Tag: Raashii Khanna

  • ಗೋಧ್ರಾ ದುರಂತ ಆಧರಿತ ಸಿನಿಮಾ ‘ದಿ ಸಾಬರಮತಿ ರಿಪೋರ್ಟ್’ ವೀಕ್ಷಿಸಲಿದ್ದಾರೆ ಮೋದಿ

    ಗೋಧ್ರಾ ದುರಂತ ಆಧರಿತ ಸಿನಿಮಾ ‘ದಿ ಸಾಬರಮತಿ ರಿಪೋರ್ಟ್’ ವೀಕ್ಷಿಸಲಿದ್ದಾರೆ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ದೆಹಲಿಯ ಸಂಸತ್‌ ಸಂಕೀರ್ಣದಲ್ಲಿರುವ ಗ್ರಂಥಾಲಯದ ಬಾಲಯೋಗಿ ಆಡಿಟೋರಿಯಂ ಹಿಂದಿ ಚಲನಚಿತ್ರ ʻದಿ ಸಾಬರಮತಿ ರಿಪೋರ್ಟ್‌ʼ (The Sabarmati Report) ವೀಕ್ಷಿಸಲಿದ್ದಾರೆ. ಮೋದಿ ಅವರೊಂದಿಗೆ ಚಿತ್ರನಟ ವಿಕ್ರಾಂತ್‌ ಮಾಸ್ಸೆ, ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಚಲನಚಿತ್ರವನ್ನು ವೀಕ್ಷಿಸಲಿದ್ದಾರೆ.

    2002ರ ಫೆಬ್ರವರಿ 27ರಂದು ನಡೆದ ಗೋಧ್ರಾ ರೈಲು ದುರಂತವನ್ನಾಧರಿಸಿದ (Godhra train tragedy) ಚಿತ್ರ ಇದಾಗಿದೆ. ವಿಕ್ರಾಂತ್ ಮಾಸ್ಸೆ, ರಿಧಿ ಡೋಗ್ರಾ ಮತ್ತು ರಾಶಿ ಖನ್ನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. 2002ರ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದರು. ಕಳೆದ ತಿಂಗಳಷ್ಟೇ ಮೋದಿ ಚಿತ್ರತಂಡವನ್ನು ಶ್ಲಾಘಿಸಿದ್ದರು. ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೊಗಳಿದ್ದರು. ಇದನ್ನೂ ಓದಿ: ಇಂದು ರೈತರ ಪ್ರತಿಭಟನೆ: ದೆಹಲಿ–ನೋಯ್ಡಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

    ಏನಿದು ಗೋಧ್ರಾ ರೈಲು ದುರಂತ?
    ಬಿಹಾರದ ಮುಜಾಫರ್‌ಪುರದಿಂದ ಗುಜರಾತ್‌ನ ಅಹಮದಾಬಾದ್‌ಗೆ ಹೊರಟಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲು 2002ರ ಫೆ.27,ರ ಬೆಳಗ್ಗೆ ತನ್ನ ನಿಗದಿತ ಸಮಯಕ್ಕೆ ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣಕ್ಕೆ ತೆರಳಿತ್ತು. ಇದರಲ್ಲಿ ಕರಸೇವಕರು, ಹಿಂದೂ ಸ್ವಯಂಸೇವಕರು ಅಯೋಧ್ಯೆಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದರು. ರೈಲಿಗೆ ಸುಮಾರು 2,000 ಜನರಿದ್ದ ಗುಂಪು ಕಲ್ಲು ತೂರಿ ನಾಲ್ಕು ಕೋಚ್‌ಗಳಿಗೆ ಬೆಂಕಿ ಹಚ್ಚಿತ್ತು.

    GODHRA

    ಈ ದುರಂತದಲ್ಲಿ 27 ಮಹಿಳೆಯರು ಮತ್ತು 10 ಮಕ್ಕಳು ಸೇರಿದಂತೆ 59 ಜನರು ಸಾವನ್ನಪ್ಪಿದ್ದರು. ದಾಳಿಯಲ್ಲಿ 48 ಪ್ರಯಾಣಿಕರು ಗಾಯಗೊಂಡಿದ್ದರು. ಇದರಿಂದ ಆದ ಗಲಭೆ ಮೂರು ತಿಂಗಳವರೆಗೆ ಮುಂದುವರೆದಿತ್ತು. ಈ ಗಲಭೆಗೆ ಆಗಿನ ಸಿಎಂ ಆಗಿದ್ದ ಮೋದಿ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ದುರಂತದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ತಂಡ, ವರದಿಯಲ್ಲಿ ಈ ಬಗ್ಗೆ ಯಾವುದೇ ಪುರಾವೆಗಳು ಇಲ್ಲ ಎಂದು ಉಲ್ಲೇಖಿಸಿತ್ತು. ಇದನ್ನೂ ಓದಿ: Uttar Pradesh| ಮಹಾ ಕುಂಭಮೇಳ ನಡೆಯುವ ಪ್ರದೇಶ ಹೊಸ ಜಿಲ್ಲೆಯಾಗಿ ಘೋಷಣೆ

    ಧೀರಜ್ ಸರ್ನಾ ನಿರ್ದೇಶನದ ‘ದಿ ಸಾಬರಮತಿ ರಿಪೋರ್ಟ್’ ಚಿತ್ರವು ನ.15 ರಂದು ಬಿಡುಗಡೆ ಆಗಿತ್ತು.‌ ಈ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ, ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಸೇರಿದಂತೆ ಇತರರು ನಟಿಸಿದ್ದಾರೆ. ಇದನ್ನೂ ಓದಿ: ಸಮುದಾಯ ಉಳಿಯಬೇಕಾದ್ರೆ ಕನಿಷ್ಠ 3 ಮಕ್ಕಳನ್ನಾದರೂ ಪಡೆಯಬೇಕು: RSS ಮುಖ್ಯಸ್ಥ ಮೋಹನ್‌ ಭಾಗವತ್‌

  • ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ

    ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ

    ನ್ನಡತಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ನಾಯಕಿಯಾಗಿದ್ದರು. ಇದೀಗ ಅದ್ಯಾಕೋ ಅದೃಷ್ಟ ಕೈ ಕೊಟ್ಟಂತಿದೆ. ನಿತಿನ್ ಸಿನಿಮಾದಿಂದ ಕಿಕ್ ಔಟ್ ಆಗಿದ್ದ ಪ್ರಾಜೆಕ್ಟ್‌ಗೆ ಹಾಟ್ ಬ್ಯೂಟಿ ರಾಶಿ ಖನ್ನಾ (Raashii Khanna) ಎಂಟ್ರಿ ಕೊಟ್ಟಿದ್ದಾರೆ. ನಿತಿನ್‌ ಜೊತೆ ರಾಶಿ ರೊಮ್ಯಾನ್ಸ್‌ ಮಾಡಲಿದ್ದಾರೆ.

    ‘ರಾಬಿನ್ ಹುಡ್’ (Robinhood) ಸಿನಿಮಾದಿಂದ ಶ್ರೀಲೀಲಾರನ್ನು ಕೈಬಿಟ್ಟಿರುವ ವಿಚಾರ ಕೆಲದಿನಗಳಿಂದ ಭಾರೀ ಸುದ್ದಿಯಾಗುತ್ತಿದೆ. ಈ ಚಿತ್ರದಿಂದ ಮೊದಲು ಹೊರಬಂದಿದ್ದು, ರಶ್ಮಿಕಾ ಮಂದಣ್ಣ. ಹಿಂದಿ ಸಿನಿಮಾದಲ್ಲಿ ಬ್ಯುಸಿಯಾದ ಕಾರಣ ನಿತಿನ್ (Actor Nithin) ಚಿತ್ರಕ್ಕೆ ಗುಡ್‌ಬೈ ಹೇಳಿದ್ದರು. ಬಳಿಕ ನಾಯಕಿ ಪಟ್ಟ ಶ್ರೀಲೀಲಾ ಪಾಲಿಗೆ ದಕ್ಕಿದ್ದು. ಕೆಲ ಮನಸ್ತಾಪಗಳಿಂದ ಶ್ರೀಲೀಲಾರನ್ನು ಕೂಡ ಚಿತ್ರತಂಡ ಹೊರಗಿಟ್ಟಿದೆ ಎನ್ನಲಾಗಿದೆ.

    ತೆಲುಗು ಮತ್ತು ತಮಿಳಿನಲ್ಲಿ ಮೋಡಿ ಮಾಡಿರುವ ನಟಿ ರಾಶಿ ಖನ್ನಾ ಇತ್ತೀಚೆಗೆ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ನಾಯಕಿಯಾಗಿ ನಟಿಸಿದ್ದರು. ಬಾಲಿವುಡ್‌ನಲ್ಲಿಯೂ ನಟಿಗೆ ಬೇಡಿಕೆಯಿದೆ. ಹಾಗಾಗಿ ನಿತಿನ್‌ಗೆ ಸೂಕ್ತ ನಾಯಕಿ ಎಂದೆನಿಸಿ ರಾಶಿಗೆ ಚಿತ್ರತಂಡ ಮಣೆ ಹಾಕಿದೆ. ಇದನ್ನೂ ಓದಿ:ಮಗನ ಹೆಸರು ರಿವೀಲ್ ಮಾಡಿದ ‘ಕಾರ್ತಿಕೇಯ’ ನಟ ನಿಖಿಲ್

    ಡೈರೆಕ್ಟರ್ ವೆಂಕಿ ಕುಡುಮುಲ ಹೆಣೆದಿರುವ ಕಥೆ ಕೇಳಿ ರಾಶಿ ಖನ್ನಾ ಕೂಡ ಥ್ರಿಲ್ ಆಗಿ ಸಿನಿಮಾ ಓಕೆ ಎಂದಿದ್ದಾರೆ. ಸದ್ಯದಲ್ಲೇ ಸಿನಿಮಾತಂಡವನ್ನು ನಟಿ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಮಾಲಿವುಡ್ ನಟ ಮೋಹನ್‌ಲಾಲ್‌ರನ್ನು ಭೇಟಿಯಾದ ರಿಷಬ್ ಶೆಟ್ಟಿ

    ಒಂದು ಟೈಮ್‌ನಲ್ಲಿ ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟ ನಟಿ ಶ್ರೀಲೀಲಾ ಈಗ ಸಖತ್ ಸೈಲೆಂಟ್ ಆಗಿದ್ದಾರೆ. ಮತ್ತೆ ಶ್ರೀಲೀಲಾ ಧಮಾಕ ಯಾವಾಗ ಶುರುವಾಗುತ್ತೆ ಎಂದು ಕಾದುನೋಡಬೇಕಿದೆ.

  • ಬೆಚ್ಚಿ ಬೀಳಿಸಲು ಬಂದ ತಮನ್ನಾ ಭಾಟಿಯಾ

    ಬೆಚ್ಚಿ ಬೀಳಿಸಲು ಬಂದ ತಮನ್ನಾ ಭಾಟಿಯಾ

    ಹಾಟ್ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಇದೀಗ ಬೆಚ್ಚಿ ಬೀಳಿಸಲು ರೆಡಿಯಾಗಿದ್ದಾರೆ. ‘ಅರಣ್ಮನೈ 4’ (Aranmanai 4) ಚಿತ್ರದ ಮೂಲಕ ಭಯಾನಕವಾಗಿ ಮಿಲ್ಕಿ ಬ್ಯೂಟಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಟ್ರೈಲರ್ ಈಗ ರಿಲೀಸ್ ಆಗಿದ್ದು, ತಮನ್ನಾ ನಟನೆಯ ಝಲಕ್‌ಗೆ ಫ್ಯಾನ್ಸ್ ದಂಗಾಗಿದ್ದಾರೆ.

    ತಮನ್ನಾ ಸದಾ ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಖತ್ ಹಾಟ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಹೈಲೆಟ್ ಆಗಿದ್ದ ನಟಿ ಈಗ ದೆವ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲು ಬರುತ್ತಿದ್ದಾರೆ. ಇದನ್ನೂ ಓದಿ:ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

     

    View this post on Instagram

     

    A post shared by Tamannaah Bhatia (@tamannaahspeaks)

    ‘ಅರಣ್ಮನೈ 4’ ಸೀಕ್ವೆಲ್ ಸಿನಿಮಾದಲ್ಲಿ ತಮನ್ನಾರ ಕೊಲೆಯಾಗಿರುತ್ತದೆ. ಆದರೆ ಅವಳ ಸಾವು ಸಹಜ ಅಲ್ಲ ಎಂದು ನಟ, ಡೈರೆಕ್ಟರ್ ಸುಂದರ್ ಸಿ. ಹೇಳುವುದನ್ನು ಟ್ರೈಲರ್‌ನಲ್ಲಿ ನೋಡಬಹುದಾಗಿದೆ. ತಂಗಿಯ ಸಾವಿಗೆ ಅಸಲಿ ಕಾರಣವೇನು ಎಂದು ಹುಡುಕುವ ಲಾಯರ್ ಪಾತ್ರದಲ್ಲಿ ಸುಂದರ್ ಸಿ. ನಟಿಸಿದ್ದಾರೆ. ಸಿನಿಮಾ ಕಥೆ ಮತ್ತು ನಿರ್ದೇಶನ ಕೂಡ ಸುಂದರ್ ಸಿ. ಮಾಡಿದ್ದಾರೆ.

    ಈ ಚಿತ್ರದಲ್ಲಿ ನಟಿ ರಾಶಿ ಖನ್ನಾ (Raashii Khanna) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯೋಗಿ ಬಾಬು, ಕನ್ನಡದ ನಟ ಗರುಡ ರಾಮ್ ಕೂಡ ನಟಿಸಿದ್ದಾರೆ. ಖುಷ್ಬೂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೇ ಏಪ್ರಿಲ್ 11ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

    ಅಂದಹಾಗೆ, ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಕೂಡ ನಟಿಸಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಕೈಬಿಟ್ಟಿದ್ದಾರೆ.