Tag: Radhe

  • ರಾಧೆಯಾದ ಮಿಲ್ಕಿಬ್ಯೂಟಿ ತಮನ್ನಾ

    ರಾಧೆಯಾದ ಮಿಲ್ಕಿಬ್ಯೂಟಿ ತಮನ್ನಾ

    ಶ್ರೀಕೃಷ್ಣ ಜನ್ಮಾಷ್ಟಮಿ ಬಂದ್ರೆ ಸಾಕು ಸಾಮಾನ್ಯವಾಗಿ ಮಕ್ಕಳಿಗೆ ರಾಧಾ ಕೃಷ್ಣರ ವೇಶ ಹಾಕಿ ತಂದೆತಾಯಿ ಖುಷಿ ಪಡ್ತಾರೆ. ಆದರಿಲ್ಲಿ ಜನ್ಮಾಷ್ಟಮಿ ವಿಶೇಷವಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ರಾಧೆಯ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ರಾಧೆಯ ಲುಕ್‌ನಲ್ಲಿ ಅತ್ಯಂತ ಸುಂದರವಾಗಿ ಕಾಣಿಸ್ಕೊಂಡಿದ್ದಾರೆ ಈ ಗ್ಲಾಮರಸ್ ನಟಿ. ಇನ್ನು ಕೃಷ್ಣನ ವೇಶಧಾರಿಯೂ ರಾಧೆಯ ಜೊತೆಯಲ್ಲಿ ನಿಂತಿರೋದ್ರಿಂದ ಫೋಟೋಶೂಟ್ ಅಂದ ಹೆಚ್ಚಾಗಿದೆ. ಫೋಟೋಶೂಟ್ ವಿಶೇಷ ಏನೆಂದರೆ, ಬೃಂದಾನವನದಲ್ಲಿ ರಾಧಾ ಕೃಷ್ಣರ ಪ್ರೀತಿಯ ಪರಾಕಾಷ್ಟೆ ನೋಡಬಹುದು. ಗೋಪಿಕಾಸ್ತ್ರಿಯರ ಅಂದಚೆಂದವಂತೂ ಕಣ್ಣಿಗೆ ಹಬ್ಬ.

    ಅಂದಹಾಗೆ ತಮನ್ನಾ ಹೀಗೆ ಫೋಟೋಶೂಟ್ ಮಾಡಿಸಿದ್ದು ವಿಶೇಷವಾದ್ರೂ ಇನ್ನೊಂದು ವಿಶೇಷ ಸಂಗತಿ ಹಂಚಿಕೊಂಡಿದ್ದಾರೆ ಮಿಲ್ಕೀಬ್ಯೂಟಿ. ಈ ಫೋಟೋಶೂಟ್ ಹಾಗೂ ಅದರ ಜಾಗೃತಿ ಬಗ್ಗೆ ಬರವಣಿಗೆಯ ಮೂಲಕ ಮಾಹಿತಿ ಕೊಟ್ಟ ರೀತಿ ಗಮನಾರ್ಹವಾಗಿದೆ. ಯಾಕಂದ್ರೆ ತಮನ್ನಾ ಹೇಳ್ತಾರೆ `ತಮ್ಮ 18 ವರ್ಷಗಳ ವೃತ್ತಿಯಲ್ಲಿ ಇದುವೇ ತಮಗೆ ಅತ್ಯಂತ ಖುಷಿ ಕೊಟ್ಟ ಅಭಿಯಾನ’ ಎಂದು. ಹಾಗಾದ್ರೆ ಅಂಥದ್ದೇನು ವಿಶೇಷ ಅಡಗಿದೆ ಈ ಫೋಟೋಶೂಟ್‌ನಲ್ಲಿ ಅನ್ನೋದಾದ್ರೆ ರಾಧೆಯ ಪಾತ್ರಧಾರಿಯಾಗಿ ಕಾಣಿಸ್ಕೊಂಡಿದ್ದೇ ವಿಶೇಷ ಅನ್ನೋದಕ್ಕೆ ಪದಗಳಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ಈ ನಟಿ.

    ರಾಧೆಯನ್ನು ಸಾಕಾರಗೊಳಿಸುವಾಗ ತಮನ್ನಾ ಅಂತೀದ್ರಿಯ ಸಂಪರ್ಕವನ್ನು ಅನುಭವಿಸಿದಂತೆ ಭಾಸವಾದರಂತೆ. ಇದರ ಹಿಂದೆ ಒಂದು ದೈವಿಕ ಶಕ್ತಿ ಇದ್ದಂತೆ ಕಂಡುಕೊಂಡರಂತೆ, ಹೀಗಾಗಿ ಈ ಅಭಿಯಾನದ ದೃಶ್ಯದಲ್ಲಿ ದೈವತ್ವವು ಸ್ಪಷ್ಟವಾಗಿದೆ ಎನ್ನುತ್ತಾರೆ ತಮನ್ನಾ.

    ತಮನ್ನಾ ಇದುವರೆಗೂ ಯಾವುದೇ ದೇವತೆಯ ಪಾತ್ರದಲ್ಲಿ ಅಭಿನಯಿಸಿಲ್ಲ. ಇದೀಗ ರಾಧೆಯ ಪಾತ್ರವಾಗಿ ಜೀವಿಸಿ ಅತೀಂದ್ರಿಯ ಶಕ್ತಿಯ ಪ್ರಭಾವಕ್ಕೆ ಒಳಗಾದವರಂತೆ ಬರೆದುಕೊಂಡಿದ್ದಾರೆ. ಫೋಟೋಗಳಲ್ಲೂ ತಮನ್ನಾರ ಸ್ನಿಗ್ಧ ಸೌಂದರ್ಯ ಕಾಣುತ್ತೆ. ಶಕ್ತಿ ಸ್ವರೂಪಿಣಿ ಅತಿಸೌಂದರ್ಯವತಿ ರಾಧೆಯ ಅಂದ ಚೆಂದವನ್ನ ಪ್ರತಿರೂಪಿಸುವ ಪ್ರಯತ್ನ ಮಾಡಿದ್ದಾರೆ ತಮನ್ನಾ. ಹೀಗಾಗಿ ತಮ್ಮ 18 ವರ್ಷದ ಕರಿಯರ್‌ನಲ್ಲಿ ಇದುವೇ ಉತ್ತಮ ಚಿತ್ರೀಕರಣ ಎಂದಿದ್ದಾರೆ ತಮನ್ನಾ.

     

    ಅಂದಹಾಗೆ ತಮನ್ನಾಗೆ ಅವರನ್ನ ಗ್ಲಾಮರ್ ಅವತಾರದಲ್ಲಿ ತೋರಿಸುವ ಪಾತ್ರಗಳೇ ಹೆಚ್ಚಾಗಿ ಬರ್ತವೆ. ಆದರೀಗ ಇಂಥಹ ಗ್ಲಾಮರ್ ಗೊಂಬೆಗೆ ರಾಧಾಮಾತೆಯ ವೇಶ ಹಾಕಿಸಲಾಗಿದ್ದು ಆಕೆಯ ಫ್ಯಾನ್ಸ್ ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಮುಖಕ್ಕೆ ಎಷ್ಟು ಸಲ ಸರ್ಜರಿ ಮಾಡಿಸಿದ್ದೀರಿ? ದಿಶಾ ಪಟಾಣಿ ಟ್ರೋಲ್

    ಮುಖಕ್ಕೆ ಎಷ್ಟು ಸಲ ಸರ್ಜರಿ ಮಾಡಿಸಿದ್ದೀರಿ? ದಿಶಾ ಪಟಾಣಿ ಟ್ರೋಲ್

    ಬಾಲಿವುಡ್ (Bollywood) ಬ್ಯೂಟಿ ದಿಶಾ ಪಟಾನಿ (Disha Patani) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಟ್ರೋಲ್ (Troll) ವಿಚಾರವಾಗಿಯೇ ಸದ್ದು ಮಾಡುತ್ತಾರೆ. ಇದೀಗ ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

    ನಟಿ ದಿಶಾ ಭಾಘಿ 2, ಭಾಘಿ 3 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಿಂದ ಬಿಗ್ ಸಕ್ಸಸ್ ಸಿಗದೇ ಇದ್ದರೂ, ಇವರಿಗಿರುವ ಬೇಡಿಕೆ ಕಮ್ಮಿಯಾಗಿಲ್ಲ. ಆಗಾಗ ಹಾಟ್ ಫೋಟೋಗಳ ಮೂಲಕ ಪಡ್ಡೆಹುಡುಗರ ನಿದ್ದೆ ಕದಿದ್ದಾರೆ.

    ಸದಾ ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ಟ್ರೋಲ್ ಆಗ್ತಿದ್ದ ದಿಶಾ ಇದೀಗ ತನ್ನ ಮುಖದಿಂದಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ. ಇದೀಗ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ದಿಶಾ ಮುಖ ಊದಿಕೊಂಡಿರುವ ಹಾಗೇ ಬಂದಿದೆ. ಚಿತ್ರರಂಗಕ್ಕೆ ಬಂದಾಗ ಇದ್ದ ಲುಕ್‌ಗೂ ಇದೀಗ ಇರೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ದಿಶಾ ಕ್ಲೋಸ್ ಅಪ್ ಫೋಟೋಗಳು ಟ್ರೋಲ್‌ಗೆ ಆಹಾರವಾಗಿದೆ. ಇದನ್ನೂ ಓದಿ:ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?

    ದಿಶಾ ಇತ್ತ ಫೋಟೋ ಶೇರ್ ಮಾಡ್ತಿದ್ದಂತೆ ನೆಟ್ಟಿಗರು, ನಿಮ್ಮ ಮುಖ ಜೇನು ನೋಣ ಕಚ್ಚಿದ್ದಂತೆ ಕಾಣಿಸುತ್ತಿದೆ ಎಂದಿದ್ದಾರೆ. ನಿಮ್ಮ ಇಡೀ ಮುಖಕ್ಕೆ ಎಷ್ಟು ಸಲ ಸರ್ಜರಿ ಮಾಡಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ನಲ್ಲಿ ದಿಶಾ ಊದಿಕೊಂಡಿರುವ ಮುಖ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ.

  • ಮತ್ತೆ ಹಾಟ್ ಅವತಾರ ತಾಳಿದ ಸಲ್ಮಾನ್ ಖಾನ್ ನಾಯಕಿ ದಿಶಾ ಪಟಾನಿ

    ಮತ್ತೆ ಹಾಟ್ ಅವತಾರ ತಾಳಿದ ಸಲ್ಮಾನ್ ಖಾನ್ ನಾಯಕಿ ದಿಶಾ ಪಟಾನಿ

    ಬಾಲಿವುಡ್ (Bollywood) ಬ್ಯೂಟಿ ದಿಶಾ ಪಟಾನಿ (Disha Patani) ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ಹಾರ್ಟಿಗೆ ಸಲ್ಮಾನ್ ಖಾನ್ (Salman Khan) ‘ರಾಧೆ’ (Radhe) ನಾಯಕಿ ಕಚಗುಳಿ ಇಟ್ಟಿದ್ದಾರೆ. ಇದನ್ನೂ ಓದಿ:ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ ಪ್ರಶಾಂತ್ ನೀಲ್ ಲಾಕ್?

    ತೆಲುಗಿನ ‘ಲೋಫರ್’ ಚಿತ್ರದಲ್ಲಿ ವರುಣ್ ತೇಜ್‌ಗೆ ನಾಯಕಿಯಾಗಿ ನಟಿಸಿದ ದಿಶಾ ಪಟಾನಿ, ಎಂ.ಎಸ್ ಧೋನಿ ಬಯೋಪಿಕ್, ಭಾಘಿ 2, ಭಾರತ್, ರಾಧೆ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಧೋನಿ ಬಯೋಪಿಕ್‌ನಲ್ಲಿ ಸುಶಾಂತ್ ಸಿಂಗ್ ನಾಯಕಿಯಾಗಿ ಗಮನ ಸೆಳೆದ ನಟಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.

    ಇತ್ತೀಚೆಗೆ ದಿಶಾಳ ಹೊಸ ಫೋಟೋಶೂಟ್‌ಗೆ ನೆಟ್ಟಿಗರು ಕಿಡಿಕಾರಿದ್ದರು. ಟ್ಯಾಲೆಂಟ್ ಇಲ್ಲದೇ ಇದ್ದರೂ ಮೈ ತೋರಿಸುವ ಶೋಕಿ ಎಂದು ಕಿಡಿಕಾರಿದ್ದರು. ಆದರೆ ಈಗ ಮತ್ತೆ ಹೊಸ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಲ್ವರ್ ಬಣ್ಣದ ಡ್ರೆಸ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.

    ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಯೋಧ, ತಮಿಳು ನಟ ಸೂರ್ಯ ಜೊತೆ ಕಂಗುವ, ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’, ಸಿನಿಮಾಗಳು ದಿಶಾ ಪಟಾನಿ ಕೈಯಲ್ಲಿದೆ.

  • ಪ್ರತಿಭೆ ಇದ್ದಿದ್ರೆ ಮೈ ತೋರಿಸುವ ಅಗತ್ಯವಿರಲಿಲ್ಲ: ದಿಶಾ ಪಟಾನಿಗೆ ನೆಟ್ಟಿಗರ ಕ್ಲಾಸ್

    ಪ್ರತಿಭೆ ಇದ್ದಿದ್ರೆ ಮೈ ತೋರಿಸುವ ಅಗತ್ಯವಿರಲಿಲ್ಲ: ದಿಶಾ ಪಟಾನಿಗೆ ನೆಟ್ಟಿಗರ ಕ್ಲಾಸ್

    ಬಾಲಿವುಡ್ (Bollywood) ನಟಿ ದಿಶಾ ಪಟಾನಿ(Disha Patani) ಸಿನಿಮಾಗಿಂತ ಸದಾ ಹಾಟ್ ಫೋಟೋಶೂಟ್ (Hot Photoshoot) ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ನಟಿಯ ಹೊಸ ಫೋಟೋಶೂಟ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾ ಮಾಡೋದು ಬಿಟ್ಟು ಇದೆಲ್ಲಾ ನಿಮಗೆ ಬೇಕಾ ಅಂತಾ ದಿಶಾಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಎಂ.ಎಸ್ ಧೋನಿ, ಭಾಘಿ 2, ಭಾಘಿ 3, ಸಲ್ಮಾನ್ ಖಾನ್ (Salman Khan) ಜೊತೆ ರಾಧೆ (Radhe) ಹೀಗೆ ಸಾಕಷ್ಟು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ದಿಶಾ ಪಟಾನಿಗೆ ತಮ್ಮ ಸಿನಿಮಾಗಳಿಂದ ಚಿತ್ರರಂಗದಲ್ಲಿ ಬಿಗ್ ಬ್ರೇಕ್ ಸಿಗುತ್ತಿಲ್ಲ. ಸಿನಿಮಾ ಜೊತೆ ಸದಾ ಹಾಟ್ ಫೋಟೋಶೂಟ್ ಮೂಲಕ ಗಮನ ಸೆಳೆಯುವ ನಟಿ ದಿಶಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಇತ್ತೀಚಿನ ಫೋಟೋಶೂಟ್‌ವೊಂದರಲ್ಲಿ ನೇರಳೆ ಬಣ್ಣದ ಮಾಡರ್ನ್ ಡ್ರೆಸ್‌ನಲ್ಲಿ ದಿಶಾ ಮಿಂಚಿದ್ದಾರೆ. ಮಾದಕ ನೋಟದಿಂದ ಪಡ್ಡೆಹುಡುಗರ ಕಣ್ಣು ಕುಕ್ಕುವಂತೆ ಫೋಟೋದಲ್ಲಿ ಗಮನ ಸೆಳೆದಿದ್ದಾರೆ. ಆದರೆ ನಟಿಯ ಹೊಸ ಲುಕ್‌ಗೆ ನೆಗೆಟಿವ್ ಕಾಮೆಂಟ್ ಬಂದಿದೆ. ಇದನ್ನೂ ಓದಿ: ಸಮಂತಾಗೆ ಹೋಲಿಸಿದ ನೆಟ್ಟಿಗರಿಗೆ `ಗಾಳಿಪಟ 2′ ನಾಯಕಿ ಏನಂದ್ರು ಗೊತ್ತಾ?

    ಫೋಟೋಶೂಟ್ ಎಲ್ಲಾ ಬಿಟ್ಟು ನಿಮ್ಮ ಸಿನಿಮಾಗಳತ್ತ ಗಮನ ಕೊಡಿ. ಟ್ಯಾಲೆಂಟ್ ಇದ್ದಿದ್ರೆ ಈ ತರಹ ಮೈ ತೋರಿಸುವ ಅಗತ್ಯವಿರಲ್ಲ ಎಂದು ದಿಶಾ ಪಟಾನಿಗೆ ಖಡಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇನ್ನೂ ದಿಶಾ ಪಟಾನಿ ಮುಂಬರುವ ಸಿನಿಮಾಗಳು, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಯೋಧ (Yodha), ಪ್ರಭಾಸ್ ಜೊತೆ `ಪ್ರಾಜೆಕ್ಟ್ ಕೆ’ (Project k) ಸಿನಿಮಾಗಳು ರೆಡಿಯಿದೆ. ಈ ಚಿತ್ರವಾದರೂ ತೆರೆಗೆ ಮೇಲೆ ಮೋಡಿ ಮಾಡುತ್ತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಬ್ರಹ್ಮಾಸ್ತ್ರ’ ಕೆಳಗಿಟ್ಟು ಮಥುರಾದ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್

    ‘ಬ್ರಹ್ಮಾಸ್ತ್ರ’ ಕೆಳಗಿಟ್ಟು ಮಥುರಾದ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್

    ಬಾಲಿವುಡ್ ನ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಇತ್ತೀಚಿನ ದಿನಗಳಲ್ಲಿ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ (Brahmastra) ಸಿನಿಮಾದ ಹಿಂದೆ ಬಿದ್ದಿದ್ದರು. ಈ ಸಿನಿಮಾದ ಕಲೆಕ್ಷನ್, ಗೆಲುವಿನ ವಿಚಾರವಾಗಿ ದಿನಕ್ಕೊಂದು ಕ್ಯಾತೆ ತಗೆಯುತ್ತಿದ್ದರು. ಇದೀಗ ವಿವಾದಿತ ಬ್ರಹ್ಮಾಸ್ತ್ರವನ್ನು ಕೆಳಗಿಟ್ಟು ದೇವರ ದರ್ಶನಕ್ಕೆ ಹೋಗಿದ್ದಾರೆ. ಇಡೀ ಕುಟುಂಬ ಸಮೇತ ಮಥುರಾ (Mathura) ವೃಂದಾವನ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ (Banke Bihari Temple) ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

    ಬಂಕೆ ಬಿಹಾರಿ ದೇವಸ್ಥಾನಕ್ಕೆ ಕಂಗನಾ (Kangana Ranaut)ಭೇಟಿ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಹಲವಾರು ಬಾರಿ ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ. ಈ ಬಾರಿ ಕುಟುಂಬ ಸಮೇತ ಬಂದಿರುವುದು ವಿಶೇಷ.  ಕಂಗನಾ ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ, ಅವರು ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲೂ ಪಾಲ್ಗೊಂಡು ಭಜನೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ದೇವಸ್ಥಾನಕ್ಕೆ ಕಂಗನಾ ಬರುತ್ತಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಅನೇಕರು ಅಲ್ಲಿಗೆ ಆಗಮಿಸಿದ್ದರು. ನೆಚ್ಚಿನ ನಟಿಯ ಜೊತೆ ಸೆಲ್ಫಿ ತಗೆಸಿಕೊಂಡರು. ಕಂಗನಾ ಯಾರಿಗೂ ನಿರಾಸೆ ಮಾಡದೇ ಎಲ್ಲರೊಂದಿಗೆ ಫೋಟೋ ಕ್ಲಿಸಿಕೊಂಡಿದ್ದು ವಿಶೇಷ. ಅಭಿಮಾನಿಗಳಿಂದ ಕಂಗನಾ ಅವರನ್ನು ಬಿಡಿಸಿಕೊಳ್ಳಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಆ ಪ್ರಮಾಣದಲ್ಲಿ ಅಭಿಮಾನಿಗಳು ನೆರೆದಿದ್ದರು.

    ಪೂಜೆ ಮುಗಿಸಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ, ‘ರಾಧೆ (Radhe), ಕೃಷ್ಣ ಅವರ ದರ್ಶನ ಸಿಕ್ಕಿದ್ದು ನನ್ನ ಪುಣ್ಯ. ಹಾಗಾಗ್ಗೆ ಈ ದೇವಸ್ಥಾನಕ್ಕೆ ಬರುತ್ತಲೇ ಇರುತ್ತೇನೆ. ಏನೋ ಒಂದು ರೀತಿಯಲ್ಲಿ ನೆಮ್ಮದಿ ನನಗೆ. ಎಲ್ಲರಿಗೂ ಭಗವಂತ ಒಳ್ಳೆಯದನ್ನು ಮಾಡಲಿ’ ಎಂದು ಹೇಳಿದರು. ಯಾವುದೇ ರಾಜಕೀಯ ಪ್ರೇರಿತ ಪ್ರಶ್ನೆಗಳಿಗೆ ಅವರು ಉತ್ತರ ಕೊಡದೇ ಅಲ್ಲಿಂದ ನಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಲ್ಮಾನ್ ಖಾನ್ ಹಾಡಿಗೆ ವೈದ್ಯರ ಡ್ಯಾನ್ಸ್ – ನೃತ್ಯ ನೋಡಿ ದಿಶಾ ಪಟಾನಿ ಫಿದಾ

    ಸಲ್ಮಾನ್ ಖಾನ್ ಹಾಡಿಗೆ ವೈದ್ಯರ ಡ್ಯಾನ್ಸ್ – ನೃತ್ಯ ನೋಡಿ ದಿಶಾ ಪಟಾನಿ ಫಿದಾ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಇತ್ತೀಚೆಗೆ ಬಿಡುಗಡೆಗೊಂಡ ರಾಧೆ ಸಿನಿಮಾದ ಹಾಡೊಂದಕ್ಕೆ ವೈದ್ಯರ ಗುಂಪೊಂದು ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಆಸ್ಪತ್ರೆಯ ಕಾರಿಡೋರ್‍ನಲ್ಲಿ ವೈದ್ಯರ ಗುಂಪು ರಾಧೆ ಸಿನಿಮಾದ ಸೀಟಿ ಮಾರ್ ಹಾಡಿನ ವಾದ್ಯಕ್ಕೆ ಒಟ್ಟಿಗೆ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಾವ್, ನಮ್ಮ ರಿಯಲ್ ಹೀರೋಸ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ದಿಶಾ ಪಟಾನಿ ಫ್ಯಾನ್ಸ್ ಕ್ಲಬ್‍ನಲ್ಲಿ ಮೊದಲಿಗೆ ಪೋಸ್ಟ್ ಮಾಡಿದ್ದು, ನಂತರ ದಿಶಾ ಕೂಡ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Team Disha (@teamdishap)

    ವೈರಲ್ ಆಗಿರುವ ವಿಡಿಯೋದಲ್ಲಿ ಕೊರೊನಾ ವೈರಸ್ ವಿರುದ್ಧ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು , ಮಾಸ್ಕ್ ಧರಿಸಿ, ಪಿಪಿಇ ಕಿಟ್ ಧರಿಸಿ ಹಾಡಿನ ವಾದ್ಯಕ್ಕೆ ನೃತ್ಯ ಮಾಡಿದ್ದಾರೆ. ಅಲ್ಲದೆ ವೈದ್ಯರಲ್ಲಿ ಒಬ್ಬರು ಮ್ಯಾಂಡೊಲಿನ್ ನುಡಿಸುವುದನ್ನು ಕಾಣಬಹುದಾಗಿದೆ.

  • ‘ರಾಧೆ’ ಯನ್ನು ಪೈರಸಿಮಾಡಿ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡಿ – ಸಲ್ಮಾನ್ ಖಾನ್

    ‘ರಾಧೆ’ ಯನ್ನು ಪೈರಸಿಮಾಡಿ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡಿ – ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾ ರಾಧೆ ಒಟಿಟಿ ಯಲ್ಲಿ ಬಿಡುಗಡೆಯಾಗಿದ್ದು, ಇದೀಗ ರಾಧೆಯನ್ನು ಪೈರಸಿ ಮಾಡಿ ಸಿಕ್ಕಿಹಾಕಿಕೊಳ್ಳಬೇಡಿ. ಇದರಿಂದ ತುಂಬಾ ತೊಂದರೆ ಒಳಗಾಗುತ್ತೀರಿ ಎಂದು ಸಲ್ಲು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಲ್ಮಾನ್ ಖಾನ್ ಅವರು, ರಾಧೆ ಚಿತ್ರವನ್ನು ಪೈರಸಿ ಮಾಡಿ ನೋಡದಿರಿ. ಸೈಬರ್ ಸೆಲ್ ನವರು ಪೈರಸಿ ಮಾಡುವ ಸೈಟ್‍ಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದು, ನೀವು ಅದರಲ್ಲಿ ಸಿಕ್ಕಿಹಾಕಿಕೊಂಡರೆ ತುಂಬಾ ತೊಂದರೆಗೆ ಒಳಾಗಾಗುತ್ತೀರಿ ಹಾಗಾಗಿ ಎಚ್ಚರದಿಂದ ಇರಿ ಎಂದು ಹೇಳಿದ್ದಾರೆ.

    ಈ ಮೊದಲು ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಕುರಿತು ಮಾತನಾಡಿದ ಸಲ್ಲು, ಎಲ್ಲರೂ ಕೂಡ ರಾಧೆ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ. ಅದನ್ನು ಹೊರತು ಪಡಿಸಿ ಕೆಲವು ಪೈರಸಿ ಸೈಟ್ ಗಳು ಚಿತ್ರವನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿದ್ದು, ಇದು ಗಂಭೀರ ಅಪರಾಧವಾಗಿದೆ. ಸೈಬರ್ ಸೆಲ್ ಈ ಎಲ್ಲಾ ಅಕ್ರಮ ಸೈಟ್ ಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದೆ. ಯಾರೂ ಕೂಡ ರಾಧೆಯನ್ನು ಪೈರಸಿಯಲ್ಲಿ ನೋಡಲು ಮುಂದಾಗದಿರಿ. ಅರ್ಥ ಮಾಡಿಕೊಳ್ಳಿ. ನಮ್ಮ ಸೂಚನೆಯನ್ನು ಮೀರಿ ಪೈರಸಿ ಮಾಡಿ ಸಿಕ್ಕಿಹಾಕಿಕೊಂಡರೆ. ಸೈಬರ್ ಸೆಲ್ ನವರಿಂದ ಭಾರೀ ಸಮಸ್ಯೆಗೊಳಗಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.

     

    View this post on Instagram

     

    A post shared by Salman Khan (@beingsalmankhan)

    ರಾಧೆ ಸಿನಿಮಾವನ್ನು ಪ್ರಭುದೇವ ನಿರ್ದೇಶನ ಮಾಡಿದ್ದು, ಸಲ್ಮಾನ್ ಖಾನ್ ನಾಯಕ ನಟನಾಗಿ ಪೊಲೀಸ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ದಿಶಾ ಪಟಾಣಿ, ಜಾಕಿ ಶ್ರಾಫ್ ಮತ್ತು ರಂದೀಪ್ ಹೂಡಾ ಮುಂತಾದ ಹಲವು ಕಲಾವಿದರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.