Tag: Raani

  • ನಿರಾಶ್ರಿತರ ಜೊತೆ ನಿಂತುಕೊಂಡ ನಟ ಕಿರಣ್ ರಾಜ್

    ನಿರಾಶ್ರಿತರ ಜೊತೆ ನಿಂತುಕೊಂಡ ನಟ ಕಿರಣ್ ರಾಜ್

    ನಪ್ರಿಯ ಧಾರಾವಾಹಿಗಳ ಮೂಲಕ  ಕನ್ನಡಿಗರ ಮನಗೆದ್ದಿರುವ ನಟ ಕಿರಣ್ ರಾಜ್ (kiran Raj), ಈಗ ಬೆಳ್ಳಿತೆರೆಯಲ್ಲೂ ಬೇಡಿಕೆಯ ನಟರಾಗಿದ್ದಾರೆ. ಪ್ರಸ್ತುತ ಅವರು ನಾಯಕನಾಗಿ ನಟಿಸುತ್ತಿರುವ ರಾನಿ (Raani)  ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈ ನಡುವೆ ಅವರು ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.

    ಕಿರಣ್ ರಾಜ್ ಕೇವಲ ನಾಯಕನಾಗಷ್ಟೇ ಅಲ್ಲ. ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲೂ ಸಾಕಷ್ಟು ಜನರಿಗೆ ಕಿರಣ್ ರಾಜ್ ಆಸರೆಯಾಗಿದ್ದರು. ಅಲ್ಲದೇ, ಅನೇಕ ಸಮಾಜಮುಖಿ ಕೆಲಸಗಳಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಮಂತಾ ನಟನೆಯ ಹಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಪ್ರಸ್ತುತ ನಕ್ಷತ್ರ (Nakshtra) ಅವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ‘ನಮ್ಮನೆ ಸುಮ್ಮನೆ ನಿರಾಶ್ರಿತರ ಆಶ್ರಮ’ ಕ್ಕೆ ಕಿರಣ್ ರಾಜ್ ನೂರು ಮೂಟೆ ಸಿಮೆಂಟ್ ನೀಡಿದ್ದಾರೆ. ಕಿರಣ್ ರಾಜ್ ಅವರ ಈ ಕಾರ್ಯಕ್ಕೆ ನಕ್ಷತ್ರ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ, ನಿರಾಶ್ರಿತರ ಜೊತೆ ಯಾವಾಗಲೂ ನಿಲ್ಲುವುದಾಗಿ ಕಿರಣ್ ರಾಜ್ ಹೇಳಿದ್ದಾರೆ.