Tag: Rachita Ram

  • ಆಟೋ ಚಾಲಕರ ಸಂಘಕ್ಕೆ ರಾಯಭಾರಿಯಾದ ರಚ್ಚು

    ಆಟೋ ಚಾಲಕರ ಸಂಘಕ್ಕೆ ರಾಯಭಾರಿಯಾದ ರಚ್ಚು

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಆಟೋ ಚಾಲಕರ ಸಂಘದ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಖಾಕಿ ಶರ್ಟ್ ಧರಿಸಿಕೊಂಡೇ ಆಟೋ ಚಲಾಯಿಸಿ ಖುಷಿ ಪಟ್ಟಿದ್ದಾರೆ.

    ಬೆಂಗಳೂರಿನಿಂದ (Bengaluru) ನೂರಾರು ಆಟೋ ಚಾಲಕರು ಆರ್.ಆರ್ ನಗರದ ಅವರ ನಿವಾಸದ ಬಳಿ ಜಮಾಯಿಸಿ ರಚಿತಾರನ್ನ ಅಫಿಷಿಯಲ್ ಆಗಿ ಚಾಲಕರ ಸಂಘದ (Auto Drivers Association) ರಾಯಭಾರಿಯನ್ನಾಗಿ ಮಾಡಿಕೊಳ್ಳುವ ಕಾರ್ಯಕ್ರಮ ಮಾಡಿದ್ದಾರೆ. ಆಟೋ ಎದುರು ಆಟೋ ಚಾಲಕರ ವಸ್ತ್ರದಲ್ಲೇ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ ರಚಿತಾ ರಾಮ್. ಈ ವಿಚಾರವನ್ನ ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

    ʻಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ, ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳುʼ ಎಂದಿದ್ದಾರೆ ರಚಿತಾ. ಅನೇಕ ಮಹಿಳಾ ಆಟೋ ಚಾಲಕಿಯರೂ ಸೇರಿದಂತೆ ಆಟೋ ಚಾಲಕರು ರಚಿತಾ ಮನೆ ಮುಂದೆ ಭರ್ಜರಿಯಾಗಿ ಜಮಾಯಿಸಿದ್ದರು. ಆಟೋ ಚಾಲಕಿಯರ ಜೊತೆ ತಾವೂ ಖಾಕಿ ಶರ್ಟ್ ಧರಿಸಿಯೇ ನಿಂತಿದ್ದರು ರಚಿತಾ. ಇದೀಗ ರಚಿತಾ ರಾಮ್ ಆಟೋ ಚಾಲಕರ ಸಂಘದ ರಾಯಭಾರಿ.

  • ಶೀಘ್ರದಲ್ಲೇ ಡಿಂಪಲ್ ಕ್ವೀನ್‌ ಮದುವೆ – ಸುಳಿವು ಕೊಟ್ಟ ರಚಿತಾ ರಾಮ್‌

    ಶೀಘ್ರದಲ್ಲೇ ಡಿಂಪಲ್ ಕ್ವೀನ್‌ ಮದುವೆ – ಸುಳಿವು ಕೊಟ್ಟ ರಚಿತಾ ರಾಮ್‌

    ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ (Rachita Ram) ಕೊನೆಗೂ ತಮ್ಮ ಮದ್ವೆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ, ಇನ್ನೂ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಹೇಳಿದ್ದಾರೆ. ಇದು ರಚ್ಚು ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

    ಹೌದು. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೂ ಮದ್ವೆ (Rachita Ram Marriage) ಬಗ್ಗೆ ಸುಳಿವು ಕೊಟ್ಟಿದ್ದರು. ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಯಾವ ಡ್ರೀಮ್ ಇಲ್ಲ. ಮನೆಯಲ್ಲಿ ಹುಡುಗನನ್ನ ಹುಡುಕುವ ಕಾರ್ಯ ನಡೆಯುತ್ತಿವೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಮದ್ವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ರಚ್ಚು, ಸದ್ಯದಲ್ಲಿಯೇ ಮದುವೆ ಆಗುವೆ, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡುವೆ ಎಂದು ಹೇಳಿದರು. ಲವ್ ಮ್ಯಾರೇಜೋ & ಅರೇಂಜ್ ಮ್ಯಾರೇಜೋ ಏನೋ ಮ್ಯಾರೇಜ್ ಆಗುವೆ. ಒಟ್ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವೆ ಅಂತ ಹೇಳಿದ್ದಾರೆ.

    33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಚಿತಾ ರಾಮ್ ಪರಭಾಷಾ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಜನಿಕಾಂತ್ ಅವರ `ಕೂಲಿʼ ಸಿನಿಮಾದಲ್ಲೂ ವಿಲನ್‌ ಪಾತ್ರದಲ್ಲಿ ನಟಿಸಿ ಭಾರೀ ಮೆಚ್ಚುಗೆ ಗಳಿಸಿದ್ದರು. ಇದೀಗ ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್, ಅಯೋಗ್ಯ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಇವೆರಡು ಸಿನಿಮಾಗಳ ಟೀಸರ್ ರಿಲೀಸ್ ಆಗಿದೆ. ವಿಭಿನ್ನ ಕಾನ್ಸೆಪ್ಟ್‌ನ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ದುನಿಯಾ ವಿಜಯ್ ಜೊತೆ 2ನೇ ಬಾರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ನಟಿ ರಚಿತಾ. ಅಲ್ಲದೇ ಇತ್ತೀಚೆಗೆ ವಿಲನ್‌ ಪಾತ್ರಗಳಿಗೆ ಬೇಡಿಕೆ ಹೆಚ್ಚಾಗ್ತಿದೆ ಎಂದು ನಟಿ ಹೇಳಿಕೊಂಡಿದ್ದರು.

  • ಡಿಸೆಂಬರ್‌ನಲ್ಲಿ `ಡೆವಿಲ್’ ರಿಲೀಸ್ – ಡಿಂಪಲ್ ಕ್ವೀನ್ ರಚ್ಚು ಹೇಳಿದ್ದೇನು?

    ಡಿಸೆಂಬರ್‌ನಲ್ಲಿ `ಡೆವಿಲ್’ ರಿಲೀಸ್ – ಡಿಂಪಲ್ ಕ್ವೀನ್ ರಚ್ಚು ಹೇಳಿದ್ದೇನು?

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬವನ್ನ ನಿವಾಸದ ಮುಂದೆ ಅಭಿಮಾನಿಗಳ ಸಮ್ಮುಖದಲ್ಲಿ ಗ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ದೂರದ ಊರಿನಿಂದ ಬಂದ ಅಭಿಮಾನಿಗಳಿಗೆ ಸೆಲ್ಫಿ ಕೊಟ್ಟು ಇಡೀ ದಿನ ಅವರೊಂದಿಗೆ ಕಳೆದಿದ್ದಾರೆ. ಹುಟ್ಟುಹಬ್ಬದ ಈ ವೇಳೆ ದರ್ಶನ್ ಅಭಿಮಾನಿಗಳು (Darshan Fans) ಹಬ್ಬ ಮಾಡುವ ಸುದ್ದಿ ಕೊಟ್ಟಿದ್ದಾರೆ ರಚಿತಾ ರಾಮ್.

    ರಚಿತಾ ರಾಮ್, ನಟ ದರ್ಶನ್ ಅವರ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ದರ್ಶನ್ ಕಳೆದ ಬಾರಿ ಜೈಲಿನಲ್ಲಿದ್ದಾಗ ಭೇಟಿ ಕೂಡಾ ಮಾಡಿ ಬಂದಿದ್ದರು. ತಮ್ಮ ಹುಟ್ಟುಹಬ್ಬದ ವೇಳೆ ಮತ್ತೆ ಅವರ ನೆನಪು ಮಾಡಿಕೊಂಡಿದ್ದಾರೆ ರಚಿತಾ. ಪ್ರತೀವರ್ಷ ದರ್ಶನ್ ಅವರಿಂದ ಬರುತ್ತಿದ್ದ ವಿಶ್ ಮಿಸ್ ಮಾಡಿಕೊಂಡ ಬಗ್ಗೆ ಬೇಸರ ಹೊರಹಾಕಿದ್ದಾರೆ. ಇನ್ನು ದರ್ಶನ್ ನಟನೆಯ ಡೆವಿಲ್ ಸಿನಿಮಾ ಇದೇ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದನ್ನೂ ಓದಿ: ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಟೀಮ್‌ನಿಂದ ಗಿಫ್ಟ್

    ಡೆವಿಲ್ ಸಿನಿಮಾದ (Devil Movie) ರಿಲೀಸ್ ವೇಳೆ ಚಿತ್ರದ ಪ್ರಚಾರಕ್ಕೆ ನಿಲ್ಲೋದಾಗಿ ನಟಿ ರಚಿತಾ ರಾಮ್ ಹೇಳಿದ್ದಾರೆ. ನನ್ನನ್ನು ಇಂಡಸ್ಟ್ರಿಗೆ ತಂದಿದ್ದೇ ದರ್ಶನ್ ಸರ್, ಅವರು ನಮ್ಮ ಗುರುಗಳು. ಅವರ ಸಿನಿಮಾ ರಿಲೀಸ್ ವೇಳೆ ಪ್ರಚಾರ ಮಾಡುತ್ತೇನೆ. ಆ ಚಿತ್ರತಂಡದ ಜೊತೆ ನಿಲ್ಲುತ್ತೇನೆ ಎನ್ನುವ ಮಾತುಗಳನ್ನಾಡಿದ್ದಾರೆ.

    ಈ ಸುದ್ದಿ ಕೇಳಿದ ದಚ್ಚು ಫ್ಯಾನ್ಸ್ ಖುಷಿಯಿಂದ ಸಂಭ್ರಮಿಸಿದ್ದಾರೆ. ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಎಲ್ಲಾ ನಟರ ಅಭಿಮಾನಿಗಳು ಆಗಮಿಸಿ ರಚ್ಚು ಬರ್ತ್ಡೇ ಗ್ಯಾಂಡ್ ಆಗಿ ಸೆಲಬ್ರೇಟ್ ಮಾಡಿದ್ದಾರೆ. ರಚಿತಾ ರಾಮ್ ಈ ವರ್ಷದ ತಮ್ಮ ಹುಟ್ಟು ಹಬ್ಬದ ವೇಳೆ ಹಲವಾರು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

  • ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಟೀಮ್‌ನಿಂದ ಗಿಫ್ಟ್

    ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಟೀಮ್‌ನಿಂದ ಗಿಫ್ಟ್

    ಟಿ ರಚಿತಾ ರಾಮ್ (Rachita Ram) ಅವರು ರಾಜರಾಜೇಶ್ವರಿ ನಗರದಲ್ಲಿರುವ ತಮ್ಮನಿವಾಸದಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ರಚಿತಾರಾಮ್ ಅಭಿನಯದ ʻಲ್ಯಾಂಡ್ ಲಾರ್ಡ್ʼ ಚಿತ್ರದ ರಚಿತಾ ರಾಮ್ ಅವರ ಅವರ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಯಿತು.

    ಕೆ.ವಿ. ಸತ್ಯಪ್ರಕಾಶ್, ಹೇಮಂತ್ ಗೌಡ ಕೆ.ಎಸ್. ಅವರ ನಿರ್ಮಾಣದ, ಜಡೇಶ್ ಕೆ.ಹಂಪಿ ಅವರ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದು ರಚಿತಾ ರಾಮ್ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಇದನ್ನೂ ಓದಿ: ಕೋಣ ಚಿತ್ರದ ಹೊಸ ಅವತಾರದಲ್ಲಿ ಕೋಮಲ್: ಟ್ರೇಲರ್‌ ರಿಲೀಸ್

    ಈ ಸಂದರ್ಭದಲ್ಲಿ ಮಾತನಾಡಿದ ನಟಿ, ಈ ವರ್ಷದ ಬರ್ತ್ ಡೇ ನನಗೆ ತುಂಬಾ ಸ್ಪೆಷಲ್. ʻಲ್ಯಾಂಡ್ ಲಾರ್ಡ್ʼ ಚಿತ್ರತಂಡದ ಕಡೆಯಿಂದ ಈ ಟೀಸರ್ ನನಗೆ ಸರ್‌ಪ್ರೈಸ್ ಗಿಫ್ಟ್. ಇದೊಂದು ವಿಭಿನ್ನ ಪಾತ್ರ ಎಂದು ಹೇಳಿದರು.

    ನಿರ್ದೇಶಕ ಜಡೇಶ್ ಕೆ.ಹಂಪಿ ಮಾತನಾಡಿ, ಇಂಥಹ ಪಾತ್ರವನ್ನು ರಚಿತಾ ಅವರು ಒಪ್ಪುತ್ತಾರಾ? ಎಂಬ ಆತಂಕವಿತ್ತು. ಅವರು ಒಪ್ಪಿಕೊಂಡು ಅಭಿನಯಿಸಿದ್ದು ತುಂಬಾ ಸಂತೋಷ. ʻಕೂಲಿʼ ಚಿತ್ರದಲ್ಲಿ ಕಲ್ಯಾಣಿಯಾಗಿ ನಟಿಸಿದ್ದರು. ಅದಕ್ಕಿಂತ ಬೇರೆ ಥರದಲ್ಲಿ ಈ ಪಾತ್ರ ಮೂಡಿ ಬಂದಿದೆ. ಇದರಲ್ಲಿ ಅವರು ಚಿನ್ನಮ್ಮ ಆಗಿದ್ದಾರೆ ಎಂದು ಹೇಳಿದರು.

    ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಮಾತನಾಡಿ, ನಮ್ಮ ಚಿತ್ರದಲ್ಲಿ ರಚಿತಾರಾಮ್ ಅವರು ಅದ್ಭುತ ಪಾತ್ರ ನಿರ್ವಹಿಸಿದ್ದಾರೆ. ಅವರು ರಾಷ್ಟ್ರಪ್ರಶಸ್ತಿ ಪಡೆಯುವ ಮಟ್ಟಕ್ಜೆ ಬೆಳೆಯಲಿ. ಇದು ನೈಜ ಘಟನೆಯನ್ನು ಆಧರಿಸಿ ನಿರ್ಮಿಸಿದ ಚಿತ್ರ. ಈ ಚಿತ್ರದ ಅಭಿನಯಕ್ಕೆ ರಚಿತಾ ರಾಮ್ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಗುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ:ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡಿದ್ರೆ ಟಿಕೆಟ್ ಜೋಪಾನವಾಗಿ ಇಟ್ಕೊಳ್ಳಿ: ಪ್ರೇಕ್ಷಕರಿಗೆ ಸರ್ಕಾರ ಮನವಿ

  • ಮದುವೆ ಬಗ್ಗೆ ಗುಡ್ ನ್ಯೂಸ್ ನೀಡಿದ ರಚಿತಾ ರಾಮ್

    ಮದುವೆ ಬಗ್ಗೆ ಗುಡ್ ನ್ಯೂಸ್ ನೀಡಿದ ರಚಿತಾ ರಾಮ್

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹುಟ್ಟುಹಬ್ಬದ ಸುಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನವರಾತ್ರಿ ವೇಳೆ ಮೂಗುಬೊಟ್ಟು ಚುಚ್ಚಿಸಿಕೊಂಡಿದ್ದ ರಚಿತಾ ತೆರೆಮರೆಯಲ್ಲಿ ಮದುವೆಗೆ ಸಿದ್ಧರಾಗ್ತಿದ್ದಾರಾ ಅನ್ನೋ ಅನುಮಾನಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಶೀಘ್ರದಲ್ಲೇ ಮದುವೆಯಾಗುವ (Marriage) ಬಗ್ಗೆ ನಟಿ ರಚಿತಾ ರಾಮ್ ಮಾತ್ನಾಡಿದ್ದಾರೆ. ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಯಾವ ಡ್ರೀಮ್ ಇಲ್ಲ. ಮನೆಯಲ್ಲಿ ಹುಡುಗನನ್ನ ಹುಡುಕುವ ಕಾರ್ಯಗಳು ನಡೆಯುತ್ತಿವೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು ಅರಮನೆ ಪೇಂಟಿಂಗ್‌ ಮುಂದೆ ದಸರಾ ಗೊಂಬೆಯಂತೆ ಕಂಗೊಳಿಸಿದ ರಮ್ಯಾ!

    33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಚಿತಾ ರಾಮ್ ಪರಭಾಷಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಜನಿಕಾಂತ್ ಅವರ ಸಿನಿಮಾದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್, ಅಯೋಗ್ಯ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಇವೆರಡು ಸಿನಿಮಾಗಳ ಟೀಸರ್ ರಿಲೀಸ್ ಆಗಿದೆ. ವಿಭಿನ್ನ ಕಾನ್ಸೆಪ್ಟ್ನ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ದುನಿಯಾ ವಿಜಯ್ ಜೊತೆ ಎರಡನೇ ಬಾರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ನಟಿ ರಚಿತಾ. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಸಿನಿಮಾ ನೋಡಿ ಹಾಡಿಹೊಗಳಿದ ಯಶ್‌

    ನಟಿ ರಚಿತಾ ರಾಮ್ ಈ ಹಿಂದೆಯೂ ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಗೌಡ್ರ ಹುಡುಗ ಸಿಕ್ರೆ ಮದುವೆಯಾಗ್ತೀನಿ ಎಂದು ಹೇಳಿದ್ದರು. ಪ್ರತಿಬಾರಿಯೂ ಮದುವೆಯ ಪ್ರಸ್ತಾಪ ಬಂದಾಗಲೆಲ್ಲ ರಚಿತಾ, ಹಾರಿಕೆ ಉತ್ತರ ಕೊಟ್ಟು ಸುಮ್ಮನಾಗ್ತಿದ್ರು. ಈ ಸಲ ಶೀಘ್ರವೇ ಮದ್ವೆ ಆಗ್ತೀನಿ ಎಂದು ಹೇಳಿರುವ ಹಿಂದೆ ಅವರ ಕುಟುಂಬಸ್ಥರು ಹುಡುಗನ ಹುಡುಕುವ ಕೆಲಸ ನಡೆಸಿದ್ದಾರೆ ಅಂತಾನೇ ಹೇಳ್ಬಹುದು. ಬಹುತೇಕ 2026ರಲ್ಲಿ ರಚಿತಾ ಮದುವೆಯ ಸುಳಿವು ನೀಡಿದ್ದಾರೆ. ರಚಿತಾ ಫ್ಯಾನ್ಸ್ ಈ ಸುದ್ದಿ ಕೇಳಿ ಕುಣಿದು ಕುಪ್ಪಳಿಸುತ್ತಿದ್ದಾರೆ.

  • ಇದು ನಮ್ಮ ಸಂಬಂಧದ ಸಂಭ್ರಮ – ಫ್ಯಾನ್ಸ್‌ಗೆ ಪತ್ರ ಬರೆದು ರಚಿತಾ ರಾಮ್ ಆಹ್ವಾನ

    ಇದು ನಮ್ಮ ಸಂಬಂಧದ ಸಂಭ್ರಮ – ಫ್ಯಾನ್ಸ್‌ಗೆ ಪತ್ರ ಬರೆದು ರಚಿತಾ ರಾಮ್ ಆಹ್ವಾನ

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಏಕಾಏಕಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಫ್ಯಾನ್ಸ್ ತಾವೇ ಖುದ್ದು ಪತ್ರ ಬರೆದು ಆಹ್ವಾನ ಕೊಟ್ಟಿದ್ದಾರೆ. `ಎಲ್ರೂ ತಪ್ಪದೇ ಮನೆಗೆ ಬನ್ನಿ ಗುಡ್ ನ್ಯೂಸ್ ಇದೆ’ ಎಂದು ತಾವೇ ಕೈಯ್ಯಾರೆ ಬರೆದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಅಕ್ಟೋಬರ್ 3, ರಚಿತಾ ರಾಮ್ ಹುಟ್ಟುಹಬ್ಬ. ಹೀಗಾಗಿ ಈ ದಿನ ಬೆಂಗಳೂರಿನ ಆರ್‌ಆರ್‌ ನಗರದ ತಮ್ಮ ನಿವಾಸಕ್ಕೆ ಅಭಿಮಾನಿಗಳನ್ನ ಪ್ರೀತಿಯಿಂದ ಆಹ್ವಾನಿಸಿದ್ದಾರೆ. `ಫ್ಯಾನ್ಸ್, ಕುಟುಂಬಸ್ಥರು ಒತ್ತಾಯದ ಮೇರೆಗೆ ನಾನು ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ. ಇದು ಹುಟ್ಟುಹಬ್ಬದ ಆಚರಣೆ ಅಲ್ಲ ನಮ್ಮ ಸಂಬಂಧದ ಸಂಭ್ರಮ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಯೆಟ್ನಾಂ ಬೀದಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ – ರೀಲ್ಸ್ ರಾಣಿ ಕಂಬನಿಗೆ ಕಾರಣವೇನು?

    ರಚಿತಾ ಹುಟ್ಟುಹಬ್ಬದ ವಿಶೇಷವಾಗಿ ಅವರು ಅಭಿನಯಿಸುತ್ತಿರುವ ಸಿನಿಮಾ ತಂಡದಿಂದ ಅನೇಕ ವಿಶೇಷಗಳು, ಅಭಿಮಾನಿಗಳಿಗೆ ಸರ್ಪ್ರೈಸ್‌ ಗಿಫ್ಟ್‌ ಇರುವ ಸಾಧ್ಯತೆ ಇದೆ. ಒಟ್ನಲ್ಲಿ ಅನೇಕ ವರ್ಷಗಳ ಬಳಿಕ ರಚಿತಾ ರಾಮ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ವಿಶೇಷ. ಇದನ್ನೂ ಓದಿ: ಕಾಂತಾರ ದೃಶ್ಯ ವೈಭೋಗ ಕಣ್ತುಂಬಿಕೊಂಡ ಪ್ರೇಕ್ಷಕರು ಹೇಳಿದ್ದೇನು?

  • ಬಿಕ್ಲು ಶಿವ ಕೇಸ್ – ನಟಿ ರಚಿತಾ ರಾಮ್‌ಗೆ ಗಿಫ್ಟ್ ಕೊಟ್ಟ ಮಾಹಿತಿ ನೀಡಲು ನಿರಾಕರಿಸಿದ ಎ1 ಜಗ್ಗ?

    ಬಿಕ್ಲು ಶಿವ ಕೇಸ್ – ನಟಿ ರಚಿತಾ ರಾಮ್‌ಗೆ ಗಿಫ್ಟ್ ಕೊಟ್ಟ ಮಾಹಿತಿ ನೀಡಲು ನಿರಾಕರಿಸಿದ ಎ1 ಜಗ್ಗ?

    ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಜಗ್ಗನನ್ನು ಸಿಐಡಿ ಅಧಿಕಾರಿಗಳು (CID Officers) ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

    ರೌಡಿಶೀಟರ್ ಬಿಕ್ಲು ಶಿವ ಪ್ರಕರಣದ ತನಿಖೆ ಚುರುಕುಗೊಂಡಿದೆ. ಒಳಸಂಚು ಆರೋಪ ಹೊತ್ತಿರುವ ಜಗದೀಶ್ @ ಜಗ್ಗನನ್ನ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮೊದಲು ವಿಚಾರಣೆಗೆ ಒಳಪಡಿಸಿದಾಗ ಬೈರತಿ ಬಸವರಾಜ್‌ಗೂ ನನಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದ. ಇದೀಗ ನಟಿ ರಚಿತಾ ರಾಮ್‌ಗೂ ನನಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ.ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ – ನನಗೂ ಬೈರತಿ ಬಸವರಾಜ್‌ಗೂ ಸಂಬಂಧವಿಲ್ಲ ಎಂದ ಎ1 ಜಗ್ಗ

    ಮೂಲಗಳ ಪ್ರಕಾರ, ನಟಿ ರಚಿತಾ ರಾಮ್ (Rachita Ram) ಜೊತೆಗಿನ ಫೋಟೋಸ್ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಎ1 ಆರೋಪಿ ಜಗ್ಗ ನಟಿ ರಚಿತಾ ರಾಮ್‌ಗೂ ನನಗೂ ಸಂಪರ್ಕವಿಲ್ಲ. ರವಿ ಭೋಪಣ್ಣ ಸಿನಿಮಾ ಶೂಟಿಂಗ್ ವೇಳೆ ನಾನು ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದೆ. ಆ ಸಮಯದಲ್ಲಿ ಅಭಿಮಾನಿಯಾಗಿ ಗಿಫ್ಟ್ ಕೊಟ್ಟಿದ್ದೆ. ಆದರೆ ಒಡವೆ ಬಗ್ಗೆ ಗೊತ್ತಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

    ಸಿನಿಮಾ ಶೂಟಿಂಗ್ ಇರೋದು ಗೊತ್ತಾಗಿತ್ತು. ಹೀಗಾಗಿ ಗಿಪ್ಟ್ ಕೊಟ್ಟಿದ್ದೆ. ನನ್ನ ಸ್ನೇಹಿತರ ಮೂಲಕ ಸಿನಿಮಾ ಶೂಟಿಂಗ್ ಸ್ಥಳಕ್ಕೆ ಹೋಗಿದ್ದೆ ಎಂದಿದ್ದಾನೆ ಎನ್ನಲಾಗಿದೆ.ಇದನ್ನೂ ಓದಿ: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಕೇಸ್‌ – ಆರೋಪಿ ಜಗ್ಗ 10 ದಿನ ಸಿಐಡಿ ಕಸ್ಟಡಿಗೆ

  • ಕಲ್ಟ್ ಸಿನಿಮಾದ ಅಯ್ಯೊ ಶಿವನೇ ಹಾಡಿನ ರಿಲೀಸ್ ಡೇಟ್ ಫಿಕ್ಸ್

    ಕಲ್ಟ್ ಸಿನಿಮಾದ ಅಯ್ಯೊ ಶಿವನೇ ಹಾಡಿನ ರಿಲೀಸ್ ಡೇಟ್ ಫಿಕ್ಸ್

    ನಾರಸ್ (Banaras) ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಉಪಾಧ್ಯಕ್ಷ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” (Cult) ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಝೈದ್ ಖಾನ್, ರಚಿತರಾಮ್ ಹಾಗೂ ಮಲೈಕ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

    ಈಗಾಗಲೇ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಮೊದಲ ಹಾಡು “ಅಯ್ಯೊ ಶಿವನೇ” ಇದೇ ಸೆಪ್ಟೆಂಬರ್ 10 ರಂದು ಆನಂದ್ ಆಡಿಯೋ (Anand Audio) ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಅನಿಲ್ ಕುಮಾರ್ ಅವರೇ ಬರೆದಿರುವ ಈ ಹಾಡನ್ನು ಜನಪ್ರಿಯ ಗಾಯಕ – ಗಾಯಕಿ ಜಸ್ಕರಣ್ ಸಿಂಗ್ ಹಾಗೂ ಪೃಥ್ವಿ ಭಟ್ ಹಾಡಿದ್ದಾರೆ.ಇದನ್ನೂ ಓದಿ: ಯಶ್ ನಟನೆಯ ರಾಮಾಯಣ-2 ಚಿತ್ರಕ್ಕೆ VFX ಗಾಗಿ ಗಾಡ್ಜಿಲ್ಲ ತಂತ್ರಜ್ಞರು ಎಂಟ್ರಿ

    ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮಲೈಕ ಅಭಿನಯಿಸಿದ್ದಾರೆ. ಈಗಾಗಲೇ ಈ ಮೊದಲ ಹಾಡಿನ ಪ್ರೋಮೋ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಪ್ರೋಮೋದಲ್ಲೇ ಗಮನ ಸೆಳೆದಿರುವ “ಅಯ್ಯೋ ಶಿವನೇ” ಹಾಡನ್ನು ಆಲಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಕೆ.ವಿ.ಎನ್ ಪ್ರೊಡಕ್ಷನ್ಸ್ ಅರ್ಪಿಸುವ, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ “ಕಲ್ಟ್” ಚಿತ್ರದ ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.ಇದನ್ನೂ ಓದಿ: ಪವನ್ ಕಲ್ಯಾಣ್ ಅಭಿಮಾನಿಗಳಿಂದ ಸರ್ ಎಂ.ವಿಶ್ವೇಶ್ವರಯ್ಯ ವಿದ್ಯಾಭ್ಯಾಸ ಮಾಡಿದ ಶಾಲೆಯ ನವೀಕರಣ

  • ಹೆಣ್ಣಿಗೆ ಬಿಂದಿ ಅಂದ ಎಂದ ರಚ್ಚು!

    ಹೆಣ್ಣಿಗೆ ಬಿಂದಿ ಅಂದ ಎಂದ ರಚ್ಚು!

    ಸಿನಿಮಾ ಹೊರತುಪಡಿಸಿದರೆ ಸಾಮಾನ್ಯವಾಗಿ ರಚಿತಾ ರಾಮ್ ಕಾಣಿಸ್ಕೊಳ್ಳೋದು ಸಾಂಪ್ರದಾಯಿಕ ಉಡುಗೆಯಲ್ಲೇ. ಅದಕ್ಕೆ ಮುಖ್ಯ ಕಾರಣ ಅವರು ಹೆಚ್ಚಾಗಿ ಹಣೆಗೆ ಬಿಂದಿ ಇಡ್ತಾರೆ. ಇದೀಗ ರಚಿತಾ ಬಿಂದಿ ಮಹತ್ವ ಹಾಗೂ ತಮಗ್ಯಾಕೆ ಬಿಂದಿ ಇಡುವುದು ಇಷ್ಟ ಎಲ್ಲವನ್ನ ಇನ್ಸ್ಟಾಗ್ರಾಂ ತಮ್ಮ ಫಾಲೋವರ್ಸ್ ಜೊತೆ ಹಂಚಿಕೊಂಡಿದ್ದಾರೆ. ದೇವರ ಮುಂದೆ ಕುಳಿತು ಸೆಲ್ಫಿ ತೆಗೆದುಕೊಂಡ ರಚಿತಾ ಆ ಫೋಟೋಗಳನ್ನ ಪೋಸ್ಟ್ ಮಾಡಿ ಬಿಂದಿ ಬಗ್ಗೆ ಸ್ಪೆಷಲ್ ಆಗಿ ಬರೆದುಕೊಂಡಿದ್ದಾರೆ.

    ಹಣೆಗೆ ಬಿಂದಿಯಿಟ್ಟ ಫೋಟೋ ಶೇರ್ ಮಾಡಿ ಬಿಂದಿಯ ಮಹತ್ವವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ರಚಿತಾ ರಾಮ್ `ನನಗೆ ದೊಡ್ಡ ಬಿಂದಿ ಧರಿಸೋದ್ರ ಕಡೆ ತುಂಬಾ ಇಂಟ್ರೆಸ್ಟ್ ಇದೆ. ಬಿಂದಿ ನನ್ನನ್ನು ಸೊಗಸಾಗಿ ಕಾಣುವಂತೆ ಮಾಡುತ್ತೆ. ನನ್ನ ಲುಕ್ ಅನ್ನು ಬಿಂದಿ ಪೂರ್ಣಗೊಳಿಸುತ್ತದೆ’ ಎಂದಿದ್ದಾರೆ. ಅಂದಹಾಗೆ ಇದು ಹಬ್ಬದ ದಿನ ತೆಗೆದ ಸೆಲ್ಫಿ ಫೋಟೋ ಎಂದು ಭಾವಿಸಲಾಗ್ತಿದೆ.

    ಹಣೆಯಲ್ಲಿ ಬಿಂದಿ ಇಡೋದನ್ನ ಇತ್ತೀಚೆಗೆ ಔಟ್ ಆಫ್ ಸ್ಟೈಲ್ ಎಂದು ಹಲವರು, ಅದರಲ್ಲೂ ಹೆಣ್ಮಕ್ಕಳು ಇಡೋದೇ ಅಪರೂಪವಾಗಿರುವ ವೇಳೆ ರಚಿತಾ ಬಿಂದಿ ತಮಗೆ ಕಂಫರ್ಟ್ ಎಂದಿದ್ದಾರೆ. ರಚಿತಾ ಬಿಂದಿ ಪ್ರೀತಿಗೆ ನೆಟ್ಟಿಗರಂತೂ ಫಿದಾ ಆಗಿದ್ದಾರೆ.

  • ಫಿನಾಲೆ ತಲುಪಿದ ಭರ್ಜರಿ ಬ್ಯಾಚುಲರ್ಸ್- ಗೆಲುವಿಗಾಗಿ ಸುನಿಲ್, ರಕ್ಷಕ್ ಬುಲೆಟ್ ಪೈಪೋಟಿ

    ಫಿನಾಲೆ ತಲುಪಿದ ಭರ್ಜರಿ ಬ್ಯಾಚುಲರ್ಸ್- ಗೆಲುವಿಗಾಗಿ ಸುನಿಲ್, ರಕ್ಷಕ್ ಬುಲೆಟ್ ಪೈಪೋಟಿ

    ರುನಾಡಿನ ಎಲ್ಲರ ನೆಚ್ಚಿನ ವಾಹಿನಿ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಡ್ರಾಮಾ ಜೂನಿಯರ್ಸ್ ಮತ್ತು ಕಾಮಿಡಿ ಕಿಲಾಡಿಗಳು ಸೇರಿ ಹಲವಾರು ಶೋಗಳ ಮೂಲಕ ವೀಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಈ ಪಟ್ಟಿಗೆ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಸೀಸನ್ 2 ಸೇರ್ಪಡೆಯಾಗಿದ್ದು, ಇದು ಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾದ ಮದುವೆಗೆ ತಯಾರಿ ನಡೆಸುತ್ತಿರುವ ಯುವ ಬ್ಯಾಚುಲರ್ಗಳ ಜೀವನ ಮತ್ತು ವ್ಯಕ್ತಿತ್ವಗಳ ಮೇಲೆ ಕೇಂದ್ರೀಕರಿಸುವ ರಿಯಾಲಿಟಿ ಶೋ ಆಗಿದೆ.

    ಭರ್ಜರಿ ಬ್ಯಾಚುಲರ್ಸ್ ಮೊದಲ ಸೀಸನ್ ಯಶಸ್ಸಿನ ಬಳಿಕ ಎರಡನೇ ಸೀಸನ್ ಕೂಡ ಕರ್ನಾಟಕದಾದ್ಯಂತ ಪ್ರೇಕ್ಷಕರ ಹೃದಯ ಗೆದ್ದಿದೆ. ಈ ಸೀಸನ್‌ನಲ್ಲಿ ಹೊಸ ಬ್ಯಾಚುಲರ್‌ಗಳನ್ನು ಪರಿಚಯಿಸಲಾಯಿತು. ಅವರು ತಮ್ಮ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಸ್ವಾಭಾವಿಕತೆ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಪರೀಕ್ಷಿಸಲು ಮಾಡಲಾಗಿದ್ದ ಅನೇಕ ಸುತ್ತುಗಳಲ್ಲಿ ಭಾಗವಹಿಸಿ ಎಲ್ಲರ ಮನಗೆದ್ದಿದ್ದಾರೆ.

    ಸೀಸನ್ ನಲ್ಲಿ ಬ್ರಹ್ಮಚಾರಿ vs ಸಂಸಾರಿ, ಡೆಡಿಕೇಶನ್ ರೌಂಡ್, ಕಂಪ್ಯಾಟಿಬಿಲಿಟಿ ರೌಂಡ್, ಪ್ರೊಪೋಸ್ ರೌಂಡ್, ಸೀನಿಯರ್ಸ್ vs ಜೂನಿಯರ್ಸ್ ಹೀಗೆ ವಿಭಿನ್ನ ಸುತ್ತುಗಳು ಇದ್ದು ಇದರಲ್ಲಿ ಏಂಜೆಲ್ಸ್ ಮತ್ತು ಬ್ಯಾಚುಲರ್ಸ್ ಸಕ್ಕತಾಗಿ ಭಾಗವಹಿಸಿ ಎಲ್ಲರನ್ನೂ ಮನರಂಜಿಸಿದ್ದಾರೆ. ಅಷ್ಟೇ ಅಲ್ಲದೇ ಈ ಶೋ ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ಅದ್ಬುತ ನಿರೂಪಣೆಯ ಮೂಲಕ ನಿರಂಜನ್ ದೇಶಪಾಂಡೆ (Niranjan Deshpande) ಈ ಶೋನ ನಡೆಸಿಕೊಟ್ಟಿದ್ದು, ಜಡ್ಜ್‌ಗಳಾದ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಈ ಶೋನ ಮತ್ತೊಂದು ಕೇಂದ್ರ ಬಿಂದುವಾಗಿದ್ದರು. ಹಾಗೆಯೇ ಶೋನಲ್ಲಿ ಭಾಗವಹಿಸಿದ ಬ್ಯಾಚುಲರ್ಸ್ ಹಾಗೂ ಏಂಜೆಲ್ಸ್ ಗಳು ತಮ್ಮದೇ ಆದ ಶೈಲಿಯಲ್ಲಿ ವೀಕ್ಷಕರನ್ನು ಮನರಂಜಿಸಿದ್ದಾರೆ.  ಇದನ್ನೂ ಓದಿ: ದರ್ಶನ್‌-ಪವಿತ್ರಾ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ

    ಅಂತಿಮ ಸುತ್ತಿನಲ್ಲಿ ಸುನೀಲ್-ಅಮೃತಾ, ದರ್ಶನ್-ಅಪೇಕ್ಷಾ, ರಕ್ಷಕ್ ಬುಲೆಟ್- ರಮೋಲ, ಹುಲಿ ಕಾರ್ತಿಕ್- ಧನ್ಯ, ಗಾಬ್ರಿ -ಅನನ್ಯಾ, ಉಲ್ಲಾಸ್-ಪವಿ, ಪ್ರವೀಣ್ ಜೈನ್- ಸುಕೃತಾ, ಪ್ರೇಮ್ ಥಾಪಾ-ವಿಜಯಲಕ್ಷ್ಮಿ, ಡ್ರೋನ್ ಪ್ರತಾಪ್-ಗಗನಾ, ಮತ್ತು ಸೂರ್ಯಾ- ಅಭಿಜ್ಞಾ ಭಾಗವಹಿಸಲಿದ್ದಾರೆ. ಹಾಗೆಯೇ ಭರ್ಜರಿ ಬ್ಯಾಚುಲರ್ ಸೀಸನ್ 2 ನ ವಿಜೇತರು ಯಾರಾಗುತ್ತಾರೆ ಅನ್ನುವುದಕ್ಕೆ ಈ ವಾರಾಂತ್ಯದಲ್ಲಿ ಸಿಗಲಿದೆ ಉತ್ತರ.

    ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನ ವಿಜೇತರು ಯಾರಾಗ್ತಾರೆ? ತಿಳ್ಕೊಳೋಕೆ ಮಿಸ್ ಮಾಡದೇ ನೋಡಿ ಜೀ಼ ಕನ್ನಡ ಇದೇ ಭಾನುವಾರ ಸಂಜೆ 6 ಗಂಟೆಗೆ.