Tag: r ashok

  • ಕಾಂತರಾಜುರನ್ನ ಮನೆಗೆ ಕರೆಸಿ ಸಿಎಂ ಡಿಕ್ಟೇಟ್ ಮಾಡಿ ಜಾತಿಜನಗಣತಿ ವರದಿ ಬರೆಸಿದ್ದಾರೆ – ಆರ್.ಅಶೋಕ್

    ಕಾಂತರಾಜುರನ್ನ ಮನೆಗೆ ಕರೆಸಿ ಸಿಎಂ ಡಿಕ್ಟೇಟ್ ಮಾಡಿ ಜಾತಿಜನಗಣತಿ ವರದಿ ಬರೆಸಿದ್ದಾರೆ – ಆರ್.ಅಶೋಕ್

    -ಜಾತಿಗಣತಿ ವರದಿಗೆ ಸಿದ್ದರಾಮಯ್ಯನವರೇ ಡೈರೆಕ್ಟರ್, ಸ್ಕ್ರೀನ್‌ಪ್ಲೇಯರ್, ಪ್ರೊಡ್ಯೂಸರ್ ಎಂದ ವಿಪಕ್ಷ ನಾಯಕ

    ಬೆಂಗಳೂರು: ಕಾಂತರಾಜು ಅವರನ್ನು ಮನೆಗೆ ಕರೆಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಡಿಕ್ಟೇಟ್ ಮಾಡಿ ಜಾತಿಜನಗಣತಿ ವರದಿ (Caste Census) ಬರೆಸಿದ್ದಾರೆ. ಈ ವರದಿಯಲ್ಲಿ ರಹಸ್ಯ ಏನೂ ಇಲ್ಲ, ಎಲ್ಲ ಜಗಜ್ಜಾಹೀರು ಆಗಿದೆ ಎಂದು ವಿಪಕ್ಷ ನಾಯಕ ಆರ್.ಆಶೋಕ್ (R Ashok) ಕಿಡಿಕಾರಿದ್ದಾರೆ.

    ನಗರದಲ್ಲಿ ಜಾತಿಜನಗಣತಿ ವರದಿ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂತರಾಜು ಅವರನ್ನು ಮನೆಗೆ ಕರೆಸಿಕೊಂಡು ಸಿದ್ದರಾಮಯ್ಯ ಡಿಕ್ಟೇಟ್ ಮಾಡಿ ವರದಿ ಬರೆಸಿದ್ದಾರೆ. ಈ ವರದಿಯಲ್ಲಿ ಸೀಕ್ರೆಟ್ ಏನೂ ಇಲ್ಲ, ಎಲ್ಲ ಜಗಜ್ಜಾಹೀರು ಆಗಿದೆ. ಇಲ್ಲದಿದ್ದರೆ ಮುಸ್ಲಿಮರ ಜನಸಂಖ್ಯೆ ಇಷ್ಟೊಂದು ಸಂಖ್ಯೆಯಲ್ಲಿ ಹೇಗೆ ಏರುತ್ತಿತ್ತು? ಇದು ಜಾತಿ ಜಾತಿಗಳನ್ನು, ಧರ್ಮ ಧರ್ಮಗಳನ್ನು ಒಡೆಯುವ ವರದಿ. ಜಾತಿಜನಗಣತಿ ವರದಿಯ ಮೂಲಕ ಲಿಂಗಾಯತರು, ಒಕ್ಕಲಿಗರು, ದಲಿತರಿಗೆ ಪಂಗನಾಮ ಹಾಕಿದ್ದಾರೆ. ಮುಸ್ಲಿಮರನ್ನು ಯಾಕೆ ವಿಭಜಿಸಿಲ್ಲ, ಲಿಂಗಾಯತರು, ಒಕ್ಕಲಿಗರನ್ನ ಮಾತ್ರ ವಿಭಜಿಸಿದ್ದೀರಿ. ನಿಮಗೆ ಬೇಕಿರುವ ಮುಸ್ಲಿಂ ಸಮುದಾಯವನ್ನು ವಿಭಜಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ – 9 ಜನರ ವಿರುದ್ಧ ಎಫ್‍ಐಆರ್

    ವೀರಶೈವ ಲಿಂಗಾಯತರನ್ನು ಭಾಗ ಮಾಡಿದ್ದೀರಿ, ಒಕ್ಕಲಿಗರಿಗೆ ಇರೋದು ಒಂದೇ ಮಠ, ಆದಿಚುಂಚನಗಿರಿ ಮಠ. ಮುಸ್ಲಿಮರನ್ನು ಫೋಕಸ್ ಮಾಡಲಾಗಿದೆ, ಇದರಿಂದ ಏನು ಸಂದೇಶ ಕೊಡ್ತೀರಿ? ನೆಹರೂ ಅವರೂ ಇದೇ ತಪ್ಪು ಮಾಡಿದ್ದರು. ಅಂಬೇಡ್ಕರ್ ಸ್ಪರ್ಧಿಸಿದ್ದ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಸೇರಿಸಿದರು. ಸಿದ್ದರಾಮಯ್ಯ ಮುಸ್ಲಿಂ ಧರ್ಮ ಓಲೈಕೆ ಮಾಡುತ್ತಿದ್ದಾರೆ. ಜನರನ್ನ ಕೂಡಿಸುವುದು ಕಷ್ಟ, ಆದರೆ ಒಡೆಯುವುದು ಸುಲಭ. ಸಿದ್ದರಾಮಯ್ಯ ಒಡೆಯುವುದರಲ್ಲಿ ಎಕ್ಸ್‌ಪರ್ಟ್‌. ಜಾತಿ, ಧರ್ಮಗಳ ಮಧ್ಯೆ ಒಡಕು ತರುತ್ತಿದ್ದಾರೆ. ಇದು ಸಿದ್ದರಾಮಯ್ಯ ಪ್ರಾಯೋಜಕತ್ವದ ಅವೈಜ್ಞಾನಿಕ ವರದಿ. ಲಕ್ಷಾಂತರ, ಕೋಟ್ಯಂತರ ಮನೆಗಳಿಗೆ ಭೇಟಿ ಮಾಡದೇ ವರದಿ ಕೊಟ್ಟಿದ್ದಾರೆ. ಮನೆಗಳ ಸಮೀಕ್ಷೆ ಮಾಡದೇ ಹೇಗೆ ವರದಿ ಮಾಡಿದರು ಎಂದು ಆಗ್ರಹಿಸಿದ್ದಾರೆ.

    ನಾವೇನೂ ಜಾತಿ ಜನಗಣತಿ ವಿರೋಧಿಗಳಲ್ಲ. ಆದರೆ ಯಾರನ್ನೋ ಓಲೈಕೆ ಮಾಡಲು, ವೋಟಿಗಾಗಿ ಸಿದ್ದರಾಮಯ್ಯ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಅಂದರೆ ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ಬ್ರಿಟಿಷ್ DNA ಬಂದಿದೆ ಅದಕ್ಕೆ ಒಡಕು ಮಾಡುವ ಬುದ್ಧಿ ಕಲಿತಿದ್ದಾರೆ. ಈ ಜಾತಿಗಣತಿ ಒಕ್ಕಲಿಗರು, ಲಿಂಗಾಯತರಲ್ಲಿ ಬೆಂಕಿ ಹಚ್ಚುವ ವರದಿ. ಇದು ಯಾರೂ ಒಪ್ಪುವ ವರದಿ ಅಲ್ಲ. ಈಗಲೂ ಸರ್ಕಾರಕ್ಕೆ ಬುದ್ದಿ ಏನಾದರೂ ಇದ್ದರೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. ಪ್ರತೀ ಮನೆಗೆ ಹೋಗಿ ವರದಿ ಕೊಡಲಿ ಎಂದು ಸವಾಲು ಹಾಕಿದರು.ಇದನ್ನೂ ಓದಿ: ಜಾತಿಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಆಗಲು ನಾವೇ ಕಾರಣ: ಎಂ.ಬಿ.ಪಾಟೀಲ್

    ಜಾತಿ ಜನಗಣತಿ ವರದಿಗೆ 150 ಕೋಟಿ ರೂ. ಖರ್ಚು ಮಾಡಿದೀವಿ ಅಂತಿದ್ದಾರೆ, ಇದೇ ಬೋಗಸ್. ಶಾಮನೂರು ಅವರೇ ನಮ್ಮನೆಗೆ ಬಂದು ಸಮೀಕ್ಷೆ ಮಾಡಿಲ್ಲ ಎಂದಿದ್ದಾರೆ. ಹಾಗಾದರೆ 150 ಕೋಟಿ ರೂ. ಹೊಡೆದವರು ಯಾರು? 150 ಕೋಟಿ ರೂ. ಲೂಟಿ ಆಗಿದೆ, ಇದು ಯಾರ ಜೇಬಿಗೆ ಹೋಯ್ತು? ಆ ಕಾಂತರಾಜು ಸೈನ್ ಹಾಕದೇ ತಪ್ಪಿಸಿಕೊಂಡು ಓಡಿ ಹೋಗಿದ್ದೇಕೆ? ಇದು ಗೊಂದಲದ ಗೂಡಾಗಿದೆ, ಯಾರಿಗೂ ನಂಬಿಕೆ ಇಲ್ಲ. ಮುಸ್ಲಿಮರನ್ನು ಓಲೈಕೆ ಮಾಡಲು, ಅವರನ್ನು ಶಾಶ್ವತವಾಗಿ ವೋಟ್ ಬ್ಯಾಂಕ್ ಮಾಡಿಕೊಳ್ಳುವ ವರದಿ ಇದು. ಸಿದ್ದರಾಮಯ್ಯ ಕೈಚಳಕದಿಂದ ಮಾಡಿರುವ ವರದಿ ಇದು. ಈಗಿನ ವರದಿಗೆ ಸಿದ್ದರಾಮಯ್ಯ ಅವರೇ ಎಲ್ಲ, ಸಿದ್ದರಾಮಯ್ಯ ಅವರೇ ಡೈರೆಕ್ಟರ್, ಸ್ಕ್ರೀನ್ ಪ್ಲೇಯರ್, ಪ್ರೊಡ್ಯೂಸರ್. ಮುಸ್ಲಿಮರನ್ನು ಟಾಪ್‌ನಲ್ಲಿ ಇಡಲು ಸಿದ್ದರಾಮಯ್ಯ ಹೊರಟಿದ್ದಾರೆ, ಅವರಿಗೆ ನಾಚಿಕೆ ಆಗಬೇಕು. ಇದು ಪಕ್ಕಾ ರಾಜಕೀಯದ ಸಮೀಕ್ಷೆ ಎಂದರು.

    ಕಾಂಗ್ರೆಸ್‌ನವರು (Congress) ಅವರ ಹೈಕಮಾಂಡ್ (High Command) ಮಾತು ಕೇಳುತ್ತಿದ್ದಾರೆ. ನೀವು ನಿಮ್ಮ ಹೈಕಮಾಂಡ್ ಮಾತು ಕೇಳಿದರೆ, ಜನ ನಿಮ್ಮನ್ನು ದೂರ ಇಡುತ್ತಾರೆ. ಕಾಂಗ್ರೆಸ್‌ನಲ್ಲೇ ಈ ವರದಿಯಿಂದ ದೊಡ್ಡ ದಂಗೆ ಆಗಬಹುದು. ಹನಿಟ್ರ‍್ಯಾಪ್, 500 ಕೋಟಿ ರೂ. ಕಿಕ್‌ಬ್ಯಾಕ್, ಗುತ್ತಿಗೆದಾರರ ಆರೋಪ ವಿಚಾರ ಡೈವರ್ಟ್ ಮಾಡಲು, ಅವರ ಎಲ್ಲ ಹುಳುಕು ಸೈಡ್‌ಲೈನ್ ಮಾಡುವ ಉದ್ದೇಶದಿಂದ ಈಗ ವರದಿ ಮುನ್ನೆಲೆಗೆ ತಂದಿದ್ದಾರೆ. ಸಿದ್ದರಾಮಯ್ಯ (Siddaramaiah) ಒಬ್ಬ ಕುತಂತ್ರಗಾರ, ಅವರು ತಂತ್ರಗಾರ ಅಲ್ಲ. ಕುತಂತ್ರ ಮಾಡಿಯೇ ಜೆಡಿಎಸ್ ಒಡೆದರು. ಅದಕ್ಕೆ ಅವರನ್ನು ಹೊರಗೆ ಹಾಕಿದರು. ಈಗ ಕಾಂಗ್ರೆಸ್‌ನಿಂದಲೂ ಯಾವಾಗ ಹೊರಗೆ ಹಾಕುತ್ತಾರೋ ಗೊತ್ತಿಲ್ಲ. ಈ ಸರ್ಕಾರ ಬಹಳ ದಿನ ಇರಲ್ಲ. ಸರ್ವನಾಶ ಆಗಿಹೋಗುತ್ತದೆ. ಇದು ಮುಸ್ಲಿಮರ ಓಲೈಕೆ ಮಾಡುವ ಸರ್ಕಾರ. ಈಗಾಗಲೇ ಈ ಸರ್ಕಾರಕ್ಕೆ ರಾಜ್ಯದ ಜನರ, ಬೆಂಗಳೂರು ಜನರ ಶಾಪ ತಟ್ಟಿದೆ ಎಂದು ಭವಿಷ್ಯ ನುಡಿದರು.

    ಇಡಿಯಿಂದ ನ್ಯಾಷನಲ್ ಹೆರಾಲ್ಡ್ ಆಸ್ತಿ ಮುಟ್ಟುಗೋಲು ಕ್ರಮ ಸ್ವಾಗತಾರ್ಹ. ಈ ಆಸ್ತಿ ದೇಶದ ಆಸ್ತಿಯಾಗಬೇಕು, ಇದು ದೇಶದ ಸ್ವಾತಂತ್ರ‍್ಯ ಹೋರಾಗಾರರ ಆಸ್ತಿ. ಅದನ್ನು ಯಾವುದೇ ಕಾರಣಕ್ಕೂ ಇಟಲಿ ಆಸ್ತಿ ಮಾಡಲು ಬಿಡಲ್ಲ. ಇನ್ನೂ ವರದಿಯಲ್ಲಿ ಒಕ್ಕಲಿಗರ ಮೀಸಲು ಹೆಚ್ಚಳಕ್ಕೆ ಶಿಫಾರಸು ವಿಚಾರವಾಗಿ ಮಾತನಾಡಿ, ಒಕ್ಕಲಿಗರ ಮೀಸಲು ಹೆಚ್ಚಳ ಸಾಧ್ಯವಿಲ್ಲ. ಈ ವರದಿ ಮೂಲಕ ಒಕ್ಕಲಿಗರ ಮೂಗಿಗೆ ತುಪ್ಪ ಸವರಲಾಗಿದೆ. ಈಗಾಗಲೇ 50% ಮೀಸಲಾತಿ ಮಿತಿ ಇರಬೇಕು ಅಂತ ಇದೆ. ಸರ್ಕಾರ ಸುಳ್ಳು ಹೇಳ್ತಿದೆ, ಹಾಗಾದ್ರೆ ಆದೇಶ ಹೊರಡಿಸಲಿ. ಹಾಗೆ ಸುಲಭವಾಗಿ ಮೀಸಲಾತಿ ಜಾಸ್ತಿ ಮಾಡುವ ಹಾಗಿದ್ದಿದ್ದರೆ ನಾವು ಇದ್ದಾಗಲೇ ಕೊಡುತ್ತಿರಲಿಲ್ಲವಾ? ಮೀಸಲಾತಿ ಹೆಚ್ಚಳ ರಾಜ್ಯಕ್ಕೆ ಅಧಿಕಾರ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ಜಾತಿ ಜನಗಣತಿ ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಗಬಹುದು: ವಿ. ಸೋಮಣ್ಣ

  • ಕಾಂಗ್ರೆಸ್ ಕಳ್ಳರು ದಲಿತರನ್ನು ತುಳಿದಿದ್ದಾರೆಯೇ ಹೊರತು ಉದ್ಧಾರ ಮಾಡಿಲ್ಲ: ಅಶೋಕ್

    ಕಾಂಗ್ರೆಸ್ ಕಳ್ಳರು ದಲಿತರನ್ನು ತುಳಿದಿದ್ದಾರೆಯೇ ಹೊರತು ಉದ್ಧಾರ ಮಾಡಿಲ್ಲ: ಅಶೋಕ್

    – ಜಾತಿ ಗಣತಿ ವೈಜ್ಞಾನಿಕವಾಗಿ ಆಗಿಲ್ಲ ಎಂದು ವಿಪಕ್ಷ ನಾಯಕ ಕಿಡಿ
    – ಡಿಕೆಶಿ ಸಿಎಂ ಆಗಲೂ ಕಮಿಷನ್ ಸಂಗ್ರಹಣೆ

    ಬೆಂಗಳೂರು: ಕಾಂಗ್ರೆಸ್‌ನವರು ಹಲವಾರು ವರ್ಷಗಳ ಕಾಲ ದಲಿತರನ್ನು ತುಳಿದುಕೊಂಡೇ ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok)  ವಾಗ್ದಾಳಿ ನಡೆಸಿದರು.

    ವಿಧಾನಸೌಧದ ಡಾ.ಬಿ.ಆರ್.ಅಂಬೇಡ್ಕರ್ (Dr. B R Ambedkar) ಪ್ರತಿಮೆ ಬಳಿ `ಭೀಮ ಹೆಜ್ಜೆ 100ರ ಸಂಭ್ರಮ’ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ದಲಿತರ ಬಗ್ಗೆ ಮಾತಾಡುವಾಗಲೆಲ್ಲ ಅವರು ತುಳಿತಕ್ಕೆ ಒಳಗಾದವರು ಎಂದು ಹೇಳುತ್ತೇವೆ. ಆದರೆ ಈ ರೀತಿ ತುಳಿದವರು ಯಾರು ಎಂದು ಪ್ರಶ್ನೆ ಮಾಡಿದರೆ, ಕಾಂಗ್ರೆಸ್‌ನವರೇ ಎಂಬ ಉತ್ತರ ಸಿಗುತ್ತದೆ. ಇಷ್ಟು ವರ್ಷ ಶೋಷಿತರನ್ನು ಕಾಂಗ್ರೆಸ್‌ನವರೇ ತುಳಿದಿದ್ದಾರೆ. ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್‌ನ ಕಳ್ಳರು ದಲಿತರನ್ನು ಉದ್ಧಾರ ಮಾಡಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ‘ಅಯ್ಯನ ಮನೆ’ ಕಥೆ ಹೇಳಲು ಬಂದ ‘ದಿಯಾ’ ನಟಿ- ರಮೇಶ್ ಇಂದಿರಾ ಆ್ಯಕ್ಷನ್ ಕಟ್

    ಬಾಬಾ ಸಾಹೇಬ್ ಅಂಬೇಡ್ಕರ್‌ರ ಹೆಸರನ್ನು ಕಾಂಗ್ರೆಸ್‌ನವರು (Congress) ದುರುಪಯೋಗ ಮಾಡಿಕೊಂಡರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿ ಅಂಬೇಡ್ಕರರ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥವೆಂದು ಯಾತ್ರಾ ಸ್ಥಳವಾಗಿಸಿದರು. ಕಾಂಗ್ರೆಸ್ ನಾಯಕರು ತಾವು ದಲಿತರ ಪರ ಎಂದು ಹೇಳುತ್ತಾರೆ. ಆದರೆ ದಲಿತರಿಗೆ ಮೋಸ ಮಾಡುತ್ತಾರೆ ಎಂದು ದೂರಿದರು.

    ವಕ್ಫ್ ಮಂಡಳಿ ಲಕ್ಷಾಂತರ ದಲಿತರ ಆಸ್ತಿಗಳನ್ನು ಲೂಟಿ ಮಾಡಿದೆ. ವಕ್ಫ್‌ನಿಂದಾಗಿ ಭೂ ಕಬಳಿಕೆ ಬಗ್ಗೆ ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾಗ, ದೂರು ಹೇಳಿಕೊಳ್ಳಲು ಬರುತ್ತಿದ್ದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ವಿರುದ್ಧವಾಗಿ ಕಾಂಗ್ರೆಸ್ ನಿಂತುಕೊಳ್ಳುತ್ತದೆ ಎಂಬುದರಲ್ಲೇ ಅವರಿಗೆ ದಲಿತರ ಮೇಲಿರುವ ಕಾಳಜಿ ಅರ್ಥವಾಗುತ್ತದೆ. ಸಂವಿಧಾನ ಉಳಿಯಬೇಕು. ಕಾಂಗ್ರೆಸ್‌ನ ಪೊಳ್ಳು ಭರವಸೆಗಳು ಹೋಗಬೇಕು ಎಂದರು. ಇದನ್ನೂ ಓದಿ: ಹಾಲಿನ ದರ ಹೆಚ್ಚಾದ ಬೆನ್ನಲ್ಲೇ ಹಾಲುಗಳ್ಳರ ಕಾಟ ಹೆಚ್ಚಳ

    ಜಾತಿ ಗಣತಿ ವೈಜ್ಞಾನಿಕವಲ್ಲ
    ಜಾತಿ ಗಣತಿ ವರದಿ (Caste Census Report) ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಯಲ್ಲಿ ಸಮೀಕ್ಷೆ ಮಾಡಿದ್ದವರು ಎಲ್ಲರ ಮನೆಗೆ ಹೋಗಿಲ್ಲ. ಈ ವರದಿಯು ವೈಜ್ಞಾನಿಕವಾಗಿ ಆಗಿಲ್ಲ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿ ಮಾಡಿಸಿರುವ ವರದಿ. ಇದರಲ್ಲಿ ರಾಜಕೀಯ ಇರುವುದರಿಂದ ಇದನ್ನು ಯಾರೂ ಒಪ್ಪಲ್ಲ. ನಾನು ಕೂಡ ಜಾತಿ ಗಣತಿ ಆಗಬೇಕು ಎನ್ನುತ್ತೇನೆ. ಆದರೆ ಯಾರಿಗೋ ಅನುಕೂಲ ಮಾಡಿಕೊಡಲು, ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಈ ವರದಿ ರೂಪಿಸಲಾಗಿದೆ. ಕಾಂಗ್ರೆಸ್‌ಗೆ ಇದೇ ಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಸಿನಿಮಾ ಸೋತ್ರೂ ಶ್ರೀವಲ್ಲಿಗೆ ಬೇಡಿಕೆ- ಶಾಹಿದ್ ಕಪೂರ್‌ಗೆ ರಶ್ಮಿಕಾ ಜೋಡಿ

    ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಸಭೆ ಮಾಡಿ ಚರ್ಚಿಸಲಿ. ಯಾವ ಖಾತೆಗಳಲ್ಲಿ ಎಷ್ಟು ಲೂಟಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕಮಿಷನ್ ಕೊಡುವವರಿಗೆ ಬಿಲ್ ಪಾವತಿಯಾಗುತ್ತದೆ. ಅಬಕಾರಿ ಇಲಾಖೆಯಲ್ಲಿ ಸಚಿವರ ಮಗ ಲೂಟಿ ಮಾಡುತ್ತಿದ್ದಾರೆ. ಸಚಿವರ ಮೇಲೆ ಇಷ್ಟೆಲ್ಲಾ ಆರೋಪ ಬಂದರೂ ಸಿಎಂ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

    ಭ್ರಷ್ಟಾಚಾರವೇ ನಮ್ಮ ಬಂಧು ಬಳಗ ಎಂದು ಕಾಂಗ್ರೆಸ್ ಘೋಷಣೆ ಮಾಡಿಕೊಳ್ಳಬೇಕು. ಸಿಎಂ ರಾಜೀನಾಮೆ ನೀಡದೇ ಇರಲು ಕಮಿಷನ್ ವಸೂಲಿ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ (D K Shivakumar) ಸಿಎಂ ಆಗಲು ಕಮಿಷನ್ ಸಂಗ್ರಹಿಸುತ್ತಿದ್ದಾರೆ. ಸಚಿವರು ಕೂಡ ಸಿಎಂ ಆಗಲು ಕಮಿಷನ್ ಮಾಡುತ್ತಿದ್ದಾರೆ. ವಿಧಾನಸೌಧದ ಸಚಿವರ ಕಚೇರಿಗಳು ಕಲೆಕ್ಷನ್ ಸೆಂಟರ್ ಆಗಿದೆ. ಜೊತೆಗೆ ಜನರ ಮೇಲೆ 80 ಸಾವಿರ ಕೋಟಿ ರೂ. ತೆರಿಗೆ ಹಾಕಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಶಾಸಕ ಯತ್ನಾಳ್‌ ಕೊಲೆಗೆ ಸಂಚು? – ಅನ್ಯಕೋಮಿನ ಯುವಕನ ಸ್ಫೋಟಕ ಆಡಿಯೋ ವೈರಲ್‌

    ನಮ್ಮ ಬಾಂಧವ್ಯಕ್ಕೆ ಹುಳಿ ಹಿಂಡಲು ಸಾಧ್ಯವಿಲ್ಲ
    ಜೆಡಿಎಸ್‌ನ (JDS) ಹೋರಾಟಕ್ಕೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ. ಯಾವ ಹೋರಾಟ ಒಟ್ಟಿಗೆ ಮಾಡಬೇಕು, ಪ್ರತ್ಯೇಕ ಮಾಡಬೇಕೆಂದು ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಜೊತೆ ಚರ್ಚಿಸಲಾಗುವುದು. ನಮ್ಮ ಅವರ ನಡುವಿನ ಬಾಂಧವ್ಯಕ್ಕೆ ಯಾರೂ ಹುಳಿ ಹಿಂಡಲು ಸಾಧ್ಯವೇ ಇಲ್ಲ ಎಂದರು.

  • ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಪತ್ನಿಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್

    ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಪತ್ನಿಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್

    ಮಡಿಕೇರಿ: ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತ್ನಿಗೆ ಬರೆದಿದ್ದರು ಎನ್ನಲಾದ ಪತ್ರವೊಂದು ವೈರಲ್ ಆಗಿದೆ.

    ಇದನ್ನು ವಿನಯ್ ಸೋಮಯ್ಯ, ಬಾಮೈದ ಸುಶಾಂತ್ ಎಂಬಾತನಿಗೆ ಕಳಿಸಿಕೊಟ್ಟಿದ್ರು ಎನ್ನಲಾಗಿದೆ. ಆದ್ರೆ, ಇದನ್ನು ನಾಲ್ಕು ದಿನದ ಬಳಿಕ ಏಕೆ ರಿವೀಲ್ ಮಾಡಲಾಯ್ತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

    ಮತ್ತೊಂದ್ಕಡೆ, ಕೊಡಗಿನಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಳ ಮೂಲಕ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ವಿನಯ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ವಿನಯ್‌ದು ಆತ್ಮಹತ್ಯೆ ಅಲ್ಲ.. ಕೊಲೆ ಎಂದು ಕಮಲಕಲಿಗಳು ಆಪಾದಿಸಿದ್ರು. ಸಾವಿನ ಮನೆಯಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದ್ರು. ಇದನ್ನೂ ಓದಿ: ಸಂಸದ ಸಾಗರ್ ಖಂಡ್ರೆ ಮನೆ ವಿದ್ಯುತ್ ಸಂಪರ್ಕ ಕಡಿತ – ಅಪಾರ್ಟ್‌ಮೆಂಟ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್

    ಆದ್ರೆ, ಬಿಜೆಪಿಯವರೇ ನಾಟಕ ಮಾಡ್ತಿದ್ದಾರೆ ಎಂದು ಪೊನ್ನಣ್ಣ ಪ್ರತ್ಯಾರೋಪ ಮಾಡಿದ್ರು. ಈ ಲೆಟರ್ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ರು. ಡೆತ್ ನೋಟ್ ಎಲ್ಲಿದೆ.. ಅದು ವಾಟ್ಸಪ್ ಮೆಸೇಜ್ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಕೌಂಟರ್ ಕೊಟ್ರು. ಇದನ್ನೂ ಓದಿ: ಕಾಶಿಯಲ್ಲಿ ಮುಸ್ಲಿಂ ಮಹಿಳೆಯರಿಂದ ʻಶ್ರೀರಾಮ ಆರತಿʼ – ಏಕತೆ ಸಂದೇಶ ಸಾರಿದ ರಾಮನವಮಿ ಆಚರಣೆ 

  • ಖಾಲಿ ಸೈಟಿನಲ್ಲಿ ಕಸ ಬೀಳುತ್ತೋ ಇಲ್ವೋ, ಬಿಬಿಎಂಪಿ ಸೆಸ್ ಮಾತ್ರ ಬೀಳುತ್ತೆ: ಆರ್. ಅಶೋಕ್

    ಖಾಲಿ ಸೈಟಿನಲ್ಲಿ ಕಸ ಬೀಳುತ್ತೋ ಇಲ್ವೋ, ಬಿಬಿಎಂಪಿ ಸೆಸ್ ಮಾತ್ರ ಬೀಳುತ್ತೆ: ಆರ್. ಅಶೋಕ್

    – ಹೆಚ್ಚು ಬೆಲೆ ಏರಿಕೆ ಮಾಡಿದ ಧೀಮಂತ ಸಿಎಂ ಅಂದ್ರೆ ಓನ್ಲಿ ಒನ್ ಮುಡಾ ಸಿಎಂ ಅಂತ ಲೇವಡಿ

    ಬೆಂಗಳೂರು: ಸಿಎಂ, ಡಿಸಿಎಂರಂತ ಪುಣ್ಯಾತ್ಮರು ಕಸದಿಂದ ರಸ ತೆಗೆದು ಲೂಟಿ ಮಾಡುತ್ತಿದ್ದಾರೆ. ಗಾರ್ಬೆಜ್ ಸೆಸ್(Garbage cess) ಮೂರು ಪಟ್ಟು ಮಾಡಿದ್ದಾರೆ. ಖಾಲಿ ಸೈಟಿನಲ್ಲಿ ಕಸ ಬೀಳುತ್ತೋ ಇಲ್ವೋ ಆದರೆ ಬಿಬಿಎಂಪಿ ಸೆಸ್ ಮಾತ್ರ ಬೀಳುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್(R Ashok) ಲೇವಡಿ ಮಾಡಿದರು.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ, ಬೆಲೆ ಏರಿಕೆ, ಲೂಟಿ ಮಾಡುವುದೇ ಕಾಂಗ್ರೆಸ್‌ನ(Congress) ಸ್ಟೈಲ್‌. ಇದು ಕಳೆದ 60 ವರ್ಷಗಳಿಂದ ಕಾಂಗ್ರೆಸ್‌ನ ಚಾಳಿಯಾಗಿದೆ. ಈಗಲೂ ಸರ್ಕಾರ ಅದೇ ಚಾಳಿಯನ್ನು ಮುಂದುವರೆಸಿದೆ ಕಿಡಿಕಾರಿದರು. ಇದನ್ನೂ ಓದಿ: ಮುಸ್ಲಿಂ ಕುಟುಂಬದ ಆಸ್ತಿ ವಿವಾದ – ವಿಚಾರಣೆ ವೇಳೆ ಏಕರೂಪ ನಾಗರೀಕ ಸಂಹಿತೆ ಅಗತ್ಯ ಎಂದ ಹೈಕೋರ್ಟ್

    ಸರ್ಕಾರ ಪ್ರತೀ ತಿಂಗಳು ಒಂದೊಂದು ಬೆಲೆ ಏರಿಕೆ ಮಾಡುತ್ತಿದೆ. ಪ್ರತೀ ತಿಂಗಳು ಒಂದೊಂದು ಬೆಲೆ ಏರಿಕೆ ಮಾಡುವುದು ಈ ಸರ್ಕಾರದ ಕಾಮನ್ ಅಜೆಂಡಾ ಆಗಿದೆ. ಬೆಲೆ ಏರಿಕೆ, ರೈತರಿಗೆ ಅನ್ಯಾಯ, ಮುಸ್ಲಿಂ ಓಲೈಕೆ, ಭ್ರಷ್ಟಾಚಾರ, ದಲಿತರ ಹಣ ದುರ್ಬಳಕೆ ವಿರುದ್ಧ ನಾವು ಜನಾಂದೋಲನ ಮಾಡುತ್ತಿದ್ದೇವೆ. ನಾಳೆಯಿಂದ ನಾಲ್ಕು ಹಂತಗಳಲ್ಲಿ 16 ದಿನಗಳ ಕಾಲ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.

    ಪ್ರತೀ ಜಿಲ್ಲೆಯಲ್ಲಿ 1 ಕಿಮೀ ಯಾತ್ರೆ ಇರಲಿದೆ. ನಾಳೆ ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Prahlad Joshi) ಅವರು ಹೋರಾಟಕ್ಕೆ ಚಾಲನೆ ನೀಡುತ್ತಾರೆ. ರಾಜ್ಯಾಧ್ಯಕ್ಷರು 99% ಎಲ್ಲಾ ಯಾತ್ರೆಗಳಲ್ಲೂ ಇರುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಭಗವಾಧ್ವಜದ ಮೇಲೆ ಚುನಾವಣೆ ಎದುರಿಸ್ತೇನೆ, ಮುಸ್ಲಿಂ ಮತಗಳು ಬೇಕಿಲ್ಲ: ಯತ್ನಾಳ್‌ ಲೇವಡಿ

    ಬೆಲೆ ಏರಿಕೆ ಮಾಡಿದ ಧೀಮಂತ ಸಿಎಂ
    ಬೆಲೆಯೇರಿಕೆಯಿಂದ ಜನರ ಬದುಕು ದುಸ್ತರ ಆಗಿದೆ. ರೈತರ ಹೆಸರಿನಲ್ಲಿ ಮೂರು ಸಲ ಹಾಲಿನ ದರ ಏರಿಕೆ ಮಾಡಲಾಗಿದೆ. ಮೊಸರಿನ ಬೆಲೆ, ಹಾಲಿನ ಬೆಲೆ ಯಾರಿಗೆ ಕೊಡ್ತಾರೋ, ಲೂಟಿ ಹೊಡಿತಿದ್ದಾರೆ. ಹೆಚ್ಚು ಸಲ ಬೆಲೆ ಏರಿಕೆ ಮಾಡಿದ ಧೀಮಂತ ಸಿಎಂ ಇದ್ದರೆ, ಅದು ಓನ್ಲಿ ಒನ್ ಮುಡಾ ಸಿಎಂ ಎಂದು ವ್ಯಂಗ್ಯವಾಡಿದರು.

    ಮುಸ್ಲಿಮರ(Muslims) ಓಲೈಕೆಗಾಗಿ ಮೀಸಲಾತಿ ಕೊಟ್ಟಿದ್ದಾರೆ. ಇನ್ಮೇಲೆ ಮೀಸಲಾತಿ ಅಡಿಯೂ ಟೆಂಡರ್ ತೆಗೆದುಕೊಳ್ಳುತ್ತಾರೆ. ಜನರಲ್ ಕೆಟಗರಿಯಲ್ಲೂ ಟೆಂಡರ್ ತೆಗೆದುಕೊಳ್ಳುತ್ತಾರೆ. ಮಂಗಳೂರಿನಲ್ಲಿ 50% ಗುತ್ತಿಗೆ ಮುಸ್ಲಿಮರೇ ತೆಗೆದುಕೊಳ್ಳುತ್ತಿದ್ದಾರೆ. ಧರ್ಮಧರ್ಮಗಳ ನಡುವೆ ಬೆಂಕಿ ಹಚ್ಚಲು ಮೀಸಲಾತಿ ಕೊಡಲಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದೆ ಡೀಸೆಲ್ ದರ ಏರಿಕೆ ಆದಾಗ ಯಾಕೆ ಲಾರಿ ಮಾಲೀಕರು ಮುಷ್ಕರ ಮಾಡಲಿಲ್ಲ? – ಡಿಕೆಶಿ

    ಜನಾಕ್ರೋಶ ಯಾತ್ರೆಯಲ್ಲಿ ಜೆಡಿಎಸ್(JDS) ಗೈರು ವಿಚಾರವಾಗಿ ಪ್ರತಿಕ್ರಿಯಿಸಿ, ಹೋರಾಟಗಳು ಇದುವರೆಗೂ ಏನೇನು ನಡೆದಿವೆಯೋ ಜೆಡಿಎಸ್ ಅವರದ್ದೇ ಆದ ಹೋರಾಟ ಮಾಡುತ್ತಿದ್ದಾರೆ. ನಾವು ನಮ್ಮ ಹೋರಾಟ ಮಾಡುತ್ತಿದ್ದೇವೆ. ಕೆಲವು ಹೋರಾಟ ಒಟ್ಟಿಗೇ ಮಾಡಿದ್ದೇವೆ. ಸಮನ್ವಯ ಸಮಿತಿ ರಚನೆ ಮಾಡಬೇಕು ಎಂದು ಇದೆ. ಇದರ ಬಗ್ಗೆ ಕುಮಾರಸ್ವಾಮಿ ಜೊತೆಗೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ನಾಳೆಯಿಂದ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ – ಮೈಸೂರಿನಲ್ಲಿ ಜೋಶಿ ಚಾಲನೆ; ಸರ್ಕಾರದ ವೈಫಲ್ಯ ವಿರುದ್ಧ ಕಹಳೆ

    ವಿನಯ್ ಸೋಮಯ್ಯ(Vinay Somaiah) ಆತ್ಮಹತ್ಯೆ ಕುರಿತು ಮಾತನಾಡಿದ ಅವರು, ವಿನಯ್ ಸೋಮಯ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು. ಈ ಹೋರಾಟ ಇಲ್ಲಿಗೇ ನಿಲ್ಲಿಸಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

    ಈಶ್ವರಪ್ಪ ವಿಚಾರದಲ್ಲಿ ಕಾಂಗ್ರೆಸ್‌ನವರು ಹೆಣದ ಮೇಲೆ ರಾಜಕೀಯ ಮಾಡಿರಲಿಲ್ವಾ. ಬಿಜೆಪಿ ರಾಜಕೀಯ ಮಾಡುತ್ತಿದೆ ಎನ್ನುತ್ತಾರೆ. ಈಗ ಡೆತ್‌ನೋಟ್ ಇದ್ದು ಪರಿಶೀಲನೆ ಮಾಡಬೇಕು ಎನ್ನುತ್ತಾರೆ. ನಾವು ಆ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದ ಅವರು ಬಳಿಕ ಜನಾಕ್ರೋಶ ಯಾತ್ರೆಯ ಪೋಸ್ಟರ್ ಲೋಗೋ ಬಿಡುಗಡೆ ಮಾಡಿದರು.

  • ನಾಳೆಯಿಂದ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ – ಮೈಸೂರಿನಲ್ಲಿ ಜೋಶಿ ಚಾಲನೆ; ಸರ್ಕಾರದ ವೈಫಲ್ಯ ವಿರುದ್ಧ ಕಹಳೆ

    ನಾಳೆಯಿಂದ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ – ಮೈಸೂರಿನಲ್ಲಿ ಜೋಶಿ ಚಾಲನೆ; ಸರ್ಕಾರದ ವೈಫಲ್ಯ ವಿರುದ್ಧ ಕಹಳೆ

    ಬೆಂಗಳೂರು/ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ನಾಳೆಯಿಂದ (ಏಪ್ರಿಲ್‌ 7) ಬಿಜೆಪಿ (BJP) 2ನೇ ಹಂತದ ಹೋರಾಟ ಕೈಗೆತ್ತಿಕೊಂಡಿದೆ. ಜನಾಕ್ರೋಶ ಯಾತ್ರೆ (JanaKrosha Yatra) ಹೆಸರಿನಲ್ಲಿ ಸರ್ಕಾರದ ವಿರುದ್ಧ ನಾಲ್ಕು ಹಂತಗಳಲ್ಲಿ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ.

    ಸೋಮವಾರ ಬೆಳಗ್ಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ (Mysuru Chamundehwari Temple) ವಿಶೇಷ ಪೂಜೆ ಸಲ್ಲಿಸುಕ ಮೂಲಕ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು (Pralhad Joshi) ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಸರ್ಕಾರದ ದರ ಏರಿಕೆ ನೀತಿ, ಭ್ರಷ್ಟಾಚಾರ, ಕಮೀಷನ್, ದುರಾಡಳಿತ, ಕಾನೂನು ಅವ್ಯವಸ್ಥೆ, ಮುಸ್ಲಿಂ ಓಲೈಕೆ ಖಂಡಿಸಿ ಜನಾಕ್ರೋಶ ಯಾತ್ರೆ ನಡೆಯಲಿದೆ.

    ಎಲ್ಲಿ, ಯಾವಾಗ ಜನಾಕ್ರೋಶ ಯಾತ್ರೆ?
    ಏಪ್ರಿಲ್ 7-12ರ ವರೆಗೆ ಮೊದಲ ಹಂತದ ಜನಾಕ್ರೋಶ ಯಾತ್ರೆಯು ಮೈಸೂರು/ಚಾಮರಾಜನಗರ, ಮಂಡ್ಯ,/ಹಾಸನ, ಕೊಡಗು/ಮಂಗಳೂರು, ಉಡುಪಿ/ ಚಿಕ್ಕಮಗಳೂರು, ಶಿವಮೊಗ್ಗ/ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಡೆಯಲಿದೆ.

    ಏಪ್ರಿಲ್ 15-18ರ ವರೆಗೆ ಎರಡನೇ ಹಂತದ ಜನಾಕ್ರೋಶ ಯಾತ್ರೆಯು ನಿಪ್ಪಾಣಿ/ಬೆಳಗಾವಿ/ಹುಬ್ಬಳ್ಳಿ, ಬೀದರ್/ಕಲಬುರ್ಗಿ, ವಿಜಯಪುರ/ಬಾಗಲಕೋಟೆಗಳಲ್ಲಿ ನಡೆಯಲಿದೆ.

    ಏಪ್ರಿಲ್ 21-25ರ ವರೆಗೆ ಮೂರನೇ ಹಂತದ ಯಾತ್ರೆಯು ಯಾದಗಿರಿ/ರಾಯಚೂರು, ಬಳ್ಳಾರಿ/ವಿಜಯನಗರ, ಕೊಪ್ಪಳ/ಗದಗ, ಹಾವೇರಿ/ದಾವಣಗೆರೆ, ಚಿತ್ರದುರ್ಗ/ತುಮಕೂರು ಜಿಲ್ಲೆಗಳಲ್ಲಿ ನಡೆಯಲಿದೆ

    ಏಪ್ರಿಲ್ 27- ಮೇ 03ರ ವರೆಗೆ ನಾಲ್ಕನೇ ಹಂತದ ಯಾತ್ರೆ ಚಿಕ್ಕಬಳ್ಳಾಪುರ/ಕೋಲಾರ, ಬೆಂಗಳೂರು/ಬೆಂಗಳೂರು ಗ್ರಾಮಾಂತರ/ರಾಮನಗರ ಜಿಲ್ಲೆಗಳಲ್ಲಿ ನಡೆಯಲಿದೆ.

  • ಐ ಲವ್ ಯು ನಂದಿನಿ ಅಂತಿದ್ರು, ಈಗ ಐ ಹೇಟ್ ಯು ನಂದಿನಿ ಅಂತಾ ಜಾಹೀರಾತು ಕೊಡಬೇಕು: ಅಶೋಕ್ ವಂಗ್ಯ

    ಐ ಲವ್ ಯು ನಂದಿನಿ ಅಂತಿದ್ರು, ಈಗ ಐ ಹೇಟ್ ಯು ನಂದಿನಿ ಅಂತಾ ಜಾಹೀರಾತು ಕೊಡಬೇಕು: ಅಶೋಕ್ ವಂಗ್ಯ

    – ಮೋಸ ಮಾಡುವುದರಲ್ಲಿ ಸಿದ್ದರಾಮಯ್ಯ ನಂಬರ್ 1

    ಬೆಂಗಳೂರು: ಐ ಲವ್ ಯು ನಂದಿನಿ ಅಂತಾ ಜಾಹೀರಾತು ಕೊಡ್ತಾ ಇದ್ರು. ಈಗ ಐ ಹೇಟ್ ಯು ನಂದಿನಿ ಅಂತಾ ಜಾಹೀರಾತು ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವ್ಯಂಗ್ಯವಾಡಿದರು.

    ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಾಲಿನ ದರ, ವಿದ್ಯುತ್ ದರ ಏರಿಕೆ ಕುರಿತು ಮಾತನಾಡಿದ ಅವರು, ಕಾಕಾಪಾಟೀಲ್‌ಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ನಿನ್ ಹೆಂಡ್ತಿಗೂ ಫ್ರೀ ನನ್ ಹೆಂಡ್ತಿಗೂ ಫ್ರೀ ಅಂತಾ ಸಿದ್ದರಾಮಯ್ಯ (Siddaramaiah) ಅವರು ಹೇಳುತ್ತಿದ್ದರು. ಈಗ ನಿನ್ ಹೆಂಡ್ತಿಗೂ ಟ್ಯಾಕ್ಸ್, ನನ್ ಹೆಂಡ್ತಿಗೂ ಟ್ಯಾಕ್ಸ್ ಅನ್ನಬೇಕು ಎಂದು ಟೀಕಿಸಿದರು. ಇದನ್ನೂ ಓದಿ: ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ: ಹೆಚ್‌ಡಿಕೆ

    ಸಿದ್ದರಾಮಯ್ಯ ಬಜೆಟ್ ಮೋಸದ ಬಜೆಟ್, ಇದು ಸುಳ್ಳು, ಮುಂದೆ ಮಾರಿಹಬ್ಬ ಇದೆ ಎಂದು ಹೇಳಿದ್ದೆ. ತೆರಿಗೆ ಹಾಕುವಂತದ್ದೇ ಬಜೆಟ್, ಏನೇನು ತೆರಿಗೆ ಮಾಡುತ್ತೇವೆ, ಏನು ತೆರಿಗೆ ಹಾಕುತ್ತೇವೆ ಎಂದು ಹೇಳಲಿಲ್ಲ. ಮೋಸ ಮಾಡುವುದರಲ್ಲಿ ದೇಶದಲ್ಲಿ ಸಿದ್ದರಾಮಯ್ಯ ನಂಬರ್ 1. ಏನೇನು ತೆರಿಗೆ ಹಾಕುತ್ತೇವೆ ಎನ್ನುವುದನ್ನು ಬಚ್ಚಿಟ್ಟರು. ಈಗ ರಾಜ್ಯದ ಜನರಿಗೆ ಮಾರಿಹಬ್ಬ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರೈತರ ಹೆಸರಿನಲ್ಲಿ ಹಾಲಿನ ದರ ಏರಿಸಿ ಜನರಿಗೆ ಬರೆ: ಬೊಮ್ಮಾಯಿ

    ಬಜೆಟ್ ಆಗಿ 10 ದಿನನೂ ಆಗಿಲ್ಲ. ಸರ್ಕಾರದ ತಿಥಿಯೂ ಆಗಿಲ್ಲ. ಆಗಲೇ ದರ ಏರಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಬಂದ ಮೇಲೆ 9 ರೂ. ಏರಿಕೆ ಆಗಿದೆ. ಇದು ಕಾಂಗ್ರೆಸ್‌ನ ಮನೆ ಹಾಳು ಕೆಲಸ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Photo Gallary: ಮ್ಯಾನ್ಮಾರ್‌, ಥೈಲ್ಯಾಂಡ್‌ನಲ್ಲಿ ಡೆಡ್ಲಿ ಭೂಕಂಪ – ಭೀಕರ ದೃಶ್ಯಗಳನ್ನು ಫೋಟೊಗಳಲ್ಲಿ ನೋಡಿ..

    ಯುಗಾದಿ ಹಬ್ಬಕ್ಕೆ ಸರ್ಕಾರ ಶಾಕ್ ನೀಡಿದೆ. ಮತ್ತೊಂದೆಡೆ ಡಿಕೆಶಿ ನೀರಿನ ದರ ಏರಿಕೆ ಮಾಡಲು ಹೊರಟಿದ್ದಾರೆ. ನೀರಿನ ದರ ಏರಿಕೆಯ ಮತ್ತೊಂದು ದೆವ್ವ ಬಾಗಿಲಿಗೆ ಬಂದು ನಿಂತಿದೆ. ಚುನಾವಣೆಗೂ ಮುಂಚೆ ಕಾಂಗ್ರೆಸ್ (Congress) ಜನರೇ ದೇವರು ಎಂದು ಹೇಳಿದ್ದರು. ಈಗ ಎಲ್ಲರಿಗೂ ಟ್ಯಾಕ್ಸ್. ಮುಂದೆ ಗ್ರೀನ್ ಟ್ಯಾಕ್ಸ್ ಹಾಕುತ್ತಾರೆ. ಗಾಳಿ ಒಂದು ಬಿಟ್ಟು ಎಲ್ಲಾ ತೆರಿಗೆ ಹಾಕಿದ್ದಾರೆ. ಬ್ರಾಂಡ್ ಬೆಂಗಳೂರು ಹೋಗಿ ದುಬಾರಿ ಬೆಂಗಳೂರು ಬಂತು. ಮುಂದೆ ಜನರಿಗೆ ಬೆಲೆ ಏರಿಕೆಯ ಮತ್ತಷ್ಟು ತ್ರಿಬಲ್ ಧಮಾಕಾ ಆಗಲಿದೆ ಎಂದರು. ಇದನ್ನೂ ಓದಿ: ಮಂಗಳೂರು ಏರ್‌ಪೋರ್ಟ್‌ಗೆ ಹೆಚ್ಚುವರಿ ಭೂಸ್ವಾಧೀನಕ್ಕೆ ತುರ್ತು ಕ್ರಮ ಜರುಗಿಸಲು ಆಗ್ರಹ

    ರಾಜಣ್ಣ (Rajanna) ಅವರ ನೋಟಿನ ಪ್ರಿಂಟಿಂಗ್ ಮೆಷಿನ್ ಇಟ್ಟುಕೊಂಡಿಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇದೆಲ್ಲಾ ಅವರ ದುರಹಂಕಾರದ ಪರಮಾವಧಿ ಎಂದು ಆಕ್ರೋಶ ಹೊರಹಾಕಿದರು.

  • ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದ ಡಿಕೆಶಿ ರಾಜೀನಾಮೆ ನೀಡಬೇಕು: ಆರ್.ಅಶೋಕ್

    ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದ ಡಿಕೆಶಿ ರಾಜೀನಾಮೆ ನೀಡಬೇಕು: ಆರ್.ಅಶೋಕ್

    ಬೆಂಗಳೂರು: ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡಲು ಅಗತ್ಯ ಬಿದ್ದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಕಿಡಿಕಾರಿದರು. ಕೂಡಲೇ ಡಿ.ಕೆ.ಶಿವಕುಮಾರ್ (D K Shivakumar) ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿ ಈಗ ಯೂಟರ್ನ್ ಹೊಡೆದಿದ್ದಾರೆ. ಈಗಿನ ಕಾಲದಲ್ಲಿ ಯೂಟರ್ನ್, ಬ್ಯಾಕ್ ಟರ್ನ್ ಯಾವುದು ನಡೆಯುವುದಿಲ್ಲ. ಬಿಜೆಪಿ (BJP) ಅವರು ಸಂವಿಧಾನ ಬಗ್ಗೆ ಮಾತಾಡಿದರು ಎಂದು ಕಾಂಗ್ರೆಸ್ (Congress) ಅವರು ಏನೇನು ಮಾತಾಡಿದರು. ಈಗ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಇದನ್ನ ಪ್ರಸ್ತಾಪ ಮಾಡಿದ್ದಾರೆ ಎಂದರು. ಇದನ್ನೂ ಓದಿ: ನನ್ನ, ಕುಮಾರಸ್ವಾಮಿ ಫೋನ್ ಟ್ಯಾಪಿಂಗ್ ಈಗಲೂ ನಡೆಯುತ್ತಿದೆ: ಆರ್.ಅಶೋಕ್

    ಅತೀ ಹೆಚ್ಚು ಬಾರಿ ಸಂವಿಧಾನ ಬದಲಾವಣೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದು ತಪ್ಪು. ಕೂಡಲೇ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಒಳಮೀಸಲಾತಿ, ವಾರದೊಳಗೆ ನಾಗಮೋಹನ್ ದಾಸ್ ಮಧ್ಯಂತರ ವರದಿ: ಮಹದೇವಪ್ಪ

  • ನನ್ನ, ಹೆಚ್‌ಡಿಕೆ ಫೋನ್ ಟ್ಯಾಪಿಂಗ್ ಈಗಲೂ ನಡೆಯುತ್ತಿದೆ: ಅಶೋಕ್ ಬಾಂಬ್

    ನನ್ನ, ಹೆಚ್‌ಡಿಕೆ ಫೋನ್ ಟ್ಯಾಪಿಂಗ್ ಈಗಲೂ ನಡೆಯುತ್ತಿದೆ: ಅಶೋಕ್ ಬಾಂಬ್

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದಲ್ಲಿ ಆಡಳಿತ – ವಿಪಕ್ಷಗಳ ಶಾಸಕರ ಫೋನ್ ಟ್ಯಾಪ್ (Phone Tapping) ಅಗ್ತಿರೋದು 100% ಸತ್ಯ. ನನ್ನದು ಮತ್ತು ಕುಮಾರಸ್ವಾಮಿಯವರ (H.D Kumaraswamy) ಫೋನ್‌ ಈಗಲೂ ಟ್ಯಾಪ್ ಆಗ್ತಿದೆ ಎಂದು ವಿಪಕ್ಷ ನಾಯಕ ಅಶೋಕ್ (R. Ashok) ಆರೋಪಿಸಿದ್ದಾರೆ.

    ಶಾಸಕರ ಫೋನ್ ಟ್ಯಾಪ್ ಬಗ್ಗೆ ಸಚಿವ ರಾಜಣ್ಣ ಪುತ್ರ ರಾಜೇಂದ್ರರಿಂದ ಸಿಎಂಗೆ ದೂರು ನೀಡಿರೋ‌ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಕಾಂಗ್ರೆಸ್ ಸರ್ಕಾರದಲ್ಲಿ 100% ಫೋನ್ ಟ್ಯಾಪ್ ಆಗ್ತಿದೆ. ಇದಕ್ಕೆ ಒಂದು ಜಾಲವೇ ಇದೆ. ನಾನು ಮತ್ತು ಕುಮಾರಸ್ವಾಮಿ ಹಿಂದೆಯೇ ಈ ಬಗ್ಗೆ ಹೇಳಿದ್ವಿ. ಈಗ ಕಾಂಗ್ರೆಸ್ ಪಕ್ಷದ ಶಾಸಕರೇ ಇದನ್ನ ಹೇಳ್ತಿದ್ದಾರೆ. ರಾಜಕೀಯವಾಗಿ ಬಗ್ಗುಬಡಿಯಲು ಈ ಫೋನ್ ಟ್ಯಾಪ್ ಆಗ್ತಿದೆ‌ ಎಂದಿದ್ದಾರೆ. ಇದನ್ನೂ ಓದಿ: ಒಳಮೀಸಲಾತಿ, ವಾರದೊಳಗೆ ನಾಗಮೋಹನ್ ದಾಸ್ ಮಧ್ಯಂತರ ವರದಿ: ಮಹದೇವಪ್ಪ

    ನಮ್ಮಿಬ್ಬರ ಫೊನ್‌ ಮಾತ್ರ ಅಲ್ಲ, ಎಲ್ಲಾ ವಿರೋಧ ಪಕ್ಷದವರ ಫೋನ್ ಟ್ಯಾಪಿಂಗ್ ಆಗ್ತಿದೆ. ಎರಡು ವರ್ಷಗಳಿಂದ ಈ ಟ್ಯಾಪಿಂಗ್ ಅಗ್ತಿದೆ. ಅದಕ್ಕಾಗಿಯೇ ಈ ಟ್ಯಾಪಿಂಗ್ ನಡೆಯುತ್ತಿದೆ. ದೂರು ಕೊಟ್ಟರೆ ಏನು ಪ್ರಯೋಜನ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ ವಿಚಾರ ಕೇಳುತ್ತಿದ್ದಂತೆ ಕೈ ಮುಗಿದು ನನ್ನನ್ನು ಕ್ಷಮಿಸಿ ಎಂದ ಸಚಿವ ಜಾರ್ಜ್!

  • ಹನಿಟ್ರ್ಯಾಪ್‌ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದಿದ್ದು ನಿಜ – ವಿಷ ಕನ್ಯೆಯರ ರಹಸ್ಯ ಹೇಳಿದ ರಾಜಣ್ಣ

    ಹನಿಟ್ರ್ಯಾಪ್‌ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದಿದ್ದು ನಿಜ – ವಿಷ ಕನ್ಯೆಯರ ರಹಸ್ಯ ಹೇಳಿದ ರಾಜಣ್ಣ

    – ಪ್ರಜ್ವಲ್‌, ರಮೇಶ್‌ ಜಾರಕಿಹೊಳಿ ರೀತಿ ನನ್ನನ್ನ ಟಾರ್ಗೆಟ್‌ ಮಾಡಿದ್ದಾರೆ ಎಂದ ಸಚಿವ

    ತುಮಕೂರು: ಹನಿ ಟ್ರಾಪ್ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಹನಿ ಟ್ರ್ಯಾಪ್‌ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದ್ದು ನಿಜ ಅಂತ ಸಚಿವ ಕೆ.ಎನ್‌ ರಾಜಣ್ಣ ಹೇಳಿದರು.

    ತುಮಕೂರಿನಲ್ಲಿ ಮಾತನಾಡಿದ ಸಚಿವ ರಾಜಣ್ಣ, ಅಧಿವೇಶನ ಮುಕ್ತಾಯ ಆದ ರೀತಿ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿದೆ. ಸ್ಪೀಕರ್ ಪೋಡಿಯಂನ ಮೆಟ್ಟಿಲು ಯಾರೂ ಹತ್ತಲ್ಲ. ಅಂಥದ್ದರಲ್ಲಿ ಏರಿ ಅವರಿಗೆ ಧಮ್ಕಿ ಹಾಕಿರೋದು ಶೋಭೆಯಲ್ಲ. ಸಿದ್ಧರಾಮಯ್ಯರಿಗೆ, ಸ್ಪೀಕರ್‌ಗೆ ಅಗೌರವ ತರೋದು ಸರಿಯಲ್ಲ. ಬಿಜೆಪಿಗರೂ ಗೂಂಡಾ ವರ್ತನೆ ಮಾಡಿದ್ದಾರೆ. ಅವರ ಹೈ ಕಮಾಂಡ್ ಬುದ್ದಿ ಹೇಳಬೇಕು ಎಂದು ಕಿಡಿ ಕಾರಿದರು.

    ಹನಿ ಟ್ರಾಪ್ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಇವತ್ತು ಸಿಎಂ ಭೇಟಿ ಮಾಡೋದಿಲ್ಲ. ನಾಲ್ಕೈದು ದಿನದ ನಂತರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನ ಭೇಟಿ ಮಾಡುತ್ತೇನೆ. ಗೃಹ ಸಚಿವರಿಗೆ ದೂರು ಕೊಡುತ್ತೇನೆ. ದೇವರು ನಿನಗೆ ಹೇಗೆ ಬುದ್ದಿ ಕೊಡುತ್ತೆ ಹಾಗೋ ಮಾಡು ಎಂದು ಸಿಎಂ ಹೇಳಿದ್ದಾರೆ. ಹನಿ ಟ್ರಾಪ್ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದ್ದು ನಿಜ. ಯಾರು ಯಾಕೆ ನನ್ನ ಟಾರ್ಗೆಟ್ ಮಾಡಿದ್ರು ಅಂತಾ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ, ಪ್ರಜ್ಬಲ್ ಹೇಗೆ ಟಾರ್ಗೆಟ್ ಮಾಡಿದ್ದಾರೋ ಹಾಗೆ ನನ್ನನ್ನ ಟಾರ್ಗೆಟ್‌ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ ಎಂದರಲ್ಲದೇ ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ, ಹಾಗಾಗಿ ನನಗೆ ಕೆಟ್ಟದಾಗಲ್ಲ. ಹಾಗಂತ ಸಾರ್ವಜನಿಕ ಜೀವನದಲ್ಲಿ ತೇಜೋವಾಧೆ ಮಾಡೋದು ಸರಿಯಲ್ಲ ಎಂದು ಹೇಳಿದರು.

    ಹನಿಟ್ರ್ಯಾಪ್‌ ಯತ್ನ ಒಂದೂವರೆ ತಿಂಗಳಿಂದ ನಡೆದಿದೆ. ವಿಷ ಕನ್ಯೆಯರ ರೀತಿ ಇಲ್ಲೂ ಇದ್ದಾರೆ. ಆದ್ದರಿಂದ ಈ ವಿಚಾರ ಹೈಕಮಾಂಡ್ ಗಮನಕ್ಕೆ ತರುವ ಬಗ್ಗೆ ಚಿಂತನೆ ಇದೆ. ಸಚಿವ ಸತೀಶ್ ಜಾರಕಿಹೊಳಿ ಇದನ್ನು ಗಂಭೀರವಾಗಿ ಪರಿಗಣಿಸೋಣ ಅಂದಿದ್ದಾರೆ. ಅವರು ಏನೋ ಹೇಳುತ್ತಾರೆ ನೋಡುನಾ..? ಎಂದು ಹೇಳಿದರು.

    ವಿಷಕನ್ಯೆಯರ ಕಥೆ ಗೊತ್ತಾ ನಿಮಗೆ? ವಿಷ ಕನ್ಯೆಯರು ಎಲ್ಲಿಂದ ಹುಟ್ಟಿದ್ರು? ಮಾನವ ಹುಟ್ಟಿದಾಗಿನಿಂದ ಅವರನ್ನ ಬಳಸಿಕೊಳ್ಳುತ್ತಾ ಬಂದರು. ಏಕೆ ಬಳಿಸಿದ್ರು, ಯಾವ ಕಾಲದಲ್ಲಿ ಏನಕ್ಕೆ ಬಳಸಿದ್ರು. ಅಧಿಕಾರದ ಆಸೆಗೆ ಇನ್ನೊಬ್ಬನ್ನ ಮುಗಿಸಲು ಇರೋದು. ಇದೆಲ್ಲಾ ಇತಿಹಾಸಲ್ಲಿ ಬಂದಿದೆ. ಇದೆಲ್ಲಾ ಹೊಸದಾಗಿ ಬಂದಿಲ್ಲ. ಎಲ್ಲಾ ವಿಷ ಕನ್ಯೆಯರು ಇರ್ತಿದ್ರು. ಈಗ್ಲೂ ಅದೇ ರೀತಿ ನಡೆಸುತ್ತಿದ್ದಾರೆ ಎಂದು ನುಡಿದರು.

  • ಇದು ಮಾನಮರ್ಯಾದೆ ಇಲ್ಲದ ಅಶ್ಲೀಲ ಸರ್ಕಾರ – ಆರ್‌. ಅಶೋಕ್‌ ಸಿಡಿಮಿಡಿ

    ಇದು ಮಾನಮರ್ಯಾದೆ ಇಲ್ಲದ ಅಶ್ಲೀಲ ಸರ್ಕಾರ – ಆರ್‌. ಅಶೋಕ್‌ ಸಿಡಿಮಿಡಿ

    – 224 ಶಾಸಕರ ಮೇಲೆ ಕಳಂಕ ಬಂದಿದೆ ಎಂದ ವಿಜಯೇಂದ್ರ

    ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮಾನ ಮರ್ಯಾದೆ ಇಲ್ಲದ ಅಶ್ಲೀಲ ಸರ್ಕಾರ ಅಂತ ವಿಪಕ್ಷ ನಾಯಕ ಆರ್.‌ ಅಶೋಕ್‌ ಸಿಡಿಮಿಡಿಗೊಂಡರು.

    ವಿಪಕ್ಷಗಳ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್‌ ರೂಲಿಂಗ್‌ ಹೊರಡಿಸಿದ್ದನ್ನು ಖಂಡಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಕ್ಕಾಗಿ ಹೋರಾಟ ಮಾಡಿದ್ದು, ನಮ್ಮ ಮೇಲೆ ಗದಪ್ರಹಾರ ಮಾಡಿದ್ದೀರಿ. ಒಬ್ಬ ಮಂತ್ರಿ ಬಂದ ಹನಿಟ್ರ್ಯಾಪ್‌ ಆಗಿದೆ ಅಂತ ಅಂಗಲಾಚುತ್ತಿದ್ದಾರೆ. ಆದ್ರೆ ಇದು ಕಾಂಗ್ರೆಸ್‌ನ ಸಿಎಂಗೆ, ಸಚಿವರಿಗೆ ಅಶ್ಲೀಲ ಅಂತ ಅನ್ನಿಸಲೇ ಇಲ್ಲ. ಹನಿ ತಿಂದವರು ಕಾಂಗ್ರೆಸ್‌ನವರು, ಅವರನ್ನ ಅಮಾನತು ಮಾಡಬೇಕಿತ್ತು. ಈ ರೀತಿ ಸದನವನ್ನ ನಾವು ಒಪ್ಪಲ್ಲ ಎಂದು ಆಕ್ರೋಶ ಹೊರಹಾಕಿದರು.

    ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆಯುತ್ತಿದ್ದೀರಿ, ಇದು ಅಶ್ಲೀಲ ಸರ್ಕಾರ, ಮಾನಮರ್ಯಾದೆ ಇಲ್ಲದ ಸರ್ಕಾರ ವಿಧಾನಸಭೆಯಲ್ಲಿ ಅಶೋಕ್ ಕಿಡಿ ಕಾರಿದರು. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವರ್ಗಾವಣೆ ಕ್ರಮದ ಭಾಗವಲ್ಲ ಎಂದ ಸುಪ್ರೀಂ

    ನಮ್ಮ ಶಾಸಕರು ಈ ಹಿಂದೆ ವಿಡಿಯೋ ನೋಡುತ್ತಿದ್ದರು ಅಂತ ಕಾಂಗ್ರೆಸ್‌ನವರು ಕುಣಿದಿದ್ದೇ ಕುಣಿದಿದ್ದು, ಈಗ ಸ್ವತಃ ಸಚಿವರೇ ಹನಿಟ್ರ್ಯಾಪ್‌ ಆಗಿದೆ ಅಂದಾಗ ಅದು ಅಶ್ಲೀಲ ಅನ್ನಿಸಲೇ ಇಲ್ಲ. ಸದನದ ಗೌರವ ಕಾಪಾಡಬೇಕು ಅಂತ ನಾವು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಕೇಳಿದ್ದೀವಿ. ಆದ್ರೆ ಸಿಎಂ ಸಚಿವರ ಪರವಾಗಿದ್ದೀನಿ ನ್ಯಾಯ ಕೊಡಿಸ್ತಿನಿ ಅಂತಾರೆ. ನ್ಯಾಯ ಕೇಳಿದವರ ಮೇಲೆ ಗದಾಪ್ರಹಾರ ಆಗಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: 1 ತಿಂಗಳು ನಂದಿ ಬೆಟ್ಟದ ರಸ್ತೆ ಬಂದ್‌ – ಪ್ರವಾಸಿಗರೇ ಈ ಸುದ್ದಿ ನೋಡಿ…

    224 ಶಾಸಕರ ಮೇಲೆ ಕಳಂಕ ಬಂದಿದೆ
    ಇನ್ನೂ ವಿಧಾನಸೌಧದಲ್ಲಿ ಶಾಸಕ ವಿಜಯೇಂದ್ರ ಮಾತನಾಡಿ, 18 ಶಾಸಕರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಸಚಿವ ರಾಜಣ್ಣ ಅವರು ಸದನದಲ್ಲಿ ಅಂಗಲಾಚಿದ್ದಾರೆ. 48ಕ್ಕೂ ಹೆಚ್ಚು ಮುಖಂಡರು ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ ಅಂತಾರೆ. ಅವರಿಗೆ ರಕ್ಷಣೆ ಕೊಡಬೇಕಾದ ಕರ್ತವ್ಯ ಸಿಎಂ ಅವರದಿತ್ತು. 224 ಶಾಸಕರ ಮೇಲೆ ಕಳಂಕ ಬಂದಿದೆ, 224 ಶಾಸಕರ ಸುರಕ್ಷತೆ ನೋಡಿಕೊಳ್ಳಬೇಕಾದ ಹೊಣೆ ಸಿಎಂ ಅವರದ್ದು ಅಂತ ವಿಜಯೇಂದ್ರ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಕುಡಿದ ಮತ್ತಲ್ಲಿ ಹುಚ್ಚಾಟ – ತಮಾಷೆಗೆ 40 ಕಿಮೀ ದೂರದಿಂದ ಅಂಬುಲೆನ್ಸ್‌ ಕರೆಸಿದ ಕುಡುಕ!