ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಮೊಬೈಲ್ ಟ್ರ್ಯಾಕ್ ಮಾಡಿದರೆ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಬಗ್ಗೆ ಎಲ್ಲವೂ ಗೊತ್ತಾಗುತ್ತೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೊಸ ಬಾಂಬ್ ಸಿಡಿಸಿದ್ದಾರೆ.
ಎಲ್ಲಾ ಎಪಿಸೋಡ್‌ಗಳನ್ನ ನೋಡಿದಾಗ ಸಿದ್ದರಾಮಯ್ಯನವರೇ ವಿದೇಶಕ್ಕೆ ಕಳಿಸಿದ್ದಾರೆ ಅನಿಸುತ್ತೆ. ಕಾನೂನು ಸುವ್ಯವಸ್ಥೆ ಇರೋದು ರಾಜ್ಯ ಸರ್ಕಾರದ ಕೈಯಲ್ಲಿ. ಪ್ರಜ್ವಲ್ ರೇವಣ್ಣ ಮತ ಹಾಕಿ ವಿದೇಶಕ್ಕೆ ಹೋಗೋದು ಸರ್ಕಾರಕ್ಕೆ ಗೊತ್ತಿರಲಿಲ್ವಾ ಪ್ರಶ್ನಿಸಿದ್ದಾರೆ.
ದೇವೇಗೌಡರಿಗೆ ಅವಮಾನ ಮಾಡಬೇಕು ಅಂತಾ ಮಾಡಿರೋ ಸ್ಕೀಮ್ ಇದು. ರೇವಣ್ಣ ಮಾಡಿರೋದು ತಪ್ಪು ಅಂತಾ ಗೊತ್ತಿದ್ರೂ ಸರ್ಕಾರ ಯಾಕೇ ಸುಮ್ಮನಿತ್ತು? ಘಟನೆ ನಡೆದು 15 ದಿನ ಆದ್ರೂ ಪ್ರಕರಣ ದಾಖಲಿಸಲಿಲ್ವಾ? ಇಂಟಿಲೆಜೆನ್ಸ್‌ನವರು ಏನ್ ಮಾಡ್ತಾ ಇದ್ರು? ನಿಮ್ಮ ಕಾನೂನು ಸುವ್ಯವಸ್ಥೆ ಕೇಂದ್ರ ಸರ್ಕಾರಕ್ಕೆ ಅಂತಾ ಬರೆದುಕೊಡಿ. ರಾಜ್ಯ ಸರ್ಕಾರದ ತಪ್ಪು ಇಟ್ಕೊಂಡು ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಯಾವುದೇ ದೇಶಕ್ಕೆ ಹೋಗಿರಲಿ, ಹಿಡಿದು ತರ್ತೀವಿ: ಗುಡುಗಿದ ಸಿಎಂ
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅಧಿಕಾರ ಬಿಟ್ಟು ಕೆಳಗೆ ಇಳಿಯಲಿ. 24 ಗಂಟೆಗಳಲ್ಲಿ ಪ್ರಜ್ವಲ್‌ನನ್ನು (Prajwal Revanna) ಕಸ್ಟಡಿಗೆ ತೆಗೆದುಕೊಳ್ಳುತ್ತೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸವಾಲು ಹಾಕಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಹೇಳೋದನ್ನ ಯಾರೂ ಗಂಭೀರವಾಗಿ ತಗೋಬೇಡಿ. ರಾಮೇಶ್ವರಂ ಕೆಫೆ ಬಾಂಬ್ ಬ್ಯುಸಿನೆಸ್ ಹಿನ್ನೆಲೆ ಇದೆ ಅಂದರು. ಅದು ಸುಳ್ಳಲ್ವಾ? ಡಿಕೆಶಿ ಮಾತಿಗೆ ನಯಾ ಪೈಸೆ ಇಲ್ಲ. ಕುಕ್ಕರ್ ಬಾಂಬ್ ಹಾಕಿದವನನ್ನ ಬ್ರದರ್ ಅಂದ್ರು. ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಅಮಿತ್ ಶಾ ಪ್ರಜ್ವಲ್‌ಗೆ ಟಿಕೆಟ್ ಕೊಡಬೇಡಿ ಅಂದಿದ್ದು ಹೇಗೆ ಗೊತ್ತಾಯ್ತು ಇವರಿಗೆ? ಫೋನ್ ಟ್ಯಾಪ್ ಮಾಡಿದ್ದಾರಾ ಡಿಕೆಶಿ? ಅಮಿತ್ ಶಾ ಫೋನ್ ಟ್ಯಾಪ್ ಮಾಡಿದ್ದಾರಾ ಡಿಕೆಶಿ? ಮೂರು ಸ್ಥಾನ ಜೆಡಿಎಸ್‌ಗೆ ಕೊಡಲಾಗಿತ್ತು. ಪ್ರಜ್ವಲ್‌ಗೆ ಟಿಕೆಟ್ ಕೊಟ್ಟಿದ್ದು ಜೆಡಿಎಸ್ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರಜ್ವಲ್ ಪ್ರಕರಣ ಮಾನವ ಕುಲಕ್ಕೆ ಕಳಂಕ ಎಂದ ನಿರ್ದೇಶಕ ಎಸ್.ನಾರಾಯಣ್
ಕಾನೂನಾತ್ಮಕವಾಗಿ ಪ್ರಜ್ವಲ್ ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಂಸದ. 2019 ರಲ್ಲಿ ಬೀದಿ ಬೀದಿಗೆ ಹೋಗಿ ಪ್ರಜ್ವಲ್ ಪರ ಕಾಂಗ್ರೆಸ್‌ನವ್ರೂ ಮತ ಕೇಳಿದ್ರು. ಅವರು ಈಗ ಗೆದ್ದು ಬಂದರೆ ಆಗ ಎನ್‌ಡಿಎ ಅಭ್ಯರ್ಥಿ. ಆಗ ಬಿಜೆಪಿಗೆ ಮುಜುಗರ ಆಯ್ತೋ ಇಲ್ವೋ ಅಂತ ಪ್ರಶ್ನೆ ಬರುತ್ತೆ ಎಂದು ಡಿಕೆ ಶಿವಕುಮಾರ್‌ಗೆ ತಿರುಗೇಟು ನೀಡಿದರು.
ಪ್ರಜ್ವಲ್ ಪರಾರಿಗೆ ಕೇಂದ್ರ ಕಾರಣ ಅನ್ನೋ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅಶೋಕ್, ಅಣ್ಣೋ ಸಿದ್ದರಾಮಣ್ಣ, ಹಾಸನದಿಂದ ಏರ್‌ಪೋರ್ಟ್ಗೆ ಪ್ರಜ್ವಲ್ ಹೋಗಲು ಬಿಟ್ಟಿದ್ದು ಯಾರು? ಹಾಸನ ಪೊಲೀಸರು, ಡಿಸಿ ಏನ್ ಮಾಡ್ತಿದ್ರು? ಹಾಸನದ ಮನೆಯಿಂದ ಏರ್‌ಪೋರ್ಟ್ಗೆ ಹೋಗಲು ಅವಕಾಶ ಬಿಟ್ಟಿದ್ದು ಕಾಂಗ್ರೆಸ್. ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಇಷ್ಟು ಗಡಿ ದಾಟಿ ಏರ್‌ಪೋರ್ಟ್ಗೆ ಹೋಗಿ ಜರ್ಮನಿಗೆ ಹೋದ್ರು ಪ್ರಜ್ವಲ್. ಇಲ್ಲಿಯವರೆಗೆ ಬಿಟ್ಟಿದ್ದು ಕಾಂಗ್ರೆಸ್ ಅಲ್ವಾ? ಇದು ನಿಮ್ಮ ಅಡ್ಜಸ್ಟ್ಮೆಂಟ್ ಅಲ್ವಾ? ಪ್ರಜ್ವಲ್‌ನನ್ನ ಹೋಗಲು ಬಿಟ್ಟಿದ್ದು ಮನೆಹಾಳರು ಕಾಂಗ್ರೆಸ್‌ನವ್ರು. ಆದ್ರೆ ಪ್ರಶ್ನೆ ಮಾಡ್ತಿರೋದು ಮೋದಿಗೆ, ಇದು ಸರಿನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಧರ್ಮ ಎಳೆತಂದ ನಟಿ ಸ್ವರಾ ಭಾಸ್ಕರ್
ಪ್ರಜ್ವಲ್ ಚಲನವಲನಗಳ ಮಾಹಿತಿ ರಾಜ್ಯ ಸರ್ಕಾರಕ್ಕೆ ಇತ್ತು. ಓಡಿ ಹೋಗಲು ಬಿಟ್ಟಿದ್ದು ಕಾಂಗ್ರೆಸ್. ಪ್ರಜ್ವಲ್ ಹೋಗುವಾಗ ನೀವು ಕಡ್ಲೆಕಾಯಿ ತಿಂತಿದ್ರಾ? ಹೋಗಲು ಬಿಟ್ಟಿದ್ದು ನೀವು, ಕೇಳೋದು ಮೋದಿಯವರನ್ನಾ? ಪ್ರಜ್ವಲ್ ಪರಾರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಇಂಟಲಿಜೆನ್ಸ್ ಫೇಲ್ ಆಗಿದೆ. ನಿಮ್ಮ ವೈಫಲ್ಯ ಮುಚ್ಚಿಡಲು ಕೇಂದ್ರ ಬಿಜೆಪಿ ವಿರುದ್ಧ ಆರೋಪ ಮಾಡ್ತಿದೆ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಎಂಪಿ. ಅವರು ಇನ್ನೂ ನಮ್ಮ ಎಂಪಿ ಆಗಿಲ್ಲ. 2019 ರಲ್ಲಿ ನಿಮ್ಮ ಸಹಕಾರದಿಂದ ಪ್ರಜ್ವಲ್ ಗೆದ್ದಿದ್ದು. ನಮ್ಮ ಎಂಪಿ ಆಗಲು ಇನ್ನೂ ಒಂದು ತಿಂಗಳು ಕಾಲ ಇದೆ. ಈಗ ತಾಂತ್ರಿಕವಾಗಿ ಪ್ರಜ್ವಲ್ ಕಾಂಗ್ರೆಸ್ ಎಂಪಿ, ಆಗ ಜೆಡಿಎಸ್ ಜೊತೆ ಮೈತ್ರಿ ಮಾಡ್ಕೊಂಡಿದ್ದವರು ಕಾಂಗ್ರೆಸ್‌ನವ್ರು. ಜೋಡೆತ್ತು ಅಂತ ಹೇಳಿಕೊಂಡು ಪ್ರಜ್ವಲ್ ಪರ ಪ್ರಚಾರ ಮಾಡಿದ್ರು. ಪ್ರಜ್ವಲ್ ಗೆಲ್ಲಿಸಿದ್ದು ಕಾಂಗ್ರೆಸ್, ಈಗ ಉತ್ತರ ಕೊಡಬೇಕಾಗಿರೋದು ಸಹ ಕಾಂಗ್ರೆಸ್ ಎಂದು ಠಕ್ಕರ್ ಕೊಟ್ಟರು. ಇದನ್ನೂ ಓದಿ: ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋದ ರೇವಣ್ಣ; ಮನೆಯಲ್ಲೇ ಅಗ್ನಿಕುಂಡ ನಿರ್ಮಿಸಿ ಹೋಮ!
ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ ಕಠಿಣ ಕ್ರಮ ತಗೊಳ್ಳುತ್ತೆ. ಈ ದೇಶದ ಕಾನೂನಿಗೆ, ಸಂವಿಧಾನಕ್ಕೆ ಬೆಲೆ ಕೊಡ್ತೇವೆ. ಈ ಥರದ ಘಟನೆಗಳಿಗೆ ನಮ್ಮ ಬೆಂಬಲ ಇಲ್ಲ. ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಬೆಂಗಳೂರು: ಚುನಾವಣಾ ಅಖಾಡದ ವಾಕ್ಸಮರಕ್ಕೆ ಇದೀಗ `ಚೊಂಬು’ ಎಂಟ್ರಿ ಕೊಟ್ಟಿದೆ. ಚೊಂಬು ಇಟ್ಟುಕೊಂಡು ಕೇರಳಕ್ಕೆ ಹೋಗಿ ಎಂದು ಹೇಳುವ ಮೂಲಕ ಕಾಂಗ್ರೆಸ್ (Congress) ಚೊಂಬು ಜಾಹೀರಾತಿಗೆ ವಿಪಕ್ಷ ನಾಯಕ ಅಶೋಕ್ (R Ashok) ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳಕ್ಕೆ ಬನ್ನಿ ಬಿಂದಿಗೆಯಲ್ಲಿ ನೀರು ಕೊಡ್ತೀವಿ ಅಂತ ಕರೀತಿದ್ದಾರೆ. ನೀವು ಚೊಂಬು ಅಂತ ಜಾಹೀರಾತು ಕೊಟ್ಟಿದ್ದೀರಿ. ನಿಮ್ಮ ಯೋಗ್ಯತೆಗೆ ಚೊಂಬಿನಷ್ಟು ನೀರೂ ಕೊಟ್ಟಿಲ್ಲ. ಅಲ್ಲಿ ಚೊಂಬಲ್ಲಿ ನೀರಿಲ್ಲ, ಕೇರಳಕ್ಕೆ ಬನ್ನಿ ಬಿಂದಿಗೆಯಲ್ಲಿ ನೀರು ಕೊಡ್ತೀವಿ ಅಂತ ಕರೀತಿದ್ದಾರೆ. ಚೊಂಬು ಇಟ್ಟುಕೊಂಡು ಕೇರಳಕ್ಕೆ (Kerala) ಹೋಗಿ ಅಂತಾ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತಿದೆ. ಕಾಂಗ್ರೆಸ್ ಹೊಸ ಟ್ಯಾಕ್ಸ್. ಅದು ಸ್ಕ್ವೇರ್ ಫೀಟ್ ಟ್ಯಾಕ್ಸ್.. ಒಂದು ಬಿಲ್ಡಿಂಗ್ ಗೆ 7 -8 ಕೋಟಿ ಕಲೆಕ್ಟ್ ಮಾಡ್ತಿದ್ದಾರೆ. ಒಬ್ಬೊಬ್ಬ ಬಿಲ್ಡರ್ ಹತ್ರ ಸ್ಕ್ವೇರ್ ಫೀಟ್ ಲೆಕ್ಕದಲ್ಲಿ ಕಲೆಕ್ಟ್ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು. ಇದುವರೆಗೂ 700 ಕೋಟಿ SDRF ಹಣ ಬಿಡುಗಡೆ ಆಗಿದ್ದು, ಅದು ಕೇಂದ್ರದ ಪರಿಹಾರ 75% ಕೇಂದ್ರದ ಹಣ, ಇವರದ್ದಲ್ಲ ಎಂದರು. ಇದನ್ನೂ ಓದಿ: ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ವೈಯಕ್ತಿಕ ಕಾರಣಕ್ಕೆ ಆಗಿರೋದು: ಸಿಎಂ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ದೋಷಾರೋಪ ಪಟ್ಟಿ ಬಿಡುಗಡೆ ಮಾಡಿದೆ. ಕೈ ಬಿಟ್ಟ ಯೋಜನೆಗಳು, ಕೈ ಕೊಟ್ಟ ಕಾಂಗ್ರೆಸ್ ಸರ್ಕಾರ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಓಲೈಕೆ ರಾಜಕಾರಣ ಎಂಬ ಶೀರ್ಷಿಕೆ ಅಡಿ ಚಾರ್ಜ್ ಶೀಟ್ ಬಿಡುಗಡೆ ಮಾಡಿದೆ. ಅಪರಾಧಿಗಳ ಧರ್ಮ ಹುಡುಕುವ ಕಾಂಗ್ರೆಸ್ ನ ಹಳೆಯ ಚಾಳಿ. ಭಯೋತ್ಪಾದನೆಗೆ ಕುಮ್ಮಕ್ಕು, ಬ್ರಾಂಡ್ ಬೆಂಗಳೂರು ಈಗ ಕ್ರೈಂ ಬೆಂಗಳೂರು. 50 ಪಸೆರ್ಂಟ್ ಸರ್ಕಾರ, ರೈತನ ಬೆನ್ನಿಗೆ ಬರ. ಹೆಚ್ಚಾದ ಮಹಿಳೆಯರ ಮೇಲಿನ ದೌರ್ಜನ್ಯ. ಬಹುಸಂಖ್ಯಾತರಿಗೆ ಇಲ್ಲದ ನೀತಿ. ಎಸ್ಸಿ ಎಸ್‍ಟಿ ಸಮುದಾಯಕ್ಕೆ ಅನ್ಯಾಯ, ಬಿಜೆಪಿ ಸರ್ಕಾರದ ಜನಪರ ಯೋಜನೆಗಳಿಗೆ ತಿಲಾಂಜಲಿ ಇಟ್ಟ ಕಾಂಗ್ರೆಸ್ ಸರ್ಕಾರ. ಗ್ಯಾರಂಟಿಗಳ ಮೂಲಕ ಕೊಟ್ಟು ಬೆಲೆ ಏರಿಕೆ ಮೂಲಕ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ ಎಂದು ಹಲವು ದೋಷಾರೋಪಣೆ ಪಟ್ಟಿ ಮಾಡಿದೆ ಬಿಜೆಪಿ. ಬಿಜೆಪಿ- ಜೆಡಿಎಸ್ ಪಕ್ಷ ಗಳ ಚಿಹ್ನೆ ಹಾಗೂ ದೋಸ್ತಿ ನಾಯಕರು ಇರುವ ಫೆÇೀಟೋದ ಜೊತೆ ಕಾಂಗ್ರೆಸ್ ಧಿಕ್ಕರಿಸಿ, ಎನ್ ಡಿಎ ಬೆಂಬಲಿಸಿ, ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಘೋಷಣೆ ಮಾಡಿದೆ.
ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ (BJP- JDS) ನಾಯಕರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳನ್ನು (Nirmalananda Swamiji) ಭೇಟಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಮೈತ್ರಿ ನಾಯಕರು ಕಿಡಿಕಾರಿದ್ದಾರೆ.
ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅಶೋಕ್, ಡಿಕೆಶಿಗೆ ಸೋಲಿನ ಭೀತಿ ಕಾಡುತ್ತಿದೆ. ನಿನ್ನೆ ತಮಿಳುನಾಡು ದೇವಸ್ಥಾನಕ್ಕೆ ಹೋಗಿದ್ದರು. ಇವತ್ತು ಇಲ್ಲಿಗೆ ನಾವು ಬಂದಿದ್ದು ನೋಡಿ ಅವರಿಗೆ ಚಳಿ ಜ್ವರ ಬಂದಿದೆ. ಶ್ರೀಗಳ ಬಗ್ಗೆ ಮಾತನಾಡುವುದಕ್ಕೆ ಡಿಕೆಶಿಗೆ ನೈತಿಕತೆ ಇಲ್ಲ. ಸ್ವಾಮೀಜಿ ಬಗ್ಗೆ ಡಿಕೆಶಿ ಅಗೌರವವಾಗಿ ಮಾತಾಡಿದ್ದಾರೆ. ಸ್ವಾಮೀಜಿ ಬಗ್ಗೆ ಎಚ್ಚರಿಕೆಯಿಂದ ಡಿಕೆಶಿ (DK Shivakumar) ಮಾತಾಡಲಿ ಎಂದು ಹೇಳಿದರು.
ಹೆಚ್ಡಿಕೆ ಸರ್ಕಾರ ಬೀಳಿಸಿದ್ದ ಸಂದರ್ಭದಲ್ಲಿ ಹೆಚ್ಚಾಗಿ ಬಂದವರು ಕಾಂಗ್ರೆಸ್‍ನವರೇ. ಸಿದ್ದರಾಮಯ್ಯ ಅವರಿಗೆ ಕೇಳಲಿ, ಯಾರು ಸರ್ಕಾರ ಬೀಳಿಸಿದ್ದು ಅಂತ. ಡಿಕಶಿ ಮೊದಲೇ ಸೋಲನ್ನ ಒಪ್ಪಿಕೊಂಡಿದ್ದಾರೆ ಎಂದು ಗರಂ ಆದರು.
ಬೀದರ್: ಎನ್‌ಡಿಆರ್‌ಎಫ್ ಪರಿಹಾರಕ್ಕಾಗಿ ಸರ್ಕಾರ ಸುಪ್ರೀಂನಲ್ಲಿ ಕೇಸ್ ಹಾಕಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸಿದ್ದರಾಮಯ್ಯನವರ (Siddaramaiah) ಈ ನಡೆ ಒಳ್ಳೆಯದಲ್ಲ ಎಂದು ಬೀದರ್‌ನಲ್ಲಿ ಸಿಎಂ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಗುಡುಗಿದರು.
ಸಿದ್ದರಾಮಯ್ಯ ಕಾಮನ್‌ಸೆನ್ಸ್ ಇಲ್ಲದ ಸಿಎಂ. ಮೇ ತಿಂಗಳಲ್ಲಿ ಬರಗಾಲ ಬಂದರೂ ಮೂರು ತಿಂಗಳು ಬಿಟ್ಟು ಘೋಷಿಸಿದ್ದು ಯಾಕೆ? ಮೂರು ತಿಂಗಳೇನು ಕತ್ತೆ ಕಾಯ್ತಿದ್ರಾ? 3 ತಿಂಗಳು ವಿಳಂಬ ಮಾಡದೇ ಇದ್ದಿದ್ರೆ ಕೇಂದ್ರ ಸರ್ಕಾರ ಪರಿಹಾರ ಹಣ ಪಡೆಯಬಹುದಿತ್ತಲ್ಲಾ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಮರಳಿ ‘ಕೈ’ ಹಿಡಿದು ಮತ್ತೆ ಗೆದ್ದ ಒಡೆಯರ್!
ಗ್ಯಾರಂಟಿ ಯೋಜನೆಗಳಿಗೆ ಹಣ ಕೊಟ್ಟು ರಾಜ್ಯ ಸರ್ಕಾರ ದಿವಾಳಿಯಾಗಿದೆ. ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಬೀದಿಗೆ ಬೀಳುತ್ತೆ. ಬೊಮ್ಮಾಯಿ 25 ಸಾವಿರ ಕೋಟಿ ರೂ. ಉಳಿತಾಯ ಬಜೆಟ್‌ನಿಂದ ಸರ್ಕಾರ ಬದುಕಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ಆರು ತಿಂಗಳ ಹಿಂದೆಯೇ ಬೀದಿಗೆ ಬರುತ್ತಿದ್ದರು ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುತ್ತಾರೆ ಅಂತಾ ಹೇಳಿದ್ರು. ಆದರೆ ಅವರು ಸೋತರೆ ಮಂತ್ರಿ ಸ್ಥಾನ ಹೋಗಲಿದೆ ಎಂಬ ಟಾಸ್ಕ್ ಕೊಟ್ಟಿದ್ದರು. ಹೀಗಾಗಿ ಬೀದರ್‌ನಿಂದ ಚಾಮರಾಜನಗರದವರೆಗೂ ಒಬ್ಬ ಮಂತ್ರಿಯೂ ಸ್ಪರ್ಧಿಸಲಿಲ್ಲ. ಕಾಂಗ್ರೆಸ್‌ಗೆ ವಿಧಿ ಇರದೇ, ಗತಿ ಇಲ್ಲದೇ ಮಂತ್ರಿ ಮಕ್ಕಳಿಗೆ ಮತ್ತು ಸೊಸೆಯಂದಿರಿಗೆ ಟಿಕೆಟ್ ಕೊಟ್ಟಿದ್ದು. ಕಾಂಗ್ರೆಸ್ ಯೋಗ್ಯತೆಗೆ ಯಾರು ಕಾರ್ಯಕರ್ತರೇ ಸಿಗಲಿಲ್ವಾ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ; ಬಿಜೆಪಿಗೆ ಅಡ್ಡಮತದಾನ ಮಾಡಿದ್ದ ನಾಲ್ವರು ಎಸ್‌ಪಿ ಶಾಸಕರಿಗೆ ‘ವೈ’ ಕೆಟಗರಿ ಭದ್ರತೆ
ಕಲಬುರಗಿ: 2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಸೋಲನುಭವಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಬಾರಿಯೂ ಸೋಲು ಖಚಿತ. ಆ ಭಯದಿಂದಲೇ ಚುನಾವಣೆಯಿಂದ ದೂರ ಸರಿದಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashoka) ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಎಲ್ಲರೂ ಮೀನುಗಳಿಗೆ ಗಾಳ ಹಾಕಿಕೊಂಡು ಕುಳಿತಿದ್ದಾರೆ. ಡಿಕೆ ಶಿವಕುಮಾರ್, ಜಿ. ಪರಮೇಶ್ವರ್, ಮಹದೇವ ಪ್ರಸಾದ್ ಅವರಿಂದ ಹಿಡಿದು ಸಾಕಷ್ಟು ಜನ ಮೀನು ಹಿಡಿಯಲು ಬಲೆ ಬೀಸಿದ್ದಾರೆ. ಆದ್ರೆ ಕಾಂಗ್ರೆಸ್ ಪಕ್ಷವನ್ನು ಸ್ವತಃ ಕಾಂಗ್ರೆಸ್ ಪಕ್ಷದವರೇ ಮುಗಿಸಲಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ. ನಾವು ಆಪರೇಷನ್ ಕಮಲ ಮಾಡಬೇಕು, ಅವರ ಪಕ್ಷವನ್ನು ಮುಗಿಸಬೇಕು ಅನ್ನೋದು ನಮ್ಮಲಿ ಇಲ್ಲ ಎಂದು ಕುಟುಕಿದ್ದಾರೆ.
ಬರ ಪರಿಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೊರೆ ಹೋದ ವಿಚಾರವಾಗಿ ಮಾತನಾಡಿದ ಅಶೋಕ್, ರಾಜ್ಯದ ಕಾಂಗ್ರೆಸ್ ನಾಯಕರಿಗೆ ನಾಚಿಕೆಗೇಡಿನ ಸಂಗತಿ. ರಾಜ್ಯದ ಕಾಂಗ್ರೆಸ್ ನಾಯಕರು, ಪಕ್ಕದ ತೆಲಂಗಾಣದ ಸಿಎಂ ರೇವಂತ ರೆಡ್ಡಿ ನೋಡಿ ಕಲಿತುಕೊಳ್ಳಲಿ, ಅವರು ಸಹ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಆದ್ರೆ ಮೊನ್ನೆ ಪ್ರಧಾನಿ ಮೋದಿ ಅವರು ಬಂದಾಗ ದೇಶದ ಪ್ರಧಾನಿ ಜೊತೆಗೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ರಾಜ್ಯದ ಕಾಂಗ್ರೆಸ್ ನಾಯಕರು ನೋಡಿ ಕಲಿತುಕೊಳ್ಳಲಿ ಎಂದಿದ್ದಾರೆ.
ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ಬರವಿದೆ. ಬರ ಬಂದಾಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಗಮಿಸಿ ವಿಸಿಟ್ ಮಾಡಿ ಹೋಗಿದೆ. ಐದು ತಿಂಗಳ ಬಳಿಕ ಅವರು ಹಣ ಬಿಡುಗಡೆ ಮಾಡಿದ್ದಾರೆ. ನಾವು ನಮ್ಮ ಅವಧಿಯಲ್ಲಿ ಕೇಂದ್ರ ಸರ್ಕಾರದ ಹಣ ಬರುವ ಮುನ್ನವೇ ಪರಿಹಾರ ನೀಡಿದ್ದೇವೆ. ನಮ್ಮದು ಪಾಪರ್ ಸರ್ಕಾರ ಇರಲಿಲ್ಲ. ಬದಲಾಗಿ ಸಮೃದ್ಧಿ ಸರ್ಕಾರವಿತ್ತು. ಒಂದು ತಿಂಗಳ ಕಾಲಾವಧಿಯಲ್ಲಿ ರೈತರಿಗೆ ಕೊಡಬೇಕಾದ ಹಣ ಕೊಟ್ಟಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧಮ್ ಇದ್ದರೆ, ನಮಗೆ ಕೇಳಲಿ ಪ್ರವಾಹ ಬಂದಾಗ ನೀವು ಯಾವಾಗ ಕೊಟ್ಟಿದಿರಾ ಅಂತ? ನೀವು ಕೇಂದ್ರ ಸರ್ಕಾರ ಪರಿಹಾರ ಕೊಟ್ಟ ಮೇಲೆ ಕೊಟ್ಟಿದ್ದಿವಾ? ಎಂದು ಕೇಳಲಿ ನಾನು ಉತ್ತರ ಕೊಡುತ್ತೇನೆ. ಆದ್ರೆ ಈ ರಾಜ್ಯ ಸರ್ಕಾರ ಪಾಪರ್ ಸರ್ಕಾರವಾಗಿದೆ ಎಂದು ತಿವಿದಿದ್ದಾರೆ.
ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ (KS Eshwarappa) ಪಕ್ಷದ ಹಿರಿಯ ನಾಯಕರು. ಬಂಡಾಯದಂತಹ ಯಾವುದೇ ನಿರ್ಧಾರ ಅವರು ಮಾಡಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ತಿಳಿಸಿದ್ದಾರೆ.
ಈಶ್ವರಪ್ಪ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅಂತಹ ಯಾವುದೇ ನಿರ್ಧಾರ ಮಾಡಲ್ಲ. ಒಂದು ವಾರ ಕಾದು ನೋಡಿ ಎಲ್ಲವೂ ಸರಿ ಆಗುತ್ತದೆ. ಈಶ್ವರಪ್ಪ ಪಕ್ಷ ಬಿಡಲ್ಲ. ಯಡಿಯೂರಪ್ಪ-ಈಶ್ವರಪ್ಪ ನಡುವೆ ಏನು ಮಾತುಕತೆ ಆಗಿದೆ ನಮಗೆ ಗೊತ್ತಿಲ್ಲ. ಯಡಿಯೂರಪ್ಪ (BS Yediyurappa) ಏನು ಮಾತು ಕೊಟ್ಟಿದ್ದಾರೋ ಗೊತ್ತಿಲ್ಲ. ಇದನ್ನು ಯಡಿಯೂರಪ್ಪ-ಈಶ್ವರಪ್ಪ ಕೂತು ಮಾತನಾಡಬೇಕು. ಹೈಕಮಾಂಡ್ ನಾಯಕರು ಇದನ್ನು ನೋಡಿಕೊಳ್ಳುತ್ತಾರೆ. ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಸಹಜ. ಹೀಗಾಗಿ ಈಶ್ವರಪ್ಪ ಹೀಗೆ ರಿಯಾಕ್ಟ್ ಮಾಡುತ್ತಾರೆ. ಹೈಕಮಾಂಡ್ ನಾಯಕರು ಅವರ ಜೊತೆ ಮಾತನಾಡುತ್ತಾರೆ. ಅವರು ಪಕ್ಷ ಬಿಡುವುದಿಲ್ಲ, ಎಲ್ಲವೂ ಸರಿ ಆಗುತ್ತದೆ ಎಂದರು. ಇದನ್ನೂ ಓದಿ: ನಾವು ಯಾರಿಗೂ ವಿಷ ಹಾಕುವವರಲ್ಲ- ಹೆಚ್‍ಡಿಕೆಗೆ ಡಿಕೆ ಸುರೇಶ್ ತಿರುಗೇಟು
ಸದಾನಂದಗೌಡ (DV Sadananda Gowda) ಅನ್ಯ ಪಕ್ಷ ಸೇರ್ಪಡೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸದಾನಂದಗೌಡ ಅವರ ಜೊತೆ ಮಾತನಾಡಿದ್ದೇನೆ. ಅವರು ಆತುರದ ನಿರ್ಧಾರ ಮಾಡಲ್ಲ. ನಾವೆಲ್ಲರು ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಆದರೆ ಹೈಕಮಾಂಡ್ ನಾಯಕರು ಟಿಕೆಟ್ ಶೋಭಾ ಅವರಿಗೆ ಕೊಟ್ಟಿದ್ದಾರೆ. ಹೈಕಮಾಂಡ್ ನಾಯಕರು ಸದಾನಂದಗೌಡರ ಜೊತೆ ಮಾತನಾಡುತ್ತಾರೆ. ಅವರು ಪಕ್ಷ ಬಿಡುವ ತೀರ್ಮಾನ ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಮುರಿಯೋಲ್ಲ, ಹಾಲು-ಜೇನು ರೀತಿ ಸಂಬಂಧ ಇರಲಿದೆ: ಆರ್.ಅಶೋಕ್
ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಯಾವುದೇ ಕಾರಣಕ್ಕೂ ಮುರಿಯೋದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈತ್ರಿ ನಾಯಕರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy ) ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಕಾರಣಕ್ಕೂ ಮೈತ್ರಿ ಮುರಿದು ಬೀಳುವುದಿಲ್ಲ. ಒಂದು ಸೀಟಿನ ವಿಚಾರದಲ್ಲಿ ಗೊಂದಲ ಇದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿ ಆಗುತ್ತದೆ. ಬಿಜೆಪಿ-ಜೆಡಿಎಸ್‍ನವರು ಹಾಲು-ಜೇನಿನ ರೀತಿ ಕೆಲಸ ಮಾಡುತ್ತೇವೆ. ಸಣ್ಣಪುಟ್ಟ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಎಚ್‍ಡಿಡಿ ಅಳಿಯನ ಸ್ಪರ್ಧೆ JDSನ ಫಸ್ಟ್ ಸೂಸೈಡ್ ಅಟೆಂಪ್ಟ್- ಡಿಕೆಶಿ ವ್ಯಂಗ್ಯ
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಜೆಡಿಎಸ್ 3 ಸೀಟು ಕೇಳಿದ್ದರು, ಈಗ ಎರಡು ಸೀಟ್ ಹಂಚಿಕೆ ಆಗಿದೆ. ಇನ್ನೊಂದು ಸೀಟು ಬಗ್ಗೆ ಚರ್ಚೆ ಆಗುತ್ತಿದೆ. ಶಿವಮೊಗ್ಗ ಸಭೆಯಲ್ಲಿ ಮಂಜುನಾಥ್ ಭಾಗಿಯಾಗಿದ್ದರು. ಗೆಲ್ಲುವ ದೃಷ್ಟಿಯಿಂದ ಮಂಜುನಾಥ್ (Dr.C.N Manjunath) ಅವರ ಬಗ್ಗೆ ಸ್ಟಾಟರ್ಜಿ ಮಾಡಿದ್ದೇವೆ. ದೆಹಲಿಗೆ ಹೋಗ್ತಾ ಇದ್ದೀನಿ. ಕೇಂದ್ರದ ನಾಯಕರಿಗೆ ಇಲ್ಲಿ ನಡೆದ ಮಾಹಿತಿ ಕೊಡುತ್ತೇನೆ. ಜನ ಸಾಮಾನ್ಯರು ಮಂಜುನಾಥ್ ಅವರನ್ನು ಜೆಡಿಎಸ್ ಲೆಕ್ಕದಲ್ಲಿ ಮಾತಾಡ್ತಿದ್ದಾರೆ. ನಮ್ಮ ಗುರಿ ಕಾಂಗ್ರೆಸ್ ಸೋಲು ಮಾತ್ರ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದರು.
3 ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀವಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ನಮ್ಮ ಹೈಕಮಾಂಡ್ ನಾಯಕರು ಕುಮಾರಸ್ವಾಮಿ ಜೊತೆ ಮಾತಾಡ್ತಾರೆ. ಎಷ್ಟು ಸೀಟು ಜೆಡಿಎಸ್‍ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಇಂದೇ ಬಹುತೇಕ ಅಂತಿಮ ಆಗುತ್ತದೆ. ಬಿಜೆಪಿ-ಜೆಡಿಎಸ್ ಸ್ಥಳೀಯವಾಗಿ ಹೊಂದಾಣಿಕೆ ಆಗಿದೆ. ಸೀಟು ಹಂಚಿಕೆ ಆದ ಮೇಲೆ ಎಲ್ಲಾ ಕಡೆ ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಓಡಾಡುತ್ತೇವೆ. ಒಟ್ಟಾಗಿ ಸಮಾವೇಶ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರಾಜಕೀಯವಾಗಿ ಡಿಕೆಶಿ ನನಗೆ ವಿಷ ಹಾಕಿದ್ದಾರೆ: ಹೆಚ್‍ಡಿಕೆ ಕಿಡಿ
ಬೆಂಗಳೂರು: ನಗರದ ಉತ್ತರ ಕ್ಷೇತ್ರದಿಂದ (Bengaluru North) ಶೋಭಾ ಕರಂದ್ಲಾಜೆ (Shobha Karandlaje) ಸ್ಪರ್ಧೆಗೆ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ನಾವು ಹೇಳಿದ್ದು ನಿಜ. ಅವರನ್ನ ಭೇಟಿಯಾಗಿ, ನೀವೇ ನಿಂತುಕೊಳ್ಳಬೇಕು ಎಂದು ಕೇಳಿದ್ದೇವೆ. ಈಗಲೂ ನಾವು ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದೇವೆ. ಉಳಿದದ್ದು ಕೇಂದ್ರ ಹಾಗೂ ದೇವರಿಗೆ ಬಿಟ್ಟಿದ್ದು. ಈಗಲೂ ನಾವು ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ಹೇಳಿದ್ದೇವೆ. ನಾವು ಕೇಂದ್ರದ ನಾಯಕರ ಜೊತೆ ಮಾತಾಡ್ತೀವಿ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವರು ಕೋಮುಭಾವನೆ ಸೃಷ್ಟಿಸೋಕೆ ಸಿಎಎ ವಿರೋಧ ಮಾಡ್ತಿದ್ದಾರೆ: ಆರ್.ಅಶೋಕ್
ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಬರುವ ವಿಚಾರಕ್ಕೆ ಸ್ಥಳೀಯ ಶಾಸಕರ ವಿರೋಧ ಇದೆ. ಹೊರಗಿನವರಿಗೆ ಟಿಕೆಟ್ ಕೊಡುವುದು ಬೇಡ ಎಂದು ಬೆಂಗಳೂರು ಉತ್ತರದ ಶಾಸಕರು ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ನಾಯಕರಿಗೆ ಅದನ್ನು ಹೇಳ್ತೀವಿ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ.
ಬೆಂಗಳೂರು: ಸಿಎಎ (CAA) ಕಾಯ್ದೆ ವಿರೋಧ ಮಾಡುತ್ತಿರುವುದು ಕಾಂಗ್ರೆಸ್‍ನ (Congress) ಮತ ರಾಜಕಾರಣ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ಸಿಎಎ ಕಾಯ್ದೆಯನ್ನ ಸ್ವಾಗತ ಮಾಡ್ತೀವಿ. ಕಾಂಗ್ರೆಸ್‍ನವರು ಈ ವಿಷಯ ಇಟ್ಟುಕೊಂಡು ಕೋಮುಭಾವನೆ ಸೃಷ್ಟಿ ಮಾಡೋಕೆ ಪ್ರಯತ್ನ ಮಾಡ್ತಿದೆ. ಈಗಾಗಲೇ ಕಾಯ್ದೆಯಲ್ಲಿ ಸ್ಪಷ್ಟವಾಗಿ ಇದೆ. ನಮ್ಮ ದೇಶದ ಅಲ್ಪಸಂಖ್ಯಾತರಿಗೆ ಇದು ಅನ್ವಯ ಆಗುವುದಿಲ್ಲ. ಬೇರೆ ದೇಶದ ಅಲ್ಪಸಂಖ್ಯಾತರಿಗೆ ಇದು ಅನ್ವಯ ಆಗುತ್ತದೆ. ಹೀಗಿದ್ರು ಕಾಂಗ್ರೆಸ್ ವಿರೋಧ ಮಾಡ್ತಿದೆ. ಕಾಂಗ್ರೆಸ್‍ಗೆ ಮಾನವೀಯತೆಯ ಕೊರತೆ ಇದೆ. ಕಾಂಗ್ರೆಸ್‍ಗೆ ಕಾಮಾಲೆ ಕಣ್ಣು. ಅಲ್ಪಸಂಖ್ಯಾತ ಮತ ಒಲೈಕೆಗಾಗಿ ಸಿಎಎ ವಿರೋಧ ಮಾಡ್ತಿದೆ. ಈ ಕಾಯ್ದೆಯನ್ನು ನಾವು ಸ್ವಾಗತ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಜೀವ ಇರುವವರೆಗೂ ನಾನು ಮೋದಿ ಭಕ್ತ: ಪ್ರತಾಪ್ ಸಿಂಹ