Tag: Race-3

  • ರೇಸ್-3ರಲ್ಲಿ ಒಂದಾಗಲಿದ್ದಾರೆ ಹಾಟ್ ಜೋಡಿ ಇಮ್ರಾನ್ ಹಶ್ಮಿ-ಡೈಸಿ ಶಾ

    ರೇಸ್-3ರಲ್ಲಿ ಒಂದಾಗಲಿದ್ದಾರೆ ಹಾಟ್ ಜೋಡಿ ಇಮ್ರಾನ್ ಹಶ್ಮಿ-ಡೈಸಿ ಶಾ

    ಮುಂಬೈ: ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಜಾಕ್ವೇಲಿನ್ ಫರ್ನಾಂಡಿಸ್ ಒಟ್ಟಿಗೆ ನಟಿಸುವುದು ನಿಮಗೆಲ್ಲಾ ಗೊತ್ತೆಯಿದೆ. ಈ ಚಿತ್ರದ ಮತ್ತೊಬ್ಬ ನಟನಾಗಿ ಇಮ್ರಾನ್ ಹಶ್ಮಿಯರನ್ನು ಆಯ್ಕೆ ಮಾಡಲಾಗಿದೆ.

    ರೇಸ್-3 ಚಿತ್ರದಲ್ಲಿ ಮತ್ತೊಬ್ಬ ನಟರನ್ನಾಗಿ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಆದಿತ್ಯ ರಾಯ್ ಕಪೂರ್ ಅವರ ಹೆಸರನ್ನು ಸೂಚಿಸಲಾಗಿತ್ತು. ಆದರೆ ಇಬ್ಬರು ನಟರು ಈ ಚಿತ್ರವನ್ನು ನಿರಾಕರಿಸಿದ್ದಾರೆ. ಈಗ ಈ ಚಿತ್ರ ಇಮ್ರಾನ್ ಹಶ್ಮಿಗೆ ಒಲಿದಿದೆ.

    ಇಮ್ರಾನ್ ಹಶ್ಮಿ ಜೊತೆ ನಾಯಕಿಯಾಗಿ ಹೇಟ್ ಸ್ಟೋರಿ-3 ಚಿತ್ರದ ನಾಯಕಿ ಡೈಸಿ ಶಾ ಕಾಣಿಸಿಕೊಳ್ಳಲಿದ್ದಾರೆ. ರೇಸ್-3 ಚಿತ್ರದ ನಟ-ನಟಿಯರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ. ಸಲ್ಮಾನ್ ಖಾನ್ ನಟನೆಯ ‘ಟೈಗರ್ ಜಿಂದಾ ಹೇ’ ಚಿತ್ರ ಮುಗಿದ ನಂತರ ರೇಸ್-3 ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

     

  • ಸಲ್ಮಾನ್ ಜೊತೆ ನಟಿಸಲ್ಲ ಎಂದ ಸಿದ್ಧಾರ್ಥ್ ಮಲ್ಹೋತ್ರ

    ಸಲ್ಮಾನ್ ಜೊತೆ ನಟಿಸಲ್ಲ ಎಂದ ಸಿದ್ಧಾರ್ಥ್ ಮಲ್ಹೋತ್ರ

    ಮುಂಬೈ: ರೇಸ್-3 ಚಿತ್ರದಲ್ಲಿ ಬಾಲಿವುಡ್ ಭಾಯ್‍ಜಾನ್ ನಟಿಸುತ್ತಿರುವುದು ನಿಮಗೆಲ್ಲ ಗೊತ್ತೆಯಿದೆ. ಈ ಚಿತ್ರದ ಮತ್ತೊಂದು ಪಾತ್ರಕ್ಕೆ ಸಿದ್ಧಾರ್ಥ್ ಮಲ್ಹೋತ್ರ ಅವರ ಹೆಸರು ಸಲ್ಮಾನ್ ಸೂಚಿಸಿದ್ದರು. ಆದರೆ ಈಗ ಸಿದ್ಧರ್ಥ್ ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ.

    ವರದಿಯೊಂದರ ಪ್ರಕಾರ ಸಿದ್ಧಾರ್ಥ್ ರೇಸ್-3 ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ. ಸಿದ್ಧಾರ್ಥ್ ಸಿನಿಮಾದ ಕಥೆ ಇಷ್ಟವಾಗಲಿಲ್ಲ ಹಾಗೂ ಚಿತ್ರತಂಡ ಅವರ ಉತ್ತರಕ್ಕಾಗಿ ಕಾಯಬಾರದೆಂದು ಸಿನಿಮಾವನ್ನು ಒಪ್ಪಿಕೊಂಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ.

    ರೇಸ್-3 ಚಿತ್ರದಲ್ಲಿ ಸಲ್ಮಾನ್ ಹಾಗೂ ಸಿದ್ಧಾರ್ಥ್ ಪಾತ್ರದ ನಡುವೆ ಪೈಪೋಟಿ ಇದೆ ಹಾಗೂ ಇದರಲ್ಲಿ ನಟರ ಪಾತ್ರ ಕಡಿಮೆಯಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಸಲ್ಮಾನ್ ಖಾನ್ ಜೊತೆಯಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ಡೈಸಿ ಶಾ ಕಾಣಿಸಿಕೊಳ್ಳಲಿದ್ದಾರೆ.

  • ಅನಿಲ್ ಕಪೂರ್ ಪಾತ್ರ ಮಾಡಲಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್!

    ಅನಿಲ್ ಕಪೂರ್ ಪಾತ್ರ ಮಾಡಲಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್!

    ಮುಂಬೈ: ಸೈಫ್ ಅಲಿ ಖಾನ್ ಅಭಿನಯದ ರೇಸ್ ಚಿತ್ರದ ಮೂರನೇ ಭಾಗದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಹಿಂದಿನ ರೇಸ್ ಸಿನಿಮಾದ ಎರಡು ಭಾಗಗಳಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಕಪೂರ್ ಪಾತ್ರವನ್ನು ರೇಸ್-3 ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಲಿದ್ದಾರೆ.

    ಇದುವರೆಗೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಜಾಕ್ವೇಲಿನ್ ನಟಿಸುತ್ತಿದ್ದು, ಧೂಮ್ ಚಿತ್ರಗಳಲ್ಲಿ ಅಭಿಷೇಕ್ ಬಚ್ಚನ್ ನಿರ್ವಹಿಸಿದ ಪಾತ್ರವನ್ನು ಜಾಕ್ವೆಲಿನ್ ನಟಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

    ರೇಸ್ ಮೊದಲ ಮತ್ತು ಎರಡನೇಯ ಭಾಗದಲ್ಲಿ ಅನಿಲ್ ಕಪೂರ್ ನಟಿಸಿದ್ದರು. ಆದರೆ ಚಿತ್ರದ ನಿರ್ಮಾಪಕರು ಈ ಚಿತ್ರದಲ್ಲಿ ಏನಾದರೂ ಹೊಸದಾಗಿ ಇರಲಿ ಎಂದು ಜಾಕ್ವೆಲಿನ್ ಅವರಿಗೆ ಪೊಲೀಸ್ ಅಧಿಕಾರಿಯ ಪಾತ್ರವನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಚಿತ್ರದಲ್ಲಿ ಸ್ಟಂಟ್‍ಗಳು ತುಂಬಾ ಇದೆ ಹಾಗೂ ಅದನ್ನೆಲ್ಲ ಸ್ವತಃ ಜಾಕ್ವೆಲಿನ್ ಮಾಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ ರೇಸ್-2 ಸಿನಿಮಾದಲ್ಲಿ ತಮ್ಮ ಗ್ಲಾಮರ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಜಾಕ್ವೆಲಿನ್ ಈಗ ಪೊಲೀಸ್ ಅಧಿಕಾರಿಯಾಗಿ ರಂಜಿಸಲಿದ್ದಾರೆ.

  • ಸಲ್ಮಾನ್ ಜೊತೆ ರೇಸ್ ನಲ್ಲಿ ಭಾಗವಹಿಸಲಿದ್ದಾರೆ ಸಿದ್ಧಾರ್ಥ್ ಮಲ್ಹೋತ್ರ?

    ಸಲ್ಮಾನ್ ಜೊತೆ ರೇಸ್ ನಲ್ಲಿ ಭಾಗವಹಿಸಲಿದ್ದಾರೆ ಸಿದ್ಧಾರ್ಥ್ ಮಲ್ಹೋತ್ರ?

    ಮುಂಬೈ: ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ವೇಲಿನ್ ಫೆರ್ನಾಂಡಿಸ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ನಿಮಗೆಲ್ಲಾ ಗೊತ್ತೆಯಿದೆ. ಆದರೆ ಈಗ ಸಿದ್ಧಾರ್ಥ್ ಮಲ್ಹೋತ್ರ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

    ಸಲ್ಮಾನ್ ರೇಸ್-3 ಚಿತ್ರಕ್ಕಾಗಿ ಸಿದ್ಧ್ ಅವರ ಹೆಸರನ್ನು ಸೂಚಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಲ್ಮಾನ್ ಖಾನ್ ಯುವ ನಟ ಸಿದ್ದಾರ್ಥ್ ನಟನೆಯನ್ನು ಮೆಚ್ಚಿಕೊಂಡಿದ್ದು, ಹಾಗಾಗಿ ಚಿತ್ರತಂಡಕ್ಕೆ ಸಿದ್ದಾರ್ಥ್ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸಿದ್ದಾರ್ಥ್ ನಟಿಸಿದ್ರೆ ಇದು ಅವರ ಸಿನಿಮಾ ಜೀವನದಲ್ಲಿ ಮತ್ತಷ್ಟು ಹೆಸರನ್ನು ತಂದುಕೊಡಲಿದೆ.

    ಸಿದ್ಧಾರ್ಥ್ ಈ ಹಿಂದೆ `ಜೆಂಟಲ್ ಮೆನ್’ ಚಿತ್ರದಲ್ಲಿ ಜಾಕ್ವೇಲಿನ್ ಜೊತೆ ನಟಿಸಿದ್ದರು. ರೇಸ್-3 ಚಿತ್ರದಲ್ಲಿ ನಟಿಸಲು ಸಿದ್ದಾರ್ಥ್ ಒಪ್ಪಿದ್ದರೆ ಜಾಕ್ವೇಲಿನ್ ಅವರ ಜೊತೆ ಮತ್ತೊಮ್ಮೆ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಸಲ್ಮಾನ್ ಜೊತೆ ಮೊದಲನೇ ಬಾರಿಗೆ ತೆರೆಯನ್ನು ಹಂಚಿಕೊಳ್ಳಲಿದ್ದಾರೆ.

    ಸಿದ್ದಾರ್ಥ ಈ ಮೊದಲು ಅಕ್ಷಯ್ ಕುಮಾರ್ ಅವರ ಜೊತೆ ‘ಬ್ರದರ್ಸ್’ ಚಿತ್ರದಲ್ಲಿ ನಟಿಸಿದ್ದರು. ಶಾರುಖ್ ಖಾನ್ ನಟಿಸಿದ್ದ ‘ಮೈ ನೇಮ್ ಈಸ್ ಖಾನ್’ ಚಿತ್ರದಲ್ಲಿ ಕರಣ್ ಜೋಹರ್ ಜೊತೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು.

  • ರೇಸ್ ನಲ್ಲಿ ಈ ನಟಿಯೊಂದಿಗೆ ಕಾಣಿಸಲಿದ್ದಾರೆ ಸಲ್ಮಾನ್ ಖಾನ್

    ರೇಸ್ ನಲ್ಲಿ ಈ ನಟಿಯೊಂದಿಗೆ ಕಾಣಿಸಲಿದ್ದಾರೆ ಸಲ್ಮಾನ್ ಖಾನ್

    ನವದೆಹಲಿ: ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಜಾಕ್ವೆಲಿನ್ ಫೆರ್ನಾಂಡಿಸ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ಈ ಬಾರಿ ಸೈಫ್ ಅಲಿ ಖಾನ್ ಬದಲಿಗೆ ರೇಸ್ ಚಿತ್ರದಲ್ಲಿ ಬಾಲಿವುಡ್‍ನ ಭಾಯಿಜಾನ್ ಸಲ್ಮಾನ್ ಅಭಿನಯಿಸುತ್ತಿದ್ದಾರೆ. 2ನೇ ಬಾರಿಗೆ ರೇಸ್ ಜಾಕ್ವೆಲಿನ್ ಕೈ ಹಿಡಿದಿದೆ. ಈ ಮೊದಲು 2013ರಲ್ಲಿ ರೇಸ್-2 ಚಿತ್ರದಲ್ಲಿ ಜಾಕ್ವೆಲಿನ್ ನಟಿಸುತ್ತಿದ್ದಾರೆ.

    ರೇಸ್ ಮೊದಲ ಮತ್ತು ಎರಡನೇ ಭಾಗವನ್ನು ಅಬ್ಬಾಸ್ ಮುಸ್ತಾನ್ ನಿರ್ದೇಶನ ಮಾಡಿದ್ದರು. ವರದಿಗಳ ಪ್ರಕಾರ ಕೋರಿಯೋಗ್ರಫರ್ ಮತ್ತು ನಿರ್ದೇಶಕ ರೆಮೋ ಡಿಸೋಜಾ ಮೂರನೇ ಭಾಗವನ್ನು ನಿರ್ದೇಶಿಸಲಿದ್ದಾರೆ. ಇನ್ನೂ ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರ ಬಂದಿಲ್ಲ.

    ಇದನ್ನೂ ಓದಿ: ಐಶ್ವರ್ಯ ರೈ ಜೊತೆ ನಟಿಸಲು ಈ ಕಾರಣಕ್ಕಾಗಿ ಹಿಂದೆ ಸರಿದ ಸಲ್ಮಾನ್

    ಜಾಕ್ವೆಲಿನ್ ಸದ್ಯ ತಮ್ಮ ‘ಎ ಜೆಂಟಲ್‍ಮೆನ್’ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯೂಸಿಯಾಗಿದ್ದಾರೆ. ಜುಡುವಾ-2ದಲ್ಲಿ ವರುಣ್ ಧವನ್ ಮತ್ತು ಡ್ರೈವ್ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೊತೆ ನಟಿಸುತ್ತಿದ್ದಾರೆ. ಇವರೆಡು ಫಿಲ್ಮ್ ಗಳ ಬಳಿಕ ಸಲ್ಮಾನ್ ಜೊತೆ ರೇಸ್ 3 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ರೇಸ್ ಮೊದಲ ಭಾಗದಲ್ಲಿ ಸೈಫ್ ಅಲಿ ಖಾನ್, ಕತ್ರೀನಾ ಕೈಫ್, ಅಕ್ಷಯ್ ಖನ್ನಾ, ಬಿಪಾಶಾ ಬಸು ಅಭಿನಯಿಸಿದ್ದರು. ರೇಸ್ 2 ಚಿತ್ರದಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಜಾಕ್ವೆಲಿನ್ ಫೆರ್ನಾಂಡಿಸ್ ನಟಿಸಿದ್ದರು. ಈ ಮೊದಲು 2014ರಲ್ಲಿ ಸಾಜಿದ್ ನದಿಯದ್‍ವಾಲ ನಿರ್ದೇಶಿಸಿದ್ದ ಕಿಕ್ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಕೆಮಿಸ್ಟ್ರಿ ವರ್ಕ್ ಔಟ್ ಆಗಿತ್ತು.

    ಇದನ್ನೂ ಓದಿ: ಈ ಬಾರಿ ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಇಲ್ಲ-ಯಾಕೆ ಗೊತ್ತಾ?