Tag: Radhe Shyam

  • ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಸಾಲು ಸಾಲು ಸಿನಿಮಾಗಳು ಸೋತಿದ್ದರೂ ಕೂಡ ಪೂಜಾಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಇತ್ತೀಚಿನ ಸಲ್ಮಾನ್ ಜೊತೆಗಿನ ‘ಕಿಸಿ ಕಾ ಜಾನ್ ಕಿಸಿ ಕಿ ಭಾಯ್’ (Kisi Ka Jaan Kisi Ki Jaan) ಚಿತ್ರ ಕಲೆಕ್ಷನ್‌ನಲ್ಲಿ ಫ್ಲಾಪ್ ಆಗಿದೆ. ಹೀಗಿದ್ದರೂ ಪೂಜಾಗೆ ಬಾಲಿವುಡ್‌ನಿಂದ ಮತ್ತೊಂದು ಬಿಗ್ ಪ್ರಾಜೆಕ್ಟ್ ಸಿಕ್ಕಿದೆ.

    ಪೂಜಾ ಹೆಗ್ಡೆ ಅವರು 2020ರ ನಂತರ ನಟಿಸಿದ ರಾಧೆ ಶ್ಯಾಮ್, ಬಿಸ್ಟ್, ಆಚಾರ್ಯ (Acharya) ಸಿನಿಮಾ ಸೇರಿದಂತೆ ಬರೋಬ್ಬರಿ ಆರು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಕರಾವಳಿ ಸುಂದರಿ ಪೂಜಾಗೆ ಅಂದ ಚೆಂದ, ಪ್ರತಿಭೆ ಇದ್ದರೂ ಲಕ್ ಕೈ ಕೊಟ್ಟಿದೆ. ಇದನ್ನೂ ಓದಿ:ನಾನೇನೂ ತಪ್ಪು ಮಾಡಿಲ್ಲ- ನಾಗ ಚೈತನ್ಯ ಜೊತೆಗಿನ ಡೇಟಿಂಗ್ ಸುದ್ದಿಗೆ ಶೋಭಿತಾ ರಿಯಾಕ್ಷನ್

    ಬಾಲಿವುಡ್‌ನ ಡ್ಯಾಶಿಂಗ್ ಹೀರೋ ಶಾಹಿದ್ ಕಪೂರ್ (Shahid Kapoor) ನಾಯಕಿಯಾಗಿ ಪೂಜಾ ಹೆಗ್ಡೆ ಸೆಲೆಕ್ಟ್ ಆಗಿದ್ದಾರೆ. ಥ್ರಿಲ್ಲರ್ ಸಿನಿಮಾವೊಂದರಲ್ಲಿ ಶಾಹಿದ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಾಹಿದ್ ಕಪೂರ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ.

    ಸಿನಿಮಾಗೆ ‘ಕೋಯಿ ಶಕ್’ ಎಂದು ಟೈಟಲ್ ಇಡಲಾಗಿದೆ. ಮೇ 8ರಿಂದ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ. ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿರುವ ಪೂಜಾ- ಶಾಹಿದ್ ಪೇರ್ ಮೇಲೆ ಫ್ಯಾನ್ಸ್ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ನೋಡಲು ಎದುರು ನೋಡ್ತಿದ್ದಾರೆ.

  • ಪೂಜಾ ಹೆಗ್ಡೆಗೆ ಬೆನ್ನಬಿಡದ ಸೋಲು: ಸತತ ಮೂರು ಸಿನಿಮಾಗಳು ಫ್ಲಾಪ್

    ಪೂಜಾ ಹೆಗ್ಡೆಗೆ ಬೆನ್ನಬಿಡದ ಸೋಲು: ಸತತ ಮೂರು ಸಿನಿಮಾಗಳು ಫ್ಲಾಪ್

    ಸೌತ್ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಿರೋ ನಟಿ ಪೂಜಾ ಹೆಗ್ಡೆ, ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿರೋ ನಟಿ ಪೂಜಾ, ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳು ಬಾಕ್ಸ್ಆಫೀಸ್‌ನಲ್ಲಿ ಸೋಲಿನ ರುಚಿ ಕಂಡಿದೆ.

    ತಮಿಳಿನ `ಮುಗಮುಡಿ’ ಚಿತ್ರದ ಮೂಲಕ ಕಾಲಿವುಡ್‌ಗೆ ಲಗ್ಗೆಯಿಟ್ಟ ನಟಿ ಪೂಜಾ, ನಂತರ 2016ರಲ್ಲಿ `ಮೊಹೆಂಜೊ ದಾರೋ’ ಚಿತ್ರದಲ್ಲಿ ಹೃತಿಕ್ ರೋಷನ್‌ಗೆ ನಾಯಕಿಯಾಗುವ ಮೂಲಕ ಬಾಲಿವುಡ್‌ನಲ್ಲೂ ಗುರುತಿಸಿಕೊಂಡ್ರು. ಬಳಿಕ 2020ರಲ್ಲಿ `ಅಲ್ಲಾ ವೈಕುಂಠಪುರಮುಲೋ’ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಸೈ ಎನಿಸಿಕೊಂಡ್ರು. ಈ ಚಿತ್ರದ ಮೂಲಕ ಪೂಜಾ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿತ್ತು. ಆದರೆ `ರಾಧೆ ಶ್ಯಾಮ್’,`ಬೀಸ್ಟ್’, `ಆಚಾರ್ಯ’ ಸಾಲು ಸಾಲು ಸಿನಿಮಾ ಬಾಕ್ಸ್ಆಫೀಸ್‌ನಲ್ಲಿ ಮಕಾಡೆ ಮಲಗಿದೆ.

    ಪ್ರಭಾಸ್ ಮತ್ತು ಪೂಜಾ ನಟನೆಯ `ರಾಧೆ ಶ್ಯಾಮ್’ ಮಾರ್ಚ್ 11ರಂದು ತೆರೆ ಕಂಡಿತ್ತು. ಚಿತ್ರದಲ್ಲಿ ಪೂಜಾ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆಯಿತ್ತು. ಆದರೆ ಚಿತ್ರಮಂದಿರದಲ್ಲಿ ಮೋಡಿ ಮಾಡೋದ್ರಲ್ಲಿ ಸೋತಿತ್ತು. `ಬೀಸ್ಟ್’ ಚಿತ್ರ ರಿಲೀಸ್‌ಗೂ ಮುನ್ನ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. `ಬೀಸ್ಟ್’ ಚಿತ್ರನು ಕೂಡ ಪ್ರೇಕ್ಷಕರಿಗೆ ನಿರಾಸೆ ಮಾಡಿದೆ. `ಆಚಾರ್ಯ’ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಲ್ಕು ದೃಶ್ಯಗಳಿಗೆ ಅಷ್ಟೇ ಸೀಮಿತವಾಗಿದ್ದು, ಈ ಚಿತ್ರ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸೋತಿದೆ. ಇದನ್ನೂ ಓದಿ: `ಪುಷ್ಪ’ ಬೆಡಗಿ ರಶ್ಮಿಕಾ ಒಂದೇ ದಿನ ಏನೆಲ್ಲಾ ತಿಂತಾರೆ ಗೊತ್ತಾ? ರಶ್ಮು ವಿಡಿಯೋ ವೈರಲ್

    ಹೀಗೆ ಕರಾವಳಿ ಬ್ಯೂಟಿ ಪೂಜಾ ನಟನೆಯ ಸತತ ಮೂರು ಸಿನಿಮಾಗಳು ಸೋತಿದೆ. ಪೂಜಾ ಕೆರಿಯರ್‌ಗೆ ಬಿಗ್ ಬ್ರೇಕ್ ಬೇಕಾಗಿದೆ. ಸದ್ಯ ಪೂಜಾ ಕೈಯಲ್ಲಿ `ಸರ್ಕಸ್’ ಮತ್ತು ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಗಳಿಂದಾದರೂ ಸಕ್ಸಸ್ ಸಿಗಲಿದೆಯಾ ಕಾದು ನೋಡಬೇಕಿದೆ.

     

     

  • 24 ಗಂಟೆಯಲ್ಲಿ ಅತಿ ಹೆಚ್ಚು ವೀಕ್ಷಣೆ – ಭಾರತದಲ್ಲಿ ಕೆಜಿಎಫ್ ದಾಖಲೆ

    24 ಗಂಟೆಯಲ್ಲಿ ಅತಿ ಹೆಚ್ಚು ವೀಕ್ಷಣೆ – ಭಾರತದಲ್ಲಿ ಕೆಜಿಎಫ್ ದಾಖಲೆ

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚ್ಯಾಪ್ಟರ್ 2 ಟ್ರೈಲರ್ ಬಿಡುಗಡೆಯಾಗಿದೆ. ಕೇವಲ 24 ಗಂಟೆಗಳಲ್ಲಿ ಟ್ರೈಲರ್ ಬರೋಬ್ಬರಿ 10 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದ್ದು, ಈ ಹಿಂದೆ ರಾಧೆ ಶ್ಯಾಮ್ ಸಿನಿಮಾದ ಟ್ರೈಲರ್ ಬರೆದಿದ್ದ ದಾಖಲೆಯನ್ನು ಕೆಜಿಎಫ್ ಚ್ಯಾಪ್ಟರ್ 2 ಟ್ರೈಲರ್ ಮುರಿದಿದೆ.

    ಈ ಹಿಂದೆ ಪ್ರಭಾಸ್ ಅಭಿನಯದ ತೆಲುಗು ಚಿತ್ರ ರಾಧೆ ಶ್ಯಾಮ್ ಸಿನಿಮಾದ ಟ್ರೈಲರ್ ಕೇವಲ 24 ಗಂಟೆಗಳಲ್ಲಿ 6.4 ಕೋಟಿಗೂ ಅಧಿಕ ವೀಕ್ಷಣೆ ಪಡೆದಿತ್ತು. 2021ರ ಡಿಸೆಂಬರ್ 23ರಂದು ಬಿಡುಗಡೆಯಾಗಿದ್ದ ಸಿನಿಮಾದ ಟ್ರೈಲರ್ ಕೇವಲ 24 ಗಂಟೆಗಳಲ್ಲಿ ಭಾರತದಲ್ಲೇ ಅತೀ ಹೆಚ್ಚು ವೀಕ್ಷಣೆ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಕೆಜಿಎಫ್ ಚ್ಯಾಪ್ಟರ್ 2 ಟ್ರೈಲರ್ ರಾಧೆ ಶ್ಯಾಮ್ ದಾಖಲೆ ಮುರಿದಿದೆ.

    ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚ್ಯಾಪ್ಟರ್ 2 ಟ್ರೈಲರ್ ಕನ್ನಡದಲ್ಲಿ 1.8 ಕೋಟಿ, ತೆಲುಗಿನಲ್ಲಿ 2 ಕೋಟಿ, ತಮಿಳಿನಲ್ಲಿ 1.2 ಕೋಟಿ, ಮಲೆಯಾಳಂನಲ್ಲಿ 80 ಲಕ್ಷ ಹಾಗೂ ಹಿಂದಿ ಭಾಷೆಯಲ್ಲಿ 5.1 ಕೋಟಿ ವೀಕ್ಷಣೆಗಳನ್ನು ಪಡೆದಿದೆ. ಇದನ್ನೂ ಓದಿ: ಸಿನಿಮಾದ ಒಂದಷ್ಟು ಕಥೆ ಬಿಟ್ಟುಕೊಟ್ಟ ‘ಕೆಜಿಎಫ್ 2’ ಟ್ರೈಲರ್

    ಕೆಜಿಎಫ್ ಚ್ಯಾಪ್ಟರ್ 2 ಟೀಸರ್ ಬಿಡುಗಡೆಯಾದಾಗಲೂ ಕೇವಲ 24 ಗಂಟೆಗಳಲ್ಲಿ 7 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿತ್ತು. ಇಲ್ಲಿಯವರೆಗೆ ಇದರ ಟೀಸರ್ 20 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಈ ಹಿಂದೆ ಕೆಜಿಎಫ್‌ನ ಮೊದಲ ಆವೃತ್ತಿ ಬಿಡುಗಡೆಯಾದಾಗ ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಈ ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಜಿಎಫ್ ಚ್ಯಾಪ್ಟರ್ 2 ಸಿನಿಮಾ ದೇಶಾದ್ಯಂತ ಏಪ್ರಿಲ್ 14ರಂದು ಬಿಡುಗಡೆಯಾಗಲಿದ್ದು, ಇದಕ್ಕಾಗಿ ಯಶ್ ಅಭಿಮಾನಿಗಳು ಭಾರೀ ಕಾತುರರಾಗಿ ಕಾಯುತ್ತಿದ್ದಾರೆ.

  • ಪ್ರಭಾಸ್- ನನ್ನ ನಡುವೆ ಏನಿಲ್ಲ, ಏನೇನಿಲ್ಲ : ಸ್ಟಾರ್ ನಟಿ ಪೂಜಾ ಹೆಗ್ಡೆ

    ಪ್ರಭಾಸ್- ನನ್ನ ನಡುವೆ ಏನಿಲ್ಲ, ಏನೇನಿಲ್ಲ : ಸ್ಟಾರ್ ನಟಿ ಪೂಜಾ ಹೆಗ್ಡೆ

    ಬಾಲಿವುಡ್‌ನಲ್ಲಿ ‘ರಾಧೆ ಶ್ಯಾಮ್’ ಸಿನಿಮಾ ಸುದ್ದಿಯಲ್ಲಿತು. ಆದರೆ ಈ ಸಿನಿಮಾ ರಿಲೀಸ್ ನಂತರ ಅಷ್ಟಾಗಿ ಪ್ರೇಕ್ಷಕನಿಗೆ ಇಷ್ಟವಾಗಲಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪೂಜಾ ಹೆಗ್ಡೆ ಮತ್ತು ಪ್ರಭಾಸ್ ಕುರಿತಾಗಿ ಹಲವು ಗಾಸಿಪ್‌ಗಳು ಹರಿದಾಡುತ್ತಿದ್ದವು. ಈ ವಿಚಾರಕ್ಕೆ ನಟಿ ಪೂಜಾ ಹೆಗ್ಡೆ ಬ್ರೇಕ್ ಹಾಕಿದ್ದಾರೆ.

    ರಾಧೆ ಶ್ಯಾಮ್ ಸಿನಿಮಾ ಪ್ರಚಾರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಇಬ್ಬರೂ ಸರಿಯಾಗಿ ತೊಡಗಿಸಿಕೊಂಡಿರಲಿಲ್ಲ. ಇವರ ಇಬ್ಬರ ಮಧ್ಯೆ ಏನೋ ಆಗಿದೆ. ಇಬ್ಬರ ಮಧ್ಯೆ ಮನಸ್ತಾಪ ಇದೆ ಎನ್ನುವ ಗುಸುಗಸು ಸುದ್ದಿಯೊಂದು ಹರಿದಾಡುತ್ತಿತ್ತು. ಬಾಲಿವುಡ್ ಅಂಗಳದಲ್ಲಿ ಹರಡಿದ್ದ ಈ ಸುದ್ದಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸೆಕ್ಸ್ ಮಾಡುವಂತೆ ಕೇಳುವುದೇ ಮೀಟೂ ಆದರೆ, ನಾನು ಅದನ್ನು ಕೇಳುತ್ತೇನೆ : ಖ್ಯಾತ ಖಳನಟನ ಶಾಕಿಂಗ್ ಮಾತು

    ಪೂಜಾ ಹೇಳಿದ್ದೇನು?: ಸತ್ಯಕ್ಕೆ ದೂರವಾದ ಮಾತುಗಳನ್ನು ನಾನು ಕೇಳಿಸಿಕೊಳ್ಳುವುದಿಲ್ಲ, ನನಗೂ ಅದಕ್ಕೂ ಸಂಬಂಧವಿಲ್ಲ, ನಾನು ಏನಿದ್ದರೂ ಧನಾತ್ಮಕ ಚಿಂತನೆ ಮತ್ತು ನನ್ನ ವೃತ್ತಿಯ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಜನರು ಗಾಸಿಪ್ ಮಾಡಲು ಮತ್ತು ಕೇಳಲು ಇಷ್ಟಪಡುತ್ತಾರೆ. ಆದರೆ ಅದು ಹೆಚ್ಚು ಸಮಯ ಉಳಿಯುವುದಿಲ್ಲ. ನಾನು ನನ್ನ ಜೀವನದಲ್ಲಿ ಉತ್ತಮ ವಿಚಾರಗಳಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತೇನೆ ಎಂದು ಹೇಳುವ ಮೂಲಕವಾಗಿ ಸ್ಪಷ್ಟನೆ ನೀಡಿದ್ದಾರೆ.

    ಏನೇ ಆಗಲಿ ಸಿನಿ ರಂಗದಲ್ಲಿ ಕೆಲವು ಸುದ್ದಿಗಳು ದೀಢಿರ್ ಎಂದು ಹಬ್ಬಿಕೊಳ್ಳುತ್ತವೆ. ಗಾಳಿ ಸುದ್ದಿಗಳು ನಟ, ನಟಿಯರು ಹೆಚ್ಚು ಗಮನ ಕೊಡಲು ಹೋಗುವುದಿಲ್ಲ. ಕೆಲವೊಮ್ಮೆ ಮಾಧ್ಯಮಗಳ ಎದುರು ಸ್ಪಷ್ಟನೆ ಕೊಟ್ಟು ಅಲ್ಲಿ ಬಿಟ್ಟಿ ಬಿಡುತ್ತಾರೆ. ಇದನ್ನೂ ಓದಿ: ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ

  • ಅಭಿಮಾನಿಯನ್ನೇ ಬಲಿ ತೆಗೆದುಕೊಂಡ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ

    ಅಭಿಮಾನಿಯನ್ನೇ ಬಲಿ ತೆಗೆದುಕೊಂಡ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ

    ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ‘ರಾಧೆ ಶ್ಯಾಮ್’ ಸಿನಿಮಾದ ನೆಗೆಟಿವ್ ವಿಮರ್ಶೆ ಮತ್ತು ಅತೀವ ನಿರೀಕ್ಷೆ ಇಟ್ಟುಕೊಂಡಿದ್ದ ಈ ಅಭಿಮಾನಿಗೆ ಸಿನಿಮಾ ರುಚಿಸಲಿಲ್ಲ ಎನ್ನುವ ಕಾರಣಕ್ಕಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗುತ್ತಿದೆ. ಹಾಗಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ಧಾನೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಕರ್ನೂಲಿನ ತಿಲಕ್ ನಗರದ 24ರ ವಯಸ್ಸಿನ ಹಾರ್ಡ್ ಕೋರ್ ಅಭಿಮಾನಿ ರವಿತೇಜ, ಬಹುತೇಕ ಪ್ರಭಾಸ್ ನಟನೆಯ ಚಿತ್ರಗಳನ್ನು ನೋಡಿಕೊಂಡು ಬೆಳೆದವನು.  ಮನೆತುಂಬಾ ಪ್ರಭಾಸ್ ಚಿತ್ರಗಳನ್ನೇ ಇಟ್ಟುಕೊಂಡವನು. ರಾಧೆ ಶ್ಯಾಮ್ ಸಿನಿಮಾ ಬಿಡುಗಡೆಯ ಮುಂಚೆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದ. ಈ ಅತೀವ ನಿರೀಕ್ಷೆಯೇ ಅವನನ್ನು ಬಲಿ ತಗೆದುಕೊಂಡಿದೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

    ಪ್ರಭಾಸ್ ಅಭಿಮಾನಿಗಳು ಇಂತಹ ಹುಚ್ಚಾಟಗಳನ್ನು ಮಾಡುವುದು ಇದೇ ಮೊದಲೇನೂ ಅಲ್ಲ. ರಾಧೆ ಶ್ಯಾಮ್ ಟೀಸರ್ ಬಿಡುಗಡೆ ಬಿಳಂಬವಾದಾಗಲೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿದ್ದರು. ಬೇಗ ಸಿನಿಮಾ ರಿಲೀಸ್ ಆಗುತ್ತಿಲ್ಲ ಎಂದು ನಾನಾ ರೀತಿಯಲ್ಲಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ಪ್ರಭಾಸ್ ಮತ್ತು ಪೂಜಾ ಹೆಗಡೆ ಕಾಂಬಿನೇಷನ್ ನ ರಾಧೆ ಶ್ಯಾಮ್ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಅಷ್ಟೇನೂ ಕಮಾಯಿ ಮಾಡಲಿಲ್ಲ. ತಮಿಳು ಸಿನಿಮಾವೊಂದರ ಕಥೆಯನ್ನೇ ಈ ಸಿನಿಮಾ ಹೋಲುತ್ತಿದೆ ಎನ್ನುವ ಮಾತೂ ಕೇಳಿ ಬಂದಿತ್ತು.

  • ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಬಾಲಿವುಡ್ ನ ಖ್ಯಾತ ತಾರೆ, ರಾಷ್ಟ್ರ ಪ್ರಶಸ್ತಿ ವಿಜೇತೆ ಹಾಗೂ ವಿವಾದಗಳ ಮೂಲಕವೇ ಸದಾ ಸದ್ದು ಮಾಡುವ ಕಂಗನಾ ರಣಾವತ್, ಸಿನಿಮಾ ಹೀರೋಯಿನ್ ಆಗುವುದಕ್ಕೆ ಒಬ್ಬ ಜ್ಯೋತಿಷಿ ಕಾರಣವಂತೆ. ಇದನ್ನು ಬಹಿರಂಗ ಪಡಿಸಿದ್ದು ಬೇರೆ ಯಾರೂ ಅಲ್ಲ, ಬಾಹುಬಲಿ ಚಿತ್ರದ ಹೀರೋ ಪ್ರಭಾಸ್. ಇದನ್ನೂ ಓದಿ : ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

    ಕಂಗನಾ ಹಿಮಾಚಲ ಪ್ರದೇಶದ ಭಾಮ್ಲಾ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದವರು ಕಂಗನಾ. ಮಧ್ಯಮ ವರ್ಗದ ಕುಟುಂಬದ ಕೂಸು. ಇಂತಹ ಊರಲ್ಲಿ ಹುಟ್ಟಿದ ಹುಡುಗಿ ಬಾಲಿವುಡ್ ಪ್ರವೇಶ ಮಾಡುವುದು ಸಣ್ಣ ಮಾತೇನೂ ಅಲ್ಲ. ಸಣ್ಣವಳಿರುವಾಗ ಊಹಿಸಿಕೊಳ್ಳಲೂ ಅಸಾಧ್ಯ. ಇಂತಹ ವೇಳೆಯಲ್ಲೇ ಜ್ಯೋತಿಷಿಯೊಬ್ಬ “ಮಗು, ನೀನು ಮುಂದಿನ ದಿನಗಳಲ್ಲಿ ದೊಡ್ಡ ಸ್ಟಾರ್ ನಟಿಯಾಗುತ್ತೀಯಾ” ಅಂತ ಭವಿಷ್ಯ ನುಡಿದಿದ್ದನಂತೆ. ಆಕೆ ಅದನ್ನು ಕಂಗನಾ ಸೀರಿಯಸ್ ಆಗಿ ತಗೆದುಕೊಂಡಿರಲಿಲ್ಲವಂತೆ. ನಂಬಲೂ ಇಲ್ಲವಂತೆ. ದುಡ್ಡಿಗಾಗಿ ಆ ಜ್ಯೋತಿಷಿ ಏನೋ ಒಂದು ಹೇಳಿದ್ದಾನೆ. ಅದನ್ನ್ಯಾಕೆ ಗಂಭೀರವಾಗಿ ತಗೆದುಕೊಳ್ಳಲಿ ಎಂದು ಸುಮ್ಮನಿದ್ದಳಂತೆ. ಕೊನೆಗೊಂದು ದಿನ ಆ ಜ್ಯೋತಿಷಿ ಹೇಳಿದ್ದೇ ಸತ್ಯವಾಯಿತು. ಇದನ್ನೂ ಓದಿ : ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ಕಂಗನಾ ಇದೀಗ ಬಾಲಿವುಡ್ ನ ಸೂಪರ್ ಸ್ಟಾರ್ ನಟಿ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ನಾಗರೀಕರ ಅತ್ಯುನ್ನತ ಗೌರವಗಳಿಗೂ ಕಂಗನಾ ಪಾತ್ರರಾಗಿದ್ದಾರೆ. ಇದನ್ನೂ ಓದಿ : ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

    ಅಷ್ಟಕ್ಕೂ ಈ ಗುಟ್ಟನ್ನು ಪ್ರಭಾಸ್ ಬಿಟ್ಟುಕೊಟ್ಟಿದ್ದಕ್ಕೂ ಕಾರಣವಿದೆ. ಈಗ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಆಗಿದೆ. ಪ್ರಭಾಸ್ ಈ ಸಿನಿಮಾದಲ್ಲಿ ಈ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಸಿನಿಮಾದ ಕಥೆಯನ್ನು ಹೇಳುತ್ತಾ ಕಂಗನಾ ತಮಗೆ ಹೇಳಿದ್ದ ಕಂಗನಾ ಸ್ಟೋರಿಯನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    ಕಂಗನಾ ಮತ್ತು ಪ್ರಭಾಸ್ ಒಟ್ಟಿಗೆ ನಟಿಸಿದ್ದ ‘ಏಕ್ ನಿರಂಜನ್’ ತೆಲುಗು ಸಿನಿಮಾ ಶೂಟಿಂಗ್ ವೇಳೆ ಸ್ವತಃ ಕಂಗನಾ ಅವರೇ ಈ ವಿಷಯವನ್ನು ಪ್ರಭಾಸ್ ಜೊತೆ ಹಂಚಿಕೊಂಡಿದ್ದರಂತೆ.

  • ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ಗೊತ್ತಾ?

    ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಅವರು ನಟ ಸತ್ಯರಾಜ್ ನನ್ನ ಲಕ್ಕಿ ಮ್ಯಾಸ್ಕಟ್ ಎಂದು ಹೇಳಿದ್ದಾರೆ.

    ನಗರದಲ್ಲಿ ನಡೆದ ರಾಧೆ ಶ್ಯಾಮ್ ಸಿನಿಮಾದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಅವರು, ಸತ್ಯರಾಜ್ ಅವರು ನನ್ನ ಅದೃಷ್ಟದ ಮ್ಯಾಸ್ಕಾಟ್. ಅವರೊಂದಿಗೆ ‘ಮಿರ್ಚಿ’ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಂತರ ನಟಿಸಿದ ಬಾಹುಬಲಿ ಸಿನಿಮಾ ಕೂಡ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು. ‘ರಾಧೆ ಶ್ಯಾಮ್’ ನಮ್ಮಿಬ್ಬರ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ ಎಂಬ ವಿಶ್ವಾಸ ನನಗಿದೆ. ಈ ಚಿತ್ರದಲ್ಲಿ ಅವರ ಪಾತ್ರವು ಪವರ್‍ಫುಲ್ ಮತ್ತು ಕುತೂಹಲಕಾರಿಯಾಗಿದೆ ಎಂದರು.

    ‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್ 1970ರ ದಶಕದ ಹಸ್ತಸಾಮುದ್ರಿಕ ತಜ್ಞ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಟಲಿ, ಜಾರ್ಜಿಯಾ ಮತ್ತು ಹೈದರಾಬಾದ್‍ನ ವಿವಿಧ ಸ್ಥಳಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗಿದೆ. ವಿಶೇಷವೆಂದರೆ ಈ ಚಿತ್ರಕ್ಕೆ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ. ಇದನ್ನೂ ಓದಿ:  ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್

    ಯುವಿ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು ರೆಡ್ ಜೈಂಟ್ ಮೂವೀಸ್ ಪ್ರಸ್ತುತಪಡಿಸಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಸತ್ಯರಾಜ್ ಮತ್ತು ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

  • ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ರಡೂವರೆ ವರ್ಷಗಳಿಂದ ಕೊರೋನಾ ಹಾವಳಿಗೆ ತತ್ತರಿಸಿರುವ ಭಾರತೀಯ ಸಿನಿಮಾ ರಂಗ, ಚೇತರಿಸಿಕೊಳ್ಳಲು ಇನ್ನೂ ಹರಸಾಹಸ ಪಡುತ್ತಿದೆ. ಅಷ್ಟರಲ್ಲಿ ಚಿತ್ರರಂಗಕ್ಕೆ ಕ್ರಿಕೆಟ್ ಎಂಬ ಗುಮ್ಮ ಎದುರಾಗಿದೆ. ಇದನ್ನೂ ಓದಿ : ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ಕೋವಿಡ್  ಕಾರಣದಿಂದಾಗಿ ಬಿಗ್ ಬಜೆಟ್ ನ ಸಾಕಷ್ಟು ಚಿತ್ರಗಳು ಮಾರ್ಚ್ ನಲ್ಲಿ ರಿಲೀಸ್ ಆಗಲು ಪ್ಲ್ಯಾನ್ ಆಗಿದ್ದವು. ಅದರಲ್ಲೂ ಮಾರ್ಚ್ ಎರಡನೇ ವಾರದ ನಂತರ ಕನ್ನಡದ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ನಿಂದ ಶುರುವಾಗುತ್ತಿದ್ದ ಈ ಬಿಡುಗಡೆಯ ಜೈತ್ರ ಯಾತ್ರೆ ಕೆಜಿಎಫ್ 2, ತೆಲುಗಿನ ಆರ್.ಆರ್.ಆರ್, ರಾಧೆ ಶ್ಯಾಮ್, ದಳಪತಿ ವಿಜಯ್ ಅವರ ‘ಬೀಸ್ಟ್’, ಮೆಗಾ ಸ್ಟಾರ್ ಚಿರಂಜೀವಿ ಅವರ ‘ಆಚಾರ್ಯ’ ಸೇರಿದಂತೆ ಸಾಕಷ್ಟು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು. ಈಗ ಸರಿಯಾಗಿ ಥಿಯೇಟರ್ ಗೆ ಪೆಟ್ಟುಕೊಡುವಂತೆ ಮಾರ್ಚ್ 27 ರಿಂದ ಮೇ 28 ರವರೆಗೆ. ಬರೋಬ್ಬರು ಒಂದು ತಿಂಗಳ ಕಾಲ ಭಾರತದ ಹೆಸರಾಂತ ಐಪಿಎಲ್ ಪಂದ್ಯಾವಳಿ ಆರಂಭವಾಗಲಿವೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು

    ಒಂದು ತಿಂಗಳ ಕಾಲ ನಿರಂತರವಾಗಿ, ಅದರಲ್ಲೂ ವೀಕೆಂಡ್ ನಲ್ಲೂ ಈ ಕ್ರಿಕೆಟ್ ಹಾವಳಿ ಇರುವುದರಿಂದ, ಜನರು ಚಿತ್ರಮಂದಿರಗಳತ್ತ ಬರುವುದು ಅನುಮಾನ. ಈ ಹಿಂದೆಯೂ ಐಪಿಎಲ್ ಮತ್ತು ಸಾಕಷ್ಟು ಕ್ರಿಕೆಟ್ ಪಂದ್ಯಾವಳಿಗಳು ಸಿನಿಮಾಗಳ ಬಾಕ್ಸ್ ಆಫೀಸಿಗೆ ಭಾರೀ ಹೊಡೆತ ಕೊಟ್ಟಿವೆ. ಹಾಗಾಗಿ ಭಾರೀ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರು, ಐಪಿಎಲ್ ಗೆ ಹಿಡಿಶಾಪ ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ಕೇವಲ ಸಿನಿಮಾಗಳಿಗೆ ಮಾತ್ರವಲ್ಲ, ಮನರಂಜನಾ ಮಾಧ್ಯಮಕ್ಕೂ ಐಪಿಎಲ್ ಸಾಕಷ್ಟು ತೊಂದರೆ ಮಾಡಿದೆ. ಹಾಗಾಗಿ ಈ ವೇಳೆಯಲ್ಲಿ ಹೊಸ ಧಾರಾವಾಹಿಗಳಾಗಲಿ, ಹೊಸ ಹೊಸ ಶೋಗಳಾಗಲಿ ಪ್ರಾರಂಭವಾಗುತ್ತಿಲ್ಲ. ಐಪಿಎಲ್ ನಂತರವೇ ಹೊಸ ಹೊಸ ಕಾರ್ಯಕ್ರಮಗಳಿಗೆ ಪ್ಲ್ಯಾನ್ ಮಾಡಲಿವೆಯಂತೆ ಮನರಂಜನಾ ವಾಹಿನಿಗಳು.

    ಅದ್ಧೂರಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಚಿತ್ರಗಳ ನಿರ್ಮಾಪಕರು ಐಪಿಎಲ್ ಎದುರು ಹಾಕಿಕೊಂಡು ಸಿನಿಮಾ ಬಿಡುಗಡೆ ಮಾಡಬಹುದಾ? ಅಥವಾ ಐಪಿಎಲ್ ನಂತರ ರಿಲೀಸ್ ಮಾಡಬೇಕಾ ಎನ್ನುವ ಗೊಂದಲದಲ್ಲಿದ್ದಾರೆ. ಒಂದು ವೇಳೆ ಸಿನಿಮಾಗಳನ್ನು ಮುಂದು ಹಾಕಿದರೆ, ಅದರಿಂದ ಬೇರೆ ಬೇರೆ ರೀತಿಯಲ್ಲಿ ನಿರ್ಮಾಪಕರಿಗೆ ತೊಂದರೆ ಆಗಲಿದೆ. ಹಾಗಾಗಿ ಬಹುತೇಕ ಭಾರತೀಯ ಸಿನಿಮಾ ರಂಗಕ್ಕೆ ಆಘಾತಕ್ಕೆ ಒಳಗಾಗಿದೆ.

  • ಪೂಜಾ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕೊಟ್ಟ ಪ್ರಭಾಸ್

    ಪೂಜಾ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕೊಟ್ಟ ಪ್ರಭಾಸ್

    ಚೆನ್ನೈ: ಟಾಲಿವುಡ್ ನಟಿ ಪೂಜಾ ಹೆಗ್ಡೆ ಇಂದು 31ರ ವಂಸತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ಪ್ರಭಾಸ್ ಸ್ಪೆಷಲ್ ಆಗಿ ಉಡುಗೊರೆಯನ್ನು ಕೊಟ್ಟಿದ್ದಾರೆ.

    ‘ರಾಧೆ ಶ್ಯಾಮ್’ ಸಿನಿಮಾದ ಪೂಜಾ ಲುಕ್ ಅನ್ನು ಪ್ರಭಾಸ್ ಇನ್‍ಸ್ಟಾಗ್ರಾಮ್ ನಲ್ಲಿ ಹಾಕಿದ್ದು, ‘ಜನ್ಮದಿನದ ಶುಭಾಶಯಗಳು ಪೂಜಾ’ ಎಂದು ಬರೆದು ಪೋಸ್ಟ್  ಮಾಡಿದ್ದಾರೆ. ಈ ಫೋಟೋದಲ್ಲಿ ಪೂಜಾ ಸಂಪೂರ್ಣವಾಗಿ ಬಿಳಿ ಉಡುಪನ್ನು ಧರಿಸಿದ್ದು, ಈ ಪೋಸ್ಟರ್‍ನಲ್ಲಿ ಪೂಜಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ‘ರಾಧೆ ಶ್ಯಾಮ್’ ಪೋಸ್ಟರ್ ಅನ್ನು ರಿಲೀಸ್ ಮಾಡುವ ಮೂಲಕ ಪೂಜಾ ಅವರಿಗೆ ಪ್ರಭಾಸ್ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಸಿನಿಮಾಗೆ ರವಿ ಬಸ್ರೂರ್ ಸಂಗೀತ ಸಂಯೋಜನೆ

     

    View this post on Instagram

     

    A post shared by Prabhas (@actorprabhas)

    ಈ ವರ್ಷದ ಆರಂಭದಲ್ಲಿ, ಚಿತ್ರತಂಡ ಈ ಚಿತ್ರದ ಮೊದಲ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಪೋಸ್ಟರ್ ನಲ್ಲಿ ಪ್ರಭಾಸ್ ಮತ್ತು ಪೂಜಾ ಜೊತೆಗಿರುವ ಫೋಟೋವನ್ನು ಶೇರ್ ಮಾಡಲಾಗಿತ್ತು. ಈ ಕುರಿತು ಸಹ ಪ್ರಭಾಸ್ ಇನ್‍ಸ್ಟಾದಲ್ಲಿ, ನಮ್ಮ ಸುಂದರ ಚಿತ್ರವು ಸುಂದರವಾದ ಹೆಸರನ್ನು ಹೊಂದಿದೆ. ನಮ್ಮ ಬಹುನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ಎಂದು ಬರೆದು ಪೋಸ್ಟ್ ಮಾಡಿದ್ದರು.

    ‘ರಾಧೆ ಶ್ಯಾಮ್’ ಸಿನಿಮಾದ ಮೂಲಕ ಪೂಜಾ ಮತ್ತು ಪ್ರಭಾಸ್ ಮೊದಲಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಮುರಳಿ ಶರ್ಮಾ, ಸಚಿನ್ ಖೇಡೇಕರ್, ಪ್ರಿಯದರ್ಶಿ, ಸಶಾ ಚೆಟ್ರಿ, ಕುನಾಲ್ ರಾಯ್ ಕಪೂರ್ ಮತ್ತು ಸತ್ಯನ್ ಕೂಡ ನಟಿಸಲಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವಾಗಲೇ ಜಿ.ಪಂ.ಅಧ್ಯಕ್ಷೆಯಾದ ಯುವತಿ

     

    View this post on Instagram

     

    A post shared by Prabhas (@actorprabhas)

    ರಾಧಾಕೃಷ್ಣ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಯುವಿ ಕ್ರಿಯೇಷನ್ಸ್ ನಿರ್ಮಾಣದ ‘ರಾಧೆ ಶ್ಯಾಮ್’ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು 2022ರ ಜನವರಿ 14 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

  • ಹಬ್ಬದಂದೇ ಅಭಿಮಾನಿಗಳಿಗೆ ಪ್ರಭಾಸ್ ಸಿಹಿ – ರಾಧೆ ಶ್ಯಾಮ್ ನ್ಯೂ ಪೋಸ್ಟರ್ ರಿಲೀಸ್

    ಹಬ್ಬದಂದೇ ಅಭಿಮಾನಿಗಳಿಗೆ ಪ್ರಭಾಸ್ ಸಿಹಿ – ರಾಧೆ ಶ್ಯಾಮ್ ನ್ಯೂ ಪೋಸ್ಟರ್ ರಿಲೀಸ್

    ಹೈದರಾಬಾದ್: ಯುಗಾದಿ ಹಬ್ಬದ ಪ್ರಯುಕ್ತ ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ರಾಧೆ ಶ್ಯಾಮ್ ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

    ರಾಧೆ ಶ್ಯಾಮ್ ಸಿನಿಮಾದ ಈ ನೂತನ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಫೋಟೋದಲ್ಲಿ ಪ್ರಭಾಸ್ ಲವ್ವರ್ ಬಾಯ್‍ನಂತೆ ರೆಟ್ರೋ ಲುಕ್‍ನಲ್ಲಿ ಮಿಂಚಿದ್ದು, ಕಂದು ಬಣ್ಣದ ಸ್ವೆಟರ್, ಅದಕ್ಕೆ ಸೂಟ್ ಆಗುವಂತಹ ಪ್ಯಾಂಟ್ ಧರಿಸಿ, ಕಂಬವನ್ನು ಹಿಡಿದುಕೊಂಡು ನಿಂತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಪೋಸ್ಟರ್‍ನಲ್ಲಿ ಮಿಲಿಯನ್-ಡಾಲರ್‍ಗಳಿಗೆ ಸಾಟಿ ಎಂಬಂತೆ ಪ್ರಭಾಸ್ ಸ್ಮೈಲ್ ನೀಡಿದ್ದಾರೆ.

     

    View this post on Instagram

     

    A post shared by Prabhas (@actorprabhas)

    ಸದ್ಯ ಈ ಪೋಸ್ಟರ್‍ನನ್ನು ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಸುಂದರ ಹಬ್ಬದ ಆಚರಣೆಯ ಪ್ರಮುಖ ಅಂಶವೆಂದರೆ ಪ್ರೀತಿ. ಅದನ್ನು ಅನುಭವಿಸಿ, ಅದನ್ನು ಪಾಲಿಸಿ, ಅದನ್ನು ಹಂಚಿ. ನಿಮಗೂ ಹಾಗೂ ನಿಮ್ಮ ಪ್ರೀತಿ ಪಾತ್ರರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.

     

    View this post on Instagram

     

    A post shared by Prabhas (@actorprabhas)

    ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿ ಪೂಜಾ ಹೆಗ್ಡೆ ಇದೇ ಮೊದಲ ಬಾರಿಗೆ ಡ್ಯೂಯೆಟ್ ಆಡುತ್ತಿದ್ದು, ರಾಧಾಕೃಷ್ಣ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮುರಳಿ ಶರ್ಮ, ಸಚಿನ್ ಖೇಡೇಕರ್, ಪ್ರಿಯದರ್ಶಿ, ಸಶಾ ಚೆಟ್ರಿ, ಕುನಾಲ್ ರಾಯ್, ಕಪೂರ್ ಮತ್ತು ಸತ್ಯನ್ ನಟಿಸಿದ್ದಾರೆ. ರಾಧೆ ಶ್ಯಾಮ್ ಮುಂಬರುವ ಜುಲೈ 30 ರಂದು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.