Tag: radhika

  • ಮಗನ ಮದುವೆ ಬೆನ್ನಲ್ಲೇ ಕ್ಷಮೆಯಾಚಿಸಿದ ನೀತಾ ಅಂಬಾನಿ

    ಮಗನ ಮದುವೆ ಬೆನ್ನಲ್ಲೇ ಕ್ಷಮೆಯಾಚಿಸಿದ ನೀತಾ ಅಂಬಾನಿ

    ಅಂಬಾನಿ ಪುತ್ರ ಅನಂತ್ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಮದುವೆ ಅದ್ಧೂರಿಯಾಗಿ ನೆರವೇರಿದೆ. ಮದುವೆಗೆ ಸಂಬಂಧಿಸಿದ ವಿಡಿಯೋಗಳು, ಗೆಸ್ಟ್ ಲಿಸ್ಟ್, ಅದ್ಧೂರಿತನ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಮಗನ ಮದುವೆ ಬೆನ್ನಲ್ಲೇ ನೀತಾ ಅಂಬಾನಿ ಮಾಧ್ಯಮಕ್ಕೆ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ:‘ಬ್ಯಾಚುಲರ್ ಪಾರ್ಟಿ’ ಕಾಪಿರೈಟ್ ಉಲ್ಲಂಘನೆ ಕೇಸ್ – ನೋಟಿಸ್ ನೀಡಿರೋದಾಗಿ ಡಿಸಿಪಿ ಸ್ಪಷ್ಟನೆ

    ಮದುವೆ ಬಂದು ಹಾರೈಸಿದಕ್ಕೆ, ತುಂಬಾ ತಾಳ್ಮೆಯಿಂದ ಕಾರ್ಯಕ್ರಮಕ್ಕೆ ಹಾಜರಿ ಹಾಕಿರುವುದಕ್ಕೆ ಧನ್ಯವಾದ ಎಂದಿದ್ದಾರೆ. ಈ ಮದುವೆ ಸಂದರ್ಭದಲ್ಲಿ ಏನಾದರೂ, ಯಾರಿಗಾದರೂ ಕಷ್ಟ ಆಗಿದ್ದರೆ ಕ್ಷಮೆ ಕೋರುತ್ತೇನೆ. ಇದು ಮದುವೆ ಮನೆ, ಏನಾದರೂ ತೊಂದರೆ ಆಗಿರಬಹುದು. ಹೀಗೆ ಏನಾದರೂ ಆಗಿದ್ರೆ ಕ್ಷಮಿಸಿಬಿಡಿ ಎಂದು ನೀತಾ ಅಂಬಾನಿ ಹೇಳಿದ್ದಾರೆ. ಈಗಾಗಲೇ ನೀವು ಮದುವೆಗೆ ಬಂದು ಕಳೆ ಹೆಚ್ಚಿಸಿದ್ದೀರಿ. ವಿವಾಹೋತ್ತರ ಕಾರ್ಯಕ್ರಮಗಳು ಇನ್ನೂ ಜಾರಿಯಲ್ಲಿದೆ. ಅವುಗಳಿಗೂ ನೀವು ಬಂದು ಶುಭಹಾರೈಸಬೇಕು ಎಂದು ನೀತಾ ಅಂಬಾನಿ (Nita Ambani) ಹೇಳಿದ್ದಾರೆ. ಇದನ್ನೂ ಓದಿ:ಅಪ್ಪು ಕಪ್ ಸೀಸನ್ 2: ಟ್ರೋಫಿ ಅನಾವರಣ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್

    ಅಂದಹಾಗೆ, ಹಲವು ವರ್ಷಗಳ ಪ್ರೀತಿಗೆ ಅನಂತ್ ಮತ್ತು ರಾಧಿಕಾ ಜು.12ರಂದು ಮದುವೆಯ ಮುದ್ರೆ ಒತ್ತಿದ್ದಾರೆ. ಈ ವಿವಾಹದಲ್ಲಿ ಯಶ್ ದಂಪತಿ, ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ ದಂಪತಿ, ರಜನಿಕಾಂತ್, ಬಿಗ್ ಬಿ ಫ್ಯಾಮಿಲಿ, ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  • ಕಾಲಿಗೆ ನಮಸ್ಕರಿಸಲು ಬಂದ ತಲೈವಾಗೆ ಅಮಿತಾಭ್ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ?

    ಕಾಲಿಗೆ ನಮಸ್ಕರಿಸಲು ಬಂದ ತಲೈವಾಗೆ ಅಮಿತಾಭ್ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ?

    ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮದುವೆ ಜು.12ರಂದು ಅದ್ಧೂರಿಯಾಗಿ ನಡೆದಿದೆ. ಇನ್ನೂ ಈ ಸಂಭ್ರಮದಲ್ಲಿ ಭಾಗಿಯಾಗಿದ್ದ ಅಮಿತಾಭ್ ಬಚ್ಚನ್‌ರನ್ನು (Amitabh Bachchan) ನೋಡಿ ಕಾಲಿಗೆ ನಮಸ್ಕರಿಸಲು ತಲೈವಾ ಬಂದಿದ್ದು, ಈ ವೇಳೆ ಬಿಗ್‌ ಬಿ ಪ್ರತಿಕ್ರಿಯಿಸಿದ ರೀತಿ ಕಂಡು ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:AR Wedding: ಕುಟುಂಬದ ಜೊತೆ ನಿಲ್ಲದೆ ಮಗಳೊಂದಿಗೆ ಪೋಸ್ ಕೊಟ್ಟ ಐಶ್ವರ್ಯಾ ರೈ

    ರಜನಿಕಾಂತ್ (Rajanikanth) ಸೂಪರ್ ಸ್ಟಾರ್ ಆಗಿದ್ರೂ ತಮಗಿಂತ ಹಿರಿಯರಿಗೆ ಅದೆಷ್ಟು ಗೌರವ ಕೊಡ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅಂಬಾನಿ ಮದುವೆಯಲ್ಲಿ ಸೀನಿಯರ್ ಸ್ಟಾರ್ ನಟ ಬಿಗ್ ಬಿ ನೋಡ್ತಿದ್ದಂತೆ ತಲೈವಾ ಕಾಲಿಗೆ ನಮಸ್ಕರಿಸಲು ಮುಂದಾಗಿದ್ದಾರೆ. ಆಗ ಬಿಗ್ ಬಿ ತಡೆದಿದ್ದಾರೆ. ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದಾರೆ. ಈ ವಿಡಿಯೋ ಮೂಲಕ ಇಬ್ಬರೂ ಪರಸ್ಪರ ಅದೆಷ್ಟು ಗೌರವ ಕೊಡ್ತಾರೆ ಎಂದು ತಿಳಿದು ಬಂದಿದೆ.

     

    View this post on Instagram

     

    A post shared by Pallav Paliwal (@pallav_paliwal)

    ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ (Anant-Radhika Wedding) ಬಿಗ್ ಬಿ ಫ್ಯಾಮಿಲಿ, ರಜನಿಕಾಂತ್ ಕುಟುಂಬ, ಯಶ್ ದಂಪತಿ, ರಶ್ಮಿಕಾ ಮಂದಣ್ಣ, ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ, ಶಾರುಖ್ ಖಾನ್, ಜಾನ್ವಿ ಕಪೂರ್, ಸಲ್ಮಾನ್ ಖಾನ್, ಕಿಯಾರಾ ಅಡ್ವಾಣಿ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಮದುವೆಗೆ ಬಂದಿದ್ದ ಸ್ಟಾರ್ಸ್‌ಗೆ 2 ಕೋಟಿ ಮೌಲ್ಯದ ವಾಚ್ ಗಿಫ್ಟ್ ಮಾಡಿದ ಅಂಬಾನಿ

    ಅಂದಹಾಗೆ, ಜೈ ಭೀಮ್ ನಿರ್ದೇಶಕನ ‘ವೆಟ್ಟೈಯನ್’ ಸಿನಿಮಾದಲ್ಲಿ ಅಮಿತಾಭ್ ಮತ್ತು ತಲೈವಾ ಜೊತೆಯಾಗಿ ನಟಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

  • ಅನಂತ್ ಅಂಬಾನಿ, ರಾಧಿಕಾ ಮದುವೆಯಲ್ಲಿ ಬಾಲಿವುಡ್ ಸ್ಟಾರ್ಸ್ ದಂಡು

    ಅನಂತ್ ಅಂಬಾನಿ, ರಾಧಿಕಾ ಮದುವೆಯಲ್ಲಿ ಬಾಲಿವುಡ್ ಸ್ಟಾರ್ಸ್ ದಂಡು

    ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ (Radhika) ಇಂದು (ಜು.12) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಸಂಭ್ರಮದಲ್ಲಿ ಯಶ್ ದಂಪತಿ(Yash), ಶಾರುಖ್ ಖಾನ್, ಜಾನ್ ಸೆನಾ ಸೇರಿದಂತೆ ಬಾಲಿವುಡ್ ದಂಡೇ ಹಾಜರಿ ಹಾಕಿದೆ.

    ಅಂಬಾನಿ ಮನೆ ಮಗನ ಮದುವೆಗೆ ಮುಂಬೈನಲ್ಲಿ ಸ್ವರ್ಗವೇ ಧರೆಗಿಳಿದಿದೆ. ಮುಖೇಶ್ ಅಂಬಾನಿ ಮನೆಯನ್ನು ಕಣ್ಣು ಕುಕ್ಕುವಂತೆ ಸಿಂಗರಿಸಲಾಗಿದೆ. ಭಾರತದ ನಾನಾ ಭಾಗದಲ್ಲಿರುವ ತಾರೆಯರು ಈ ಮದುವೆಯ ಕಳೆಯನ್ನ ಹೆಚ್ಚಿಸಲು ಈಗಾಗಲೇ ಮುಂಬೈಗೆ ಬಂದಿಳಿದಿದ್ದಾರೆ.

    ನ್ಯೂಯಾರ್ಕ್‌ನಲ್ಲಿದ್ದ ಶಾರುಖ್ ಖಾನ್ (Sharukh Khan), ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ (Priyanka Chopra), ಯಶ್ ದಂಪತಿ ಕೂಡ ಮುಂಬೈಗೆ ಎಂಟ್ರಿ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಅರ್ಜುನ್ ಕಪೂರ್, ಜಾನ್ವಿ ಕಪೂರ್, ಸಿದ್ಧಾರ್ಥ್-ಕಿಯಾರಾ ಅಡ್ವಾಣಿ, ಶಾಹಿದ್ ಕಪೂರ್, ವಿಕ್ಕಿ ಕೌಶಲ್, ರಾಮ್‌ ಚರಣ್‌, ಸೋನಾಕ್ಷಿ ಸಿನ್ಹಾ ಎಂಟ್ರಿಯಿಂದ ಮದುವೆ ಸಮಾರಂಭದ ಮೆರಗು ಹೆಚ್ಚಾಗಿದೆ.

    ಭಾರತೀಯ ಸಂಸ್ಕೃತಿ ಮತ್ತು ಕಲೆಗಾರಿಕೆ, ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಹಿಂದೆಂದು ಯಾರೂ ಮಾಡಿರದಷ್ಟು ಅದ್ಧೂರಿಯಾಗಿ ಈ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಸನಾತನ ಶೈಲಿಯಲ್ಲಿ ಈ ಮದುವೆ ಜರುಗಲಿದೆ. ಇದನ್ನೂ ಓದಿ:ನಿರೂಪಣೆ ನೀವಿಲ್ಲದೇ ಅಪೂರ್ಣ ಅಪರ್ಣಾ ಅಕ್ಕ: ಅನುಶ್ರೀ ಭಾವುಕ

    ಅಂದಹಾಗೆ, ಅನಂತ್ ಮತ್ತು ರಾಧಿಕಾ ಈ ವಿವಾಹವು 3 ದಿನಗಳ ಕಾಲ ಇರುತ್ತದೆ. ಜು.12ರಂದು ಶುಭವಿವಾಹ, ಜು.13ರಂದು ಶುಭ್ ಆಶೀರ್ವಾದ್, ಜು.14ರಂದು ಆರತಕ್ಷತೆ ನಂತರ ಜು.15ರಂದು ಮತ್ತೊಂದು ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.

  • ಅನಂತ್, ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಜಸ್ಟಿನ್‌ ಬೀಬರ್‌ಗೆ 83 ಕೋಟಿ ಸಂಭಾವನೆ

    ಅನಂತ್, ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಜಸ್ಟಿನ್‌ ಬೀಬರ್‌ಗೆ 83 ಕೋಟಿ ಸಂಭಾವನೆ

    ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮದುವೆ ಇದೇ ಜುಲೈ 12ರಂದು ಜರುಗಲಿದೆ. ಇಂದು (ಜು.5) ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಕೆನಡಾದ ಖ್ಯಾತ ಗಾಯಕ ಜಸ್ಟಿನ್ ಬೀಬರ್ (Justin Bieber) ಕೂಡ ಹಾಜರಿ ಹಾಕಿದ್ದಾರೆ. ಇದೀಗ ಈ ಕಾರ್ಯಕ್ರಮದಲ್ಲಿ ಹಾಡಲು 83 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡಿದ್ದಾರೆ.

    ಜು.4ರಂದು ಜಸ್ಟಿನ್ ಬೀಬರ್ ಅವರು ಮುಂಬೈಗೆ ಬಂದಿಳಿದಿದ್ದಾರೆ. 30 ವರ್ಷದ ಈ ಗಾಯಕ ಒಂದು ದಿನದ ಕಾರ್ಯಕ್ರಮಕ್ಕೆ ಚಾರ್ಜ್ ಮಾಡುತ್ತಿರುವ ಹಣದ ಮೊತ್ತ ಕೇಳಿ ಅನೇಕರು ಶಾಕ್ ಆಗಿದ್ದಾರೆ. 10 ಮಿಲಿಯನ್ ಅಮೆರಿಕನ್ ಡಾಲರ್ ಚಾರ್ಜ್ ಮಾಡಿದ್ದಾರೆ. ಅಂದರೆ ಭಾರತದ ರೂಪಾಯಿಗೆ ಅವರ ಸಂಭಾವನೆ ಬರೋಬ್ಬರಿ 83.51 ಕೋಟಿ ರೂ. ಆಗಲಿದೆ. ಇದನ್ನೂ ಓದಿ:ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹಿನಾ ಖಾನ್ ಕೂದಲಿಗೆ ಬಿತ್ತು ಕತ್ತರಿ

    ಜಸ್ಟಿನ್ ಬೀಬರ್ ಸಂಗೀತ ಕಾರ್ಯಕ್ರಮಕ್ಕೆ ವಿಶ್ವದ ಎಲ್ಲಾ ಕಡೆ ಭಾರೀ ಬೇಡಿಕೆಯಿದೆ. ಹಾಗಾಗಿ ಅಂಬಾನಿ ಮನೆ ಮದುವೆಗೂ ಹಾಡಲು ಅವರಿಗೆ ಬುಲಾವ್ ಬಂದಿದೆ. ಇದನ್ನೂ ಓದಿ:‘ಲವ್‌ಸ್ಟೋರಿ’ ನಿರ್ದೇಶಕನ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ

    ಅಂದಹಾಗೆ, ಅನಂತ್ ಮತ್ತು ರಾಧಿಕಾ (Radhika Merchant) ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈಗ ಎರಡು ಕುಟುಂಬದ ಸಮ್ಮತಿ ಪಡೆದು ಮದುವೆಯ ಮುದ್ರೆ ಒತ್ತಲು ಸಜ್ಜಾಗಿದ್ದಾರೆ.

  • ಗುಡ್ ನ್ಯೂಸ್ ಹೇಳ್ತಿದ್ದಂತೆ ಅಂಬಾನಿ ಮಗನ ಪ್ರೀ ವೆಡ್ಡಿಂಗ್‌ಗೆ ಹೊರಟ ದೀಪಿಕಾ ದಂಪತಿ

    ಗುಡ್ ನ್ಯೂಸ್ ಹೇಳ್ತಿದ್ದಂತೆ ಅಂಬಾನಿ ಮಗನ ಪ್ರೀ ವೆಡ್ಡಿಂಗ್‌ಗೆ ಹೊರಟ ದೀಪಿಕಾ ದಂಪತಿ

    ನ್ನಡತಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇಂದು (ಫೆ.29) ತಾವು ತಾಯಿಯಾಗುತ್ತಿರುವ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಪತಿ ರಣ್‌ವೀರ್ (Ranveer Singh) ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅಂಬಾನಿ ಪುತ್ರ ಅನಂತ್-ರಾಧಿಕಾ ಜೋಡಿಯ ಪ್ರೀ ವೆಡ್ಡಿಂಗ್ ಭಾಗಿಯಾಗಲು ಹೊರಟಿದ್ದಾರೆ.

    ವಿಮಾನ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆ ಆಪ್ತರು ಬೊಕ್ಕೆ ಮತ್ತು ಸ್ವೀಟ್ ಕೊಟ್ಟು ದೀಪಿಕಾ ದಂಪತಿಯನ್ನು ಸ್ವಾಗತಿಸಿದ್ದಾರೆ. ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ದೀಪಿಕಾ-ರಣ್‌ವೀರ್‌ಗೆ ಹೊಸ ಅತಿಥಿ ಆಗಮನವಾಗುತ್ತಿರೋದಕ್ಕೆ ಶುಭಹಾರೈಸಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಬೆನ್ನು ಬಿಡದ ಜ್ಯೋತಿಷಿ- ಸ್ಫೋಟಕ ಭವಿಷ್ಯ ನುಡಿದ ಸ್ವಾಮಿ

     

    View this post on Instagram

     

    A post shared by Viral Bhayani (@viralbhayani)

    ಅನಂತ್ (Anant Ambani) ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ನಡೆಯಲಿದೆ. ಗುಜರಾತ್‌ನ ಜಾಮ್‌ನಗರ ಸಾಕ್ಷಿಯಾಗಲಿದೆ. ಅನಂತ್ ಪ್ರೀ ವೆಡ್ಡಿಂಗ್ ಮದುವೆ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ಇರಲಿದೆ. ಖ್ಯಾತ ಗಾಯಕ ಬಿ ಪ್ರಾಕ್ ಅವರ ಗಾಯನ ಇರಲಿದೆ.

    ಅನಂತ್ ಅಂಬಾನಿ ಮದುವೆಯಾಗಿ ಅದ್ಧೂರಿ ದೇಗುಲ ನಿರ್ಮಿಸಲಾಗುತ್ತಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ಕಲಾಕೃತಿಗಳು ಇಲ್ಲಿ ಕಾಣಬಹುದು.

    ಅನಂತ್ ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಇರಲಿದೆ. ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ರಜನಿಕಾಂತ್, ರಣ್‌ಬೀರ್ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

    ವಿಶೇಷ ಆಹ್ವಾನಿತರಷ್ಟೇ ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದು, ಸುಮಾರು 1000 ಗಣ್ಯರು ಭಾಗಿಯಾಲಿದ್ದಾರೆ. ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮೆಲಿಂಡಾ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹಲವರು ಹಾಜರಿ ಹಾಕಲಿದ್ದಾರೆ.

  • ಗಿಣಿಮರಿಗಳ ಜೊತೆಗೆ ಒಂದು ದಿನ ಕಳೆದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’

    ಗಿಣಿಮರಿಗಳ ಜೊತೆಗೆ ಒಂದು ದಿನ ಕಳೆದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’

    ಸಿನಿಮಾಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಕುಟುಂಬಕ್ಕೂ ಕ್ವಾಲಿಟಿ ಸಮಯ ಕೊಡುತ್ತಾರೆ ನಟ ಯಶ್. ಕೆಜಿಎಫ್ 2 ಸಿನಿಮಾ ರಿಲೀಸ್ ನಂತರ ಅವರು ಹೆಚ್ಚೆಚ್ಚು ಕುಟುಂಬದೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಗೋವಾದಲ್ಲಿ ರಜಾ ದಿನಗಳನ್ನು ಕಳೆದಿದ್ದ ಯಶ್ ಮತ್ತು ರಾಧಿಕಾ ಪಂಡಿತ್, ಇದೀಗ ಮಕ್ಕಳೊಂದಿಗೆ ಪಕ್ಷಿಧಾಮಕ್ಕೆ ವಿಸಿಟ್ ನೀಡಿದ್ದಾರೆ.

    ಮಂಗಳವಾರ ಇಡೀ ದಿನ ಕನಕಪುರ ಸಮೀಪದ ಪಕ್ಷಿಧಾಮವೊಂದರಲ್ಲಿ ತಮ್ಮ ಮಕ್ಕಳು ಮತ್ತು ಪತ್ನಿಯೊಂದಿಗೆ ಸಮಯ ಕಳೆದಿರುವ ಯಶ್, ಅಲ್ಲಿನ ಪಕ್ಷಿಗಳೊಂದಿಗೆ ಆಟವಾಡಿದ್ದಾರೆ. ಅದರಲ್ಲೂ ಗಿಣಿಗಳ ಜೊತೆ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಆಟವಾಡಿದ್ದಾರೆ. ಗಿಣಿಗಳನ್ನು ಮೈಮೇಲೆ ಬಿಟ್ಟುಕೊಂಡು ನಲಿದಿದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ಒಂದು ಕಡೆ ಕುಟುಂಬಕ್ಕೆ ತಮ್ಮ ಸಮಯವನ್ನು ಯಶ್ ನೀಡುತ್ತಿದ್ದರೆ, ಮತ್ತೊಂದು ಕಡೆ ಹೊಸ ಸಿನಿಮಾಗಾಗಿಯೂ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆಜಿಎಫ್ 2 ನಂತರ ಯಶ್ ಅವರಿಗೆ ಮಾರುಕಟ್ಟೆ ವಿಸ್ತಾರವಾಗಿರುವುದರಿಂದ ಅದೇ ಮಾದರಿಯ ಚಿತ್ರ ಮಾಡುವ ಜವಾಬ್ದಾರಿ ಕೂಡ ಅವರ ಹೆಗಲ ಮೇಲಿದೆ. ಹಾಗಾಗಿ ತುಂಬಾ ತಲೆಕೆಡಿಸಿಕೊಂಡು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ.

    ಯಶ್ ಅವರ ಮುಂದಿನ ಸಿನಿಮಾವನ್ನು ನರ್ತನ್ ಅವರು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಕಥೆಯನ್ನು ಫೈನಲ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಮೂರು ನಿರ್ಮಾಣ ಸಂಸ್ಥೆಗಳು ಯಶ್ ಸಿನಿಮಾವನ್ನು ತಯಾರಿಸಲು ಮುಂದೆ ಬಂದಿದ್ದು, ಯಾವ ನಿರ್ಮಾಣ ಸಂಸ್ಥೆಯು ಇವರ ಚಿತ್ರಕ್ಕೆ ಬಂಡವಾಳ ಹಾಕಲಿದೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.

  • ಸೊಸೆ ಬಗ್ಗೆ ಯಶ್ ತಂದೆ, ತಾಯಿ ಮನದಾಳದ ಮಾತು

    ಸೊಸೆ ಬಗ್ಗೆ ಯಶ್ ತಂದೆ, ತಾಯಿ ಮನದಾಳದ ಮಾತು

    ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್‍ಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕೂಡ ಒಬ್ಬರು. ಮದುವೆಯಾದ ಬಳಿಕ ಸಿನಿಮಾರಂಗದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್ ಸದ್ಯ ಮಕ್ಕಳ ಪಾಲನೆ, ಪೋಷಣೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.  ಸಂಸಾದ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಸೊಸೆ ರಾಧಿಕಾ ಪಂಡಿತ್ ಬಗ್ಗೆ ಯಶ್ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ ಹಾಡಿ ಹೊಗಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಮ್ಮ ಮನೆಗೆ ಮೊದಲಿಂದಲೂ ಬಂದು ಹೋಗುತ್ತಿದ್ದರಿಂದ ರಾಧಿಕಾ ನಮಗೆ ತುಂಬಾ ಇಷ್ಟ. ಯಶ್ ಹಾಗೂ ರಾಧಿಕಾ ಇಬ್ಬರೂ ಯಾವಾಗಲೂ ಸ್ನೇಹಿತರಂತೆ ಇರುತ್ತಾರೆ. ರಾಧಿಕಾ ಕೂಡ ಬಹಳ ಹೊಂದಿಕೊಂಡು ಹೋಗುವಂತಹ ಹುಡುಗಿ, ನಮ್ಮ ಮಗಳು ನಂದಿನಿಗಿಂತ ರಾಧಿಕಾ ಬಹಳ ಸಾಫ್ಟ್ ಸ್ವಭಾವದವರಾಗಿದ್ದಾರೆ.

    ಯಶ್ ಮುದ್ದೆ, ರೊಟ್ಟಿ ತಿನ್ನುತ್ತಾನೆ. ಹಾಗಾಗಿ ರಾಧಿಕಾಗೆ ಮುದ್ದೆ ಮಾಡಲು ಬರುವುದಿಲ್ಲ ಆದರೂ ಗಂಡನಿಗೋಸ್ಕರ ಈಗ ಮಾಡಲು ಕಲಿತುಕೊಂಡಿದ್ದಾರೆ. ಯಶ್ ತಂದೆ ಹಾಗೂ ರಾಧಿಕಾ ಇಬ್ಬರೂ ಬಹಳ ಸಾಫ್ಟ್ ನೇಚರ್ ಹೊಂದಿದ್ದಾರೆ. ಹೀಗಾಗಿ ಮನೆಗೆ ಹೋದಾಗಲೆಲ್ಲಾ ರಾಧಿಕಾ ಮಾವನ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ ಎಂದು ಸೊಸೆಯನ್ನು ಕೊಂಡಾಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ಕೆಜಿಎಫ್ 2 ‘ಸುಲ್ತಾನ್’ ಸಾಂಗ್

    ಇದೇ ವೇಳೆ ಐರಾ, ಯಥರ್ವ್ ಬಗ್ಗೆ ಮಾತನಾಡಿದ ಅವರು, ಮನೆಗೆ ಹೋದಾಗ ಮೊಮ್ಮಕ್ಕಳು ನಮ್ಮ ಜೊತೆ ಮಾತನಾಡುವುದು, ಆಟ ಆಡುವುದು ಎಲ್ಲವನ್ನು ನೋಡಿದರೆ ಬಹಳ ಖುಷಿಯಾಗುತ್ತದೆ. ನಾವು ಏನಾದರೂ ತಿಂಡಿಯನ್ನು ತೆಗೆದುಕೊಂಡು ಹೋದಾಗ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಊರಿಗೆ ಬಂದಾಗ ಕೂಡ ತಾತನ ಜೊತೆ ಐರಾ ಸುತ್ತಾಡುತ್ತಾಳೆ ಎಂದಿದ್ದಾರೆ. ಇದನ್ನೂ ಓದಿ: ಎಲ್ಲೆಲ್ಲೂ ರಾಕಿಂಗ್ ಸ್ಟಾರ್ ಯಶ್ ಹವಾ- ಮಧ್ಯರಾತ್ರಿಯೇ ತೆರೆಗಪ್ಪಳಿಸಿದ KGF ಚಾಪ್ಟರ್-2

  • ಸ್ಯಾಂಡಲ್ ವುಡ್ ಸಿಂಡ್ರೆಲಾ ಹೊಸ ನ್ಯೂಸ್ ಕೊಡ್ತಾರಾ?

    ಸ್ಯಾಂಡಲ್ ವುಡ್ ಸಿಂಡ್ರೆಲಾ ಹೊಸ ನ್ಯೂಸ್ ಕೊಡ್ತಾರಾ?

    ಟ ಯಶ್ ಪತ್ನಿ, ಸ್ಯಾಂಡಲ್ ವುಡ್ ಸಿಂಡ್ರೆಲಾ ಎಂದೇ ಅಭಿಮಾನಿಗಳು ಕರೆಯುವ ರಾಧಿಕಾ ಪಂಡಿತ್ ಇಂದು 38ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರ ಅಭಿಮಾನಿಗಳು ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಹುಟ್ಟು ಹಬ್ಬದ ಸಂದರ್ಭದಲ್ಲಾದರೂ, ಆ ಬೇಡಿಕೆಯನ್ನು ಈಡೇರಿಸಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ :  ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

    ಅಭಿಮಾನಿಗಳು ಇಟ್ಟಿರೋ ಬೇಡಿಕೆ ಸಿಂಪಲ್. ಮತ್ತೆ ನೀವು ಸಿನಿಮಾ ರಂಗಕ್ಕೆ ಬರುವುದು ಯಾವಾಗ? ಅದಕ್ಕೆ ರಾಧಿಕಾ ಪಂಡಿತ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕು. ಇದನ್ನೂ ಓದಿ : ಹಿರಣ್ಯ ಸಿನಿಮಾದ ಸ್ಪೆಷಲ್ ಪಾತ್ರದಲ್ಲಿ ಬಿಗ್ ಬಾಸ್ ದಿವ್ಯಾ

    ಕನ್ನಡ ಕಿರುತೆರೆ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ರಾಧಿಕಾ ಪಂಡಿತ್, ಆನಂತರ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಮೊಗ್ಗಿನ ಮನಸು ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತು. ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟರ ಜತೆ ತೆರೆ ಹಂಚಿಕೊಂಡರು. ಅದರಲ್ಲೂ ಯಶ್ ಜತೆಗಿನ ಮಿಸ್ಟರ್ ಅಂಡ್ ಮಿಸ್ಟರ್ ರಾಮಾಚಾರಿ, ಡ್ರಾಮಾ ಹೀಗೆ ಅನೇಕ ಚಿತ್ರಗಳು ಹಿಟ್ ಆದವು. ಕಿರುತೆರೆಯಿಂದಲೇ ಯಶ್ ಜತೆ ಒಂದೊಳ್ಳೆ ಗೆಳೆತನ ಇಟ್ಟುಕೊಂಡಿದ್ದ ರಾಧಿಕಾ, ಆ ಮೇಲೆ ಪ್ರೇಮಿಯಾದರು. ನಂತರ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದಾರೆ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್

    ಅಭಿಮಾನಿಗಳ ಒತ್ತಾಯದಂತೆ ರಾಧಿಕಾ ಸಿನಿಮಾ ರಂಗಕ್ಕೆ ವಾಪಸ್ಸು ಆಗುತ್ತಾರಾ? ಎನ್ನುವ ಪ್ರಶ್ನೆ ಹಲವರದ್ದು. ಆದರೆ, ಸಿನಿಮಾಗೆ ಬರುವ ಯಾವ ಸೂಚನೆಯನ್ನೂ ಅವರು ಈವರೆಗೂ ಕೊಟ್ಟಿಲ್ಲ. ಅಂದುಕೊಂಡಂತೆ ಆಗಿದ್ದರೆ ಮಂಸೋರೆ ನಿರ್ದೇಶನದ ಆಕ್ಟ್ 1978 ಸಿನಿಮಾದ ಮೂಲಕ ಅವರು ಸಿನಿಮಾ ರಂಗಕ್ಕೆ ವಾಪಸ್ಸಾಗಬೇಕಿತ್ತು. ಮಂಸೋರೆ ಅಂಡ್ ಟೀಮ್ ಅವರನ್ನು ಅಪ್ರೋಚ್ ಕೂಡ ಮಾಡಿತ್ತು. ಆದರೆ, ಆಗ ಅವರು ಗರ್ಭಿಣಿ ಹಾಗಾಗಿ ಒಪ್ಪಿಕೊಳ್ಳಲಿಲ್ಲ ಎನ್ನವ ಮಾತಿದೆ. ಇದನ್ನೂ ಓದಿ : ತಮಿಳಿನತ್ತ ಲವ್ ಗುರು ನಿರ್ದೇಶಕ ಪ್ರಶಾಂತ್ ರಾಜ್

    ಪುನೀತ್ ನಿಧನದಿಂದಾಗಿ ರಾಧಿಕಾ ಪಂಡಿತ್ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮೂಲಕವೇ ಶುಭ ಕೋರಿದ್ದಾರೆ.

  • ಮಾಲ್ಡೀವ್ಸ್ ನಲ್ಲಿಯ ಸುಂದರ ಕ್ಷಣಗಳನ್ನ ಹಂಚಿಕೊಂಡ ರಾಕಿಂಗ್ ಜೋಡಿ

    ಮಾಲ್ಡೀವ್ಸ್ ನಲ್ಲಿಯ ಸುಂದರ ಕ್ಷಣಗಳನ್ನ ಹಂಚಿಕೊಂಡ ರಾಕಿಂಗ್ ಜೋಡಿ

    ಬೆಂಗಳೂರು: ಕೆಜಿಎಫ್-2 ಚಿತ್ರೀಕರಣದ ಬಳಿಕ ಭರ್ಜರಿ ಜಾಲಿ ಮೂಡ್‍ನಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದ ಫೋಟೋ ಕೆಳದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಾದ ಬಳಿಕ ಇದೀಗ ಮತ್ತಷ್ಟು ಫೋಟೋ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.

    ಕೋವಿಡ್-19 ಲಾಕ್‍ಡೌನ್ ಬಳಿಕ ಕೆಜಿಎಫ್-2 ಚಿತ್ರಿಕರಣದಲ್ಲಿ ಬ್ಯುಸಿ ಆಗಿದ್ದ ಯಶ್, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಕೆಜಿಎಫ್-2 ಚಿತ್ರದ ಶೂಟಿಂಗ್ ಮುಗಿದಿರುವ ಕಾರಣ ಯಶ್ ಕುಟುಂಬದ ಜೊತೆ ಕಾಲ ಕಳೆಯಲು ಹೆಂಡತಿ ರಾಧಿಕಾ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಜೊತೆ ಮಾಲ್ಡೀವ್ಸ್ ಗೆ ತೆರಳಿದ್ದರು. ಅಲ್ಲಿ ರಾಕಿಬಾಯ್ ಎಂಜಾಯ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿ ಭೂಮಿಯ ಮೇಲಿನ ಸ್ವರ್ಗ ಯಾವುದಾದರೂ ಇದ್ದರೆ ಅದು ಮಾಲ್ಡೀವ್ಸ್ ಎಂದು ಬರೆದುಕೊಂಡಿದ್ದರು.

    ಇದೀಗ ಮತ್ತೆ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಯಶ್ ತಮ್ಮ ಕುಟುಂಬದ ಜೊತೆ ಫುಲ್ ಟೈಮ್ ಸ್ಪೆಂಡ್ ಮಾಡುತ್ತಿರುವ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳಲ್ಲಿ ಸಂತಸ ಮೂಡಿಸುತ್ತಿದ್ದಾರೆ.

  • ಕೆಜಿಎಫ್ ಶೂಟಿಂಗ್ ಬಳಿಕ ಮಕ್ಕಳ ಜೊತೆ ಮಾಲ್ಡೀವ್ಸ್‌ಗೆ ಹಾರಿದ ಯಶ್

    ಕೆಜಿಎಫ್ ಶೂಟಿಂಗ್ ಬಳಿಕ ಮಕ್ಕಳ ಜೊತೆ ಮಾಲ್ಡೀವ್ಸ್‌ಗೆ ಹಾರಿದ ಯಶ್

    ಬೆಂಗಳೂರು: ಕೆಜಿಎಫ್-2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರಾಕಿಂಗ್ ಸ್ಟಾರ್ ಇದೀಗ ವಿಶ್ರಾಂತಿಗೆಂದು ಕುಟುಂಬ ಸಮೇತ ಮಾಲ್ಡೀವ್ಸ್‌ಗೆ ತೆರಳಿದ್ದಾರೆ.

    ಕೋವಿಡ್ 19 ಲಾಕ್‍ಡೌನ್ ತೆರವಾದ ಬಳಿಕ ಯಶ್ ಕೆಜಿಎಫ್ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲಾಗಿರಲಿಲ್ಲ. ಆದರೆ ಈಗ ಇಬ್ಬರು ಮಕ್ಕಳೊಂದಿಗೆ ಯಶ್ ಮಾಲ್ಡೀವ್ಸ್‌ ತಾಣದಲ್ಲಿದ್ದಾರೆ.

    ಕುಟುಂಬದೊಂದಿಗೆ ಸಂಭ್ರಮಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯಶ್, ಸ್ವರ್ಗ ಯಾವುದಾದರೂ ಇದ್ದರೆ ಅದು ಮಾಲ್ಡೀವ್ಸ್‌ ಮಾತ್ರ ಎಂದು ಬರೆದಿದ್ದಾರೆ. ಕೆಲವು ತಿಂಗಳ ಹಿಂದೆ ಮಗನ ಹುಟ್ಟುಹಬ್ಬವನ್ನು ಗೋವಾದ ಐಶಾರಾಮಿ ಯಾಚ್‍ನಲ್ಲಿ ಯಶ್, ರಾಧಿಕಾ ಆಚರಿಸಿದ್ದರು.

    ಕಳೆದ ವಾರ ಯಶ್ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಮುಹೂರ್ತ ಸಮಾರಂಭಕ್ಕೆಂದು ಹೈದರಾಬಾದ್‍ಗೆ ತೆರಳಿದ್ದರು. ಬಹು ನಿರೀಕ್ಷಿತ ಕೆಜಿಎಫ್ ಟೀಸರ್ ಜ.7 ರಂದು ಬಿಡುಗಡೆಯಾಗಿದ್ದು ಇಲ್ಲಿಯವರೆಗೆ 15 ಕೋಟಿ ವೀಕ್ಷಣೆ ಪಡೆಯುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದಿದೆ.