ಬೆಂಗಳೂರು: ಬಿಬಿಎಂಪಿಯನ್ನು (BBMP) ಐದು ಭಾಗ ಮಾಡಿರುವ ಸರ್ಕಾರದ ನಡೆಯನ್ನು ಬಿಜೆಪಿ (BJP) ನಾಯಕರು ತೀವ್ರವಾಗಿ ವಿರೋಧಿಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್, ಇದು ಬೆಂಗಳೂರಿನ ಆಡಳಿತ, ಅಭಿವೃದ್ಧಿಗೆ ಮಾರಕ. ಇದರ ಹಿಂದೆ ಸ್ವಾರ್ಥ, ರಾಜಕೀಯದ ದುರುದ್ದೇಶ ಇದೆ. ಕಾಂಗ್ರೆಸ್ ಡಿವೈಡ್ ಆ್ಯಂಡ್ ರೂಲ್ ನೀತಿ ಅನುಸರಿಸಿದೆ. ಇವರು ಬೆಂಗಳೂರನ್ನು ರಾಜಕೀಯದ ಪ್ರಯೋಗಾಲಯವಾಗಿ ಮಾಡಿಕೊಂಡಿದ್ದಾರೆ. ಇದು ಅಧಿಕಾರದ ದುರುಪಯೋಗ. ಇದನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ. ಬೆಂಗಳೂರಿನ ವಿಭಜನೆಯನ್ನು ನಾವು ಒಟ್ಟಾಗಿ ವಿರೋಧ ಮಾಡುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ. ಬೆಂಗಳೂರಿನಲ್ಲಿ ಮನೆ ಮನೆಗೂ ಜಾಗೃತಿ ಮೂಡಿಸುತ್ತೇವೆ ಎಂದರು. ಇದನ್ನೂ ಓದಿ: ಡಿಕೆಶಿಯನ್ನು ಮುಗಿಸಲು ನಡೆಸಿದ ಸಮಾವೇಶ: ಆರ್.ಅಶೋಕ್
ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮಾತಾಡಿ, ಬೆಂಗಳೂರನ್ನು ಹೋಳು ಮಾಡಿ ಅಭಿವೃದ್ಧಿ ಮಾಡುತ್ತೇವೆ ಅಂತ ಓಳು ಬಿಡುತ್ತಾರೆ. ಯಾವ ಪುರುಷಾರ್ಥಕ್ಕೆ ಐದು ಭಾಗ ಮಾಡಿದ್ರು? ಹೋಳು ಮಾಡುವುದರಿಂದ ಏನು ಅಭಿವೃದ್ಧಿ ಆಗುತ್ತದೆ? ಏನು ಸರಿ ಮಾಡ್ತೀರಿ? ರಸ್ತೆ, ತ್ಯಾಜ್ಯ, ಸಂಚಾರ ಸಮಸ್ಯೆ ಸರಿ ಹೋಗುತ್ತಾ? ಏನೂ ಆಗೋದಿಲ್ಲ. ಕೆಂಪೇಗೌಡ ಕಟ್ಟಿದ ಬೆಂಗಳೂರು ಭಾಗಮಾಡಿ ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ. ಬೆಂಗಳೂರು ನಗರದ ಜನರ ಶಾಪ ಕಾಂಗ್ರೆಸ್‌ಗೆ ತಟ್ಟುತ್ತೆ. ನಾವಂತೂ ಸ್ಪಷ್ಟ ವಿರೋಧ ಮಾಡುತ್ತೇವೆ. ಬ್ರ‍್ಯಾಂಡ್ ಬೆಂಗಳೂರು ಬಿಟ್ರಿ, ಈಗ ಹೋಳು ಬೆಂಗಳೂರು. ಬೆಂಗಳೂರು ವಿಭಜನೆಯಿಂದ ತಾರತಮ್ಯ ಶುರುವಾಗುತ್ತೆ. ಪಾಲಿಕೆಗಳ ನಡುವೆ ಬೆಂಕಿ ಹತ್ತುತ್ತೆ, ಆದಾಯ ತಾರತಮ್ಯ ಆಗುತ್ತೆ. ಎಲ್ಲ ಹೋಳು ಹೋಳು ಬೆಂಗಳೂರು ಹಾಳು ಹಾಳು ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: Tamil Nadu | ಪತಿಯೊಂದಿಗೆ ಜಗಳ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು ಇರಿದು ಕೊಂದ ಗಂಡ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಡೆಸಿದ ಸಮಾವೇಶ ಸರ್ಕಾರಿ ಕಾರ್ಯಕ್ರಮ ಅಲ್ಲ. ಅದು ಡಿ.ಕೆ ಶಿವಕುಮಾರ್ (D K Shivakumar) ಅವರನ್ನು ಮುಗಿಸಲು ಮಾಡಿದ ಕಾರ್ಯಕ್ರಮ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ (Siddaramaiah) ನಡೆಸಿದ ಸಮಾವೇಶ ಕಾಂಗ್ರೆಸ್‌ನ ಒಡಕನ್ನು ತೋರಿಸಿದೆ. ಅಲ್ಲಿ ಒಬ್ಬರೂ ಡಿಕೆಶಿ ಪರ ಮಾತಾಡಲಿಲ್ಲ. ಡಿಕೆಶಿಗೆ ಪಾಠ ಕಲಿಸಲು ಹಾಗೂ ಅಪಮಾನ ಮಾಡಲು ಈ ಸಮಾವೇಶ ನಡೆಸಲಾಗಿದೆ. ಡಿಕೆಶಿ ಈಗ ಎರಡನೇ ದರ್ಜೆಯ ನಾಯಕರಾಗಿಬಿಟ್ಟಿದ್ದಾರೆ. ಡಿಕೆಶಿಯನ್ನು ಮುಗಿಸಲು ಗುದ್ದಲಿ ಪೂಜೆ ಮಾಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: Tamil Nadu | ಪತಿಯೊಂದಿಗೆ ಜಗಳ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು ಇರಿದು ಕೊಂದ ಗಂಡ
ಕಾಂಗ್ರೆಸ್ (Congress) ಪಕ್ಷದ ನಾಯಕರು ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಇದು ಡಿಕೆಶಿ ಹಾಗೂ ಸಿದ್ದರಾಮಯ್ಯನವರ ಆಂತರಿಕ ಜಗಳ. ಬಿಜೆಪಿಗೆ ಸರ್ಕಾರವನ್ನು ಬೀಳಿಸುವ ಅಗತ್ಯವಿಲ್ಲ. ಈ ಸರ್ಕಾರ ಕಾಂಗ್ರೆಸ್‌ನ ಆಂತರಿಕ ಕಲಹದಿಂದಲೇ ಬಿದ್ದುಹೋಗಲಿದೆ. ಸುರ್ಜೇವಾಲಾ ರಾಜ್ಯಕ್ಕೆ ಬಂದು ಶಾಸಕರ ಅಹವಾಲುಗಳನ್ನು ಆಲಿಸಿದ್ದಾರೆ. ಇವರ ಜಗಳ ಜನರ ಮುಂದೆ ಬಯಲಾಗಿದೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನಾನು ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು.. ನನಗೆ ಪಾಪಪ್ರಜ್ಞೆ ಕಾಡುತ್ತಿದೆ: ದೂರುದಾರ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮೈಸೂರಿನ ಸಮಾವೇಶದಲ್ಲಿ ಕೀಳಾಗಿ ಮಾತಾಡಿದ್ದಾರೆ. ಪ್ರಧಾನಿ ಬೊಗಳುತ್ತಾರೆಂದು ಹೇಳುವುದು ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ತೋರಿಸುತ್ತದೆ. ಈ ಹಿಂದೆ ಛಲವಾದಿ ನಾರಾಯಣಸ್ವಾಮಿ ಗಾದೆಮಾತು ಹೇಳಿದಾಗ ಸಂಸ್ಕೃತಿ ಬಗ್ಗೆ ಇವರೇ ಮಾತಾಡಿದ್ದರು. ಇನ್ನು ಅಧಿಕಾರಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಇವರು ಈ ರೀತಿ ಕೀಳಾಗಿ ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಹೋಳು
ಬೆಂಗಳೂರಿನಲ್ಲಿ ಅಭಿವೃದ್ಧಿ ಮಾಡದೆ ಹೋಳು ಮಾಡಲಾಗಿದೆ. ಟ್ರಾಫಿಕ್ ಜಾಮ್, ಪ್ರವಾಹ, ಕಸದ ಸಮಸ್ಯೆ ಯಾವುದು ಕೂಡ ಈ ಕ್ರಮದಿಂದ ನಿವಾರಣೆಯಾಗುವುದಿಲ್ಲ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡೆದರೆ ಪ್ರಗತಿಯಾಗಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕರೆಂಟ್ ಶಾಕ್ ನೀಡಿ ಮಾವನ ಕೊಲೆ – ಗಾಯ ಮರೆಮಾಚಲು ರೋಸ್ ವಾಟರ್, ಅರಶಿಣ ಪುಡಿ ಹಚ್ಚಿದ ಸೊಸೆ
ಬ್ರ‍್ಯಾಂಡ್ ಎಂಬ ಸ್ಲೋಗನ್‌ನಿಂದ ಮಾತ್ರ ಅಭಿವೃದ್ಧಿ ಮಾಡುತ್ತಿದ್ದಾರೆ. ನಗರವನ್ನು ಒಡೆಯುವುದರಿಂದ ಆದಾಯ ಹಂಚಿಕೆಯಲ್ಲಿ ತಾರತಮ್ಯ ಉಂಟಾಗಿ ಇನ್ನಷ್ಟು ಕಲಹ ಉಂಟಾಗಲಿದೆ. ಬೆಂಗಳೂರಿನ ಕೇಂದ್ರದಲ್ಲಿ ಎಲ್ಲೂ ಕಸದ ಘಟಕ ಇಲ್ಲ. ಈ ಕಸವನ್ನು ಹೊರವಲಯಕ್ಕೆ ಸಾಗಿಸಿದರೆ, ಸ್ವೀಕಾರ ಮಾಡುವುದಿಲ್ಲ ಎಂದು ಅಲ್ಲಿನ ಜನರು ಹೇಳಬಹುದು. ಇದರಿಂದ ಇನ್ನಷ್ಟು ಜಗಳವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಗೇಮ್ ಆಡಿದ ಕೃಷಿ ಸಚಿವ – ವಿಪಕ್ಷಗಳಿಂದ ಭಾರಿ ಟೀಕೆ
ಸುರಂಗ ರಸ್ತೆ ಮಾಡಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಇಲ್ಲಿ ಗಟ್ಟಿಯಾದ ಬಂಡೆಗಳಿವೆ. ಇಲ್ಲಿ ಸುರಂಗ ಕೊರೆದು ರಸ್ತೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಹೆದ್ದಾರಿ ಸಚಿವರನ್ನು ಭೇಟಿ ಮಾಡಿ, ಸುರಂಗ ರಸ್ತೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಇದರ ಬದಲು ಮೆಟ್ರೋ ಯೋಜನೆಗೆ ಒತ್ತು ನೀಡಿದರೆ ಸಾಕಾಗುತ್ತದೆ. ಮೆಟ್ರೋ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿದರೆ, ಟ್ರಾಫಿಕ್ ಜಾಮ್ ನಿವಾರಣೆಯಾಗುತ್ತದೆ ಎಂದು ಹೇಳಿದ್ದಾರೆ.
ಜನನಾಯಕರಲ್ಲ, ಲಾಟರಿ ಸಿಎಂ
ಇವರು ಲಾಟರಿ ಸಿಎಂ ಎಂದು ಶಾಸಕರೇ ಹೇಳಿದ್ದಾರೆ. ಇವರು ಜನನಾಯಕರಲ್ಲ, ಚುನಾಯಿತ ಸಿಎಂ ಅಲ್ಲ. ಆದ್ದರಿಂದ ಇನ್ನು ಮುಂದೆ ಸಿದ್ದರಾಮಯ್ಯ ತಾವು ಲಾಟರಿ ಮುಖ್ಯಮಂತ್ರಿ ಎಂದು ಹೇಳಿಕೊಳ್ಳಬೇಕು ಎಂದಿದ್ದಾರೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಕುರ್ಚಿ ಉಳಿಸಿಕೊಳ್ಳಲು ಸಮಾವೇಶ ನಡೆಸುತ್ತಿದ್ದಾರೆ. ಸಾಧನಾ ಸಮಾವೇಶ ಆದ ನಂತರ ಇದು ಸಿಎಂ ಅಳಿವು-ಉಳಿವಿನ ಸಮಾವೇಶವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಟೀಕಿಸಿದರು.
ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಿಂದಲೂ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳುತ್ತಲೇ ಇದ್ದಿದ್ದರಿಂದ ಯಾವಾಗಲೂ ಸರ್ಕಾರವನ್ನು ಅಸ್ಥಿರತೆ ಕಾಡುತ್ತಿದೆ. ಈ ಸಮಾವೇಶದಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ವಾಲ್ಮೀಕಿ ನಿಗಮದಲ್ಲಿ ಹಗರಣ, 2,500 ರೈತರ ಆತ್ಮಹತ್ಯೆ 1200 ನವಜಾತ ಶಿಶುಗಳ ಸಾವು, ಬಾಣಂತಿಯರ ಸಾವು, ಹತ್ತಕ್ಕೂ ಅಧಿಕ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಆತ್ಮಹತ್ಯೆ, ಆರ್‌ಸಿಬಿ ಸಂಭ್ರಮಾಚರಣೆ ವೇಳೆ 11 ಸಾವು, ಇಂತಹ ಘಟನೆಗಳನ್ನು ಸಂಭ್ರಮಿಸಲು ಸಮಾವೇಶ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಶಾಸಕರಿಗೂ ಅನುದಾನ ಸಿಗುತ್ತೆ, ತಾಳ್ಮೆಯಿಂದ ಇರಬೇಕು: ಡಿಕೆಶಿ
ಆರ್‌ಸಿಬಿ (RCB) ಕಾರ್ಯಕ್ರಮ ಸರ್ಕಾರದ ವತಿಯಿಂದ ನಡೆದಿಲ್ಲ ಎಂದು ಬಿಂಬಿಸಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದರು. ಸಿಐಡಿ ಹಾಗೂ ನ್ಯಾ.ಡಿ ಕುನ್ಹಾ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಸರ್ಕಾರದ ಪಾತ್ರದ ಬಗ್ಗೆ ಹೇಳದೆ, ಪೊಲೀಸರ ಮೇಲೆ ಆರೋಪ ಮಾಡಲಾಗಿದೆ. ಪೊಲೀಸರಿಗೆ ಆದೇಶ ಕೊಟ್ಟ ಸರ್ಕಾರದ ತಪ್ಪಿನ ಬಗ್ಗೆ ಎಲ್ಲೂ ಹೇಳಿಲ್ಲ. ಇಂತಹ ಸಮಯದಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಇದೇ ರೀತಿ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಸಮಾವೇಶ ನಡೆಸಿದರೆ ಆಗ ಯಾರ ಬಲ ಹೆಚ್ಚಿದೆ ಎಂದು ತೀರ್ಮಾನಿಸಬಹುದು. ಇಲ್ಲಿ ಪರಸ್ಪರ ಸ್ಪರ್ಧೆ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ
ತನಿಖಾ ಆಯೋಗಗಳನ್ನು ನೇಮಕ ಮಾಡುವಾಗ ಪದೇ ಪದೆ ಇಬ್ಬರನ್ನೇ ನೇಮಕ ಮಾಡಲಾಗುತ್ತದೆ. ಇದರಿಂದಾಗಿ ಜನರಿಗೆ ಸರ್ಕಾರದ ಮೇಲೆ ನಂಬಿಕೆ ಹೋಗಿದೆ. ವಿರೋಧ ಪಕ್ಷದ ಶಾಸಕರಾದ ಬೈರತಿ ಬಸವರಾಜ್ ಅವರನ್ನು ಬಗ್ಗುಬಡಿಯಲು ಪೊಲೀಸರೇ ಎಫ್‌ಐಆರ್‌ನಲ್ಲಿ ಅವರ ಹೆಸರು ಬರೆದಿದ್ದಾರೆ. ದೂರು ಕೊಟ್ಟ ಮಹಿಳೆಯೇ ಮುಂದೆ ಬಂದು ಶಾಸಕರ ಹೆಸರನ್ನು ಹೇಳಿಲ್ಲ ಎಂದಿದ್ದಾರೆ. ಆದರೂ ಸರ್ಕಾರದ ದ್ವೇಷ ಸಾಧಿಸುತ್ತಿದೆ ಎಂದರು.
ಅಭಿವೃದ್ಧಿ ಕಾರ್ಯಗಳಿಲ್ಲ
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 50 ಕೋಟಿ ರೂ. ಹಾಗೂ ಬಿಜೆಪಿ-ಜೆಡಿಎಸ್ ಕ್ಷೇತ್ರಕ್ಕೆ 25 ಕೋಟಿ ರೂ. ನೀಡಲಾಗುವುದೆಂದು ಹೇಳಿದ್ದಾರೆ. ಈ ರೀತಿ ತಾರತಮ್ಯ ಮಾಡಿ, ಕೇಂದ್ರದ ಮೇಲೆ ತಾರತಮ್ಯದ ಆರೋಪ ಹೊರಿಸುತ್ತಿದ್ದಾರೆ. ಎಲ್ಲ ಶಾಸಕರಿಗೆ ಸಮಾನ ಅನುದಾನ ನೀಡಬೇಕು. ಇದರಿಂದ ಸಮಾನ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಇದನ್ನೂ ಓದಿ: ಅರಂತೋಡು ಘನತ್ಯಾಜ್ಯ ಘಟಕ ಮರುಸ್ಥಾಪನೆಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ನೆರವು – 5 ಲಕ್ಷ ಅನುದಾನ ಮಂಜೂರು
ಬೆಂಗಳೂರಿನಲ್ಲಿ ಗಟ್ಟಿಯಾದ ಕಲ್ಲು ಇರುವುದರಿಂದ ಸುರಂಗ ಮಾಡುವುದು ಕಷ್ಟ. ಅದರ ಬದಲು ಮೆಟ್ರೋ ಯೋಜನೆಗೆ ಒತ್ತು ನೀಡಬಹುದಿತ್ತು. ಮೊದಲು ಮೇಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಸಾಕು. ಬೆಂಗಳೂರನ್ನು ಒಡೆದರೆ ನಾಡಪ್ರಭು ಕೆಂಪೇಗೌಡರಿಗೆ ಅಪಮಾನವಾಗುತ್ತದೆ. ಒಡೆಯುವುದು ಕಾಂಗ್ರೆಸ್‌ನ ಬುದ್ಧಿ. ಅಭಿವೃದ್ಧಿ ಮಾಡುವುದರ ಬದಲು ಒಡೆಯುವುದು ಸರಿಯಲ್ಲ. ಬ್ರ‍್ಯಾಂಡ್ ಬೆಂಗಳೂರಿನ ಹೆಸರಲ್ಲಿ ಇದುವರೆಗೆ ಒಂದು ಯೋಜನೆಯೂ ಜಾರಿಯಾಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನನಗೂ ನನ್ನ ಪತ್ನಿಗೂ ಏನಾದ್ರು ಆದ್ರೆ ಅದಕ್ಕೆ ಪಾಕ್ ಸೇನಾ ಮುಖ್ಯಸ್ಥನೇ ಕಾರಣ: ಇಮ್ರಾನ್ ಖಾನ್ ಹೇಳಿಕೆ
ಬಿಜೆಪಿ ಸರ್ಕಾರ ಇದ್ದಾಗ ಕೇಳಿದ್ದ ಮನೆಯನ್ನೇ ಕೊಡಲಾಗುತ್ತಿತ್ತು. ಕಳೆದೆರಡು ವರ್ಷಗಳಿಂದ ಮನೆ ನೀಡಲು ಅನೇಕ ಪತ್ರಗಳನ್ನು ಬರೆದರೂ ಸರ್ಕಾರ ಸ್ಪಂದಿಸಿಲ್ಲ. ನೀತಿ ಸಂಹಿತೆ, ಶಿಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿಗೂ ಪತ್ರ ಬರೆಯುವ ಇವರು, ಇಲ್ಲಿ ಶಿಷ್ಟಾಚಾರ ಪಾಲಿಸುತ್ತಿಲ್ಲ. ವಿರೋಧ ಪಕ್ಷದ ನಾಯಕನಾದ ನನಗೆ ಮನೆ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರು.
ಸರ್ಕಾರದಲ್ಲಿ ಹಣವಿಲ್ಲ. ಒಂದು ರೂಪಾಯಿ ಖರ್ಚು ಮಾಡುವಾಗ ಕೂಡ ಬಹಳ ಯೋಚನೆ ಮಾಡಬೇಕು. ಅದಕ್ಕಾಗಿ ಬೀದಿ ವ್ಯಾಪಾರಿಗಳಿಂದ ಬರುವ ಜಿಎಸ್‌ಟಿ ಹೆಚ್ಚಿಸಲು ರಾಜ್ಯ ಸರ್ಕಾರ ಕುತಂತ್ರ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಲಾಗಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆಗೂ ಹಾನಿಯಾಗಲಿದೆ. ಜನರಿಗೆ ಅನ್ಯಾಯವಾಗಿದ್ದರೆ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಹೇಳಿದರು.
ಬೆಂಗಳೂರು: ಸಿಎಂ ಐದು ವರ್ಷ ನಾನೇ ಸಿಎಂ ಎಂದಿದ್ದಾರೆ ಅಂದಮೇಲೆ ಕಾಂಗ್ರೆಸ್‌ನಲ್ಲಿ (Congress) ಡಿಕೆಶಿಗೆ ನಯಾಪೈಸೆ ಬೆಲೆ ಇಲ್ಲ ಎಂದು ಆರ್.ಅಶೋಕ್ (R Ashok) ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಾವಿರ ಬಾರಿ ನಾನೇ 5 ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಇದೇ ಅವರ ದೌರ್ಬಲ್ಯ. ಡಿಕೆ ಶಿವಕುಮಾರ್ ಸರ್ಕಾರವನ್ನು ನಾನೇ ಅಧಿಕಾರಕ್ಕೆ ತಂದೆ ಎಂದಿದ್ದಾರೆ. ಇನ್ನೂ ಸ್ವಾಮೀಜಿ ಸಹ ಡಿಕೆಶಿ ಸಿಎಂ ಆಗಲಿ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂದಿದ್ದಾರೆ. ಇದರರ್ಥ ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ನಯಾ ಪೈಸೆ ಬೆಲೆ ಇಲ್ಲ ಎಂದಿದ್ದಾರೆ.ಇದನ್ನೂ ಓದಿ: ಶುಭಾಂಶು ಶುಕ್ಲಾ ಜು.14ಕ್ಕೆ ಭೂಮಿಗೆ ವಾಪಸ್?
ಇನ್ನೂ ಸಿದ್ದರಾಮಯ್ಯ ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ ಎಂದು ಸಂದೇಶ ನೀಡಿದ್ದಾರೆ. ಸಿದ್ದರಾಮಯ್ಯ ತಾವೇ ಐದು ವರ್ಷ ಸಿಎಂ ಅಂತಾರೆ, ಆದರೆ ಇದನ್ನು ಮಲ್ಲಿಕಾರ್ಜುನ ಖರ್ಗೆಯವರು ಘೋಷಣೆ ಮಾಡಬೇಕು. ಖರ್ಗೆಯವರು ಒಂದು ದಿನ ಆದರೂ ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದಿದ್ದಾರಾ? ಅಥವಾ ಡಿಕೆಶಿ ಹೇಳಿದ್ದಾರಾ? ಯಾರೂ ಹೇಳಿಲ್ಲ. ಖರ್ಗೆ ಮತ್ತು ಡಿಕೆಶಿಯವರಿಂದ ಒಂದೇ ಒಂದು ಹೇಳಿಕೆ ಕೊಡಿಸಿ ನೋಡೋಣ ಎಂದು ಹೇಳಿದ್ದಾರೆ.
ರಾಜ್ಯದ ಜನತೆಗೆ ಸಿಎಂ ಸ್ಥಾನ ಅಭದ್ರತೆ ಕಾಡುತ್ತಿದೆ. ಕೆಲಸ ಆಗುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ. ಯಾರು ಇವರ ಮಾತು ಕೇಳುತ್ತಿಲ್ಲ. ದೆಹಲಿಯಿಂದಲೇ ಡಿಕೆಶಿಗೆ ಚಾಟಿ ಏಟು ಕೊಟ್ಟಿದ್ದಾರೆ. ಎಲ್ಲರಂತೆ ನೀನು ಕೆಲಸ ಮಾಡಿದ್ಯಾ? ವಿಶೇಷ ಏನು ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಈಗ ಪ್ರಳಯ ಆಗಿದೆ. ಖರ್ಗೆಯವರು ಏನಾದರೂ ಹೇಳಿದರೆ ಈ ಪ್ರಳಯ ನಿಲ್ಲುತ್ತೆ. ಇಲ್ಲವಾದರೆ ಈ ಕಚ್ಚಾಟ ಹೀಗೆ ಮುಂದುವರೆಯುತ್ತೆ, ಅಭಿವೃದ್ಧಿ ಕುಂಠಿತ ಆಗುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕಲಬುರಗಿ | ಗಾಣಗಾಪುರದ ದತ್ತನ ಸನ್ನಿಧಿಯಲ್ಲಿ ಕಾಲ್ತುಳಿತ – ಮಹಿಳೆ ಸಾವು
ಬೆಂಗಳೂರು: ಜನೌಷಧಿ (Jan Aushadhi) ಕೇಂದ್ರಗಳ ಸ್ಥಗಿತ ಕುರಿತು ಹೈಕೋರ್ಟ್ (High Court) ನೀಡಿದ ಮಧ್ಯಂತರ ತಡೆ ಆದೇಶವನ್ನು ಸ್ವಾಗತಿಸುತ್ತೇನೆ. ಖಾಸಗಿ ಲಾಬಿಗೆ ಮಣಿದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನೌಷಧಿ ಕೇಂದ್ರಗಳ ಸ್ಥಗಿತದ ಬಗ್ಗೆ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿದೆ. ಈ ಕುರಿತು ಬಿಜೆಪಿಯಿಂದ ಹೋರಾಟ ಮಾಡಲಾಗಿತ್ತು. ಖಾಸಗಿ ಮೆಡಿಕಲ್ ಫಾರ್ಮಾಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚಿತ್ತು. ಖಾಸಗಿ ಲಾಬಿಗೆ ಮಣಿದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ. ಇನ್ನಾದರೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಜನರಿಗೆ ಏನು ಬೇಕೆಂದು ಅರಿತು ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರದಲ್ಲಿ ಗೊಂದಲ ಏಕೆ? ಹೈಕಮಾಂಡ್ ಏನೂ ಇಲ್ಲ ಅಂದಿದೆ: ಸತೀಶ್ ಜಾರಕಿಹೊಳಿ
ಸರ್ಕಾರಿ ಆಸ್ಪತ್ರೆಗಳಲ್ಲಿ 260-270 ಔಷಧಿಗಳನ್ನು ನೀಡಬೇಕಾಗುತ್ತದೆ. ಆದರೆ ಅಷ್ಟೊಂದು ಔಷಧಿ ಇಲ್ಲ. ಔಷಧಿಗಳು ಜನೌಷಧಿ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇತ್ತೀಚೆಗೆ ಹಾಸನ ಆಸ್ಪತ್ರೆಗೆ ಹೋದಾಗ ಒಬ್ಬರೇ ಹೃದ್ರೋಗ ತಜ್ಞ ವೈದ್ಯರು ಇರುವುದು ಕಂಡುಬಂತು. ಹೃದಯ ಸಂಬಂಧಿ ರೋಗದ ತುರ್ತು ಪರಿಸ್ಥಿತಿಯಲ್ಲಿ ಅವರು ಇಂಜೆಕ್ಷನ್ ಕೊಟ್ಟು ಬೆಂಗಳೂರಿಗೆ ಕಳಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಿದರೆ ಬಹಳ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಕಾಡಾನೆ; 2 ಗಂಟೆ ನಿಂತ ರೈಲು – Video ನೋಡಿ..
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅರ್ಧನಾರೇಶ್ವರರನ್ನ ಹುಡುಕಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ (B K Hariprasad) ಲೇವಡಿ ಮಾಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಕ್ರಾಂತಿ ಆಗುತ್ತೆ ಎಂಬ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರ್.ಅಶೋಕ್ (R Ashok) ಮತ್ತು ವಿಜಯೇಂದ್ರ ಮೊದಲು ಅವರ ಖುರ್ಚಿ ಉಳಿಸಿಕೊಳ್ಳಲಿ. ಬಿಜೆಪಿಯವರು ಎರಡೂ ವರ್ಷ ಆದರೂ ಕೇಂದ್ರದಲ್ಲಿ ಅಧ್ಯಕ್ಷರನ್ನು ಮಾಡಲು ಆಗಲಿಲ್ಲ. ಈಗ ಮಹಿಳೆಯರನ್ನು ಹುಡುಕುತ್ತಿದ್ದಾರೆ. ಮಹಿಳೆಯರ ಬದಲಾಗಿ ಅರ್ಧನಾರೇಶ್ವರರನ್ನು ಹುಡುಕಿದರು ಬಹಳ ಸಂತೋಷ ಎಂದಿದ್ದಾರೆ. ಇದನ್ನೂ ಓದಿ: ನಾರಾಯಣ ಬರಮನಿ ಕೇಸ್ – ಕೊನೆಗೂ ಮುಜುಗರದಿಂದ ಪಾರಾದ ಸರ್ಕಾರ
ಇದೇ ವೇಳೆ ಸಿಎಂ, ಡಿಸಿಎಂ ದೆಹಲಿ ಪ್ರಯಾಣ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಸೀಟಿನ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಗೊಂದಲ ಆಗ್ತಿರೋದು ಮಾಧ್ಯಮಗಳು, ಟಿವಿಯಲ್ಲಿ ಮಾತ್ರ. ಸಿಎಂ, ಡಿಸಿಎಂ ನಡುವೆ ಯಾವುದೇ ಗೊಂದಲಗಳು ಇಲ್ಲ. ಪೆಹಲ್ಗಾಮ್ ಘಟನೆ ಆದ ಮೇಲೆ ಯಾವ ರೀತಿ ಟಿವಿಗಳಲ್ಲಿ ಕರಾಚಿ, ಲಾಹೋರ್ ಆಕ್ರಮಿಸಿಕೊಂಡಿದ್ರು ಅಂತ ಹೇಳಿದ್ದರು. ಅಮೇಲೆ ರಾತ್ರಿ ಹೊತ್ತು ಸುಖವಾಗಿ ಮಲಗಿದ್ರು ಅಂತ ಅಷ್ಟೇ. ಸಿಎಂ ಸೀಟು ಗೊಂದಲ ಮಾಧ್ಯಮಗಳು ಸೃಷ್ಟಿ ಅಷ್ಟೇ ಎಂದು ಹೇಳಿದ್ದಾರೆ.
– ಸರಣಿ ಹೃದಯಾಘಾತ; ನಾಳೆ ಹಾಸನಕ್ಕೆ ಭೇಟಿ ನೀಡಲಿರುವ ಅಶೋಕ್
ಬೆಂಗಳೂರು: ಸರ್ಕಾರದ ದುಸ್ಥಿತಿ ಬಗ್ಗೆ ಓಪನ್ ಆಗಿ ಹೇಳಿರುವ ಬಸವರಾಜ ರಾಯರೆಡ್ಡಿಗೆ (Basavaraj Rayareddy) ನಮ್ಮ ಸರ್ಕಾರ ಬಂದ ನಂತರ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಗ್ಯಾರಂಟಿ ಬೇಕಾ, ರಸ್ತೆ ಬೇಕಾ ಎಂದು ರಾಯರೆಡ್ಡಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಪುಣ್ಯಾತ್ಮ ಅವರೊಬ್ಬರು ಕರೆಕ್ಟ್ ಆಗಿ ಹೇಳಿದ್ದಾರೆ. ಈ ಸರ್ಕಾರ ಹೋಗೋವಾಗ ಜನರ ಕೈಗೆ ಚಿಪ್ಪು ಕೊಟ್ಟೇ ಹೋಗೋದು. ನಮ್ಮ ಸರ್ಕಾರ ಬಂದ ಮೇಲೆ ರಾಯರೆಡ್ಡಿಗೆ ಪ್ರಶಸ್ತಿ ಕೊಡ್ತೇವೆ. ಸರ್ಕಾರದ ಬಗ್ಗೆ ರಾಯರೆಡ್ಡಿ ಸತ್ಯ ಹೇಳಿದ್ದಾರೆ. ಹಾಗಾಗಿ ಅವರಿಗೆ `ಸತ್ಯವಾನ್ ರಾಯರೆಡ್ಡಿ’ ಪ್ರಶಸ್ತಿ ಕೊಡ್ತೇವೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯವಾದಿಗಳ ಹೆಮ್ಮೆ ಮುಖರ್ಜಿ ಕನಸು ಮೋದಿಯಿಂದ ನನಸು: ಯಡಿಯೂರಪ್ಪ
ಹಾಸನದಲ್ಲಿ (Hassan) ಸರಣಿ ಹೃದಯಾಘಾತ ಹಾಗೂ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಳೆ ಹಾಸನ ಭೇಟಿ ಕೊಡ್ತೇನೆ. ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ. ಸಿಎಂ ಹೃದಯಾಘಾತ ಬಗ್ಗೆ ಲಸಿಕೆ ಕಾರಣ ಅಂತ ಸುಳ್ಳು ಹೇಳಿದ್ದಾರೆ. ನಾಳೆ ಮಾಹಿತಿ ಪಡೆದುಕೊಂಡು ಮಾತಾಡ್ತೇನೆ. ಅಲ್ಲದೇ ಸಕಲೇಶಪುರಕ್ಕೆ ತೆರಳಿ ಕಾಫಿ ಬೆಳೆಗಾರರ ಭೇಟಿ ಮಾಡ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ಬಗೆಹರಿಸೋ ನೆಪದಲ್ಲಿ ಮಹಿಳೆ ಜೊತೆಗೆ ಲವ್ವಿ-ಡವ್ವಿ; ಪೊಲೀಸಪ್ಪನ ಕಾಮದಾಸೆಗೆ ಸುಂದರ ಕುಟುಂಬ ಬೀದಿಗೆ
ಶಿವಮೊಗ್ಗ ವಿಗ್ರಹಗಳಿಗೆ ಅವಮಾನ ವಿಚಾರ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಸಮುದಾಯವನ್ನು ಎರಡನೇ ದರ್ಜೆಯಾಗಿ ನೋಡ್ತಿದ್ದಾರೆ. ಇದು ಸಾಮಾನ್ಯವಾಗಿ ಹೋಗಿದೆ. ಶಿವಮೊಗ್ಗ ಅಷ್ಟೇ ಅಲ್ಲ, ಮಂಗಳೂರಲ್ಲೂ ಹಾಗೆ ಮಾಡ್ತಾರೆ. ಗೃಹ ಸಚಿವರು ಎಲ್ಲಿದ್ದಾರೆ ಅಂತ ಹುಡುಕಬೇಕು. ಈ ಸರ್ಕಾರ ಬಂದ ಮೇಲೆ ಯಾವಾಗಲೂ ಇದೇ ರೀತಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
– ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಅನ್ನೋದು ಸುಳ್ಳು ಎಂದ ವಿಪಕ್ಷ ನಾಯಕ
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ. ಅವ್ರನ್ನ ಅತಂತ್ರ ಮಾಡಲು ಯಾರು ಕುತಂತ್ರ ಮಾಡ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಗೇಟ್ ಪಾಸ್ ನೀಡೋದು ಪಕ್ಕಾ ಅಂತ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬಿಸಿ ಸಲಹಾ ಮಂಡಳಿಗೆ ಸಿಎಂ ಅಧ್ಯಕ್ಷರಾದ ವಿಚಾರಕ್ಕೆ ಪ್ರತಿಕ್ರಿಯಿಸಿದ್ರು. ಎರಡೂವರೆ ವರ್ಷದ ಅಗ್ರಿಮೆಂಟ್ ಬಗ್ಗೆ ಕಳೆದ 2 ವರ್ಷಗಳಿಂದಲೂ ಚರ್ಚೆ ಇದೆ. ಡಿಕೆಶಿ ಸಹ ಅಗ್ರಿಮೆಂಟ್‌ಗೆ ಒಪ್ಕೊಂಡಿದ್ದಾರೆ. ನಾನು 6 ತಿಂಗಳಿಂದ ಬದಲಾವಣೆ ಗ್ಯಾರಂಟಿ ಅಂತ ಹೇಳ್ತಿದ್ದೇನೆ. ಸಿದ್ದರಾಮಯ್ಯರನ್ನ ಅತಂತ್ರ ಮಾಡಲು ಕುತಂತ್ರ ಮಾಡ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯಗೆ ಗೇಟ್‌ಪಾಸ್ ನೀಡೋದು ಪಕ್ಕಾ ಅಂತ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಎಐಸಿಸಿ ಒಬಿಸಿ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ಸಿಎಂ ನೇಮಕ – ಪೇಪರ್ ಓದಿ ವಿಚಾರ ಗೊತ್ತಾಯ್ತು ಎಂದ ಸಿದ್ದರಾಮಯ್ಯ!
ಶಾಸಕರೇ ಸಿಎಂ ಬದಲಾವಣೆ ಬಗ್ಗೆ ಮಾತಾಡ್ತಿದ್ದಾರೆ. ರಾಜಣ್ಣ ಕ್ರಾಂತಿ ಆಗುತ್ತೆ ಅಂದಿದ್ದಾರೆ. ಕ್ರಾಂತಿ ಆಗೋದು ಗ್ಯಾರಂಟಿ, ಸಿದ್ದರಾಮಯ್ಯ ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ. 2 ವರ್ಷದಿಂದ ಸರ್ಕಾರ ಟೇಕ್ ಆಫ್ ಆಗಿಲ್ಲ. ಕಾಗೆ ಕೂರೋದಿಕ್ಕೂ ಕೊಂಬೆ ಬೀಳೋದಕ್ಕೂ ಸರಿಯಾಗಿದೆ. ಈಗ ಸಿದ್ದರಾಮಯ್ಯ ಎಐಸಿಸಿ (AICC) ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗೋದು ಗ್ಯಾರಂಟಿ ಆಗಿದೆ. ಸಿದ್ದರಾಮಯ್ಯ ದೆಹಲಿಗೆ ಹೋದರೆ ಇಲ್ಲಿಗೆ ಯಾರು ಬರ್ತಾರೆ? ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬರ್ತಾರೋ? ಪರಮೇಶ್ವರ್ ಬರ್ತಾರೋ? ಡಿಕೆಶಿ ಬರ್ತಾರೊ? ಖರ್ಗೆಯವರಿಗೆ ಒಂದ್ಸಲ ಸಿಎಂ ಆಗೋ ಆಸೆ ಇದೆ. ಅವರೇ ಬರ್ತಾರಾ ನೋಡಬೇಕು. ಖರ್ಗೆ ಪ್ರತೀ ಸಲ ಸಿಎಂ ಹುದ್ದೆ ಹತ್ತಿರ ಬರ್ತಾರೆ, ಕೊನೇ ಕ್ಷಣಕ್ಕೆ ಕೊಕ್ ಆಗ್ತಾರೆ. ಈಗ ಖರ್ಗೆ ಅವರೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು, ಈಗ ಖರ್ಗೆ ಬಂದರೂ ಬರಬಹುದು. ಡಿಕೆಶಿ ಈಗಾಗಲೇ ಸಿಎಂ ಪೋಸ್ಟ್ ಮೇಲೆ ಟವೆಲ್ ಹಾಕಿ ಕೂತಿದ್ದಾರೆ. ಇನ್ನೂ ಎರಡೂವರೆ ವರ್ಷ ಈ ಸರ್ಕಾರದಲ್ಲಿ ಅತಂತ್ರತೆ ಗ್ಯಾರಂಟಿ ಅಂತ ಲೇವಡಿ ಮಾಡಿದ್ದಾರೆ.
ರಾಯರೆಡ್ಡಿಗೆ ಪ್ರಶಸ್ತಿ ಕೊಡ್ತೀವಿ
ಮುಂದುವರಿದು ನಮ್ಮ ಸರ್ಕಾರ ಬಂದ ಮೇಲೆ ರಾಯರೆಡ್ಡಿಗೆ ಪ್ರಶಸ್ತಿ ಕೊಡ್ತೇವೆ. ಸರ್ಕಾರದ ಬಗ್ಗೆ ರಾಯರೆಡ್ಡಿ ಸತ್ಯ ಹೇಳಿದ್ದಾರೆ. ಹಾಗಾಗಿ ಅವರಿಗೆ ʻಸತ್ಯವಾನ್ ರಾಯರೆಡ್ಡಿʼ ಪ್ರಶಸ್ತಿ ಕೊಡ್ತೇವೆ ಅಂತ ಅಶೋಕ್ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರಿಯುವ ವಿಶ್ವಾಸವಿದೆ: ವಿಜಯೇಂದ್ರ
ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ
ಇದೇ ವೇಳೆ ಹಾಸನದಲ್ಲಿ ಸರಣಿ ಹೃದಯಾಘಾತ ಹಾಗೂ ಕಾಫಿ ಬೆಳೆಗಾರರ ಸಮಸ್ಯೆ ವಿಚಾರ ಕುರಿತು ಮಾತನಾಡಿ, ನಾಳೆ ಹಾಸನ ಭೇಟಿ ಕೊಡ್ತೇನೆ. ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟು ಮಾಹಿತಿ ಪಡೀತೇನೆ. ಸಿಎಂ ಹೃದಯಾಘಾತ ಬಗ್ಗೆ ಲಸಿಕೆ ಕಾರಣ ಅಂತ ಸುಳ್ಳು ಹೇಳಿದ್ದಾರೆ. ಸಕಲೇಶಪುರ ಹೋಗಿ ಕಾಫಿ ಬೆಳೆಗಾರರ ಭೇಟಿ ಮಾಡ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯಾಬ್ ಚಾಲಕರನ್ನೇ ಟಾರ್ಗೆಟ್ ಮಾಡಿ ಹತ್ಯೆ – 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಣಿ ಹಂತಕ ಅರೆಸ್ಟ್
ಬೆಂಗಳೂರು: ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಆಗೇ ಆಗ್ತಾರೆ. ಸಿದ್ದರಾಮಯ್ಯ (Siddaramaiah) ಬದಲಾವಣೆ ಆಗೋದು ಖಚಿತ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
ಪ್ರಯತ್ನ ವಿಫಲವಾಗಿರಬಹುದು ಆದರೆ ಪ್ರಾರ್ಥನೆ ವಿಫಲವಾಗೊಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಹಾಗೇ ಹೇಳಿರೋದ್ರಿಂದ ಅವರಿಗೆ ಸಿಎಂ ಆಸೆ ಇದೆ ಎಂದು ಅರ್ಥ ಅಲ್ವ. ಸಿದ್ದರಾಮಯ್ಯ ಬದಲಾವಣೆ ಆಗೋದು ಖಚಿತ. ಇದನ್ನ ನಾನು ಹೇಳೋದು ಅಲ್ಲ, ಕಾಂಗ್ರೆಸ್ ಶಾಸಕರೇ ಹೇಳ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಧಿಕಾರದ ಮದದಿಂದ ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀವಿ ಅಂತಿದ್ದಾರೆ: ಯಡಿಯೂರಪ್ಪ ಕಿಡಿ
ಲಾಟರಿ ಸಿಎಂ ಅಂದವರು ಯಾರು? ಇಕ್ಬಾಲ್ ಹುಸೇನ್ ಡಿಕೆಶಿ ಸಿಎಂ ಆಗ್ತಾರೆ ಅಂತಾರೆ. ಕಾಂಗ್ರೆಸ್ ಶಾಸಕರೇ ಡಿಕೆಶಿ ಸಿಎಂ ಆಗ್ತಾರೆ ಅಂತಿದ್ದಾರೆ. ನಮ್ಮನ್ನ ಟೀಕೆ ಮಾಡೋದಲ್ಲ. ನಿಮ್ಮ ಪಕ್ಷವನ್ನು ಮೊದಲು ಸರಿ ಮಾಡಿ, ಅವರಿಗೆ ಮದ್ದು ಅರೆಯಿರಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮರಾಠಿ ಕಲಿಯಲ್ಲ ಎಂದಿದ್ದಕ್ಕೆ ಉದ್ಯಮಿ ಕಚೇರಿಯೇ ಧ್ವಂಸ
ಡಿ.ಕೆ.ಶಿವಕುಮಾರ್ ದೇವಸ್ಥಾನಕ್ಕೆ ಹೋಗ್ತಿರೋದು ವರ ಪಡೆಯೋಕೆ. ಸಿಎಂ ಆಗೋ ಕಾಲ ಕೂಡಿ ಬರುತ್ತಿದೆ ಎಂದು ಅನ್ನಿಸುತ್ತೆ. ಅದಕ್ಕೆ ದೇವಸ್ಥಾನಕ್ಕೆ ಡಿಕೆಶಿ ಹೋಗ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಪಟ್ಟದಿಂದ ಇಳಿತಾರೆ. ಇದು ಗ್ಯಾರಂಟಿ ಎಂದು ಹೇಳಿದ್ದಾರೆ.
– ನಾವು ಅಧಿಕಾರಕ್ಕೆ ಬಂದ್ರೆ ಆರ್‌ಎಸ್‌ಎಸ್‌ಗೆ ಇಡಿ ರೇಡ್ ಮಾಡಿಸ್ತೇವೆ
– ಬಿಜೆಪಿ ನಾಯಕರ ಯಾರ ಮಕ್ಕಳು ಆರ್‌ಎಸ್‌ಎಸ್ ಚಡ್ಡಿ ಹಾಕಿದ್ದಾರೆ? ಎಂದ ಸಚಿವ
ಬೆಂಗಳೂರು: `ಆರ್‌ಎಸ್‌ಎಸ್ ಬ್ಯಾನ್’ (RSS Ban) ತೆಗೆದದ್ದು ತಪ್ಪಾಯ್ತು, ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದ್ರೆ ಆರ್‌ಎಸ್‌ಎಸ್‌ಗೆ ಇ.ಡಿ ರೇಡ್ ಮಾಡಿಸ್ತೇವೆ ಎಂದಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.
ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ
ಯಡಿಯೂರಪ್ಪ (BS Yediyurappa) ಮಾತಾಡಿ ಪ್ರಿಯಾಂಕ್ ಖರ್ಗೆಗೆ ಅಧಿಕಾರದ ಮದ. ಹುಚ್ಚು ಹೇಳಿಕೆ ಕೊಡ್ತಿದ್ದಾರೆ. ದೇಶದ ಕ್ಷಮೆ ಕೇಳಿ ಅಂತ ಆಗ್ರಹಿಸಿದ್ದಾರೆ. ವಿಪಕ್ಷ ನಾಯಕ ಅಶೋಕ್ (R Ashok) ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್ ಸಂಸ್ಥೆಯನ್ನು ಯಾರಾದ್ರೂ ಮುಟ್ಟಿದರೆ ಸರ್ವನಾಶ ಆಗ್ತಾರೆ. ಮುಂದಿನ ಚುನಾವಣೆಗೆ ಕಾಂಗ್ರೆಸ್ ಮುಕ್ತ ಭಾರತ ಆಗಿರುತ್ತದೆ ಅಂದಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಧಿಕಾರದ ಮದದಿಂದ ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀವಿ ಅಂತಿದ್ದಾರೆ: ಯಡಿಯೂರಪ್ಪ ಕಿಡಿ
ಇದಕ್ಕೆ ಕಲಬುರಗಿಯಲ್ಲಿ ಕೌಂಟರ್ ಕೊಟ್ಟಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ಯಾರ ಮಕ್ಕಳು ಆರ್‌ಎಸ್‌ಎಸ್ ಚಡ್ಡಿ ಹಾಕಿದ್ದಾರೆ? ಯಾರು ಶಾಖೆಗೆ ಹೋಗಿದ್ದಾರೆ..? ಅಂತ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರ ಪುತ್ರರಿಗಾಗಿ ʻಸೇಲ್ಫಿಸ್ ಇನ್ ಶಾಖಾʼ ಅಂತ ಒಂದು ಅಭಿಯಾನ ಮಾಡೋಣ, ಆಗ ಬಿಜೆಪಿ ಯಾವ ನಾಯಕರ ಮಕ್ಕಳು ಶಾಖೆಗೆ ಹೋಗಿದ್ದಾರೆ ಎಂಬುದು ಗೋತ್ತಾಗುತ್ತದೆ. ಇನ್ನೂ ಆರ್‌ಎಸ್‌ಎಸ್ ಅನ್ನು ರಾಜಕೀಯ ಪಕ್ಷ ಅಲ್ಲ ತರಬೇಡಿ ಅಂತಾ ಮುಖಂಡರು ಹೇಳುತ್ತಿದ್ದಾರೆ. ಹಾಗಿದ್ರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾಕೆ ಆರ್‌ಎಸ್‌ಎಸ್‌ನವರು 4 ಜನರ ಹೆಸರು ಕಳಿಸಿದ್ದಾರೆ? ಕರಾವಳಿಯ ಬಹುತೇಕ ಶಾಸಕರು ಆರ್‌ಎಸ್‌ಎಸ್‌ನಿಂದ ಬಂದವರಾಗಿದ್ದಾರೆ ಎಂದು ಕುಟುಕಿದ್ದಾರೆ.
ಇನ್ನೂ ಮಲ್ಲಿಕಾರ್ಜುನ ಖರ್ಗೆಯವರನ್ನ ಸಿಎಂ ಮಾಡೋಕೆ ದಲಿತ ನಾಯಕರ ರಣತಂತ್ರ ವಿಚಾರವಾಗಿ ರಿಯಾಕ್ಟ್ ಮಾಡಿದ ಪ್ರಿಯಾಂಕ್ ಖರ್ಗೆ, ಈಗಾಗಲೇ ಈ ಬಗ್ಗೆ ಖರ್ಗೆ ಸಾಹೇಬ್ರೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಅದು ಮುಗಿದ ಅಧ್ಯಾಯ ಅಂತ ಹೇಳಿದ್ದಾರೆ. ಇದನ್ನೂ ಓದಿ: ಜನಸೇವೆಗಾಗಿ 30-40 ವರ್ಷಗಳ ಕಾಲ ಬದುಕುವ ಆಶಯವಿದೆ – ಉತ್ತರಾಧಿಕಾರಿ ವದಂತಿಗೆ ತೆರೆ ಎಳೆದ ದಲೈ ಲಾಮಾ