Tag: R.B Timmapur

  • ತಿಮ್ಮಾಪುರ ಬೆಂಬಲಿಗನಿಂದ ಗೊಬ್ಬರದ ಅಂಗಡಿಗಾಗಿ ಹೈವೇ ಡಿವೈಡರ್‌ ತೆರವು – ಗ್ರಾಮಸ್ಥರಿಂದ ಪ್ರತಿಭಟನೆ

    ತಿಮ್ಮಾಪುರ ಬೆಂಬಲಿಗನಿಂದ ಗೊಬ್ಬರದ ಅಂಗಡಿಗಾಗಿ ಹೈವೇ ಡಿವೈಡರ್‌ ತೆರವು – ಗ್ರಾಮಸ್ಥರಿಂದ ಪ್ರತಿಭಟನೆ

    ಬಾಗಲಕೋಟೆ: ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಆರ್ ಬಿ ತಿಮ್ಮಾಪುರ (R B Timmapur) ಬೆಂಬಲಿಗನೊಬ್ಬ ಧಾರವಾಡ-ವಿಜಯಪುರ (Dharwad V ijayapura) ಹೆದ್ದಾರಿಯಲ್ಲಿ ಡಿವೈಡರ್ ಒಡೆಸಿ ದರ್ಪ ತೋರಿರುವ ಘಟನೆ ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ನಡೆದಿದೆ.

    ಕಾಂಗ್ರೆಸ್ (Congress) ಮುಖಂಡ ಕೃಷ್ಣಾ ಪರೆಡ್ಡಿ ಯಂತ್ರ ತರಿಸಿ ಮುಂದೆ ನಿಂತು ಡಿವೈಡರ್ ತೆರವುಗೊಳಿಸಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ.  ಇದನ್ನೂ ಓದಿ: ಬಿಹಾರ ಚುನಾವಣೆಗೆ ನಿತೀಶ್ ಸಜ್ಜು ಬಿಹಾರದ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ

    ಕೃಷ್ಣಾ ಪರೆಡ್ಡಿ ತನ್ನ ಗೊಬ್ಬರದ ಅಂಗಡಿಗೆ ಡಿವೈಡರ್ ತೊಂದರೆಯಾಗುತ್ತದೆಂದು ಒಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಡಿವೈಡರ್ ತೆರವು ಖಂಡಿಸಿ ದಿಢೀರ್‌ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.

    ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸಾರ್ವಜನಿಕರ ಆಸ್ತಿಯಾದ ರಸ್ತೆ ವಿಭಜಕವನ್ನು ಹೇಗೆ ಒಡೆದು ಹಾಕುತ್ತಾರೆ? ಎಲ್ಲಾ ಗೊತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ಮುದ್ದಾಪುರ ಗ್ರಾಮಸ್ಥರು ದೂರಿದರು.

  • ‘ಮಂಥ್ಲಿ ಮನಿ’ ಹೆಸರಿನಲ್ಲಿ ಮದ್ಯದಂಗಡಿಗಳಿಂದ ತಿಂಗಳಿಗೆ 15 ಕೋಟಿ ಲಂಚ – ಅಬಕಾರಿ ಇಲಾಖೆ ವಿರುದ್ಧ ಗಂಭೀರ ಆರೋಪ

    ‘ಮಂಥ್ಲಿ ಮನಿ’ ಹೆಸರಿನಲ್ಲಿ ಮದ್ಯದಂಗಡಿಗಳಿಂದ ತಿಂಗಳಿಗೆ 15 ಕೋಟಿ ಲಂಚ – ಅಬಕಾರಿ ಇಲಾಖೆ ವಿರುದ್ಧ ಗಂಭೀರ ಆರೋಪ

    – ರಾಜ್ಯಪಾಲರಿಗೆ ರಾಜ್ಯ ಮದ್ಯ ಮಾರಾಟಗಾರರ ಸಂಘದಿಂದ ಪತ್ರ
    -ಅಬಕಾರಿ ಸಚಿವ ರಾಜೀನಾಮೆಗೆ ಆರ್‌.ಅಶೋಕ್‌ ಒತ್ತಾಯ

    ಬೆಂಗಳೂರು: ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ವಿಪಕ್ಷ ನಾಯಕ ಆರ್‌.ಅಶೋಕ್‌, ಅಬಕಾರಿ ಇಲಾಖೆ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

    ಕಾಂಗ್ರೆಸ್ ಸರ್ಕಾರದ ಲಂಚಾವತಾರದ ಮತ್ತೂಂದು ಕರಾಳ ಅಧ್ಯಾಯ ಬಹಿರಂಗಗೊಂಡಿದ್ದು, ರಾಜ್ಯ ಮದ್ಯ ಮಾರಾಟಗಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಅಬಕಾರಿ ಸಚಿವರು ‘ಮಂಥ್ಲಿ ಮನಿ’ ಹೆಸರಿನಲ್ಲಿ ಮದ್ಯದ ಅಂಗಡಿಗಳಿಂದ ಪ್ರತಿ ತಿಂಗಳಿಗೆ 15 ಕೋಟಿ ರೂಪಾಯಿಯಂತೆ ವರ್ಷಕ್ಕೆ 180 ಕೋಟಿ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಅಬಕಾರಿ ಸಚಿವರನ್ನು ಬದಲಾಯಿಸಲು ಕೋರಿದ್ದಾರೆ.

    ವರ್ಗಾವಣೆ ದಂಧೆ, ಲೈಸೆನ್ಸ್ ಮಂಜೂರಾತಿ, ಮದ್ಯದ ಅಂಗಡಿಗಳಿಂದ ‘ಮಂಥ್ಲಿ ಮನಿ’ ಸೇರಿದಂತೆ ಅಬಕಾರಿ ಸಚಿವರು ವರ್ಷಕ್ಕೆ ಸುಮಾರು 500 ಕೋಟಿ ರೂಪಾಯಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಿ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಅಗ್ರಹಿಸುತ್ತೇನೆ ಎಂದು ಆರ್‌.ಅಶೋಕ್‌ ಪೋಸ್ಟ್‌ ಹಾಕಿದ್ದಾರೆ.

  • ಹಾಸನಾಂಬೆ ದರ್ಶನಕ್ಕೆ ಮುಂದಾದ ಸಚಿವರನ್ನು ಗರ್ಭಗುಡಿ ಬಾಗಿಲಲ್ಲೇ ತಡೆದ ಮಹಿಳಾ ಕಾನ್ಸ್‌ಟೇಬಲ್

    ಹಾಸನಾಂಬೆ ದರ್ಶನಕ್ಕೆ ಮುಂದಾದ ಸಚಿವರನ್ನು ಗರ್ಭಗುಡಿ ಬಾಗಿಲಲ್ಲೇ ತಡೆದ ಮಹಿಳಾ ಕಾನ್ಸ್‌ಟೇಬಲ್

    ಹಾಸನ: ಹಾಸನಾಂಬೆ (Hasanamba) ದೇವಿ ದರ್ಶನಕ್ಕೆ ಆಗಮಿಸಿದ್ದ ಅಬಕಾರಿ ಸಚಿವ ಆರ್.ಬಿ.ತಿಮ್ಲಾಪೂರ (R.B Timmapur) ಅವರಿಗೆ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್‌ಟೇಬಲ್ ಒಬ್ಬರು ತಡೆಯೊಡಿದ್ದ ಪ್ರಸಂಗ ದೇಗುಲದಲ್ಲಿ ನಡೆದಿದೆ.

    ದೇವಾಲಯದ ಮುಂಭಾಗ ವಿವಿಐಪಿ ಪಾಸ್ ಹಿಡಿದು ಸಾವಿರಾರು ಭಕ್ತರು ನಿಂತಿದ್ದು, ಜನ ಹೆಚ್ಚಾಗುತ್ತಿದ್ದಂತೆ ಭಕ್ತರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಸಚಿವರು ದೇವಾಲಯದ ಬಳಿ ಬರಲಾಗದೆ ಅರ್ಧಗಂಟೆ ಕಾರಿನಲ್ಲೇ ಕುಳಿತಿದ್ದಾರೆ. ಬಳಿಕ ಸಚಿವರು ದೇವಾಲಯದ ಗರ್ಭಗುಡಿ ಬಳಿ ತಲುಪಿದ್ದು ಈ ವೇಳೆ ಮಹಿಳಾ ಪೊಲೀಸ್ (Police) ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಆಯ್ಕೆಯಿಂದ ಆಕಾಂಕ್ಷಿಗಳಿಗೆ ನಿರಾಸೆ ಸಹಜ: ಶ್ರೀರಾಮುಲು

    ಳಿಕ ದೇವಾಲಯದ ಹೊರ ಭಾಗದಲ್ಲೇ ಕೈಮುಗಿದು ನಿಂತಿದ್ದ ಸಚಿವರನ್ನು ಕಂದಾಯ ಇಲಾಖೆಯ ನೌಕರರು, ಇವರು ಸಚಿವರು ಎಂದು ಮಹಿಳಾ ಪೊಲೀಸ್ ಸಿಬ್ಬಂದಿಗೆ ಮನವರಿಕೆ ಮಾಡಿದ್ದಾರೆ. ಆಗ ಗರ್ಭಗುಡಿ ಒಳಗೆ ಪ್ರವೇಶಿಸಲು ಅವಕಾಶ ನೀಡಿದ್ದಾರೆ.

    ದೇವಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಜನ ಹರಿದು ಬರುತ್ತಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಅವೆರಡು ಪಕ್ಷಗಳು ಖಾಲಿಯಾಗುತ್ತವೆ. ಚುನಾವಣೆ ವೇಳೆ ಎಲ್ಲಾ ತಿಳಿಯಲಿದೆ ಎಂದಿದ್ದಾರೆ.

    ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ (B.Y Vijayendra) ಆಯ್ಕೆ ಮಾಡಿದ್ದಾರೆ. ಪಾಪ ಯಡಿಯೂರಪ್ಪ ಅವರನ್ನು ಎರಡು ಸಲ ಮುಖ್ಯಮಂತಿ ಸ್ಥಾನದಿಂದ ತೆಗೆದಿದ್ದಾರೆ. ಅವರನ್ನು ಜೈಲಿಗೆ ಹಾಕಿದ್ದರು. ಈಗ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರಿಗೂ ಯಾವಾಗ ಈ ರೀತಿ ಮಾಡುತ್ತಾರೋ ಗೊತ್ತಿಲ್ಲ. ಸುಮ್ಮನೆ ಲಿಂಗಾಯಿತರ ವೋಟಿಗಾಗಿ ಹೀಗೆ ಮಾಡಿದ್ದಾರೆ. ನಂತರ ಅವರನ್ನು ಹತ್ತಿಕ್ಕುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್ ಶಾರಿಂದ ಸೂಕ್ತ ಸಮಯಕ್ಕೆ ಉತ್ತಮ ನಿರ್ಧಾರ: ಯಡಿಯೂರಪ್ಪ

  • ಅಲ್ಲಿನೂ ಆಗೋದಿಲ್ಲ, ಇಲ್ಲಿನೂ ಆಗೋದಿಲ್ಲ, ಬಂದು ಏನ್ಮಾಡ್ತಾರೆ: ಬಿಎಸ್‍ವೈಗೆ ತಿಮ್ಮಾಪುರ ಟಾಂಗ್

    ಅಲ್ಲಿನೂ ಆಗೋದಿಲ್ಲ, ಇಲ್ಲಿನೂ ಆಗೋದಿಲ್ಲ, ಬಂದು ಏನ್ಮಾಡ್ತಾರೆ: ಬಿಎಸ್‍ವೈಗೆ ತಿಮ್ಮಾಪುರ ಟಾಂಗ್

    ಬಾಗಲಕೋಟೆ: ಶಿವಮೊಗ್ಗದಲ್ಲಿ ಆಗಲಾರದ್ದಕ್ಕೆ ಇಲ್ಲಿ ಬರ್ತಾರೆ ಅಂದ್ರೆ ಬಿಎಸ್‍ವೈ ಅವರಿಗೆ ಅಥವಾ ಕಾರ್ಯಕರ್ತರಿಗೆ ಭಯ ಆತಂಕ ಇರಬಹುದೇನೋ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಟಾಂಗ್ ನೀಡಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರಕ್ಕೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತಿಮ್ಮಾಪುರ ಅವರು, ಯಾರೊ ಒಬ್ಬರು ಬಂದು ಸ್ಪರ್ಧಿಸುತ್ತಾರೆ ಅಂದಾಕ್ಷಣ ಇಲ್ಲಿ ಬದಲಾವಣೆ ಆಗೋದಿಲ್ಲ. ಶಾ ಬಂದು ಬಿಡ್ತಾರೆ, ಶಾ ಬಂದು ಬಿಡ್ತಾರೆ ಅಂತಾರಲ್ಲ ಬಂದು ಏನ್ ಮಾಡ್ತಾರೆ ಎಂದು ಪ್ರಶ್ನಿಸಿದ್ರು.

    ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಿಂದ ಸ್ಪರ್ಧಿಸಲಿ ಎಂದು ನಾವೆಲ್ಲ ಮನವೊಲಿಸುತ್ತಿದ್ದೇವೆ. ಅವರು ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರನ್ನು ಗೆಲ್ಲಿಸುತ್ತೇವೆ. ಗೆದ್ದೆ ಗೆಲ್ತಾರೆ ಎಂದು ತಿಳಿಸಿದರು.

    ಅಬಕಾರಿ ಇಲಾಖೆಯ ಬಗ್ಗೆ ಮಾತನಾಡಿ ಅವರು, ಕಳ್ಳಬಟ್ಟಿ ಸರಾಯಿಯನ್ನು ಬಂದ್ ಮಾಡಬೆಕಾಗುತ್ತದೆ. ಅದರ ಜೊತೆಗೆ ನಕಲಿ ಮದ್ಯ ಹಾಗೂ ಅದರಲ್ಲೂ ವಿಶೇಷವಾಗಿ ಡ್ರಗ್ ಮಾಫಿಯಾದಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಆದ್ದರಿಂದ ಅದಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಈಗಾಗಲೇ ಅದನ್ನು ತಡೆಯಲು ನಾವು ಅಧಿಕಾರಿಗಳ ವಿಶೇಷ ವಿಂಗ್ ತಯಾರಿಸಿ ನಿರ್ದೇಶನ ನೀಡಿದ್ದೇವೆ. ಅವರು ಅವರ ಕೆಲಸವನ್ನು ಪ್ರಾರಂಭಿಸುತ್ತಾರೆ. ಅಷ್ಟೆ ಅಲ್ಲದೆ ಯಾವುದೇ ಹೊಸ ಬಾರ್‍ಗಳಿಗೆ, ಲೈಸೆನ್ಸ್ ನೀಡುವ ಬಗ್ಗೆ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.

    ಕೊನೆಯದಾಗಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಅವರು ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ. ರಾಜ್ಯದ ಜನತೆಯ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿಗಳಿಗೆ ನಾನು ವಿಶೇಷವಾಗಿ ಅಭಿನಂದನೆ ಹೇಳುತ್ತೇನೆ. ಅವರ ಆಶೋತ್ತರಗಳು ಈ ರಾಜ್ಯದ ಜನತೆಗೆ ಯಾವ ಭರವಸೆಯನ್ನು ನೀಡಿದ್ದಾರೆ ಯಾವ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೋ ಅದರ ಜೊತೆ ಜೊತೆಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.