Tag: R.R.R. Rajamouli

  • ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ : ನಾಲ್ಕು ಪ್ರಶಸ್ತಿ ಬಾಚಿಕೊಂಡ ಆರ್.ಆರ್.ಆರ್

    ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ : ನಾಲ್ಕು ಪ್ರಶಸ್ತಿ ಬಾಚಿಕೊಂಡ ಆರ್.ಆರ್.ಆರ್

    ರಾಜಮೌಳಿ (Rajamouli) ನಿರ್ದೇಶನದ ಆರ್.ಆರ್.ಆರ್ (R.R.R) ಸಿನಿಮಾ ಅಂತಾರಾಷ್ಟ್ರೀಯ ಮಟ್ಟದ ಮತ್ತೊಂದು ಪ್ರಶಸ್ತಿಯನ್ನು ಬಾಚಿಕೊಂಡಿದೆ. ನಾಲ್ಕು ವಿಭಾಗದಲ್ಲಿ ಈ ಸಿನಿಮಾ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ (Hollywood Critics Award) ಪಡೆದುಕೊಂಡಿದೆ. ಈ ಮೂಲಕ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿರುವ ಚಿತ್ರವು ಆಸ್ಕರ್ ಗಾಗಿ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.

    ಹಾಲಿವುಡ್ ವಿಮರ್ಶಕರು ನೀಡುವ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ ‘ಆರ್.ಆರ್.ಆರ್’ ಸಿನಿಮಾಗೆ ನಾಲ್ಕು ವಿಭಾಗದಲ್ಲಿ ಪ್ರಶಸ್ತಿ ಬಂದಿದ್ದು, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಒರಿಜಿನಲ್ ಸಾಂಗ್, ಅತ್ಯುತ್ತಮ ವಿದೇಶಿ ಸಿನಿಮಾ ಹಾಗೂ ಅತ್ಯುತ್ತಮ ಸ್ಟಂಟ್ಸ್ ವಿಭಾಗದಲ್ಲಿ ಪ್ರಶಸ್ತಿಗಳನ್ನು ಅದು ಬಾಚಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ರಾಜಮೌಳಿ, ನಟ ರಾಮ್ ಚರಣ್ ತೇಜ ಭಾಗಿಯಾಗಿದ್ದರು. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ

    ಬಾಕ್ಸ್ ಆಫೀಸಿನಲ್ಲಿ ಸಾವಿರಾರು ಕೋಟಿ ಗಳಿಕೆ ಮಾಡಿರುವ ಈ ಸಿನಿಮಾ, ಪ್ರಶಸ್ತಿಯಲ್ಲೂ ಹಿಂದೆ ಬೀಳುತ್ತಿಲ್ಲ. ಗೋಲ್ಡನ್ ಗ್ಲೋಬ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಅದು ತನ್ನದಾಗಿಸಿಕೊಂಡಿದೆ. ಆಸ್ಕರ್ ಪ್ರಶಸ್ತಿಗಾಗಿ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ. ಈ ನಡುವೆ ನಾಲ್ಕು ಪ್ರಶಸ್ತಿಗಳನ್ನು ಪಡೆಯುವ ಮೂಲಕ ಚಿತ್ರತಂಡ ಬೀಗಿದೆ. ಜೊತೆಗೆ ಮಾರ್ಚ್ 12 ರಂದು ನಡೆಯುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಲಿ ಎಂದು ಪ್ರಾರ್ಥಿಸುತ್ತಿದೆ.

    ಸ್ವಾತಂತ್ರ್ಯ ಹೋರಾಟಗಾರರಾದ ಕೋಮುರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಬದುಕನ್ನು ಆಧಾರವಾಗಿಟ್ಟುಕೊಂಡು ತಯಾರಾದ ಕಾಲ್ಪನಿಕ ಸಿನಿಮಾವಿದು. ಈ ಸಿನಿಮಾದಲ್ಲಿ ಮೊದಲ ಬಾರಿಗೆ ರಾಮ್ ಚರಣ್ ಮತ್ತು ಜ್ಯೂ.ಎನ್.ಟಿ.ಆರ್ ಒಂದಾಗಿದ್ದರು. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸಿನಲ್ಲೂ ಸಖತ್ ಸದ್ದು ಮಾಡಿತ್ತು. ಇದೀಗ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಮತ್ತಷ್ಟು ಸದ್ದು ಮಾಡುತ್ತಿದೆ.

  • ನಾವು ಸ್ನೇಹಿತರಾದರೂ ಪ್ರಬಲ ಸ್ಪರ್ಧಿಗಳು : ನಟ ರಾಮ್ ಚರಣ್

    ನಾವು ಸ್ನೇಹಿತರಾದರೂ ಪ್ರಬಲ ಸ್ಪರ್ಧಿಗಳು : ನಟ ರಾಮ್ ಚರಣ್

    ತೆಲುಗು ಸಿನಿಮಾ ರಂಗದಲ್ಲಿ ನಟರಾದ ಜ್ಯೂನಿಯರ್ ಎನ್.ಟಿ.ಆರ್ (Jr. NTR) ಮತ್ತು ರಾಮ್ ಚರಣ್ (Ram Charan) ಪ್ರಬಲ ಸ್ಪರ್ಧಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು ಚಿತ್ರೋದ್ಯಮದಲ್ಲಿ ಸ್ಟಾರ್ ವಾರ್ ಅಂತಿದ್ದರೆ, ಅದು ಇವರಲ್ಲಿ ಮಾತ್ರವಿತ್ತು. ಈ ಇಬ್ಬರ ಅಭಿಮಾನಿಗಳು ಕೂಡ ಹಾಗೆಯೇ ಕಿತ್ತಾಡಿಕೊಂಡೆ ಬಂದಿದ್ದಾರೆ. ಆದರೆ, ಈ ಎಲ್ಲವನ್ನೂ ಆರ್.ಆರ್.ಆರ್ (R.R.R) ಸಿನಿಮಾ ಅಳಿಸಿ ಹಾಕಿತ್ತು. ಇಬ್ಬರೂ ಜನ್ಮಜನ್ಮಾಂತರದ ಬಂಧುಗಳು ಎನ್ನುವಂತೆ ಬೆರೆತರು.

    ಆರ್.ಆರ್.ಆರ್ ಸಿನಿಮಾದಲ್ಲಿ ಜ್ಯೂನಿಯರ್ ಮತ್ತು ರಾಮ್ ಚರಣ್ ಒಟ್ಟಾಗಿ ನಟಿಸಲಿದ್ದಾರೆ ಎನ್ನುವುದೇ ಬ್ರೇಕಿಂಗ್ ನ್ಯೂಸ್ ಆಗಿತ್ತು. ಇಬ್ಬರೂ ತೆರೆ ಹಂಚಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಚರ್ಚೆ ಕೂಡ ಆಗಿತ್ತು. ಆದರೆ, ರಾಜಮೌಳಿ (Rajamouli) ಎನ್ನುವ ದೊಡ್ಡ ಶಕ್ತಿ, ಇವರನ್ನು ಒಟ್ಟಾಗಿಸುವಂತೆ ಮಾಡಿತ್ತು. ಈ ಇಬ್ಬರೂ ಕಲಾವಿದರಿಗೆ ಮತ್ತು ಅವರ ಅಭಿಮಾನಿಗಳಿಗೆ ಯಾವುದೇ ನೋವಾಗಂತೆ ಕಥೆ ಬರೆದಿದ್ದರು ರಾಜಮೌಳಿ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ `ಜೋಶ್’ ನಟಿ ಪೂರ್ಣ

    ಸಿನಿಮಾ ರಿಲೀಸ್ ಆದಾಗಲೂ ಅಷ್ಟೇ.. ಇಬ್ಬರಿಗೂ ಸಮಾನ ರೀತಿಯಲ್ಲಿ ಅವಕಾಶ ನೀಡಲಾಗಿತ್ತು. ಪ್ರಚಾರದಲ್ಲೂ ಅದನ್ನು ಮುಂದುವರೆಸಿಕೊಂಡು ಹೋಗಿದ್ದರು ರಾಜಮೌಳಿ. ಇನ್ಮುಂದೆ ಜ್ಯೂನಿಯರ್ ಮತ್ತು ರಾಮ್ ಚರಣ್ ಮಧ್ಯ ಅಷ್ಟೊಂದು ಪೈಪೋಟಿ ಇರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ರಾಮ್ ಚರಣ್ ಬೇರೆಯ ರೀತಿಯಲ್ಲೇ ಉತ್ತರ ಕೊಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.

    ಜ್ಯೂನಿಯರ್ ಎನ್.ಟಿ.ಆರ್ ಮತ್ತು ನಾನು ಆಪ್ತರು, ಸ್ನೇಹಿತರು ಇರಬಹುದು. ಆದರೆ, ಸಿನಿಮಾ ವಿಷಯದಲ್ಲಿ ಜ್ಯೂನಿಯರ್ ನನ್ನ ಪ್ರಬಲ ಸ್ಪರ್ಧಿ ಎಂದು ಹೇಳಿದ್ದಾರೆ. ಈ ಸ್ಪರ್ಧೆ ಇದ್ದೇ ಇರುತ್ತದೆ. ಅದು ಯಾವತ್ತೂ ಮುಗಿಯುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ. ಸದ್ಯ ತೆಲುಗು ಚಿತ್ರೋದ್ಯಮದಲ್ಲಿ ರಾಮ್ ಚರಣ್ ಹೇಳಿದ ಮಾತು ಮಹತ್ವ ಪಡೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ತಮ್ಮ ದಾಖಲೆಗಳನ್ನು ಮುರಿದುಕೊಂಡು ನಿರಾತಂಕವಾಗಿ ಮುನ್ನುಗ್ಗುತ್ತಿದ್ದಾರೆ ರಾಜಮೌಳಿ.  ಈ ಹಿಂದಿನ ಬಾಹುಬಲಿ ಚಿತ್ರಕ್ಕಿಂತಲೂ ಈ ಬಾರಿ ಕಲೆಕ್ಷನ್ ವೇಗ ಜೋರಾಗಿದೆಯಂತೆ. ಹಾಗಾಗಿ ರಿಲೀಸ್ ಆದ ಮೂರೇ ಮೂರು ದಿನಕ್ಕೆ 500 ಕೋಟಿ ಹಣ ಹರಿದು ಬಂದಿದೆ ಎನ್ನುತ್ತಾರೆ ಸಿನಿ ಲೆಕ್ಕಚಾರ ಪಂಡಿತರು. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ, ವೀಕೆಂಡ್ ನಲ್ಲಿ ವಿದೇಶದಲ್ಲೂ ಸಖತ್ ಕಮಾಯಿ ಮಾಡಿದೆಯಂತೆ. ಇದೇ ವೇಗದಲ್ಲೇ ಒಂದು ವಾರ ಪ್ರದರ್ಶನ ಕಂಡರೆ, ಒಂದು ವಾರದಲ್ಲಿ ಸಾವಿರ ಕೋಟಿ ಹಣ ಗಳಿಸಿದ ಮೊದಲ ಚಿತ್ರ ಇದಾಗಲಿದೆ. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಈ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 14.5 ಕೋಟಿ ಗಳಿಕೆ ಮಾಡಿದ್ದರೆ, ಆಂಧ್ರ ಪ್ರದೇಶದಲ್ಲಿ 75 ಕೋಟಿ ಗಳಿಸಿತ್ತು. ತಮಿಳು ನಾಡಿನಲ್ಲಿ 10 ಕೋಟಿ, ಕೇರಳದಲ್ಲಿ 4 ಕೋಟಿ, ಹಿಂದಿಯಲ್ಲಿ 14 ಕೋಟಿ, ಉತ್ತರ ಭಾರತದಲ್ಲಿ 25 ಕೋಟಿ, ಹೀಗೆ ಭಾರತದಲ್ಲೇ ಮೊದಲ ದಿನ ಆರ್.ಆರ್.ಆರ್ ಗಳಿಸಿದ ಒಟ್ಟು ಮೊತ್ತ 156 ಕೋಟಿ ಆಗಿತ್ತು. ವಿದೇಶದಲ್ಲೂ ಕೂಡ ಹಿಂದೆ ಬಿದ್ದಿರಲಿಲ್ಲ. ಯುಎಸ್ ನಲ್ಲೇ 42 ಕೋಟಿ ಕಲೆಕ್ಷನ್ ಮಾಡಿತ್ತು. ಬೇರೆ ಬೇರೆ ದೇಶಗಳಿಂದ 25 ಕೋಟಿ ಬಂದಿತ್ತು. ವಿಶ್ವದಾದ್ಯಂತ ಮೊದಲ ದಿನದ ಒಟ್ಟು ಕಲೆಕ್ಷನ್ 223 ಕೋಟಿ ಆಗಿತ್ತು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಹಿಂದಿ ವರ್ಷನ್ ಒಂದರಲ್ಲೇ ಶುಕ್ರವಾರ 19 ಕೋಟಿ, ಶನಿವಾರ 24 ಕೋಟಿ ಹಾಗೂ ಭಾನುವಾರ 31.50 ಕೋಟಿ ಏರಿಕೆ ಕಂಡಿದೆ. ಹೀಗಾಗಿ ಶನಿವಾರ ಮತ್ತು ಭಾನುವಾರ ಎರಡನೇ ದಿನದ ಗಳಿಕೆ ವೀಕೆಂಡ್ ಕಾರಣಕ್ಕಾಗಿ ಮತ್ತಷ್ಟು ಏರಿಕೆ ಕಂಡು ಮೂರೇ ದಿನದಲ್ಲಿ 500 ಕೋಟಿ ರೂಪಾಯಿಗಳನ್ನು ಈ ಸಿನಿಮಾ ಬಾಚಿದೆ.

  • ಆರ್.ಆರ್.ಆರ್. ಬೆಂಗಳೂರು ಒಂದರಲ್ಲೇ 700ಕ್ಕೂ ಅಧಿಕ ಶೋಗಳು : ಬಾಕ್ಸ್ ಆಫೀಸೂ ಉಡಿಸ್

    ಆರ್.ಆರ್.ಆರ್. ಬೆಂಗಳೂರು ಒಂದರಲ್ಲೇ 700ಕ್ಕೂ ಅಧಿಕ ಶೋಗಳು : ಬಾಕ್ಸ್ ಆಫೀಸೂ ಉಡಿಸ್

    ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ದಾಖಲೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಕೇವಲ ಬೆಂಗಳೂರು ಒಂದರಲ್ಲೇ ಇಂದು 700ಕ್ಕೂ ಅಧಿಕ ಶೋಗಳು ನಡೆದಿವೆ. ಹಾಗಾಗಿ ಇಂದು ಗಾಂಧಿನಗರದಲ್ಲಿ ಬರೀ ಆರ್.ಆರ್.ಆರ್ ಸಿನಿಮಾದ್ದೇ ಮಾತು ಕೇಳಿ ಬರುತ್ತಿದೆ.

    ಮಧ್ಯರಾತ್ರಿ 12.45 ರಿಂದ ಶುರುವಾದ ಶೋಗಳು ನಿರಂತರವಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಬಾಕ್ಸ್ ಆಫೀಸು ತುಂಬಿ ತುಳುಕುತ್ತಿದೆ. ಟಿಕೆಟ್ ದರದಲ್ಲೂ ಭಾರೀ ಏರಿಕೆ ಕಂಡಿದ್ದರೂ, ಅಭಿಮಾನಿಗಳು ಮಾತ್ರ ತಲೆಕೆಡಿಸಿಕೊಳ್ಳದೇ ಸಿನಿಮಾ ನೋಡುತ್ತಿದ್ದಾರೆ. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್

    700 ಸ್ಕ್ರೀನ್ ಗಳಲ್ಲಿ 600ಕ್ಕೂ ಹೆಚ್ಚು ತೆಲುಗು ಆರ್.ಆರ್.ಆರ್ ಪ್ರದರ್ಶನ  ಕಾಣುತ್ತಿದ್ದರೆ, 28 ಸ್ಕ್ರೀನ್ ಗಳಲ್ಲಿ ಕನ್ನಡ ಆರ್.ಆರ್.ಆರ್ ರಿಲೀಸ್ ಆಗಿದೆ. ಉಳಿದಂತೆ ಬೆರಳೆಣಿಕೆಯಲ್ಲಿ ತಮಿಳು ಮತ್ತು ಹಿಂದಿಯಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ವಿಶ್ವದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಆರ್.ಆರ್.ಆರ್ ರಿಲೀಸ್ ಆಗಿದೆ. ಅಂದಾಜು ಒಂದೇ ದಿನಕ್ಕೆ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗಿದೆ.