Tag: R Shankar

  • ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್. ಶಂಕರ್

    ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್. ಶಂಕರ್

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ (BJP) ಟಿಕೆಟ್ ತಪ್ಪಿದ ಬೆನ್ನಲ್ಲೇ ರಾಣಿಬೆನ್ನೂರು (Ranebennur) ಕ್ಷೇತ್ರದ ಆಕಾಂಕ್ಷಿಯಾಗಿದ್ದ ಆರ್. ಶಂಕರ್ (R Shankar) ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಬಿಜೆಪಿಯಲ್ಲಿ (BJP) ಟಿಕೆಟ್ ಭಿನ್ನಮತ ಸ್ಫೋಟ ಬೆನ್ನಲ್ಲೇ ಆರ್. ಶಂಕರ್ ಅವರು ಬೆಂಬಲಿಗರೊಂದಿಗೆ ಬುಧವಾರ ವಿಧಾನಸೌಧಕ್ಕೆ (Vidhana Soudha) ಆಗಮಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಈ ವೇಳೆ ಹೊರಟ್ಟಿ (Basavaraj Horatti) ರಾಜೀನಾಮೆಯನ್ನು ಅಂಗೀಕರಿಸಿದರು.

    ರಾಜೀನಾಮೆಗೂ ಮುಂಚಿತವಾಗಿ ಮಾತನಾಡಿದ್ದ ಅವರು, ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಂತು ಖಚಿತ. ಆದರೆ ಯಾವ ಪಕ್ಷವೋ ಅಥವಾ ಪಕ್ಷೇತರವಾಗಿ ಸ್ಪರ್ಧಿಸಬೇಕೋ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಇರಿದಂತಾಗಿದೆ – ಕಾಗೋಡು ತಿಮ್ಮಪ್ಪ

    ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ನನ್ನನ್ನ ಪಕ್ಷಕ್ಕೆ ಕರೆದುಕೊಂಡ ಹೋದವರು ಯಾರು ಈಗ ಮಾತಾನಾಡ್ತಿಲ್ಲ. ಕಮಿಷನ್, ಜೂಜು, ಆರೋಪ ಇರೋವವರಿಗೆ ಟಿಕೆಟ್ ಕೊಟ್ಟಿದ್ದಾರೆ. ಸರ್ಕಾರ ಬರೋಕೆ ಕಾರಣವಾದವನು ನಾನು. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಅನ್ನೋ ಸಂದರ್ಭದಲ್ಲಿ ಕೆಲಸ ಮಾಡಿದವನು ನಾನು. ಆದರೆ ಈ ರೀತಿ ನಡೆಸಿಕೊಂಡದ್ದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಅಂದ್ರೂ ಓಕೆ – ರೇವಣ್ಣ

  • ರಾಜಕೀಯವಾಗಿ ಬೆಳೆಯಬಾರದೆಂದು ನನ್ನ ಮೇಲೆ ದಾಳಿ: ಎಂಎಲ್‌ಸಿ ಆರ್.ಶಂಕರ್

    ರಾಜಕೀಯವಾಗಿ ಬೆಳೆಯಬಾರದೆಂದು ನನ್ನ ಮೇಲೆ ದಾಳಿ: ಎಂಎಲ್‌ಸಿ ಆರ್.ಶಂಕರ್

    ಹಾವೇರಿ: ಚುನಾವಣೆಯಲ್ಲಿ (Election) ಟಿಕೆಟ್ ಕೊಡದಿದ್ದರೆ ನೂರಕ್ಕೆ ಲಕ್ಷ ಪರ್ಸೆಂಟ್ ಪಕ್ಷೇತರನಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ (MLC) ಆರ್.ಶಂಕರ್ (R.Shankar)) ಹೇಳಿದರು.

    ವಾಣಿಜ್ಯ ತೆರಿಗೆ ಇಲಾಖೆಯ (Commercial Tax Department) ದಾಳಿ ಪ್ರಕರಣದ ಕುರಿತು ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರಿನಲ್ಲಿರುವ (Ranebennur) ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ತೆರಿಗೆ ಇಲಾಖೆಯವರು ಕಾನೂನಿನ ರೀತಿಯಲ್ಲಿ ಪರೀಕ್ಷೆ ಮಾಡಲಿ. ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಇವರು ಏಕಾಏಕಿ ದಾಳಿ ಮಾಡಿದ್ದಾರೆ. ರಾಣೆಬೆನ್ನೂರಿಗೆ ಕಾಲು ಇಟ್ಟಾಗಿನಿಂದ ದಾನ ಧರ್ಮವನ್ನು ಮಾಡಿದ್ದೇನೆ. ನಾನು ದುಡಿದ ಆದಾಯದಲ್ಲಿ ಒಂದು ಭಾಗವನ್ನು ದಾನ ಧರ್ಮಕ್ಕಾಗಿ ಮೀಸಲಿಟ್ಟಿದ್ದೇನೆ. ಇದು ಹಿಂದಿನಿಂದಲೂ ಮಾಡುತ್ತಿದ್ದೇನೆ. ಅದು ಬಿಟ್ಟು ಚುನಾವಣೆ ಇದೆ ಎಂದು ಜನರಿಗೆ ಕೊಡುತ್ತಿಲ್ಲ. ಇಲ್ಲಿ ಹಗಲು ದರೋಡೆ ನಡೆದಿದೆ. ಅದರ ಬಗ್ಗೆ ಯಾರಿಗೂ ಕಣ್ಣು ಕಾಣುತ್ತಿಲ್ಲ. ರಾಜಕೀಯದಲ್ಲಿ (Politics) ಆರ್.ಶಂಕರ್ ಬೆಳೆಯಲೇಬಾರದು ಎಂಬ ಉದ್ದೇಶದಿಂದ ಈ ರೀತಿಯಾಗಿ ಮುಗಿಸಲು ಮುಂದಾಗಿದ್ದಾರೆ. ವಾಣಿಜ್ಯ ಇಲಾಖೆಯವರು ದಾಖಲೆಗಳನ್ನು ಕೇಳಿದ್ದಾರೆ. ಅದನ್ನು ನೀಡಿದ್ದೇನೆ. ಇದರ ಹಿಂದೆ ರಾಜಕೀಯ ವಿರೋಧಿಗಳ ಪಿತೂರಿಯಿದೆ ಎಂದರು. ಇದನ್ನೂ ಓದಿ: ಶಾಸಕ ಅಭಯ್ ಪಾಟೀಲ್‍ರಿಂದ ಶಾಲಾ ಮಕ್ಕಳಿಗೆ ಐಸ್‍ಕ್ರೀಂ ವಿತರಣೆ  

    ನಾನು ನನ್ನ ಹಣದಲ್ಲಿ ದಾನ ಮಾಡುತ್ತಿದ್ದೇನೆ. ಈ ಕುರಿತು ಯಾವ ದೇವರ ಮೇಲಾದರೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಕೆಲವರಿಗೆ ರಾಜಕೀಯವೆಂದರೆ ಮೃಷ್ಠಾನ್ನವಾಗಿದೆ. ಆದರೆ ನನಗೆ ರಾಜಕೀಯ ಎಂಬುದು ಸೇವೆ. ಬಿಜೆಪಿ (BJP) ಪಕ್ಷಕ್ಕೆ ಬಂದವರಿಗೆ ಅತಿಥಿ ಸತ್ಕಾರ ಮಾಡಿದರು. ನಮಗೆ ಉಪವಾಸ ಕೆಡವಿದರು. ಇದಕ್ಕೆ ನಾನು ಕಣ್ಣೀರು ಹಾಕಿದ್ದೇನೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಷ್ಕರಕ್ಕೂ ಮೊದಲೇ ಜಯ – KPTCL, ESCOM ನೌಕರರ ವೇತನ ಹೆಚ್ಚಳ

    ಇನ್ನೂ ಕಾಲ ಮಿಂಚಿಲ್ಲ. ನಮ್ಮನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಿ. ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪ್ರಚಾರ ಮಾಡಿದರು. ಮನುಷ್ಯನಿಗೆ ಎಷ್ಟು ಅನ್ಯಾಯ ಮಾಡುವುದು? ಹಂತ ಹಂತದಲ್ಲಿ ಚುಚ್ಚಿ ನನ್ನನ್ನು ಮಾನಸಿಕವಾಗಿ ಕೊಲೆ ಮಾಡಿದ್ದಾರೆ. ಇವರ ಜೊತೆ ಹೋಗಿದ್ದಕ್ಕೆ ಅನರ್ಹ ಎಂದು ಪಟ್ಟ ಕಟ್ಟಿದರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಆಣೆ-ಪ್ರಮಾಣದ ಪಾಲಿಟಿಕ್ಸ್ ; ಕರ್ಪೂರ ಹಚ್ಚಿ ಪ್ರಮಾಣ ಮಾಡಿದ ಮಾಗಡಿ ಶಾಸಕರ ಪತ್ನಿ  

    ನನ್ನ ತಾಲೂಕಿನ ಜನತೆ ನನ್ನ ಬಲ. ನನಗೆ ಯಾವುದೇ ವೀಕ್ನೆಸ್ ಇಲ್ಲ. ನಾನು ಬಹಳ ಮುಕ್ತತೆ ಹಾಗೂ ತಾಳ್ಮೆಯಿಂದ ಇದ್ದೇನೆ. ನಮ್ಮಿಂದ ಸರ್ಕಾರ ಬಂದಿದೆ ಎನ್ನುವ ಮಾನವೀಯತೆ ಇದ್ದರೆ ಒಂದು ತಿಂಗಳು ಕಾಯುತ್ತೇನೆ. ನಾನು ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದೇನೆ ಎಂದವರು ಬರಲಿ. ನನಗೆ ಹಣ ಕೊಟ್ಟವರೂ ಬರಲಿ. ಬಂದು ಧರ್ಮಸ್ಥಳ (Dharmasthala) ಮಂಜುನಾಥನ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: 10 ಕ್ಷೇತ್ರಗಳಿಂದ ನನಗೆ ಆಹ್ವಾನ, ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ: ಡಿ.ಕೆ.ಸುರೇಶ್

    ನನಗೆ ಯಾರು ಟಿಕೆಟ್ ಕೊಟ್ಟರೂ ಪರವಾಗಿಲ್ಲ. ಕೆಂಪೇಗೌಡರು ಕೆರೆ ಕಟ್ಟಿಸಿ ಸೊಸೆಯನ್ನು ಬಲಿ ಕೊಟ್ಟಹಾಗೆ ನನ್ನನ್ನು ಬಲಿ ಕೊಟ್ಟಿದ್ದಾರೆ. ಇದರಲ್ಲಿ ಸ್ಥಳೀಯ ಶಾಸಕರು ಸೇರಿದಂತೆ ಎಲ್ಲಾ ರಾಜಕೀಯ ವಿರೋಧಿಗಳ ಪಿತೂರಿ ಇದೆ. ಟಿಕೆಟ್ ಕೊಟ್ಟರೆ ಪಕ್ಷದಿಂದ, ಇಲ್ಲವಾದರೆ ನನ್ನ ಕ್ಷೇತ್ರದ ಜನರಂತೆ ಪಕ್ಷೇತರನಾಗಿ ಸರ್ಧೆ ಮಾಡುವುದು ಖಚಿತ ಎಂದರು. ಇದನ್ನೂ ಓದಿ: ವಕೀಲ, ಮಹಿಳೆ ಮಧ್ಯೆ ಬೀದಿ ಕಾಳಗ

  • ಕುಕ್ಕರ್ ಪಾಲಿಟಿಕ್ಸ್ – ಮತದಾರರಿಗೆ ಗಿಫ್ಟ್ ಹಂಚಿದ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್

    ಕುಕ್ಕರ್ ಪಾಲಿಟಿಕ್ಸ್ – ಮತದಾರರಿಗೆ ಗಿಫ್ಟ್ ಹಂಚಿದ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್

    ಹಾವೇರಿ: ವಿಧಾನಸಭಾ ಚುನಾವಣೆ (Karnataka Assembly Election) ಸಮೀಪಿಸುತ್ತಿದ್ದಂತೆ ಹಾವೇರಿ (Haveri) ಜಿಲ್ಲೆಯಲ್ಲಿ ಭರ್ಜರಿ ಕುಕ್ಕರ್ ಪಾಲಿಟಿಕ್ಸ್ ಜೋರಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ (R.Shankar)  ಮತದಾರರಿಗೆ ಕುಕ್ಕರ್ (Cooker) ಗಿಫ್ಟ್ (Gift) ನೀಡಿದ್ದಾರೆ.

    ಮನೆ ಮನೆಗೆ ಮೊದಲು ಆರ್.ಶಂಕರ್ ಬೆಂಬಲಿಗರು ಕೂಪನ್ ನೀಡಿದ್ದರು. ಆ ಬಳಿಕ ಕೂಪನ್ ತೋರಿಸಿದವರಿಗೆ ಕುಕ್ಕರ್ ನೀಡಲಾಗಿದೆ. ಸದಾ ನಿಮ್ಮ ಸೇವೆಗಾಗಿ ನಿಮ್ಮ ಮನೆ ಮಗ ಆರ್. ಶಂಕರ್ ಅಂತ ಕುಕ್ಕರ್ ಮೇಲೆ ಬರೆಸಲಾಗಿದೆ. ಸದ್ಯ ಬಿಜೆಪಿ ಎಂಎಲ್‍ಸಿ ಆರ್. ಶಂಕರ್ ಈ ಬಾರಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಟಿಕೆಟ್ (Ticket) ಸಿಕ್ಕರೆ ಬಿಜೆಪಿಯಿಂದ (BJP), ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ರಾಜಕೀಯ ವಿಚಾರದಲ್ಲಿ ಜಗಳ- ಮಚ್ಚಿನಿಂದ ಕೈ ಕಡಿದ ಸ್ನೇಹಿತ

    ಇತ್ತ ಆರ್. ಶಂಕರ್ ಕಾಂಗ್ರೆಸ್ ಸೇರ್ತಾರೆ ಅನ್ನೋ ಸುದ್ದಿಯೂ ಜೋರಾಗಿ ಹರಿದಾಡುತ್ತಿದೆ. ಕಳೆದ 2018ರ ವಿಧಾನ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಗೆದ್ದು, ರಾಜಕೀಯ ಮೇಲಾಟದಿಂದ 2018ರಲ್ಲಿ ಬಿ.ಎಸ್‌ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದಾಗ ಶಂಕರ್, ಯಡಿಯೂರಪ್ಪನವರಿಗೆ (B.S Yediyurappa) ಬೆಂಬಲ ನೀಡಲು ಮುಂದಾಗಿದ್ದರು. ಆದರೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಅದೇ ದಿನ ಸಂಜೆ ಕೆಪಿಸಿಸಿ ಕಚೇರಿಗೆ ಹೋಗಿ ಕಾಂಗ್ರೆಸ್ (Congress)-ಜೆಡಿಎಸ್ (JDS) ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ ಬಳಿಕ ಕಾಂಗ್ರೆಸ್ ಜೊತೆಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದ್ದರು. ಇದನ್ನೂ ಓದಿ: ಪ್ಲೀಸ್ ಮುಕ್ತಿ ಕೊಡಿಸಿ ಸರ್- ಎಮ್ಮೆಗಳ ವಿರುದ್ಧ ಅರವಿಂದ ಲಿಂಬಾವಳಿಗೆ ಟೆಕ್ಕಿಗಳಿಂದ ದೂರು!

    ಆದರೆ ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ಸಚಿವರನ್ನಾಗಿ ಮಾಡುವ ಭರವಸೆ ಬಿ.ಎಸ್ ಯಡಿಯೂರಪ್ಪ ನೀಡಿದ್ದರು. ತಮ್ಮ ರಾಜಕೀಯ ಅಸ್ಥಿರತೆಯಿಂದ ಕಂಗಾಲಾಗಿರೋ ಶಂಕರ್. ಇದೀಗ ಮತ್ತೆ ರಾಣೆಬೆನ್ನೂರು ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಖಾತೆಗಳನ್ನು ಖಾಲಿ ಉಳಿಸಿಕೊಂಡು ಕಾಲಹರಣ ಮಾಡೋ ಬದ್ಲು, ಸಚಿವ ಸ್ಥಾನ ನೀಡಿ: ಬಿಜೆಪಿ MLC

    ಖಾತೆಗಳನ್ನು ಖಾಲಿ ಉಳಿಸಿಕೊಂಡು ಕಾಲಹರಣ ಮಾಡೋ ಬದ್ಲು, ಸಚಿವ ಸ್ಥಾನ ನೀಡಿ: ಬಿಜೆಪಿ MLC

    ಹಾವೇರಿ: ಸಚಿವ ಸಂಪುಟದಲ್ಲಿ ಖಾಲಿ ಇರುವ ಖಾತೆಗಳನ್ನು ಉಳಿಸಿಕೊಂಡು ಕಾಲಹರಣ ಮಾಡುವುದರಲ್ಲಿ ಅರ್ಥವಿಲ್ಲ. ಬೇರೆಯವರಿಗೂ ಸಚಿವ ಸ್ಥಾನವನ್ನು ನೀಡಿ ಎಂದು ವಿಧಾನಪರಿಷತ್ ಸದಸ್ಯ(MLC) ಆರ್.ಶಂಕರ್(R Shankar) ತಿಳಿಸಿದರು.

    ಹಾವೇರಿ(Haveri) ಜಿಲ್ಲೆ ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ಇನ್ನೂ ಐದಾರು ಖಾತೆಗಳು ಖಾಲಿ ಇವೆ. ಖಾತೆಗಳನ್ನು ಖಾಲಿ ಉಳಿಸಿಕೊಂಡು ಕಾಲಹರಣ ಮಾಡುವುದರಲ್ಲಿ ಅರ್ಥವಿಲ್ಲ. ಎಲ್ಲರಿಗೂ ಜನಸೇವೆ ಮಾಡಬೇಕು ಎನ್ನುವ ಅಭಿಲಾಷೆ ಇರುತ್ತದೆ. ನಾನು ಪಕ್ಷೇತರನಾಗಿ ಗೆದ್ದಿದ್ದೆ. ನನ್ನ ಕ್ಷೇತ್ರವನ್ನು ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಹೇಳಿದ್ದೆ. ನಾನು ಶಾಸಕನಾಗಿ ಕೆಲವೇ ದಿನಗಳು ಇದ್ದಿದ್ದು. ಆದರೆ ಅನೇಕ ಕಾಮಗಾರಿಗಳಿಂದ ರಸ್ತೆಗಳು, ಕೆರೆ ಅಭಿವೃದ್ಧಿ ಆಗಿದೆ ಎಂದರು.

    bjP

    ನಾನೇನು ಹಣಕ್ಕಾಗಿ ಹೋದವನಲ್ಲ. ಕೆಲವೇ ತಿಂಗಳು ಮಂತ್ರಿ ಆಗುವ ಅವಕಾಶ ಸಿಕ್ಕಿತ್ತು. ಜನಕ್ಕಾಗಿ, ಕಾರ್ಯಕರ್ತರಿಗಾಗಿ ನಾನು ರಾಜಕಾರಣ ಮಾಡಬೇಕಿದೆ. ನಮ್ಮ ಕಾರ್ಯಕರ್ತರಿಗೆ ಒಂದೇ ಒಂದು ಹುದ್ದೆ ಸಿಗಲಿಲ್ಲ. ಸರ್ಕಾರದ ಮೇಲೆ ನನಗೆ ವಿಶ್ವಾಸವಿದೆ. ಆದಷ್ಟು ಬೇಗ ಸೂಕ್ತ ಸ್ಥಾನಮಾನ ಸಿಗುತ್ತದೆ. ಎಲ್ಲರೂ ಮಂತ್ರಿ ಆಗಲು ಹೋಗಿದ್ದರು. ನಾನು ಮಂತ್ರಿ ಇದ್ದಿದ್ದು ಬಿಟ್ಟು ಹೋಗಿದ್ದೆ. ಆದಷ್ಟು ಬೇಗ ಸೂಕ್ತ ಸ್ಥಾನಮಾನ ಸಿಗುತ್ತದೆ. ನನಗೆ ಪಕ್ಷದ ಮೇಲೆ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಮ್ಸ್ ಸರಣಿ ಸಾವು ಪ್ರಕರಣ – ಸತ್ತವರು ನಾಲ್ವರಲ್ಲ, ಇಬ್ಬರು ಮಾತ್ರ: ಸುಧಾಕರ್

    ಈಗ ಟಿಕೆಟ್ ಬಗ್ಗೆ ಮಾತನಾಡುವುದಿಲ್ಲ. ಯಾರು ತ್ಯಾಗ ಮಾಡಿದ್ದಾರೆ, ಏನು ಎಲ್ಲವನ್ನೂ ನೋಡಿ ಹೈಕಮಾಂಡ್‍ನವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈಗ ಟಿಕೆಟ್ ವಿಚಾರ ಬೇಡ. ಮುಂದೆ ಏನಾಗಬೇಕು ನೋಡಿ ಪಕ್ಷದವರು ನಿಲುವು ತೆಗೆದುಕೊಳ್ಳುತ್ತಾರೆ. ನನ್ನ ಮೇಲೆ ಜನರ ವಿಶ್ವಾಸವಿತ್ತು, ನನಗೂ ಜನರ ಮೇಲೆ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ಭಾರತದ ವೀಸಾ ನಿಯಮ ಉಲ್ಲಂಘನೆ – 17 ಬಾಂಗ್ಲಾ ಪ್ರಜೆಗಳು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ನಮ್ಮ ತ್ಯಾಗಕ್ಕೆ ಬೆಲೆ ಸಿಗಲಿದೆ, ನಾನು ಕ್ಯಾಬಿನೆಟ್ ಸೇರಲಿದ್ದೇನೆ: ಆರ್.ಶಂಕರ್

    ನಮ್ಮ ತ್ಯಾಗಕ್ಕೆ ಬೆಲೆ ಸಿಗಲಿದೆ, ನಾನು ಕ್ಯಾಬಿನೆಟ್ ಸೇರಲಿದ್ದೇನೆ: ಆರ್.ಶಂಕರ್

    ನವದೆಹಲಿ: ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆಗೆ ನನಗೂ ನೂರಕ್ಕೆ ನೂರು ಅವಕಾಶ ಸಿಗುವ ನಂಬಿಕೆ ಇದೆ. ನಮ್ಮ ತ್ಯಾಗಕ್ಕೆ ನ್ಯಾಯ, ಬೆಲೆ ಸಿಗಲಿದೆ ಎಂದು ಮಾಜಿ ಸಚಿವ, ಪರಿಷತ್ ಸದಸ್ಯ ಆರ್.ಶಂಕರ್ ಹೇಳಿದರು.

    ನವದೆಹಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ನಂಬಿಕೆ ಮೇಲೆ ನಾವು ಬಿಜೆಪಿಗೆ ಬೆಂಬಲ ನೀಡಿದ್ದೆವು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ರೆ ಅಭಿವೃದ್ಧಿ ಹೆಚ್ಚುವ ವಿಶ್ವಾಸದಲ್ಲಿ ನಾನೂ ಸೇರಿ 17 ಮಂದಿ ಶಾಸಕರು ಬೆಂಬಲ ನೀಡಿದ್ದೆವು ಎಂದು ವಿವರಿಸಿದರು. ಇದನ್ನೂ ಓದಿ: ಗ್ಯಾರೇಜ್‌ನಲ್ಲಿ ಧಗ ಧಗ ಹೊತ್ತಿ ಉರಿದ ಬೆಂಕಿ – ಮೂರು ಲಾರಿಗಳು ಸುಟ್ಟು ಭಸ್ಮ 

    ಅನರ್ಹವಾದ ಬಳಿಕ ನನ್ನ ಪರಿಷತ್ತ್‌ಗೆ ಆಯ್ಕೆ ಮಾಡಿ ಕೆಲ ದಿನಗಳ ಕಾಲ ಮಾತ್ರ ಮಂತ್ರಿ ಮಾಡಲಾಗಿತ್ತು. ರಾಜೀನಾಮೆ ಪಡೆಯುವ ವೇಳೆ ಮತ್ತೆ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದರು. ಈ ಹಿನ್ನೆಲೆ ಈ ಬಾರಿ ನನಗೂ ಅವಕಾಶ ನೀಡಬೇಕಿದೆ ಎಂದು ತಿಳಿಸಿದರು.

    ನನ್ನ ಕ್ಷೇತ್ರದ ಜನರ ನಿರೀಕ್ಷೆ ಹೆಚ್ಚಿದೆ. ನಾನು ಇನ್ನು ಹೆಚ್ಚಿನ ಕೆಲಸ ಮಾಡಬೇಕಿದೆ. ಈ ಬಗ್ಗೆ ನಾನು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಚರ್ಚೆ ಮಾಡಿದ್ದೇನೆ. ಹಿಂದೆ ಹೈಕಮಾಂಡ್ ನಾಯಕರು ಮತ್ತು ಸಂಘದವರ ಬಳಿಯೂ ಚರ್ಚಿಸಿದ್ದೇನೆ. ಹೀಗಾಗಿ ಈ ಬಾರಿ ನನಗೆ ಅವಕಾಶ ಸಿಗಬಹುದು ಎಂದು ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಖಾದಿ ತೊರೆದು ಕಾವಿ ತೊಡಲಿರುವ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿ

  • ಬಿಜೆಪಿಯಲ್ಲಿನ ಖಾತೆ ಹಂಚಿಕೆ ಬಿಕ್ಕಟ್ಟು ಬಹುತೇಕ ಶಮನ

    ಬಿಜೆಪಿಯಲ್ಲಿನ ಖಾತೆ ಹಂಚಿಕೆ ಬಿಕ್ಕಟ್ಟು ಬಹುತೇಕ ಶಮನ

    ಬೆಂಗಳೂರು: ಬಿಜೆಪಿಯಲ್ಲಿ ಖಾತೆ ಹಂಚಿಕೆ ಬಿಕ್ಕಟ್ಟು ಬಹುತೇಕ ಶಮನವಾದಂತೆ ಕಾಣುತ್ತಿದೆ. ವಸತಿ ಅಥವಾ ಲೋಕೋಪಯೋಗಿ ಖಾತೆಗೆ ಬೇಡಿಕೆ ಇಟ್ಟಿದ್ದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಣ್ಣಗಾದಂತೆ ಕಾಣುತ್ತಿದ್ದಾರೆ.

    ಮೊನ್ನೆಯಷ್ಟೇ ಮೂರು ಕಾದು ತೀರ್ಮಾನ ಪ್ರಕಟಿಸ್ತೀನಿ ಅಂತಾ ಗುಡುಗಿದ್ದ ಎಂಟಿಬಿ ನಾಗರಾಜ್, ಈಗ ಏನೂ ಅಸಮಾಧಾನವೇ ಇಲ್ಲ ಅನ್ನೋ ರೀತಿ ಸಣ್ಣಕೈಗಾರಿಕಾ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಖಾತೆ ಬದಲಾವಣೆ ಮಾಡದಿದ್ರೂ ಸದ್ಯಕ್ಕೆ ಸುಮ್ಮನಾಗ್ತೀನಿ. ಹೆಂಗೂ ಖಾತೆ ಇದೆ. ಪಕ್ಷದಲ್ಲಿ 2023ರವರೆಗೆ ಮುಂದುವರಿಯುತ್ತೇನೆ ಅಂತಾ ಹೇಳಿದ್ದಾರೆ.

    ಇತ್ತ ಸಿಎಂ ಭೇಟಿಯಾದ ಮೇಲ್ಮನೆ ಸದಸ್ಯ ಆರ್. ಶಂಕರ್ ಮತ್ತೆ ಖಾತೆ ಬೇಡಿಕೆ ಇಟ್ಟಿದ್ದಾರೆ. ನಾನು ಬಿಜೆಪಿ ಸೇರಿದರೂ, ಒಂದು ರೀತಿ ಪಕ್ಷೇತರನಾಗಿ ದೂರ ಉಳಿದಿದ್ದೇನೆ ಅಂತಾ ನೋವು ತೋಡಿಕೊಂಡಿದ್ದಾರೆ. ಇನ್ನೊಂದೆಡೆ ಸಾರಿಗೆ ಖಾತೆಯಿಂದ ಅಸಮಾಧಾನಗೊಂಡಿದ್ದ ಸಚಿವ ರಾಮುಲು, ಕೊಟ್ಟ ಇಲಾಖೆಯಲ್ಲೇ ಸಕ್ರಿಯನಾಗಿ ಕೆಲಸ ಮಾಡ್ತೀನಿ. ಅಸಮಾಧಾನ ಎಲ್ಲಾ ಸುಳ್ಳು ಎಂದು ತೇಪೆ ಹಚ್ಚಿದ್ದಾರೆ. ಇದನ್ನೂ ಓದಿ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್ – ಸಿಎಂ ಸಂಧಾನ ಸಭೆ ಸಕ್ಸಸ್

    ಅತ್ತ ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡು ದೆಹಲಿ ದಂಡಯಾತ್ರೆ ಕೈಗೊಂಡಿರುವ ರೇಣುಕಾಚಾರ್ಯ, ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಬಂದಿದ್ದೀನಿ.. ಬಂಡಾಯ ಏನೂ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಮಸ್ಯೆ ಶೇ.100ರಷ್ಟು ಸುಖಾಂತ್ಯವಾಗಿದೆ, ಕೆಲ ತೀರ್ಮಾನಗಳನ್ನು ಹೇಳಲು ಸಾಧ್ಯವಿಲ್ಲ: ರಾಜೂ ಗೌಡ

  • ನಾಪತ್ತೆಯಾಗಿರುವ ಉಸ್ತುವಾರಿ ಸಚಿವರನ್ನು ಹುಡುಕಿ ಕೊಡಿ ಅಂತಿದ್ದಾರೆ ಯಾದಗಿರಿ ಮಂದಿ

    ನಾಪತ್ತೆಯಾಗಿರುವ ಉಸ್ತುವಾರಿ ಸಚಿವರನ್ನು ಹುಡುಕಿ ಕೊಡಿ ಅಂತಿದ್ದಾರೆ ಯಾದಗಿರಿ ಮಂದಿ

    ಯಾದಗಿರಿ: ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡರು ಕೂಡ ಜಿಲ್ಲೆಗೆ ಇನ್ನೂ ಬಾರದ ಉಸ್ತುವಾರಿ ಸಚಿವ ಆರ್ ಶಂಕರ್ ವಿರುದ್ಧ ಜಿಲ್ಲೆಯ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಜೂನ್ 28 ರಂದು ತನ್ನ ಇಡೀ ಕುಟುಂಬದೊಂದಿಗೆ ಜಿಲ್ಲೆಯ ಶಹಪುರ ತಾಲೂಕಿನ ದೋರನಹಳ್ಳಿಯಲ್ಲಿ ರೈತ ಭೀಮರಾಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡು 15 ದಿನ ಕಳೆದರು ಜಿಲ್ಲೆಗೆ ಮಾತ್ರ ಸಚಿವ ಆರ್ ಶಂಕರ್ ಇನ್ನೂ ಬಂದಿಲ್ಲ. ಮಾನವೀಯತೆಗಾದ್ರೂ ಕನಿಷ್ಠ ಪಕ್ಷ ಒಂದು ಸಾಂತ್ವನ ಮಾತು ಸಹ ಹೇಳಿಲ್ಲ. ಇಂದು ಜಿಲ್ಲೆಯ ಜನ ಅಸಮಾಧಾನಕ್ಕೆ ಕಾರಣವಾಗಿದೆ.

    ಸಾಲಭಾದೆಯಿಂದ ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದರು. ಇತ್ತ ಪೊಲೀಸ್ ಇಲಾಖೆಯಿಂದಲೂ ತನಿಖೆಗೆ ನಿರ್ಲಕ್ಷ್ಯವಾಗುತ್ತಿದೆ. ರೈತನ ಆತ್ಮಹತ್ಯೆಗೆ ಸಾಲಗಾರರ ಬೆದರಿಕೆ ಮುಖ್ಯ ಕಾರಣವಾಗಿದ್ದರು. ಸಾಲಗಾರರ ಬಂಧನವಿರಲಿ, ವಿಚಾರಣೆ ಸಹವಾಗಿಲ್ಲ. ಪೊಲೀಸ್ ಇಲಾಖೆ ಕಾಟಾಚಾರಕ್ಕೆ ತನಿಖೆ ನಡೆಸುತ್ತಿದೆ. ಈ ಕಾರಣಗಳಿಂದ ಆಕ್ರೋಶಗೊಂಡ ಯಾದಗಿರಿ ಜನರು ಯಾದಗಿರಿ ಉಸ್ತುವಾರಿ ಸಚಿವರ ನಾಪತ್ತೆತಾಗಿದ್ದು, ಎಲ್ಲಿದ್ದಿರಿ ಯಾದಗಿರಿ ಉಸ್ತುವಾರಿ ಸಚಿವ ಆರ್ ಶಂಕರ್ ರವರೇ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಆರು ಮಂದಿ ಆತ್ಮಹತ್ಯೆ ಪ್ರಕರಣ- ಹೊಂಡಕ್ಕೆ ಹಾರಿ ಶವಗಳನ್ನು ತೆಗೆದು ಸಹಾಯ ಮಾಡಿದ ವ್ಯಕ್ತಿಗೆ ಗೌರವ

  • ದೆಹಲಿಗೆ ಯಾರೂ ಬರಬಾರದು ಅಂತ ಕಡಿವಾಣ ಹಾಕೋಕೆ ಆಗುತ್ತಾ?: ಆರ್.ಶಂಕರ್

    ದೆಹಲಿಗೆ ಯಾರೂ ಬರಬಾರದು ಅಂತ ಕಡಿವಾಣ ಹಾಕೋಕೆ ಆಗುತ್ತಾ?: ಆರ್.ಶಂಕರ್

    – ಬೆಲ್ಲದ್ ಅವರನ್ನ ಸಮರ್ಥಿಸಿಕೊಂಡ ಸಚಿವರು

    ಯಾದಗಿರಿ: ಮೂಗು ಇರುವ ತನಕ ನೆಗಡಿ ತಪ್ಪಲ್ಲ, ದೆಹಲಿಗೆ ಯಾರು ಬರಬಾರದು ಅಂತ ಕಡಿವಾಣ ಹಾಕೋಕೆ ಆಗುತ್ತಾ? ನಮ್ಮ ಪಕ್ಷದ ಕೇಂದ್ರ ಸ್ಥಾನ ದೆಹಲಿ. ಹೀಗಾಗಿ ಒಬ್ಬ ರಾಜಕಾರಣಿಯಾಗಿ ಕೇಂದ್ರ ಸ್ಥಾನಕ್ಕೆ ಹೋಗಬಾರದಾ ಎಂದು ಶಾಸಕ ಅರವಿಂದ್ ಬೆಲ್ಲದ್ ಅವರ ನಡೆಯನ್ನು ಸಚಿವ ಆರ್.ಶಂಕರ್ ಸಮರ್ಥಿಸಿಕೊಂಡಿದ್ದಾರೆ.

    ಯಾದಗಿರಿ ಸರ್ಕಿಟ್ ಹೌಸ್ ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ದೆಹಲಿಗೆ ಹೋಗವರೆಲ್ಲಾ ಮುಖ್ಯಮಂತ್ರಿ ಬದಲಾವಣೆಗೆ ಹೋಗುತ್ತಾರೆತೇ? ಒಬ್ಬ ರಾಜಕಾರಣಿ ದೆಹಲಿಗೆ ಹೋಗ ಬಂದಾಗಲೂ ಒಬ್ಬ ಮುಖ್ಯಮಂತ್ರಿ ಬದಲಾವಣೆ ಆಗಬೇಕು. ದೆಹಲಿಗೆ ಹೋಗೋದು ಅವರ ವೈಯಕ್ತಿ. ಅದಕ್ಕೆ ರೆಕ್ಕೆ-ಪುಕ್ಕ ಕಟ್ಟಬೇಕಾಗಿಲ್ಲ ಎಂದರು.

    ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ. ಮುಂದಿನ ಚುನಾವಣೆಗೂ ಸಹ ಅವರ ನಾಯಕತ್ವದಲ್ಲಿ ಹೋಗುತ್ತೇವೆ ಎಂದು ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದರು.

    ಶುಕ್ರವಾರ ತಡರಾತ್ರಿಯೇ ಶಾಸಕ ಅರವಿಂದ್ ಬೆಲ್ಲದ್ ಅವರು ರಾಷ್ಟ್ರ ರಾಜಧಾನಿಗೆ ಪಯಣ ಬೆಳೆಸಿದ್ದು, ದೆಹಲಿಯ ಖಾಸಗಿ ಹೋಟೆಲ್‍ನಲ್ಲಿ ತಂಗಿದ್ದಾರೆ. ಆದರೆ `ನಾನೇ ಸಿಎಂ’ ಎಂಬ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೇಳಿಕೆ ಬೆನ್ನಲ್ಲೇ ಬೆಲ್ಲದ್ ದೆಹಲಿಗೆ ತೆರಳಿರುವುದು ಭಾರೀ ಕುತೂಹಲ ಮೂಡಿಸಿತ್ತು. ಕಳೆದ ಮೇ 24 ರಂದು ಸಚಿವ ಸಿ.ಪಿ ಯೋಗೇಶ್ವರ್ ಜೊತೆ ಬೆಲ್ಲದ್ ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ವರಿಷ್ಠರ ಭೇಟಿ ಸಾಧ್ಯವಾಗಿರಲಿಲ್ಲ. ಈಗ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ಬೆನ್ನಲ್ಲೇ ದೆಹಲಿಗೆ ಬೆಲ್ಲದ್ ದೌಡಾಯಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ನಾಯಕತ್ವ ಬದಲಾವಣೆ ವಿಚಾರ ಕೋವಿಡ್ ಗಿಂತಲೂ ಅಪಾಯಕಾರಿ: ಮುರುಘಾ ರಾಜೇಂದ್ರಸ್ವಾಮೀಜಿ

    ಅರವಿಂದ್ ಬೆಲ್ಲದ್ ಸ್ಪಷ್ಟನೆ: ನಾನು ಕುಟುಂಬದ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿದ್ದು, ನನ್ನ ದೆಹಲಿಯ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ರಾಷ್ಟ್ರೀಯ ನಾಯಕರ ಭೇಟಿಗಾಗಲಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿಲ್ಲ. ನಾನು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರೂ ಮಾಧ್ಯಮಗಳಲ್ಲಿ ರಾಜಕೀಯ ಬೆಳವಣಿಗೆಗಳ ಚರ್ಚೆಗೆ ದೆಹಲಿಗೆ ಬಂದಿದ್ದಾರೆ ಎನ್ನುವ ರೀತಿ ಸುದ್ದಿ ಹರಡಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ನನ್ನ ದೆಹಲಿ ಭೇಟಿಯ ಕುರಿತು ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಹೀಗಾಗಿ ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಅರವಿಂದ್ ಬೆಲ್ಲದ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ದಿಢೀರ್ ಬೆಳವಣಿಗೆ – ಮತ್ತೆ ದೆಹಲಿಗೆ ತೆರಳಿದ ಶಾಸಕ ಬೆಲ್ಲದ್

  • ಎರಡ್ಮೂರು ದಿನದಲ್ಲಿ ಮಂತ್ರಿ ಆಗಬಹುದು: ಆರ್.ಶಂಕರ್

    ಎರಡ್ಮೂರು ದಿನದಲ್ಲಿ ಮಂತ್ರಿ ಆಗಬಹುದು: ಆರ್.ಶಂಕರ್

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹಲವು ದಿನಗಳಿಂದ ಕೇಳಿ ಬರುತ್ತಿದ್ದ, ಸಚಿವ ಸಂಪುಟ ವಿಸ್ತರಣೆ ಕೂಗು ಇನ್ನೂ ನಿಂತಿಲ್ಲ. ಇದೀಗ ಮಾಜಿ ಸಚಿವ ಆರ್.ಶಂಕರ್ ಇನ್ನೂ ಮೂರು ದಿನಗಳಲ್ಲಿ ನಾನೂ ಮಂತ್ರಿಯಾ ಅಗೋದಾಗಿ ಹೇಳಿ ಸಚಿವ ಸಂಪುಟದ ವಿಸ್ತರಣೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ ಬರುತ್ತಿದ್ದಂತೆ ಪಬ್ಲಿಕ್‍ಟಿವಿ ಜೊತೆ ಮಾತಾನಾಡಿದ ಆರ್ ಶಂಕರ್, ಇನ್ನೂ ಎರಡ್ಮೂರು ದಿನಗಳಲ್ಲಿ ಮಂತ್ರಿ ಸ್ಥಾನ ಕೊಡುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ. ನಾನು ಉಮೇಶ್ ಕತ್ತಿ ಮತ್ತು ಇತರ ಶಾಸಕರು ಉಪಹಾರ ಸೇವಿಸಲು ಬಂದ ಸಂದರ್ಭದಲ್ಲಿ ಉಮೇಶ್ ಕತ್ತಿಯವರು ಲಿಖಿತ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ. ಈ ಸಂದರ್ಭ ಕೆಲದಿನಗಳಲ್ಲೇ ಮಂತ್ರಿಯಾಗುವ ಸುಳಿವು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಹಿಂದೆಯೇ ಸಚಿವ ಸಂಪುಟ ವಿಸ್ತರಣೆ ಮಾಡಿ ಮಂತ್ರಿ ಪಟ್ಟ ಸಿಗಬೇಕಿತ್ತು. ಅದರೆ ಹಲವು ಕಾರಣಗಳಿಂದ ಇಷ್ಟೂ ತಡವಾಗಿದೆ. ಇದೀಗ ಪರಿಸ್ಥಿತಿ ಎಲ್ಲವೂ ತಿಳಿಯಾಗಿದೆ ಮುಖ್ಯ ಮಂತ್ರಿಗಳು ಇಂದು ಸಂಜೆಯೇ ಮಾಡಿದರು ಮಾಡಬಹುದು ಅವರಿಗೆ ಆ ಅಧಿಕಾರ ಇದೆ. ಅವರೂ ಯಾರನ್ನೆಲ್ಲ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆಂದು ಕಾದು ನೋಡಿ ಎಂದರು. ಇದೀಗ ಆರ್ ಶಂಕರ್ ಅವರ ಈ ಹೇಳಿಕೆಯಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತಷ್ಟೂ ಕುತೂಹಲ ಮನೆಮಾಡುವಂತಾಗಿದೆ.

  • ತಡರಾತ್ರಿ ಬಿಜೆಪಿ ಮೇಲ್ಮನೆ ಪಟ್ಟಿ ಪ್ರಕಟ-ಟಿಕೆಟ್ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿಗೆ ಬಿಗ್ ಶಾಕ್

    ತಡರಾತ್ರಿ ಬಿಜೆಪಿ ಮೇಲ್ಮನೆ ಪಟ್ಟಿ ಪ್ರಕಟ-ಟಿಕೆಟ್ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿಗೆ ಬಿಗ್ ಶಾಕ್

    -ಯಾರಿಗೆ ಯಾವ ಕಾರಣಕ್ಕೆ ಟಿಕೆಟ್?

    ಬೆಂಗಳೂರು: ತಡರಾತ್ರಿ ಬಿಜೆಪಿ ತನ್ನ ಮೇಲ್ಮನೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇಂದು ನಾಲ್ವರು ನಾಮಪತ್ರ ಸಲ್ಲಿಸಲಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಬಿಜೆಪಿ ಬಿಗ್ ಶಾಕ್ ನೀಡಿದೆ.

    ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ನಾಲ್ವರಿಗೆ ಟಿಕೆಟ್ ಸಿಕ್ಕಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್ ಗೆ ನೀಡಿದ ಮಾತನ್ನು ಸಿಎಂ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ವಿಫಲವಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

    ಹೊಸಕೋಟೆಯ ಉಪಚುನಾವಣೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಸ್ವಪಕ್ಷೀಯರಿಂದಲೇ ಸೋಲು ಕಾಣಬೇಕಾಯ್ತು. ಬಿಜೆಪಿಯಿಂದ ಹೊರಬಂದ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. ಹೀಗಾಗಿ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ಸಿಕ್ಕಿರುವ ಸಾಧ್ಯತೆಗಳಿವೆ. ಅದರಂತೆ ಆರ್.ಶಂಕರ್ ಉಪಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರವನ್ನು ಬಿಜೆಪಿಯ ಹೈಕಮಾಂಡ್ ಆದೇಶದಂತೆ ಅರುಣ್ ಕುಮಾರ್ ಅವರಿಗೆ ತ್ಯಾಗ ಮಾಡಿದ ಪ್ರತಿಫಲವಾಗಿ ಟಿಕೆಟ್ ಲಭ್ಯವಾಗಿದೆ.

    ಸಿಎಂ ಯಡಿಯೂರಪ್ಪ ಆಪ್ತ ಸುನಿಲ್ ವಲ್ಯಾಪುರೆ ಸಹ ಸಂಸದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಗಾಗಿ ಚಿಂಚೋಳಿ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಈ ಹಿನ್ನೆಲೆ ಟಿಕೆಟ್ ಸಿಕ್ಕಿದೆ. ಇತ್ತ ಕೊನೆಯದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಪ್ತ, ದಕ್ಷಿಣ ಕನ್ನಡದ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಅವರಿಗೆ ಟಿಕೆಟ್ ಲಭ್ಯವಾಗಿದೆ. ಪ್ರತಾಪ್ ಸಿಂಹ ನಾಯಕ್ ಆರ್‍ಎಸ್‍ಎಸ್ ಹಿನ್ನೆಲೆ ಹೊಂದಿರುವ ಮುಖಂಡರಾಗಿದ್ದಾರೆ.