Tag: Raayan

  • ದೀಪಾವಳಿ ವಿಶೇಷ ರಾಯನ್ ಕ್ಯೂಟ್ ಫೋಟೋಸ್ ಶೇರ್ ಮಾಡಿದ ಮೇಘನಾ ರಾಜ್

    ದೀಪಾವಳಿ ವಿಶೇಷ ರಾಯನ್ ಕ್ಯೂಟ್ ಫೋಟೋಸ್ ಶೇರ್ ಮಾಡಿದ ಮೇಘನಾ ರಾಜ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮಗ ರಾಯನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.

    ಸದಾ ಒಂದಲ್ಲಾ ಒಂದು ಫೋಟೋ ಹಾಗೂ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಮೇಘನಾ ಇದೀಗ ದೀಪಾವಳಿ ಹಬ್ಬದ ವಿಶೇಷ ರಾಯನ್ ರಾಜ್  ಸರ್ಜಾ ಕ್ಯೂಟ್ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವುದರ ಜೊತೆಗೆ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಫೋಟೋದಲ್ಲಿ ರಾಯನ್ ಹಲವು ರೀತಿಯ ಎಕ್ಸ್‌ಪ್ರೇಶನ್‌ ನೀಡುತ್ತಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾನೆ. ಫೋಟೋ ಜೊತೆಗೆ ರಾಯನ್ ಮೂಡ್‍ಗಳು. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ನನ್ನ ಆಶೀರ್ವಾದಗಳನ್ನು ಎಣಿಸಲು ಕಲಿಯುತ್ತಿದ್ದೇನೆ. ಈ ಚಿಕ್ಕ ಮಗು ನನ್ನ ಪವಾಡ. ಈ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ಹೊಳಪು ಮತ್ತು ಅನಿಯಮಿತ ಸಂತೋಷ, ಪ್ರೀತಿ ಮತ್ತು ಬೆಳಕು ತರಲಿ. ರಾಯನ್ ಈ ದೀಪಾವಳಿಯಲ್ಲಿ ಸಖತ್ ಬ್ರೈಟ್ ಆಗಿ ಮಿಂಚುತ್ತಿದ್ದಾನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಇತ್ತೀಚೆಗಷ್ಟೇ ಮೇಘನಾ, ರಾಯನ್ ಹುಟ್ಟುಹಬ್ಬವನ್ನು ಸಖತ್ ಗ್ರ್ಯಾಂಡ್ ಆಗಿ ಸೆಲಬ್ರೆಟ್ ಮಾಡಿದ್ದರು. ಪುಟ್ಟ ಮಕ್ಕಳಿಗೆ ಇಷ್ಟವಾಗುವಂತೆ ಪ್ರಾಣಿ, ಪಕ್ಷಿ, ಗೊಂಬೆಗಳನ್ನು ಕಾಡಿನ ಥೀಮ್‍ನಲ್ಲಿ ಅಲಂಕರಿಸಿ ರಾಯನ್ ಬರ್ತ್‍ಡೇ ಮಾಡಿದ್ದರು. ಈ ವೇಳೆ ಪಾರ್ಟಿಯಲ್ಲಿ ಸ್ಯಾಂಡಲ್‍ವುಡ್‍ನ ಹಲವಾರು ಸೆಲಬ್ರೆಟಿಗಳು ಭಾಗಿಯಾಗಿ ರಾಯನ್‍ಗೆ ವಿಶ್ ಮಾಡಿದ್ದರು.