ಅಂತಾ ರಾಧಿಕಾ ಆಪ್ಟೆ ಹೇಳಿದ್ದಾರೆ.

    ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಧಿಕಾ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಅದು ನನ್ನ ಮೊದಲ ದಿನದ ಚಿತ್ರೀಕರಣವಾಗಿತ್ತು. ಶೂಟಿಂಗ್ ಗೆ ಹೋದಾಗ ಮೊದಲ ದಿನವೇ ನನ್ನ ಪಕ್ಕ ಬಂದ ಕುಳಿತ ಆ ನಟ ತನ್ನ ಕಾಲಿಂದ ನನ್ನ ಕಾಲಿಗೆ ಉಜ್ಜಿ ಅಸಭ್ಯವಾಗಿ ನಡೆದುಕೊಂಡನು. ಕೂಡಲೇ ನಾನು ಆತನ ಕೆನ್ನೆಗೆ ಬಾರಿಸಿದೆ ಅಂತಾ ರಾಧಿಕಾ ಆಪ್ಟೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಕಿನಿ ಫೋಟೋ ಬಗ್ಗೆ ಟ್ರೋಲ್ ಮಾಡ್ದವರಿಗೆ ಖಡಕ್ ಉತ್ತರ ಕೊಟ್ಟ ನಟಿ ರಾಧಿಕಾ ಆಪ್ಟೆ

    ಕೆಲ ದಿನಗಳ ಹಿಂದೆ ಸ್ಯಾಂಡಲ್‍ವುಡ್ ನಟಿ ಶೃತಿ ಹರಿಹರನ್ ಸಹ ತಮ್ಮ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ರಾಧಿಕಾ ಆಪ್ಟೆ ಅಭಿನಯದ ಪ್ಯಾಡ್ ಮ್ಯಾನ್ ಸಿನಿಮಾ ತೆರೆಕಂಡಿತ್ತು. ಸಿನಿಮಾದಲ್ಲಿ ರಾಧಿಕಾರ ನಟನೆ ವಿಮರ್ಶಕರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.

  • ಬಿಕಿನಿ ಫೋಟೋ ಬಗ್ಗೆ ಟ್ರೋಲ್ ಮಾಡ್ದವರಿಗೆ ಖಡಕ್ ಉತ್ತರ ಕೊಟ್ಟ ನಟಿ ರಾಧಿಕಾ ಆಪ್ಟೆ

    ಬಿಕಿನಿ ಫೋಟೋ ಬಗ್ಗೆ ಟ್ರೋಲ್ ಮಾಡ್ದವರಿಗೆ ಖಡಕ್ ಉತ್ತರ ಕೊಟ್ಟ ನಟಿ ರಾಧಿಕಾ ಆಪ್ಟೆ

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಟ-ನಟಿಯರು ಏನೇ ಮಾಡಿದ್ರೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗೋದು ಸಾಮಾನ್ಯವಾಗಿ ಬಿಟ್ಟಿದೆ. ಅಂತೆಯೇ ಇದೀಗ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಕೂಡ ಟ್ರೋಲ್ ಆಗಿದ್ದಾರೆ.

    ರಾಧಿಕಾ ಅವರು ಇತ್ತೀಚೆಗೆ ಬಿಕಿನಿ ಧರಿಸಿ ತಮ್ಮ ಗೆಳೆಯನ ಜೊತೆ ಗೋವಾ ಬೀಚ್ ನಲ್ಲಿ ಕುಳಿತುಕೊಂಡಿರುವ ಫೋಟೋವೊಂದನ್ನು ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಪರ-ವಿರೋಧ ಚರ್ಚೆಗಳಿಗೆ ಗ್ರಾಸರಾಗಿದ್ದಾರೆ.

    ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಾಧಿಕಾ, ನಾನು ಟ್ರೋಲ್ ಆಗಿರೋ ವಿಚಾರ ನನಗೆ ತಿಳಿದಿಲ್ಲ. ನನ್ನ ಸಹಪಾಠಿಗಳು ಹೇಳಿದ ಬಳಿಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದೊಂದು ಹಾಸ್ಯಾಸ್ಪದ ಸಂಗತಿಯಾಗಿದೆ. ಬೀಚ್ ನಲ್ಲಿ ನಾನು ಸೀರೆ ಉಟ್ಕೊಂಡು ನಡೆದಾಡಬೇಕು ಅಂತಾ ಜನ ನಿರೀಕ್ಷಿಸುತ್ತಿದ್ದಾರೆಯೇ ಅಂತ ಪ್ರಶ್ನಿಸಿದ್ದಾರೆ. ಟ್ರೋಲ್ ಮಾಡೋರ ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಉತ್ತರ ಕೊಡುವ ಅವಶ್ಯಕತೆಯೂ ನನಗಿಲ್ಲ ಅಂತ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.

    ರಾಧಿಕಾ ಮಾತ್ರವಲ್ಲ ಈ ಹಿಂದೆ ಪ್ರಿಯಾಂಕಾ ಚೋಪ್ರಾ, ಈಶಾ ಗುಪ್ತಾ, ದೀಪಿಕಾ ಪಡುಕೋಣೆ, ಪರಿಣಿತಿ ಚೋಪ್ರಾ ಮೊದಲಾದವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರು.

    https://www.instagram.com/p/BflPW8VHDI9/?utm_source=ig_embed&utm_campaign=embed_profile_upsell_control