Tag: r ashok

  • ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಭೇಟಿಯಾದ ಅಶೋಕ್

    ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಭೇಟಿಯಾದ ಅಶೋಕ್

    ಮಂಗಳೂರು: ಧರ್ಮಸ್ಥಳ ಕುರಿತು ಅಪಪ್ರಚಾರ ಖಂಡಿಸಿ ಸೋಮವಾರ ಬಿಜೆಪಿ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ನಡೆಸುತ್ತಿದೆ. ಈ ನಡುವೆಯೇ ವಿಪಕ್ಷ ನಾಯಕ ಆರ್ ಅಶೋಕ್ (R Ashok), ಧರ್ಮಸ್ಥಳ (Dharmasthala) ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು (Veerendra Heggade) ಭೇಟಿಯಾಗಿದ್ದಾರೆ.

    ಧರ್ಮಸ್ಥಳದ ಬುರುಡೆ ರಹಸ್ಯದ ತನಿಖೆ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಈ ನಡುವೆ ಬಿಜೆಪಿ ಧರ್ಮಸ್ಥಳದಲ್ಲಿ ಲಕ್ಷ ಜನ ಸೇರಿಸಿ ಸಮಾವೇಶಕ್ಕೆ ಸಿದ್ಧತೆ ನಡೆಸಿದೆ. ಎಸ್‌ಐಟಿ ತನಿಖೆ ಷಡ್ಯಂತ್ರದಿಂದ ಕೂಡಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಎನ್‌ಐಎ ತನಿಖೆಗೆ ಒತ್ತಾಯಿಸಲಿದೆ. ಧರ್ಮಸ್ಥಳ ಕ್ಷೇತ್ರದಲ್ಲಿ ನಿಂತು ಬಿಜೆಪಿ ಬಹಿರಂಗ ರಣಕಹಳೆ ಮೊಳಗಿಸಲಿದೆ. ಇದನ್ನೂ ಓದಿ: ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ

    ಧರ್ಮಸ್ಥಳದ ಬುರುಡೆ ರಹಸ್ಯವನ್ನ ಎಸ್‌ಐಟಿ ಭೇದಿಸಲು ಶುರು ಮಾಡಿ ಒಂದೂವರೆ ತಿಂಗಳಾಗುತ್ತಿದೆ. ಆರಂಭದಲ್ಲಿ ಸೈಲೆಂಟ್ ಆಗಿದ್ದ ಬಿಜೆಪಿ, ಇದೆಲ್ಲ ಬುರುಡೆ ಕಥೆ ಎಂದು ಹತ್ತು ದಿನದಲ್ಲಿ ನಿರ್ಧರಿಸಿತು. ಬಿಜೆಪಿ ನಾಯಕ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿಧಾನಸೌಧದಲ್ಲಿ ಇದೊಂದು ಷಡ್ಯಂತ್ರ ಎಂಬ ಶಂಖನಾದವನ್ನು ಮೊಳಗಿಸಿದ್ದರು. ಅಲ್ಲಿಂದ ಇವತ್ತಿನ ತನಕ ಬಿಜೆಪಿ ಧರ್ಮಸ್ಥಳ ಪ್ರಕರಣವನ್ನು ರಾಜ್ಯ ಸರ್ಕಾರದ ವಿರುದ್ಧದ ಅಸ್ತ್ರವೆಂದು ಪರಿಗಣಿಸಿದೆ. ಇದನ್ನೂ ಓದಿ: ನಾಳೆ ಎನ್‌ಐಎ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ಧರ್ಮಸ್ಥಳ ಚಲೋ, ಜಾಗೃತಿ ಸಮಾವೇಶ

    ಧರ್ಮಸ್ಥಳ ದೇವಸ್ಥಾನದ ವಠಾರದಲ್ಲಿ ಸೋಮವಾರ ಬಿಜೆಪಿ ಬೃಹತ್ ಸಮಾವೇಶ ನಡೆಸುತ್ತದೆ. ಒಂದು ಲಕ್ಷಕ್ಕಿಂತ ಹೆಚ್ಚು ಜನ ಕ್ಷೇತ್ರಕ್ಕೆ ಭಕ್ತರು ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಧರ್ಮ ಜಾಗರಣೆಯ ನೇತೃತ್ವ ವಹಿಸಿದ್ದಾರೆ. ಸಮಾವೇಶ ಮೂಲಕ ಎನ್‌ಐಎ ತನಿಖೆಗೆ ಒತ್ತಾಯಿಸಲಾಗುತ್ತದೆ. ಇದನ್ನೂ ಓದಿ: ಡಿಕೆಶಿ ಒಂದು ಕಾಲು ಬಿಜೆಪಿಯಲ್ಲಿ ಇಟ್ಟಿದ್ದಾರೆ: ಯತ್ನಾಳ್ ಹೊಸ ಬಾಂಬ್

    ಷಡ್ಯಂತ್ರಕ್ಕೆ ಹಣದ ಹೊಳೆ ಹರಿದು ಬಂದ ಆರೋಪವಿದೆ. ಇ.ಡಿ ಈ ಬಗ್ಗೆ ಗಮನ ಹರಿಸಲು ಒತ್ತಾಯಿಸಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಈಗಾಗಲೇ ಭಕ್ತರು ಕ್ಷೇತ್ರಕ್ಕೆ ಬಂದಿದ್ದಾರೆ. ದೇವರ ದರ್ಶನ ನಡೆಸಿ ಅನ್ನಪ್ರಸಾದ ಸ್ವೀಕರಿಸಿ ಸಮಾವೇಶದಲ್ಲಿ ಜನ ಭಾಗಿಯಾಗಲಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿಯವರು ಧರ್ಮಸ್ಥಳ ಬದಲು ದೆಹಲಿಯಲ್ಲಿ ಹೋರಾಟ ಮಾಡಲಿ: ಡಿಕೆಶಿ

  • ಧರ್ಮಸ್ಥಳ ಬಳಿಕ ಚಾಮುಂಡೇಶ್ವರಿ ಚಲೋ: ಅಶೋಕ್

    ಧರ್ಮಸ್ಥಳ ಬಳಿಕ ಚಾಮುಂಡೇಶ್ವರಿ ಚಲೋ: ಅಶೋಕ್

    ಬೆಂಗಳೂರು/ಮೈಸೂರು: ಚಾಮುಂಡೇಶ್ವರಿ ದೇವಾಲಯದ (Chamundeshwari Temple) ಪಾವಿತ್ರ‍್ಯತೆಗೆ ಧಕ್ಕೆಯಾದರೆ ‘ಧರ್ಮಸ್ಥಳ ಚಲೋ’ ಮಾದರಿಯಲ್ಲಿ ‘ಚಾಮುಂಡೇಶ್ವರಿ ಚಲೋ’ (Chamundeshwari Chalo) ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಚಾಮುಂಡಿ ಬೆಟ್ಟದ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರಕ್ಕೆ ಚಾಮುಂಡೇಶ್ವರಿ ತಾಯಿ ಒಳ್ಳೆಯ ಬುದ್ಧಿಯನ್ನು ನೀಡಲಿ. ಹಿಂದೂಗಳ ಶ್ರದ್ಧಾ ಕೇಂದ್ರವನ್ನು ಟಾರ್ಗೆಟ್ ಮಾಡುವ ಮನಸ್ಥಿತಿಯನ್ನು ನಿವಾರಿಸಲಿ. ಹಿಂದೂಗಳ ಧಾರ್ಮಿಕ ಕೇಂದ್ರ ಯಾವಾಗಲೂ ರಕ್ಷಣೆಯಾಗಬೇಕು, ಪವಿತ್ರವಾಗಿ ಇರಬೇಕು. ಹಿಂದೂಗಳ ಭಾವನೆಗೆ ಧಕ್ಕೆಯಾಗಬಾರದು ಎಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ಇದನ್ನೂ ಓದಿ: ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ಅಪಮಾನ, ಅಪಪ್ರಚಾರವನ್ನು ಬಿಜೆಪಿ ಸಹಿಸುವುದಿಲ್ಲ: ಕ್ಯಾ.ಬ್ರಿಜೇಶ್ ಚೌಟ

    ಮೈಸೂರಿನ ಒಡೆಯರ್ ರಾಜವಂಶಸ್ಥರು ನೂರಾರು ವರ್ಷಗಳಿಂದಲೂ ದಸರಾ ಆಚರಿಸಿಕೊಂಡು ಬಂದಿದ್ದಾರೆ. ಇಂತಹ ಪವಿತ್ರವಾದ ಹಬ್ಬವನ್ನು ಕಾಂಗ್ರೆಸ್ ಸರ್ಕಾರ ಅಪವಿತ್ರ ಮಾಡಬಾರದು. ಇದು ಹಿಂದೂಗಳ ದೇವಾಲಯ ಅಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅಂದಮೇಲೆ ಇದು ಯಾರದ್ದು? ಇವರಿಗೆ ಧೈರ್ಯವಿದ್ದರೆ ಮಸೀದಿ ಮುಂದೆ ಹೋಗಿ ಇದು ಮುಸ್ಲಿಮರದ್ದಲ್ಲ ಎಂದು ಹೇಳಲಿ. ಶಬರಿಮಲೆ ಅಯ್ಯಪ್ಪ, ತಿರುಪತಿ ನಂತರ ಧರ್ಮಸ್ಥಳ ಹಾಗೂ ಚಾಮುಂಡೇಶ್ವರಿ ದೇವಾಲಯಗಳನ್ನು ಗುರಿ ಮಾಡಲಾಗಿದೆ ಎಂದು ದೂರಿದರು. ಇದನ್ನೂ ಓದಿ: ಚಿನ್ನಯ್ಯನನ್ನು ಬಾಡಿಗಾರ್ಡ್‌ ಎಂದಿದ್ರು, ದೆಹಲಿಗೆ ಅವ್ರು ಕರೆದುಕೊಂಡು ಹೋಗಿದ್ರು: ಸುಜಾತ ಭಟ್‌

    ಚುನಾವಣೆ ಸಮಯದಲ್ಲಿ ಮುಸ್ಲಿಮರ ಮೂಗಿಗೆ ತುಪ್ಪ ಸವರಲಿ. ಅದನ್ನು ಬಿಟ್ಟು ಈ ಸಮಯದಲ್ಲಿ ಓಲೈಕೆ ಮಾಡಲಾಗುತ್ತಿದೆ. ಧರ್ಮಸ್ಥಳಕ್ಕೆ ನಾವೆಲ್ಲರೂ ಹೋಗಿ ಧರ್ಮಸ್ಥಳ ಚಲೋ ಮಾಡಲಿದ್ದೇವೆ. ಚಾಮುಂಡೇಶ್ವರಿ ದೇವಾಲಯಕ್ಕೆ ಧಕ್ಕೆಯಾದರೆ ಆಗ ಚಾಮುಂಡೇಶ್ವರಿ ಚಲೋ ಎಂದು ಹೋರಾಟ ಮಾಡುತ್ತೇವೆ. ಅಯೋಧ್ಯೆಯನ್ನು ಉಳಿಸಲು 500 ವರ್ಷ ಹೋರಾಡಿದ್ದೇವೆ. ಟೂಲ್ ಕಿಟ್ ಸಂಸ್ಕೃತಿ ಮುಂದುವರಿಸಿದರೆ ಕಾಂಗ್ರೆಸ್‌ನ ಅವನತಿ ಆರಂಭವಾಗಲಿದೆ ಎಂದರು. ಇದನ್ನೂ ಓದಿ: ಭಾರತ & ಚೀನಾ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ: ಕ್ಸಿ ಜಿನ್‌ಪಿಂಗ್‌

     

  • ಡಿಕೆಶಿ ರಾಜಕಾರಣಕ್ಕೆ ಹೊಸಬರಲ್ಲ, ಅವರಿಗೆ ಎಲ್ಲಾ ರೀತಿಯ ರಾಜಕೀಯ ಜ್ಞಾನವಿದೆ: ಪರಮೇಶ್ವರ್‌

    ಡಿಕೆಶಿ ರಾಜಕಾರಣಕ್ಕೆ ಹೊಸಬರಲ್ಲ, ಅವರಿಗೆ ಎಲ್ಲಾ ರೀತಿಯ ರಾಜಕೀಯ ಜ್ಞಾನವಿದೆ: ಪರಮೇಶ್ವರ್‌

    ಬೆಂಗಳೂರು: ಡಿ.ಕೆ ಶಿವಕುಮಾರ್ (D.K Shivakumar) ರಾಜಕಾರಣಕ್ಕೆ ಹೊಸಬರಲ್ಲ. ಅವರಿಗೆ ಎಲ್ಲಾ ರೀತಿಯ ರಾಜಕೀಯ ಜ್ಞಾನ ಇದೆ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಬಿಹಾರದಲ್ಲಿ ರಾಹುಲ್ ಗಾಂಧಿ ಯಾತ್ರೆಯಲ್ಲಿ ಭಾಗಿಯಾದ ವಿಚಾರ ಮತ್ತು ಡಿ.ಕೆ ಶಿವಕುಮಾರ್ ಅವರನ್ನ ಬಿಟ್ಟು ಸಿಎಂ ಟೀಂ ಹೋಗಿದೆ ಎಂಬ ವಿಪಕ್ಷಗಳ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಬಿಹಾರದಲ್ಲಿ ರಾಹುಲ್ ಗಾಂಧಿ ಯಾತ್ರೆ ನಡೆಯುತ್ತಿದೆ. ಅದಕ್ಕಾಗಿ ನಾವು, ಸಿಎಂ ಎಲ್ಲಾ ಹೋಗಿದ್ವಿ. ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷರು. ಅವರು ಡಿಸಿಎಂ ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮ ಪಕ್ಷದ ಅಧ್ಯಕ್ಷರು. ಅವರದ್ದೇ ಆದ ಗೌರವ, ಘನತೆ ಪಕ್ಷಕ್ಕೆ ಇರೋ ಅಂತಹದ್ದು ಇದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಹೆಸರು: ಡಿಕೆಶಿ ಭರವಸೆ

    ಡಿ.ಕೆ ಶಿವಕುಮಾರ್ ರಾಜಕಾರಣಕ್ಕೆ ಹೊಸಬರು ಅಲ್ಲ. ಅವರು ಸಮರ್ಥರು ಇದ್ದಾರೆ. ಎಲ್ಲಾ ರೀತಿಯಲ್ಲೂ ಅವರಿಗೆ ರಾಜಕೀಯ ಜ್ಞಾನ ಇದೆ. ಅವರನ್ನು ಆ ರೀತಿ ಐಸೋಲೇಶನ್ ಮಾಡಿದ್ರು ಅಂತೆಲ್ಲಾ ಮಾತಾಡೋದು ಸರಿಯಿಲ್ಲ. ಇನ್ನೂ, ವಿಪಕ್ಷ ನಾಯಕ ಅಶೋಕ್ (R.Ashok) ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋರ್ಟ್‌ಗೆ ಹಾಜರಾಗಲು ಮತ್ತೆ ಸಮಯ ಕೇಳಿದ ಪ್ರಭು ಚೌಹಾಣ್ – 1 ಲಕ್ಷ ದಂಡ ವಿಧಿಸಿದ ಕಲಬುರಗಿ ಪೀಠ

  • 1991ರ ಕೊಪ್ಪಳ ಲೋಕಸಭೆಯಲ್ಲಿ ಮೋಸದ ಸೋಲು ಬಗ್ಗೆ ಸಿಎಂ ಹೇಳಿಕೆ ಸಂಚಲನ; ವೋಟ್‌ ಚೋರಿ ಪಾಲಿಟಿಕ್ಸ್‌ನಲ್ಲಿ ಬಿಜೆಪಿಗೆ ಬ್ರಹ್ಮಾಸ್ತ್ರ

    1991ರ ಕೊಪ್ಪಳ ಲೋಕಸಭೆಯಲ್ಲಿ ಮೋಸದ ಸೋಲು ಬಗ್ಗೆ ಸಿಎಂ ಹೇಳಿಕೆ ಸಂಚಲನ; ವೋಟ್‌ ಚೋರಿ ಪಾಲಿಟಿಕ್ಸ್‌ನಲ್ಲಿ ಬಿಜೆಪಿಗೆ ಬ್ರಹ್ಮಾಸ್ತ್ರ

    ಮತಗಳ್ಳತನ ಆರೋಪ ಪಾಲಿಟಿಕ್ಸ್‌ನಲ್ಲೀಗ ಬಿಗ್ ಟ್ವಿಸ್ಟ್. ರಾಹುಲ್ ಗಾಂಧಿಯವರ (Rahul Gandhi) ಮತ ಕಳವು ಆರೋಪದ ವಿರುದ್ಧ ಬಿಜೆಪಿಗೆ (BJP) ಸಿಕ್ಕಿದೆ ಬ್ರಹ್ಮಾಸ್ತ್ರ.

    ಹೌದು, ಖುದ್ದು ಸಿದ್ದರಾಮಯ್ಯ (Siddaramaiah) ಅವರೇ, 1991ರ ಕೊಪ್ಪಳ ಲೋಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ತಮಗೆ ಕಾಂಗ್ರೆಸ್ ಅಭ್ಯರ್ಥಿ ಮೋಸದಿಂದ ಸೋಲಿಸಿದ್ದನ್ನು ಹೇಳಿಕೊಂಡಿದ್ದಾರೆ. ಅದಕ್ಕಾಗಿ ಕೈ ಅಭ್ಯರ್ಥಿ ವಿರುದ್ಧವೂ ಕೇಸ್ ಹಾಕಿದ್ದಾಗಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ನಿನ್ನೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಈಗ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಸೃಷ್ಟಿಸಿದೆ. ಇದನ್ನೇ ಕೇಸರಿ ಪಡೆ ಕಾಂಗ್ರೆಸ್ ವಿರುದ್ಧ ವೋಟ್ ಚೋರಿ ಆರೋಪಕ್ಕೆ ತಿರುಗು ಬಾಣವಾಗಿ ಪ್ರಯೋಗಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ‘ಮತಗಳ್ಳತನ’ ಬಯಲು ಮಾಡಿದ ಸಿದ್ದರಾಮಯ್ಯ; ರಾಜಣ್ಣನಂತೆ ವಜಾ ಮಾಡ್ತೀರಾ – ರಾಗಾಗೆ ಅಶೋಕ್ ಸವಾಲ್

    ಈ ಸಂಬಂಧ ಬಿಜೆಪಿ ತನ್ನ ಪಕ್ಷದ ಎಕ್ಸ್ ಖಾತೆಯಲ್ಲಿ ಬಿಹಾರ ಮತ ಅಧಿಕಾರ ಯಾತ್ರೆಯಲ್ಲಿ ಪಾಲ್ಗೊಂಡ ಸಿಎಂಗೆ ಟಾಂಗ್ ಕೊಟ್ಟಿದೆ. ಸಿದ್ದರಾಮಯ್ಯ ಹೇಳಿಕೆಯ ವಿಡಿಯೋ ಪೋಸ್ಟ್ ಮಾಡಿ, ನಿಮ್ಮ ಅಂದಿನ ಸೋಲಿಗೆ ಕಾಂಗ್ರೆಸ್ ಕಾರಣ ಅಂತ ನೀವೇ ಹೇಳಿದ್ದೀರಿ. ಅಲ್ಲಿಗೆ ಕಾಂಗ್ರೆಸ್ ನಿಂದ ವೋಟ್ ಚೋರಿ ಆಗಿದೆ ಅಂತ ನೀವೇ ಒಪ್ಪಿಕೊಂಡಂತೆ ಎಂದು ಬಿಜೆಪಿ ಟಕ್ಕರ್ ನೀಡಿದೆ. ಇದನ್ನೂ ಓದಿ: ಸಂವಿಧಾನ ಬದ್ಧವಾಗಿದ್ದರೆ ಯಾರು ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು: ಯು.ಟಿ.ಖಾದರ್

    ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ್ ಅನ್ವರಿ ಅವರು ನಿಮ್ಮನ್ನು ಸೋಲಿಸಿದ್ದು ವೋಟ್‌ ಚೋರಿ ಮೂಲಕ ಎಂಬುದನ್ನು ನೀವೇ ತುಂಬಿದ ಸಭೆಯಲ್ಲಿ ಒಪ್ಪಿಕೊಂಡಿದ್ದೀರಿ. ಈಗ ಅದ್ಯಾವ ಮುಖ ಇಟ್ಟುಕೊಂಡು ಬಿಹಾರದಲ್ಲಿ ಲೂಸರ್ ರಾಹುಲ್ ಗಾಂಧಿ ನಡೆಸುತ್ತಿರುವ ಮತ ಅಧಿಕಾರ ಯಾತ್ರೆಯಲ್ಲಿ ಭಾಗಿಯಾಗುತ್ತೀರಿ ಎಂಬುದನ್ನು ತಿಳಿಸುವಿರಾ? ಎಂದು ಬಿಜೆಪಿ ಕೆಣಕಿದೆ.

    ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಕಾಂಗ್ರೆಸ್ ಮತಗಳ್ಳತನ್ನು ಸಿದ್ದರಾಮಯ್ಯ ಅವರೇ ಬಯಲು ಮಾಡಿದ್ದಾರೆ. ಕೆ.ಎನ್ ರಾಜಣ್ಣ ಅವರನ್ನ ಮತಗಳವು ವಿರುದ್ಧ ಮಾತಾಡಿದ್ರು ಅಂತ ವಜಾ ಮಾಡಿದಂತೆ ಸಿದ್ದರಾಮಯ್ಯ ಅವರನ್ನೂ ರಾಹುಲ್ ಗಾಂಧಿ ವಜಾ ಮಾಡುವ ಧೈರ್ಯ ಪ್ರದರ್ಶಿಸ್ತಾರಾ? ಅಂತ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆ ಶ್ರೇಷ್ಠವಾದದ್ದು: ಬಾನು ಮುಷ್ತಾಕ್‌ರಿಂದ ಸ್ಪಷ್ಟೀಕರಣ ಕೇಳಿದ ಯದುವೀರ್‌

    ದೇಶದಲ್ಲಿ ಮತ ಕಳ್ಳತನ, ಚುನಾವಣಾ ಅಕ್ರಮದಪಿತಾಮಹ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬ ಅನ್ನೋದು ಸಾಬೀತಾಗಿದೆ ಅಂತ ಅಶೋಕ್ ಕೌಂಟರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ಅಸ್ತು – ಟಿಕೆಟ್ ಬುಕಿಂಗ್ ಆರಂಭ

  • ಕಾಂಗ್ರೆಸ್ ಪಕ್ಷದ ‘ಮತಗಳ್ಳತನ’ ಬಯಲು ಮಾಡಿದ ಸಿದ್ದರಾಮಯ್ಯ; ರಾಜಣ್ಣನಂತೆ ವಜಾ ಮಾಡ್ತೀರಾ – ರಾಗಾಗೆ ಅಶೋಕ್ ಸವಾಲ್

    ಕಾಂಗ್ರೆಸ್ ಪಕ್ಷದ ‘ಮತಗಳ್ಳತನ’ ಬಯಲು ಮಾಡಿದ ಸಿದ್ದರಾಮಯ್ಯ; ರಾಜಣ್ಣನಂತೆ ವಜಾ ಮಾಡ್ತೀರಾ – ರಾಗಾಗೆ ಅಶೋಕ್ ಸವಾಲ್

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಮತಗಳ್ಳತನವನ್ನು ಸಿಎಂ ಸಿದ್ದರಾಮಯ್ಯ (Siddaramaiah) ಬಯಲು ಮಾಡಿದ್ದಾರೆ. ಈಗ ರಾಜಣ್ಣ ಅವರ ಹಾಗೆ ಸಿದ್ದರಾಮಯ್ಯರನ್ನೂ ವಜಾ ಮಾಡ್ತೀರಾ ಎಂದು ರಾಹುಲ್ ಗಾಂಧಿಗೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸವಾಲು ಹಾಕಿದ್ದಾರೆ.

    ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅಶೋಕ್, 1991ರಲ್ಲಿ ಮಾನ್ಯ ಸಿದ್ದರಾಮಯ್ಯನವರು ಲೋಕಸಭೆಗೆ ಸ್ಪರ್ಧಿಸಿದ್ದರು. ಎಲ್ಲಿಂದ? – ಕೊಪ್ಪಳ ಲೋಕಸಭಾ ಕ್ಷೇತ್ರದಿಂದ, ಯಾವ ಪಕ್ಷದಿಂದ? – ಜನತಾದಳ ಪಕ್ಷದಿಂದ. ಸಿದ್ದರಾಮಯ್ಯನವರನ್ನ ಮೋಸದಿಂದ ಸೋಲಿಸಿದ್ದು ಯಾರು? – ಕಾಂಗ್ರೆಸ್ ಪಕ್ಷ ಎಂದು ಅಶೋಕ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಮತಗಳ್ಳತನ ವಿರುದ್ಧ ಬಿಹಾರದಿಂದಲೇ ನೇರ ಹೋರಾಟ: ರಾಹುಲ್ ಗಾಂಧಿ ಘೋಷಣೆ

    ‘ಮತಗಳ್ಳತನ’ದ ಎಂಬ ಕಪೋಲಕಲ್ಪಿತ ನಾಟಕದ ಬಗ್ಗೆ ಸತ್ಯ ನುಡಿದಿದ್ದ ಮಾಜಿ ಸಚಿವ ರಾಜಣ್ಣ ಅವರನ್ನು ಅತ್ಯಂತ ಅಗೌರವವಾಗಿ ಸಂಪುಟದಿಂದ ವಜಾ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ, ಈಗ ಕಾಂಗ್ರೆಸ್ ಪಕ್ಷದ ಮೋಸವನ್ನು ಬಯಲು ಮಾಡಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ, ಕಾಂಗ್ರೆಸ್ ಪಕ್ಷದಿಂದ ವಜಾ ಮಾಡುವ ಧೈರ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ.

    ಅಥವಾ ಕಾಂಗ್ರೆಸ್ ಪಕ್ಷದ ಪ್ರತಾಪ, ಶಿಸ್ತು ಕ್ರಮ ಏನಿದ್ದರೂ ದಲಿತ ನಾಯಕರ ಮೇಲೆ ಪ್ರಯೋಗ ಮಾಡಲು ಮಾತ್ರ ಸೀಮಿತನಾ? 2018 ರಲ್ಲಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಹೇಗೆ ಮತ ಖರೀದಿ ಮೂಲಕ ಗೆದ್ದರು ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರು ಈಗಾಗಲೇ ಬಯಲು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತಗಳ್ಳತನ ಆರೋಪ: ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

    ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯ ಇದ್ದ ಕಾಲದಲ್ಲಿ, ‘ಆಗೆಲ್ಲಾ ಇವಿಎಂ ಇರಲಿಲ್ಲ, ಒಬ್ರೋ ಇಬ್ರೋ ಕೂತ್ಕೊಂಡು ಒತ್ತು ಬುಡ್ರೋ ಅನ್ನೋರು’ ಎಂದು ಕಾಂಗ್ರೆಸ್ ಪಕ್ಷ 60 ವರ್ಷ ಹೇಗೆ ಚುನಾವಣೆ ಗೆಲ್ಲುತ್ತಿತ್ತು ಎನ್ನುವುದನ್ನ ಗೃಹ ಸಚಿವ ಪರಮೇಶ್ವರ್ ಅವರು ಲೀಲಾಜಾಲವಾಗಿ ವಿವರಿಸಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

    ನಮ್ಮ ದೇಶದಲ್ಲಿ ಮತಗಳ್ಳತನ, ಚುನಾವಣಾ ಅಕ್ರಮದ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮತ್ತು ನೆಹರೂ-ಗಾಂಧಿ ಕುಟುಂಬ. ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡಿದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಎಂದು ಟಾಂಗ್ ಕೊಟ್ಟಿದ್ದಾರೆ.

  • ಚಾಮುಂಡೇಶ್ವರಿ ದೇವಸ್ಥಾನ ಎಲ್ಲರ ಆಸ್ತಿ ಅನ್ನೋದು ಸರಿ ಅಲ್ಲ, ಡಿಕೆಶಿ ಕ್ಷಮೆ ಕೇಳ್ಬೇಕು: ಆರ್.ಅಶೋಕ್

    ಚಾಮುಂಡೇಶ್ವರಿ ದೇವಸ್ಥಾನ ಎಲ್ಲರ ಆಸ್ತಿ ಅನ್ನೋದು ಸರಿ ಅಲ್ಲ, ಡಿಕೆಶಿ ಕ್ಷಮೆ ಕೇಳ್ಬೇಕು: ಆರ್.ಅಶೋಕ್

    ಬೆಂಗಳೂರು: ಚಾಮುಂಡೇಶ್ವರಿ ದೇವಸ್ಥಾನ (Chamundeshwari Temple) ಎಲ್ಲರ ಆಸ್ತಿ ಎಂಬ ಹೇಳಿಕೆ ಸರಿ ಇಲ್ಲ. ಡಿಕೆಶಿ ರಾಜ್ಯದ ಜನರ ಕ್ಷಮೆ ಕೇಳಬೇಕು, ಕೊಟ್ಟ ಹೇಳಿಕೆ ವಾಪಸ್ ಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok)  ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿ, ಮಸೀದಿಗಳನ್ನ ಸಾರ್ವಜನಿಕ ಆಸ್ತಿ ಅಂತಾ ಘೋಷಣೆ ಮಾಡ್ತೀರಾ..!? ನನ್ನದು ನನ್ನದೇ, ನಿನ್ನದು ನನ್ನದೇ ಅನ್ನೋ ಸ್ಕೀಂ ಅವರದ್ದು. ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಡಿಕೆಶಿ. ರಾಜ್ಯದ ಜನ ದಂಗೆ ಏಳ್ತಾರೆ, ಡಿಕೆಶಿ ಕ್ಷಮೆ ಕೇಳಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಾನು ಮುಷ್ತಾಕ್‌ಗೆ ದಸರಾ ಆಹ್ವಾನ – ಉದ್ದೇಶವೋ, ದುರುದ್ದೇಶವೋ ಬಹಿರಂಗಪಡಿಸಲಿ – ವಿಜಯೇಂದ್ರ

    ರಾಜ್ಯ ಸರ್ಕಾರದ ಪದೇ ಪದೇ ಹಿಂದೂಗಳ ಭಾವನಕ್ಕೆ ಧಕ್ಕೆ ತರುತ್ತಿದೆ. ಕಾಂಗ್ರೆಸ್‌ನ (Congress) ರಾಜ್ಯಸಭೆ ಸದಸ್ಯರ ಬೆಂಬಲಿಗರಿಂದ ಪಾಕಿಸ್ತಾನ ಜಿಂದಾಬಾದ್ ಆಯ್ತು. ಅದನ್ನೇ ಒಂದು ಕಡೆ ಸರ್ಕಾರ ಮುಚ್ಚಿ ಹಾಕಿಬಿಡ್ತು. ಚಾಮುಂಡೇಶ್ವರಿ ದೇವಸ್ಥಾನವನ್ನು ಹಿಂದೂಗಳ ಸ್ವತ್ತಾ ಎಂದಿದ್ದಾರೆ..? ಹಾಗಿದ್ರೆ ಯಾವಾಗ ಇದನ್ನು ವಕ್ಫ್ ಬೋರ್ಡ್‌ಗೆ ಬರೆಯುತ್ತೀರಾ..? ಡಿಕೆಶಿ ಅವರೇ ನಿಮ್ಮನ್ನು ಏನಂತ ಕರಿಯಬೇಕು..? ರಾಜ್ಯ ಸರ್ಕಾರ ಮತ್ತೆ ಮುಸ್ಲಿಂ ತುಷ್ಟೀಕರಣ ಮಾಡ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಮಂಡ್ಯ | ಸೆ.25ರಿಂದ ನಾಲ್ಕು ದಿನ ಶ್ರೀರಂಗಪಟ್ಟಣ ದಸರಾ

  • ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು: ಡಿಕೆಶಿಗೆ ಆರ್.ಅಶೋಕ್ ತಿರುಗೇಟು

    ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು: ಡಿಕೆಶಿಗೆ ಆರ್.ಅಶೋಕ್ ತಿರುಗೇಟು

    – ಚಾಮುಂಡಿಯನ್ನು ಒಪ್ಪುವವರು ಮಾತ್ರ ದಸರಾ ಉದ್ಘಾಟಿಸಬೇಕು ಅಂತ ಕಾನೂನು ತರ್ತೀವಿ: ವಿಪಕ್ಷ ನಾಯಕ

    ಬೆಂಗಳೂರು: ಮೈಸೂರು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಸ್ವತ್ತಲ್ಲ ಎನ್ನುವ ಡಿಸಿಎಂ ಡಿಕೆಶಿ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿ ಕಾರಿಕಾರಿದ್ದಾರೆ.

    ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು. ಮುಸ್ಲಿಮರ ಸ್ವತ್ತಲ್ಲ. ನೂರು ಡಿಕೆಶಿ ಬಂದರೂ ಏನು ಮಾಡೋಕೆ ಆಗಲ್ಲ. ಇದು ಹಿಂದೂಗಳ ಸ್ವತ್ತೆ. ಧರ್ಮಸ್ಥಳ, ತಿರುಪತಿ, ಎಲ್ಲವೂ ಹಿಂದೂಗಳ ಸ್ವತ್ತೆ. ಇದನ್ನ ಮುಟ್ಟಿದ್ರೆ ದಂಗೆ ಆಗುತ್ತೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ: ಡಿ.ಕೆ.ಶಿವಕುಮಾರ್

    ಎಲ್ಲಾ ಧರ್ಮವನ್ನ ಒಪ್ಪುತ್ತೇನೆ ಅನ್ನೋದು ಕಾಂಗ್ರೆಸ್‌ಗೆ ಅರ್ಥ ಆಗಲ್ಲ. ಇದನ್ನ ಒಪ್ಪಲ್ಲ. ನಮಸ್ತೆ ಇಟಲಿ ಅಂತ ಹೇಳಿದ್ರೆ ಡಿಕೆಶಿಗೆ ಅವಾರ್ಡ್ ಕೊಟ್ಟಿರುವರು. ಈಗ ಅವರನ್ನ ಎಲ್ಲರೂ ವಿರೋಧಿಸುತ್ತಿದ್ದಾರೆ. ಅವರ ಮೇಲೆ ಮುಗಿ ಬೀಳುತ್ತಿದ್ದಾರೆ. ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಮುಂದೆ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ. ಕ್ಷಮೆ ಕೇಳೋದು ಯಾಕೆ? ಭಾರತಮಾತೆಗೆ ಅಥವಾ ಕನ್ನಡ ಮಾತೆ, ಮುಸ್ಲಿಮರಿಗೆ ಬೈಯ್ದಿದ್ದಾರಾ? ಆಶ್ಚರ್ಯ ಆಗ್ತಿದೆ. ತಪ್ಪು ಬಯ್ದಿದ್ದರೆ ಕ್ಷಮೆ ಕೇಳೋದು ಸರಿ. ಭಾರತ ಮಾತೆಗೆ ನಮಸ್ಕಾರ ಹೇಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಬಾನು ಮುಸ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ ಕುರಿತು ಮಾತನಾಡಿ, ಮುಸ್ಲಿಮರೇ ಮೂರ್ತಿ ಪೂಜೆ ಮಾಡಲ್ಲ ಅಂತ ಹೇಳಿದ್ದಾರೆ. ಯಾರೇ ಹೇಳಿದ್ರು ಮೂರ್ತಿ ಪೂಜೆ ಅದು ಅಪರಾಧ ಅಂತಾರೆ. ಚಾಮುಂಡೇಶ್ವರಿ ಪೂಜೆ ಮಾಡಿ ದಸರಾ ಹೊರಡುವುದು. ಹೂ ಹಾಕಿ ಪೂಜೆ ಮಾಡಿ ಹೊರಡಬೇಕು. ಅವರ ಧರ್ಮದಲ್ಲಿ ಇದಕ್ಕೆ ಅವಕಾಶ ಇಲ್ಲ. ಕಾಂಗ್ರೆಸ್‌ಗೆ ಮುಸ್ಲಿಂ ವೋಟ್ ಬಿಟ್ಟರೆ ತಲೆಯಲ್ಲಿ ಬೇರೆನೂ ಇಲ್ಲ. ಹಿಂದೂಗಳಲ್ಲಿ ಯೋಗ್ಯತೆ ಇಲ್ವಾ? ದಸರಾ ಉದ್ಘಾಟನೆಗೆ ಹಿಂದೂಗಳು ಇರಲಿಲ್ವಾ? ನಮ್ಮ ಸರ್ಕಾರ ಬಂದಾಗ ಇದಕ್ಕೆ ಒಂದು ಕಾನೂನು ತರ್ತೀವಿ. ಚಾಮುಂಡಿಯನ್ನ ಯಾರು ಒಪ್ಪುವರೋ ಅವರು ಮಾತ್ರ ಉದ್ಘಾಟನೆ ಮಾಡಬೇಕು ಅನ್ನೋ ಕಾನೂನು ತರುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಕೆ ಶಿವಕುಮಾರ್‌ ನೇಮಕ

    ಮೈಸೂರಿನಲ್ಲಿ ಪರಮೇಶ್ವರೋತ್ಸವ ವಿಚಾರವಾಗಿ ಮಾತನಾಡಿ, ಪರಮೇಶ್ವರ್ ಹಿರಿಯರು. ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಪರಮೇಶ್ವರ್ ಯಾವತ್ತೋ ಮುಖ್ಯಮಂತ್ರಿ ಆಗಬೇಕಿತ್ತು. ಕಾಂಗ್ರೆಸ್ ಅವರನ್ನ ಕರಿಬೇವಿನ ಥರ ಬಳಕೆ ಮಾಡಿಕೊಳ್ಳುತ್ತಿದೆ. ಯಾವಾಗ ಬೇಕೋ ಅವಾಗ ಬಳಕೆ ಮಾಡಿಕೊಳ್ಳುತ್ತಾರೆ. ಊಟ ಮಾಡುವಾಗ ಎತ್ತಿ ಪಕ್ಕಕ್ಕೆ ಇಡುತ್ತಾರೆ. ಅವರು ಒಳ್ಳೆಯವರು ಎಂದು ಹೇಳಿದ್ದಾರೆ.

  • ಧರ್ಮಸ್ಥಳ ಷಡ್ಯಂತ್ರ ಕೇಸನ್ನ ರಾಜ್ಯ ಸರ್ಕಾರವೇ NIA ಗೆ ಕೊಡಬೇಕು: ಆರ್‌.ಅಶೋಕ್‌ ಆಗ್ರಹ

    ಧರ್ಮಸ್ಥಳ ಷಡ್ಯಂತ್ರ ಕೇಸನ್ನ ರಾಜ್ಯ ಸರ್ಕಾರವೇ NIA ಗೆ ಕೊಡಬೇಕು: ಆರ್‌.ಅಶೋಕ್‌ ಆಗ್ರಹ

    – ಇದು ಮತಾಂತರ ಷಡ್ಯಂತ್ರ, ಇಲ್ಲ ಅಂದ್ರೆ ಸಾಬಿ ಸಮೀರ್ ಯಾಕೆ ಬರ್ತಾನೆ?: ವಿಪಕ್ಷ ನಾಯಕ ಪ್ರಶ್ನೆ

    ಬೆಂಗಳೂರು: ಧರ್ಮಸ್ಥಳ ಷಡ್ಯಂತ್ರ ಕೇಸನ್ನ ರಾಜ್ಯ ಸರ್ಕಾರವೇ NIA ಗೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸರ್ಕಾರವನ್ನ ಆಗ್ರಹಿಸಿದರು.

    ಮಾಸ್ಕ್ ಮ್ಯಾನ್ ಬಂಧನ, ಸುಜಾತ ಭಟ್ ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳ ಕೇಸ್ ಮೊದಲಿನಿಂದ ಷಡ್ಯಂತ್ರ ಅಂತ ನಾವು ಹೇಳಿದ್ವಿ. ಸರ್ಕಾರ ಅತುರದ ನಿರ್ಧಾರ ಮಾಡಿತು. ದೂರು ಕೊಟ್ಟವನ ಪೂರ್ವ ಪರಿತೆ ನೋಡದೆ, ಯೋಚನೆ ಮಾಡದೇ ಸಿಎಂ ಜೊತೆ ಇರುವ ಪ್ರಗತಿಪರರ ಮಾತು ಕೇಳಿ SIT ಮಾಡಿದ್ರು. SIT ತನಿಖೆಯಿಂದ ಬುರುಡೆ ಬಂತು ಅಷ್ಟೆ. ಸಿಎಂ ಕಾಮನ್‌ಸೆನ್ಸ್ ಉಪಯೋಗ ಮಾಡಬೇಕಿತ್ತು. ಧರ್ಮಸ್ಥಳದ ಭಕ್ತರ ಭಾವನೆಗೆ ನೋವು ಆಗಿದೆ. ಇದನ್ನ ಸಿದ್ದರಾಮಯ್ಯ ವಾಪಸ್ ಕೋಡೊಕೆ ಆಗುತ್ತಾ? ಈ ಸರ್ಕಾರದ್ದು ತಪ್ಪು ಅಂತ ಆಯ್ತು. ಮಾಸ್ಕ್ ಮ್ಯಾನ್ ಬಗ್ಗೆ ಮೊದಲೇ ತನಿಖೆ ಮಾಡಿದ್ರೆ ಮುಗಿದು ಹೋಗ್ತಿತ್ತು ಎಂದು ಸರ್ಕಾರದ ನಡೆ ಖಂಡಿಸಿದರು. ಇದನ್ನೂ ಓದಿ: ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ – ಹೆಗ್ಗಡೆ ಮಾತು ಮತ್ತೆ ವೈರಲ್

    ಅನನ್ಯ ಭಟ್ ಕೇಸ್ ಕೂಡಾ ಸುಳ್ಳು ಅಂತ ಗೊತ್ತಾಗಿದೆ. ಎಲ್ಲರೂ ದುಡ್ಡು ತಗೊಂಡು ಮಾಡಿದ್ದಾರೆ. ಮಾಸ್ಕ್ ಮ್ಯಾನ್ ಹಿಂದೆ ಇರೋನು ಸಮೀರ್. ಸಮೀರ್ ಸೂತ್ರಧಾರ. ಎಲ್ಲರನ್ನೂ ಜೊತೆಗಾರ ಮಾಡಿಕೊಳ್ತಾನೆ. ಪ್ರಗತಿಪರರ ಟೀಂ ಸೆಟಪ್ ಮಾಡಿಕೊಳ್ತಾನೆ. ಡ್ರಾಮಾ ಮಾಡೋಕೆ ಮಾಸ್ಕ್ ಮ್ಯಾನ್, ಅನನ್ಯ ಭಟ್ ಹುಡುಕುತ್ತಾರೆ. ತನಿಖೆ ಹೇಗೆ ಮಾಡಬೇಕು ಅಂತ ಅದನ್ನು ಇವರೇ ನಿರ್ಧಾರ ಮಾಡ್ತಾರೆ. ಭದ್ರತೆ ಕೊಡಬೇಕು ಅಂತ ಹೇಳ್ತಾರೆ. 25 ದಿನ ಸಿಎಂಗೂ ಇಷ್ಟು ಸೆಕ್ಯುರಿಟಿ ಇರಲಿಲ್ಲ. ಮಾಸ್ಕ್ ಮ್ಯಾನ್‌ಗೆ ಇತ್ತು. ಸಿಎಂಗಿಂತ ಹೈ ಸೆಕ್ಯುರಿಟಿ ಕೊಟ್ರು. ಯಾಕೆ ಕೊಟ್ರು? ಮಂಜುನಾಥನನ್ನ ಅವಹೇಳನ ಮಾಡಬೇಕು ಅನ್ನೋದು ಇವರ ಷಡ್ಯಂತ್ರ. ಇದು ಮತಾಂತರ ಷಡ್ಯಂತ್ರ. ಇಲ್ಲ ಅಂದರೆ ಸಾಬಿ ಸಮೀರ್ ಯಾಕೆ ಬರ್ತಾನೆ? ಧರ್ಮಸ್ಥಳದ ಬಗ್ಗೆ ಕೇಳೋಕೆ ಇವರು ಯಾರು ಅಂತ ಕಿಡಿಕಾರಿದರು.

    ಅನೇಕ ಕಡೆ ಮಸೀದಿ ಮೇಲೆ ದೂರು ಬಂದಿದೆ. ಯಾವುದಾದ್ರು ಮಸೀದಿ ಅಗೆದ್ರಾ? ಹಿಂದೂಗಳು ಟಾರ್ಗೆಟ್ ಮಾಡಬೇಕು. ಇದು ಸಿಎಂ, ಸಿಎಂ ಸಂಪುಟದ ಕೆಲಸ. ಡಿಕೆ ವೋಟ್‌ಬ್ಯಾಂಕ್‌ಗೆ ಮಾತಾಡ್ತಿದ್ದಾರೆ ಅಷ್ಟೆ. ಇಷ್ಟೆಲ್ಲಾ ಕೇಸ್ ಆಗೋಕೆ ಸಿಎಂ ಕಾರಣ. ಪೊಲೀಸರ ಕೆಲಸ ಬಿಟ್ಟು ಬುರುಡೆ ಹುಡುಕೋಕೆ ಬಿಟ್ರಿ. ತನಿಖೆಗೆ ಕೋಟ್ಯಂತರ ರೂಪಾಯಿ ಖರ್ಚು ಆಗಿದೆ. ಯಾರ್ ಕೊಡ್ತಾರೆ. ಬೆಟ್ಟ ಅಗೆದು ಇಲಿಯೂ ಸಿಗಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಪ್ರಹಸನ ಅಗಿರಲಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗ್ಬೇಕು: ಅಶೋಕ್

    ಬಿಜೆಪಿ ಅವರು ಮೊದಲು ಮಾತಾಡಿಲ್ಲ ಅಂದರು‌‌. ನಾನೇ ಮಾತಾಡಿದ್ದೆ ಮೈಸೂರಿನಲ್ಲಿ. ತನಿಖೆ ಮಾಡಿ ಇದು ಷಡ್ಯಂತ್ರ ಅಂತ ಹೇಳಿದ್ದೆ. ಬಿಜೆಪಿ ಹೋರಾಟ ಮಾಡಿರಲಿಲ್ಲ ಅಂದರೆ ಬುರುಡೆ ತಂದು ಇದೇ ನಿಜ ಅಂತ ಮಾಡೋರು. ನಾವು ಹೋರಾಟ ಮಾಡಿದ್ದಕ್ಕೆ ಇದು ಇಲ್ಲಿಗೆ ಬಂದು ನಿಂತಿದೆ. ಧರ್ಮಸ್ಥಳಕ್ಕೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ. ಮಾಸ್ಕ್ ಮ್ಯಾನ್ ಬಗ್ಗೆ ಅಸೆಂಬ್ಲಿಯಲ್ಲಿ ನಾನು ಹೇಳಿದ್ದೆ. ಅವನಿಗೆ ಅಮಿಷ ಒಡ್ಡಿದ್ದಾರೆ ಅಂತ. ಈಗ ಬಂಧನ ಆಗಿದೆ. ಮಾಸ್ಕ್ ಮ್ಯಾನ್ ‌ನೋಡಿದ್ರೆ ಪಾಪ ಅನ್ನಿಸುತ್ತೆ. ಮುಸುಕುಧಾರಿ ಮುಖ್ಯ ಅಲ್ಲ. ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗಬೇಕು. ಇವರ ಹಿಂದೆ ಯಾರು ಇದ್ದಾರೆ ಅಂತ ತಿಳಿಯೋಕೆ SIT ಮಾಡಿ. ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿಗೆ ಸತ್ಯ ಹೊರ ಬರೋ ಮನಸು ಇದ್ದರೆ SIT ತನಿಖೆ ಮಾಡಿ. NIA ತನಿಖೆಗೆ ಕೊಡಿ ಎಂದು ಒತ್ತಾಯಿಸಿದರು.

    ಇವರು NIA ಗೆ ಕೊಡಲಿಲ್ಲ ಅಂದರೆ ಕಾಂಗ್ರೆಸ್ ಪಾತ್ರ ಇದೆ ಅಂತ ಗೊತ್ತಾಗುತ್ತದೆ. ಅನನ್ಯ ಭಟ್ ಕಳೆದು ಹೋಗಿದ್ದಾಳೆ ಅಂತ ತನಿಖೆ ಮಾಡಿದ್ರೆ ಗೊತ್ತಾಗೋದು. ಪೊಲೀಸರು ತನಿಖೆ ಮಾಡಿಲ್ಲ. ಈ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದ್ರು. ಕೇವಲ ಬುರುಡೆ ಹುಡುಕಿ ಅಂತ ಬಿಟ್ಟಿದ್ರು. ಬಂಧನ ಮಾಡಿದ್ರೆ ಸಾಲದು, ಇದರ ಹಿಂದೆ ಇರೋರ ಬಯಲಿಗೆ ಎಳೆಯಬೇಕು. ಈ ದೇಶದಲ್ಲಿ ಇರೋನು ಮಾಡಿರೋದಾ? ಬೇರೆ ದೇಶದಲ್ಲಿ ಇರೋನು ಮಾಡಿರೋದಾ? ತನಿಖೆ ಆಗಲಿ. ಇದು ಲವ್ ಜಿಹಾದ್ ತರಹ ಮತಾಂತರ ಜಿಹಾದ್. SIT ಆಗಲಿ ಇಲ್ಲ. NIA ತನಿಖೆಗೆ ಕೊಡಿ. ರಾಜ್ಯ ಸರ್ಕಾರವೇ NIA ಗೆ ಕೊಟ್ಟು ಬಿಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಕರೆಸಿದ್ದರು: ಸತ್ಯ ಕಕ್ಕಿದ ಚಿನ್ನಯ್ಯ

  • ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗ್ಬೇಕು: ಅಶೋಕ್

    ಮುಸುಕುಧಾರಿ ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗ್ಬೇಕು: ಅಶೋಕ್

    -ಹಿಂದೂಗಳನ್ನು ಟಾರ್ಗೆಟ್ ಮಾಡೋದು ಸಿಎಂ, ಸಿಎಂ ಸಂಪುಟದ ಕೆಲಸ
    -ಕಾಂಗ್ರೆಸ್ ರಾಜ್ಯದ ಜನರ ಕ್ಷಮೆ ಕೇಳಬೇಕು

    ಬೆಂಗಳೂರು: ಮುಸುಕುಧಾರಿ (Mask Man) ಮುಖ್ಯ ಅಲ್ಲ, ಇದರ ಹಿಂದೆ ಇರೋರು ಯಾರು ಅಂತ ತನಿಖೆ ಆಗಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಹೇಳಿದ್ದಾರೆ.

    ಎಸ್‌ಐಟಿಯಿಂದ (SIT) ಮಾಸ್ಕ್ ಮ್ಯಾನ್ ಬಂಧನದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಕೇಸ್ ಆದಾಗಿನಿಂದ ಷಡ್ಯಂತ್ರ ಅಂತ ಹೇಳಿದ್ದೆವು. ಸರ್ಕಾರ ಆತುರದ ನಿರ್ಧಾರ ಮಾಡಿತು. ದೂರು ಕೊಟ್ಟವನ ಪೂರ್ವಪರಿತೆ ನೋಡದೆ ಯೋಚನೆ ಮಾಡದೇ ಸಿಎಂ ಜೊತೆ ಇರುವ ಪ್ರಗತಿಪರರ ಮಾತು ಕೇಳಿ ಎಸ್‌ಐಟಿ ಮಾಡಿದ್ರು. ಎಸ್‌ಐಟಿ ತನಿಖೆಯಿಂದ ಬುರುಡೆ ಬಂತು ಅಷ್ಟೇ. ಸಿಎಂ ಕಾಮನ್ ಸೆನ್ಸ್ ಉಪಯೋಗ ಮಾಡಬೇಕಿತ್ತು. ಧರ್ಮಸ್ಥಳದ ಭಕ್ತರ ಭಾವನೆಗೆ ನೋವು ಆಗಿದೆ. ಇದನ್ನ ಸಿದ್ದರಾಮಯ್ಯ ವಾಪಸ್ ಕೊಡಲು ಆಗುತ್ತಾ? ಈ ಸರ್ಕಾರದ ತಪ್ಪು ಅಂತ ಆಯ್ತು. ಮಾಸ್ಕ್ ಮ್ಯಾನ್ ಬಗ್ಗೆ ಮೊದಲೇ ತನಿಖೆ ಮಾಡಿದ್ರೆ ಮುಗಿದು ಹೋಗ್ತಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಸುಕುಧಾರಿ ಬಂಧನ ಆಗಿರೋದು ನಿಜ, ಇದರ ಹಿಂದಿರುವ ಜಾಲವನ್ನ ಪತ್ತೆ ಮಾಡಲಾಗುವುದು: ಪರಮೇಶ್ವರ್‌

    ಅನನ್ಯ ಭಟ್‌ದು ಸುಳ್ಳು ಅಂತ ಗೊತ್ತಾಗಿದೆ. ಎಲ್ಲರೂ ದುಡ್ಡು ತಗೊಂಡು ಮಾಡಿದ್ದಾರೆ. ಮಾಸ್ಕ್ ಮ್ಯಾನ್ ಹಿಂದೆ ಇರೋನು ಸಮೀರ್. ಸಮೀರ್ ಇದರ ಸೂತ್ರಧಾರ. ಎಲ್ಲರನ್ನು ಜೊತೆಗಾರ ಮಾಡಿಕೊಳ್ಳುತ್ತಾನೆ, ಪ್ರಗತಿ ಪರರ ಟೀಂ ಸೆಟಪ್ ಮಾಡಿಕೊಳ್ತಾನೆ. ಡ್ರಾಮಾ ಮಾಡೋಕೆ ಮಾಸ್ಕ್ ಮ್ಯಾನ್, ಅನನ್ಯ ಭಟ್ ಹುಡುಕುತ್ತಾರೆ. ತನಿಖೆ ಹೇಗೆ ಮಾಡಬೇಕು ಅಂತ ಅದನ್ನು ಇವರೇ ನಿರ್ಧಾರ ಮಾಡ್ತಾರೆ. ಭದ್ರತೆ ಕೊಡಬೇಕು ಅಂತ ಹೇಳ್ತಾರೆ. ಸಿಎಂಗೂ ಇಷ್ಟು ಸೆಕ್ಯುರಿಟಿ ಇರಲಿಲ್ಲ, 25 ದಿನ ಮಾಸ್ಕ್ ಮ್ಯಾನ್‌ಗೆ ಇತ್ತು. ಸಿಎಂಗಿಂತ ಹೈ ಸೆಕ್ಯುರಿಟಿ ಕೊಟ್ರು, ಯಾಕೆ ಕೊಟ್ರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಕರೆಸಿದ್ದರು: ಸತ್ಯ ಕಕ್ಕಿದ ಚಿನ್ನಯ್ಯ

    ಮಂಜುನಾಥ್‌ನನ್ನ ಅವಹೇಳನ ಮಾಡಬೇಕು, ಇದು ಮತಾಂತರ ಷಡ್ಯಂತ್ರ. ಇಲ್ಲ ಅಂದರೆ ಸಾಬಿ ಸಮೀರ್ ಯಾಕೆ ಬರುತ್ತಾರೆ? ಧರ್ಮಸ್ಥಳದ ಬಗ್ಗೆ ಕೇಳೋಕೆ ಇವರು ಯಾರು? ಬೇಕಾದ ಮಸೀದಿ ಮೇಲೆ ದೂರು ಬಂದಿದೆ. ಯಾವುದಾದರೂ ಮಸೀದಿ ಅಗೆದ್ರಾ? ಹಿಂದೂಗಳನ್ನು ಟಾರ್ಗೆಟ್ ಮಾಡುವುದು ಸಿಎಂ, ಸಿಎಂ ಸಂಪುಟದ ಕೆಲಸ. ಡಿಕೆ ವೋಟ್ ಬ್ಯಾಂಕ್‌ಗೆ ಮಾತಾಡ್ತಿದ್ದಾರೆ ಅಷ್ಟೇ. ಇಷ್ಟೆಲ್ಲಾ ಕೇಸ್ ಆಗೋಕೆ ಸಿಎಂ ಕಾರಣ. ಪೊಲೀಸರ ಕೆಲಸ ಬಿಟ್ಟು ಬುರುಡೆ ಹುಡುಕೋಕೆ ಬಿಟ್ಟರು. ತನಿಖೆಗೆ ಕೊಟ್ಯಂತರ ರೂಪಾಯಿ ಖರ್ಚು ಆಗಿದೆ. ಯಾರು ಕೊಡ್ತಾರೆ? ಬೆಟ್ಟ ಅಗೆದು ಇಲಿಯೂ ಸಿಗಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಪ್ರಹಸನ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಕ್ಷಮೆ ಕೇಳಬೇಕು. ಬಿಜೆಪಿ ಅವರು ಮೊದಲು ಮಾತಾಡಿಲ್ಲ ಅಂದರು. ನಾನೇ ಮಾತಾಡಿದ್ದೇ ಮೈಸೂರಿನಲ್ಲಿ. ತನಿಖೆ ಮಾಡಿ ಇದು ಷಡ್ಯಂತ್ರ ಅಂತ ಹೇಳಿದ್ದೆ. ಬಿಜೆಪಿ ಹೋರಾಟ ಮಾಡಿರಲಿಲ್ಲ ಅಂದರೆ ಬುರುಡೆ ತಂದು ಇದೇ ನಿಜ ಅಂತ ಮಾಡೋರು. ನಾವು ಹೋರಾಟ ಮಾಡಿದ್ದಕ್ಕೆ ಇದು ಇಲ್ಲಿಗೆ ಬಂದು ನಿಂತಿದೆ. ಧರ್ಮಸ್ಥಳಕ್ಕೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಂಗೆ ಆರೋಗ್ಯ ಸರಿಯಿಲ್ಲ, ಬೆದರಿಕೆಯಿದೆ – ರಕ್ಷಣೆ ಕೊಡಿ ಅಂತಾ ಪೊಲೀಸರಿಗೆ ಸುಜಾತ ಭಟ್ ಮನವಿ

    ಮಾಸ್ಕ್ ಮ್ಯಾನ್‌ಗೆ ಆಮಿಷವೊಡ್ಡಿದ್ದಾರೆ ಎಂದು ಅಸೆಂಬ್ಲಿಯಲ್ಲಿ ನಾನು ಹೇಳಿದ್ದೆ. ಈಗ ಬಂಧನ ಆಗಿದೆ. ಮಾಸ್ಕ್ ಮ್ಯಾನ್ ನೋಡಿದ್ರೆ ಪಾಪ ಅನ್ನಿಸುತ್ತೆ. ಇವರ ಹಿಂದೆ ಯಾರು ಇದ್ದಾರೆ ಅಂತ ತಿಳಿಯೋಕೆ ಎಸ್‌ಐಟಿ ಮಾಡಿ. ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿಗೆ ಸತ್ಯ ಹೊರ ಬರೋ ಮನಸ್ಸು ಇದ್ದರೆ ಎಸ್‌ಐಟಿ ತನಿಖೆ ಮಾಡಿ, ಎನ್‌ಐಎಗೆ ತನಿಖೆ ಕೊಡಿ. ಇವರು ಎನ್‌ಐಎಗೆ ಕೊಡಲಿಲ್ಲ ಅಂದರೆ ಕಾಂಗ್ರೆಸ್ ಪಾತ್ರ ಇದೆ ಅಂತ ಗೊತ್ತಾಗುತ್ತದೆ ಎಂದು ಆರೋಪಿಸಿದರು. ಇದನ್ನೂ ಓದಿ: ಧರ್ಮಸ್ಥಳ ಪರ ಧ್ವನಿ ಎತ್ತಿದವ್ರನ್ನ ಹೇಗೆ ಮಟ್ಟಹಾಕಬೇಕೆಂದು ಮಟ್ಟಣ್ಣನವರ್ ಪ್ಲ್ಯಾನ್ ಮಾಡ್ತಿದ್ರು: ಸೂಲಿಬೆಲೆ

    ಅನನ್ಯ ಭಟ್ ಕಳೆದು ಹೋಗಿದ್ದಾರೆ ಅಂತ ತನಿಖೆ ಮಾಡಿದ್ರೆ ಗೊತ್ತಾಗುತ್ತಿತ್ತು, ಪೊಲೀಸರು ತನಿಖೆ ಮಾಡಿಲ್ಲ. ಈ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದ್ರು. ಕೇವಲ ಬುರುಡೆ ಹುಡುಕಿ ಅಂತ ಬಿಟ್ಟಿದ್ರು. ಬಂಧನ ಮಾಡಿದ್ರೆ ಸಾಲದು, ಇದರ ಹಿಂದೆ ಇರೋರನ್ನು ಬಯಲಿಗೆ ಎಳೆಯಬೇಕು. ಈ ದೇಶದಲ್ಲಿ ಇರೋನು ಮಾಡಿರೋದಾ? ಬೇರೆ ದೇಶದಲ್ಲಿ ಇರೋನು ಮಾಡಿರೋದಾ? ತನಿಖೆ ಆಗಲಿ. ಇದು ಲವ್ ಜಿಹಾದ್ ತರಹ ಮತಾಂತರ ಜಿಹಾದ್. ಎಸ್‌ಐಟಿ ಆಗಲಿ ಇಲ್ಲ. ಎನ್‌ಐಎ ತನಿಖೆಗೆ ಕೊಡಿ. ರಾಜ್ಯ ಸರ್ಕಾರವೇ ಎನ್‌ಐಎಗೆ ಕೊಟ್ಟು ಬಿಡಲಿ ಎಂದರು. ಇದನ್ನೂ ಓದಿ: ಎಲ್ಲಿಂದಲೋ ಬುರುಡೆ ತಂದು ಬುರುಡೆ ಬಿಟ್ಟಿದ್ದ ಚೆನ್ನಯ್ಯ!

    ಸಮೀರ್ ಏಕಾಏಕಿ ಹೇಗೆ ಬಂದ? ಧರ್ಮಸ್ಥಳದ ಬಗ್ಗೆ ಮಾತಾಡ್ತಾನೆ. ಕಾಂಗ್ರೆಸ್ ಸರ್ಕಾರ ತಾಳಮೇಳ ಹೊಡೆದುಕೊಂಡು ಬಂದ್ರು. ಈಗ ಸರ್ಕಾರಕ್ಕೆ ಮಂಗಳಾರತಿ ಆಯಿತು ಎಂದು ಟೀಕಿಸಿದರು. ಇದನ್ನೂ ಓದಿ: ನೀರಿನಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ʻಚಿನ್ನಯ್ಯʼ – ಮುಸುಕುಧಾರಿಯ ಅಸಲಿಯತ್ತು ಬಯಲು

  • ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

    ಸರ್ಕಾರದ ವಿರುದ್ಧ ಕೇಸರಿ ಪಡೆ ʻಧರ್ಮʼ ಯುದ್ಧ – ಷಡ್ಯಂತ್ರದ ಹಿಂದಿರೋರು ಯಾರು? – ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

    – ಸಿಎಂ ವಿರುದ್ಧ 24 ಕೊಲೆ ಆರೋಪ – ಎಸ್‌ಐಟಿ ರಚಿಸಲು ಅಶೋಕ್‌ ಆಗ್ರಹ
    – ಮುಸುಕುಧಾರಿಯನ್ನ ಮಂಪರು ಪರೀಕ್ಷೆಗೆ ಒಳಪಡಿಸಿ: ರವಿಕುಮಾರ್‌
    – ಯೂಟ್ಯೂಬರ್ಸ್‌ ವಿರುದ್ಧ ಕ್ರಮ ಏಕಿಲ್ಲ? – ವಿಜಯೇಂದ್ರ

    ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ (Dharmasthala Case) ಈಗ ತೀರ್ವ ಸ್ವರೂಪ ಪಡೆದುಕೊಂಡಿದೆ. ಎಸ್‌ಐಟಿ ತನಿಖೆಯಲ್ಲಿ ಈವರೆಗೆ ಯಾವುದೇ ಕಳೇಬರ ಪತ್ತೆಯಾಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಲ್ಲದೇ, ಷಡ್ಯಂತ್ರದ ಹಿಂದಿರುವವರು ಯಾರು? ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿವೆ. ಜೊತೆಗೆ ಈವರೆಗಿನ ತನಿಖಾ (Investigation) ಬೆಳವಣಿಗೆ ಬಗ್ಗೆ ಮಧ್ಯಂತರ ವರದಿ ಬಿಡುಗಡೆಗೆ ಆಗ್ರಹಿಸಿವೆ.

    ಪರಮೇಶ್ವರ್‌ ಉತ್ತರ ಕೊಡಲಿ; ವಿಜಯೇಂದ್ರ
    ವಿಧಾನಸೌಧ ಮುಂಭಾಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿಜಯೇಂದ್ರ (BY Vijayendra), ನಿನ್ನೆ ನಮ್ಮ ಪಕ್ಷದ ಹಿರಿಯರ ನೇತ್ರತ್ವದಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಮಂಜುನಾಥ್‌ನ ದರ್ಶನ ಪಡೆದಿದ್ವಿ. ವೀರೇಂದ್ರ ‌ಹೆಗಡೆ ಅವರನ್ನೂ ಸಹ ನಾವು ಭೇಟಿ ಮಾಡಿದ್ದೇವೆ. ಅಪಪ್ರಚಾರಕ್ಕೆ ಕಡಿವಾಣ ಹಾಕಲು ಯಾಕೆ‌ ಸರ್ಕಾರ ಪ್ರಯತ್ನ ಮಾಡಿಲ್ಲ? ಇದರ ಬಗ್ಗೆ ಪರಮೇಶ್ವರ್ (Parameshwar) ಅವರು ಉತ್ತರ ಕೊಡಬೇಕು. SIT ತನಿಖೆಯ ಮಧ್ಯಂತರ ವರದಿಯನ್ನ ಕೊಡಬೇಕು. ಪರಮೇಶ್ವರ್ ಸಮಗ್ರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

    ಡಿಕೆಶಿಗೆ ಮತ್ಯಾವ ಸಮಯ ಬೇಕು?
    ಡಿಕೆ ಶಿವಕುಮಾರ್ ಅವರೇ ಷಡ್ಯಂತ್ರ ಅಂತ ಹೇಳಿದ್ರು, ಸಮಯ ಬಂದಾಗ ಹೇಳ್ತೇನೆ ಅಂದಿದ್ರು. ಡಿಕೆ ಶಿವಕುಮಾರ್ ಅವರಿಗೆ ಮತ್ಯಾವ ಸಮಯ ಬರಬೇಕು? ಅಂತ ಪ್ರಶ್ನೆ ಮಾಡಿದ್ದಾರೆ. ಮುಂದುವರಿದು.. ನಮ್ಮ ಕಾರ್ಯಕರ್ತರ ಮೇಲೆ, ಹಿಂದೂ ಕಾರ್ಯಕರ್ತರ ಮೇಲೆ ದೂರು ದಾಖಲಿಸುತ್ತಾರೆ. ಆದ್ರೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಏಕಿಲ್ಲ? ಎಡಪಂಥೀಯರ ಒತ್ತಡದ ಬಗ್ಗೆ ದಿನೇಶ್ ಗುಂಡೂರಾವ್ ಹೇಳ್ತಾರೆ. ಅದರ ಹಿಂದಿರುವವರ ಬಗ್ಗೆ ಹೇಳಬೇಕು. ಯೂಟ್ಯೂಬರ್ಸ್ ಮೇಲೆ ಯಾಕೆ ಕ್ರಮವಿಲ್ಲ? ಅನ್ನೊದನ್ನ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ – ಪರಂ ಉತ್ತರ ಭಾರೀ ಕುತೂಹಲ

    24 ಕೊಲೆ ಆರೋಪಕ್ಕೂ ಎಸ್‌ಐಟಿ ರಚಿಸಿ: ಅಶೋಕ್‌
    ಇನ್ನೂ ವಿಪಕ್ಷ ನಾಯಕ ಆರ್‌. ಅಶೋಕ್‌ ಮಾತಮಾಡಿ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವ ಸಿಎಂ ವಿರುದ್ಧವೂ ಆರೋಪ ಮಾಡಿದ್ದಾನೆ. ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಅಂತ ರಾಜ್ಯದ ಮುಖ್ಯಮಂತ್ರಿಗಳನ್ನ ತಿಮ್ಮರೋಡಿ ಅವಮಾನ ಮಾಡಿದ್ದಾರೆ. 24 ಕೊಲೆಗಳ ಆರೋಪಕ್ಕೂ ಎಸ್‌ಐಟಿ ರಚಿಸಿ ತನಿಖೆ ಮಾಡಿಸಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

    ಮುಸುಕುಧಾರಿಯನ್ನ ಮಂಪರು ಪರೀಕ್ಷೆಗೆ ಒಳಪಡಿಸಿ: ರವಿಕುಮಾರ್‌
    ಎಂಎಲ್‌ಸಿ ಎನ್‌. ರವಿಕುಮಾರ್‌ ಮಾತನಾಡಿ, ಧರ್ಮಸ್ಥಳದ ಪ್ರಕರಣದಲ್ಲಿ ಕೂಡಲೇ ಮುಸುಕುಧಾರಿಯನ್ನ ಬಂಧನ ಮಾಡಬೇಕು. ಅವನಿಗೆ ಮಂಪರು ಪರೀಕ್ಷೆಗೆ ಒಳ ಪಡಿಸಬೇಕು. ಬಿಜೆಪಿ ಜನಾಂದೋಲನ ಹೋರಾಟವಾಗಿ ಇದನ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾವೋವಾದಿಗಳು ಇಟ್ಟಿದ್ದ ಐಇಡಿ ಸ್ಫೋಟ – ಓರ್ವ ಪೊಲೀಸ್ ಸಾವು, ಮೂವರಿಗೆ ಗಾಯ