Tag: Rachita Ram

  • ಮಗನ ಶೂಟಿಂಗ್ ಸೆಟ್ ಗೆ ಎಚ್.ಡಿ.ಕುಮಾರಸ್ವಾಮಿ ದಿಢೀರ್ ಭೇಟಿ

    ಮಗನ ಶೂಟಿಂಗ್ ಸೆಟ್ ಗೆ ಎಚ್.ಡಿ.ಕುಮಾರಸ್ವಾಮಿ ದಿಢೀರ್ ಭೇಟಿ

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ರಾಜಕೀಯದ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಮಗ ನಿಖಿಲ್ ಕುಮಾರಸ್ವಾಮಿ ಅವರ ಶೂಟಿಂಗ್ ನೋಡಲು ಹೋಗಿದ್ದರು.

    ನಟ ನಿಖಿಲ್ ಕುಮಾರ್ ಅಭಿನಯದ `ಸೀತಾರಾಮ ಕಲ್ಯಾಣ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ಸೆಟ್ ಗೆ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ದಂಪತಿ ಇಬ್ಬರು ಹೋಗಿದ್ದಾರೆ. ಅಲ್ಲಿ ಸ್ವಲ್ಪ ಸಮಯ ಕಾಲ ಕಳೆದು ಮಗ ನಿಖಿಲ್ ನಟನೆಯನ್ನು ನೋಡಿದ್ದಾರೆ.

    ಮಗನ ಅಭಿನಯ ನೋಡಿ ಕುಮಾರಸ್ವಾಮಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರೀಕರಣದಲ್ಲಿದ್ದ ನಟಿ ರಚಿತಾ ರಾಮ್, ನಿರ್ದೇಶಕ ಎ.ಹರ್ಷ ಸೇರಿದಂತೆ ಅನೇಕರು ಸಿಎಂ ಕುಮಾರಸ್ವಾಮಿ ದಂಪತಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ತನ್ನ ರಾಜಕೀಯ ಜೀವನದಲ್ಲಿ ಎಷ್ಟೇ ಒತ್ತಡದ ಕೆಲಸವಿದ್ದರೂ ಮಗನ ಸಿನಿಮಾದ ಬಗ್ಗೆ ಕೂಡ ಕಾಳಜಿ ವಹಿಸಿದ್ದಾರೆ. ಈ ಹಿಂದೆ ಕೂಡ `ಜಾಗ್ವಾರ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದಾಗ ಹತ್ತಿರದಿಂದ ಇದ್ದು ಎಲ್ಲವನ್ನು ಗಮನಿಸಿದ್ದರು.

    `ಸೀತಾರಾಮ ಕಲ್ಯಾಣ’ ಸಿನಿಮಾ ಕುಮಾರಸ್ವಾಮಿ ಅವರ ಚಿನ್ನಾಂಬಿಕಾ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ನಿಖಿಲ್ `ಜಾಗ್ವಾರ್’ ನಂತರ ನಿರ್ದೇಶಕ ಮುನ್ನಿರತ್ನ ಅವರ `ಕುರುಕ್ಷೇತ್ರ’ ಸಿನಿಮಾದಲ್ಲಿ ಅಭಿಮನ್ಯುವಿನ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಎ.ಹರ್ಷ ಅವರ ನಿರ್ದೇಶನದ `ಸೀತಾರಾಮ ಕಲ್ಯಾಣ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಚಿತ್ರೀಕರಣ ಮೈಸೂರಿನಲ್ಲಿ ಮುಕ್ತಾಯಗೊಂಡಿದ್ದು, ಈಗ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ.

  • ರಚಿತಾ ‘ನಟಸಾರ್ವಭೌಮ’ ಹೀರೋಯಿನ್ – ಚಿತ್ರದ ಶೇ.45ರಷ್ಟು ಶೂಟಿಂಗ್ ಕಂಪ್ಲೀಟ್

    ರಚಿತಾ ‘ನಟಸಾರ್ವಭೌಮ’ ಹೀರೋಯಿನ್ – ಚಿತ್ರದ ಶೇ.45ರಷ್ಟು ಶೂಟಿಂಗ್ ಕಂಪ್ಲೀಟ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರ ನಟಸಾರ್ವಭೌಮದಲ್ಲಿ ರಚಿತಾರಾಮ್ ಅವರೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ರಚಿತಾ ರಾಮ್ ಅಭಿನಯದ ಶೂಟಿಂಗ್ ಬಹುಪಾಲು ಮುಗಿದಿದೆ. ಇನ್ನೂ ವಿಶೇಷ ಏನಪ್ಪಾ ಅಂದ್ರೆ ರಚಿತಾ ರಾಮ್ ಜೊತೆ ಈ ಚಿತ್ರದಲ್ಲಿ ಇನ್ನೊಬ್ಬರು ನಾಯಕಿಯೂ ಇದ್ದಾರಂತೆ. ಈ ಹೀರೋಯಿನ್ ಹೆಸರು ಫೈನಲ್ ಆಗಿದೆಯಂತೆ. ಆದರೆ ಚಿತ್ರತಂಡ ಈ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಈಗಾಗಲೇ ಚಿತ್ರದ ಶೇ.45ರಷ್ಟು ಭಾಗದ ಶೂಟಿಂಗ್ ಮುಗಿದಿದೆ.

    ನಟ ಸಾರ್ವಭೌಮ ಚಿತ್ರದಲ್ಲಿ ಇನ್ನು ರಚಿತಾ ರಾಮ್ ಅಭಿನಯದ ಕೆಲವೇ ಸೀನ್ ಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಕಳೆದ ವಾರವಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಟಸಾರ್ವಭೌಮ ಚಿತ್ರದ ಶೂಟಿಂಗ್ ಬಳ್ಳಾರಿಯಲ್ಲಿ ನಡೆದಿತ್ತು. ತೋರಣಗಲ್ ನಲ್ಲಿರುವ ಜಿಂದಾಲ್ ಏರ್‍ಪೋರ್ಟ್‍ನಲ್ಲಿ ಚಿತ್ರದ ಚಿತ್ರೀಕರಣ ನಡೆದಿತ್ತು.

    ಬಳ್ಳಾರಿಯಲ್ಲಿ ಶೂಟಿಂಗ್ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪುನೀತ್ ರಾಜ್‍ಕುಮಾರ್, ಬಳ್ಳಾರಿ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆಯಾಗುತ್ತದೆ. ರಣವಿಕ್ರಮ, ದೊಡ್ಮನೆ ಹುಡುಗದ ಚಿತ್ರೀಕರಣವೂ ಇಲ್ಲೇ ನಡೆಯಿತು. ನಟ ಸಾರ್ವಭೌಮದ ಚಿತ್ರದ ಬಗ್ಗೆ ನಾನು ಈಗಲೂ ಏನೂ ಮಾತನಾಡಲ್ಲ. ಸಿನೆಮಾ ಬಂದ ಮೇಲೆ ಸಿನೆಮಾ ಮಾತನಾಡುತ್ತೆ ಎಂದರು. ಈಗಾಗಲೇ ಚಿತ್ರದ ಶೇ.45ರಷ್ಟು ಭಾಗದ ಶೂಟಿಂಗ್ ಮಗಿದಿದೆ. ರಿಲೀಸ್ ದಿನಾಂಕವನ್ನು ನಿರ್ದೇಶಕರು, ನಿರ್ಮಾಪಕರು ನಿರ್ಧರಿಸುತ್ತಾರೆ ಎಂದು ಹೇಳಿದರು. ನಟ ಸಾರ್ವಭೌಮ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ.

  • ರಾತ್ರೋರಾತ್ರಿ ಬಂತು 1 ಕಾಲ್ – `ನಟ ಸಾರ್ವಭೌಮ’ ನಿಗೆ ಡಿಂಪಲ್ ಕ್ವೀನ್ ಗ್ರೀನ್ ಸಿಗ್ನಲ್!

    ರಾತ್ರೋರಾತ್ರಿ ಬಂತು 1 ಕಾಲ್ – `ನಟ ಸಾರ್ವಭೌಮ’ ನಿಗೆ ಡಿಂಪಲ್ ಕ್ವೀನ್ ಗ್ರೀನ್ ಸಿಗ್ನಲ್!

    ಬೆಂಗಳೂರು: ದರ್ಶನ್, ಸುದೀಪ್, ಪುನೀತ್, ಮತ್ತು ಶ್ರೀಮುರಳಿ ನಾಯಕರ ಜೊತೆ ಅಭಿನಯಿಸಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಮತ್ತೊಮ್ಮ ಪುನೀತ್ ರಾಜ್‍ಕುಮಾರ್ ಜೊತೆ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡುತ್ತಿರುವ `ನಟ ಸಾರ್ವಭೌಮ’ ಸಿನಿಮಾದ ನಾಯಕಿ ಪಾತ್ರಕ್ಕೆ ಮಹಾರಾಷ್ಟ್ರದ ಹುಡುಗಿ ಪ್ರಿಯಾಂಕಾ ಜ್ವಾಲಕರ್ ಆಯ್ಕೆಯಾಗಿದ್ದರು. ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಪ್ರಿಯಾಂಕಾರನ್ನ ಚಿತ್ರತಂಡ ಕೈಬಿಟ್ಟಿತ್ತು. ಆದರೆ ಈಗ `ನಟ ಸಾರ್ವಭೌಮ’ ಸಿನಿಮಾಗೆ ರಚಿತಾ ರಾಮ್ ಆಯ್ಕೆಯಾಗಿದ್ದಾರೆ.

    `ನಟ ಸಾರ್ವಭೌಮ’ ಸಿನಿಮಾದ ಮುಹೂರ್ತ ಮುಗಿದ ಮೇಲೆ ಮಾರನೇ ದಿನ ರಾತ್ರೋರಾತ್ರಿ ಬಂದ ಒಂದೇ ಒಂದು ಫೋನ್ ಕಾಲ್ ಸಿನಿಮಾಗಾಗಿ ರಚಿತಾ ರಾಮ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಾತ್ರಿ ಸುಮಾರು 10.30 ಕ್ಕೆ ರಾಕ್‍ಲೈನ್ ವೆಂಕಟೇಶ್ ಅವರು ರಚಿತಾ ರಾಮ್ ಗೆ ಫೋನ್ ಮಾಡಿ ಚಿತ್ರದ ಆಫರ್ ಕೊಟ್ಟಿದ್ದಾರೆ. ನಂತರ ರಚಿತಾ ರಾಮ್ ಕೂಡಲೇ ಒಪ್ಪಿಗೆ ಸೂಚಿಸಿದ್ದಾರೆ.

    ಈಗಾಗಲೇ ರಚಿತಾ ರಾಮ್ `ಬುಲ್ ಬುಲ್’, `ಅಂಬರೀಶ’, `ರನ್ನ’, `ರಥಾವರ’ ಮತ್ತು `ಭರ್ಜರಿ’ ಅಂತಹ ಸಾಲು ಸಾಲು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಸದ್ಯಕ್ಕೆ ನೀನಾಸಂ ಸತೀಸ್ ಅಭಿನಯದ `ಅಯೋಗ್ಯ’, `ಉಪ್ಪಿ ರುಪಿ’ ಮತ್ತು `ಸೀತಾ ರಾಮ ಕಲ್ಯಾಣ’ ಸಿನಿಮಾಗಳ ಜೊತೆಗೆ `ನಟ ಸಾರ್ವಭೌಮ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ಟ್ರೋಲ್ ಮಾಡಿದವರಿಗೆ ಫೋಟೋ ಮೂಲಕ ಉತ್ತರ ಕೊಟ್ಟ ರಚಿತಾ ರಾಮ್!

    ಟ್ರೋಲ್ ಮಾಡಿದವರಿಗೆ ಫೋಟೋ ಮೂಲಕ ಉತ್ತರ ಕೊಟ್ಟ ರಚಿತಾ ರಾಮ್!

    ಬೆಂಗಳೂರು: ಕಾಲೆಳೆಯೋರ ಮಧ್ಯೆ ಮಾತನಾಡಿದರೆ ಆಡಿಕೊಳ್ಳೋರು ಇನ್ನೂ ಜಾಸ್ತಿಯಾಗ್ತಾರೆ ಎಂಬ ನೀತಿಯನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಅನುಸರಿಸುತ್ತಾರೆ. “ರಚಿತಾ ಹಠಾವೋ” ಆಂದೋಲನಕ್ಕೆ ಮಾತಿನ ಮೂಲಕವಲ್ಲ ಫೋಟೋ ಮೂಲಕ ರಚಿತಾ ಉತ್ತರ ಕೊಟ್ಟಿದ್ದಾರೆ.

    ರಚಿತಾ ರಾಮ್ ಕಾಲೆಳೆದು ಟ್ರೋಲ್ ಮಾಡೋ ಮಂದಿಗೆ ಏನೂ ಹೇಳದೆ ಸುಮ್ಮನಿರುತ್ತಿದ್ದರು. ನಂತರ ರಚಿತಾ `ನಟಸಾರ್ವಭೌಮ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ “ರಚಿತಾ ಹಠಾವೋ” ಆಂದೋಲನವೇ ಶುರುವಾಗಿತ್ತು. ಕಾಲೆಳೆಯೋರ ಮಧ್ಯೆ ಬೆಳೆದು ನಿಲ್ಲುತ್ತೀನಿ ಎಂದು ರಚಿತಾ ತನ್ನ ಪಾಡಿಗೆ ಶೂಟಿಂಗ್ ಹೋಗಿ ಈಗ ಕಾಲೆಳೆದೋರಿಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ.

    ಚಕ್ರವ್ಯೂಹ ಸಿನಿಮಾದ ನಂತರ ರಚಿತಾ ಹಾಗೂ ಪುನೀತ್ ನಟಸಾರ್ವಭೌಮದಲ್ಲಿ ಮತ್ತೆ ಜೋಡಿಯಾಗುತ್ತಿದ್ದಾರೆ. ಹೀಗಾಗಿ ಪುನೀತ್ ಪರಿಚಯ, ಸ್ನೇಹ ರಚಿತಾಗೆ ಹೊಸತೇನಲ್ಲ. ಆದರೆ ಪುನೀತ್ ಅಭಿಮಾನಿ ಬಳಗದ ಹೆಸರಲ್ಲಿ ಅನೇಕ ಅಭಿಮಾನಿಗಳು ಮತ್ತೆ ನಮ್ಮ ಅಪ್ಪು ಜೊತೆ ನಟಿಸಬೇಡಿ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಹರಿದು ಬಿಡುತ್ತಿದ್ದಾರೆ. ಕಾರಣ ಇಲ್ಲದೆ ಕಾಲೆಳೆದ ಆ ಅಭಿಮಾನಿಗಳಿಗೆ ರಚಿತಾ ಟಾಂಗ್ ನೀಡಿದ್ದಾರೆ.

    ಚಿತ್ರತಂಡ ಹಾಗೂ ಪುನೀತ್ ಅವರೇ ನನ್ನನ್ನು ಬೇಡ ಅಂದಿಲ್ಲ. ರಿಯಲ್ ಫ್ಯಾನ್ಸ್ ಗಳೂ ಬೇಡ ಎನ್ನುವುದಿಲ್ಲ. ಫೇಕ್ ಫ್ಯಾನ್ಸ್ ಗಳು ಮಾತ್ರ ಈ ರೀತಿ ಮಾಡುತ್ತಿರೋದು ಎಂದು ರಚಿತಾ ರಾಮ್ ಪುನೀತ್ ಮತ್ತು ತಾನು ಅದೆಷ್ಟು ಕ್ಲೋಸ್ ಫ್ರೆಂಡ್ಸ್ ಎನ್ನುವುದನ್ನು ಒಂದೇ ಒಂದು ಸೆಲ್ಫಿ ಮೂಲಕ ತೋರಿಸಿ ಉತ್ತರಿಸಿದ್ದಾರೆ.

    ನಟಸಾರ್ವಭೌಮ ಚಿತ್ರದ ಶೂಟಿಂಗ್ ವೇಳೆ ತೆಗೆದ ಫೋಟೋ ಇನ್ಯಾರೊ ತೆಗೆದ ಫೋಟೋ ಅಲ್ಲ, ಇದು ಉದ್ದೇಶಪೂರ್ವಕವಾಗಿ ತೆಗೆದ ಸೆಲ್ಫಿ ಫೋಟೋ ಎಂದು ಹೇಳಲಾಗಿದೆ. ಇಲ್ಲಿ ನಿರ್ದೇಶಕ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಮತ್ತು ರಚಿತಾ ಕಾಣಿಸುತ್ತಿದ್ದಾರೆ. ಆದರೆ ರಚಿತಾ ರಾಮ್ ಪುನೀತ್ ಹೆಗಲ ಮೇಲೆ ಕೈ ಹಾಕಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದವರಿಗೆ ಟಾಂಗ್ ಕೊಡೋಕೆ ಕ್ಲಿಕ್ ಮಾಡಿದಂತಿದೆ ಎಂದು ಹೇಳಲಾಗ್ತಿದೆ.

  • ರಚಿತಾ ರಾಮ್ ಜೊತೆ ಲಿಪ್ ಲಾಕ್ ಮಾಡಬೇಕೆಂದ ಸ್ಯಾಂಡಲ್‍ ವುಡ್ ನಟ

    ರಚಿತಾ ರಾಮ್ ಜೊತೆ ಲಿಪ್ ಲಾಕ್ ಮಾಡಬೇಕೆಂದ ಸ್ಯಾಂಡಲ್‍ ವುಡ್ ನಟ

    ಬೆಂಗಳೂರು: ಸಿನಿಮಾ ಅಂದಮೇಲೆ ಕಿಸ್ಸಿಂಗ್ ದೃಶ್ಯಗಳು ಸಾಮಾನ್ಯ. ಹಾಗೇ ಗುಳಿಕೆನ್ನೆ ಬೆಡಗಿ ನಟಿ ರಚಿತಾ ರಾಮ್ ಜೊತೆ ಲಿಪ್‍ಲಾಕ್ ಮಾಡುತ್ತೀನಿ ಎಂದು ಸ್ಯಾಂಡಲ್ ವುಡ್ ನಟರೊಬ್ಬರು ಹೇಳಿದ್ದಾರೆ.

    ರಚಿತಾ ರಾಮ್ ಸ್ಯಾಂಡಲ್‍ ವುಡ್‍ನ ಟಾಪ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡು ಯಶಸ್ವಿಯಾಗಿದ್ದಾರೆ. ಈಗ ಇವರಿಗೆ ಥೇಟರ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ `ಟಗರು’ ಸಿನಿಮಾದ ಡಾಲಿ ಅಲಿಯಾಸ್ ಧನಂಜಯ್ ಅವರು ಲಿಪ್ ಲಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ‘ನಂ 1 ಯಾರಿ’ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ‘ಟಗರು’ ಸಿನಿಮಾದಲ್ಲಿ ನಟಿಸಿದ್ದ ಧನಂಜಯ್, ವಸಿಷ್ಠ ಮತ್ತು ಮಾನ್ವಿತಾ ಹರೀಶ್ ಬಂದಿದ್ದರು. ಈ ವೇಳೆ ಟಗರು ಶಿವ ಶಿವರಾಜ್ ಕುಮಾರ್ ಕೇಳಿರುವ ತರ್ಲೆ ಪ್ರಶ್ನೆಗಳಿಗೆ ಡಾಲಿ, ಚಿಟ್ಟೆ ಉತ್ತರ ನೀಡಿದ್ದಾರೆ. ಅದರಲ್ಲಿಯೂ ಲಿಪ್ ಲಾಕ್ ದೃಶ್ಯದ ಬಗ್ಗೆ ಧನಂಜಯ್ ಯಾವುದೇ ಮುಜುಗರ, ಸಂಕೋಚ ಇಲ್ಲದೆ ಮಾತನಾಡಿದ್ದಾರೆ.

    ಕಾರ್ಯಕ್ರಮದ ಕೊನೆಯ ಸುತ್ತಿನಲ್ಲಿ ಶಿವಣ್ಣ `ಆನ್ ಸ್ಕ್ರೀನ್ ನಲ್ಲಿ ನಿಮಗೆ ಯಾರ ಜೊತೆಗೆ ಲಿಪ್ ಲಾಕ್ ಮಾಡಬೇಕು ಅಂತ ಆಸೆ ಇದೆ?’ ಎಂದು ಧನಂಜಯ್ ಗೆ ಪ್ರಶ್ನೆ ಕೇಳಿದ್ದಾರೆ. ಆಗ ಧನಂಜಯ್ ದೀಪಿಕಾ ಪಡುಕೋಣೆ ಎಂದು ಹೇಳಿದ್ದರು. ಮತ್ತೆ ಶಿವಣ್ಣ ‘ಓಕೆ ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ, ಆದರೆ ಕನ್ನಡದಲ್ಲಿ ಯಾರು?” ಎಂದು ಕೇಳಿದರು. ಆಗ ಧನಂಜಯ್ ರಚಿತಾ ರಾಮ್ ಅವರ ಹೆಸರನ್ನು ಹೇಳಿದ್ದಾರೆ.

  • ತೆರೆ ಮೇಲೆ ಮತ್ತೆ ಒಂದಾಗಲಿದ್ದಾರಾ ಬುಲ್ ಬುಲ್ ಜೋಡಿ?

    ತೆರೆ ಮೇಲೆ ಮತ್ತೆ ಒಂದಾಗಲಿದ್ದಾರಾ ಬುಲ್ ಬುಲ್ ಜೋಡಿ?

    ಬೆಂಗಳೂರು: ಸ್ಯಾಂಡಲ್‍ವುಡ್ ನ `ಬುಲ್ ಬುಲ್’ ಸಿನಿಮಾದಲ್ಲಿ ಮೋಡಿ ಮಾಡಿದ ಜೋಡಿಗಳು ಮತ್ತೆ ತೆರೆ ಮೇಲೆ ಒಂದಾಗುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಸಿನಿರಸಿಕರ ಮನಸ್ಸು ಕದ್ದಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ಸಿನಿಮಾದಲ್ಲಿಯೇ ಸ್ಟಾರ್ ನಟರ ಜೊತೆ ಅಭಿನಯಿಸಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. `ಬುಲ್ ಬುಲ್’, `ಅಂಬರೀಶ’, `ಜಗ್ಗುದಾದ’ ಚಿತ್ರಗಳಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ ರನ್ನ ಸಿನಿಮಾದಲ್ಲಿ ಕಿಚ್ಚನ ಜೊತೆ ಅಭಿನಯಿಸಿದ್ದಾರೆ.

    ದರ್ಶನ್ ಹಾಗೂ ರಚಿತಾ ಎರಡು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿದ್ದರು. ಅಭಿಮಾನಿಗಳು ಕೂಡ ಇವರಿಬ್ಬರ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಈಗ ಅದೇ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಲು ಸಜ್ಜಾಗಿದೆ.

    ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ರಚಿತಾ ಅವರನ್ನೇ ನಾಯಕಿಯಾಗಿ ಚಿತ್ರತಂಡ ಆಯ್ಕೆ ಮಾಡಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹಬ್ಬಿದೆ. ಆದ್ದರಿಂದ ತೆರೆ ಮೇಲೆ ಮತ್ತೆ ದಚ್ಚು-ರಚ್ಚು ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    `ಕುರುಕ್ಷೇತ್ರ’ ದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಇನ್ನು ಕೆಲವು ದಿನಗಳಲ್ಲಿ ಮುನಿರತ್ನ ಚಿತ್ರತಂಡ ಶೂಟಿಂಗ್ ಮುಗಿಸಲಿದ್ದಾರೆ. ನಂತರ ಡಿಸೆಂಬರ್ ಪ್ರಾರಂಭದಲ್ಲಿಯೇ ದರ್ಶನ್‍ನ 51 ನೇ ಚಿತ್ರ ಸೆಟ್ಟೇರಲಿದೆ. ದರ್ಶನ್ ನ 51ನೇ ಚಿತ್ರವನ್ನು ಪಿ.ಕುಮಾರ್ ನಿರ್ದೇಶನ ಮಾಡಲಿದ್ದು, ಪಕ್ಕಾ ಕಮರ್ಶಿಯಲ್ ಸಿನಿಮಾವಾಗಿದೆ. ಈಗಾಗಲೇ `ಜೈಲಲಿತಾ’, `ವಿಷ್ಣುವರ್ಧನ’ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ಪಿ.ಕುಮಾರ್ ದರ್ಶನ್ ಗಾಗಿ ಕಮರ್ಶಿಯಲ್ ಸಿನಿಮಾದ ತಯಾರಿ ಮಾಡಿಕೊಂಡಿದ್ದಾರೆ.

    ಆದರೆ ನಿರ್ಮಾಪಕರು ಮಾತ್ರ ಸಿನಿಮಾದ “ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ನಾಯಕಿ ಆಯ್ಕೆ ಕೆಲಸ ನಡೆಯುತ್ತಿದೆ, ಇನ್ನೂ ಫೈನಲ್ ಮಾಡಿಲ್ಲ” ಎಂದು ಹೇಳಿದ್ದಾರೆ. ಆದರೆ ಅಭಿಮಾನಿಗಳಿಗೆ ಮತ್ತೆ ಈ ಜೋಡಿ ಜೊತೆಯಾಗಿ ತೆರೆ ಮೇಲೆ ಬಂದರೆ ಸಂತಸವಾಗುವುದು ಖಂಡಿತ.

  • ಬಿಕಿನಿ ಬಗ್ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಖಡಕ್ ಮಾತು

    ಬಿಕಿನಿ ಬಗ್ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಖಡಕ್ ಮಾತು

    ಬೆಂಗಳೂರು: ಸ್ಯಾಂಡಲ್ ವುಡ್‍ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಬಿಕಿನಿ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ.

    ಸದ್ಯಕ್ಕೆ ಅವರು ನಟ ದುನಿಯಾ ವಿಜಯ್ ಜೊತೆ ಅಭಿನಯಿಸುತ್ತಿರುವ `ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯ ಪಾತ್ರವನ್ನು ಮಾಡುತ್ತಿದ್ದು, ಎನ್ ಆರ್ ಐ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೇ ಅಭಿನಯಿಸಿರುವ ಸಿನಿಮಾಗಳಿಗಿಂತ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಂಡೋ-ವೆಸ್ಟ್ರನ್ ಶೈಲಿಯಲ್ಲಿ ವಿನ್ಯಾಸಗೊಳಿಸಿರುವ ಕೆಂಪು ಬಣ್ಣದ ಸೀರೆಯನ್ನು ತೊಟ್ಟು ಗ್ಲಾಮರಸ್ ಆಗಿ ಮಿಂಚಲಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಿದ್ದಾಗ, ನಾನು ಅಭಿನಯಿಸುತ್ತಿರುವ ಎನ್ ಆರ್ ಐ ಪಾತ್ರಕ್ಕೆ ಹೆಚ್ಚಿನ ಪಾಶ್ಚಾತ್ಯ ಲುಕ್ ಅಗತ್ಯವಿದೆ. ನನ್ನ ಡೈಲಾಗ್ ಗಳೂ ಸಹ ಬಹುತೇಕ ಕಂಗ್ಲಿಷ್ ನಲ್ಲಿಯೇ ಇರುತ್ತವೆ. ಆದ್ದರಿಂದ ಇದರ ಬಗ್ಗೆ ಚಿತ್ರ ತಂಡ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ಗ್ಲಾಮರ್ ಬಗ್ಗೆ ಕೂಡ ಮಾತನಾಡಿದ್ದು, ಅವರನ್ನು ಗ್ಲಾಮರ್ ಕ್ವೀನ್ ಎಂದು ಕರೆಯುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದು, ನಂತರ ಬಿಕಿನಿ ತೊಡುವುದರಿಂದ ಮಾತ್ರ ಗ್ಲಾಮರ್ ಆಗಿ ಕಾಣಿಸುವುದು ಎಂಬ ಮಾತನ್ನು ನಿರಾಕರಿಸಿದ್ದಾರೆ. ಬಿಕಿನಿ ತೊಟ್ಟು ಎಕ್ಸ್ ಪೋಸ್ ಮಾಡುವುದೇ ಗ್ಲಾಮರ್ ನ ವ್ಯಾಖ್ಯಾನ ಎನ್ನುವುದನ್ನು ನಾನು ಒಪ್ಪುವುದಿಲ್ಲ. ನನ್ನ ಪ್ರಕಾರ ಗ್ಲಾಮರ್ ಎಂದರೆ ಸೌಂದರ್ಯ ಹಾಗೂ ಸಮಾಧಾನಕರವಾಗಿರುವುದು ಎಂದರು. ಅಷ್ಟೇ ಅಲ್ಲದೇ ಬಿಕಿನಿಯನ್ನು ಧರಿಸದೆ ಇದ್ದರೂ ಕೂಡ ಗ್ಲಾಮರಸ್ ಆಗಿ ಕಾಣಬಹುದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ಪ್ರೀತಮ್ ಗುಬ್ಬಿ ನಿರ್ದೇಶನದಿಂದ ಮೂಡಿ ಬರುತ್ತಿರುವ `ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾ `ಜಾನಿ’ ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ದುನಿಯಾ ವಿಜಯ್, ರಂಗಾಯಣ ರಘು ಅವರು ಕೂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ಮಂಡ್ಯಕ್ಕೆ ನಟಿ ರಚಿತಾ ರಾಮ್ – ನೋಡಲು ಮುಗಿಬಿದ್ದ ಮಂಡ್ಯ ಜನತೆ

    ಮಂಡ್ಯಕ್ಕೆ ನಟಿ ರಚಿತಾ ರಾಮ್ – ನೋಡಲು ಮುಗಿಬಿದ್ದ ಮಂಡ್ಯ ಜನತೆ

    ಮಂಡ್ಯ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ 19 ನೇ ಶೋರೂಂ ಅನ್ನು ಮಂಡ್ಯದಲ್ಲಿ ಚಿತ್ರ ನಟಿ ರಚಿತಾ ರಾಮ್ ಭರ್ಜರಿಯಾಗಿ ಉದ್ಘಾಟನೆ ಮಾಡಿದ್ದಾರೆ.

    ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಕೆವಿಎಸ್ ಕಮರ್ಷಿಯಲ್ ಕಾಂಪ್ಲೆಕ್ಸ್‍ನಲ್ಲಿ ಶೋರೂಂ ಅನ್ನು ರಚಿತಾ ಉದ್ಘಾಟನೆ ಮಾಡಿದ್ದು, ಈ ಶೋರೂಂ ಕರ್ನಾಟಕದಲ್ಲಿ ಉದ್ಘಾಟನೆಯಾಗುತ್ತಿರುವ 19 ನೇ ಶೋರೂಂ ಆಗಿದೆ.

    ಮಂಡ್ಯಕ್ಕೆ ಆಗಮಿಸಿದ ರಚಿತಾ ಅವರನ್ನು ನೋಡಲು ಮಂಡ್ಯ ಜನರು ಮುಗಿಬಿದ್ದರು. ಅಭಿಮಾನಿಗಳಿಗಾಗಿ ಅವರು ಹಾಡನ್ನು ಹಾಡಿ ರಂಜಿಸಿದ್ದಾರೆ. ಈ ವೇಳೆ ಡ್ಯಾನ್ಸ್ ಮಾಡುವಂತೆ ಅವರನ್ನು ಅಭಿಮಾನಿಗಳು ಒತ್ತಾಯಿಸಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೆ ಮಂಡ್ಯಕ್ಕೆ ಬರಲು ತುಂಬಾ ಖುಷಿಯಾಗಿದೆ. ನಾನು ಗೌಡ್ರು ಆಗಿರುವುದರಿಂದ ಎಲ್ಲರೂ ನನ್ನನ್ನು ಹಾಸನ ಅಥವಾ ಮಂಡ್ಯದವರು ಅಂದುಕೊಳ್ಳುತ್ತಾರೆ. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅವರು ನೂರನೇ ಶೋರೂಂ ತೆರೆಯಲಿ ಎಂದು ಹಾರೈಸುತ್ತೇನೆ ಎಂದು ಮಾತನಾಡಿದರು.

    ಇನ್ನೂ ಉದ್ಘಾಟನೆ ನಂತರ ಮಂಡ್ಯ ಸಾರ್ವಜನಿಕರು ಶೋ ರೂಂ ಒಳಗೆ ಬಂದು ಚಿನ್ನ ವೀಕ್ಷಿಸಿ ಖುಷಿ ಪಟ್ಟರು. ಜೊತೆಗೆ ಕೆಲವರು ಚಿನ್ನವನ್ನು ಖರೀದಿಸಿ ಸಂಭ್ರಮಿಸಿದ್ದಾರೆ.

  • ಮತ್ತೊಬ್ಬ ಹುಡುಗನ ಜೊತೆ ರಚಿತಾ ಅಫೇರ್? ಡೇಟಿಂಗ್ ಸುದ್ದಿ ಬಗ್ಗೆ ಗುಳಿಕೆನ್ನೆಯ ಹುಡುಗಿ ಹೇಳಿದ್ದು ಹೀಗೆ

    ಮತ್ತೊಬ್ಬ ಹುಡುಗನ ಜೊತೆ ರಚಿತಾ ಅಫೇರ್? ಡೇಟಿಂಗ್ ಸುದ್ದಿ ಬಗ್ಗೆ ಗುಳಿಕೆನ್ನೆಯ ಹುಡುಗಿ ಹೇಳಿದ್ದು ಹೀಗೆ

    ಬೆಂಗಳೂರು: ಕಳೆದ ಕೆಲವು ತಿಂಗಳಿಂದ ಹರಣ್ ರಾಜ್ ಎಂಬ ಹುಡುಗ ರಚಿತಾ ಎಲ್ಲಿರುತ್ತಾರೊ ಅಲ್ಲಿರುತ್ತಾನೆ, ರಚಿತಾ ಎಲ್ಲಿ ಹೋಗುತ್ತಾರೊ ಅಲ್ಲಿ ಹಾಜರಿರುತ್ತಾನೆ ಎನ್ನುವ ಮಾತು ಕೇಳಿ ಬಂದಿತ್ತು. ಎರಡು ದಿನಗಳ ಹಿಂದೆ ನಡೆದ ಭರ್ಜರಿ ಚಿತ್ರದ ಐವತ್ತನೇ ದಿನದ ಸಂಭ್ರಮದಂದೂ ಈತ ರಚಿತಾ ಜೊತೆಗಿದ್ದ. ಹಾಗಂತ ನೋಡಿದವರು ಹೇಳುತ್ತಿದ್ದಾರೆ. ಇವರಿಬ್ಬರ ಓಡಾಟ ನೋಡಿಯೇ ಗಾಸಿಪ್ ಸುದ್ದಿ ಹರಡುವ ಸದಸ್ಯರು `ಇಬ್ಬರ ನಡುವೆ ಕುಚ್ ಕುಚ್ ಹೋ ರಹಾ ಹೈ…’ ಎಂದು ಬ್ಯಾಂಡ್ ಬಾರಿಸಿದ್ದರು. ಇದರ ಬೆನ್ನಿಗೆ ಹರಣ್‍ರಾಜ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದ್ದವು.

    ಯಾರು ಈ ಹರಣ್ ರಾಜ್?
    ಬೆಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಹರಣ್ ರಾಜ್ ಗೆ ರ‍್ಯಾಂಕ್‌ ಸ್ಟುಡೆಂಟ್ ಕ್ರೆಡಿಟ್ ಇದೆ. ರಾಜಕಾರಣಿಯೊಬ್ಬರ ಕುಟುಂಬಕ್ಕೆ ಹತ್ತಿರದ ಸಂಬಂಧಿಯಾಗಿರುವ ಹರಣ್ ರಾಜ್‍ಗೆ ರಚಿತಾ ಮಾತ್ರ ಅಲ್ಲ, ಇನ್ನು ಕೆಲವು ನಟಿಯರ ಪರಿಚಯವೂ ಇದೆಯಂತೆ. ಮಜಾ ಅಂದರೆ ರಚಿತಾಗಿಂತ ಈತ ಮೂರು ನಾಲ್ಕು ವರ್ಷ ಚಿಕ್ಕವನೂ ಹೌದು. `ಪ್ರೀತಿಗೆ ವಯಸ್ಸು ಗಿಯಸ್ಸು ಲೆಕ್ಕಕ್ಕೆ ಬರಲ್ಲ ಬಿಡ್ರಿ’ ಎಂದು ಗಾಸಿಪ್ ಪಂಡಿತರು ಒಂದೇ ಸಾಲಿನಲ್ಲಿ ಇಬ್ಬರ ನಡುವೆ ಲವಿ ಡವ್ವಿ ನಡೆದಿದೆ ಎಂದು ಷರಾ ಬರೆದುಬಿಟ್ಟರು.

    ರಚಿತಾ ಅವರಿಗೆ ಇಂಥ ಸುದ್ದಿಗಳು ಹೊಸದೇನಲ್ಲ. ಈ ಹಿಂದೆ ಭರ್ಜರಿ ಹುಡುಗ ಧ್ರುವ ಸರ್ಜಾ ಜೊತೆಗೂ ರಚಿತಾರ ನಂಟು ಬೆಸೆದಿದ್ದರು. ಇನ್ನೇನು ಎಂಗೇಂಜ್‍ಮೆಂಟ್ ಎದುರಿಗೆ ನಿಂತಿದೆ, ಮದುವೆ ಬಾಕಿ ಎನ್ನುವ ಮಾತು ಊರ ಬಾಯಿಗೆ ಎಲೆ ಅಡಿಕೆಯಾಗಿತ್ತು. ಈಗ ನೋಡಿದರೆ ಹರಣ್ ರಾಜ್ ಜೊತೆ ಗುಳಿಕೆನ್ನೆಯ ಪ್ರೇಮ ಪಲ್ಲವಿ ಚರಣ ನಡೆಯುತ್ತಿದೆ ಎನ್ನುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ರಚಿತಾ ಏನು ಮಾಡಿದರೂ `ಮಾಂಗಲ್ಯಂ ತಂತು ನಾನೇನಾ’ ಅನ್ನೋದೇ ಫೈನಲ್ ಟಚ್ ಆಗುತ್ತಿದೆ. ಇದಕ್ಕೆಲ್ಲ ಈಗ ರಚಿತಾ ರಾಮ್ ಪ್ರತಿಕ್ರಿಯೆ ನೀಡಿ ಈ ಗಾಸಿಪ್ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

    ರಚಿತಾ ಹೇಳಿದ್ದು ಹೀಗೆ:
    ನಾನು ಆ ಇಶ್ಯೂ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆ ಹುಡುಗ ನನ್ನ ಒಳ್ಳೆ ಸ್ನೇಹಿತ, ನನಗಿಂತ 4 ವರ್ಷ ಚಿಕ್ಕವನು. ನನ್ನ ತಂದೆ-ತಾಯಿ ಕೂಡ ತುಂಬಾ ಬೋಲ್ಡ್ ಆಗಿ ಇಂಥ ವಿಷ್ಯ ರಿಸೀವ್ ಮಾಡ್ತಾರೆ. ಆದ್ರೆ ಆ ಹುಡುಗನ ತಂದೆ-ತಾಯಿ ಯಾವ ರೀತಿ ರಿಯಾಕ್ಟ್ ಮಾಡ್ತಾರೆ? ಕಾಮನ್ ಮ್ಯಾನ್ ಇಂಥ ವಿಚಾರಗಳನ್ನು ಯೋಚನೆ ಮಾಡೋ ರೀತೀನೆ ಬೇರೆ. ಆ ಹುಡುಗ ಸಿವಿಲ್ ಇಂಜಿನಿಯರಿಂಗ್ ಸ್ಟೂಡೆಂಟ್. ಮತ್ತೆ ಆ ಹುಡುಗನಿಗೆ ಬಹಳಷ್ಟು ಹೀರೋಯಿನ್‍ಗಳ ಪರಿಚಯ ಇದೆ ಅಂತೆಲ್ಲ ಸುದ್ದಿಯಾಗಿದೆ. ಅದೆಲ್ಲ ಶುದ್ದ ಸುಳ್ಳು. ಅವ್ನಿಗೆ ನಾನು ಬಿಟ್ರೆ ಬೇರೆ ಯಾವ ಹೀರೊಯಿನ್‍ಗಳ ಪರಿಚಯ ಇಲ್ಲ. ಆ ಹುಡುಗ ನನ್ನ ಫ್ರೆಂಡ್ ರಿಲೇಟಿವ್ ಎಂದು ಹೇಳಿದ್ದಾರೆ.

    ಅವ್ರ ಮನೆಯಲ್ಲಿ ಫಂಕ್ಷನ್, ಪಾರ್ಟಿ ಆದ್ರೆ ನಾವೆಲ್ಲಾ ಒಟ್ಟಿಗೆ ಸೇರ್ತಿವಿ. ಎಲ್ಲಾ ಕಡೆ ಹರಿದಾಡ್ತಿರೋ ಫೋಟೊ 1 ವರ್ಷದ ಹಳೇದು. ಆ ಫೋಟೋ ಇಟ್ಕೊಂಡು ಈ ರೀತಿ ಗಾಸಿಪ್ ಹರಡಿಸ್ತಿದ್ದಾರೆ. ನನಗೆ ಹಲವರು ಸ್ನೇಹಿತರಿದ್ದಾರೆ. ಅವ್ರೆಲ್ಲಾ ಫೋಟೊ ತೆಗೆಸಿಕೊಂಡು ಪೋಸ್ಟ್ ಮಾಡಿದ್ರೆ ನನಗೆ ಅವ್ರ ಜೊತೆ ಅಫೇರ್ ಇದೆ ಅಂತ ಆಗುತ್ತಾ? ನನಗಿಂತ 4 ವರ್ಷ ಚಿಕ್ಕ ಹುಡುಗನ ಜೊತೆ ಸುತ್ತಾಡೊಕೆ ನನಗೆ ತಲೆ ಇಲ್ವಾ? ರಚಿತಾ – ಧ್ರುವಾ ಸರ್ಜಾ ಮದುವೆ ಆಗ್ತಾರೆ ಅಂತ ಗಾಸಿಪ್ ಹಬ್ಬಿಸಿದ್ರು. ಇನ್ನು ಎಷ್ಟು ಜನ ನನ್ನ ಕೋ-ಸ್ಟಾರ್‍ಗಳ ಜೊತೆ ನನಗೆ ಮದುವೆ ಮಾಡಿಸ್ತಾರೊ ಗೊತ್ತಿಲ್ಲ. ಆದ್ರೆ ಆ ಹುಡುಗನ ಪರಿಸ್ಥಿತಿ ಯೋಚಿಸಿದ್ರೆ ಭಯ ಆಗುತ್ತೆ. ನನ್ನ ಮದುವೆ ಬಗ್ಗೆ ಇನ್ನೂ ಸೀರಿಯಸ್ ಆಗಿ ಯೋಚನೆ ಮಾಡಿಲ್ಲ. ಎಲ್ಲರಂತೆ ನಾನೂ ಮದುವೆ ಆಗ್ತೀನಿ. ಹುಡುಗ ಫೈನಲ್ ಆದ್ಮೇಲೆ ಎಲ್ಲರಿಗೂ ಹೇಳ್ತಿನಿ. ಆಂಜನೇಯನ ಆಣೆಗೂ ನಾನು ಯಾವುದೇ ಹುಡುಗನ ಜೊತೆ ಡೇಟ್ ಮಾಡ್ತಿಲ್ಲ ಎಂದು ರಚಿತಾ ರಾಮ್ ಹೇಳುವ ಮೂಲಕ ಗಾಸಿಪ್ ಸುದ್ದಿಗೆ ಫುಲ್‍ಸ್ಟಾಪ್ ಹಾಕಿದರು.

    ಇಲ್ಲಿಗೆ ರಚಿತಾ ರಾಮ್ ನಕಲಿ ಪ್ರೇಮ ಪುರಾಣ ಈ ರೀತಿ ಮುಕ್ತಾಯವಾಗಿದೆ. ಸಿನಿಮಾ ರಂಗದಲ್ಲಿ ಇದು ಕಾಮನ್. ಒಂದು ಜೋಡಿ ಕಂಟಿನ್ಯೂ ಆಗಿ ಎರಡು ಮೂರು ಸಿನಿಮಾಗಳಲ್ಲಿ ನಟಿಯಾದ ತಕ್ಷಣ ಅವರ ನಡುವೆ ಲಿಂಕ್ ಹಚ್ಚುತ್ತಾರೆ, ಸಿನಿಮಾಕ್ಕೆ ಸಂಬಂಧಪಡದ ವ್ಯಕ್ತಿ ಜೊತೆಗಿದ್ದರೂ ಗಂಟು ಹಾಕುತ್ತಾರೆ. ಇದಕ್ಕೆಲ್ಲ ರಚಿತಾ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ. ಹಾಗಂತ ಅವರೇ ಹೇಳುತ್ತಾರೆ. ಆದರೆ ನೀವು ತಲೆ ಕೆಡಿಸಿಕೊಂಡರೂ ಬಿಟ್ಟರೂ, ನಾವು ಮಾತ್ರ ಆಗಾಗ ಇಂಥ ಹುಳವನ್ನು ಎಲ್ಲರ ತಲೆಗೆ ಬಿಡುತ್ತಿರುತ್ತೇವೆ ಎನ್ನುತ್ತಿದೆ ಬಣ್ಣದ ಲೋಕದ ಬೆರಕಿ ದೇಹಗಳು. ಎಲುಬಿಲ್ಲದ ನಾಲಿಗೆಗೆ ನೀತಿ ಕಲಿಸಲು ಸಾಧ್ಯವೆ?