Tag: rachita

  • ಲವ್ ಯೂ ರಚಿತಾ, ನನ್ನ ನೀ ಹಗ್ ಮಾಡು: ಆರ್ಯವರ್ಧನ್ ಗುರೂಜಿ ಬೇಡಿಕೆ

    ಲವ್ ಯೂ ರಚಿತಾ, ನನ್ನ ನೀ ಹಗ್ ಮಾಡು: ಆರ್ಯವರ್ಧನ್ ಗುರೂಜಿ ಬೇಡಿಕೆ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಗುರೂಜಿ ಬಾಯಿಯಿಂದ ಇಂತಹ ನುಡಿಮುತ್ತುಗಳು ಬರುತ್ತಿದ್ದಂತೆಯೇ ಬಿಗ್ ಬಾಸ್ ಮನೆ ಸದಸ್ಯರೂ ಭಾವುಕರಾಗಿದ್ದಾರೆ. ಅಷ್ಟಕ್ಕೂ ಗುರೂಜಿಯ ಆ ಬೇಡಿಕೆ ಸದ್ಯಕ್ಕೆ ಈಡೇರದಿದ್ದರೂ, ಮುಂದಿನ ದಿನಗಳಲ್ಲಿ ಕಂಡಿತಾ ಸಾಧ್ಯವಾಗಬಹುದು ಎಂದು ಪ್ರಶಾಂತ್ ಸಂಬರ್ಗಿ ಭವಿಷ್ಯ ನುಡಿದಿದ್ದಾರೆ. ಹಾಗಾದರೆ, ಆರ್ಯವರ್ಧನ್ ಗುರೂಜಿ ಬೇಡಿಕೆ ಏನಾಗಿತ್ತು? ಯಾಕೆ ಬಿಗ್ ಬಾಸ್ ಮನೆಯ ಸದಸ್ಯರು ಭಾವುಕರಾದರು ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    ಹೊಟ್ಟೆ ತುಂಬಾ ಊಟ ಮಾಡಿಕೊಂಡು ಬಂದ ಪ್ರಶಾಂತ್ ಸಂಬರ್ಗಿ(Prashant Sambargi) , ಕ್ಯಾಮೆರಾ ಮುಂದೆ ಬಂದು ‘ಬಿಗ್ ಬಾಸ್ ನನ್ನದು ಊಟ ಆಯಿತು, ನಿಮ್ಮದು ಆಯಿತಾ ಅಂದ್ಕೋತೀನಿ. ಥ್ಯಾಂಕ್ಸ್ ಬಿಗ್ ಬಾಸ್’ ಅಂದರು. ಅದನ್ನು ಗಮನಿಸುತ್ತಿದ್ದ ಆರ್ಯವರ್ಧನ್ ಗುರೂಜಿ, ‘ನೀವಷ್ಟೇ ಕ್ಯಾಮೆರಾ ಮುಂದೆ ಮಾತಾಡ್ಬೇಕಾ? ನಾನೂ ಮಾತಾಡ್ತೀನಿ’ ಅಂತ ಕ್ಯಾಮೆರಾ ಎದುರು ನಿಂತರು. ಪ್ರಶಾಂತ್ ಸಂಬರ್ಗಿ ರೀತಿಯಲ್ಲೇ ಗುರೂಜಿ ಕೂಡ ಬಿಗ್ ಬಾಸ್ ಗೆ ಏನಾದರೂ ಕೇಳುತ್ತಾರೆ ಅಂದುಕೊಂಡರೆ ಲೆಕ್ಕಾಚಾರವೇ ಉಲ್ಟಾ ಆಯಿತು. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ಕ್ಯಾಮೆರಾ ಮುಂದೆ ಬಂದ ಗುರೂಜಿ ತುಸು ಭಾವುಕರಾಗಿಯೇ ‘ ಐ ಲವ್ ಯೂ ರಚಿತಾ’ (Rachita) ಎಂದು ಬಿಟ್ಟರು. ರಚಿತಾ ಅಂದಾಕ್ಷಣ ಬಹುತೇಕರು ನಟಿ ರಚಿತಾ ರಾಮ್ ಗೆ ಹೇಳುತ್ತಿದ್ದಾರಾ ಅಂತ ಅಂದುಕೊಂಡಿದ್ದು ಸುಳ್ಳಲ್ಲ.  ಮತ್ತೆ ಮಾತು ಮುಂದುವರೆಸಿದ ಗುರೂಜಿ, ‘ನಿನಗೋಸ್ಕರ ನಾನು ಇಲ್ಲಿಗೆ ಬಂದಿದ್ದೇನೆ. ಆಚೆ ಬಂದ್ಮೇಲೆ ನನ್ನ ತುಂಬಾ ಲವ್ ಮಾಡು, ಯಾವತ್ತೂ ನಾನು ಲವ್ ನೋಡೇ ಇಲ್ಲ. ನಿನ್ನ ಪ್ರೀತಿ ಮಾಡಿಲ್ಲ. ನಿನ್ನ ಜೊತೆ ಲೈವ್ ಆಗಿ ಪ್ರೀತಿ ಮಾಡಿಲ್ಲ. ನಿನ್ನನ್ನು ನಾನು ರಿಯಲ್ ಆಗಿ ಲವ್ ಮಾಡ್ಬೇಕು. ನೀನು ನನ್ನ ಹಗ್ ಮಾಡಬೇಕು’ ಅಂತೆಲ್ಲ ಮಾತಾಡೋಕೆ ಶುರು ಮಾಡಿದ್ದರು. ಇದನ್ನು ಕೇಳಿ ಬಿಗ್ ಬಾಸ್ ಮನೆಯವರು ಒಂದು ಕ್ಷಣ ಶಾಕ್ ಗೆ ಒಳಗಾದರು.

    ರೋಮ್ಯಾಂಟಿಕ್ ಆಗಿ, ಎಮೋಷನಲ್ ಆಗಿ ಗುರೂಜಿ ಯಾವ ರಚಿತಾಗೆ ಈ ಮಾತುಗಳನ್ನು ಹೇಳುತ್ತಿರಬೇಕು ಎಂದು ಹಲವರು ತಲೆ ಕೆಡಿಸಿಕೊಂಡರು. ಆನಂತರ ಗೊತ್ತಾಗಿದ್ದು, ಗುರೂಜಿ ಅವರ ಪತ್ನಿಯ ಹೆಸರು ರಚಿತಾ ಅಂತ. ತಮ್ಮ ಪತ್ನಿಗೆ ಗುರೂಜಿ ಇದನ್ನೆಲ್ಲ ಹೇಳಿದ್ದಾರೆ ಎಂದು ಕೇಳಿ ಎಲ್ಲರೂ ನಿಟ್ಟುಸಿರಿಟ್ಟರು. ಅಷ್ಟಕ್ಕೆ ಸುಮ್ಮನಾಗದ ಗುರೂಜಿ, ‘ಇಲ್ಲಿ ಎಲ್ಲರೂ ನೈಟ್ ಹಗ್ ಮಾಡ್ತಾರೆ. ಅಯ್ಯಯ್ಯೋ ನಂಗೆ ನೋಡೋಕೆ ಆಗ್ತಿಲ್ಲ. ಅವರನ್ನೆಲ್ಲ ನೋಡಿ ನಿನ್ನ ಹಗ್ ಮಾಡ್ಬೇಕು ಅನಿಸ್ತಿದೆ’ ಎಂದು ತಮ್ಮೊಳಗೆ ತುಮುಲಗಳನ್ನು ಬಿಚ್ಚಿಟ್ಟರು ಗುರೂಜಿ.

    ಲವ್, ರಿಯಲ್ ಲವ್, ಹಗ್ ಅಂತೆಲ್ಲ ಮಾತನಾಡುತ್ತಾ ಗುರೂಜಿ, ನಂತರ ತುಸು ಭಾವುಕರಾಗಿ ‘ಇಲ್ಲಿವರೆಗೂ ಹೇಗೋ ಆಯ್ತು. ಕ್ಷಮಿಸಿ ಬಿಡಿ ನನ್ನ. ನಿನಗೋಸ್ಕರ ನಾನು ದುಡೀತೀನಿ. ನಿನಗೋಸ್ಕರ ಬದುಕ್ತೀನಿ’ ಎಂದು ಆಶ್ವಾಸನೆ ನೀಡಿದರು. ಗುರೂಜಿ ಮಾತುಗಳನ್ನು ಕೇಳಿಸಿಕೊಂಡ ದೊಡ್ಮನೆ ಸದಸ್ಯರು ಗುರೂಜಿ ಮಾತುಗಳಿಗೆ ಮೆಚ್ಚುಗೆ ಸೂಚಿಸಿದರು. ಗುರೂಜಿ ಮಾತು ಒಂದು ಕ್ಷಣ ಅಚ್ಚರಿ ಮತ್ತೊಂದು ಕ್ಷಣ ಭಾವುಕತೆಗೆ ನೂಕಿದ್ದು ಸುಳ್ಳಲ್ಲ. ಮನೆಯಿಂದ ಗುರೂಜಿ ಆಚೆ ಬಂದ ತಕ್ಷಣವೇ ರಚಿತಾ ಅವರು ಹಗ್ ಮಾಡಿಕೊಂಡು ಪತಿಯನ್ನು ಸ್ವಾಗತಿಸಿಕೊಳ್ಳಲಿ ಎಂದು ಹಾರೈಸೋಣ.

    Live Tv
    [brid partner=56869869 player=32851 video=960834 autoplay=true]

  • ಉಪ್ಪಿ-ರಚ್ಚು ಮಧ್ಯೆ  I Love You ವಾರ್- ಬುದ್ಧಿವಂತನ ಮೊದಲ ಪ್ರತಿಕ್ರಿಯೆ

    ಉಪ್ಪಿ-ರಚ್ಚು ಮಧ್ಯೆ I Love You ವಾರ್- ಬುದ್ಧಿವಂತನ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ನಾನು ಮತ್ತೆ ಯಾವತ್ತು ಈ ರೀತಿಯ ಪಾತ್ರ ಮಾಡಲ್ಲ ಎಂದು ಗುಳಿಕೆನ್ನೆ ಹುಡುಗಿ ರಚಿತಾ ರಾಮ್ ಶಪಥ ಮಾಡಿದ್ದರು. ರಚಿತಾ ರಾಮ್ ಅವರ ಈ ನಿರ್ಧಾರಕ್ಕೆ ನಟ ಉಪೇಂದ್ರ ಫಸ್ಟ್ ಟೈಮ್ ರಿಯಾಕ್ಟ್ ಮಾಡಿದ್ದಾರೆ. ಬಲವಂತವಾಗಿ ಆ್ಯಕ್ಟ್ ಮಾಡಿಸೋಕ್ಕೆ ಆಗುತ್ತಾ? ಸುಮಾರು ಸಿನಿಮಾಗಳಲ್ಲಿ ನಟಿಸಿರುವ ರಚಿತಾ ಈ ರೀತಿ ಹೇಳೋದು ಸರಿನಾ ಎಂದು ಪ್ರಶ್ನೆ ಮಾಡಿದ್ದಾರೆ.

    ‘ಐ ಲವ್ ಯೂ’ ಸಿನಿಮಾ ಅಂಗಳದಲ್ಲಿ ಏನಾಗಿತ್ತು ಎಂಬ ಬಗ್ಗೆ ರಿಯಲ್ ಸ್ಟಾರ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಉಪ್ಪಿ ‘ಐ ಲವ್ ಯೂ’ ಸಿನಿಮಾ ಸದ್ಯ ಥಿಯೇಟರ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆದರೆ ಸಿನಿಮಾದ ಒಂದು ಹಸಿಬಿಸಿ ದೃಶ್ಯ ಉಪೇಂದ್ರ ಮತ್ತು ರಚಿತಾ ರಾಮ್ ನಡುವಿನ ಕುಸ್ತಿಗೆ ಕಾರಣವಾಗಿದೆ. ಇನ್ನುಂದೆ ನಾನು ಇಂಥ ಪಾತ್ರ ಮಾಡಲ್ಲ. ಇದಕ್ಕೆಲ್ಲಾ ಉಪೇಂದ್ರ ಅವರೇ ಕಾರಣ ಎಂದು ರಚಿತಾ ರಾಮ್ ಆರೋಪಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ಪ್ರಿಯಾಂಕಾ ಉಪೇಂದ್ರ ಪದೇ ಪದೇ ಉಪ್ಪಿ ಹೆಸರು ತರಬೇಡಿ ಎಂದು ಗರಂ ಆಗಿದ್ದರು.

    ಈ ಬಗ್ಗೆ ಮಾತನಾಡಿರುವ ಉಪೇಂದ್ರ ಅವರು, ಒಂದು ಸೀನ್‍ನಿಂದ ಸಿನಿಮಾ ಸಕ್ಸಸ್ ಆಗುವ ಹಾಗಿದ್ದರೆ ಎಲ್ಲಾ ಸಿನಿಮಾದಲ್ಲೂ ಆ ರೀತಿಯ ಸೀನ್ ಮಾಡಿಬಿಡುತ್ತಿದ್ದರು. ಅದು ಅಲ್ಲದೇ ಖ್ಯಾತ, ಹಿರಿಯ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ ಅವರು ಈ ಹಾಡಿಗೆ ನೃತ್ಯ ನಿದೇಶನ ಮಾಡಿದ್ದರು. ಅವರು ಹೇಳಿದನ್ನ ಮಾಡುವುದೇ ನಟರಿಗೆ ದೊಡ್ಡ ಟಾಸ್ಕ್. ಹೀಗಿರೋವಾಗ ನಾನೇ ಡೈರೆಕ್ಟ್ ಮಾಡಿದೆ ಎಂದು ರಚಿತಾ ರಾಮ್ ಹೇಳಿದ್ದು ಸರಿಯಲ್ಲ. ಅವರಿಗೆ ಇಷ್ಟ ಇಲ್ಲದಿದ್ದರೆ ಆಗಲ್ಲ ಎಂದು ಹೇಳಬಹುದಿತ್ತು ಎಂದಿದ್ದಾರೆ.

    ನಿರ್ದೇಶಕರು ತುಂಬಾ ಮುತುವರ್ಜಿ ವಹಿಸಿ ಈ ದೃಶ್ಯವನ್ನು ನಿರ್ದೇಶನ ಮಾಡಿದ್ದಾರೆ. ಏಕೆಂದರೆ ಇಂತಹ ದೃಶ್ಯ ಮಾಡುವ ವೇಳೆ ನೋಡುಗರಿಗೆ ಇಷ್ಟವಾಗಬೇಕು. ಆದ್ದರಿಂದಲೇ ಪ್ರತಿ ಬಾರಿ ಮಾನಿಟರ್ ನೋಡಿ ದೃಶ್ಯ ಚೆನ್ನಾಗಿಲ್ಲಾ ಎಂದರೆ ರಿ ಟೇಕ್ ಮಾಡುತ್ತಿದ್ದರು. ಅಂದಹಾಗೇ ಇದನ್ನು ಅವರು ಯಾವುದೋ ಫೀಲಿಂಗ್‍ನಲ್ಲಿ ಹೇಳಿದ್ದಾರೆ. ಅದು 10 ಬಾರಿ ಪದೇ ಪದೇ ಕೇಳಿರುವುದರಿಂದ ಎಮೋಷನಲ್ ಆಗಿ ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.

    ಆರ್. ಚಂದ್ರು ನಿರ್ದೇಶನದ ಸಿನಿಮಾಗೆ ಜನ ಒಳ್ಳೆ ಪ್ರತಿಕ್ರಿಯೆ ನೀಡಿದ್ದಾರೆ. ಥೇಟರ್‍ನಲ್ಲಿ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ರಚಿತಾ ರಾಮ್ ಹೇಳಿಕೆ ಮಾತ್ರ ಮತ್ತೆ ಮತ್ತೆ ಸೌಂಡ್ ಮಾಡುತ್ತಿದೆ.