Tag: Rachitaram

  • ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಚಿತ್ರದಲ್ಲಿ ಕನ್ನಡದ ನಟಿ.?

    ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಚಿತ್ರದಲ್ಲಿ ಕನ್ನಡದ ನಟಿ.?

    ಭಾರತೀಯ ಚಿತ್ರರಂಗದ ಮೈಕಲ್ ಜಾಕ್ಸನ್‌ ಎಂದೇ ಖ್ಯಾತಿ ಪಡೆದಿರುವ ಪ್ರಭುದೇವ, ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ದಕ್ಷಿಣದ ನಟಿ ರಮ್ಯಾ ಕೃಷ್ಣ ನಟಿಸಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಮತ್ತೊಂದು ಹಾಟ್ ನ್ಯೂಸ್ ಈಗ ಹೊರಬಿದ್ದಿದೆ. ಪ್ರಭುದೇವ ನಾಯಕನಾಗಿ ಅಭಿನಯಿಸುವ ಚಿತ್ರದಲ್ಲಿ ಕನ್ನಡದ ಸ್ಟಾರ್ ನಾಯಕಿ ಕೂಡ ಬಣ್ಣ ಹಚ್ಚಲಿದ್ದಾರಂತೆ.

    ಇತ್ತೀಚೆಗಷ್ಟೇ ಕನ್ನಡದ ಯೋಗರಾಜ್ ಭಟ್ ಅವರ ಚಿತ್ರದಲ್ಲಿ ನಟಿಸುವುದಾಗಿ ಅನೌನ್ಸ್ ಮಾಡಿದ ಬೆನ್ನಲ್ಲೇ ವಿನು ವೆಂಕಟೇಶ್ ನಿರ್ದೇಶನದ ಬಹುಭಾಷಾ ಚಿತ್ರದಲ್ಲಿ ಪ್ರಭುದೇವ ನಾಯಕನಾಗಿ ನಟಿಸಲು ಸಜ್ಜಾಗಿದ್ದಾರೆ. ಪ್ರಭುದೇವ ಜೊತೆ ಕನ್ನಡದ ಸ್ಟಾರ್ ನಟಿ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಕೂಡ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ : ಬಾಕ್ಸ್ ಆಫೀಸ್ ಧೂಳಿಪಟ

    ಈ ಚಿತ್ರವು ಸೈನ್ಸ್ ಫಿಕ್ಷನ್ ಜಾನರ್‌ನಲ್ಲಿದ್ದು, 15ನೇ ಶತಮಾನದ ಕಥೆಯನ್ನ ತೆರೆಯ ಮೇಲೆ ತರಲು ನಿರ್ದೇಶಕ ವಿನು ವೆಂಕಟೇಶ್ ಸಜ್ಜಾಗಿದ್ದಾರೆ. ಎಂದೂ ಮಾಡಿರದ ಭಿನ್ನ ಗೆಟಪ್‌ನಲ್ಲಿ ಪ್ರಭುದೇವ ಬಣ್ಣ ಹಚ್ಚಲಿದ್ದಾರೆ. ಎರಡು ಕಾಲಘಟ್ಟದ ಕಥೆಯಲ್ಲಿ ಅದ್ದೂರಿ ಡ್ಯಾನ್ಸ್ ಕೂಡ ಇರಲಿದೆ. ಪ್ರಭುದೇವ ಅವರ ಡ್ಯಾನ್ಸ್ ಜತೆ ರಚಿತಾ ರಾಮ್ ಮೋಡಿ ಹೇಗಿರಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಆಸ್ಪತ್ರೆಗೆ ದಾಖಲಾಗಿ ಡಿಂಪಲ್ ಕ್ವೀನ್ ರಚಿತಾ ಡಿಸ್ಚಾರ್ಜ್

    ಆಸ್ಪತ್ರೆಗೆ ದಾಖಲಾಗಿ ಡಿಂಪಲ್ ಕ್ವೀನ್ ರಚಿತಾ ಡಿಸ್ಚಾರ್ಜ್

    ಬೆಂಗಳೂರು: ಚಂದನವನದ ಡಿಂಪಲ್ ಕ್ವಿನ್ ರಚಿತಾರಾಮ್ ಆಸ್ಪತ್ರೆಗೆ ದಾಖಲಾಗಿ, ಡಿಸ್ಚಾರ್ಜ್ ಆಗಿದ್ದಾರೆ. ರಚಿತಾ ರಾಮ್ ಅವರು ಕಳೆದ ಕೆಲ ತಿಂಗಳುಗಳಿಂದ ನಾನ್ ಸ್ಟಾಪ್ ಶೂಟಿಂಗ್ ಹಾಗೂ ಪ್ರಮೋಷನ್ಸ್ ಒತ್ತಡದಿಂದ ಅತಿಯಾದ ಆಯಾಸಕ್ಕೆ ಒಳಗಾಗಿದ್ದು, ಶೀತ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಶಿವಮೊಗ್ಗಕ್ಕೆ ‘ಏಕ್ ಲವ್ ಯಾ’ ಚಿತ್ರದ ಪ್ರಚಾರಕ್ಕೆ ಹೋಗಿ ಬಂದ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಶಿವಮೊಗ್ಗದಲ್ಲಿ ತಮ್ಮ ಹೊಸ ಚಿತ್ರ ಏಕ್ ಲವ್ ಯಾ ಸಾಂಗ್ ಇವೆಂಟ್ ವೇಳೆ ಮಾತನಾಡಿದ್ದ ರಚಿತಾ, ಡಿಸೆಂಬರ್31 ರಂದು ನನ್ನ ಸಿನಿಮಾ ಲವ್ ಯೂ ರಚ್ಚು ಬಿಡುಗಡೆಯಾಗುತ್ತಿದೆ. ಈ ಸಿನಿಮಾಕ್ಕಾಗಿ ನಮ್ಮ ನಿರ್ಮಾಪಕರು ತುಂಬ ಫೈಟ್ ಮಾಡುತ್ತಿದ್ದಾರೆ. ನಿರ್ಮಾಪಕರು ಒಂದು ಸಿನಿಮಾ ಮಾಡಲು ಎಲ್ಲೆಲ್ಲಿಂದಲೋ ದುಡ್ಡು ತಂದು ಕಷ್ಟ ಪಟ್ಟು ಇಷ್ಟ ಪಟ್ಟು ಸಿನಿಮಾ ಮಾಡಿರುತ್ತಾರೆ. ಆದರೆ ಈ ನಡುವೆ ನೈಟ್ ಕರ್ಫ್ಯೂ, ಬಂದ್ ಮಾಡುವುದರಿಂದ ತೊಂದರೆಯಾಗುತ್ತದೆ ಎಂದಿದ್ದರು. ಇದನ್ನೂ ಓದಿ: ನ್ಯೂ ಇಯರ್ ಸೆಲೆಬ್ರೆಷನ್‍ಗೆ ಮಾಲ್ಡೀವ್ಸ್‌ಗೆ ಹಾರಿದ ಬಾಲಿವುಡ್ ಲವ್​ ಬರ್ಡ್ಸ್

    ಒಂದು ಕಡೆ ನಮ್ಮ ರಾಜ್ಯಕೋಸ್ಕರ ಸಪೋರ್ಟ್ ಮಾಡುತ್ತಾ ನಿಲ್ಲಬೇಕಾಗುತ್ತದೆ. ಇನ್ನೊಂದು ಕಡೆ ಸಿನಿಮಾ. ಹೀಗಾಗಿ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲಲ್ಲ. ಒಂದು ಕಡೆ ನಮ್ಮ ಪ್ರೊಡ್ಯೂಸರ್, ಇನ್ನೊಂದು ಕಡೆ ನಮ್ಮ ರಾಜ್ಯ. ಸಪೋರ್ಟ್ ಎರಡು ಕಡೆಯೂ ಇರುತ್ತದೆ. ಆದರೆ ಹೆಚ್ಚು ಸಪೋರ್ಟ್ ನಮ್ಮ ರಾಜ್ಯಕೋಸ್ಕರ ಇರುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ: ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮೂಡ್‍ನಲ್ಲಿ ಸಮಂತಾ

  • ‘ಅಮರ್’ಗಾಗಿ ಕೊಡವ ಹಾಡಿಗೆ ಕುಣಿದ ದರ್ಶನ್-ರಚಿತಾ!

    ‘ಅಮರ್’ಗಾಗಿ ಕೊಡವ ಹಾಡಿಗೆ ಕುಣಿದ ದರ್ಶನ್-ರಚಿತಾ!

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಚಿತ್ರ ಅಮರ್. ಖುದ್ದು ಅಂಬರೀಶ್ ಅವರೇ ಮುಂದೆ ನಿಂತು, ಬಲು ಆಸ್ಥೆಯಿಂದ ಆರಂಭಿಸಿದ್ದ ಚಿತ್ರವಿದು. ಈಗ ಅಂಬಿ ಮರೆಯಾಗಿದ್ದರೂ ಅವರ ನೆನಪಿನ ನೆರಳಲ್ಲಿಯೇ ಅಚ್ಚುಕಟ್ಟಿನಿಂದ ಚಿತ್ರೀಕರಣ ಮುಗಿಸಿಕೊಳ್ಳುತ್ತಿರೋ ಅಮರ್ ಚಿತ್ರವೀಗ ಹಾಡುಗಳಿಂದ ಜನರನ್ನು ಸೆಳೆಯುತ್ತಿದೆ.

    ಈಗಾಗಲೇ ಈ ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿವೆ. ಅವೆಲ್ಲವೂ ಈಗ ಟ್ರೆಂಡ್ ಸೆಟ್ ಮಾಡಿವೆ. ಅದಾಗಲೇ ಮತ್ತೊಂದು ಹಾಡಿಗಾಗಿ ಚಿತ್ರತಂಡ ಭರ್ಜರಿಯಾಗೇ ಶ್ರಮ ಹಾಕಿದೆ. ವಿಶೇಷ ಅಂದ್ರೆ ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಚಿತಾ ರಾಮ್ ಒಟ್ಟಾಗಿ ಹೆಜ್ಜೆ ಹಾಕಿದ್ದಾರೆ. ಇವರಿಗೆ ನಿರೂಪ್ ಭಂಡಾರಿ ಕೂಡಾ ಸಾಥ್ ನೀಡಿದ್ದಾರೆ.

    ಇದು ಎಲ್ಲ ರೀತಿಯಲ್ಲಿಯೂ ಸ್ಪೆಷಲ್ ಸಾಂಗು. ಇದನ್ನು ಕಿರಣ್ ಕಾವೇರಪ್ಪ ಬರೆದಿದ್ದಾರೆ. ಈ ಹಾಡಿಗೆ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಧ್ವನಿಯಾಗಿದ್ದಾರೆ. ಬಹುಕಾಲದ ನಂತರ ಕೊಡವ ಭಾಷೆಯ ಹಾಡೊಂದು ಈ ಮೂಲಕ ಅಣಿಗೊಂಡಿದೆ. ಈ ಹಾಡನ್ನು ಕೊಡವರಿಗೆ ಅರ್ಪಿಸಲು ಚಿತ್ರತಂಡ ನಿರ್ಧರಿಸಿದೆಯಂತೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಮರ್ ಚಿತ್ರದಲ್ಲಿ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದ್ದಾರೆಂಬ ಬಗ್ಗೆ ಸುದ್ದಿಯಾಗಿತ್ತು. ಈ ಕಾರಣದಿಂದಲೇ ಅಮರ್ ಬಗ್ಗೆ ದರ್ಶನ್ ಅಭಿಮಾನಿಗಳೂ ಆಕರ್ಷಿತರಾಗಿದ್ದರು. ಆದರೆ ದರ್ಶನ್ ಹಾಡೊಂದರಲ್ಲಿಯೂ ನಟಿಸಿದ್ದಾರೆಂಬ ವಿಚಾರ ಅಭಿಮಾನಿಗಳ ಪಾಪಿಗೆ ಡಬಲ್ ಸಂಭ್ರಮವನ್ನು ಕೊಡಮಾಡಿದೆ.

    ಅಂಬರೀಶ್ ಅವರು ನಂಬಿಕೆಯಿಟ್ಟು ಈ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ನಾಗಶೇಖರ್ ಅವರಿಗೆ ವಹಿಸಿದ್ದರು. ಆ ಜವಾಬ್ದಾರಿಯನ್ನು ಗಂಭೀರವಾಗಿಯೇ ವಹಿಸಿಕೊಂಡಿರೋ ನಾಗಶೇಖರ್ ಅಂಬರೀಶ್ ಅವರ ಅನುಪಸ್ಥಿತಿಯಲ್ಲಿ ಅಮರ್ ನನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಶ್ರಮಿಸುತ್ತಿದ್ದಾರೆ. ಅದರ ಭಾಗವಾಗಿಯೇ ಈ ವಿಶೇಷ ಹಾಡು ರೆಡಿಯಾಗಿದೆ.

  • ಬ್ಯಾಟ್ ಹಿಡಿದು ಕ್ರಿಕೆಟ್ ಪೀಲ್ಡ್ ಗೆ ಎಂಟ್ರಿ ಕೊಟ್ಟ ಗುಳಿಕೆನ್ನೆ ಬೆಡಗಿ- ವಿಡಿಯೋ ವೈರಲ್

    ಬ್ಯಾಟ್ ಹಿಡಿದು ಕ್ರಿಕೆಟ್ ಪೀಲ್ಡ್ ಗೆ ಎಂಟ್ರಿ ಕೊಟ್ಟ ಗುಳಿಕೆನ್ನೆ ಬೆಡಗಿ- ವಿಡಿಯೋ ವೈರಲ್

    ಬೆಂಗಳೂರು: ಸಾಂಡಲ್‍ವುಡ್‍ನಲ್ಲಿ ಡಿಂಪಲ್ ಕ್ವೀನ್ ಎಂದೇ ಹೆಸರುವಾಸಿಯಾದ ರಚಿತಾ ರಾಮ್ ಅವರು ಬ್ಯಾಟ್ ಹಿಡಿದು ಮೈದಾನದಲ್ಲಿ ಕ್ರಿಕೆಟ್ ಆಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸ್ಯಾಂಡಲ್‍ವುಡ್‍ನಲ್ಲಿ ಈಗಾಗಲೇ ಹಲವು ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ರಚಿತರಾಮ್ ಅವರು ಯಾವ ತಂಡದ ಪರವಾಗಿ ಆಡಲಿದ್ದಾರೆ ಎಂಬ ಗೊಂದಲ ಇದೀಗ ಅಭಿಮಾನಿಗಳಲ್ಲಿ ಉಂಟಾಗಬಹುದು. ಆದ್ರೆ ಇದರ ಅಸಲಿ ಕಹಾನಿಯೇ ಬೇರೆ ಇದೆ.

    https://www.instagram.com/p/BmA-38qAwvP/?taken-by=rachita_ram

    ಹೌದು. ಸೂಪರ್ ಸ್ಟಾರ್ ಉಪೇಂದ್ರರವರು ಅಭಿನಯಿಸುತ್ತಿರುವ ಐ ಲವ್ ಯೂ ಸಿನಿಮಾದಲ್ಲಿ ರಚಿತಾರಾಮ್ ನಟಿಯಾಗಿ ಅಭಿನಯಿಸುತ್ತಿದ್ದು, ಚಿತ್ರಿಕರಣದ ವೇಳೆ ಸಿನಿಮಾ ಸೆಟ್‍ನಲ್ಲೆ ಮೈದಾನಕ್ಕಿಳಿದು 4-5 ಎಸೆತಗಳಿಗೆ ಬ್ಯಾಟ್ ಬೀಸಿದ್ದಾರೆ. ನಟಿ ಜೊತೆಗೆ ಉಪೇಂದ್ರರವರು ಕೂಡ ಸಾಥ್ ನೀಡಿದ್ದಾರೆ.

    ರಚಿತಾರಾಮ್ ಕ್ರಿಕೆಟ್ ಆಡುತ್ತಿರುವ ಫೋಟೋಗಳು ಮತ್ತು ವಿಡಿಯೋವನ್ನು ಇನ್ಸ್ ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ತುಂಬಾ ದಿನಗಳ ನಂತರ ಕ್ರಿಕೆಟ್ ಆಡಿದ್ದೇನೆ. ಇದರಿಂದಾಗಿ ನನ್ನ ಬ್ಯಾಲದ ನೆನಪುಗಳು ಮರುಕಳಿಸುತ್ತಿವೆ. ನನಗೆ ತುಂಬಾ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ನಟಿಯ ಫೋಟೋಗಳಿಗೆ ಅಭಿಮಾನಿಗಳು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ಸದ್ಯ ರಚಿತರಾಮ್ ಆರ್ ಚಂದ್ರುರವರು ನಿರ್ದೇಶಿಸುತ್ತಿರುವ ಐ ಲವ್ ಯೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಅದರಲ್ಲಿ ಉಪೇಂದ್ರ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ.

    https://www.instagram.com/p/BmAbOBSA127/?taken-by=rachita_ram