Tag: Radha Mohan Das Agarwal

  • ಸಭೆಯಲ್ಲಿ ನನಗೆ ಅಪಮಾನ ಮಾಡಿದ್ದಾರೆ – ರಾಧಾಮೋಹನ್ ದಾಸ್ ವಿರುದ್ಧ ಶ್ರೀರಾಮುಲು ಗರಂ

    ಸಭೆಯಲ್ಲಿ ನನಗೆ ಅಪಮಾನ ಮಾಡಿದ್ದಾರೆ – ರಾಧಾಮೋಹನ್ ದಾಸ್ ವಿರುದ್ಧ ಶ್ರೀರಾಮುಲು ಗರಂ

    ಬೆಂಗಳೂರು: ಕೋರ್ ಕಮಿಟಿ ಸಭೆಯಲ್ಲಿ ನನಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ (BJP) ಉಸ್ತುವಾರಿ ರಾಧಾಮೋಹನ ದಾಸ್ (Radha Mohan Das Agarwal) ವಿರುದ್ಧ ಮಾಜಿ ಸಚಿವ ಶ್ರೀರಾಮುಲು (Sriramulu) ಗರಂ ಆಗಿದ್ದಾರೆ.

    ನಗರದಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನಗೆ ಸಭೆಯಲ್ಲಿ ಅಪಮಾನ ಮಾಡಿದ್ದಾರೆ. ಜನಾರ್ದನ ರೆಡ್ಡಿ ನನ್ನ ಟಾರ್ಗೆಟ್ ಮಾಡ್ತಾ ಇದ್ದಾರೆ. ವಿಜಯೇಂದ್ರ ನನ್ನ ಪರ ಇರಲಿಲ್ಲ. ನಾನು ಪಕ್ಷ ಬಿಡುತ್ತೇನೆ, ನಿಮಗೆ ನಾನು ಬೇಡ ಅಂದ್ರೆ ಹೇಳಿ ಅಂದಿದ್ದೆ ಎಂದು ಅಬ್ಬರಿಸಿದ್ದಾರೆ.

    ಸಂಡೂರು ಸೋಲಿಗೆ ಶ್ರೀರಾಮುಲು ಕಾರಣ ಎಂದು ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಹೈಕಮಾಂಡ್‍ಗೆ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಮುಲು ಅವರಿಗೆ ರಾಧಾ ಮೋಹನದಾಸ್ ಅಗರವಾಲ್ ಸಭೆಯಲ್ಲಿ ತರಾಟೆ ತೆಗೆದುಕೊಂಡಿದ್ದರು. ಇದರಿಂದ ಅಸಮಾಧಾನಗೊಂಡ ರಾಮುಲು, ಆರ್‍ಎಸ್‍ಎಸ್ ನಾಯಕರು ಹಾಗೂ ಕರೆ ಮಾಡಿ ಮೌಖಿಕ ದೂರು ಕೊಟ್ಟಿದ್ದಾರೆ. ಅಲ್ಲದೇ, ನಾನು ಚುನಾವಣೆ ಸೋಲಿನ ನೋವಲ್ಲಿ ಇದ್ದೇನೆ. ಇಂತಹ ಸಂದರ್ಭದಲ್ಲಿ ಈ ಆರೋಪ ಸರಿ ಇಲ್ಲ ಎಂದು ಹೇಳಿದ್ದಾರೆ.

    ಜನಾರ್ದನ ರೆಡ್ಡಿ (Janardhana Reddy) ಬಿಜೆಪಿ ಸೇರ್ಪಡೆಗೆ ರಾಮುಲು ಅಡ್ಡಗಾಲು ಹಾಕಿದ್ದರು ಎನ್ನುವ ಆರೋಪ ಇತ್ತು. ಅಲ್ಲಿಂದ ಜನಾರ್ದನ ರೆಡ್ಡಿ ಹಾಗೂ ರಾಮುಲು ನಡುವೆ ಮುನಿಸು ಆರಂಭಗೊಂಡಿತ್ತು. ಅದಾದ ಬಳಿಕ ಸವಾಲಾಗಿ ಸ್ವೀಕರಿಸಿ ಗಂಗಾವತಿಯಿಂದ ಹೊಸ ಪಕ್ಷ ಕಟ್ಟಿ ಸ್ಪರ್ಧೆಗಿಳಿದು, ಜನಾರ್ದನ ರೆಡ್ಡಿ ಗೆದ್ದಿದ್ದರು.

    ಸಭೆಯಲ್ಲಿ ಆಗಿದ್ದೇನು?

    ಕೋರ್ ಕಮಿಟಿ ಸಭೆಯಲ್ಲಿ ಶ್ರೀರಾಮುಲುಗೆ (Sriramulu) ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ (Radha Mohan Das Agarwal) ಕ್ಲಾಸ್ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಸಭೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (Sandur By Election) ಬಂಗಾರು ಹನುಮಂತು (Bangaru Hanumanthu) ಸೋಲಿನ ಬಗ್ಗೆ ಚರ್ಚೆ ನಡೆದಿತ್ತು. ಚುನಾವಣೆಯ ಫಲಿತಾಂಶದ ಬಳಿಕ ಶ್ರೀರಾಮುಲು ವಿರುದ್ಧ ಬಿಜೆಪಿ ನಾಯಕರಿಗೆ ಬಂಗಾರು ಹನುಮಂತು ದೂರು ನೀಡಿದ್ದರು. ಬಂಗಾರು ಹನುಮಂತು ದೂರನ್ನು ಆಧರಿಸಿ, ಕೋರ್ ಕಮಿಟಿ ಸಭೆಯಲ್ಲಿ ರಾಧಾಮೋಹನ್ ದಾಸ್ ಅಗರ್‌ವಾಲ್ ರಾಮುಲು ಅವರ ಕಾರ್ಯವೈಖರಿ ಪ್ರಶ್ನಿಸಿದ್ದರು.

    ಕೋರ್ ಕಮಿಟಿ ಸಭೆ ಮುಕ್ತಾಯವಾಗುತ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಲು ಶ್ರೀರಾಮುಲು ನಿಂತಿದ್ದರು. ಈ ವೇಳೆ ರಾಮುಲು ಅವರನ್ನು ಸಿ.ಟಿ. ರವಿ ಹಾಗೂ ವಿಜಯೇಂದ್ರ ತಡೆದಿದ್ದರು.

  • ರಾಜ್ಯ ಬಿಜೆಪಿಯಲ್ಲಿ ಕಿತ್ತಾಟ ಜೋರು – ಕೊನೆಗೂ ಹೈಕಮಾಂಡ್‌ ಎಂಟ್ರಿ

    ರಾಜ್ಯ ಬಿಜೆಪಿಯಲ್ಲಿ ಕಿತ್ತಾಟ ಜೋರು – ಕೊನೆಗೂ ಹೈಕಮಾಂಡ್‌ ಎಂಟ್ರಿ

    ಬೆಂಗಳೂರು: ಬಿಜೆಪಿ (BJP) ಆಂತರಿಕ ಕಿತ್ತಾಟ ಜೋರಾಗುತ್ತಿದಂತೆ ಶಮನ ಮಾಡಲು ಹೈಕಮಾಂಡ್‌ (High Command) ಈಗ ಎಂಟ್ರಿಯಾಗುತ್ತಿದೆ.

    ಮಂಗಳವಾರ ನಾಳೆ ರಾಜ್ಯಕ್ಕೆ ಅಗಮಿಸಲಿರುವ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ ವಾಲ್ (Radha Mohan Das Agarwal) ಮೂರು ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ.  ಇದನ್ನೂ ಓದಿ: ಅಮಿತ್‌ ಶಾ ವಿರುದ್ಧ ಹೇಳಿಕೆ – ರಾಹುಲ್‌ ಗಾಂಧಿಗೆ ರಿಲೀಫ್‌

    ಆರಂಭದಲ್ಲಿ ಮಧ್ಯಾಹ್ನ 3 ಗಂಟೆಗೆ ಶಾಸಕರು, ಸಂಸದರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಸಂಘಟನೆ ಪರ್ವದ ಪರಿಶೀಲನೆ ನಡೆಯಲಿದೆ. ಜಿಲ್ಲಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ.

    ಸಂಜೆ 7 ಗಂಟೆ ಕೋರ್ ಕಮಿಟಿ ಸಭೆ ನಡೆಯಲಿದ್ದು ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ. ಮುಖ್ಯವಾಗಿ ಯತ್ನಾಳ್, ವಿಜಯೇಂದ್ರ ಬಣದ ಹೇಳಿಕೆಗಳ ಬಗ್ಗೆ ಗಂಭೀರ ಚರ್ಚೆಯಾಗುವ ಸಾಧ್ಯತೆಯಿದೆ.

  • ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ?

    ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ?

    – ರಾಧಾ ಮೋಹನ್ ದಾಸ್ ಅಗರ್ವಾಲ್ ಜೊತೆಗೆ ನಿಖಿಲ್ ಮಾತುಕತೆ
    – ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ

    ನವದೆಹಲಿ: ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ (Radha Mohan Das Agarwal) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

    ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಮತ್ತಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಅಗತ್ಯ ಸಲಹೆ-ಸೂಚನೆ ಪಡೆದುಕೊಳ್ಳಲು ನಿಖಿಲ್ ಅವರು ಸೋಮವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ಇಂದು ದೆಹಲಿ-ಹರಿಯಾಣ ಗಡಿಯಲ್ಲಿ ರೈತರ ಪ್ರತಿಭಟನೆ; ಶಂಭು ಗಡಿಯಲ್ಲಿ ರೈತರು ಜಮಾವಣೆ

    ಈಗಾಗಲೇ ಗೃಹ ಸಚಿವರು ಸೋಮವಾರ ತಮ್ಮನ್ನು ಭೇಟಿಯಾಗುವಂತೆ ನಿಖಿಲ್ ಅವರಿಗೆ ಸಮಯ ನೀಡಿದ್ದು, ಅದಕ್ಕೆ ಪೂರ್ವಭಾವಿಯಾಗಿ ಅವರು ನವದೆಹಲಿಯಲ್ಲಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದರು.

    ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಬಲ ಹೋರಾಟ ನಡೆಸಿ ಉತ್ತಮ ಫಲಿತಾಂಶ ಸಾಧಿಸಿದೆ. ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಂಬಿಕೆ ಇರಿಸಿದ್ದಾರೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯ ಇದೆ ಎಂದು ನಿಖಿಲ್ ಅವರು ರಾಧಾ ಮೋಹನ್ ದಾಸ್ ಅಗರ್ವಾಲ್ ಅವರಿಗೆ ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಮರು ಗೋಮಾಂಸ ತಿನ್ನಬಾರದು: ಇಸ್ಲಾಂ ಧರ್ಮಗುರು ಮೌಲಾನಾ ಶಹಾಬುದ್ದೀನ್‌ ಕರೆ

  • ನಾನ್ಯಾರು ಗೊತ್ತಿಲ್ಲ ಎಂದಿದ್ದ ರಾಧಾಮೋಹನ್ ನಮ್ಮ ಮನೆಗೆ ಬಂದಿದ್ರು: ಈಶ್ವರಪ್ಪ ತಿರುಗೇಟು

    ನಾನ್ಯಾರು ಗೊತ್ತಿಲ್ಲ ಎಂದಿದ್ದ ರಾಧಾಮೋಹನ್ ನಮ್ಮ ಮನೆಗೆ ಬಂದಿದ್ರು: ಈಶ್ವರಪ್ಪ ತಿರುಗೇಟು

    ಉಡುಪಿ: ನಾನ್ಯಾರು ಗೊತ್ತಿಲ್ಲ ಎಂದ ರಾಧಮೋಹನ್ ಅಗರ್ವಾಲ್‌ (Radha Mohan Das Agarwal) ನಮ್ಮ ಮನೆಗೆ ಬಂದಿದ್ದರು. ಅವರಿಗೆಲ್ಲೋ ಮರೆವು ಎಂದು ಮಾಜಿ ಸಚಿವ ಹಾಗೂ ಶಿವಮೊಗ್ಗದ ಬಿಜೆಪಿ (BJP) ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ (K.S Eshwarappa) ತಿರುಗೇಟು ಕೊಟ್ಟಿದ್ದಾರೆ.

    ಬೈಂದೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇತ್ತೀಚೆಗೆ ಈಶ್ವರಪ್ಪ ಎಂಬ ಹೆಸರಿನವರ‍್ಯಾರು ನನಗೆ ಪರಿಚಯ ಇಲ್ಲ ಎಂದಿದ್ದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ವೇಳೆ ನನ್ನ ಮಾತು ಅಮಿತ್ ಶಾಗೆ ತಲುಪಿದೆ. ಇಂದು ಸಹ ನನಗೆ ಕರೆ ಬಂದಿದೆ. ಈ ವಿಚಾರ ತಿಳಿದು ಉತ್ತರ ಕೊಡಲು ಆಗಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಬಸ್‌ ಹತ್ತಿದ ಮಹಿಳೆ – ಮುಜುಗರದಿಂದ ಸೀಟು ಬಿಟ್ಟು ಹೋದ ಪ್ರಯಾಣಿಕ; ವೀಡಿಯೋ ಫುಲ್‌ ವೈರಲ್‌

    ನನ್ನ ಕ್ಷೇತ್ರದಲ್ಲಿ ನನಗೆ ಪೂರ್ಣ ಜನಬೆಂಬಲ ಸಿಕ್ಕಿದೆ. ಗೀತಾ ಶಿವರಾಜ್‍ಕುಮಾರ್ ಯಡಿಯೂರಪ್ಪ ಹಾಕಿರುವ ಡಮ್ಮಿ ಅಭ್ಯರ್ಥಿ. ಅಸಮಾಧಾನಿತ ಕಾಂಗ್ರೆಸ್ ಮತಗಳು ನನಗೆ ಬರಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯವರು ಹಿಂಬಾಗಿಲಿನಿಂದ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ ಎಂದರು.

    ವಿಜಯೇಂದ್ರ ಇನ್ನೂ ಎಳಸು, ನನ್ನ ಸಾಧನೆ ನಿನ್ನ ಅಪ್ಪನಿಗೆ ಕೇಳು. ರಾಜ್ಯದಲ್ಲಿ ಏನೂ ಕೆಲಸ ಮಾಡಿಲ್ಲ ಎನ್ನಲಿ, ಆಗ ನಿಮಗೆ ಉತ್ತರ ಕೊಡುತ್ತೇನೆ. ತಪಸ್ಸಿಂದ ಕಟ್ಟಿದ ಪಕ್ಷ ಅಧೋಗತಿಗೆ ಹೋಗುತ್ತಿದೆ. ಬಿಜೆಪಿ ಪ್ರೈವೆಟ್ ಲಿಮಿಟೆಡ್ ಕಂಪನಿ ಅಲ್ಲ. ನನಗೆ ಆರ್‍ಎಸ್‍ಎಸ್, ಸಂಘಪರಿವಾರ ಶಿವಮೊಗ್ಗದಲ್ಲಿ ಬೆಂಬಲಿಸಿದೆ. ಕರ್ನಾಟಕದ ಮೂಲೆ ಮೂಲೆಯಿಂದ ಜನ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

    ಯಡಿಯೂರಪ್ಪ ರಾಜ್ಯದಲ್ಲಿ ಮೈತ್ರಿ ಮುಂದುವರೆಯತ್ತದೆ ಎಂದಿದ್ದಾರೆ. ಕಾಂಗ್ರೆಸ್ ಜೊತೆ ಇರೋ ಮೈತ್ರಿ ಮುಂದುವರೆಯುತ್ತೋ? ಒಳ ಒಪ್ಪಂದದ ಮೈತ್ರಿಯೋ ಗೊತ್ತಿಲ್ಲ. ಮೈತ್ರಿ ಒಪ್ಪಂದ ಒಳಮರ್ಮ ಹೆಚ್‍ಡಿಕೆಗೆ ಬೇಗ ಅರ್ಥವಾಗಲಿ. ನಮ್ಮ ಡಿವಿಎಸ್, ಪ್ರತಾಪ್ ಸಿಂಹ, ಸಿಟಿ ರವಿ, ಅನಂತ್ ಕುಮಾರ್ ಹೆಗಡೆ ಸೈನ್ಯಕ್ಕೆ ದ್ರೋಹವಾಗಿದೆ. ಬಿವೈವಿ ಯೋಗ್ಯತೆ ಒಂದು ತಿಂಗಳಲ್ಲಿ ಗೊತ್ತಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

    ಶಿವಮೊಗ್ಗ ಸಭೆಯಲ್ಲಿ ಕುಂಕುಮ ಒರೆಸಿದ ಗೀತಾ ಶಿವರಾಜ್‍ಕುಮಾರ್ ವಿಚಾರವಾಗಿ, ಇದು ಡೋಂಗಿ ಜಾತ್ಯಾತೀತ ವ್ಯವಸ್ಥೆಯ ಪ್ರದರ್ಶನವಾಗಿದೆ. ಇವರೆಲ್ಲ ಮುಸಲ್ಮಾನರನ್ನು ಸಂತೃಪ್ತಿ ಮಾಡಿಕೊಂಡಿರಲಿ. ಹಿಂದೂ, ಹಿಂದುತ್ವ ವಿರೋಧ ಮಾಡಿಕೊಂಡರೆ ಬಾಳ್ವೆಯಿಲ್ಲ. ನಾನು, ನನ್ನ ಜೊತೆ ಬಂದವರು ತಾಯಿ ಭಾರತಿಯನ್ನು ನಂಬಿದವರು ಎಂದರು.

    ಚುನಾವಣೆಗೆ ಸಾಧು ಸಂತರನ್ನು ನಡುವೆ ತರುವುದು ನೋವಿನ ಸಂಗತಿಯಾಗಿದೆ. ಈ ವಿಚಾರವನ್ನು ರಾಷ್ಟ್ರ ಭಕ್ತಬಳಗ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಂಚಾರಿ ಪೊಲೀಸರಿಗೆ ಎಸಿ ಹೆಲ್ಮೆಟ್ – ಗುಜರಾತ್ ಪ್ರಯೋಗ ಯಶಸ್ವಿ

  • ಈಶ್ವರಪ್ಪ ಅಂದ್ರೆ ಯಾರು? ಆ ಹೆಸರಿನವ್ರು ಯಾರೂ ಗೊತ್ತಿಲ್ಲ: ರಾಧಾಮೋಹನ್ ದಾಸ್ ವ್ಯಂಗ್ಯ

    ಈಶ್ವರಪ್ಪ ಅಂದ್ರೆ ಯಾರು? ಆ ಹೆಸರಿನವ್ರು ಯಾರೂ ಗೊತ್ತಿಲ್ಲ: ರಾಧಾಮೋಹನ್ ದಾಸ್ ವ್ಯಂಗ್ಯ

    ಬೀದರ್: ಈಶ್ವರಪ್ಪ (K.S Eshwarappa) ಅಂದ್ರೆ ಯಾರು? ಅಂತಹ ಹೆಸರಿನ ಯಾವ ವ್ಯಕ್ತಿಯೂ ನನಗೆ ಗೊತ್ತಿಲ್ಲ ಎಂದು ಬಿಜೆಪಿ (BJP) ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ (Radha Mohan Das Agarwal) ವ್ಯಂಗ್ಯವಾಡಿದ್ದಾರೆ.

    ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಈಶ್ವರಪ್ಪ ಮನವೊಲಿಸುತ್ತೀರಾ ಎಂಬ ಪ್ರಶ್ನೆಗೆ, ಆ ಹೆಸರಿನ ವ್ಯಕ್ತಿ ನನಗೆ ಗೊತ್ತೇ ಇಲ್ಲ. ಅವರು ಯಾರು ಎಂದು ಲೇವಡಿ ಮಾಡಿದ್ದಾರೆ. ಮೋದಿ ಫೋಟೋ ಬಳಸುತ್ತಿರುವ ವಿಚಾರಕ್ಕೆ, ಈ ಸೌಭಾಗ್ಯ ಎಲ್ಲಿ ಬರುತ್ತದೆ. ಕಾಂಗ್ರೆಸ್‍ನವರೇ ಮೋದಿ ಫೋಟೋ ಹಾಕ್ತಿದ್ದಾರೆ. ಎಡಿಎಂಕೆ, ಡಿಎಂಕೆ ಎಲ್ಲಾ ಪಕ್ಷದವರು ಮೋದಿ (Narendra Modi) ಫೋಟೋ ಬಳಸುತ್ತಿದ್ದಾರೆ. ಇದು ಒಳ್ಳೆಯ ಸಂಗತಿ ಎಂದಿದ್ದಾರೆ. ಇದನ್ನೂ ಓದಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು

    ಪ್ರಭು ಚೌಹಾಣ್ ಚುನಾವಣೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಜೊತೆಗಿದ್ದಾರೆ. ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದು, ಶೀಘ್ರವೇ ಅವರು ಗುಣಮುಖರಾಗಿ ಬರಲಿ. ನಾವೇ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ ಎಂದರು.

    ಬೀದರ್‌ನಲ್ಲಿ ಬಿಜೆಪಿ ಗೆಲ್ಲಲಿದೆ. ಈ ಮೂಲಕ ಮೋದಿಯವರಿಗೆ ಜನ ಮತ್ತೊಮ್ಮೆ ಅವಕಾಶ ನೀಡಲಿದ್ದಾರೆ. ಇಲ್ಲಿ ಕಾಂಗ್ರೆಸ್ (Congress) ಠೇವಣಿ ಕಳೆದುಕೊಳ್ಳಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ

  • ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ – ಸುಮಲತಾ ಟಿಕೆಟ್ ಬಗ್ಗೆ ತೀರ್ಮಾನ ಆಗಿಲ್ಲ: ರಾಧಾ ಮೋಹನ್ ದಾಸ್ ಅಗರವಾಲ್

    ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ – ಸುಮಲತಾ ಟಿಕೆಟ್ ಬಗ್ಗೆ ತೀರ್ಮಾನ ಆಗಿಲ್ಲ: ರಾಧಾ ಮೋಹನ್ ದಾಸ್ ಅಗರವಾಲ್

    ಬೆಂಗಳೂರು: ಮಂಡ್ಯ, ಹಾಸನ, ಕೋಲಾರ (Mandya, Hassan, Kolar) ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನ ಆಗಿದೆ. ಆದ್ರೆ ಸುಮಲತಾ ಅವರ ಟಿಕೆಟ್ ಬಗ್ಗೆ ತೀರ್ಮಾನ ಆಗಿಲ್ಲ ಎಂದು ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ (Radha Mohan Das Agarwal) ತಿಳಿಸಿದ್ದಾರೆ.

    ಬೆಂಗಳೂರಿನ ಅರಮನೆ ಮೈದಾನದ (Bengaluru Palace Grounds) ವೃಕ್ಷ ಸಭಾಂಗಣದಲ್ಲಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಂಡ್ಯ, ಹಾಸನ, ಕೋಲಾರ ಮೂರು ಕ್ಷೇತ್ರ ಜೆಡಿಎಸ್‌ಗೆ (JDS) ಬಿಟ್ಟುಕೊಡುವ ತೀರ್ಮಾನ ಆಗಿದೆ. ಸುಮಲತಾ ಅವರ ಟಿಕೆಟ್ ತೀರ್ಮಾನ ಆಗಿಲ್ಲ ಎಂದು ಹೇಳಿದ್ದು ಆಗ ಸತ್ಯ ಆಗಿತ್ತು. ಈಗ ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ ತೀರ್ಮಾನ ಆಗಿದೆ. ಸುಮಲತಾ ಅವರ ಪಾತ್ರ ಬಹಳ ದೊಡ್ಡದಿದೆ. ಅವರ ರಾಜಕೀಯ ಭವಿಷ್ಯವು ಸಹ ಬಹಳ ಉತ್ತಮ ಆಗಿರಲಿದೆ ಎಂದು ಹೇಳಿದ್ದಾರೆ.

    ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಗೌಡ್ರು, ಹೆಚ್‌ಡಿಕೆ:
    ಚುನಾವಣೆ ಪ್ರಚಾರ ಕಾರ್ಯ ಆರಂಭ ಆದ್ಮೇಲೆ ಜೆಡಿಎಸ್ ಹಾಗೂ ಬಿಜೆಪಿ (BJP JDS Alliacne) ನಾಯಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಕೋಲಾರದಲ್ಲಿ ಸಂಸದ ನಮ್ಮ ಕಾರ್ಯಕರ್ತ, ಅತ್ಯಂತ ಸಮರ್ಪಣಾ ಭಾವದ ವ್ಯಕ್ತಿ. ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಯೋಚನೆ ಮಾಡುತ್ತೇವೆ. ನಾನು ಯಾವುದೇ ಒಳಜಗದ ಬಗ್ಗೆ ಚಿಂತೆ ಮಾಡಲ್ಲ, ದೊಡ್ಡ ಪಕ್ಷ ಕೋಟ್ಯಂತರ ಕಾರ್ಯಕರ್ತರು ಇದ್ದಾರೆ. ಅಸಮಾಧಾನಿತರು ಇದ್ದೇ ಇರ್ತಾರೆ, ಇದ್ಯಾವುದನ್ನೂ ನೋಡಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಇದನ್ನೂ ಓದಿ: Loksabha Elections 2024- ಕೋಲಾರ ಸೀಟು ಜೆಡಿಎಸ್‍ಗೆ ಬಿಟ್ಟು ಕೊಟ್ಟ ಬಿಜೆಪಿ

    ಡಿ.ವಿ ಸದಾನಂದಗೌಡರ ಶುದ್ಧೀಕರಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶುದ್ಧೀಕರಣ ಹಿಂದೂ ಸಂಸ್ಕೃತಿ. ನಮ್ಮನ್ನು ನಾವು ಯಾವಾಗಲೂ ಶುದ್ದೀಕರಣ ಮಾಡಿಕೊಳ್ಳುತ್ತೇವೆ. ಅವರು ಬಿಜೆಪಿಯವರು ಬಿಜೆಪಿಯಲ್ಲೇ ಇರ್ತಾರೆ. ಬಿಜೆಪಿಯಲ್ಲಿ ಸದಾಕಾಲ ಶುದ್ದೀಕರಣ ಆಗ್ತಾನೆ ಇರುತ್ತೆ. ಇದೇನು ಹೊಸದಲ್ಲ ಎಂದು ರಾಧಾ ಮೋಹನ್ ದಾಸ್ ಅಗರವಾಲ್ ಹೇಳಿದ್ದಾರೆ. ಇದನ್ನೂ ಓದಿ: ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಹಣ ನೀಡಿದ ವ್ಯಕ್ತಿಯ ಹೇಳಿಕೆ ಆಧರಿಸಿ ಕೇಜ್ರಿವಾಲ್ ಬಂಧನ – ಇಡಿ ವಿರುದ್ಧ ಆಪ್ ಆರೋಪ

    6 ಬಾರಿ ಮೋದಿ ರಾಜ್ಯಕ್ಕೆ ಬರುವ ನಿರೀಕ್ಷೆ:
    ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ಯಾರಿಗಾದರೂ ಟಿಕೆಟ್ ಕೊಡಿ, ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಲು ಅಲ್ಲಿಯ ಲೀಡರ್ ಬಂದಿದ್ದರು. ಜಗದೀಶ್ ಶೆಟ್ಟರ್ ವಿರುದ್ಧವಾಗಿ ಮಾತಾಡಿದ್ದು ನನಗೆ ಗೊತ್ತಿಲ್ಲ. ನಿಮಗೆ ಮಾಹಿತಿ ಇರಬಹುದು. ಮೋದಿ ಕರ್ನಾಟಕವನ್ನು ಬಹಳ ಪ್ರೀತಿಸುತ್ತಾರೆ. ಈಗಾಗಲೇ ಎರಡು ಸಭೆ ಮಾಡಿದ್ದಾರೆ. ಮತ್ತೆ-ಮತ್ತೆ ಬರಬೇಕು ಎಂದು ವಿನಂತಿ ಮಾಡುತ್ತೇನೆ. ಕೇವಲ ಎರಡು ದಿನದ ತಯಾರಿಯಲ್ಲಿ ಬಹಳ ಅದ್ಭುತವಾಗಿ ಮೋದಿ ಕಾರ್ಯಕ್ರಮ ನಡೆದಿದೆ. ಉತ್ತರ ಪ್ರದೇಶದಲ್ಲೂ ಇಷ್ಟೊಂದು ಅದ್ಭುತವಾಗಿ ಕಾರ್ಯಕ್ರಮ ಮಾಡಲು ಸಾಧ್ಯವಾಗಿಲ್ಲ ರಾಜ್ಯಕ್ಕೆ ಎಷ್ಟು ಸಮಯ ಕೊಡ್ತಾರೆ ನೋಡಬೇಕು. 6 ಬಾರಿ ಮೋದಿ ರಾಜ್ಯಕ್ಕೆ ಬರುವ ನೀರಿಕ್ಷೆ ಇದೆ ಎಂದು ವಿವರಿಸಿದ್ದಾರೆ.