Tag: Race-3

  • ಸೋದರ ಸಲ್ಮಾನ್ ಖಾನ್ ಮೇಲೆ ಅರ್ಬಾಜ್ ಖಾನ್ ಮುನಿಸು!

    ಸೋದರ ಸಲ್ಮಾನ್ ಖಾನ್ ಮೇಲೆ ಅರ್ಬಾಜ್ ಖಾನ್ ಮುನಿಸು!

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮೇಲೆ ಸೋದರ ಅರ್ಬಾಜ್ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ. ದಬಾಂಗ್ 3 ಸಿನಿಮಾ ಮಾಡಲಿದ್ದೇನೆ ಎಂದು ಸಲ್ಮಾನ್ ಹೇಳಿಕೊಂಡಿದ್ದರೂ, ಚಿತ್ರೀಕರಣ ಆರಂಭವಾಗಿಲ್ಲ.

    ಅರ್ಬಾಜ್ ಖಾನ್ ನಿರ್ಮಾಣದಲ್ಲಿ ದಬಾಂಗ್-3 ಮೂಡಿ ಬರಲಿದೆ. ಈ ಹಿಂದೆ ಸಲ್ಮಾನ್, ಅರ್ಬಾಜ್ ನಿರ್ಮಾಣದ ದಬಾಂಗ್-3 ಚಿತ್ರೀಕರಣ ಮಾರ್ಚ್ ನಲ್ಲಿ ಆರಂಭವಾಗಲಿದೆ ಎಂದು ಹೇಳಿಕೊಂಡಿದ್ದರು. ಆದ್ರೆ ಮಾರ್ಚ್ ಕಳೆದು ಜುಲೈ ಬಂದರೂ ಸಿನಿಮಾದತ್ತ ಸಲ್ಲು ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

    ಯಾಕೆ ಈ ಮುನಿಸು?:
    ಸದ್ಯ ಸಲ್ಮಾನ್ ತನ್ನ ಹಿರಿಯ ಸಹೋದರಿ ಅಲ್ವೀರಾ ನಿರ್ಮಾಣದ ‘ಭಾರತ್’ ಶೂಟಿಂಗ್‍ನಲ್ಲಿ ಸಕ್ರಿಯರಾಗಿದ್ದಾರೆ. ಭಾರತ್ ಬಳಿಕ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿರುವ ಸಲ್ಮಾನ್ ದಬಾಂಗ್-3 ರತ್ತ ಮುಖ ಮಾಡುತ್ತಿಲ್ಲ. ಇದರಿಂದ ಸಹಜವಾಗಿ ಅರ್ಬಾಜ್ ಖಾನ್ ಸೋದರನ ಮೇಲೆ ಮುನಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಸಲ್ಮಾನ್ ಖಾನ್ ದಬಾಂಗ್-3 ಸಿನಿಮಾದಿಂದ ದೂರ ಉಳಿಯುತ್ತೀರೋದಕ್ಕೆ ಕಾರಣ ರೇಸ್-3. ಹೌದು, ಈ ವರ್ಷದ ರಂಜಾನ್ ಗೆ ರೇಸ್-3 ಸಿನಿಮಾ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿಕೊಂಡಿತ್ತು. ಆದ್ರೆ ವಿಮರ್ಶಕರು ಹಾಗು ಅಭಿಮಾನಿಗಳಿಂದ ಮಾತ್ರ ರೇಸ್-3ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ರೇಸ್-3 ರಿಲೀಸ್ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಅಭಿಮಾಗಳು ಟ್ರೋಲ್ ಮಾಡಲಾರಂಭಿಸಿದ್ರು. ನಮಗೆ ರೇಸ್-3 ಒಂದೇ ಸಾಕು, ದಬಾಂಗ್-3 ಬೇಡ ಎಂದು ಬರೆದು ಸಲ್ಮಾನ್ ಗೆ ಟ್ಯಾಗ್ ಮಾಡಲಾರಂಭಿಸಿದರು.

    ಸೋಶಿಯಲ್ ಮೀಡಿಯಾದಲ್ಲಿ ಮೂರನೇ ಆವೃತ್ತಿಯ ಚಿತ್ರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ದಬಾಂಗ್-3 ರಿಂದ ದೂರ ಉಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸಲ್ಮಾನ್‍ಗಾಗಿ ಕಥೆ ಸಿದ್ಧಪಡಿಸಿಕೊಂಡಿರುವ ಅರ್ಬಾಜ್ ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ.

  • ಸ್ಟಂಟ್ ಮಾಡಲು ಹೋಗಿ ಶಾಶ್ವತವಾಗಿ ಕಣ್ಣಿಗೆ ಗಾಯಮಾಡಿಕೊಂಡ ಜಾಕ್ವೇಲಿನ್!

    ಸ್ಟಂಟ್ ಮಾಡಲು ಹೋಗಿ ಶಾಶ್ವತವಾಗಿ ಕಣ್ಣಿಗೆ ಗಾಯಮಾಡಿಕೊಂಡ ಜಾಕ್ವೇಲಿನ್!

    ಮುಂಬೈ: ಬಾಲಿವುಡ್ ಬೆಡಗಿ ಜಾಕ್ವೇಲಿನ್ ಫರ್ನಾಂಡಿಸ್ ರೇಸ್- 3 ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈಗ ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

    ಜಾಕ್ವೇಲಿನ್ ರೇಸ್-3 ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರು ಸಾಕಷ್ಟು ಆ್ಯಕ್ಷನ್ ಸ್ಟಂಟ್ ಮಾಡಿದ್ದಾರೆ. ಹೀಗೆ ಮಾರ್ಚ್ ತಿಂಗಳಲ್ಲಿ ಜಾಕ್ವೇಲಿನ್ ಚಿತ್ರಕ್ಕಾಗಿ ಸಾಹಸ ದೃಶ್ಯ ಮಾಡುವಾಗ ತಮ್ಮ ಕಣ್ಣಿಗೆ ಗಾಯ ಮಾಡಿಕೊಂಡಿದ್ದರು. ಆದರೆ ಈ ಗಾಯ ಈಗ ಶಾಶ್ವತವಾಗಿರುತ್ತದೆ ಎಂದು ಹೇಳುವ ಮೂಲಕ ಜಾಕ್ವೇಲಿನ್ ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

    ಜಾಕ್ವೇಲಿನ್ ತಮ್ಮ ಕಣ್ಣಿನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ “ಈ ಗಾಯ ಈಗ ಶಾಶ್ವತವಾಗಿ ಇರುತ್ತದೆ. ನನ್ನ ಐರಿಸ್ ಎಂದಿಗೂ ವೃತ್ತಾಕಾರ ಆಗುವುದಿಲ್ಲ. ಆದರೆ ನನಗೆ ಸರಿಯಾಗಿ ಕಣ್ಣು ಕಾಣಿಸುತ್ತಿರುವುದು ಸಂತೋಷವಾಗಿದೆ. ಇದು ರೇಸ್-3 ಚಿತ್ರದ ನೆನಪು” ಎಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

    ರೇಸ್-3 ಚಿತ್ರ ಅಬುಧಾಬಿಯಲ್ಲಿ ಚಿತ್ರೀಕರಿಸುವಾಗ ಜಾಕ್ವೇಲಿನ್ ಸ್ಕ್ವಾಶ್ ಆಡುತ್ತಿದ್ದರು. ಆ ವೇಳೆ ತಮ್ಮ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಆಗ ತಕ್ಷಣ ಜಾಕ್ವೇಲಿನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಿದ್ದರು.

    ಜಾಕ್ವೇಲಿನ್ ಅವರ ಕಣ್ಣಿಗೆ ಗಾಯವಾಗಿದೆ. ಇದು ಒಂದು ಸಾಮಾನ್ಯವಾದ ಗಾಯ. ಸ್ಕ್ವಾಶ್ ಆಡುವಾಗ ಜಾಕ್ವೇಲಿನ್ ಕಣ್ಣಿನ ಮೇಲ್ಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ಈಗ ಜಾಕ್ವೇಲಿನ್ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ರೇಸ್-3 ಚಿತ್ರದ ನಿರ್ಮಾಪಕ ರಮೇಶ್ ತೌರಾಣಿ ಹೇಳಿದ್ದರು.

    ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್, ಬಾಬಿ ಡಿಯೋಲ್, ಅನಿಲ್ ಕಪೂರ್, ಡೈಸಿ ಷಾ ಹಾಗೂ ಸಾಕಿಬ್ ಸಲೀಮ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಜೂನ್ 15ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

  • ಜೈಲಿನಲ್ಲಿದ್ದಾಗ ನಿರ್ಮಾಪಕರ ಬಗ್ಗೆ ನೋವಾಗಲಿಲ್ವಾ ಎಂದು ಪ್ರಶ್ನಿಸಿದ್ದಕ್ಕೆ ಖಡಕ್ಕಾಗಿ ಉತ್ತರಿಸಿದ ಸಲ್ಮಾನ್!

    ಜೈಲಿನಲ್ಲಿದ್ದಾಗ ನಿರ್ಮಾಪಕರ ಬಗ್ಗೆ ನೋವಾಗಲಿಲ್ವಾ ಎಂದು ಪ್ರಶ್ನಿಸಿದ್ದಕ್ಕೆ ಖಡಕ್ಕಾಗಿ ಉತ್ತರಿಸಿದ ಸಲ್ಮಾನ್!

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಟಿಸಿದ ರೇಸ್-3 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯಾದ ಮೇಲೆ ಸಲ್ಮಾನ್ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಪತ್ರಕರ್ತರ ಮೇಲೆ ಗುಡುಗಿದ್ದಾರೆ.

    ಇತ್ತೀಚೆಗೆ ಸಲ್ಮಾನ್ ಖಾನ್ ನಟನೆಯ ರೇಸ್-3 ಟ್ರೇಲರ್ ಬಿಡುಗಡೆಯಾಗಿತ್ತು. ಈ ಸಂದರ್ಭದಲ್ಲಿ ಚಿತ್ರತಂಡ ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಆಗ ಪತ್ರಕರ್ತರು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನೀವು ಅಪರಾಧಿಯಾಗಿ ಜೈಲಿನಲ್ಲಿದ್ದಿರಿ. ಆಗ ನಿಮಗೆ ನಿಮ್ಮ ನಿರ್ಮಾಪಕರು ಹಾಗೂ ಅವರ ಹಣದ ಬಗ್ಗೆ ನಿಮಗೆ ನೋವಾಗಲಿಲ್ಲವೇ ಎಂದು ಸಲ್ಮಾನ್ ಖಾನ್‍ಗೆ ಪ್ರಶ್ನಿಸಿದ್ದರು.

    ಈ ಪ್ರಶ್ನೆಗೆ ಸಲ್ಮಾನ್ ಖಾನ್ ರೊಚ್ಚಿಗೆದ್ದು, ನಾನು ಜೀವನ ಪೂರ್ತಿ ಜೈಲಿನಲ್ಲೇ ಇರುತ್ತೇನೆ ಎಂದು ನೀವೆಲ್ಲಾ ಅಂದುಕೊಂಡಿದ್ದೀರ ಎಂದು ಸಲ್ಮಾನ್ ಖಾನ್ ಖಡಕ್ ಉತ್ತರ ನೀಡುವ ಮೂಲಕ ಪತ್ರಕರ್ತರಿಗೆ ಮರು ಪ್ರಶ್ನಿಸಿದ್ದಾರೆ. ಸಲ್ಮಾನ್ ಪ್ರಶ್ನೆಗೆ ಪತ್ರಕರ್ತರು ಹಾಗೇನು ಇಲ್ಲ ಎಂದು ಉತ್ತರಿಸಿದ್ದಾರೆ. ಆಗ ಸಲ್ಮಾನ್ ಖಾನ್, ‘ಥ್ಯಾಂಕ್ಯೂ ನಾನು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

    1998ರ ಸೆಪ್ಟೆಂಬರ್ 26 ರಾಜಸ್ಥಾನದ ಕಂಕಾನಿ ಗ್ರಾಮದಲ್ಲಿ `ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣ ಮೃಗದ ಬೇಟೆ ಆಡಿದ್ದರು. ಸಲ್ಮಾನ್ ಬೇಟೆ ಆಡುವ ವೇಳೆ ಸೈಫ್ ಅಲಿ ಖಾನ್, ತಬು, ಸೊನಾಲಿ ಬೇಂದ್ರೆ, ನೀಲಮ್ ಸಹ ಹಾಜರಿದ್ದರು. ಅಳಿವಿನಂಚಿನಲ್ಲಿರುವ ಕೃಷ್ಣ ಮೃಗ ಬೇಟೆಗೆ ನಟರು ಜಿಪ್ಸಿ ಬಳಸಿದ್ದರು. ಅಕ್ರಮ ಶಸ್ತ್ರಾಸ್ತ್ರ, ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಸಲ್ಮಾನ್ ಸೇರಿ ಎಲ್ಲರ ಮೇಲೆ ನಾಲ್ಕು ಕೇಸ್ ದಾಖಲಾಗಿತ್ತು.

    ಎರಡು ದಶಕಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್‍ಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ದಂಡವನ್ನು ವಿಧಿಸಿ ಜೋಧಪುರ ಸಿಜೆಎಂ ಕೋರ್ಟ್ ಶಿಕ್ಷೆ ತೀರ್ಪು ನೀಡಿತ್ತು. ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆಯ ಪ್ರಮಾಣವನ್ನು ಜೋದ್‍ಪುರ ಕೋರ್ಟ್ ಪ್ರಕಟಿಸುತ್ತಿದ್ದಂತೆ ಬಾಲಿವುಡ್ ನಿರ್ಮಾಪಕರ ಎದೆಯಾಳದಲ್ಲಿ ನಡುಕ ಆರಂಭವಾಗಿತ್ತು.

    ಸಲ್ಮಾನ್ ಖಾನ್ ಗಾಗಿ ಈಗಾಗಲೇ ಹಲವು ನಿರ್ಮಾಪಕರು 500 ಕೋಟಿಗೂ ಅಧಿಕ ಬಂಡವಾಳವನ್ನು ಹೂಡಿದ್ದರು. ಒಂದು ವೇಳೆ ಸಲ್ಮಾನ್ ಖಾನ್‍ಗೆ ಜಾಮೀನು ಸಿಗದೇ ಇದ್ದರೆ ನಿರ್ಮಾಪಕರು ಕೋಟ್ಯಾಂತರ ರೂ. ನಷ್ಟ ಅನುಭವಿಸಬೇಕಿತ್ತು. ಕೃಷ್ಣಮೃಗ ಬೇಟೆ ಪ್ರಕರಣದ ಬಗ್ಗೆ ಸಲ್ಮಾನ್ ಖಾನ್ ಎಲ್ಲಿಯೂ ಮಾತನಾಡಿರಲಿಲ್ಲ. ಹಾಗಾಗಿ ಪತ್ರಕರ್ತರು ರೇಸ್-3 ಸುದ್ದಿಗೋಷ್ಠಿ ವೇಳೆ ಸಲ್ಮಾನ್ ಖಾನ್ ಅವರಲ್ಲಿ ಈ ಮೇಲಿನ ಪ್ರಶ್ನೆಯನ್ನು ಕೇಳಿದ್ದರು.

    ರೆಮೋ ಡಿಸೋಜಾ ನಿರ್ದೇಶನದಲ್ಲಿ ರೇಸ್-3 ಚಿತ್ರ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ರಮೇಶ್ ಎಸ್.ತೌರಾನಿ ಮತ್ತು ಸಲ್ಮಾನ್ ಖಾನ್ ಬಂಡವಾಳ ವಿನಿಯೋಗಿಸಿದ್ದಾರೆ. ಸಲ್ಮಾನ್ ಖಾನ್, ಅನಿಲ್ ಕಪೂರ್, ಬಾಬಿ ಡಿಯೋಲ್, ಜಾಕ್ವೇಲಿನ್ ಫರ್ನಾಂಡೀಸ್, ಡೈಸಿ ಶಾ ಮತ್ತು ಸಖೀಬ್ ಸಲೀಂ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಸಿನಿಮಾ ಈ ಬಾರಿಯ ಈದ್ ಗೆ ರಿಲೀಸ್ ಆಗಲಿದೆ.

  • ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಕಾರು ಅಪಘಾತ!

    ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಕಾರು ಅಪಘಾತ!

    ಮುಂಬೈ: ಕಳೆದ ರಾತ್ರಿ ಬಾಲಿವುಡ್ ಬೆಡಗಿ ಜಾಕ್ವೇಲಿನ್ ಫರ್ನಾಂಡಿಸ್ ಪ್ರಯಾಣಿಸುತ್ತಿದ್ದ ಕಾರು ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಸಲ್ಮಾನ್ ಖಾನ್ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ಜಾಕ್ವೇಲಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರೇಸ್- 3 ಚಿತ್ರದ ಶೂಟಿಂಗ್ ಮುಗಿದು, ಬಿಡುಗಡೆಗೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಜಾಕ್ವೇಲಿನ್ ಕೂಡ ಭಾಗಿಯಾಗಿದ್ದರು.

    ವರದಿಗಳ ಪ್ರಕಾರ ಗುರುವಾರ ರಾತ್ರಿ 10.30ಕ್ಕೆ ಪಾರ್ಟಿ ಆರಂಭವಾಗಿತ್ತು. ಜಾಕ್ವೇಲಿನ್ ಪಾರ್ಟಿ ಮುಗಿಸಿ ಮಧ್ಯರಾತ್ರಿ 2.00 ಗಂಟೆಗೆ ಸಲ್ಮಾನ್ ಖಾನ್ ಮನೆಯಿಂದ ಕಾರಿನಲ್ಲಿ ಹೊರಟಿದ್ದು, ಮಧ್ಯರಾತ್ರಿ ಸುಮಾರು 2.45ಕ್ಕೆ ಬಾಂದ್ರಾದ ಕಾರ್ಟರ್ ರೋಡ್‍ನಲ್ಲಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ.

    ಸದ್ಯ ಈ ಅಪಘಾತದಲ್ಲಿ ಜಾಕ್ವೇಲಿನ್ ಕಾರಿನ ಹೆಡ್‍ಲೈಟ್ಸ್ ಹೊಡೆದು ಹೋಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

    ರೆಮೋ ಡಿಸೋಜಾ ನಿರ್ದೇಶನದಲ್ಲಿ ರೇಸ್-3 ಚಿತ್ರ ಮೂಡಿ ಬರುತ್ತಿದ್ದು, ರಮೇಶ್ ಎಸ್.ತೌರಾನಿ ಮತ್ತು ಸಲ್ಮಾನ್ ಖಾನ್ ಬಂಡವಾಳ ಹಾಕಿದ್ದಾರೆ. ಸಲ್ಮಾನ್ ಖಾನ್, ಅನಿಲ್ ಕಪೂರ್, ಸನ್ನಿ ಡಿಯೋಲ್, ಜಾಕ್ವೇಲಿನ್ ಫರ್ನಾಂಡೀಸ್, ಡೈಸಿ ಶಾ ಮತ್ತು ಸಖೀಬ್ ಸಲೀಂ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಸಿನಿಮಾ ಈ ಬಾರಿ ಈದ್ ಗೆ ರಿಲೀಸ್ ಆಗಲಿದೆ.

  • ವೈರಲ್ ಫೋಟೋ ನೋಡಿ ಅಭಿಮಾನಿಗಳು ಹೇಳ್ತಿದ್ದಾರೆ ಸಲ್ಲು ಈಸ್ ಹಾಟ್!

    ವೈರಲ್ ಫೋಟೋ ನೋಡಿ ಅಭಿಮಾನಿಗಳು ಹೇಳ್ತಿದ್ದಾರೆ ಸಲ್ಲು ಈಸ್ ಹಾಟ್!

    ಮುಂಬೈ: ಬಾಲಿವುಡ್ ನ ಸಲ್ಮಾನ್ ಖಾನ್ ಅವರು ತಮ್ಮ ನಟನೆ ಹಾಗೂ ಸಿಕ್ಸ್ ಪ್ಯಾಕ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡ ಸಲ್ಮಾನ್ ಸದ್ಯ ರೇಸ್-3 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

    ಕಾಶ್ಮೀರದಲ್ಲಿ ರೇಸ್-3 ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ನಟಿ ಜಾಕ್ವೇಲಿನ ಫರ್ನಾಂಡೀಸ್ ಎರಡನೇ ಬಾರಿ ಸಲ್ಮಾನ್‍ಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಗುರುವಾರ ಸಾಮಾಜಿಕ ಜಾಲತಾಣದಲ್ಲಿ ರೇಸ್ -3 ಚಿತ್ರೀಕರಣದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ನೋಡಿದ ಅಭಿಮಾನಿಗಳೆಲ್ಲಾ ಸಲ್ಮಾನ್ ಹಾಟ್ ಅಂತಾ ಕಮೆಂಟ್ ಮಾಡ್ತಿದ್ದಾರೆ. ಇದನ್ನೂ ಓದಿ: ರೇಸ್-3 ಸಿನಿಮಾದಲ್ಲಿ ಈ ಕಾರಣಕ್ಕೆ ಕಿಸ್ಸಿಂಗ್ ಸೀನ್ ಮಾಡಲ್ಲ ಎಂದ ಸಲ್ಮಾನ್

    ಏನದು ಫೋಟೋ?: ಭೂ ಲೋಕದ ಸ್ವರ್ಗ ಅಂತಾನೇ ಕರೆಸಿಕೊಳ್ಳುವ ಕಾಶ್ಮೀರದಲ್ಲಿ ರೇಸ್-3 ಚಿತ್ರೀಕರಣ ನಡೆಯುತ್ತಿದೆ. ಸಲ್ಮಾನ್ ಮತ್ತು ಜಾಕ್ವೇಲಿನ್ ಜೊತೆಯಾಗಿರುವ ಫೋಟೋ ವೈರಲ್ ಆಗಿದೆ. ಕಾಶ್ಮೀರದಲ್ಲಿ ಸಿಕ್ಕಾಪಟ್ಟೆ ಚಳಿಯಿಂದಾಗಿ ಜಾಕ್ವೇಲಿನ್ ಸ್ವೆಟ್ಟರ್ ಮತ್ತು ಬ್ಲಾಂಕೇಟ್ ಹಾಕಿಕೊಂಡು ನಡುಗುತ್ತಾ ಹಾಟ್ ಡ್ರಿಂಕ್ (ಕಾಫೀ, ಟೀ) ಕುಡಿಯುತ್ತಿದ್ದಾರೆ. ಇತ್ತ ಸಲ್ಮಾನ್ ಮಾತ್ರ ಕೇವಲ ಬನಿಯಾನ್ ಮತ್ತು ನೀಲಿ ಬಣ್ಣದ ಜೀನ್ಸ್ ಧರಿಸಿ ಓರೆಯ ಲುಕ್ ನೀಡಿದ್ದಾರೆ. ಅಷ್ಟೂ ಚಳಿ ಇದ್ದರೂ ಸಲ್ಮಾನ್ ಮಾತ್ರ ಬನಿಯಾನ್ ನಲ್ಲಿ ನಿಂತಿರುವುದನ್ನು ನೋಡಿದ ಅಭಿಮಾನಿಗಳು ಭಾಯಿಜಾನ್ ಸಿಕ್ಕಾಪಟ್ಟೆ ಹಾಟ್ ಅಂತಾ ಹೇಳ್ತಿದ್ದಾರೆ.

    ರೆಮೋ ಡಿಸೋಜಾ ನಿರ್ದೇಶನದಲ್ಲಿ ರೇಸ್-3 ಚಿತ್ರ ಮೂಡಿ ಬರುತ್ತಿದ್ದು, ರಮೇಶ್ ಎಸ್.ತೌರಾನಿ ಮತ್ತು ಸಲ್ಮಾನ್ ಖಾನ್ ಬಂಡವಾಳ ವಿನಿಯೋಗಿಸಿದ್ದಾರೆ. ಸಲ್ಮಾನ್ ಖಾನ್, ಅನಿಲ್ ಕಪೂರ್, ಸನ್ನಿ ಡಿಯೋಲ್, ಜಾಕ್ವೇಲಿನ್ ಫರ್ನಾಂಡೀಸ್, ಡೈಸಿ ಶಾ ಮತ್ತು ಸಖೀಬ್ ಸಲೀಂ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಸಿನಿಮಾ ಈ ಬಾರಿ ಈದ್ ಗೆ ರಿಲೀಸ್ ಆಗಲಿದೆ. ಇದನ್ನೂ ಓದಿ:  ರೇಸ್-3 ಸಿನಿಮಾದ ಸಲ್ಮಾನ್ ಆ್ಯಕ್ಷನ್ ಸೀನ್ ಲೀಕ್- ನೋಡಿದ್ರೆ ನೀವೂ ‘ವಾವ್’ ಅನ್ತೀರಿ

    ರೇಸ್ ಹಾಗೂ ರೇಸ್-2 ಚಿತ್ರದಲ್ಲಿ ಸಾಕಷ್ಟು ಹಾಟ್ ಸೀನ್‍ಗಳಿದ್ದವು. ಆದರೆ ಸಲ್ಮಾನ್ ರೇಸ್-3ಯಲ್ಲಿ ಒಂದೇ ಒಂದು ಹಾಟ್ ಸೀನ್ ಇರಬಾರದು. ಈ ಸಿನಿಮಾ ಕೌಟುಂಬಿಕ ಸಿನಿಮಾ ರೀತಿ ಇರಬೇಕು. ಫ್ಯಾಮಿಲಿ ಆಡಿಯನ್ಸ್ ನೋಡುವ ಹಾಗೇ ಇರಬೇಕು ಎಂದು ಸಲ್ಮಾನ್ ತಿಳಿಸಿದ್ದಾರೆ. ಇದನ್ನೂ ಓದಿ: ರೇಸ್-3 ಚಿತ್ರದಲ್ಲಿ ಈ ಎರಡೂ ಸೀನ್ ಮಾಡಲ್ಲ ಎಂದ ಸಲ್ಮಾನ್!

    ಚಿತ್ರದಲ್ಲಿ ಜಾಕ್ವೇಲಿನ್ ಫರ್ನಾಂಡಿಸ್ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ನಾನು ಪೊಲೀಸ್ ಪಾತ್ರ ನಿರ್ವಹಿಸುತ್ತಿಲ್ಲ. ನನ್ನ ಪಾತ್ರದ ಬಗ್ಗೆ ಹೆಚ್ಚು ಹೇಳಲಾರೆ ಎಂದು ಜಾಕ್ವೇಲಿನ್ ಸ್ಪಷ್ಟಪಡಿಸಿದ್ದಾರೆ.

    https://www.instagram.com/p/BiCW4CclIfq/?hl=en&taken-by=bollywood

  • ರೇಸ್-3 ಸಿನಿಮಾದ ಸಲ್ಮಾನ್ ಆ್ಯಕ್ಷನ್ ಸೀನ್ ಲೀಕ್- ನೋಡಿದ್ರೆ ನೀವೂ ‘ವಾವ್’ ಅನ್ತೀರಿ

    ರೇಸ್-3 ಸಿನಿಮಾದ ಸಲ್ಮಾನ್ ಆ್ಯಕ್ಷನ್ ಸೀನ್ ಲೀಕ್- ನೋಡಿದ್ರೆ ನೀವೂ ‘ವಾವ್’ ಅನ್ತೀರಿ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರತಿಬಾರಿಯೂ ತಮ್ಮ ಸಿನಿಮಾಗಳಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗುತ್ತಾರೆ. ಸಲ್ಮಾನ್ ಸಿನಿಮಾ ಬಂದ್ರೆ ಸಾಕು ಅಭಿಮಾನಿಗಳೆಲ್ಲ ಚಿತ್ರಮಂದಿರಗಳತ್ತ ಸೇರಿಕೊಳ್ಳುತ್ತಾರೆ. `ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿ ಆ್ಯಕ್ಷನ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದ ಸಲ್ಮಾನ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದರು.

    ಸದ್ಯ ಸಲ್ಮಾನ್ ಥ್ರಿಲ್ಲರ್ ಆ್ಯಂಡ್ ಸಸ್ಪೆನ್ಸ್ ಕಥಾ ಹಂದರವುಳ್ಳ ರೇಸ್-3 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲೆರಡು ರೇಸ್ ಸಿನಿಮಾಗಿಂತ ಮೂರನೇ ಚಿತ್ರ ಕೊಂಚ ವಿಭಿನ್ನವಾಗಿದೆ ಅಂತಾ ಹೇಳಲಾಗಿದೆ. ಈ ಹಿಂದೆ ಹಣಕ್ಕಾಗಿ ನಡೆಯುವ ವೈರತ್ವದ ಕಥೆಯನ್ನು ಎರಡು ಸಿನಿಮಾಗಳು ಹೊಂದಿದ್ದವು. ಅದೇ ರೀತಿಯ ವಿಭಿನ್ನ ಕಥೆಯನ್ನು ರೇಸ್-3 ಹೊಂದಿದೆ. ಇದನ್ನೂ ಓದಿ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‍ಗೆ ಬಿಗ್ ರಿಲೀಫ್

    ಇತ್ತೀಚೆಗೆ ರೇಸ್-3 ಸಿನಿಮಾದಲ್ಲಿನ ಸಲ್ಮಾನ್ ಆ್ಯಕ್ಷನ್ ಸೀನ್ ಒಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೈಕ್ ಓಡಿಸಿಕೊಂಡು ಬರುವ ಸಲ್ಮಾನ್ ಬೀಳುವ ಮರದಿಂದ ಅಚ್ಚರಿಯ ರೀತಿಯಲ್ಲಿ ಪಾರಾಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಕೇವಲ 4 ಸೆಕೆಂಡ್‍ನ ವಿಡಿಯೋ ಮಾತ್ರ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗುವಂತೆ ಮಾಡಿವೆ.

    ರೆಮೋ ಡಿಸೋಜಾ ನಿರ್ದೇಶನದಲ್ಲಿ ರೇಸ್-3 ಚಿತ್ರ ಮೂಡಿ ಬರುತ್ತಿದ್ದು, ರಮೇಶ್ ಎಸ್.ತೌರಾನಿ ಮತ್ತು ಸಲ್ಮಾನ್ ಖಾನ್ ಬಂಡವಾಳ ವಿನಿಯೋಗಿಸಿದ್ದಾರೆ. ಸಲ್ಮಾನ್ ಖಾನ್, ಅನಿಲ್ ಕಪೂರ್, ಸನ್ನಿ ಡಿಯೋಲ್, ಜಾಕ್ವೇಲಿನ್ ಫರ್ನಾಂಡೀಸ್, ಡೈಸಿ ಶಾ ಮತ್ತು ಸಖೀಬ್ ಸಲೀಂ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಸಿನಿಮಾ ಈ ಬಾರಿ ಈದ್ ಗೆ ರಿಲೀಸ್ ಆಗಲಿದೆ.

    https://twitter.com/kumarsumitsin08/status/981023858340720641

  • ಅನಿಲ್ ಕಪೂರ್, ಬಾಬಿ ಡಿಯೋಲ್ ನಡುವಿನ ಕಿಸ್ಸಿಂಗ್ ವಿಡಿಯೋ ವೈರಲ್

    ಅನಿಲ್ ಕಪೂರ್, ಬಾಬಿ ಡಿಯೋಲ್ ನಡುವಿನ ಕಿಸ್ಸಿಂಗ್ ವಿಡಿಯೋ ವೈರಲ್

    ಮುಂಬೈ: ನಟ ಬಾಬಿ ಡಿಯೋಲ್‍ಗೆ ಬಾಲಿವುಡ್ ನ ಹಿರಿಯ ನಟ ಅನಿಲ್ ಕಪೂರ್ ಕಿಸ್ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಬಹುನಿರೀಕ್ಷಿತ ‘ರೇಸ್-3’ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಯುಎಇ ಯಲ್ಲಿ ನಡೆಯುತ್ತಿದ್ದು, ಬಿಡುವಿನ ಸಮಯದಲ್ಲಿ ಚಿತ್ರದ ಕಲಾವಿದರೆಲ್ಲಾ ಹೋಟೆಲ್ ವೊಂದರಲ್ಲಿ ಪಾರ್ಟಿ ಮಾಡಿದ್ದಾರೆ. ಸಲ್ಮಾನ್ ಖಾನ್ ಸಹ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಪಾರ್ಟಿಯಲ್ಲಿ ಅನಿಲ್ ಕಪೂರ್ ಬಾಬಿ ಗೆ ಸ್ನೇಹದಿಂದ ಮುತ್ತು ನೀಡಿದ್ದಾರೆ.

    ರೆಮೋ ಡಿಸೋಜಾ ನಿರ್ದೇಶನದಲ್ಲಿ ರೇಸ್-3 ಸಿನಿಮಾ ಮೂಡಿಬರುತ್ತಿದೆ. ಸಲ್ಮಾನ್ ಖಾನ್, ಅನಿಲ್ ಕಪೂರ್, ಜಾಕ್ವೆಲಿನ್ ಫೆರ್ನಾಂಡಿಸ್, ಬಾಬಿ ಡಿಯೋಲ್, ಸಾಕಿಬ್ ಸಲೀಂ ಮತ್ತು ಡೈಸಿ ಶಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರೇಸ್‍ನ ಈ ಹಿಂದಿನ ಎರಡು ಭಾಗಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು, ನೋಡುಗರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದವು. ಪಕ್ಕಾ ಆ್ಯಕ್ಷನ್, ಥ್ರಿಲ್ಲರ್ ಕಥೆಯನ್ನು ಚಿತ್ರ ಹೊಂದಿದೆ. ಸಿನಿಮಾ ಇದೇ ವರ್ಷ ಈದ್ ಗೆ ಬಿಡುಗಡೆ ಆಗಲಿದೆ ಅಂತಾ ಚಿತ್ರತಂಡ ತಿಳಿಸಿದೆ.

    ಈ ಹಿಂದಿನ ರೇಸ್ ನ ಎರಡು ಚಿತ್ರಗಳಲ್ಲಿ ಸೈಫ್ ಅಲಿ ಖಾನ್ ನಾಯಕನ ಪಾತ್ರದಲ್ಲಿ ಮಿಂಚಿದ್ದರೆ, ಅನಿಲ್ ಕಪೂರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ರು. ಆದ್ರೆ ಈ ಬಾರಿ ಸಲ್ಮಾನ್ ಸಿನಿಮಾದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಸಲ್ಮಾನ್‍ಗೆ ನಾಯಕಿಯಾಗಿ ಎರಡನೇ ಬಾರಿಗೆ ಜಾಕ್ವೆಲಿನ್ ಜೊತೆಯಾಗಿದ್ದಾರೆ.

    https://www.instagram.com/p/BgiBReqnn-E/?utm_source=ig_embed

  • ನನಗೆ ಹುಡುಗಿ ಸಿಕ್ಕಿಬಿಟ್ಳು- ಸಲ್ಮಾನ್ ಖಾನ್ ಟ್ವೀಟ್ ಒಂದೇ ಗಂಟೆಯಲ್ಲಿ ವೈರಲ್

    ನನಗೆ ಹುಡುಗಿ ಸಿಕ್ಕಿಬಿಟ್ಳು- ಸಲ್ಮಾನ್ ಖಾನ್ ಟ್ವೀಟ್ ಒಂದೇ ಗಂಟೆಯಲ್ಲಿ ವೈರಲ್

    ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದುವೆ ಬಾಲಿವುಡ್ ಅಂಗಳದಲ್ಲಿ ಬಹುಚರ್ಚಿತ ವಿಷಯ. ಸಲ್ಮಾನ್ ಯಾವಾಗ ಮದುವೆಯಾಗ್ತಾರೆ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಈ ಹೊತ್ತಲ್ಲೇ ಸಲ್ಮಾನ್, ಮುಜೆ ಲಡ್ಕಿ ಮಿಲ್ ಗಯಿ (ನನಗೆ ಹುಡುಗಿ ಸಿಕ್ಕಿಬಿಟ್ಳು) ಎಂದು 1 ಗಂಟೆ ಹಿಂದಷ್ಟೇ ಟ್ವೀಟ್ ಮಾಡಿದ್ದು, ಈಗಾಗಲೇ ವೈರಲ್ ಆಗಿದೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ.

    ಆದ್ರೆ ಸಲ್ಮಾನ್ ಖಾನ್ ಮಾತನಾಡುತ್ತಿರುವುದು ಯಾವ ಹುಡುಗಿ ಬಗ್ಗೆ ಅನ್ನೋದು ಸದ್ಯದ ಕುತೂಹಲ. ಅವರು ತಮ್ಮ ಮುಂದಿನ ಸಿನಿಮಾ ಭಾರತ್ ಚಿತ್ರಕ್ಕೆ ಹೀರೋಯಿನ್ ಸಿಕ್ಕಿದ್ದಾಳೆಂದು ಹೇಳುತ್ತಿರಬಹುದು.

    ದೇಶಭಕ್ತಿಯ ಚಿತ್ರವಾದ ಭಾರತ್ 2019ರ ಈದ್‍ಗೆ ಬಿಡುಗಡೆಯಾಗಬೇಕಿದ್ದು, ಅಲಿ ಅಬ್ಬಾಸ್ ಝಫರ್ ನಿರ್ದೇಶನ ಮಾಡ್ತಿದ್ದಾರೆ. ಚಿತ್ರಕ್ಕೆ ನಾಯಕಿ ಅಂತಿಮವಾಗಿರಲಿಲ್ಲ. ಆದರೂ ಕತ್ರೀನಾ ಕೈಫ್ ಅವರನ್ನ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಅಂತ ವದಂತಿಗಳು ಹರಿದಾಡ್ತಿದೆ.

    ಸಲ್ಮಾನ್ ಖಾನ್ ಮುಂಬೈನಲ್ಲಿ ರೇಸ್ 3 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರವನ್ನ ರೆಮೋ ಡಿಸೋಜಾ ನಿರ್ದೇಶಿಸುತ್ತಿದ್ದು, ಜಾಕ್ವೆಲೀನ್ ಫರ್ನಾಂಡಿಸ್, ಬಾಬಿ ಡಿಯೋಲ್, ಡೈಸಿ ಶಾಹ್, ಅನಿಲ್ ಕಪೂರ್ ಮುಂತಾದವರು ನಟಿಸಿದ್ದಾರೆ. ಇದೇ ವರ್ಷ ಈದ್‍ಗೆ ರೇಸ್-3 ಚಿತ್ರ ಬಿಡುಗಡೆಯಾಗಲಿದೆ.

  • ರೇಸ್-3 ಸಿನಿಮಾದಲ್ಲಿ ಈ ಕಾರಣಕ್ಕೆ ಕಿಸ್ಸಿಂಗ್ ಸೀನ್ ಮಾಡಲ್ಲ ಎಂದ ಸಲ್ಮಾನ್

    ರೇಸ್-3 ಸಿನಿಮಾದಲ್ಲಿ ಈ ಕಾರಣಕ್ಕೆ ಕಿಸ್ಸಿಂಗ್ ಸೀನ್ ಮಾಡಲ್ಲ ಎಂದ ಸಲ್ಮಾನ್

    ಮುಂಬೈ: ಬಾಲಿವುಡ್ ಯಂಗ್ ಭಾಯಿಜಾನ್ ಸಲ್ಮಾನ್ ಖಾನ್ ರೇಸ್-3 ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಎಲ್ಲ ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ರೇಸ್ ಮತ್ತು ರೇಸ್-2 ಸಿನಿಮಾಗಳಲ್ಲಿ ನಟರು ಮತ್ತು ನಟಿಯರು ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರಿಗೆ ಕಿಕ್ ಕೊಟ್ಟಿದ್ದರು. ಆದರೆ ಸಲ್ಮಾನ್ ಮುಂದುವರಿದ ಭಾಗದಲ್ಲಿ ನಟಿಸುತ್ತಿರುವದರಿಂದ ಅವರು ಕೂಡ ಸಿಕ್ಸ್ ಪ್ಯಾಕ್ ಮತ್ತು ಕಿಸ್ಸಿಂಗ್ ಸೀನ್ ಗಳಲ್ಲಿ ಕಾಣುತ್ತಾರೆ ಎಂಬ ಪ್ರಶ್ನೆ ಎಲ್ಲ ಅಭಿಮಾನಿಗಳಲ್ಲಿ ಹುಟ್ಟುಕೊಂಡಿತ್ತು. ಸದ್ಯ ಖುದ್ದು ಸಲ್ಮಾನ್ ನಾನು ರೇಸ್-3ರಲ್ಲಿ ಕಿಸ್ಸಿಂಗ್ ಸೀನ್ ಮಾಡಲ್ಲ ಎಂದು ಉತ್ತರ ನೀಡಿದ್ದಾರೆ.

    ಈ ಕಾರಣಕ್ಕೆ ಕಿಸ್ ಮಾಡಲ್ಲ: ಈ ಹಿಂದೆ ತೆರೆಕಂಡು ಬಾಕ್ಸ್ ಆಫೀಸ್ ಧೂಳೆಬ್ಬೆಸಿರುವ ರೇಸ್ ಸಿನಿಮಾಗಳು ವಯಸ್ಕರ ಚಿತ್ರಗಳಾಗಿದ್ದವು. ಆ ಎರಡು ಸಿನಿಮಾದಲ್ಲಿ ನಾಯಕ ನಟ ತನ್ನ ಸ್ವಾರ್ಥಕ್ಕಾಗಿ, ಹಣಕ್ಕಾಗಿ ಯಾವುದೇ ಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ. ಈ ವಿಷಯಗಳು ನನಗೆ ವೈಯಕ್ತಿಕವಾಗಿ ನೋವು ತಂದಿದ್ದು, ರೇಸ್-3 ಸಿನಿಮಾವನ್ನು ಪೋಷಕರು ತಮ್ಮ ಮಕ್ಕಳೊಂದಿಗೆ ಬಂದು ನೋಡುವಂತೆ ಮಾಡಲು ಕಿಸ್ಸಿಂಗ್ ಸೀನ್ ಮತ್ತು ಸೆಕ್ಸಿ ಲುಕ್ ನಲ್ಲಿ ನಟಿಸಲ್ಲ ಎಂದು ಸಲ್ಮಾನ್ ತಿಳಿಸಿದ್ದಾರೆ.

    ಸಲ್ಮಾನ್ ತಮ್ಮ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ಇರಬಾರದು ಎಂಬ ಕಂಡೀಷನ್ ಹಾಕಿಕೊಂಡಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ನಟನೆಯ ಬ್ಲಾಕ್ ಬಾಸ್ಟರ್ ಚಿತ್ರಗಳಲ್ಲಿ ಲಿಪ್ ಟು ಲಿಪ್ ಕಿಸ್ಸಿಂಗ್ ಸೀನ್‍ಗಳಿಲ್ಲ. ಡಿಸೆಂಬರ್ ನಲ್ಲಿ ತೆರೆಕಾಣಲು ರೆಡಿಯಾಗಿರುವ `ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿಯೂ ಯಾವುದೇ ಕಿಸ್ಸಿಂಗ್ ಸೀನ್ ಗಳಿಲ್ಲ.

    2008ರಲ್ಲಿ ತೆರೆಕಂಡ ರೇಸ್ ಮೊದಲ ಚಿತ್ರದಲ್ಲಿ ಸೈಫ್ ಅಲಿ ಖಾನ್, ಅಕ್ಷಯ್ ಖನ್ನಾ, ಬಿಪಾಶಾ ಬಸು ಮತ್ತು ಕತ್ರೀನಾ ಬೋಲ್ಡ್ ಆಗಿ ನಟಿಸಿದ್ದರು. ಇನ್ನೂ 2013ರಲ್ಲಿ ರೇಸ್-2ನಲ್ಲಿಯೂ ಸೈಫ್ ಅಲಿ ಖಾನ್, ಜಾನ್ ಅಬ್ರಾಹಂ, ದೀಪಿಕಾ ಪಡುಕೋಣೆ ಮತ್ತು ಜಾಕ್ವೇಲಿನ್ ಫರ್ನಾಂಡೀಸ್ ನಾವೇನೂ ಕಡಿಮೆ ಇಲ್ಲ ಎಂಬಂತೆ ಸೆಕ್ಸಿ ಲುಕ್ ನಲ್ಲಿ ಮಿಂಚಿದ್ದರು. ಈಗ ರೇಸ್-3 ಸಿನಿಮಾ ಸಲ್ಮಾನ್ ಖಾನ್, ಜಾಕ್ವೇಲಿನ್ ಫರ್ನಾಂಡೀಸ್, ಬಾಬಿ ಡಿಯೋಲ್, ಡೈಸಿ ಶಾ, ಪೂಜಾ ಹೆಗಡೆ, ಸಖೀಬ್ ಸಲೀಂ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿದೆ. ಸಿನಿಮಾಗೆ ರೆಮೋ ಡಿಸೋಜಾ ಆ್ಯಕ್ಷನ್ ಕಟ್ ಹೇಳುತ್ತಿದ್ದು, ರಮೇಶ್ ತೌರಾಣಿ ಮತ್ತುಮ ಸಲ್ಮಾನ್ ಖಾನ್ ಇಬ್ಬರೂ ಜಂಟಿಯಾಗಿ ಬಂಡವಾಳ ಹಾಕಿದ್ದಾರೆ.

     

  • ರೇಸ್-3 ಚಿತ್ರದಲ್ಲಿ ಈ ಎರಡೂ ಸೀನ್ ಮಾಡಲ್ಲ ಎಂದ ಸಲ್ಮಾನ್!

    ರೇಸ್-3 ಚಿತ್ರದಲ್ಲಿ ಈ ಎರಡೂ ಸೀನ್ ಮಾಡಲ್ಲ ಎಂದ ಸಲ್ಮಾನ್!

    ಮುಂಬೈ: ಸಲ್ಮಾನ್ ಖಾನ್ ಚಿತ್ರದಲ್ಲಿ ನಟಿಸುವಾಗ ಅವರು ತಮ್ಮ ಕೆಲವು ತತ್ವಗಳನ್ನು ಪಾಲಿಸುತ್ತಾರೆ. ಫ್ಯಾಮಿಲಿ ಆಡಿಯನ್ಸ್ ಗಳನ್ನು ಹೆಚ್ಚು ಸೆಳೆಯುವ ಸಲ್ಮಾನ್ ಈಗ ರೇಸ್-3 ಚಿತ್ರದಲ್ಲಿ ಡ್ರಗ್ಸ್ ಡೀಲರ್ ಹಾಗೂ ಹಾಟ್ ಸೀನ್‍ಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.

    ಈ ಮೊದಲು ಸಲ್ಮಾನ್ ಖಾನ್ ತಮ್ಮ ಚಿತ್ರದಲ್ಲಿ ಖಳ ನಟನ ಪಾತ್ರ ಹಾಗೂ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ಸಲ್ಮಾನ್ ಚಿತ್ರತಂಡ ಜೊತೆ ಮಾತನಾಡಿ ರೇಸ್-3 ಚಿತ್ರದಲ್ಲಿ ಡ್ರಗ್ಸ್ ಡೀಲರ್ ಪಾತ್ರದಲ್ಲಿ ಹಾಗೂ ಹಾಟ್ ಸೀನ್‍ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ.

    ರೇಸ್ ಮತ್ತು 2 ಚಿತ್ರದಲ್ಲಿ ಅನಿಲ್ ಕಪೂರ್ ನಟಿಸಿದ್ದರು. ಆದರೆ ಈ ಬಾರಿ ಅವರಿಲ್ಲದ ಕಾರಣ ಚಿತ್ರದ ನಿರ್ದೇಶಕ ರೆಮೋ ಡಿ ಸೋಜಾ ಹಾಗೂ ನಿರ್ಮಾಪಕ ರಮೇಶ್ ಟೌರಾನಿಗೆ ಚಿತ್ರದಲ್ಲಿ ಕೆಲವು ಹಾಸ್ಯ ದೃಶ್ಯಗಳನ್ನು ಸೇರಿಸುವುದಾಗಿ ಸಲ್ಮಾನ್ ಹೇಳಿದ್ದಾರೆ.

    ರೇಸ್ ಹಾಗೂ ರೇಸ್-2 ಚಿತ್ರದಲ್ಲಿ ಸಾಕಷ್ಟು ಹಾಟ್ ಸೀನ್‍ಗಳಿದ್ದವು. ಆದರೆ ಸಲ್ಮಾನ್ ರೇಸ್-3ಯಲ್ಲಿ ಒಂದೇ ಒಂದು ಹಾಟ್ ಸೀನ್ ಇರಬಾರದು. ಈ ಸಿನಿಮಾ ಕೌಟುಂಬಿಕ ಸಿನಿಮಾ ರೀತಿ ಇರಬೇಕು. ಫ್ಯಾಮಿಲಿ ಆಡಿಯನ್ಸ್ ನೋಡುವ ಹಾಗೇ ಇರಬೇಕು ಎಂದು ತಿಳಿಸಿದ್ದಾರೆ.

    ಸಲ್ಮಾನ್ ಡ್ರಗ್ಸ್ ಡೀಲರ್ ಮಾಡುವ ಪಾತ್ರ ಸಿನಿಮಾದಲ್ಲಿ ಇತ್ತು. ಆದರೆ ಈ ಸೀನ್ ಮಾಡಲು ಸಲ್ಮಾನ್ ನಿರಾಕರಿಸಿದ್ದಾರೆ. ಅಭಿಮಾನಿಗಳಿಗೆ ಚಿತ್ರದಿಂದ ಕೆಟ್ಟ ಸಂದೇಶ ರವಾನೆಯಾಗಬಹುದು ಎನ್ನುವ ಭಯದಿಂದಾಗಿ ಸಲ್ಮಾನ್ ತಿಳಿಸಿದ ಕಾರಣ ಈ ದೃಶ್ಯಗಳನ್ನು ಚಿತ್ರದಿಂದ ತೆಗೆದು ಹಾಕಲಾಗಿದೆ ಎನ್ನಲಾಗಿದೆ.

    ಚಿತ್ರದಲ್ಲಿ ಜಾಕ್ವೇಲಿನ್ ಫರ್ನಾಂಡಿಸ್ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ನಾನು ಪೊಲೀಸ್ ಪಾತ್ರ ನಿರ್ವಹಿಸುತ್ತಿಲ್ಲ. ನನ್ನ ಪಾತ್ರದ ಬಗ್ಗೆ ಹೆಚ್ಚು ಹೇಳಲಾರೆ ಎಂದು ಜಾಕ್ವೇಲಿನ್ ತಿಳಿಸಿದ್ದಾರೆ.