Tag: r ashok

  • ರಾಜ್ಯದಲ್ಲಿ ತುಘಲಕ್ ಆಡಳಿತ ಇಲ್ಲ, ಸಿದ್ದರಾಮಯ್ಯ ಸರ್ಕಾರವೇ ಇರೋದು: ಬಿಜೆಪಿಗೆ ಸಿಎಂ ತಿರುಗೇಟು

    ರಾಜ್ಯದಲ್ಲಿ ತುಘಲಕ್ ಆಡಳಿತ ಇಲ್ಲ, ಸಿದ್ದರಾಮಯ್ಯ ಸರ್ಕಾರವೇ ಇರೋದು: ಬಿಜೆಪಿಗೆ ಸಿಎಂ ತಿರುಗೇಟು

    ಬೆಂಗಳೂರು: ರಾಜ್ಯದಲ್ಲಿ ಮೊಹಮ್ಮದ್ ಬಿನ್ ತುಘಲಕ್ ಆಡಳಿತ ಇಲ್ಲ, ಸಿದ್ದರಾಮಯ್ಯ (Siddaramaiah) ಸರ್ಕಾರವೇ ಇದೆ ಎಂದು ಬಿಜೆಪಿಗೆ (BJP) ಸಿಎಂ ತಿರುಗೇಟು ನೀಡಿದ್ದಾರೆ.

    ವಿಧಾನಸಭೆಯಲ್ಲಿ (Vidhanasabha Session) ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ (Private Sector Quota Bill) ವಿಚಾರದಲ್ಲಿ ಸಿಎಂ ಪೋಸ್ಟ್ ಪದೇ ಪದೇ ಬದಲಾಗಿದೆ. ಮೂರು ಬಾರಿ ನಿಲುವು ಬದಲಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಈ ಬೆಳವಣಿಗೆ ಒಳ್ಳೆಯದಲ್ಲ. ಇದೊಂದು ರೀತಿ ತುಘಲಕ್ ದರ್ಬಾರ್ ಆಗಿದೆ. ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮದ್ಯದ ಅಂಗಡಿಗೆ ಪರವಾನಗಿ ನೀಡಲು ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದಾರೆ – ಕಾಂಗ್ರೆಸ್‌ ಸದಸ್ಯ ಬಾಂಬ್‌!

    ಈ ವೇಳೆ ಉತ್ತರಿಸಿದ ಸಿಎಂ, ಯಾವ ಮೊಹಮ್ಮದ್ ಬಿನ್ ತುಘಲಕ್ ಆಡಳಿತ ಇಲ್ಲ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಿಲ್ ಬಗ್ಗೆ ಕ್ಯಾಬಿನೆಟ್‍ನಲ್ಲಿ ಪೂರ್ಣ ಪ್ರಮಾಣದಲ್ಲಿ ಚರ್ಚೆ ಆಗಿಲ್ಲ. ಆದರೆ ಅದಕ್ಕೂ ಮುನ್ನ ಮಾಧ್ಯಮಗಳಲ್ಲಿ ಬಂದಿದೆ. ಹಾಗಾಗಿ ಮುಂದಿನ ಕ್ಯಾಬಿನೆಟ್‍ನಲ್ಲಿ ಸಮಗ್ರವಾಗಿ ಚರ್ಚೆ ಮಾಡಿ ಬಿಲ್ ತರುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಅಫ್ಜಲ್‌ ಖಾನ್‌ ಕೊಲ್ಲಲು ಛತ್ರಪತಿ ಶಿವಾಜಿ ಬಳಿಸಿದ್ದ ‘ವಾಘ್‌ ನಖ್‌’ ಅಸ್ತ್ರ ಜು.19ಕ್ಕೆ ಲಂಡನ್‌ನಿಂದ ಭಾರತಕ್ಕೆ

  • ಸದನದಲ್ಲಿ ವಾಲ್ಮೀಕಿ ನಿಗಮ ಹಗರಣ ಗದ್ದಲ – ಸಿಎಂ, ಸಚಿವರ ವಿರುದ್ಧ ಬಿಜೆಪಿ ನಾಯಕರ ಕಿಡಿ

    ಸದನದಲ್ಲಿ ವಾಲ್ಮೀಕಿ ನಿಗಮ ಹಗರಣ ಗದ್ದಲ – ಸಿಎಂ, ಸಚಿವರ ವಿರುದ್ಧ ಬಿಜೆಪಿ ನಾಯಕರ ಕಿಡಿ

    – ನೀವು ಲೂಟಿಕೋರರು: ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ವಾಗ್ದಾಳಿ
    – ಸಿಎಂ ರಾಜೀನಾಮೆಗೆ ಆರ್.ಅಶೋಕ್ ಆಗ್ರಹ

    ಬೆಂಗಳೂರು: ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ ಸರ್ಕಾರ ಹಾಗೂ ವಿಪಕ್ಷ ನಾಯಕರ ಗದ್ದಲಕ್ಕೆ ಕಾರಣವಾಯಿತು. ಸದನದಲ್ಲಿ ಜಟಾಪಟಿಯೂ ತಾರಕಕ್ಕೆ ಏರಿತ್ತು.

    ಬಿಜೆಪಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿ, ಸದನದಲ್ಲಿ ಕಾಂಗ್ರೆಸ್‌ನವರು ಯಾರೂ ಇಲ್ಲ, ಸಿಎಂ ಇಲ್ಲ, ಸಚಿವರು ಇಲ್ಲ ಎಂದು ಅಸಮಾಧಾನ ಹೊರಹಾಕಿದರು. ಖುದ್ದು ಸಿಎಂ ಮೇಲೆ ಆರೋಪವಿದೆ. ಆದರೆ ಇದರ ಚರ್ಚೆ ವೇಳೆ ಸಿಎಂ ಇಲ್ಲ. ಇದೇನಾ ಅವರ ಜವಾಬ್ದಾರಿ? ಸದನ ನಡೀತಿದೆ, ಸದನಕ್ಕೆ ಬರಲು ಸಿಎಂಗೆ ಪುರುಸೊತ್ತಿಲ್ವಾ? ಕರೆಸಿ ಸಿಎಂನಾ ಎಂದು ಕಿಡಿಕಾರಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹೌದು.. ನೀವು ಲೂಟಿ ಮಾಡಿದ್ದಕ್ಕೆ ಜನ ನಮ್ಮನ್ನ ಇಲ್ಲಿ ಕೂರಿಸಿರೋದು. ನೀವು ಮಾಡಬಾರದ ಲೂಟಿ ಮಾಡಿದ್ದಕ್ಕೆ ನಿಮ್ಮನ್ನ ಜನ ಅಲ್ಲಿ ಕೂರಿಸಿರೋದು. ನೀನು ಲೂಟಿ ಮಾಡುವವರ ಪಿತಾಮಹ ಅಂತಾ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    ಡಿಸಿಎಂ ನನ್ನ ಹೆಸರು ಹೇಳಿ ಆರೋಪ ಮಾಡಿದ್ದಾರೆ. ಹಿಟ್ ಅಂಡ್ ರನ್ ಹೇಳಿಕೆ ಕೊಟ್ಟಿದ್ದಾರೆ. ನಾನು ಮಾಡಬಾರದ್ದು ಏನು ಮಾಡಿದ್ದೀನಿ ಅಂತಾ ಡಿಕೆಶಿವಕುಮಾರ್ ಹೇಳಬೇಕು. ನಾವು ನಿಮ್ಮ ಹಾಗೆ ಓಡಿ ಹೋಗಲ್ಲ. ಇಲ್ಲೇ ಇರ್ತೇವೆ. ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಅಶ್ವಥ್ ನಾರಾಯಣ್ ಸೇರಿದಂತೆ ಬಿಜೆಪಿ ಶಾಸಕರು ಪಟ್ಟು ಹಿಡಿದರು. ಆಡಳಿತ ಹಾಗೂ ವಿಪಕ್ಷ ನಾಯಕರ ಗದ್ದಲ ಏರ್ಪಟ್ಟಿತು.

    ನಿಗಮದ ಅಕ್ರಮ ಪ್ರಕರಣ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸಿಎಂ ಅವರು 187 ಕೋಟಿ ಅಕ್ರಮ ವರ್ಗಾವಣೆ ಆಗಿಲ್ಲ. ವರ್ಗಾವಣೆ ಆಗಿರೋದು 89.62 ಕೋಟಿ ಅಂದ್ರು. ಅಲ್ಲಿಗೆ ಅಕ್ರಮ ವರ್ಗಾವಣೆ ಆಗಿರೋದನ್ನ ಸಿಎಂ ಒಪ್ಪಿಕೊಂಡ ಹಾಗಾಯ್ತಲ್ಲ. ಎಂಜಿ ರಸ್ತೆಯಲ್ಲಿ ಕಳ್ಳತನಕ್ಕೆ ಅಂತಾನೇ ಖಾತೆ ತೆರೆದು 187 ಕೋಟಿ ಕದ್ದು ವರ್ಗಾವಣೆ ಮಾಡಿದ್ದಾರೆ. ಕಳವು ಮಾಡಲು 187 ಕೋಟಿ ವರ್ಗಾವಣೆ ಮಾಡಿದ್ರೆ ಹಗರಣ ಸಹ 187 ಕೋಟಿ ಅಷ್ಟೇ ಆಗಿದೆ ಅಂತರ್ಥ. ಸಿಎಂ 89.62 ಕೋಟಿ ಅಂತಾ ಹೇಗೆ ಹೇಳ್ತಾರೆ? ಇದು ಪಕ್ಕಾ 187 ಕೋಟಿ ಅಕ್ರಮನೇ. ಕದ್ದು ಇನ್ನೊಂದು ಕಡೆ ಇಟ್ಟಿದ್ದಾರೆ ಅಂದ್ರೆ ಅದು ನಿಗಮದ ಹಣ ತಾನೇ? ಈ ಕಳ್ಳತನ ಸಿಎಂಗೆ ಗೊತ್ತಿದ್ರೂ ಅವರದ್ದೇ ತಪ್ಪು ಗೊತ್ತಿಲ್ಲ ಅಂದ್ರೂ ಅವರದ್ದೇ ತಪ್ಪು. ಯಾಕಂದ್ರೆ ಸಿಎಂ ಅವರೇ ಯಜಮಾನರು ಎಂದು ಆರೋಪಿಸಿದರು.

    ವಾಲ್ಮೀಕಿ ಪ್ರಕರಣದಲ್ಲಿ ಎಸ್‌ಐಟಿ ವಿಫಲ ಆಗಿದೆ. ನಾಗೇಂದ್ರ ಎಸ್‌ಐಟಿ ವಿಚಾರಣೆ ಎದುರಿಸಿ ನಗ್ತಾ ಹೋಗ್ತಾರೆ, ನಗ್ತಾ ಬರ್ತಾರೆ. ಅದೇ ರೇವಣ್ಣ ಎಸ್‌ಐಟಿ ವಿಚಾರಣೆಗೆ ಮುನ್ನ ಬೇಲ್ ಬೇಲ್ ಅಂತಾ ಓಡ್ತಾರೆ. ಇದು ಎಸ್‌ಐಟಿ ವೈಫಲ್ಯ. ವಾಲ್ಮೀಕಿ ಪ್ರಕರಣ ಮುಚ್ಚಿ ಹಾಕಲು ಎಸ್‌ಐಟಿ ರಚನೆ ಆಗಿದೆಯಾ? ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಎಸ್‌ಐಟಿ ಏನ್ ಮಾಡ್ತಿದೆ. ನಾಗೇಂದ್ರಗೆ ಒಂದು ಕಾನೂನು ಬೇರೆಯವರಿಗೆ ಒಂದು ಕಾನೂನಾ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

    ಅಶೋಕ್ ಮಾತಿಗೆ ಶಾಸಕ ರಿಜ್ವಾನ್ ಅರ್ಷದ್ ಆಕ್ಷೇಪ ವ್ಯಕ್ತಪಡಿಸಿದರು. ಈ ಪ್ರಕರಣ, ಆ ಪ್ರಕರಣ ಒಂದೇನಾ? ಅಲ್ಲಿ ನೂರಾರು ಮಹಿಳೆಯರ ಮಾನ ಹೋಗಿದೆ. ಮಹಿಳೆಯರ ಮಾನದ ಬಗ್ಗೆ ಚಿಂತೆ ಇಲ್ವಾ? ಪದೇ ಪದೇ ಎರಡರ ತುಲನೆ ಮಾಡಿ ಮಾತಾಡ್ತಿದ್ದಾರೆ ಅಶೋಕ್. ರೇವಣ್ಣ ಪ್ರಕರಣ ಗಂಭೀರ ಅಲ್ವಾ ಎಂದು ಪ್ರಶ್ನಿಸಿದರು.

    ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಿದೆ. ವಾಲ್ಮೀಕಿ ಜನಾಂಗದ ಶಾಪ ಸರ್ಕಾರಕ್ಕೆ ತಟ್ಟಬಾರದು ಅಂದ್ರೆ ಕೂಡಲೇ 187 ಕೋಟಿ ವಾಪಸ್ ಪಡೆಯಿರಿ. ಪ್ರಕರಣದ ಸಿಬಿಐ ತನಿಖೆ ಆಗಬೇಕು. ಇದು ಸಿಎಂ ಹಣಕಾಸು ಇಲಾಖೆಗೆ ಬರುತ್ತೆ, ಸಿಎಂ ನೈತಿಕ ಹೊಣೆ ಹೊರಬೇಕು. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಅಶೋಕ್ ಆಗ್ರಹಿಸಿದರು. ಮೇಜು ಕುಟ್ಟಿ ಬಿಜೆಪಿ ಸದಸ್ಯರು ಸ್ವಾಗತಿಸಿದರು.

    ಸಿಎಂ ರಾಜೀನಾಮೆಗೆ ಅಶೋಕ್ ಒತ್ತಾಯಿಸಿದ್ದಕ್ಕೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಮತ್ತೆ ಗದ್ದಲ ಶುರುವಾಯಿತು. ಅಶೋಕ್ ಚರ್ಚೆ ಮುಗಿದ ಬೆನ್ನಲ್ಲೇ ವಾಕ್ಸಮರ ತಾರಕಕ್ಕೇರಿತು.

  • ಮುಡಾ, ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ: ವಿಜಯೇಂದ್ರ

    ಮುಡಾ, ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ: ವಿಜಯೇಂದ್ರ

    -ಕಾಂಗ್ರೆಸ್‍ಗೆ ದಲಿತರ ವೋಟು, ನೋಟು, ಸಾವು ಬೇಕು: ಅಶೋಕ್

    ಬೆಂಗಳೂರು: ಸಾವಿರಾರು ಕೋಟಿ ರೂ. ಮೊತ್ತದ ಮುಡಾ ಹಗರಣ ಮತ್ತು ದಲಿತರ ಹಣವನ್ನು ಲೂಟಿ ಮಾಡಿದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಉತ್ತರ ಕೊಡಬೇಕು ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y Vijayendra) ಅವರು ಆಗ್ರಹಿಸಿದರು.

    ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಶಾಸಕರ ಭವನದ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ನಡೆಸಿದರೆ ಸಾಲದು. ಸಿಎಂಗೆ ನಿಜವಾಗಿಯೂ ತಾಕತ್ತಿದ್ದರೆ ಮುಡಾ ಹಗರಣದ (MUDA scam) ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

    ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬವೇ ಪಾಲುದಾರರಾಗಿದ್ದಾರೆ. ಸಾವಿರಾರು ಕೋಟಿ ರೂ. ಬೆಲೆಬಾಳುವ ನಿವೇಶನಗಳಿಗೆ ಮೈಸೂರು ಮುಡಾ ಹಗರಣ ನಡೆದಿದೆ. ಈ ಹಗರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಸದನದ ಹೊರಗೆ ಹೋರಾಟ ನಡೆಸಿದ್ದೇವೆ. ಸದನದ ಒಳಗೆ ಕೂಡ ಹೋರಾಟ ಮುಂದುವರೆಯಲಿದೆ. ಅಲ್ಲದೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

    ಸಿದ್ದರಾಮಯ್ಯನವರು (Siddaramaiah) ದಲಿತರ ಹೆಸರು ಹೇಳಿಕೊಂಡು, ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದವರಿಗೆ ನ್ಯಾಯ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದವರು. ಆದರೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಲ್ಲದೆ, ಅದೇ ಮೊತ್ತದಲ್ಲಿ ಲೋಕಸಭಾ ಚುನಾವಣೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರದ ಬಂಡವಾಳ ಈ ಮೂಲಕ ಬಯಲಾಗಿದೆ ಎಂದಿದ್ದಾರೆ.

    ನಿಗಮದ ಅಧ್ಯಕ್ಷ ದದ್ದಲ್ ಕಾಣೆ
    ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಕೂರಲು ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ನಿಮ್ಮ ಮಾಜಿ ಸಚಿವ ನಾಗೇಂದ್ರ ಅವರು ಇ.ಡಿ. ಕಸ್ಟಡಿಯಲ್ಲಿದ್ದಾರೆ. ನಿಗಮದ ಅಧ್ಯಕ್ಷರೂ ಆದ ಶಾಸಕ ದದ್ದಲ್ ಕಾಣೆಯಾಗಿದ್ದಾರೆ. ಹಾಗಿದ್ದರೆ ಸಿಎಂ ಉತ್ತರ ಕೊಡಬೇಕಲ್ಲವೇ? ಅಧಿಕಾರಿಗಳು ಸೇರಿಕೊಂಡು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಮಾಡಿದ್ದಾಗಿ ಹೇಳುವ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅವರ ಶಾಸಕರಿಗೆ ಕ್ಲೀನ್ ಚಿಟ್ ಕೊಡುವ ದುಸ್ಸಾಹಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಭ್ರಷ್ಟಾಚಾರ ರಹಿತ ಆಡಳಿತ ಕೊಡುವುದಾಗಿ ಹೇಳಿ ಜನರ ಕಿವಿಗೆ ಹೂವು ಇಟ್ಟಿದ್ದರು. ಆದರೆ, ಅವರ ಬಂಡವಾಳ ಬಯಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

    ಮುಖ್ಯಮಂತ್ರಿಗಳು ನಿಜವಾಗಿ ಪ್ರಾಮಾಣಿಕರೇ ಆಗಿದ್ದರೆ, ನಿಷ್ಪಕ್ಷಪಾತ ತನಿಖೆ ಆಗಬೇಕೆಂದಿದ್ದರೆ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ವಾಲ್ಮೀಕಿ ನಿಗಮದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ ಕುರಿತು ಇ.ಡಿ ತಿಳಿಸಿದ ಹಿನ್ನೆಲೆಯಲ್ಲಿ ಇವೆರಡೂ ಹಗರಣಗಳ ಬಗ್ಗೆ ಸದನದಲ್ಲಿ ಉತ್ತರ ಕೊಡಬೇಕು. ವಾಲ್ಮೀಕಿ ನಿಗಮದ ಹಗರಣದ ಸಂಬಂಧ ನಾವು ನಿಲುವಳಿ ಸೂಚನೆ ಮಂಡಿಸುತ್ತಿದ್ದೇವೆ. ಇದರ ಕುರಿತು ಚರ್ಚೆ ಆಗಲೇಬೇಕು. ಸಿಎಂ ಉತ್ತರ ಕೊಡಲೇಬೇಕು ಎಂದು ಅವರು ಒತ್ತಾಯಿಸಿದರು.

    ಎಲ್ಲಾ ಹಗರಣವನ್ನೂ ಸಿಬಿಐ ತನಿಖೆಗೆ ಕೊಡಿ
    ಯಾವ ಸರ್ಕಾರ ಇದ್ದಾಗ ಮುಡಾದಲ್ಲಿ ಹಗರಣ ನಡೆದಿದ್ದರೂ ಎಲ್ಲಾ ಸೇರಿಸಿ ಸಿಬಿಐ ತನಿಖೆಗೆ ಒಪ್ಪಿಸಿ. ಸಿಎಂ ಕುಟುಂಬವೇ ಈ ಹಗರಣದಲ್ಲಿ ಭಾಗಿಯಾಗಿದೆ. ನಿಮಗೆ ಬೇಕಾದಂತೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿದರೆ ಸಾಕಾಗುವುದಿಲ್ಲ. ಸಿಬಿಐ ತನಿಖೆಗೆ ಕೊಡಲೇಬೇಕು. ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಹೆದರಿಸುವ ಕೆಲಸ ಮಾಡದ್ದೀರಿ ಎಂದು ಅವರು ಕಿಡಿಕಾರಿದ್ದಾರೆ.

    ಎರಡೂ ಹಗರಣಗಳನ್ನು ಒಂದು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಅಲ್ಲಿನವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಹೇಳಿದ್ದಾರೆ.

    ಕಾಂಗ್ರೆಸ್‍ಗೆ ದಲಿತರ ಸಾವು ಬೇಕು
    ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಅಧಿಕಾರಿಯೂ ದಲಿತರೇ ಆಗಿದ್ದಾರೆ. ಕಾಂಗ್ರೆಸ್ಸಿಗರಿಗೆ ದಲಿತರ ಮತ ಬೇಕು. ದಲಿತರ ನೋಟು ಕೂಡ ಬೇಕು. ದಲಿತರ ಸಾವು ಬೇಕು. ಇದು ಕಾಂಗ್ರೆಸ್ ನೀತಿ. ಈ ಸರ್ಕಾರ ನೈತಿಕವಾಗಿ ಸತ್ತು ಹೋಗಿದೆ. ಅಧಿಕಾರದಲ್ಲಿ ಉಳಿಯುವ ಯೋಗ್ಯತೆ ಕಳಕೊಂಡಿದೆ. ಮಾನ ಮರ್ಯಾದೆ ಇದ್ದರೆ ಸಿಎಂ ರಾಜೀನಾಮೆ ಕೊಡಬೇಕಿತ್ತು. ಇವತ್ತು ಯಾವ ಮುಖ ಇಟ್ಟುಕೊಂಡು ವಿಧಾನಸೌಧಕ್ಕೆ ಬರುತ್ತಾರೋ ಅರ್ಥ ಆಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

  • ಸರ್ಕಾರ ಡೆಂಗ್ಯೂ ಎಮರ್ಜೆನ್ಸಿ ಘೋಷಣೆ ಮಾಡಲಿ: ಆರ್.ಅಶೋಕ್ ಆಗ್ರಹ

    ಸರ್ಕಾರ ಡೆಂಗ್ಯೂ ಎಮರ್ಜೆನ್ಸಿ ಘೋಷಣೆ ಮಾಡಲಿ: ಆರ್.ಅಶೋಕ್ ಆಗ್ರಹ

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ (Dengue) ಮಹಾಮಾರಿಯ ಅಬ್ಬರ ಜೋರಾಗುತ್ತಿದೆ. ಪ್ರತಿನಿತ್ಯ ಮೂರ್ನಾಲ್ಕು ಸಾವು ಆಗುತ್ತಿದೆ. ಸರ್ಕಾರ ಮಾತ್ರ ಇನ್ನೂ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಬರೀ ಸಭೆ ಅಂತಾ ಸಮಯ ಕಳೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸರ್ಕಾರದ ವಿರುದ್ಧ ಗುಡುಗಿದ್ದಾರೆ.

    ಭಾನುವಾರ ಜಯನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಗ್ಯೂ ರೋಗಿಗಳ ಆರೋಗ್ಯ ವಿಚಾರಿಸಿದ ಅವರು, ಸರ್ಕಾರ ಕೂಡಲೇ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು. ಡೆಂಗ್ಯೂ ಟೆಸ್ಟಿಂಗ್ ನಿಂದ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊರಬೇಕು. ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು. ಜನರ ಪ್ರಾಣದ ರಕ್ಷಣೆಗೆ ಸರ್ಕಾರ ಹಣ ಬಿಡುಗಡೆ ಮಾಡಿ. ಎಲ್ಲ ಆಸ್ಪತ್ರೆಯಲ್ಲೂ ಕೊರೊನಾ ಮಾದರಿಯಲ್ಲಿ ಡೆಂಗ್ಯೂಗಾಗಿ ಬೆಡ್‌ಗಳ ವ್ಯವಸ್ಥೆ ಮಾಡಿಸಬೇಕು ಎಂದು ಆಗ್ರಹ ಪಡಿಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣದಲ್ಲಿ ಸರ್ಕಾರ ವಿಫಲ: ಶೋಭಾ ಕರಂದ್ಲಾಜೆ ಕಿಡಿ

    ಸರ್ಕಾರವನ್ನ ಎಚ್ಚರಿಸುವ ಕೆಲಸ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ದೇನೆ. ಈ ಸರ್ಕಾರವನ್ನ ಎಚ್ಚರಿಸದೇ ಹೋದರೆ ಯಾವ ಕೆಲಸವನ್ನೂ ಮಾಡೋದಿಲ್ಲ. ನಾಳೆಯಿಂದ ಇಡೀ ರಾಜ್ಯಾದ್ಯಂತ ನಮ್ಮ ಪಕ್ಷದ ನಾಯಕರು, ಶಾಸಕರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ನಿಗಾವಹಿಲಿದ್ದಾರೆ ಎಂದು ತಿಳಿಸಿದ್ದಾರೆ.

    ನಾನು ಈ ಹಿಂದೆ ಆರೋಗ್ಯ ಸಚಿವನಾಗಿ ಕೆಲಸ ಮಾಡಿದ್ದೆ. ನಾನು ಸರ್ಕಾರಕ್ಕೆ ಆಗ್ರಹ ಮಾಡ್ತೀನಿ. ಡೆಂಗ್ಯೂ ಪರೀಕ್ಷೆಯನ್ನ ಉಚಿತವಾಗಿ ಮಾಡುವಂತೆ ಆದೇಶ ಮಾಡಿ. ಜನ ಟೆಸ್ಟ್ ಮಾಡಿಸಿಕೊಳ್ಳದೇ ಇರುವುದರಿಂದ ಡೆಂಗ್ಯೂ ಹೆಚ್ಚಾಗುತ್ತಿದೆ. ನಮ್ಮ ಸರ್ಕಾರದ ಸಮಯದಲ್ಲಿ ಹೇಗೆ ಕೊರೊನಾ ಟೆಸ್ಟ್ ಉಚಿತ ಮಾಡಿದ್ವಿ. ಆ ರೀತಿ ಡೆಂಗ್ಯೂಗೆ ಟೆಸ್ಟಿಂಗ್ ಮಾಡಿಸಿ. ಅದಕ್ಕೂ ಆಮೇಲೆ ಟ್ಯಾಕ್ಸ್ ಹಾಕಬೇಡಿ. ಡೆಂಗ್ಯೂ ಟೆಸ್ಟಿಂಗ್‌ಗೆ ಚಿಕಿತ್ಸೆಗೆ 10 ಕೋಟಿ ಆಗಬಹುದಾ? ಅದಕ್ಕೆ ಖರ್ಚು ಮಾಡಿ. ಸರ್ಕಾರವೇ ಜನರಿಗೆ ಅಭಯ ನೀಡಬೇಕು. ಕೋವಿಡ್ ಮಾದರಿಯಲ್ಲಿ ಡೆಂಗ್ಯೂಗೆ ಪ್ರತೇಕ ವಾರ್ಡ್ ಮಾಡಿಸಿ. ಅಧಿಕಾರಿಗಳು ಎಸಿ ರೂಮ್‌ನಿಂದ ಹೊರಬಂದು ಕೆಲಸ ಮಾಡಬೇಕು. ನಗರದಲ್ಲಿ ಸ್ವಚ್ಛತೆ ಇಲ್ಲದಂತೆ ಆಗಿದೆ. ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೆ ಮುಂದಾಗಬೇಕು. ಉಚಿತ ಟೆಸ್ಟಿಂಗ್, ಚಿಕಿತ್ಸೆ ಮತ್ತು ಔಷಧವನ್ನ ನೀಡಿ. ಇಲ್ಲೇ 14 ರೋಗಿಗಳಿದ್ದು, 4 ಮಕ್ಕಳಿದ್ದಾರೆ. ಮಕ್ಕಳಿಗೂ ಡೆಂಗ್ಯೂ ಹಬ್ಬುತ್ತಿದೆ. ಇದನ್ನ ಸರ್ಕಾರ ಗಮನಿಸಬೇಕು. ವಿರೋಧ ಪಕ್ಷದ ನಾಯಕನಾಗಿ ನಾನು ಸರ್ಕಾರವನ್ನ ಎಚ್ಚರಿಸೋ ಕೆಲಸ ಮಾಡ್ತಿದ್ದೇನೆ. ಈ ಸರ್ಕಾರಕ್ಕೆ ವಿರೋಧ ಪಕ್ಷ ಎಚ್ಚರಿಸಿದ್ರೇ ಮಾತ್ರ ಕೆಲಸ ಮಾಡೋದು. ನಮ್ಮ ರಾಜ್ಯಾಧ್ಯಕ್ಷರು ಸೇರಿದಂತೆ ಉಳಿದ ನಾಯಕರು ಸಹ ನಾಳೆಯಿಂದ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದಾರೆ. ಇದರಿಂದ ಆಸ್ಪತ್ರೆಯವರು ಸಹ ಆಕ್ಟೀವ್ ಆಗ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಶಂಕಿತ ಡೆಂಗ್ಯೂಗೆ ಯುವತಿ ಬಲಿ

    ಡೆಂಗ್ಯೂ ಎಮರ್ಜೆನ್ಸಿ ಅಂತಾ ಸರ್ಕಾರ ಘೋಷಣೆ ಮಾಡಲಿ. ಜನರ ರಕ್ಷಣೆ ಮಾಡಿ, ರಾಜ್ಯದಲ್ಲಿ ಝಿಕಾ ವೈರಸ್‌ನಿಂದ ಒಬ್ಬರು ಮೃತಪಟ್ಟಿದ್ದಾರೆ. ಕಾಲಾರದಿಂದ ಸಹ ಜನ ಸಾಯ್ತಿದ್ದಾರೆ. ಈಗ ಡೆಂಗ್ಯೂ ಸಹ ಹೆಚ್ಚಾಗಿದೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.

    ಸರ್ಕಾರ ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತಿದೆ. ಸಭೆ ಮಾಡುವುದರಿಂದ ನಿಯಂತ್ರಣಕ್ಕೆ ಬರುವುದಿಲ್ಲ. ಸರ್ಕಾರ ಯಾವುದಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದೇವೆ ಅಂತಾ ಹೇಳಿ. ಆರ್ಥಿಕವಾಗಿ ಸರ್ಕಾರ ಯಾವ ರೀತಿಯಲ್ಲಿ ಡೆಂಗ್ಯೂ ತಡೆಯಲು ಹಣ ಬಿಡುಗಡೆ ಮಾಡಿದೆ ಅನ್ನೋದನ್ನ ಹೇಳಬೇಕು. ಅದುಬಿಟ್ಟು ಬರೀ ಸಭೆ ಮಾಡಿದ್ರೆ? ಕಾಫಿ, ಟೀ ದೋಸೆಗೆ ಸೀಮಿತವಾಗುತ್ತೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಕಾರ್ಯಕರ್ತರ ಜೊತೆ ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಬಗ್ಗೆ ರಹಸ್ಯ ಕಾಯ್ದುಕೊಂಡ ಹೆಚ್‌ಡಿಕೆ

  • ಲೂಟಿಗಾಗಿ ಸುರಂಗ ಕೊರೆಯುವ ಕೆಲಸ: ಸರ್ಕಾರದ ವಿರುದ್ಧ ಆರ್.ಅಶೋಕ್ ಆರೋಪ

    ಲೂಟಿಗಾಗಿ ಸುರಂಗ ಕೊರೆಯುವ ಕೆಲಸ: ಸರ್ಕಾರದ ವಿರುದ್ಧ ಆರ್.ಅಶೋಕ್ ಆರೋಪ

    ಬೆಂಗಳೂರು: ಸಿದ್ದರಾಮಯ್ಯನವರ (Siddaramaiah) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 13 ತಿಂಗಳಾಗಿದೆ. ಒಂದಾದ ಮೇಲೆ ಒಂದರಂತೆ ಬ್ರಹ್ಮಾಂಡ ಭ್ರಷ್ಟಾಚಾರಗಳು, ಲೂಟಿ ಮಾಡಲು ಹೆಬ್ಬಾಗಿಲು ತೆಗೆದು, ಲೂಟಿಗಾಗಿ ಸುರಂಗ ಕೊರೆಯುವ ಕೆಲಸವನ್ನು ಕಾಂಗ್ರೆಸ್ (Congress) ಪಕ್ಷ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್  (R.Ashok) ಅವರು ಆರೋಪಿಸಿದ್ದಾರೆ.

    ಬೆಂಗಳೂರಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೈಸೂರಿನ ಮೂಡಾ ಅವ್ಯವಹಾರ (Mysuru Muda) ಸಂಬಂಧ ಸಿಎಂ ರಾಜೀನಾಮೆಗೆ ಆಗ್ರಹಿಸಿ ಅವರ ಮನೆಗೆ ಮುತ್ತಿಗೆ ಹಾಕಲು ಹೊರಟ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಮೊನ್ನೆ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು `ಪಟಾಪಟ್’ ಎಂದು ರಾಹುಲ್ ಗಾಂಧಿಯವರು ಹೇಳಿದ ಮಾದರಿಯಲ್ಲಿ ಬೇನಾಮಿ ಖಾತೆಗಳು, ಬಾರ್‌ಗಳು, ವೈನ್ ಸ್ಟೋರ್‌ಗಳಿಗೆ ವರ್ಗಾಯಿಸಿದರು. ಲ್ಯಾಂಬೊರ್ಗಿನಿ, ಒಡವೆ- ಏನೇನು ಬೇಕೋ ಅವೆಲ್ಲವನ್ನೂ ಖರೀದಿಸಿದರು. ದಲಿತರ ಹಣ ಚಿನ್ನದ ಅಂಗಡಿಗೆ, ಕಾರು ಖರೀದಿಗೆ, ಬಾರ್‌ಗಳಿಗೆ, ಕಾಂಗ್ರೆಸ್ ಪಕ್ಷಕ್ಕೆ ಹೋಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಣ್ಣು ಕುಸಿತ ಪ್ರಕರಣ- ಮಣ್ಣಿನಡಿ ಸಿಲುಕಿದ ಕಾರ್ಮಿಕ ದುರ್ಮರಣ

    ನಮ್ಮ ಹೋರಾಟದ ಪರಿಣಾಮವಾಗಿ, ರಾಜಭವನದ ಬಾಗಿಲಿಗೆ ಹೋದ ಬಳಿಕ ನಾಗೇಂದ್ರ ಅವರು ರಾಜೀನಾಮೆ ಕೊಟ್ಟರು ಎಂದು ಅವರು ತಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲವನ್ನು ಈ ವೇಳೆ ಅವರು ನೆನೆದಿದ್ದಾರೆ. ಈ ವೇಳೆ ಬಿಜೆಪಿಯ ಜನಪ್ರತಿನಿಧಿಗಳನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮ, ಮುಡಾ ಅಕ್ರಮ ಪ್ರಕರಣ: ಸಿಎಂ ಮನೆ ಮುತ್ತಿಗೆಗೆ ಹೊರಟಿದ್ದ ಬಿಜೆಪಿ ನಾಯಕರು ವಶಕ್ಕೆ

  • ಲೋಕಸಭೆಯಲ್ಲಿ ಹಿನ್ನಡೆಗೆ ಅತಿಯಾದ ಆತ್ಮವಿಶ್ವಾಸ, ಕಾರ್ಯಕರ್ತರ ಕಡೆಗಣನೆ ಕಾರಣ: ಡಿವಿಎಸ್

    ಲೋಕಸಭೆಯಲ್ಲಿ ಹಿನ್ನಡೆಗೆ ಅತಿಯಾದ ಆತ್ಮವಿಶ್ವಾಸ, ಕಾರ್ಯಕರ್ತರ ಕಡೆಗಣನೆ ಕಾರಣ: ಡಿವಿಎಸ್

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ‌ (Lokshabha Elections) 8 ಕಡೆ ಬಿಜೆಪಿ ಸೋಲಿಗೆ ಹಾಗೂ ಉಳಿದೆಡೆ ಕಡಿಮೆ ಮಾರ್ಜಿನ್ ಬರಲು ಪ್ರಧಾನಿ ಮೋದಿಯವರ (Narendra Modi) ಮೇಲಿನ ನಮ್ಮ ಅತಿಯಾದ ಆತ್ಮ ವಿಶ್ವಾಸ ಹಾಗೂ ಕಾರ್ಯಕರ್ತರ ಕಡಗಣನೆಯೇ ಕಾರಣ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ (D.V Sadananda Gowda) ಅಭಿಪ್ರಾಯಪಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆಯಲ್ಲೂ ನಮಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ನಾವು ವಿಧಾನಸಭಾ ಫಲಿತಾಂಶದ ಹಿನ್ನೆಡೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಕಾರ್ಯಕರ್ತರನ್ನು ಉತ್ತೇಜಿಸಿ ಚುನಾವಣೆ ಮಾಡುವ ಕೆಲಸ ಆಗಲಿಲ್ಲ. ಮೋದಿ ಹೆಸರಿನಲ್ಲಿ ಅತಿಯಾದ ಆತ್ಮವಿಶ್ವಾಸ ಬಿಜೆಪಿ 8 ಸೀಟ್ ಕಳೆದುಕೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

    ಕಾಂಗ್ರೆಸ್ ಪವರ್‌ಫುಲ್ ಆಗಿ ಕಾರ್ಯಾಚರಣೆಗೆ ಇಳಿದಿದೆ ಎಂಬುದನ್ನು ಊಹಿಸಲು ನಮ್ಮ ರಾಜ್ಯದ ಸಂಘಟನೆ ವಿಫಲವಾಯಿತು. ಜೆಡಿಎಸ್ ಜೊತೆಗಿದ್ದ ಕಾರಣಕ್ಕೆ ಹಳೇ ಮೈಸೂರು ಕಡೆ ನಮಗೆ ಗೆಲುವಾಗಿದೆ ಎಂದು ಜನ ಮಾತಾಡಲು ಆರಂಭಿಸಿದ್ದು ಬಿಜೆಪಿಗೆ ಸವಾಲಾಗಿದೆ. ಎಲ್ಲಾ ಕಡೆ ಮಾರ್ಜಿನ್ ಕಡಿಮೆ ಆಗಿರುವುದು ಎಚ್ಚರಿಕೆಯ ಸಂದೇಶ ಎಂದು ಅವರು ಹೇಳಿದ್ದಾರೆ.

    ಸೋಲಿಗೆ ಯಾರು ಹೊಣೆ ಎಂಬ ಪ್ರಶ್ನೆಗೆ, ಕೊಹ್ಲಿ ಬ್ಯಾಟಿಂಗ್ ಮಾಡಿದರೂ ಕಪ್ ಸ್ಪೀಕಾರ ಮಾಡಿದ್ದು ರೋಹಿತ್ ಶರ್ಮಾ. ಚಾರ್ಜ್‍ಶೀಟ್ ಎಲ್ಲಿ ಹೋಗಬೇಕೋ ಅಲ್ಲಿ ಹೋಗುತ್ತದೆ. ನಾವೆಲ್ಲಾ ಎ3, ಎ4 ಎಲ್ಲಾ ಆಗಬಹುದು ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

    ಅಶೋಕ್ ಓಡಾಡ್ತಾರೆ, ಆದ್ರೆ ಅಧ್ಯಯನದ ಕೊರತೆ: ವಿಪಕ್ಷ ನಾಯಕ ಆರ್.ಅಶೋಕ್‍ಗೆ (R.Ashok) ಅಧ್ಯಯನದ ಕೊರತೆ ಇದೆ. ಸದನಕ್ಕೆ ಅಧ್ಯಯನ ಮಾಡಿ ಬರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

    ವಿಪಕ್ಷ ನಾಯಕ ಸ್ಥಾನ ಬದಲಾವಣೆ ಚರ್ಚೆ ಪಕ್ಷದಲ್ಲಿ ಕೇಳಿ ಬರುತ್ತಿರುವ ವಿಚಾರವಾಗಿ, ಅಶೋಕ್ ಹಿಂದಿನಿಂದಲೂ ಆಡಳಿತದಲ್ಲೇ ಇದ್ದರು. ಹಾಗಾಗಿ ಅವರ ಮನಸ್ಥಿತಿ ಆಡಳಿತದ ಕಡೆಯೇ ಇದೆ. ವಿಪಕ್ಷ ನಾಯಕ ಅಧ್ಯಯನ ಮಾಡಬೇಕು. ಅಂಕಿ ಅಂಶಗಳ ಬಗ್ಗೆ ಮಾಹಿತಿ ಇರಬೇಕು. ವಿಪಕ್ಷ ನಾಯಕ ಅಂದರೆ ಬರಿ ಜಗಳ ಮಾಡುವುದಲ್ಲ. ಭಾರೀ ಅಧ್ಯಯನದ ಅಗತ್ಯ ಇದೆ. ಬರೀ ಓಡಾಟದಿಂದ ಪಕ್ಷದ ನಾಯಕನಾಗಿ ಬೆಳವಣಿಗೆ ಆಗಬಹುದು, ವಿಪಕ್ಷ ನಾಯಕನಾಗಿ ಬೆಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.

    ಅಂಕಿ -ಅಂಶ ಮತ್ತು ಸೂಕ್ತ ಸಮಯಕ್ಕೆ ಪ್ರತಿರೋಧ ಒಡ್ಡುವ ನಾಯಕರ ಅವಶ್ಯಕತೆ ವಿಧಾನಸಭೆ ಮತ್ತು ವಿಧಾನ ಪರಿಷತ್‍ನಲ್ಲಿ ಇದೆ. ಸಿದ್ದರಾಮಯ್ಯ ಅವರನ್ನು ಎದುರಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ. ಆ ಮಟ್ಟಕ್ಕೆ ಅಶೋಕ್ ಸಿದ್ಧವಾಗಬೇಕು ಎಂದಿದ್ದಾರೆ.

    ಲೋಕಸಭೆ ಒಳೇಟು ವೀರರ ವಿರುದ್ಧ ಶಿಸ್ತು ಕ್ರಮ ಆಗ್ಬೇಕು: ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿ ಅಭ್ಯರ್ಥಿಗಳ ಸೋಲಿಗೆ ಕಾರಣವಾದವರ ವಿರುದ್ಧ ಶಿಸ್ತು ಕ್ರಮ ಆಗಬೇಕು. ನಮ್ಮ ಪಕ್ಷ ಇಷ್ಟು ಶಿಥಿಲ ಆಗಲು ಪಕ್ಷ ವಿರೋಧಿಗಳ ಮಾತಿಗೆ ಮಣೆ ಹಾಕಿದ್ದೇ ಕಾರಣ. ಪಕ್ಷ ವಿರೋಧಿಗಳ ವಿರುದ್ಧ ಕ್ರಮ ಆಗಬೇಕು. ಆಗ ಕಾರ್ಯಕರ್ತರೂ ಖುಷಿ ಆಗ್ತಾರೆ. ಅಶಿಸ್ತು ತೋರಿದವರು ಯಾರೇ ಇದ್ದರೂ, ಅವರ ವಿರುದ್ಧ ಕ್ರಮ ಆಗಬೇಕು. ಒಬ್ಬ ಅಶಿಸ್ತು ತೋರಿದವನ ವಿರುದ್ಧ ಕ್ರಮ ಆದರೆ ಹತ್ತು ಜನ ಪ್ರಾಮಾಣಿಕ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

    ನಾನು ಅಧ್ಯಕ್ಷನಾಗಿದ್ದಾಗ ರೆಡ್ಡಿ ವಿರುದ್ಧ, ಯತ್ನಾಳ್ ವಿರುದ್ಧ, ರೇಣುಕಾಚಾರ್ಯ ವಿರುದ್ಧ ಪಕ್ಷ ವಿರೋಧಿ ಆರೋಪದ ಮೇಲೆ ಕ್ರಮ ತಗೊಂಡಿದ್ದೆ. ಈಗ ಈ ರೀತಿಯ ಕ್ರಮ ಆಗ್ತಿಲ್ಲ. ಇದರ ಬಗ್ಗೆ ನಾನು ರಾಜ್ಯಾಧ್ಯಕ್ಷ ವಿಜಯೇಂದ್ರ ಬಳಿ ಮಾತಾಡಿದ್ದೇನೆ. ಈಗ ನಾಮಕಾವಸ್ಥೆಗೆ ಅಮಾನತು ಮಾಡಿ ಮತ್ತೆ ಸೇರಿಸಿಕೊಳ್ಳುವ ಕೆಲಸ ಆಗ್ತಿದೆ. ಸಂಘಟನೆಗೆ ವಿರೋಧ ಮಾಡಿ ಕೆಲಸ ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವ ಕೆಲಸವಾಗಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

  • ಮಕ್ಕಳು ಕುಡಿಯೋ ಹಾಲಿಗೂ ಬೆಲೆ ಜಾಸ್ತಿ, ಕೂಲಿ ಮಾಡಿ ಕುಡಿಯಲು ಹೋದ್ರೂ ಬೆಲೆ ಜಾಸ್ತಿ: ಆರ್.ಅಶೋಕ್ ಕಿಡಿ

    ಮಕ್ಕಳು ಕುಡಿಯೋ ಹಾಲಿಗೂ ಬೆಲೆ ಜಾಸ್ತಿ, ಕೂಲಿ ಮಾಡಿ ಕುಡಿಯಲು ಹೋದ್ರೂ ಬೆಲೆ ಜಾಸ್ತಿ: ಆರ್.ಅಶೋಕ್ ಕಿಡಿ

    ಕೋಲಾರ: ಮಕ್ಕಳಿಗೆ ಹಾಲು (Nandini Milk Price Hike) ಕುಡಿಸಲು ಹೋದ್ರೂ ಬೆಲೆ ಜಾಸ್ತಿಯಾಗಿದೆ. ಸಂಜೆ ಕೂಲಿ ಕೆಲಸ ಮಾಡಿ ಆಯಾಸವಾಗಿದೆ ಎಂದು ಕುಡಿಯಲು ಹೋದ್ರೂ ಅದರ ಬೆಲೆ ಸಹ ಜಾಸ್ತಿ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.

    ಕೋಲಾರದಲ್ಲಿ (Kolar) ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಮಾತನಾಡಿದರು. ಈ ವೇಳೆ ಸಾಹುಕಾರರು ಕುಡಿಯುವ ಎಣ್ಣೆ ಬೆಲೆ ಕಡಿಮೆ ಮಾಡಿದ್ದಾರೆ. ಬಡವರಿಗೆ ನಿಮ್ಮ ಮನೆಯವರಿಗೆ 2000 ರೂ. ಹಣ ಕೊಟ್ಟು, ಎಣ್ಣೆ ಕಡೆಯಿಂದ ಕಿತ್ತು ಕೊಳ್ಳುತ್ತಿದ್ದಾರೆ. ಏನಾದ್ರೂ ಕೇಳಿದ್ರೆ ಹಣ ಕೊಡ್ತಾ ಇಲ್ವಾ ಎನ್ನುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆವರು ಸುರಿಸದೇ ಜೀವನ ಮಾಡುವವರು ಸ್ವಾಮೀಜಿಗಳು: ರಾಜಣ್ಣ ಕಿಡಿ

    ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್ (D.K Shivakumar) ಅವರು ಜೋಡೆತ್ತುಗಳು ಎಂದು ಕುಮಾರಣ್ಣ ಅವರ ಕೈ ಎತ್ತಿದ್ದರು. ಈಗ ಸಿದ್ದರಾಮಯ್ಯ (Siddaramaiah) ಅವರ ಕೈ ಎತ್ತಿದ್ದಾರೆ. ಅವರನ್ನು ಮುಗಿಸುತ್ತಾರೆ. ಈಗಾಗಲೇ ಸ್ವಾಮೀಜಿ ಹೇಳಿದ್ದಾರೆ. ಹೀಗೆ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

    ಕಾಂಗ್ರೆಸ್‍ನವರು ಅಭಿವೃದ್ಧಿ ಎಂದು ಹೇಳುತ್ತಾರೆ, ಯಾರ ಅಭಿವೃದ್ಧಿ ರಾಹುಲ್ ಗಾಂಧಿ ಅಭಿವೃದ್ಧಿನಾ? ಇನ್ನೂ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಅವರು ಅಮಾಯಕರು ಜೇನು ಕಿತ್ತವನು ಕೈ ನೆಕ್ಕಿದ್ದಾನೆ. ಅದರಲ್ಲಿ ಮುಖ್ಯವಾಗಿ ಹಣ ತಿಂದಿರುವುದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಬಳಿ ಇತ್ತಂತೆ 15 ಸಿಮ್- ಸಂತ್ರಸ್ತೆಯರಿಗೆ ನಗ್ನರಾಗುವಂತೆ ಬೆದರಿಕೆ!

  • ಇಷ್ಟೆಲ್ಲಾ ಅವಮಾನ ಆದ್ಮೇಲೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರಲ್ಲ ಅನ್ಸುತ್ತೆ: ಆರ್.ಅಶೋಕ್

    ಇಷ್ಟೆಲ್ಲಾ ಅವಮಾನ ಆದ್ಮೇಲೆ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇರಲ್ಲ ಅನ್ಸುತ್ತೆ: ಆರ್.ಅಶೋಕ್

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಷ್ಟೊಂದು ಅವಮಾನ ಮಾಡಿಸಿಕೊಂಡು ಸಿಎಂ ಸ್ಥಾನದಲ್ಲಿ ಮುಂದುವರೆಯೋದು ಬೇಡ. ಕೂಡಲೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಡಿ.ಕೆ ಶಿವಕುಮಾರ್‌ (D.K Shivakumar) ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ ಎಂಬ ಚಂದ್ರಶೇಖರ ಸ್ವಾಮೀಜಿ (Chandrashekharnath Swamiji) ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕರೆದು ಅದೇನು ಆಯ್ತು ಎನ್ನುವ ಗಾದೆ ರೀತಿ ಸ್ವಾಮೀಜಿ ಮಾತಾಗಿದೆ. ಸಿದ್ದರಾಮಯ್ಯ ಡಿಸಿಎಂ ತಂತ್ರಕ್ಕೆ ಇದು ಡಿಕೆಶಿ ಪ್ರತಿತಂತ್ರ. ಶಿವಕುಮಾರ್ ತಮ್ಮನ ಸೋಲು ಸಹಿಸಲು ಅಗ್ತಿಲ್ಲ. ಡಿ.ಕೆ ಸುರೇಶ್ ಸೋಲಿಸಿದ್ದು ಯಾರು ಎಂದು ಗೊತ್ತಾಗಿದೆ. ಹೀಗಾಗಿ ಅದಕ್ಕೆ ಕೌಂಟರ್ ಆಗಿ ಸ್ವಾಮೀಜಿ ಹೇಳಿಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸ್ವಾಮೀಜಿ ಸ್ಥಾನ ಬಿಟ್ಟು ಕೊಡುತ್ತಾರಾದ್ರೆ, ನಾನು ಖಾವಿ ಬಟ್ಟೆ ಹಾಕ್ತೀನಿ: ಕೆಎನ್ ರಾಜಣ್ಣ

    ಹೆಚ್ಚುವರಿ ಡಿಸಿಎಂ ಬಗ್ಗೆ ಸಿದ್ದರಾಮಯ್ಯ ಬಣದವರು ಮಾತಾಡಿದ್ದರು, ಅದಕ್ಕೆ ಇದು ಕೌಂಟರ್. ಸಿಎಂ ಧರ್ಮಾತ್ಮರಾಗಿದ್ದರೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್‍ನವರು ಉತ್ತರ ಕೊಡಬೇಕು. ಸಿದ್ದರಾಮಯ್ಯಗೆ ಗೌರವ ಇದ್ದರೆ ರಾಜೀನಾಮೆ ಕೊಡೋದು ಒಳ್ಳೆಯದು. ಇಷ್ಟು ಅವಮಾನ ಆದ ಮೇಲೆ ಅವರು ಸಿಎಂ ಸ್ಥಾನದಲ್ಲಿ ಇರೊಲ್ಲ ಅಂತ ಎನಿಸುತ್ತದೆ ಎಂದಿದ್ದಾರೆ.

    ಇದು ಈ ಸರ್ಕಾರದ ಬೇಗುದಿ. ಈಗ ಒಂದೊಂದೇ ಹೊರಗೆ ಬರುತ್ತಿದೆ. ಡಿಕೆ ಗ್ರೂಪ್ ಮತ್ತು ಸಿಎಂ ಗ್ರೂಪ್ ನಡುವೆ ವಾರ್ ನಡೆಯುತ್ತಿದೆ. ಇವರಿಂದ ನಯಾಪೈಸೆ ಅಭಿವೃದ್ಧಿ ಆಗಿಲ್ಲ. ಕಾಂಗ್ರೆಸ್‍ನಲ್ಲಿ ಗೊಂದಲ ಇದೆ. ಸರ್ಕಾರಕ್ಕೆ ಆಪತ್ತು ಇದೆ ಎಂದು ಗೊತ್ತಾಗಿದೆ. ಇದರಿಂದಲೇ ಜಾಸ್ತಿ ದಿನ ಈ ಸರ್ಕಾರ ಇರುವುದಿಲ್ಲ ಎಂದು ಹೇಳಿದ್ದೆ ಎಂದಿದ್ದಾರೆ.

    ಈ ವಿಚಾರವನ್ನು ಸ್ವಾಮೀಜಿಯವರೇ ಹೇಳಿದ್ರಾ? ಅಥವಾ ಹೇಳಿಸಿದ್ರಾ ಎನ್ನುವ ಒಳಗುಟ್ಟು ಸಿಎಂಗೆ ಅರ್ಥ ಆಗಿದೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಒಳ್ಳೆಯದು. ನನ್ನ ಇತಿಹಾಸದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಇಂತಹ ಅವಮಾನ ಆಗಿರಲಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಸ್ವಾಮೀಜಿಯವರಲ್ಲ: ಸಿದ್ದರಾಮಯ್ಯ

  • ಕಾಂಗ್ರೆಸ್ ಸರ್ಕಾರ ಹಾಲನ್ನು ಹಾಲಾಹಲ ಮಾಡಿದೆ: ಆರ್.ಅಶೋಕ್

    ಕಾಂಗ್ರೆಸ್ ಸರ್ಕಾರ ಹಾಲನ್ನು ಹಾಲಾಹಲ ಮಾಡಿದೆ: ಆರ್.ಅಶೋಕ್

    – ಕಾಂಗ್ರೆಸ್ ಮನೆ ಹಾಳು ಮಾಡೋ ಸರ್ಕಾರ

    ಬೆಂಗಳೂರು: ಹಾಲಿನ ದರ ಏರಿಕೆ (Milk Price Hike) ಸಮರ್ಥನೆ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಹಾಲನ್ನು ಇವತ್ತು ಈ ಸರ್ಕಾರ ಹಾಲಾಹಲ ಮಾಡಿದೆ. ಒಂದು ವರ್ಷದ ಹಿಂದೆ 3 ರೂ. ಈಗ 2 ರೂ. ಏರಿಕೆ ಆಗಿದೆ. ಮೊದಲು ಏರಿಕೆ ಮಾಡಿದಾಗ 80% ಹಣ ರೈತರಿಗೆ ಕೊಡುತ್ತೇವೆ ಎಂದಿದ್ದರು. 10 ಪೈಸೆ ಹಣ ರೈತರಿಗೆ ಇವರು ಕೊಟ್ಟಿಲ್ಲ. ನಿಮ್ಮ ಯೋಗ್ಯತೆಗೆ 10 ಪೈಸೆ ರೈತರಿಗೆ ಕೊಡಲಿಲ್ಲ. 50 ಎಂಎಲ್‌ಗೆ 2 ರೂ. ಜಾಸ್ತಿ ಮಾಡಿದ್ದೀನಿ ಅಂತೀರಾ. ಅಪ್ಪಾ ಬುದ್ಧಿವಂತ ಅರ್ಥಶಾಸ್ತ್ರಜ್ಞ ದೇಶಕ್ಕೆ ಅರ್ಥ ಹೇಳಿ ಕೊಡೋಕೆ ಹೋಗಿದ್ದೀಯಾ ಅಲ್ಲವಾ. 50 ಎಂಎಲ್ ಕಡಿಮೆ ಕೊಟ್ಟು, 2 ರೂಪಾಯಿ ಕಡಿಮೆ ತಗೋ ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ವಾಮೀಜಿ ಸ್ಥಾನ ಬಿಟ್ಟು ಕೊಡುತ್ತಾರಾದ್ರೆ, ನಾನು ಖಾವಿ ಬಟ್ಟೆ ಹಾಕ್ತೀನಿ: ಕೆಎನ್ ರಾಜಣ್ಣ

    ನಿನ್ನ ಜಾಸ್ತಿ ಹಾಲು ಕೇಳಿದ್ದು ಯಾರಪ್ಪ? ಸಿದ್ದರಾಮಯ್ಯ ಧರ್ಮದರ್ಶನ ಮಾಡೋ ಜಾಗದಲ್ಲಿ ಯಾರಾದ್ರು ಬಂದು ಕೇಳಿದ್ರಾ? ಅರ್ಜಿ ಕೊಟ್ಟು 50 ಎಂಎಲ್ ಜಾಸ್ತಿ ಕೊಡು ಅಂತ ಕೇಳಿದ್ರಾ? ನೀನು ಒಬ್ಬ ಸಿಎಂ ಆಗಿ ಮಳೆಗಾಲ ಬಂದಾಗ ಹಾಲು ಉತ್ಪಾದನೆ ಜಾಸ್ತಿ ಆಗುತ್ತದೆ. ಹೆಚ್ಚುವರಿ ಹಾಲನ್ನು ಏನು ಮಾಡಬೇಕು ಅಂತ ದಾರಿ ಕಂಡುಕೊಳ್ಳಬೇಕಿತ್ತು. ಸಹಾಯ ಮಾಡೋ ಜ್ಞಾನ ಸಿದ್ದರಾಮಯ್ಯಗೆ ಇಲ್ಲ. ದುಡ್ಡು ಒಡೆಯೋ ಜ್ಞಾನ ಇದೆ. ಇದಕ್ಕೇನಾ ನಿಮ್ಮನ್ನು ಅರ್ಥಶಾಸ್ತ್ರಜ್ಞ ಅನ್ನೋದು. ಇದಾ ಅರ್ಥಶಾಸ್ತ್ರ ಅಂದರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಮುಂದಾಗುತ್ತಿದ್ದಂತೆ ಹೊಸೂರಿನಲ್ಲಿ ಏರ್ಪೋರ್ಟ್ ಘೋಷಿಸಿದ ಸ್ಟಾಲಿನ್

    ಹೊಟೇಲ್ ಹೋದಾಗ ಎರಡು ಇಡ್ಲಿ ಕೇಳಿದಾಗ ಹೊಟೇಲ್ ಅವನು 3 ಇಡ್ಲಿ ತೆಗೆದುಕೊಳ್ಳಬೇಕು, ಹಣ ಜಾಸ್ತಿ ಕೊಡಬೇಕು ಅಂದರೆ ಏನು ಅರ್ಥ? ಬೇಕಾಗಿರೋದು ಎರಡು ಇಡ್ಲಿ. ಹಸಿವಿಗೆ ಬೇಕಾಗಿರೋ ಇಡ್ಲಿ ಬಿಟ್ಟು 3 ಇಡ್ಲಿ ಹೆಚ್ಚಾಗಿ ಕೊಟ್ಟು 10 ರೂ. ಜಾಸ್ತಿ ಕೊಡು ಅಂದರೆ ನಾವು ಕೊಡ್ತೀವಾ? ಹೊಟೇಲ್ ಅವನಿಗೆ ಕಪಾಳಕ್ಕೆ ಹೊಡೆಯುತ್ತೇವೆ. ಈ ಸರ್ಕಾರಕ್ಕೆ ಜನರು ಕಪಾಳಕ್ಕೆ ಹೊಡೆಯಬೇಕು. ನಾವು ಸರ್ಕಾರದ ಕಪಾಳಕ್ಕೆ ಹೊಡೆಯಲು ಆಗೊಲ್ಲ. ಜನರು ಕಪಾಳಕ್ಕೆ ಹೊಡೆಯಬೇಕು. ನಾನು ಹೆಚ್ಚು ಹಾಲು ಕೇಳಿದ್ನಾ ಯಾಕೆ ಕೊಟ್ಟೆ ಅಂತ ಕಪಾಳಕ್ಕೆ ಹೊಡೆದು ಕೇಳಬೇಕು. 15 ಬಜೆಟ್ ಮಂಡನೆ ಮಾಡಿರೋ ಸಿಎಂ ಇವರು. ನನಗೂ ಅದಕ್ಕೂ ಸಂಬಂಧವಿಲ್ಲ ಅಂತಾ ಸಿಎಂ ಹೇಳುತ್ತಾರೆ. ಸರ್ಕಾರಕ್ಕೆ ಬೆಲೆ ಏರಿಕೆ ಬರೋದಿಲ್ಲ ಅಂತಾರೆ. ಡಿಸಿಎಂ ಮಾತೆತ್ತಿದರೆ ನೋಡೇ ಇಲ್ಲ. ಈ ಊರಿನವನೇ ಅಲ್ಲ ಅಂತಾರೆ. ಇವರು ಮಾಡಿದ ಎಲ್ಲಾ ಬೆಲೆ ಏರಿಕೆಗೂ ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಾ. ಪೆಟ್ರೋಲ್, ವಿದ್ಯುತ್ ಬೆಲೆ, ಸ್ಟಾಂಪ್ ಡ್ಯೂಟಿ ಜಾಸ್ತಿ ಆದರೂ ಸಮರ್ಥನೆ ಕೊಟ್ಟರು. ಮದ್ಯದ ಬೆಲೆ ಜಾಸ್ತಿ ಮಾಡಿದ್ದೀರಿ. ಸಿರಿವಂತರ ಎಣ್ಣೆಗೆ ರೇಟ್ ಕಡಿಮೆ ಮಾಡಿ, ಬಡವರಿಗೆ ರೇಟ್ ಜಾಸ್ತಿ ಮಾಡಿದ್ದೀರಿ. ಮತ್ತೆ ಎಣ್ಣೆ ರೇಟ್ ಜಾಸ್ತಿ ಮಾಡೋಕೆ ಮುಂದಾಗಿದ್ದಾರೆ. ಇದು ಮನೆ ಹಾಳು ಸರ್ಕಾರ. ಇನ್ನೆರೆಡು ದಿನ ಇವರೇ ಇದ್ದರೆ ಕರ್ನಾಟಕವನ್ನು ದೋಚಿ ದರೋಡೆ ಮಾಡುತ್ತಾರೆ. ಆಲಿಬಾಬಾ ಮತ್ತು 40 ಕಳ್ಳರ ರೀತಿ ಎಲ್ಲಾ ಹೊಡೆದುಕೊಂಡು ಹೋಗುತ್ತಾರೆ. ಎಲ್ಲಾ ಹಣವನ್ನ ಡೆಲ್ಲಿ ಎಟಿಎಂ ಆಗಿ ಕಳುಹಿಸಿಕೊಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎಂ ಸ್ಥಾನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಸ್ವಾಮೀಜಿಯವರಲ್ಲ: ಸಿದ್ದರಾಮಯ್ಯ

    ಜನರಿಗೆ ನಾನು ಕೈ ಮುಗಿದು ಕ್ಷಮೆ ಕೇಳುತ್ತೇನೆ. ದಯವಿಟ್ಟು ಜನರು ತಯಾರಾಗಿರಿ. ಇನ್ನು ಮುಂದೆ ಏನಿದ್ದರೂ ಬೆಲೆ ಏರಿಕೆ ಮಾತ್ರ. ಎಲ್ಲಾ ಬೆಲೆ ಏರುತ್ತವೆ. ಜನರು ತಯಾರಾಗಿರಿ. ನಾವು ಈಗಾಗಲೇ ಈ ಭ್ರಷ್ಟ, ದುಷ್ಟ ಸರ್ಕಾರದ ವಿರುದ್ಧ ಹೋರಾಟ ಮಾಡಿ ಒಂದು ವಿಕೆಟ್ ಬೀಳಿಸಿದ್ದೇವೆ. ಎರಡನೇ ವಿಕೆಟ್ ನಮಗೆ ಸಿದ್ದರಾಮಯ್ಯ ಅವರೇ. ಆ ವಿಕೆಟ್ ಅನ್ನು ಈ ಅಧಿವೇಶನದಲ್ಲಿ ಬೀಳಿಸುತ್ತೇವೆ. ಹಾಲಿನ ದರ ಏರಿಕೆ ವಿಚಾರವಾಗಿ ಹೋರಾಟ ಮಾಡುತ್ತೇವೆ. ನಮ್ಮ ಅಧ್ಯಕ್ಷರು, ನಾಯಕರ ಜೊತೆ ಮಾತಾಡಿದ್ದೇನೆ. 3 ಅಥವಾ 4ನೇ ತಾರೀಕು ಸಿಎಂ ಮನೆಗೆ ಮುತ್ತಿಗೆ ಹಾಕೋ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಪೈಕಿ ಯಾರೇ ನಿಂತ್ರು ಸೋಲಿಸ್ತೀವಿ: ಆರ್.ಅಶೋಕ್

  • ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಪೈಕಿ ಯಾರೇ ನಿಂತ್ರು ಸೋಲಿಸ್ತೀವಿ: ಆರ್.ಅಶೋಕ್

    ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಪೈಕಿ ಯಾರೇ ನಿಂತ್ರು ಸೋಲಿಸ್ತೀವಿ: ಆರ್.ಅಶೋಕ್

    – ಕಾಂಗ್ರೆಸ್‍ನ ಬಿಪಿ, ಶುಗರ್‌ಗೆ ಶಾಕ್ ಟ್ರೀಟ್‍ಮೆಂಟ್ ಕೊಡ್ಬೇಕು!

    ಬೆಂಗಳೂರು: ಚನ್ನಪಟ್ಟಣದ ಉಪಚುನಾವಣೆಯಲ್ಲಿ (Channapatna by election) ಡಿಕೆ ಬ್ರದರ್ಸ್ ಪೈಕಿ ಯಾರೇ ಸ್ಪರ್ಧಿಸಿದರೂ ಸೋಲಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಾಂಗ್ರೆಸ್‍ಗೆ (Congress) ಸವಾಲು ಹಾಕಿದ್ದಾರೆ.

    ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುವ ವೇಳೆ, ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಯಾರು ಅನ್ನೋದಕ್ಕಿಂತ ಒಂದೇ ಅಭ್ಯರ್ಥಿ. ಅದು ಬಿಜೆಪಿ ಆಗಬಹುದು ಅಥವಾ ಜೆಡಿಎಸ್ ಆಗಬಹುದು. ಕುಮಾರಸ್ವಾಮಿಯವರ ಜೊತೆ ಈಗಾಗಲೇ ಮಾತುಕತೆ ನಡೆಯುತ್ತಿದೆ. ದೆಹಲಿಗೆ ಹೋದಾಗ ಮಾತುಕತೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: CM ಸ್ಥಾನವನ್ನು ಡಿಕೆಶಿಗೆ ಸಿದ್ದರಾಮಯ್ಯ ಬಿಟ್ಟುಕೊಡಬೇಕು- ಸಿಎಂ ಸಮ್ಮುಖದಲ್ಲೇ ಸ್ವಾಮೀಜಿ ಹೇಳಿಕೆ

    ಕುಮಾರಸ್ವಾಮಿಯವರು ಓಪನ್ ಮೈಂಡ್‍ನಲ್ಲಿ ಇದ್ದಾರೆ. ಅವರು ಹೇಳಿರೋದು ನಾವು ಗೆಲ್ಲಬೇಕು ಅಷ್ಟೇ. ಈ ದುಷ್ಟ ಸರ್ಕಾರ ಹಣದ ಹೊಳೆ ಚನ್ನಪಟ್ಟಣದಲ್ಲಿ ಹರಿಸುತ್ತಾರೆ. ಹೊಳೆ ಹರಿಸೋದನ್ನ ತಡೆದು ಗೆಲ್ಲುವ, ಯಾರೇ ಅಭ್ಯರ್ಥಿ ಆದರೂ ಅವರನ್ನು ಆಯ್ಕೆ ಮಾಡೋಣ ಎಂದಿದ್ದಾರೆ. ನಾವು ಹಾಗೂ ಅವರು ಅಭ್ಯರ್ಥಿಯ ವಿಚಾರದಲ್ಲಿ ಮುಕ್ತವಾಗಿ ಇದ್ದೇವೆ ಎಂದು ಅವರು ತಿಳಿಸಿದ್ದಾರೆ.

    20 ವರ್ಷಗಳಿಂದ ಚನ್ನಪಟ್ಟಣಕ್ಕೆ ಅವರು ಹೋಗೇ ಇಲ್ಲ. ಈಗ ನಾಟಕ ಮಾಡ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಂದಿದ್ದು 20 ಸಾವಿರ ಮತ. ಬಿಜೆಪಿ-ಜೆಡಿಎಸ್‍ಗೆ ಒಂದು ಲಕ್ಷದ ಮೇಲೆ ಮತಗಳು ಬಂದಿತ್ತು. 20 ಸಾವಿರ ಮತ ಬಂದಿರೋದಕ್ಕೆ ಅಲ್ಲಿಗೆ ಹೋಗ್ತಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳ್ತಾರೆ. 20 ಸಾವಿರ ಮತ ಹಾಕೋರಿಗೆ ನಮಸ್ಕಾರ ಹಾಕೋಕೆ ಹೋಗ್ತಾರಂತೆ. ಹಾಕಲಿ ಎಷ್ಟು ನಮಸ್ಕಾರ ಹಾಕ್ತಾರೆ ಅಂತ. ಬೆಲೆ ಏರಿಕೆ ಮಾಡಿರೋದ್ರಿಂದ ಈ ಬೈ ಎಲೆಕ್ಷನ್‍ನಲ್ಲಿ ಜನ ಇವರಿಗೆ 3 ನಾಮ ಹಾಕಬೇಕು. ಈ ಮೂರು ಬೈ ಎಲೆಕ್ಷನ್‍ನಲ್ಲಿ ಜನ ಕಾಂಗ್ರೆಸ್‍ಗೆ ಮೂರು ನಾಮ ಹಾಕಿದ್ರೆ ಬೆಲೆಗಳೆಲ್ಲ ಇಳಿದು ಹೋಗುತ್ತೆ. ರಾಜ್ಯದ ಜನರಿಗೆ ಮನವಿ ಮಾಡ್ತೀನಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಿ ಬೆಲೆ ಇಳಿಕೆ ಆಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.

    ಕಾಂಗ್ರೆಸ್‍ಗೆ ಬಿಪಿ ಹಾಗೂ ಶುಗರ್ ಲೆವಲ್ ಜಾಸ್ತಿ ಆಗಿದೆ. ಅವರ ಬಿಪಿ, ಶುಗರ್‌ಗೆ ಮದ್ದು ಏನು ಎಂದರೆ ಸ್ವಲ್ಪ ಶಾಕ್ ಟ್ರೀಟ್‍ಮೆಂಟ್ ಕೊಡಬೇಕು. ಶಾಕ್ ಟ್ರೀಟ್‍ಮೆಂಟ್ ಕೊಟ್ರೆ ಬಿಪಿ, ಶುಗರ್ ಕಡಿಮೆ ಆಗುತ್ತದೆ. ಆಗ ಅವರು ಜನರ ಕಡೆ ನೋಡ್ತಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣಕ್ಕೆ ಸಚಿವರ ದಂಡು-ಕ್ಷೇತ್ರ ಗೆಲ್ಲಲು ಡಿಕೆಶಿ ಮಾಸ್ಟರ್ ಪ್ಲಾನ್