Tag: race

  • ಮಹಿಳಾ ದಿನಾಚರಣೆ – ಸೀರೆ, ಶೂ ತೊಟ್ಟು ಮಹಿಳೆಯರ ಓಟ

    ಮಹಿಳಾ ದಿನಾಚರಣೆ – ಸೀರೆ, ಶೂ ತೊಟ್ಟು ಮಹಿಳೆಯರ ಓಟ

    ಧಾರವಾಡ: ಜುಂಬಾ ನೃತ್ಯದಲ್ಲಿ ಮಹಿಳೆಯರ ಮೈ ಮೇಲೆ ಸಾಂಪ್ರದಾಯಿಕ ಸೀರೆಯಿದ್ರೆ, ಕಾಲಲ್ಲಿ ಮಾತ್ರ ಕ್ರೀಡಾ ಶೂ. ಮಗದೊಂದು ಕಡೆ ಸೀರೆಯಲ್ಲೇ ಪಾಶ್ಚಿಮಾತ್ಯ ಸಂಗೀತಕ್ಕೂ ಸಖತ್ ಸ್ಟೆಪ್ ಹಾಕುತ್ತಿರುವ ಮಹಿಳಾ ಸಮೂಹ. ಇಂದು ಬೆಳ್ಳಂಬೆಳಗ್ಗೆ ಧಾರವಾಡದಲ್ಲಿ ಕಂಡು ಬಂದ ದೃಶ್ಯ.

    ಯಾವುದೇ ಕಾರ್ಯಕ್ರಮವಿದ್ದರೂ ಮಹಿಳೆಯರು ಅಂದ-ಚೆಂದವಾಗಿ ಉಡುಗೆ-ತೊಡುಗೆ ಜೊತೆಗೆ ಶೃಂಗಾರ ಮಾಡಿಕೊಂಡು ಬರುವುದು ಸಾಮಾನ್ಯ. ಆದರೆ ಇಲ್ಲಿ ಓಡೋದಕ್ಕಾಗಿಯೇ ಮಹಿಳೆಯರು ಹೀಗೆ ಸೀರೆಯಲ್ಲಿ ಬಂದಿದ್ದರು.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾರಿ ಶಕ್ತಿಯ ಪ್ರದರ್ಶನದ ಪ್ರಯುಕ್ತ ರೋಟರಿ ಕ್ಲಬ್ ಆಫ್ ಸೆವೆಲ್ ಹಿಲ್ಸ್ ಧಾರವಾಡ ಘಟಕದ ವತಿಯಿಂದ ಆಯೋಜಿಸಿದ್ದ ಸೀರೆಯಲ್ಲಿ ನಾರಿಯರ ಓಟದ ದೃಶ್ಯ ಇದು. ಸೀರೆಯಲ್ಲಿ ನೂರಾರು ಮಹಿಳೆಯರು ಉತ್ಸಾಹದಿಂದಲೇ ಆಗಮಿಸಿ, ನಾವು ಎಲ್ಲದಕ್ಕೂ ಸೈ ಅನ್ನೋದನ್ನು ಇಲ್ಲಿ ತೋರಿಸಿಕೊಟ್ಟರು. ಇದನ್ನೂ ಓದಿ : ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್‍ವೈ

    ಸೀರೆಯಲ್ಲಿ ನಾರಿಯರ ಓಟದ ಬಗ್ಗೆ ಮುಂಚಿತವಾಗಿಯೇ ಎಲ್ಲರಿಗೂ ತಿಳಿಸಲಾಗಿತ್ತು. ಹೀಗಾಗಿ ಧಾರವಾಡ ಮಾತ್ರವಲ್ಲದೇ ಸುತ್ತಮುತ್ತಲಿನ ಅನೇಕ ಕಡೆಗಳಿಂದ ಮಹಿಳೆಯರು ಈ ಓಟದಲ್ಲಿ ಪಾಲ್ಗೊಂಡಿದ್ದರು. ವೈದ್ಯರು, ಉದ್ಯಮಿಗಳು, ಶಿಕ್ಷಕರು, ಸರ್ಕಾರಿ ಉದ್ಯೋಗಿಗಳು, ಸಂಘಟಕರು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರಿಂದ ಹಿಡಿದು ಕಾಲೇಜು ವಿದ್ಯಾರ್ಥಿನಿಯರು ಮಾತ್ರವಲ್ಲ ಸಾಮಾನ್ಯ ಗೃಹಸ್ಥ ಮಹಿಳೆಯರೂ ಪಾಲ್ಗೊಂಡಿದ್ದರು. ಇದನ್ನೂ ಓದಿ : ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022: ತೆಂಡೂಲ್ಕರ್, ಜಾವೇದ್ ಪಟ್ಟಿಗೆ ಸೇರಿದ ಮಿಥಾಲಿ ರಾಜ್

    ಬೆಳಗ್ಗೆ 6.30ಕ್ಕೆ ಸರಿಯಾಗಿ ಧಾರವಾಡ ಕೆಸಿಡಿ ಮೈದಾನದಲ್ಲಿ ಜಮಾವಣೆಗೊಂಡ ಮಹಿಳೆಯರಿಗೆ ಮೊದಲು ಅರ್ಧ ಗಂಟೆಗಳ ಕಾಲ ವಾರ್ಮಾಪ್ ಗಾಗಿ ಜುಂಬಾ ಡ್ಯಾನ್ಸ್ ಮಾಡಿಸಲಾಯಿತು. ಈ ವೇಳೆ ಅನೇಕ ಪಾಶ್ಚಿಮಾತ್ಯ ಸಂಗೀತ, ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಹಾಡುಗಳಿಗೂ ಮಹಿಳೆಯರು ಸೀರೆಯಲ್ಲಿಯೇ ಸ್ಟೆಪ್ ಹಾಕಿದರು. ಬಳಿಕ ಕೆಸಿಡಿ ಮೈದಾನದಿಂದ ಕಲಾಭವನ ಆವರಣದವರೆಗೂ ಮ್ಯಾರಾಥಾನ್ ನಡೆಸಲಾಯಿತು.

  • ಕುದುರೆ ರೇಸ್‍ನಲ್ಲಿ ಸರಣಿ ಅಪಘಾತ

    ಕುದುರೆ ರೇಸ್‍ನಲ್ಲಿ ಸರಣಿ ಅಪಘಾತ

    ಚಿಕ್ಕೋಡಿ (ಬೆಳಗಾವಿ): ವಾಹನಗಳ ಮಧ್ಯೆ ಸರಣಿ ಅಪಘಾತವಾಗುವುದು ಕಾಮನ್. ಆದರೆ ಕುದುರೆಗಳ ಷರತ್ತಿನ ಸ್ಪರ್ಧೆಯ ವೇಳೆ ಕುದುರೆ ಗಾಡಿಗಳ ಸರಣಿ ಅಪಘಾತವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ.

    ಸಂಕೇಶ್ವರ ಪಟ್ಟಣದ ಶಂಕರಲಿಂಗ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಜೋಡಿ ಕುದುರೆಯ ಶರತ್ತಿನ ವೇಳೆ ಕುದುರೆ ಗಾಡಿಗಳು ಅಪಘಾತಕ್ಕಿಡಾಗಿವೆ. ಸಂಕೇಶ್ವರ ಬಸ್ ನಿಲ್ದಾಣದಿಂದ ನೀಡಸೊಸಿ ಗ್ರಾಮದವರೆಗೆ ಕುದುರೆ ಗಾಡಿ ಷರತ್ತು ಬಿಡಲಾಗಿತ್ತು.

    ಈ ವೇಳೆ ಓಡುತ್ತಿದ್ದ ಕುದುರೆ ಕಾಲು ಜಾರಿ ಕೆಳಗೆ ಬಿದ್ದಿದೆ. ನಂತರ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕುದುರೆ ಗಾಡಿ ಬಂದು ಬಿದ್ದಿರುವ ಕುದುರೆ ಗಾಡಿಗೆ ಡಿಕ್ಕಿ ಹೊಡೆದಿದೆ. ನಂತರ ಇದಕ್ಕೆ ಮತ್ತೊಂದು ಗಾಡಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಸಂಭವಿಸಿದರೂ ಕುದುರೆ ರೇಸ್‍ನ ಮಧ್ಯದಲ್ಲೇ ಬಿಡದೆ ಮತ್ತೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಅದೃಷ್ಟವಶ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಹೈವೇ ರಸ್ತೆಯಲ್ಲಿ KSRTC ಬಸ್‍ಗಳ ರೇಸ್- ಪೈಪೋಟಿಯಲ್ಲಿ ಹೋಗ್ತಿದ್ದ ಚಾಲಕರಿಗೆ ಯುವಕರಿಂದ ಕ್ಲಾಸ್

    ಹೈವೇ ರಸ್ತೆಯಲ್ಲಿ KSRTC ಬಸ್‍ಗಳ ರೇಸ್- ಪೈಪೋಟಿಯಲ್ಲಿ ಹೋಗ್ತಿದ್ದ ಚಾಲಕರಿಗೆ ಯುವಕರಿಂದ ಕ್ಲಾಸ್

    ದಾವಣಗೆರೆ: ಹೈವೇ ರಸ್ತೆಯಲ್ಲಿ ಕೆಎಸ್ಆರ್‌ಟಿಸಿ ಬಸ್ಸುಗಳೆರಡು ಪೈಪೋಟಿಯಲ್ಲಿ ರೇಸ್ ಮಾಡಿದ ಘಟನೆ ಜಿಲ್ಲೆಯ ಪಿಬಿ ರಸ್ತೆಯಲ್ಲಿ ನಡೆದಿದೆ.

    ದಾವಣಗೆರೆಯಿಂದ ಹರಿಹರಕ್ಕೆ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್‍ಗಳು ರೇಸ್‍ಗೆ ಇಳಿದಿದ್ದು, ಈ ಬಸ್ ಗಳ ಜೊತೆ ಹೋಗುತ್ತಿದ್ದ ಬೈಕ್ ಚಾಲಕರು ಹಾಗೂ ಮತ್ತಿತರ ವಾಹನ ಸವಾರರು ದಂಗಾಗಿ ಹೋಗಿದ್ದಾರೆ. ಈ ಎರಡು ಕೆಎಸ್ಆರ್‌ಟಿಸಿ ಬಸ್‍ಗಳು ದಾವಣಗೆರೆ ಡಿಪೋಗೆ ಸೇರಿದ್ದಾಗಿವೆ.

    ಚಾಲಕರಿಬ್ಬರು ಕೆಎಸ್ಆರ್‌ಟಿಸಿ ಬಸ್ ರೇಸ್ ಮಾಡುತ್ತಿರುವುದನ್ನು ನೋಡಿದ ಯುವಕರು ಚಾಲಕರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಗರ ಸಾರಿಗೆ ಬಸ್ ಚಾಲಕರು ಹಿಂದೆ ಮುಂದೆ ನೋಡದೆ ರೇಸ್ ನಲ್ಲಿ ತೊಡಗುತ್ತಿದ್ದು, ಈ ಯಮರೂಪಿ ಬಸ್‍ಗಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿವೆ.

    ಚಾಲಕರಿಗೆ ಕ್ಲಾಸ್ ತೆಗೆದುಕೊಂಡ ಗಿರೀಶ್ ಹಾಗೂ ಪ್ರಸನ್ನ ಎಂಬಿಬ್ಬರು ಯುವಕರು ರ‍್ಯಾಶ್ ಆಗಿ ಡ್ರೈವಿಂಗ್ ಮಾಡುವವರ ವಿರುದ್ಧ ಕೆಎಸ್ಆರ್‌ಟಿಸಿ ಡಿಸಿಯವರಿಗೆ ದೂರು ನೀಡಲು ಮುಂದಾಗಿದ್ದಾರೆ.

    https://www.youtube.com/watch?v=CbPyd2pBUOU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ವಾನಗಳ ನಂತ್ರ ಅಂಬಿಯನ್ನು ನೆನೆದು ಭಾವುಕವಾಗಿದೆ `ಜಾಕಿ’

    ಶ್ವಾನಗಳ ನಂತ್ರ ಅಂಬಿಯನ್ನು ನೆನೆದು ಭಾವುಕವಾಗಿದೆ `ಜಾಕಿ’

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಶನಿವಾರ ತಮ್ಮ ಪ್ರೀತಿ ಪಾತ್ರರನ್ನು ಅಗಲಿದ್ದಾರೆ. ಈಗಾಗಲೇ ಅಂಬಿಯ ಶ್ವಾನಗಳಾದ ಕನ್ವರ್ ಲಾಲ್ ಹಾಗೂ ಬುಲ್ ಬುಲ್ ಅಂಬಿಯನ್ನು ನೆನೆದು ಭಾವುಕರಾಗಿದ್ದು, ಇದೀಗ ಪ್ರೀತಿಯ ಕುದುರೆ ಜಾಕಿ ಕೂಡ ಅಂಬಿಯನ್ನು ನೆನೆದು ಭಾವುಕವಾಗಿದೆ.

    ಅಂಬಿಗೆ ಕೊನೆಯ ರೇಸ್ ನೋಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಅಂಬಿ ಸಾವಿಗೂ ಮುನ್ನಾ ದಿನ ರೇಸ್ ನೋಡುವುದಕ್ಕೆ ಹೋಗಿದ್ದರು. ಮಳೆ ಇದ್ದಿದರಿಂದ ರೇಸ್ ಕ್ಯಾನ್ಸಲ್ ಆಗಿತ್ತು. ಆಗ ಅಂಬಿ ಬೇಸರ ಮಾಡಿಕೊಂಡು ಮನೆಗೆ ಹೋಗಿದ್ದರು. ಸಾವಿಗೂ ಮುನ್ನಾ ದಿನ ಅಂಬಿ ಪ್ರೀತಿಯ ಅಶ್ವದ ಬಗ್ಗೆಯೆಲ್ಲ ಮಾತನಾಡಿದ್ದರು.

    ಅಂಬಿ “ಬಡ್ಡೇತದೆ” ಗೂ ವಯಸ್ಸಾಗಿದೆ. ಆದರೆ ಅಂಬಿಯದ್ದೇ ಚಾರ್ಮ್ ಇದೆ. ಅಂಬಿ, ಜಾಕಿ ಬಿಟ್ಟು ಬೇರೆ ಯಾರು ಹತ್ತಿರ ಬಂದ್ರೂ ಗುರ್ ಎನ್ನುತ್ತಿತ್ತು. ಜಾಕಿ ವಾರೆನ್ ಸಿಂಗ್ ಸ್ಪೀಡ್ ಹಾಕ್ ಅಂತಾ ಅಂಬಿ ಕುದುರೆಗೆ ಹೆಸರು ಇಟ್ಟಿದ್ದರು. ಆದರೆ ಅಂಬಿ ಮಾತ್ರ ಬಡ್ಡೇತದೆ ಅಂತಾ ಕುದುರೆಯ ಮೈದಡವಿ ಮಾತಾನಾಡಿಸುತ್ತಿದ್ದರು.

    ಇಡೀ ರೇಸ್ ಕೋರ್ಸ್ ನಲ್ಲಿ ಅಂಬಿ ಕುದುರೆದ್ದೇ ಹವಾ. ಮೂಗಿನಲ್ಲಿ ಸಿಟ್ಟು, ಫೋಟೋ ಫೋಸ್ ಗೀಸು ಅಂತಾ ಹತ್ತಿರ ಬಂದರೆ ಗುರ್ ಎನ್ನುತ್ತದೆ. ಅಂಬಿ ಕಂಡರೆ ಮಾತ್ರ ತುಂಬಾ ಪ್ರೀತಿಯಿತ್ತು. ಅಂಬಿ ಕುದುರೆಗೆ ಏಳು ವರ್ಷ. ಆದರೂ ತುಂಬಾ ಚೆನ್ನಾಗಿ ರೇಸ್ ಮಾಡುತ್ತಿತ್ತು.

    ಸಾಮಾನ್ಯವಾಗಿ ಮೂರು ವರ್ಷ ನಾಲ್ಕು ವರ್ಷಕ್ಕೆ ಕುದುರೆಗಳು ಬಹಳ ಸ್ಪೀಡಾಗಿ ಓಡುತ್ತೆ. ಆಮೇಲೆ ಐದು ವರ್ಷ ಆಗುತ್ತಿದ್ದಂತೆ ಸ್ಪೀಡ್ ಕಡಿಮೆಯಾಗುತ್ತೆ. ಆದರೆ ಅಂಬಿ ಕುದುರೆ ಮಾತ್ರ ವಯಸ್ಸಾದ್ರೂ ಚೆನ್ನಾಗಿ ರೇಸ್‍ನಲ್ಲಿ ಓಡುತ್ತಿತ್ತು. ಗಂಟೆಗೆ 60 ಕಿ.ಮಿ ಓಡುತ್ತಿತ್ತು. ಅಂಬಿ ಹಾಗೂ ಜಾಕಿ ಬಿಟ್ಟು ಯಾರೂ ಹತ್ತಿರ ಸುಳಿಯೋ ಹಾಗಿಲ್ಲ.

    ಅಂಬಿಗೆ ಡರ್ಬಿನಲ್ಲಿ ದುಡ್ಡು, ನೇಮು, ಫೇಮು ತಂದುಕೊಟ್ಟಿದ್ದೆ ಈ ಬಡ್ಡೇತದೆ ಕುದುರೆ. ವಾರೇನ್ ಸಿಂಗ್ ಬಳಿ ಬಿಳಿ ಕುದುರೆ ಕಂಡರೆ ಅಂಬಿಗೆ ತುಂಬಾ ಇಷ್ಟ. ಅಂಬಿ ಕೊನೆಯದಾಗಿ ಈ ಬಿಳಿ ಕುದುರೆ “ಗ್ಲೋಬಲ್ ರೂಲರ್ ” ರೇಸ್ ನೋಡುವುದಕ್ಕೆ ಬಂದಿದ್ದರು. ಆದರೆ ಅಂದು ಮಳೆ ಇದ್ದಿದ್ದರಿಂದ ರೇಸ್ ಕ್ಯಾನ್ಸಲ್ ಆಗಿತ್ತು.

    ಥತ್ ನಿನ್ನ ರೇಸ್ ನೋಡಬೇಕು ಅನ್ನೊಂಡ್ನಲ್ಲೋ ಮಳೆ ಬಂದು ಹಾಳಾಗೋಯ್ತು ಅಂತಾ ಅಂಬಿ ಬಿಳಿ ಕುದುರೆ ಮೈಸವರಿ ಮಳೆಗೊಂದಿಷ್ಟು ಬೈದು, ಹೋಗಿದ್ದರು. ಬಿಳಿ ಕುದುರೆ ಫುಲ್ ಕೂಲ್ ಆಗಿದ್ದರೆ, ಅಂಬಿ ಕುದುರೆ ರೆಬೆಲ್ ಆಗಿತ್ತು. ಈ ಎರಡು ಕುದುರೆಯೂ ಅಂಬಿಗೆ ತುಂಬಾ ಇಷ್ಟವಿತ್ತು. ಅಂಬಿ ಕುದುರೆ ಒಟ್ಟು 6 ಕಪ್‍ಗಳನ್ನು ಗೆದ್ದಿತ್ತು. ಒಟ್ಟಿನಲ್ಲಿ ಇದೀಗ ಇವುಗಳ ಮೂಕ ರೋಧನೆ ಕೂಡ ಅಂಬಿ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಅಸಾಧ್ಯವಾಗಿರುವುದನ್ನು ಗಮನಿಸಿಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕುದುರೆ ರೇಸ್ ವೇಳೆ ಕಾರಿಗೆ ಡಿಕ್ಕಿ ಹೊಡೆದ ಬೈಕ್!

    ಕುದುರೆ ರೇಸ್ ವೇಳೆ ಕಾರಿಗೆ ಡಿಕ್ಕಿ ಹೊಡೆದ ಬೈಕ್!

    ಧಾರವಾಡ: ಕುದುರೆ ರೇಸ್ ನಡೆಯುತ್ತಿದ್ದ ವೇಳೆ ಬೈಕೊಂದು ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಹೊರವಲಯದ ನಗರ ಸೌದತ್ತಿ ರಸ್ತೆಯಲ್ಲಿ ನಡೆದಿದೆ.

    ಸೋಮವಾರ ಸಂಜೆ ವೇಳೆ ರಾಜ್ಯ ಹೆದ್ದಾರಿಯಲ್ಲಿ ಪೊಲೀಸರ ಯಾವುದೇ ಅನುಮತಿ ಇಲ್ಲದೇ ಕುದುರೆ ಗಾಡಿ ರೇಸ್ ನಡೆಸಲಾಗಿತ್ತು. ರೇಸ್ ನಲ್ಲಿ ಸುಮಾರು 15 ಕ್ಕೂ ಹೆಚ್ಚು ಕುದುರೆ ಗಾಡಿ ಭಾಗವಹಿಸಿದ್ದವು. ಕುದುರೆ ಗಾಡಿಗಳ ಓಟದ ನಡುವೆ ಬೈಕ್ ಗಳ ರೇಸ್ ನಡೆದಿದೆ. ಈ ವೇಳೆ ಬೈಕೊಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಮೇಲಿದ್ದ ಯುವಕ ಸ್ವಲ್ಪದರಲ್ಲಿ ಬಚಾವ್ ಆಗಿದ್ದರಿಂದ ಯಾವುದೇ ಅಪಾಯಗಳು ಸಂಭವಿಸಿಲ್ಲ.

    ಬೈಕ್ ಸತೀಶ ಹೆಗಡೆ ಎಂಬವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಈ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/zZPzISoy0Qw

  • ತೇವವಾದ ಮಣ್ಣು ದಾರಿಯಲ್ಲಿ ಬೈಕ್ ರೈಡರ್ಸ್ ರಿಂದ ಸಾಹಸಮಯ ಪ್ರದರ್ಶನ

    ತೇವವಾದ ಮಣ್ಣು ದಾರಿಯಲ್ಲಿ ಬೈಕ್ ರೈಡರ್ಸ್ ರಿಂದ ಸಾಹಸಮಯ ಪ್ರದರ್ಶನ

    ಹಾಸನ: ಜೋರು ಮಳೆಗಾಲ ಸಂದರ್ಭದಲ್ಲಿ ಯಾವುದೇ ಆಟ ಅಥವಾ ಸ್ಪರ್ಧೆ ನಡೆಯೋದು ಕಡಿಮೆ. ಆದರೆ ಹಾಸನದಲ್ಲಿ ಅದೇ ಮಳೆಯ ನಡುವೆ ರಾಜ್ಯಮಟ್ಟದ ಬೈಕ್ ರೇಸ್ ಸ್ಪರ್ಧೆ ನಡೆದಿದ್ದು, ಅಪಾರ ಮಂದಿಯ ಎದೆಯಲ್ಲಿ ಚಳಿ ಬದಲಿಗೆ ಬಿಸಿ ಹೆಚ್ಚಿಸಿತು.

    ಹಾಸನದ ಅಂಬೇಡ್ಕರ್ ಯುವ ಬ್ರಿಗೇಡ್ ಹಾಗೂ ಬಿ.ಝಡ್ ಸಂಘಟನೆ ಆಶ್ರಯದಲ್ಲಿ ಶನಿವಾರ ಕಾರ್ ರೇಸ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಮುಂದುವರಿದು ಭಾನುವಾರ ಆಯೋಜನೆ ಮಾಡಿದ್ದ ರಾಜ್ಯಮಟ್ಟದ ಬೈಕ್ ರೇಸ್ ಸ್ಪರ್ಧೆ ನಿಜಕ್ಕೂ ಅದ್ಭುತವಾಗಿತ್ತು.

    ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ನೂರಾರು ಮಂದಿ ರೇಡರ್ ಗಳು ಬಂದಿದ್ದರು. ಭಾನುವಾರದ ರಜೆ ಮೂಡ್‍ನಲ್ಲಿ ಬಂದಿದ್ದ ಸಾವಿರಾರು ಮಂದಿ ರೇಡರ್ ಗಳ ಸಾಹಸಮಯ ಪ್ರದರ್ಶನ ನೋಡಿ ಎಂಜಾಯ್ ಮಾಡಿದ್ದಾರೆ. ಬೈಕ್ ರೇಡರ್ ಗಳ ಸ್ಪೀಡ್ ಮತ್ತು ಬ್ಯಾಲೆನ್ಸ್ ನಿಂದ ನೋಡುಗರನ್ನು ರೋಮಾಂಚನಗೊಳಿಸಿತ್ತು. ಒಬ್ಬರನ್ನು ಹಿಂದಿಕ್ಕಿ ಮತ್ತೊಬ್ಬರು ಗೆಲ್ಲಲು ನಡೆಸಿದ ಪೈಪೋಟಿ ಕ್ರೀಡಾಸಕ್ತರಿಗೆ ಹೊಸದೊಂದು ಥ್ರಿಲ್ ನೀಡಿತು. ಯುವಕರು ಮಾತ್ರವಲ್ಲದೇ ಸ್ಪರ್ಧೆ ನೋಡಲು ಆಗಮಿಸಿದ್ದ ಹಳ್ಳಿ ಜನರು ಸಖತ್ ಎಂಜಾಯ್ ಮಾಡಿದರು ಎಂದು ಪ್ರೇಕ್ಷಕರು ಹೇಳಿದ್ದಾರೆ.

    ವಿವಿಧೆಡೆಗಳಿಂದ ಆಗಮಿಸಿದ್ದ ರೈಡರ್ ಗಳು, ಅಂಕು-ಡೊಂಕಾದ ತಿರುವಿನ ತೇವವಾದ ಮಣ್ಣ ದಾರಿಯಲ್ಲಿ ಕೆಸರು ಹಾರಿಸುತ್ತ ಚಂಗನೆ ಹಾರಿದಂತೆ, ಬಳುಕಾಡುತ್ತಾ ಮಿಂಚಿನ ವೇಗದಲ್ಲಿ ಸಾಗಿದ ದೃಶ್ಯ ಅಬ್ಬಾಬ್ಬಾ ಎನಿಸಿತು. ಗೆದ್ದವರು ಸಖತ್ ಖುಷಿಯಿಂದ ಬೀಗಿದರು. ಈಗಾಗಲೇ ನಡೆದಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಕ್ಕೆ ಕೊರಳೊಡ್ಡಿದ್ದವರು, ತಮ್ಮ ಬಹುಮಾನಗಳ ಪಟ್ಟಿಯನ್ನು ಹಿಗ್ಗಿಸಿಕೊಂಡು ಸಂಭ್ರಮಿಸಿದರು. ಮಳೆಯಿಂದ ಟ್ರ್ಯಾಕ್ ತುಸು ಕ್ಲಿಷ್ಟಕರವಾಗಿದ್ದರೂ, ಸಾಹಸ ಪಟ್ಟು ರೈಡರ್ ಗಳು ಗುರಿಮುಟ್ಟಿ ಸಂತಸಪಟ್ಟರು.

    ಬೆಂಗಳೂರಿನ ಸೊಹೇಲ್ ಅಹಮದ್ 4 ಸ್ಟ್ರೋಕ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದು ಗಮನ ಸೆಳೆದಿದ್ದಾರೆ. ಸ್ಪರ್ಧೆ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಮಹಿಳೆಯರು, ಮಕ್ಕಳು ಹಾಗೂ ಕ್ರೀಡಾ ಪ್ರೇಮಿಗಳು ಬೈಕ್ ಸವಾರರ ಮಿಂಚಿನ ಸಂಚಾರಕ್ಕೆ ಮಾರು ಹೋಗಿದ್ದು, ಕೆಲವರು ತಮ್ಮ ತಮ್ಮ ನೆಚ್ಚಿನ ರೈಡರ್ಸ್ ಗಳನ್ನು ಹುರಿದುಂಬಿಸಿ ತಾವೂ ಖುಷಿಪಟ್ಟರು.

  • ಕೋಲಾರದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಒಲಿಂಪಿಕ್ ಓಟ

    ಕೋಲಾರದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಒಲಿಂಪಿಕ್ ಓಟ

    ಕೋಲಾರ: ಶಾಂತಿ ಮತ್ತು ಸೌಹಾರ್ದತೆಗಾಗಿ ಓಟ ಎಂಬ ಘೋಷವಾಕ್ಯದ ಅಡಿ ಭಾನುವಾರ ನಗರದಲ್ಲಿ `ಒಲಿಂಪಿಕ್ ಡೇ ರನ್-2018′ ಓಟವನ್ನು ಆಯೋಜಿಸಲಾಗಿತ್ತು.

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಬೆಂಗಳೂರು, ಕೋಲಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಒಲಿಂಪಿಕ್ ಡೇ ರನ್-2018 ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.

    ಒಲಿಂಪಿಕ್ ಡೇ ರನ್-2018 ಕಾರ್ಯಕ್ರಮವನ್ನು ಸ್ಯಾಂಡಲ್‍ವುಡ್ ನಟ ನೆನಪಿರಲಿ ಪ್ರೇಮ್ ಚಾಲನೆ ನೀಡಿ ಕ್ರೀಡಾಭಿಮಾನಿಗಳನ್ನ ಪ್ರೋತ್ಸಾಹಿಸಿದರು. ಈ ವೇಳೆ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ಒಲಿಂಪಿಕ್ ನಲ್ಲಿ ಭಾರತ ಹೆಚ್ಚು ಹೆಚ್ಚು ಚಿನ್ನದ ಪದಕಗಳನ್ನ ಗಳಿಸಲಿ ಎಂದು ಹಾರೈಸಿದರು.

    ಇನ್ನೂ ಸ್ಯಾಂಡಲ್ ವುಡ್‍ನಲ್ಲಿ ಎದ್ದಿರುವ ದಿ ಬಾಸ್ ಹಾಗೂ ವಿಲನ್ ಸಿನಿಮಾ ಕಾಂಟ್ರವರ್ಸಿ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ನಾನು ಕೇವಲ ಕ್ರೀಡೆ ಬಗ್ಗೆ ಮಾತ್ರ ಮಾತನಾಡುತ್ತೇನೆ, ಬೆಳ್ ಬೆಳಗ್ಗೆ ಒಳ್ಳೆಯದನ್ನು ಮಾತ್ರ ಮಾತನಾಡಬೇಕು ಎಂದು ಬೆಳ್ಳಿ ತೆರೆಯ ಗಾಸಿಪ್ ಸುದ್ದಿಗೆ ತೆರೆ ಎಳೆದರು.

    ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ನಿಂದ ಪ್ರಾರಂಭಿಸಿ ಶ್ರೀ ವಿಶ್ವೇಶ್ವರಯ್ಯ ಕ್ರೀಡಾಂಗಣದವರೆಗೂ ಕ್ರೀಡಾಭಿಮಾನಿಗಳು, ಯುವಕ-ಯುವತಿಯರು, ಪುರುಷ-ಮಹಿಳೆಯರು, ನೌಕರರು, ಕ್ರೀಡಾಪಟುಗಳು ಸೇರಿದಂತೆ ನೂರಾರು ಮಂದಿ ಒಲಿಂಪಿಕ್ ಓಟದಲ್ಲಿ ಭಾಗವಹಿಸಿದ್ದರು.

    ಈ ವೇಳೆ ಎಂಎಲ್‍ಸಿ ಗೋವಿಂದ ರಾಜು, ಪ್ರಭಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ರೋಹಿಣಿ ಕಟೋಚ್ ಸಪೆಟ್ ಕೂಡ ಒಲಿಂಪಿಕ್ ಡೇ ಓಟದಲ್ಲಿ ಪಾಲ್ಗೊಂಡಿದ್ದರು.

  • 100 ಮೀಟರ್ ಓಡಿದ್ರು ಧೋನಿ, ಪಾಂಡ್ಯ: ವಿನ್ನರ್ ಯಾರು ಗೊತ್ತಾ?

    100 ಮೀಟರ್ ಓಡಿದ್ರು ಧೋನಿ, ಪಾಂಡ್ಯ: ವಿನ್ನರ್ ಯಾರು ಗೊತ್ತಾ?

    ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಮಾಜಿ ನಾಯಕ, ವಿಕೆಟ್ ಕೀಪರ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ 100 ಮೀಟರ್ ಓಟ ಓಡಿದ್ದಾರೆ.

    ಪಂದ್ಯದ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರರು ಮೈದಾನದಲ್ಲಿ ನೆಟ್ ಪ್ರಾಕ್ಟಿಸ್ ಮಡುತ್ತಿದ್ದರು. ಈ ವೇಳೆ ಧೋನಿ ಮತ್ತು ಪಾಂಡ್ಯ ಓಟ ಓಡಿದ್ದಾರೆ. ಈ ಓಟದ ಸ್ಪರ್ಧೆಯಲ್ಲಿ ಧೋನಿ ಜಯಗಳಿಸಿದ್ದು, ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್  ಖಾತೆಯಲ್ಲಿ ಅಪ್ಲೋಡ್ ಮಾಡಿದೆ.

    ಬುಧವಾರ ಬೆಳಗ್ಗೆ 10.48 ಕ್ಕೆ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ 2,800 ಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದರೆ, 8 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

     

  • ರಾಜ್ಯದ ಈ ಜಿಲ್ಲೆಯಲ್ಲಿ ನಡೆಯುತ್ತಿದೆ ಕೋಟ್ಯಾಂತರ ರೂ. ಬೆಟ್ಟಿಂಗ್ ನ ಕುದುರೆ ರೇಸ್!

    ರಾಜ್ಯದ ಈ ಜಿಲ್ಲೆಯಲ್ಲಿ ನಡೆಯುತ್ತಿದೆ ಕೋಟ್ಯಾಂತರ ರೂ. ಬೆಟ್ಟಿಂಗ್ ನ ಕುದುರೆ ರೇಸ್!

    ಕೊಪ್ಪಳ: ಈದ್ ಮಿಲಾದ್ ಪ್ರಯುಕ್ತ ಇಂದು ಬೆಳ್ಳಂಬೆಳಗ್ಗೆ ಜಿಲ್ಲೆಯಲ್ಲಿ ಬೆಟ್ಟಿಂಗ್ ಕುದುರೆ ರೇಸ್ ನಡೆದಿದೆ.

    ಈ ರೇಸ್ ನಡೆಸಲು ಯಾವುದೇ ಪರವಾನಗಿ ಮತ್ತು ಸುರಕ್ಷಿತವಾದ ನಿಯಮಗಳನ್ನು ಪಾಲಿಸದೇ, ಮನಸೋ ಇಚ್ಚೆಯಂತೆ ಜೀವ ಭಯವನ್ನ ಲೆಕ್ಕಿಸದೇ ಸಹಸ್ರಾರು ಜನರ ಮಧ್ಯೆ ಕುದುರೆ ರೇಸ್ ನಡೆಸಲಾಗಿದೆ. ಕೊಪ್ಪಳ ತಾಲೂಕಿನ ಗಿಣಗೇರಾದಿಂದ ಕೊಪ್ಪಳದವರೆಗೆ ನಡೆದ ಈ ರೇಸ್ ನಲ್ಲಿ ಕೋಟಿ ರೂಪಾಯಿಗೂ ಹೆಚ್ಚಿನ ಬೆಟ್ಟಿಂಗ್ ರೇಸ್ ನಡೆಸಲಾಗಿದೆ.

    ರೇಸ್ ನಲ್ಲಿ ನೆರೆಯ ಆಂಧ್ರದಿಂದ ಪಕ್ಕದ ಬಳ್ಳಾರಿ, ರಾಯಚೂರು ಜಿಲ್ಲೆಗಳಿಂದ ಬಂದ ರೇಸ್ ಪ್ರಿಯರು ಕೋಟ್ಯಾಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ. ಇನ್ನು ಈ ರೇಸ್ ನಡೆಸಲು ಪೊಲೀಸ್ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ ಅನುಮತಿ ಇಲ್ಲದೆ ಅಸುರಕ್ಷಿತವಾಗಿ ರೇಸ್ ನಡೆಸಲಾಗಿದೆ.

    ಪ್ರತಿ ವರ್ಷ ಈ ರೇಸ್ ನಡೆಯುತ್ತಿದ್ದರೂ, ಪೊಲೀಸ್ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿರುವುದು ಎಲ್ಲರಲ್ಲೂ ಅನುಮಾನ ಮೂಡಿಸಿದೆ. ಇದು ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು, ಎರಡು ಕುದುರೆಗಳ ನಡುವೇ ಓಟ ಏರ್ಪಡಿಸಲಾಗುತ್ತದೆ. ಅದಕ್ಕಾಗಿ ವರ್ಷಾನುಗಟ್ಟಲೇ ಕುದುರೆಗೆ ಪಳಗಿಸಿ ಟಾಂಗಾ ಇದ್ದವರೇ ಈ ರೇಸ್ ನಡೆಸುತ್ತಾರೆ. ಆದರೆ ಈಗ ಬೆಟ್ಟಿಂಗ್ ಓಟವಾಗಿ ಮಾರ್ಪಾಡಾಗಿದೆ.

    ಅದಕ್ಕಾಗಿ ಯಾವ ಕಾನೂನಿನ ನಿಯಮಗಳನ್ನು ಪಾಲಿಸದೇ ಬೆಳ್ಳಂಬೆಳಗ್ಗೆಯೇ ರೇಸ್ ಆಡಿ ಮುಗಿಸಲಾಗುತ್ತದೆ. ಈ ರೇಸ್ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದ್ದರೂ, ಕೂಡ ಇದುವರೆಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ವಿಷಾದನೀಯವಾಗಿದೆ.

  • ವರ್ಷಪೂರ್ತಿ ನೀರಿನಲ್ಲೇ ವಾಸ ಮಾಡ್ತಾರೆ ಈ ಜನ!

    ವರ್ಷಪೂರ್ತಿ ನೀರಿನಲ್ಲೇ ವಾಸ ಮಾಡ್ತಾರೆ ಈ ಜನ!

    ಕೌಲಾಲಂಪುರ: ಸಮುದ್ರದದಲ್ಲಿ ಹಡುಗಗಳಲ್ಲಿ ಜನರು ಜೀವನ ಮಾಡುವುದು ನಿಮಗೆ ಗೊತ್ತೆ ಇದೆ. ಆದರೆ ಮಲೇಷಿಯಾದಲ್ಲಿರುವ ಒಂದು ಬುಡಕಟ್ಟು ಜನಾಂಗದ ಸದಸ್ಯರು ವರ್ಷಪೂರ್ತಿ ಸಮುದ್ರದಲ್ಲಿ ಮೇಲೆ ಮನೆ ಮಾಡುತ್ತಿದ್ದಾರೆ.

    ಹೌದು, ಮಲೇಷ್ಯಾದ ಬಜೌ ಬುಡಕಟ್ಟು ಸಮುದಾಯದ ಸದಸ್ಯರು ಸಮುದ್ರದ ಮೇಲೆ ಸಣ್ಣ ಮನೆಯನ್ನು ನಿರ್ಮಿಸಿ ತಮ್ಮ ಜೀವನವನ್ನು ಕಳೆಯುತ್ತಾರೆ.

    ಸಣ್ಣ ಸಮುದಾಯವಾಗಿರುವ ಇವರು ಭೂಮಿಮೇಲೆ ನೆಲೆಸುವುದಿಲ್ಲ. ಬರೀ ನೀರಿನ ಮೇಲೆ ಬುದುಕುವುದು ಇವರ ವಿಶೇಷತೆ. ಸಮುದ್ರದ ಅಂಚಿನಲ್ಲಿ ನೀರಿನೊಳಗೆ ಮನೆಕಟ್ಟಿ ಜೀವನ ನಡೆಸುವ ಸಂಪ್ರದಾಯ ಅನಾದಿಕಾಲದಿಂದ ಬಂದಿದೆ.

    ನಾಗರಿಕತೆಗಳು ಬೆಳೆದಿದ್ದರೂ ಇನ್ನೂ ಯಾಕೆ ಇಲ್ಲೆ ಇದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ, ನಮ್ಮ ಹಿರಿಯರು ಈ ವ್ಯವಸ್ಥೆಯಲ್ಲಿ ನೆಲೆಸಿದ್ದರು. ನಾವು ಈ ರೀತಿಯ ಮನೆಯಲ್ಲಿ ನೆಲೆಸಿ ಹಿರಿಯರ ಸಂಪ್ರದಾಯವನ್ನು ಮುಂದುವರೆಸುತ್ತಿದ್ದೇವೆ ಎಂದು ಉತ್ತರಿಸುತ್ತಾರೆ.

     

    ಮೀನು ಹಿಡಿಯುವ ಇವರು ಮೂಲತಃ ಫಿಲಿಪೈನ್ಸ್ ಮೂಲದವರಾಗಿದ್ದು, ಇನ್ನು ಮಲೇಷ್ಯಾ ಸರ್ಕಾರ ಇವರಿಗೆ ಪೌರತ್ವ ನೀಡಿಲ್ಲ.

     

    https://www.youtube.com/watch?v=8tJmFYeKLlg