Tag: Radhey Shyam

  • ಮತ್ತೆ ಬರ್ತಿದ್ಯ ಬಾಹುಬಲಿ 3 – ಪ್ರಭಾಸ್ ಉತ್ತರವೇನು?

    ಮತ್ತೆ ಬರ್ತಿದ್ಯ ಬಾಹುಬಲಿ 3 – ಪ್ರಭಾಸ್ ಉತ್ತರವೇನು?

    ಬಾಹುಬಲಿ ಭಾಗ 1 ಮತ್ತು 2 ಸಿನಿಮಾ ಇಡೀ ಸಿನಿಕ್ಷೇತ್ರವೇ ಭಾರತ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿತ್ತು. ಈ ಫೇಮ್‍ನಿಂದ ಪ್ರಭಾಸ್ ಅವರನ್ನು ಬೇರೆ ಪಾತ್ರದಲ್ಲಿ ಪ್ರೇಕ್ಷಕರು ಒಪ್ಪಿಕೊಂಡಿಲ್ಲ. ಈ ವೇಳೆ ಪ್ರಭಾಸ್ ಅವರಿಗೆ ಬಾಹುಬಲಿ ಭಾಗ 3 ಮಾಡುವ ಯೋಜನೆ ಇದ್ಯ ಎಂದು ಕೇಳಿದ್ದಕ್ಕೆ, ಎಸ್‍ಎಸ್ ರಾಜಮೌಳಿ ಬಯಸಿದರೆ ಮಾತ್ರ ಬಾಹುಬಲಿ 3 ಸಾಧ್ಯವಾಗುತ್ತೆ ಎಂದು ನಕ್ಕಿದರು.

    ‘ರಾಧೆ ಶ್ಯಾಮ್’ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಪ್ರಭಾಸ್‍ಗೆ ಬಾಹುಬಲಿ 3 ಬರುತ್ತ ಎಂಬ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನಗುತ್ತ ಉತ್ತರ ಕೊಟ್ಟ ಅವರು, ಬಾಹುಬಲಿ 3 ಆಗಬೇಕಾದರೆ, ಅದು ಖಂಡಿತವಾಗಿಯೂ ಸಮಯ ತೆಗೆದುಕೊಳ್ಳುತ್ತದೆ. ಅದು ಎಸ್‍ಎಸ್ ರಾಜಮೌಳಿ ಕೈಯಲ್ಲಿದೆ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಮಾಡಬೇಕಾದ ಸಿನಿಮಾ ಈಗ ವಿರಾಟ್ ಪಾಲು! – ಕೊನೆಗೂ ಈಡೇರಲಿಲ್ಲ ದಿನಕರ್ ಕನಸು!

    ಬಾಹುಬಲಿ ನನ್ನ ಹೃದಯಕ್ಕೆ ಬಹಳ ಹತ್ತಿರವಿರುವ ಚಿತ್ರ. ನನ್ನ ವೃತ್ತಿಜೀವನದಲ್ಲಿ ಆ ಸಿನಿಮಾ ಬೀರಿದ ಪ್ರಭಾವವನ್ನು ಎಂದಿಗೂ ಬೇರೆ ಜೊತೆ ಹೊಂದಿಸಲು ಸಾಧ್ಯವಿಲ್ಲ. ಬಾಹುಬಲಿ 3 ಬರುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ. ಅದನ್ನು ನನ್ನಿಂದ ಮಾಡಲು ಸಾಧ್ಯವಿಲ್ಲ. ಅದು ರಾಜಮೌಳಿ ಬಯಸಿದರೆ ಮಾತ್ರ ಆಗುತ್ತೆ ಎಂದು ಉತ್ತರಿಸಿದರು.

    ಬಾಹುಬಲಿ ಸಿನಿಮಾವನ್ನು ಬಿಟ್ಟು ಪ್ರಭಾಸ್ ಯಾವುದೇ ಪಾತ್ರ ಮಾಡಿದರೂ ಅದನ್ನು ಮೀರಿಸುವಂತಹ ಪಾತ್ರ ಅವರಿಗೆ ಸಿಗುತ್ತಿಲ್ಲ. ಅದಕ್ಕೆ ಅಭಿಮಾನಿಗಳು ಮತ್ತೆ ರಾಜಮೌಳಿ ಮತ್ತು ಪ್ರಭಾಸ್ ಒಟ್ಟಿಗೆ ಕೆಲಸ ಮಾಡಬೇಕು ಎಂದು ಕಾಯುತ್ತಿದ್ದಾರೆ. ಬಾಹುಬಲಿಯಲ್ಲಿ ಇವರಿಬ್ಬರ ಕಾಂಬಿನೇಷನ್ ಚೆನ್ನಾಗಿ ವರ್ಕ್ ಆಗಿತ್ತು.

    ತಮ್ಮ ವೃತ್ತಿಜೀವನದಲ್ಲಿ ಇಬ್ಬರು ಫುಲ್ ಬ್ಯುಸಿಯಾಗಿದ್ದಾರೆ. ಪ್ರಭಾಸ್ ‘ರಾಧೆ ಶ್ಯಾಮ್’ ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿ ಇದ್ರೆ, ರಾಜಮೌಳಿ ಅವರು ತಮ್ಮ ‘RRR’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

  • ಮೊದಲ ಬಾರಿಗೆ ಒಂದಾದ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ರಾಜಮೌಳಿ

    ಮೊದಲ ಬಾರಿಗೆ ಒಂದಾದ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ರಾಜಮೌಳಿ

    ಫೆಬ್ರವರಿ ತಿಂಗಳು ಕೊನೆಯ ದಿನದಂದು ಬೆಳಂ ಬೆಳಗ್ಗೆ ಶಿವರಾಜ್ ಕುಮಾರ್ ಅಭಿಮಾನಿಗಳ ಸಿಹಿ ಸುದ್ದಿ ನೀಡಿದೆ ರಾಧೆ ಶ್ಯಾಮ್ ಸಿನಿಮಾ ತಂಡ. ಭಾರತೀಯ ಸಿನಿಮಾ ರಂಗದಲ್ಲಿ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿರುವ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಕೂಡ ಧ್ವನಿ ರೂಪದಲ್ಲಿ ಇರಲಿದ್ದಾರಂತೆ. ಹೀಗಂತ ಅಧಿಕೃತವಾಗಿಯೇ ಚಿತ್ರತಂಡ ಹೇಳಿಕೊಂಡಿದೆ. ಅವರು ಯಾವ ರೂಪದಲ್ಲಿ ಇರಲಿದ್ದಾರೆ ಎನ್ನುವುದನ್ನೂ ಬಹಿರಂಗಪಡಿಸಿದೆ. ಇದನ್ನೂ ಓದಿ : ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಾಯಿ ವಿಧಿವಶ

    ಬಾಹುಬಲಿ ಖ್ಯಾತಿಯ ಪ್ರಭಾಸ್ ಮತ್ತು ಸ್ಟಾರ್ ನಟಿ ಪೂಜಾ ಹೆಗ್ಡೆ ಕಾಂಬಿನೇಷನ್ ನ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಸಾವಿರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ತಯಾರಿ ಮಾಡಿಕೊಂಡಿದೆ. ತೆಲುಗು ಸೇರಿದಂತೆ, ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವುದರಿಂದ, ಆಯಾ ಭಾಷೆಯ ಪ್ರಸಿದ್ಧ ಕಲಾವಿದರು ಹಿನ್ನೆಲೆ ನಿರೂಪಣೆಗೆ ಧ್ವನಿ ನೀಡಲಿದ್ದಾರೆ. ಮಲಯಾಳಂನಲ್ಲಿ ಸುಪ್ರಸಿದ್ಧ ನಟ ಪೃಥ್ವಿರಾಜ್, ತೆಲುಗಿನಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ, ತಮಿಳಿನಲ್ಲಿ ಸುಕುಮಾರ್ ಹಿನ್ನೆಲೆ ನಿರೂಪಣೆ ಧ್ವನಿ ನೀಡುತ್ತಿರುವುದು ವಿಶೇಷ.   ಇದನ್ನೂ ಓದಿ : ನಿಜ ಜೀವನದಲ್ಲಿಯೂ ಹೀರೋಯಿನ್ ಆದ ಶ್ವೇತಾ ಶ್ರೀವಾತ್ಸವ್.

    ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಈ ಸಿನಿಮಾದ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಭಾರೀ ಗಳಿಕೆ ಮಾಡಿತ್ತು. ಹಾಗಾಗಿ ಬಾಹುಬಲಿ ಚಿತ್ರದ ಮೂಲಕ ಪ್ರಭಾಸ್ ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಹಾಗಾಗಿ ದೇಶ ವಿದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

  • ಟಾಪ್‌ ದುಬಾರಿ ಬಜೆಟ್‌ ಸಿನಿಮಾಗಳಿಗೆ ಕೋವಿಡ್‌ ಶಾಕ್‌ –  ರಿಲೀಸ್‌ ಡೇಟ್‌ ಮುಂದಕ್ಕೆ

    ಟಾಪ್‌ ದುಬಾರಿ ಬಜೆಟ್‌ ಸಿನಿಮಾಗಳಿಗೆ ಕೋವಿಡ್‌ ಶಾಕ್‌ – ರಿಲೀಸ್‌ ಡೇಟ್‌ ಮುಂದಕ್ಕೆ

    ಮುಂಬೈ: ಜನವರಿಯಲ್ಲಿ ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗಬೇಕಾಗಿತ್ತು. ಆದರೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಥಿಯೇಟರ್ ಗಳಿಗೆ ಸರ್ಕಾರ ಕೆಲವು ನಿಯಮಗಳನ್ನು ಹಾಕಿದೆ. ಪರಿಣಾಮ ಜನವರಿಯಲ್ಲಿ ರಿಲೀಸ್ ಆಗಬೇಕಾಗಿದ್ದ ಹಲವು ಬಹುನಿರೀಕ್ಷಿತ ಚಿತ್ರಗಳು ಮುಂದಕ್ಕೆ ಹೋಗಿದೆ.

    ಕಳೆದ ವರ್ಷವೂ ಕೋವಿಡ್ ಹಿನ್ನೆಲೆ ಬಹುನಿರೀಕ್ಷಿತ ಚಿತ್ರಗಳು ಮುಂದಕ್ಕೆ ಹೋಗಿ ಈ ವರ್ಷ ರಿಲೀಸ್ ಆಗುವುದು ಪಕ್ಕಾ ಎನ್ನಲಾಗುತ್ತಿತ್ತು. ಇದರಿಂದ ಅವರ ಅಭಿಮಾನಿಗಳು ಸಹ ಸಖತ್ ಖುಷ್ ಆಗಿದ್ದರು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ದೇಶದ ವಿವಿಧ ಭಾಗಗಳಲ್ಲಿ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದರಿಂದ ಬಾಲಿವುಡ್ ಸೇರಿದಂತೆ ಬಹುಭಾಷೆಗಳಲ್ಲಿ ತಯಾರಾಗಿರುವ ಸಿನಿಮಾಗಳ ರಿಲೀಸ್ ದಿನಾಂಕ ಮುಂದೆ ಹೋಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಲಾಕ್‍ಡೌನ್ ಆಗಲು ಬಿಡ್ಬೇಡಿ – ಮಂತ್ರಾಲಯ ಶ್ರೀ ಮನವಿ

    ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಅವರ ‘ಪೃಥ್ವಿರಾಜ್’ ಮತ್ತು ಎಸ್‍ಎಸ್ ರಾಜಮೌಳಿ ನಿರ್ದೇಶನದ ‘RRR’, ಪ್ರಭಾಸ್ ಅವರ ‘ರಾಧೆ ಶ್ಯಾಮ್’ ಮತ್ತು ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಸಿನಿಮಾಗಳ ನಿರ್ಮಾಪಕರು ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೆ ಹಾಕಲು ನಿರ್ಧರಿಸಲಾಗಿದೆ.

    ದೀಪಿಕಾ ಪಡುಕೋಣೆ ನಟನೆಯ ‘ಗೆಹರಾಯಿಯಾ’ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

    ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ರಾಜಮೌಳಿ ನಿರ್ದೇಶನದ RRR ಸಿನಿಮಾ ಪ್ರಮುಖವಾಗಿತ್ತು. ಈ ಸಿನಿಮಾದಲ್ಲಿ ರಾಮ್ ಚರಣ್, ಜೂನಿಯರ್ ಎನ್‍ಟಿಆರ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ನಟಿಸಿದ್ದಾರೆ. ಚಿತ್ರವನ್ನು ಜನವರಿ 7 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಫೋಷಿಸಿತ್ತು. ಆದರೆ ಈಗ ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ ಎಂದು ಚಿತ್ರತಂಡವೇ ತಿಳಿಸಿದೆ.

    ಈ ಕುರಿತು ‘RRR’ ಸಿನಿಮಾವನ್ನು ನಿರ್ಮಿಸುತ್ತಿರುವ ‘ಡಿವಿವಿ ಎಂಟರ್‍ಟೈನ್‍ಮೆಂಟ್ಸ್’ ಜನವರಿ 1 ರಂದು ಟ್ವಿಟ್ಟರ್‌ನಲ್ಲಿ, ನಾವು ಎಲ್ಲವನ್ನು ಗಮನದಲ್ಲಿಟ್ಟುಕೊಂಡು, ಒತ್ತಾಯದ ಮೇರೆಗೆ ನಮ್ಮ ಸಿನಿಮಾದ ರಿಲೀಸ್ ಅನ್ನು ಮುಂದಕ್ಕೆ ಹಾಕಲಾಗುತ್ತಿದೆ. ಎಲ್ಲ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ಬರೆದು ಟ್ವೀಟ್ ಮಾಡಲಾಗಿತ್ತು.

     

    View this post on Instagram

     

    A post shared by Taran Adarsh (@taranadarsh)

    ಅಕ್ಷಯ್ ಕುಮಾರ್ ಮತ್ತು ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್ ನಟನೆಯ ‘ಪೃಥ್ವಿರಾಜ್’ ಸಿನಿಮಾದ ರಿಲೀಸ್ ಸಹ ಮುಂದೆ ಹೋಗುತ್ತಿದೆ. ಈ ಕುರಿತು ತರಣ್ ಆದರ್ಶ್ ಇನ್‍ಸ್ಟಾದಲ್ಲಿ, ‘ಪೃಥ್ವಿರಾಜ್’ ಸಿನಿಮಾ ಜನವರಿ 21 ರಂದು ತೆರೆಗೆ ಬರಲು ನಿರ್ಧರಿಸಲಾಗಿತ್ತು. ಆದರೆ, ಈಗ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಬರೆದು ಚಿತ್ರದ ಪೋಸ್ಟರ್ ಅನ್ನು ಶೇರ್ ಮಾಡಿದ್ದರು. ಈ ಸಿನಿಮಾದ ಬಿಡುಗಡೆಯ ಹೊಸ ದಿನಾಂಕವನ್ನು ಇನ್ನೂ ತಿಳಿಸಿಲ್ಲ.

    30 ರ ಹರೆಯದಲ್ಲಿ ಕ್ರಿಕೆಟ್ ಆಡಲು ಹಿಂದಿರುಗುವ ಕ್ರಿಕೆಟಿಗನ ಕಥೆಯನ್ನು ಆಧಾರಿಸಿ ‘ಜೆರ್ಸಿ’ ಸಿನಿಮಾವನ್ನು ತಯಾರಿಸಲಾಗಿತ್ತು. ಈ ಸಿನಿಮಾವನ್ನು ಡಿಸೆಂಬರ್ 31 ರಂದು ಬಿಡುಗಡೆ ಮಾಡಬೇಕಾಗಿತ್ತು. ಆದರೆ ದಿನಾಂಕವನ್ನು ಮುಂದಕ್ಕೆ ಹಾಕಲಾಯಿತು. ಈ ಸಿನಿಮಾ 2019 ರ ತೆಲುಗು ಸಿನಿಮಾದ ‘ಜೆರ್ಸಿ’ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಶಾಹಿದ್ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು. ಇದನ್ನೂ ಓದಿ: ಲಾಕ್‍ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಮೂಲ ಉದ್ದೇಶ: ಅಶ್ವಥ್ ನಾರಾಯಣ್

     

    View this post on Instagram

     

    A post shared by Deepika Padukone (@deepikapadukone)

    ದೀಪಿಕಾ ಪಡುಕೋಣೆ ನಟನೆಯ ‘ಗೆಹರಾಯಿಯಾ’ ಸಿನಿಮಾ ಸಹ ಜನವರಿ 25 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸೋಂಕಿನ ಹಿನ್ನೆಲೆ ಈ ಸಿನಿಮಾವನ್ನು ಓಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಇಂದು ದೀಪಿಕಾ ಹುಟ್ಟುಹಬ್ಬದ ಹಿನ್ನೆಲೆ ಈ ಕುರಿತು ಅವರೇ ಇನ್‍ಸ್ಟಾದಲ್ಲಿ ಪೋಸ್ಟರ್ ಅನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಸಿನಿಮಾ ಓಟಿಟಿಯಲ್ಲಿ ಫೆಬ್ರವರಿ 11 ರಂದು ಬಿಡುಗಡೆಯಾಗಲಿದೆ.

    ಪ್ರಭಾಸ್ ಮತ್ತು ಪೂಜಾ ನಟನೆಯ ‘ರಾಧೆ ಶ್ಯಾಮ್’ ಸಿನಿಮಾ ಸಹ ರಿಲೀಸ್ ಮಾಡುವ ಯೋಜನೆಯಲ್ಲಿತ್ತು. ಆದರೆ ಈ ಚಿತ್ರತಂಡ ಸಹ ಸಿನಿಮಾವನ್ನು ಸಧ್ಯಕ್ಕೆ ರಿಲೀಸ್ ಮಾಡಲು ಸಾಧ್ಯವಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದೆ.