Tag: Radhe Shyam

  • ರಿವೀಲ್ ಆಯ್ತು ರಾಧೆ ಶ್ಯಾಮ್ ಪೋಸ್ಟರ್ – ನ್ಯೂ ಲುಕ್‍ನಲ್ಲಿ ಪ್ರಭಾಸ್

    ರಿವೀಲ್ ಆಯ್ತು ರಾಧೆ ಶ್ಯಾಮ್ ಪೋಸ್ಟರ್ – ನ್ಯೂ ಲುಕ್‍ನಲ್ಲಿ ಪ್ರಭಾಸ್

    ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ತಮ್ಮ ಮುಂದಿನ ಸಿನಿಮಾ ರಾಧೆ ಶ್ಯಾಮ್ ಪೋಸ್ಟರ್‍ನನ್ನು ಇಂದು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಸಿನಿಮಾದ ಟೀಸರ್‍ನನ್ನು ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಬೆಳಿಗ್ಗೆ 9:18ಕ್ಕೆ ಬಿಡುಗಡೆಗೊಳಿಸುವುದಾಗಿ ಬಹಿರಂಗಪಡಿಸಿದ್ದಾರೆ. ಸದ್ಯ ರಾಧೆ ಶ್ಯಾಮ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಈ ವರ್ಷದ ಕೊನೆಯಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ.

    ಡಾರ್ಲಿಂಗ್ ಪ್ರಭಾಸ್ ತಮ್ಮ ನೂತನ ಸಿನಿಮಾ ರಾಧೆ ಶ್ಯಾಮ್ ಪೋಸ್ಟರ್‍ನನ್ನು ಭಾಷೆಗಳಲ್ಲಿ ರಿಲೀಸ್ ಮಾಡಿದ್ದು, ಪೋಸ್ಟರ್‍ನಲ್ಲಿ ವಸಂತ ಕಾಲದಲ್ಲಿ ಎಲೆಗಳು ಉದುರುತ್ತಿರುವ ವಾತಾವರಣದಲ್ಲಿ ಪ್ರಭಾಸ್ ಕಿತ್ತಳೆ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿ, ಬೀದಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಪೋಸ್ಟರ್ ಶೇರ್ ಮಾಡಿಕೊಂಡಿರುವ ಪ್ರಭಾಸ್, ಪ್ರೇಮಗಳ ದಿನದಂದು ನಿಮ್ಮೆಲ್ಲರನ್ನು ನೋಡುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Prabhas (@actorprabhas)

    ಪ್ರೇಮಿಗಳ ದಿನದಂದು ರಿಲೀಸ್ ಆಗುತ್ತಿರುವ ರಾಧೆ ಶ್ಯಾಮ್ ಟೀಸರ್‍ಗೆ ವಾಯ್ಸ್ ಡಬ್ ನೀಡುತ್ತಿರುವ ನಟಿ ಪೂಜಾ ಹೆಗ್ಡೆ ಡಬ್ಬಿಂಗ್ ರೂಮ್‍ನಲ್ಲಿ ಕ್ಲಿಕ್ಕಿಸಿದ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಫೆಬ್ರವರಿ 14ರಂದು ಬಿಡುಗಡೆಯಾಗುತ್ತಿರುವ ಟೀಸರ್‍ಗೆ ವಾಯ್ಸ್ ಡಬ್ ಕೊಡಲು ಮುಂಜಾನೆಯೇ ಬಂದಿದ್ದೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.

    ರಾಧೆ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್ ವಿಕ್ರಮಾದಿತ್ಯ ಪಾತ್ರದಲ್ಲಿ ಮತ್ತು ಪೂಜಾ ಹೆಗ್ಡೆ ಪ್ರೇರಣಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾಕ್ಕೆ ರಾಧಾ ಕೃಷ್ಣ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ಇದೊಂದು ಯುರೋಪಿನಲ್ಲಿ ನಡೆದ ಒಂದು ಪ್ರೇಮಕಥೆ ಆಧಾರಿತ ಸಿನಿಮಾಗಿದೆ. ಅಲ್ಲದೆ ಈ ಸಿನಿಮಾಕ್ಕೆ ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ಬಂಡವಾಳ ಹೂಡಿದ್ದು, ತೆಲಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆಕಾಣಲಿದೆ.

  • ಪ್ರಭಾಸ್ ಜೊತೆ ನಟಿಸಲು 20 ಕೋಟಿ ಪಡೆದ ಪದ್ಮಾವತಿ!

    ಪ್ರಭಾಸ್ ಜೊತೆ ನಟಿಸಲು 20 ಕೋಟಿ ಪಡೆದ ಪದ್ಮಾವತಿ!

    ಮುಂಬೈ: ಟಾಲಿವುಡ್ ಪ್ರಭಾಸ್ ಜೊತೆ ರಾಧೆ ಶ್ಯಾಮ್ ಸಿನಿಮಾದಲ್ಲಿ ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ನಟಿಸೋದು ಪಕ್ಕಾ ಆಗಿದೆ. ಈ ಸಿನಿಮಾದಲ್ಲಿ ನಟಿಸಲು ಗುಳಿ ಕೆನ್ನೆ ಬೆಡಗಿ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ನಾಗ ಆಶ್ವಿನ್ ಸಾರಥ್ಯದಲ್ಲಿ ರಾಧೆ ಶ್ಯಾಮ್ ಸಿದ್ಧಗೊಳ್ಳುತ್ತಿದೆ. ಪ್ರಭಾಸ್ ಜೊತೆಯಲ್ಲಿ ಪೂಜಾ ಹೆಗ್ಡೆ ಸಹ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಎಂದು ಹೇಳಲಾಗುತ್ತಿದ್ದು, ಚಿತ್ರಕಥೆಯನ್ನು ಸಿನಿ ತಂಡ ಬಿಟ್ಟುಕೊಟ್ಟಿಲ್ಲ. ಮೊದಲ ಬಾರಿಗೆ ತೆಲುಗು ಅಂಗಳದಲ್ಲಿ ಪದ್ಮಾವತಿ ಕಮಾಲ್ ಮಾಡಲು ಸಿದ್ಧವಾಗ್ತಿದ್ದಾರೆ. ಇದನ್ನೂ ಓದಿದೇವಸೇನಾಳಿಂದ ದೂರವಾದ್ರಾ ಬಾಹುಬಲಿ?- ಮೂವರು ಕನ್ನಡತಿಯರ ನಡ್ವೆ ಡಾರ್ಲಿಂಗ್

    ದೀಪಿಕಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದರಿಂದ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಾಜೀರಾವ್ ಮಸ್ತಾನಿ, ತಮಾಶಾ, ಪದ್ಮಾವತಿ ಸೂಪರ್ ಹಿಟ್ ಸಿನಿಮಾಗಳಲ್ಲಿ ದೀಪಿಕಾ ನಟಿಸಿದ್ದಾರೆ. ದೀಪಿಕಾ ಎಂಟ್ರಿಯಿಂದಾಗಿ ಚಿತ್ರದ ಸ್ಟಾರ್ ಡಮ್ ಮತ್ತಷ್ಟು ಹೆಚ್ಚಾಗಿದ್ದು, ಸಿನಿಮಾದ ಅಪ್‍ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ದೀಪಿಕಾ ನಟನೆಯ ’83’ ಸಿನಿಮಾ ತೆರೆಕಾಣಲು ಸಿದ್ಧವಾಗಿದೆ.

  • ದೇವಸೇನಾಳಿಂದ ದೂರವಾದ್ರಾ ಬಾಹುಬಲಿ?- ಮೂವರು ಕನ್ನಡತಿಯರ ನಡ್ವೆ ಡಾರ್ಲಿಂಗ್

    ದೇವಸೇನಾಳಿಂದ ದೂರವಾದ್ರಾ ಬಾಹುಬಲಿ?- ಮೂವರು ಕನ್ನಡತಿಯರ ನಡ್ವೆ ಡಾರ್ಲಿಂಗ್

    ಬೆಂಗಳೂರು: ಟಾಲಿವುಡ್ ದೇವಸೇನಾ ಅನುಷ್ಕಾ ಶೆಟ್ಟಿಯಿಂದ ಡಾರ್ಲಿಂಗ್ ಬಾಹುಬಲಿ ದೂರ ಆಗ್ತಿದ್ದೀರಾ ಅನ್ನೋ ಮಾತು ಬಣ್ಣದ ಲೋಕದಲ್ಲಿ ಸುಳಿದಾಡುತ್ತಿದೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಬಾಹುಬಲಿಯಲ್ಲಿ ಅನುಷ್ಕಾ ಮತ್ತು ಪ್ರಭಾಸ್ ಕೆಮಿಸ್ಟ್ರಿ ನೋಡಿದ ಅಭಿಮಾನಿಳು ರಿಯಲ್ ಲೈಫ್ ನಲ್ಲಿಯೂ ಒಂದಾದ್ರೆ ಚೆನ್ನಾಗಿರುತ್ತೆ ಅಂತ ಕನಸು ಕಂಡಿದ್ದರು. ಆದ್ರೆ ಅಭಿಮಾನಿಗಳು ಕಂಡ ಕನಸು ಕನಸಾಗಿಯೇ ಉಳಿಯಲಿದೆಯಾ ಅನ್ನೋ ಪ್ರಶ್ನೆಯನ್ನು ಖುದ್ದು ಪ್ರಭಾಸ್ ಮುನ್ನಲೆಗೆ ತಂದಿದ್ದಾರೆ.

    ಪ್ರಭಾಸ್ ಮುಂದಿನ ಸಿನಿಮಾ ರಾಧೆ-ಶ್ಯಾಮ್ ಚಿತ್ರದ ಫಸ್ಟ್ ಲುಕ್ ಭಾರತೀಯ ಸಿನಿ ಅಂಗಳದಲ್ಲಿ ಸೆನ್ಸಷನಲ್ ಕ್ರಿಯೇಟ್ ಮಾಡಿದೆ. ಚಿತ್ರದ ಫಸ್ಟ್ ಲುಕ್ ನಲ್ಲಿ ಮಾಸ್ ಪ್ರಭಾಸ್ ಲವರ್ ಬಾಯ್ ಆಗಿ ಕನ್ನಡತಿ ಪೂಜಾ ಹೆಗ್ಡೆ ರೊಮ್ಯಾಂಟಿಕ್ ಪೋಸ್ ನೀಡಿದ್ದಾರೆ. ರಾಧೆ ಶ್ಯಾಮ್ ಟೀಂಗೆ ಬಾಲಿವುಡ್ ಪದ್ಮಾವತಿ, ಗುಳಿ ಕೆನ್ನೆಯ ಚೆಲುವೆ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟಿದ್ದಾರೆ. ಫಿಲಂ ಟೀಂಗೆ ಎಂಟ್ರಿ ಕೊಡುತ್ತಿದ್ದಂತೆ ದೀಪಿಕಾ ಇನ್‍ಸ್ಟಾಗ್ರಾಂ ಖಾತೆಯನ್ನು ಪ್ರಭಾಸ್ ಫಾಲೋ ಮಾಡಲಾರಂಭಿಸಿದ್ದಾರೆ.

    ಪ್ರಭಾಸ್ ಇನ್‍ಸ್ಟಾಗ್ರಾಂನಲ್ಲಿ ಕೇವಲ ಐವರು ಫಾಲೋ ಮಾಡುತ್ತಿದ್ದಾರೆ. ಗೆಳೆಯ ಸುಜಿತ್, ನಟಿಯರಾದ ದೀಪಿಕಾ ಪಡುಕೋಣೆ, ಪೂಜಾ ಹೆಗ್ಡೆ, ಶ್ರದ್ಧಾ ಕಪೂರ್ ಮತ್ತು ಭಾಗ್ಯಶ್ರೀಯವರ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ. ಆದ್ರೆ ಬಹುದಿನಗಳ ಗೆಳತಿ ಅನುಷ್ಕಾ ಶೆಟ್ಟಿಯ ಖಾತೆಯನ್ನು ಮಾತ್ರ ಫಾಲೋ ಮಾಡಿಲ್ಲ. ಇತ್ತ ದೇವಸೇನಾ ಗೆಳಯ ಬಾಹುಬಲಿಯ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.

    ಇತ್ತೀಚೆಗೆ ನಟಿಸುತ್ತಿರುವ ನಟಿಯರ ಖಾತೆಗಳನ್ನು ಫಾಲೋ ಮಾಡುತ್ತಿರುವ ಪ್ರಭಾಸ್ ಹಳೆಯ ಗೆಳತಿ ಅರುಂಧತಿಯನ್ನು ಮರೆತ್ರಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ದೀಪಿಕಾ, ಅನುಷ್ಕಾ ಮತ್ತು ಪೂಜಾ ಮೂವರು ಕರ್ನಾಟಕದವರಾಗಿದ್ದು, ಕನ್ನಡತಿಯರ ನಡುವೆ ಪ್ರಭಾಸ್ ಸಿಲುಕಿಕೊಂಡಿದ್ದಾರೆ ಅನ್ನೋ ಚರ್ಚೆಗಳು ಟಾಲಿವುಡ್ ಅಂಗಳದಲ್ಲಿ ಆರಂಭಗೊಂಡಿವೆ.

  • ಪೊಲೀಸರಿಂದ ರಾಧೆ-ಶ್ಯಾಮ್‍ಗೆ ಮಾಸ್ಕ್

    ಪೊಲೀಸರಿಂದ ರಾಧೆ-ಶ್ಯಾಮ್‍ಗೆ ಮಾಸ್ಕ್

    ಹೈದರಾಬಾದ್: ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ 20ನೇ ಸಿನಿಮಾ ರಾಧೆ ಶ್ಯಾಮ್ ಸಾಕಷ್ಟು ಸದ್ದು ಮಾಡುತ್ತಿದ್ದು, ಶುಕ್ರವಾರ ಪೋಸ್ಟರ್ ಬಿಡುಗಡೆಯಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಆದರೆ ಇದೇ ಪೋಸ್ಟರ್ ಮೂಲಕ ಪೊಲೀಸರು ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

    ಈ ಪೋಸ್ಟರ್ ನಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ರೊಮ್ಯಾಂಟಿಕ್ ಪೋಸ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಧೆ ಶ್ಯಾಮ್ ಚಿತ್ರದ ಪೋಸ್ಟರ್ ಮೂಲಕವೇ ಪೊಲೀಸರು ಸಹ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಚಿತ್ರದ ಪೋಸ್ಟರ್‍ನ್ನು ಎಡಿಟ್ ಮಾಡಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಫೋಟೋಗೆ ಮಾಸ್ಕ್ ಹಾಕಿದ್ದಾರೆ. ಈ ಮೂಲಕ ಎಲ್ಲೇ ಹೊರಗಡೆ ಹೋಗಬೇಕಿದ್ದರೂ ಮಾಸ್ಕ್ ಧರಿಸಿಯೇ ಹೋಗಿ ಎಂದು ನಾಗಾವ್ ಪೊಲೀಸರು ಮನವಿ ಮಾಡಿದ್ದಾರೆ.

    ಹೊರಗಡೆ ಹೋಗುವಾಗಲೆಲ್ಲ ಮಾಸ್ಕ್ ಧರಿಸಿ ಹೋಗುವಂತೆ ನಿಮ್ಮ ಪ್ರೀತಿ ಪಾತ್ರರಿಗೆ ಹೇಳಿ. ನಾವು ಪ್ರಭಾಸ್ ಅವರನ್ನು ಸಂಪರ್ಕಿಸಲು ಯತ್ನಿಸಿದೆವು ಆದರೆ ಸಾಧ್ಯವಾಗಲಿಲ್ಲ. ಇದೀಗ ಫೋಟೋಶಾಪ್ ಮೂಲಕ ಅವರ ಫೋಟೋ ರಚಿಸಿದ್ದೇವೆ ಎಂದು ಬರೆದು ರಾಧೆ ಶ್ಯಾಮ್ ಚಿತ್ರದ ಪೋಸ್ಟರ್ ಹಾಕಿ ಕೆಳಗಡೆ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಫೋಟೋ ಹಾಕಿದ್ದಾರೆ.

    ಈ ಪೋಸ್ಟ್ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್ ಮಾಡುವ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಅಲ್ಲದೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಮಾಸ್ಕ್ ಒಕೆ, ಸಾಮಾಜಿಕ ಅಂತರ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಹೀಗೆ ವಿವಿಧ ಬಗೆಯ ಪ್ರಶ್ನೆಗಳ ಮೂಲಕ ಚರ್ಚೆ ನಡೆಸುತ್ತಿದ್ದಾರೆ.

    ನಟ ಪ್ರಭಾಸ್ ಅಭಿನಯದ 20ನೇ ಸಿನಿಮಾ ಕುರಿತ ಅಪ್‍ಡೇಟ್‍ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅಲ್ಲದೆ ಕೊರೊನಾ, ಲಾಕ್‍ಡೌನ್‍ನಿಂದಾಗಿ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಯಾವುದೇ ಸುದ್ದಿ ಹೊರ ಬಿದ್ದಿರಲಿಲ್ಲ. ಶುಕ್ರವಾರ ಪ್ರಭಾಸ್ ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ತಿಳಿಸಿದ್ದು, ತಮ್ಮ 20ನೇ ಸಿನಿಮಾ ರಾಧೆ ಶ್ಯಾಮದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಂದು ಕಾರಣಕ್ಕೆ ರಾಧೆ ಶ್ಯಾಮ್ ಪೋಸ್ಟರ್ ಚರ್ಚೆಗೆ ಗ್ರಾಸವಾಗಿದೆ.

    ಸಿನಿಮಾ ಸೆಟ್ಟೇರಿದಾಗಿನಿಂದ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೆ ಸಿನಿಮಾದ ಟೈಟಲ್ ಸಹ ರಿವೀಲ್ ಮಾಡಿರಲಿಲ್ಲ. ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮುಗಿದಿದೆ. ಆದರೂ ಚಿತ್ರದ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾತಂಡ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಬಿಡುಗಡೆ ಮಾಡಿದೆ.

    ಶುಕ್ರವಾರ ಸುಂದರವಾದ ಫಸ್ಟ್ ಲುಕ್ ಪೋಸ್ಟರ್ ಮೂಲಕ ಚಿತ್ರದ ಟೈಟಲ್ ಅನೌನ್ಸ್ ಮಾಡಲಾಗಿದ್ದು, ಪೋಸ್ಟರ್‍ನಲ್ಲಿ ಪೂಜಾ ಮತ್ತು ಪ್ರಭಾಸ್ ರೊಮ್ಯಾಂಟಿಕ್ ಲುಕ್‍ನಲ್ಲಿ ಪೋಸ್ ನೀಡಿದ್ದಾರೆ. ಪ್ರಭಾಸ್ ಮತ್ತು ಪೂಜಾ ಲುಕ್ ಜೊತೆಗೆ ಬ್ಯಾಕ್ ಡ್ರಾಪ್ ಸಹ ಗಮನ ಸೆಳೆಯುತ್ತಿದೆ. ಈ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ. ಅದೇ ರೀತಿ ಪೊಲೀಸರ ಕೊರೊನಾ ಕುರಿತು ಜಾಗೃತಿ ಮೂಡಿಸುವ ಐಡಿಯಾ ಸಹ ಗಮನ ಸೆಳೆಯುತ್ತಿದೆ.

  • ‘ರಾಧೆ, ಶ್ಯಾಮ್’ ಆದ ಪ್ರಭಾಸ್-ಪೂಜಾ

    ‘ರಾಧೆ, ಶ್ಯಾಮ್’ ಆದ ಪ್ರಭಾಸ್-ಪೂಜಾ

    ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಅಭಿನಯದ ‘ಬಾಹುಬಲಿ’, ‘ಸಾಹೋ’ ಸಿನಿಮಾದ ಬಳಿಕ ಅಭಿಮಾನಿಗಳು ಅವರ ಮುಂದಿನ ಸಿನಿಮಾದ ಬಗ್ಗೆ ಭಾರೀ ಕುತೂಹಲ ಹೊಂದಿದ್ದರು. ಇದೀಗ ಪ್ರಭಾಸ್ ಮುಂದಿನ ಸಿನಿಮಾದ ಟೈಟಲ್ ಘೋಷಣೆಯಾಗಿದೆ.

    ನಟ ಪ್ರಭಾಸ್ ಅಭಿನಯದ 20ನೇ ಸಿನಿಮಾ ಇದಾಗಿದ್ದು, ಸಿನಿಮಾ ಸೆಟ್ಟೇರಿದಾಗಿನಿಂದ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೇ ಸಿನಿಮಾ ಟೈಟಲ್ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಇಂದು ಸ್ವತಃ ಪ್ರಭಾಸ್ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳು ಸರ್‌ಪ್ರೈಸ್ ನೀಡಿದ್ದಾರೆ.

    ಪ್ರಭಾಸ್ ಅಭಿನಯದ 20ನೇ ಸಿನಿಮಾಗೆ ‘ರಾಧೆ ಶ್ಯಾಮ್’ ಎಂದು ಟೈಟಲ್ ಇಡಲಾಗಿದೆ. ಜೊತೆಗೆ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಜೊತೆಗಿರುವ ಒಂದು ಸುಂದರವಾದ ಫಸ್ಟ್‌ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ಪೋಸ್ಟರಿನಲ್ಲಿ ಪೂಜಾ ಮತ್ತು ಪ್ರಭಾಸ್ ರೊಮ್ಯಾಂಟಿಕ್ ಲುಕ್‍ನಲ್ಲಿ ಪೋಸ್ ನೀಡಿದ್ದಾರೆ. ಅಲ್ಲದೇ ಅವರ ಬ್ಯಾಕ್ ಡ್ರಾಪ್ ಸಹ ಗಮನ ಸೆಳೆಯುತ್ತಿದೆ. ಪೋಸ್ಟರಿನಲ್ಲಿ ಪ್ರಭಾಸ್ ಮತ್ತು ಪೂಜಾ ರೊಮ್ಯಾಂಟಿಕ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪ್ರಭಾಸ್ ಪಾಲಿಗೆ ಜುಲೈ 10 ಬಹಳ ವಿಶೇಷವಾದ ದಿನವಾಗಿದೆ. ಇಂದೇ ‘ಬಾಹುಬಲಿ’ ಸಿನಿಮಾ ತೆರೆಕಂಡಿತ್ತು. ಇದೀಗ ಈ ಸಿನಿಮಾ ರಿಲೀಸ್ ಆಗಿ ಐದು ವರ್ಷಗಳಾಗಿದೆ. ಈ ನೆನಪಿನಲ್ಲೇ ಪ್ರಭಾಸ್ ತಮ್ಮ ಮುಂದಿನ ಸಿನಿಮಾ ‘ರಾಧೆ ಶ್ಯಾಮ್’ನ ಟೈಟಲ್ ಮತ್ತು ಫಸ್ಟ್‌ಲುಕ್ ರಿಲೀಸ್ ಮಾಡಿದ್ದಾರೆ.

    ಪ್ರಭಾಸ್ ಆರಂಭದಿಂದಲೂ ಆ್ಯಕ್ಷನ್ ಸಿನಿಮಾಗಳಿಗೆ ಫೇಮಸ್ ಆದವರು. ಆದರೆ ‘ರಾಧೆ ಶ್ಯಾಮ್’ ಸಿನಿಮಾ ಪೋಸ್ಟರ್ ನೋಡಿದರೆ ಪ್ರಭಾಸ್ ಲವರ್ ಬಾಯ್ ಗೆಟಪ್‍ನಲ್ಲಿ ಮಿಂಚಲಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ರಾಧ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ.

    ‘ರಾಧೆ-ಶ್ಯಾಮ್ ಸಿನಿಮಾ ನಾಲ್ಕು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ನಾಲ್ಕು ಭಾಷೆಯ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ತೆಲಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬರಲಿದೆ. ಈ ಸಿನಿಮಾ ಪೋಸ್ಟರ್ ಶೇರ್ ಮಾಡಿ. ‘ಇದು ನಿಮಗಾಗಿ, ನೀವೆಲ್ಲರೂ ಇಷ್ಟಪಡುತ್ತೀರ ಎಂದು ಭಾವಿಸುತ್ತೇನೆ” ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    https://www.instagram.com/p/CCcr1VaH32n/?igshid=1c14hqi6enfek