Tag: Radhakrishna

  • ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ರಾಧಾ ಕೃಷ್ಣ’ ಸೀರಿಯಲ್ ನಟಿ

    ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ರಾಧಾ ಕೃಷ್ಣ’ ಸೀರಿಯಲ್ ನಟಿ

    ನಪ್ರಿಯ ಧಾರಾವಾಹಿ `ರಾಧಾ ಕೃಷ್ಣ’ (Radhakrishna) ಸೀರಿಯಲ್‌ನ ರಾಧೆ ಮಲ್ಲಿಕಾ ಸಿಂಗ್ (Mallika Singh) ಇದೀಗ ಸ್ಯಾಂಡಲ್‌ವುಡ್‌ಗೆ (Sandalwood) ಪಾದಾರ್ಪಣೆ ಮಾಡ್ತಿದ್ದಾರೆ. ಡಾ.ರಾಜ್ ಕುಟುಂಬದ ಕುಡಿ ವಿನಯ್ ರಾಜ್‌ಕುಮಾರ್‌ಗೆ (Vinay Rajkumar)  ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    ಕಿರುತೆರೆಯ ರಾಧೆಯಾಗಿ ಮನಗೆದ್ದಿದ್ದ ಚೆಲುವೆ ಮಲ್ಲಿಕಾ ಸಿಂಗ್ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇದೀಗ ಹಿರಿತೆರೆಯಲ್ಲಿ ಮಿಂಚಲು ನಟಿ ಮಲ್ಲಿಕಾ ಸಿಂಗ್ ರೆಡಿಯಾಗಿದ್ದಾರೆ. ಸಿಂಪಲ್ ಸುನಿ (Simple Suni) ಮತ್ತು ವಿನಯ್ ರಾಜ್‌ಕುಮಾರ್ ಕಾಂಬಿನೇಷನ್ ಚಿತ್ರಕ್ಕೆ ರಾಧಾ (Radha) ಅಲಿಯಾಸ್ ಮಲ್ಲಿಕಾ ಸಿಂಗ್ ಆಯ್ಕೆಯಾಗಿದ್ದಾರೆ.

    ಇತ್ತೀಚಿಗಷ್ಟೇ ವಿನಯ್ ರಾಜ್‌ಕುಮಾರ್ ಹೊಸ ಸಿನಿಮಾಗೆ ಚಾಲನೆ ನೀಡಲಾಗಿತ್ತು. ಸಿಂಪಲ್ ಸುನಿ ನಿರ್ದೇಶನದ ಹೊಸ ಚಿತ್ರದಲ್ಲಿ ವಿನಯ್‌ಗೆ ಜೋಡಿಯಾಗಿ ತಮಿಳಿನ `ವಿಕ್ರಮ್’ ನಟಿ ಸ್ವಾತಿಷ್ಠ ಕೃಷ್ಣನ್ ನಟಿಸುವ ಬಗ್ಗೆ ಅನೌನ್ಸ್‌ ಮಾಡಲಾಗಿತ್ತು. ಈ ಬೆನ್ನಲ್ಲೇ ಈ ಚಿತ್ರಕ್ಕೆ ಹೊಸ ನಾಯಕಿಯ ಎಂಟ್ರಿಯಾಗಿದೆ. ಇದನ್ನೂ ಓದಿ: Exclusive- ರಕ್ಷಿತ್ ಶೆಟ್ಟಿ ಎಲ್ಲಿಯೂ ಕಾಣಿಸ್ತಿಲ್ಲ ಯಾಕೆ? ಅದಕ್ಕೊಂದು ಕಾರಣವಿದೆ

    ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್‌ಗೆ ಇಬ್ಬರು ನಾಯಕಿಯರು ಇರಲಿದ್ದಾರೆ. ಸ್ವಾತಿಷ್ಠ ಕೃಷ್ಣನ್- ಮಲ್ಲಿಕಾ ಸಿಂಗ್ ಇಬ್ಬರು ವಿನಯ್ ಜೊತೆ ಡ್ಯುಯೇಟ್ ಹಾಡಲಿದ್ದಾರೆ. ನಾಯಕಿ ಸ್ವಾತಿಷ್ಠ ಪತ್ರಕರ್ತೆ (Journalist) ಪಾತ್ರದಲ್ಲಿ ನಟಿಸುತ್ತಿದ್ದು, ಮಲ್ಲಿಕಾ ಕಾಶ್ಮೀರಿ ಹುಡುಗಿಯ ಪಾತ್ರಕ್ಕೆ ಜೀವತುಂಬಲಿದ್ದಾರೆ. ಇನ್ನೂ ಸಿಂಪಲ್ ಸುನಿ ನಿರ್ದೇಶನದ ಈ ಹೊಸ ಪ್ರೇಮ ಕಥೆಯಲ್ಲಿ ಈ ಮೂವರ ಜೋಡಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಎಚ್‍ಡಿಕೆ ಹುಟ್ಟುಹಬ್ಬಕ್ಕೆ 60 ಕೆಜಿ ತೂಕದ ಕೇಕ್‍ಕಟ್ ಮಾಡಿ ಸಂಭ್ರಮಿಸಿದ ಕಾರ್ಯಕರ್ತರು

    ಎಚ್‍ಡಿಕೆ ಹುಟ್ಟುಹಬ್ಬಕ್ಕೆ 60 ಕೆಜಿ ತೂಕದ ಕೇಕ್‍ಕಟ್ ಮಾಡಿ ಸಂಭ್ರಮಿಸಿದ ಕಾರ್ಯಕರ್ತರು

    -ಸೋಲಿನ ಬಳಿಕವೂ ಜೆಡಿಎಸ್ ಅಭ್ಯರ್ಥಿ ಆಕ್ಟೀವ್

    ಚಿಕ್ಕಬಳ್ಳಾಪುರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ 60ನೇ ವರ್ಷದ ಹುಟ್ಟುಹಬ್ಬವನ್ನು ಜೆಡಿಎಸ್ ಕಾರ್ಯಕರ್ತರು 60 ಕೆ.ಜಿ. ತೂಕದ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು.

    ನಗರ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ಉಸ್ತುವಾರಿಯ ಶ್ರೀ ವಿರಾಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಯವರಿಗೆ ಆರೋಗ್ಯ, ಅಧಿಕಾರ ಭಾಗ್ಯ ನೀಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ದೇಗುಲದ ಹೊರಗಡೆ ಬೃಹತ್ ಗಾತ್ರದ 60 ಕೆ.ಜಿ ತೂಕದ ಕೇಕ್ ಕಟ್ ಮಾಡಿ ಹಂಚಿ ತಿನ್ನುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಚಿಕ್ಕಬಳ್ಳಾಪುರ ಜೆಡಿಎಸ್ ಪರಾಜಿತ ಅಭ್ಯರ್ಥಿ ರಾಧಾಕೃಷ್ಣ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು. ಇದೇ ವೇಳೆ ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಸಹ ಏರ್ಪಡಿಸಲಾಗಿತ್ತು.

    ಸೋತ ಬಳಿಕವೂ ಆಕ್ಟೀವ್: ಉಪಚುನಾವಣಾ ಕಣಕ್ಕೆ ನಾಮಪತ್ರ ಸಲ್ಲಿಕೆ ದಿನ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದ ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ, ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಕೇವಲ 35,869 ಮತಗಳನ್ನ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ರಾಧಾಕೃಷ್ಣ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಸಂಬಂಧಿಯಾಗಿದ್ದು, ಸ್ಥಳೀಯರಲ್ಲದ ವ್ಯಕ್ತಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ ಎಂದು ವಿಜೇತ ಬಿಜೆಪಿ ಅಭ್ಯರ್ಥಿ ಸುಧಾಕರ್ ಚುನಾವಣಾ ಪ್ರಚಾರದಲ್ಲಿ ವಾಗ್ದಾಳಿ ನಡೆಸಿದ್ದರು. ಇದನ್ನು ಓದಿ: ಸುಖವನ್ನ ಎಲ್ಲೋ ಆಚರಿಸಿ, ದುಃಖದಲ್ಲಿ ಜನರ ಮುಂದೆ ಕಣ್ಣೀರು ಹಾಕೋದಲ್ಲ: ಎಚ್‍ಡಿಕೆಗೆ ಬಿಜೆಪಿ ನಾಯಕ ಟಾಂಗ್

    ರಾಧಾಕೃಷ್ಣ ಚುನಾವಣಾ ಕಣಕ್ಕೆ ಮಾತ್ರ ಸೀಮಿತ ಸೋತ ಮೇಲೆ ಕ್ಷೇತ್ರದ ಕಡೆ ಸುಳಿಯಲ್ಲ ಎಂತಲೂ ಕೆಲವರೂ ವಾಗ್ದಾಳಿ ನಡೆಸಿದ್ದರು. ಆದರೆ ಸೋತ ಬಳಿಕ ಸುದ್ದಿಗೋಷ್ಠಿ ನಡೆಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದ ರಾಧಾಕೃಷ್ಣ, ಚಿಕ್ಕಬಳ್ಳಾಪುರದಲ್ಲೇ ಮನೆ ಮಾಡಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದ್ದರು. ಈಗ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಹುಟ್ಟುಹಬ್ಬ ಸಹ ಮಾಡುವುದರ ಮೂಲಕ ಕಾರ್ಯಕರ್ತರು ಮುಖಂಡರನ್ನ ಹಿಡಿದಿಟ್ಟುಕೊಂಡು ಪಕ್ಷ ಸಂಘಟನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.