Tag: r ashok

  • ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ – ಆರ್.ಅಶೋಕ್

    ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ – ಆರ್.ಅಶೋಕ್

    – ಯೋಜನೆಗಳಲ್ಲಿ ಹಣ ಉಳಿಸಲು ರೇಷನ್ ಕಾರ್ಡ್ ರದ್ದು

    ಬೆಂಗಳೂರು: ಹಿಂದಿನ ಯುಪಿಎ ಸರ್ಕಾರ ಕುಟುಂಬ ರಾಜಕಾರಣ ಮಾಡಿಕೊಂಡು ಭ್ರಷ್ಟ ಆಡಳಿತ ನೀಡಿತ್ತು. ನರೇಂದ್ರ ಮೋದಿ (Narendra Modi) ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.

    ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಸ್ವಯಂಸೇವಕನಿಂದ ಆರಂಭವಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಬೆಳೆದಿದ್ದಾರೆ. ಕಾಂಗ್ರೆಸ್ ಕುಟುಂಬದಲ್ಲಿ ಹುಟ್ಟಿದರೆ ನೇರವಾಗಿ ಪಕ್ಷದ ಅಧ್ಯಕ್ಷ ಆಗಬಹುದು. ದೇಶವನ್ನು ಲೂಟಿ ಮಾಡಿದ ಕುಟುಂಬದಲ್ಲಿ ಹೀಗೆಯೇ ನಡೆಯುತ್ತದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಎಲ್ಲ ಬಗೆಯ ಭ್ರಷ್ಟಾಚಾರ ಮಾಡಲಾಗಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ ನೀಡಿದ್ದಾರೆ ಎಂದರು.ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಅಸ್ತು

    ಈಗ ಕಾಂಗ್ರೆಸ್‌ನವರು ಪ್ರಧಾನಿ ಮೇಲೆ ಇವಿಎಂ ಕುರಿತು ಆಪಾದನೆ ಮಾಡಿದ್ದಾರೆ. ಗೆದ್ದಾಗ ಮಾತಾಡದೇ ಸೋತಾಗ ಮಾತಾಡುತ್ತಾರೆ. ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕನೇ ಅಕ್ರಮ ಮಾಡಿ ಗೆದ್ದಿದ್ದಾನೆ ಎಂದು ಕೋರ್ಟ್ ಹೇಳಿದೆ. ಬಿಹಾರದಲ್ಲಿ ಸೋಲುವ ಭಯದಿಂದ ಭ್ರಮನಿರಸನಾಗಿ ಇಂತಹ ಆರೋಪ ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ದೇಶಸೇವೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮುಂದೆಯೂ ಅಧಿಕಾರಕ್ಕೆ ಬಂದು ದೇಶವನ್ನು ನಂ.1 ಸ್ಥಾನಕ್ಕೆ ಏರಿಸಲಿದ್ದಾರೆ ಎಂದು ಹೇಳಿದರು.

    ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನ, ಸೇನಾಬಲದಲ್ಲಿ ಐದನೇ ಸ್ಥಾನದಲ್ಲಿ ಭಾರತ ಇದೆ. ಪ್ರಪಂಚಕ್ಕೆ ಸವಾಲು ಹಾಕುವ ಚೀನಾ, ಅಮೆರಿಕ ಕೂಡ ಭಾರತದ ಸ್ನೇಹ ಬಯಸಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ. ವಯಸ್ಸಿನ ಆಧಾರದಲ್ಲಿ ಬಿಜೆಪಿಯಲ್ಲಿ ಯಾರನ್ನೂ ಮನೆಗೆ ಕಳುಹಿಸಿಲ್ಲ. ನಮ್ಮಲ್ಲಿ ಅನೇಕ ನಾಯಕರು ವಯಸ್ಸಾದರೂ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಮೋದಿಯವರು ಮುಂದೆಯೂ ಪ್ರಧಾನಿಯಾಗಲಿ ಎಂದು ತಿಳಿಸಿದರು.ಇದನ್ನೂ ಓದಿ: ಟ್ರೋಲ್‌ ಮಾಡಿದ ಕಿಡಿಗೇಡಿಗಳಿಗೆ ಮಾರ್ಮಿಕ ಉತ್ತರ ನೀಡಿದ ವಿಜಯಲಕ್ಷ್ಮಿ

    ರೇಷನ್ ಕಾರ್ಡ್ ರದ್ದು:
    ಕಾಂಗ್ರೆಸ್ ಸರ್ಕಾರ 13 ಲಕ್ಷ ರೇಷನ್ ಕಾರ್ಡ್ ರದ್ದು ಎಂದು ಹೇಳಿ ಒಳಗೊಳಗೆ 25 ಲಕ್ಷ ಕಾರ್ಡ್ ರದ್ದು ಮಾಡಲಿದೆ. ಇದರಿಂದಾಗಿ ಬಡವರಿಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ರೇಷನ್ ಕಾರ್ಡ್ ಇದ್ದವರಿಗೆ ಔಷಧಿ, ಚಿಕಿತ್ಸೆ ಉಚಿತವಿದೆ. ಇಂತಹ ಚಿಕಿತ್ಸೆಗಳಲ್ಲಿ ಹಣ ಉಳಿತಾಯ ಮಾಡಬಹುದು. ಬಡವರಿಗೆ ಎಲ್ಲ ಸೌಲಭ್ಯಗಳು ಸ್ಥಗಿತಗೊಳ್ಳಲಿದೆ ಎಂದು ವಾಗ್ದಾಳಿ ನಡೆಸಿದರು.

    ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚದೆ ಸುರಂಗ ರಸ್ತೆ ನಿರ್ಮಿಸಲಾಗುತ್ತದೆ. ರಿಂಗ್ ರಸ್ತೆಯಲ್ಲೂ ವಾಹನ ಚಲಾಯಿಸಲು ಆಗುವುದಿಲ್ಲ. ಬಿಎಂಟಿಸಿ ಬಸ್‌ಗಳು ಬಹಳ ನಿಧಾನವಾಗಿ ಚಲಿಸುವಂತಾಗಿದೆ. ಅನೇಕ ಐಟಿ ಕಂಪನಿಗಳು ಹೈದರಾಬಾದ್, ಚೆನ್ನೈಗೆ ಹೋಗಲು ಯತ್ನಿಸುತ್ತಿವೆ. ಬಿಜೆಪಿ ಸರ್ಕಾರ ಇದ್ದಾಗ, ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೂ 100 ಕೋಟಿ ರೂ. ನೀಡಲಾಗಿತ್ತು. ಆದರೆ ಈಗ ಅನುದಾನವೇ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ದಿ ಬಿ.ಸರೋಜಾದೇವಿ ಹೆಸರಿನಲ್ಲಿ `ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ

    ಸರ್ಕಾರ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ಸಮೀಕ್ಷೆಗೆ ಹಣ ಹಾಳು ಮಾಡದೆ ಮುಂದೂಡುವುದು ಉತ್ತಮ. ಹಬ್ಬ ಇರುವುದರಿಂದ ಸಮೀಕ್ಷೆಯನ್ನು ಮುಂದೂಡಬೇಕು. ಬೇರೆ ಯಾವುದೇ ಕೆಲಸ ನಡೆಯುತ್ತಿದೆ. ಆರ್ಥಿಕ ಸ್ಥಿತಿ ಹಾಳಾಗಿಹೋಗಿದೆ. ಬೆಳೆ ಹಾನಿ ಪರಿಹಾರಕ್ಕೆ ಹಣ ಕೊಡಲು ಗತಿ ಇಲ್ಲ. ಅನುದಾನ ನೀಡುವುದರಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಪ್ರತಿ ಕ್ಷೇತ್ರವನ್ನೂ ಪ್ರತ್ಯೇಕವಾಗಿ ನೋಡಿ ಅನುದಾನ ನೀಡಬೇಕಾಗುತ್ತದೆ. ಹಾಗಾದರೆ ಮಾತ್ರ ಅದನ್ನು ಅಭಿವೃದ್ಧಿಯ ಪಥ ಎನ್ನಬಹುದು ಎಂದರು.

    ಇದೇ ವೇಳೆ ಮುಡಾ ಹಗರಣ ಸಂಬಂಧ ಮಾತನಾಡಿ, ಮುಡಾ ಮಾಜಿ ಆಯುಕ್ತರನ್ನು ಇಡಿ ಬಂಧಿಸಿದೆ. ಮುಡಾ ಹಗರಣದಲ್ಲಿ ನಷ್ಟವಾದ ಎಲ್ಲ ಹಣ ವಾಪಸ್ ಬರಬೇಕು. ಎಲ್ಲ ರೀತಿಯ ತನಿಖೆಯಾಗಿ ತಪ್ಪಿತಸ್ಥರ ಬಂಧನವಾಗಬೇಕೆಂಬುದು ಬಿಜೆಪಿಯ ಆಗ್ರಹ ಎಂದು ತಿಳಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಕುಲಗಳನ್ನು ರೂಪಿಸಿದ್ದಾರೆ. ಕುಲವೆಂದು ಹೊಡೆದಾಡಬೇಡಿ ಎಂದು ಕನಕದಾಸರು ಹೇಳಿದರೆ, ಸಿಎಂ ಸಿದ್ದರಾಮಯ್ಯ ಕುಲಗಳು ಹೊಡೆದಾಡಿ ಎನ್ನುವಂತೆ ಮಾಡಿದ್ದಾರೆ. ಕ್ರೈಸ್ತರಲ್ಲೂ ಹಿಂದೂ ಜಾತಿಗಳು ಬಂದಿವೆ. ಹಿಂದೆ ವೀರಶೈವ ಲಿಂಗಾಯತರನ್ನು ಒಡೆದಿದ್ದರು. ಈಗ ಅದನ್ನೇ ಮಾಡಲು ಹೋದರೆ ಕಾಂಗ್ರೆಸ್ ಪಕ್ಷವೇ ಒಡೆದುಹೋಗುತ್ತದೆ ಎಂದರು.ಇದನ್ನೂ ಓದಿ: ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

  • ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ, ಕೂಡಲೇ ಕೈಬಿಡಿ: ಆರ್.ಅಶೋಕ್

    ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ, ಕೂಡಲೇ ಕೈಬಿಡಿ: ಆರ್.ಅಶೋಕ್

    ರಾಮನಗರ: ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ ಭೂ ಸ್ವಾಧೀನ ಮಾಡುತ್ತಿರುವುದು ಅಕ್ರಮವಾಗಿದೆ. ಇದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.

    ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು (Greater Bengaluru) ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ 9,600 ಎಕರೆ ಜಮೀನನ್ನು ಸ್ವಾಧೀನ ಮಾಡುತ್ತಿದೆ. ಈ ಪೈಕಿ 6,500 ಎಕರೆ ಕೃಷಿಭೂಮಿ ಇದೆ. ಇಲ್ಲಿ 10 ಲಕ್ಷಕ್ಕೂ ಅಧಿಕ ತೆಂಗು ಹಾಗೂ ಮಾವಿನ ಮರಗಳಿವೆ. ಪ್ರತಿ ದಿನ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಕೆಎಂಎಫ್‌ಗೆ ತಲುಪುತ್ತಿದೆ. 3 ಸಾವಿರಕ್ಕೂ ಅಧಿಕ ರೈತರು ಹಾಗೂ ಕಾರ್ಮಿಕರು ಕೃಷಿಯನ್ನು ನಂಬಿಕೊಂಡಿದ್ದಾರೆ. ಇಷ್ಟು ಫಲವತ್ತಾದ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ಸೈಟುಗಳನ್ನು ನೀಡಲಾಗುತ್ತಿದೆ ಕಿಡಿಕಾರಿದರು. ಇದನ್ನೂ ಓದಿ: ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ವಿರೋಧಿಸಿ ರೈತರ ಹೋರಾಟ – ಬಿಜೆಪಿ ನಾಯಕರು ಸಾಥ್

    ಹೌಸಿಂಗ್ ಬೋರ್ಡ್‌ನಿಂದ 560 ಎಕರೆ ಜಮೀನು ಸ್ವಾಧೀನಕ್ಕೆ ಪಡೆದು ಸೈಟುಗಳನ್ನು ನಿರ್ಮಿಸಿದೆ. ಆದರೂ ಇಲ್ಲಿ ಯಾರೂ ಮನೆಗಳನ್ನು ನಿರ್ಮಿಸಿಲ್ಲ. ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆಗಳಲ್ಲೇ ಖಾಲಿ ಇದೆ. ಇಷ್ಟು ಖಾಲಿ ಇರುವಾಗ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಂಡರೆ ಅದು ರೈತರಿಗೆ ಮಾಡುವ ವಂಚನೆ. ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸ್ವಾಧೀನ ಬೇಡವೆಂದು ರೈತರಿಗೆ ಜಮೀನು ಬಿಟ್ಟಿದ್ದರು. ಈಗ ಕಾಂಗ್ರೆಸ್ ಸರ್ಕಾರ ಕುತಂತ್ರ ಮಾಡಿ ಜಮೀನು ಲೂಟಿ ಮಾಡಿ ರಿಯಲ್ ಎಸ್ಟೇಟ್‌ನಿಂದ ಹಣ ಹೊಡೆಯಲು ಪ್ಲಾನ್ ಮಾಡಿದೆ. ರಾಮನಗರದಲ್ಲಿ ಸೈಟು ಬೇಕೆಂದು ಯಾರು ಕೇಳಿದ್ದಾರೆ? ಮಾಡಿರುವ ಸೈಟುಗಳೇ ಖಾಲಿ ಇದೆ. ಇದು ಅಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಸ್ತೆ ಅಪಘಾತ ಸಂತ್ರಸ್ತರ ಚಿಕಿತ್ಸಾ ವೆಚ್ಚ 2.5 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

    ರೈತರ ಹೋರಾಟಕ್ಕೆ ನಾವೆಲ್ಲರೂ ಬೆಂಬಲ ನೀಡಿದ್ದೇವೆ. ಕೂಡಲೇ ಸರ್ಕಾರ ಈ ಸ್ವಾಧೀನ ಕ್ರಮವನ್ನು ಕೈ ಬಿಡಬೇಕು. ಸರ್ಕಾರದಿಂದ ಯಾರಾದರೂ ಬಂದು ರೈತರ ಅಹವಾಲು ಆಲಿಸಬೇಕಿತ್ತು. ರೈತರನ್ನು ಸಮಾಧಾನ ಮಾಡಿ ಮಾತನಾಡಬೇಕಿತ್ತು. ಅದನ್ನು ಬಿಟ್ಟು ದೌರ್ಜನ್ಯ ಮಾಡಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ರೈತರ ಬದುಕಿಗೆ ಕೊಳ್ಳಿ ಇಡುವ ಕೆಲಸ ಬೇಡ ಎಂದರು. ಇದನ್ನೂ ಓದಿ: ವಿಜಯಪುರ-ಚಿಕ್ಕಲಕಿ ಕ್ರಾಸ್‌ವರೆಗೆ ಸಂಚರಿಸುವ ನೂತನ ಬಸ್‌ಗಳಿಗೆ ಚಾಲನೆ

    ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಡಿನೋಟಿಫಿಕೇಶನ್ ಮಾಡದೆಯೇ ಹಾಗೆಯೇ ಬಿಟ್ಟುಬಿಡಬೇಕು. ಯಾವುದೇ ಸವಲತ್ತು ಬೇಡವೆಂದು ರೈತರು ಹೇಳಿದ್ದಾರೆ. ಬಹುತೇಕ ರೈತರು ಹೀಗೆಯೇ ಇರಲಿ ಎಂದು ಹೇಳಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ರೈತರ ಮಾತಿಗೆ ಬೆಲೆ ನೀಡಬೇಕು. ಮುಂದೆ ನಮ್ಮ ಸರ್ಕಾರ ಬಂದಾಗ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ. ಈ ಕುರಿತು ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ. ಇದನ್ನು ಯಾವ ಝೋನ್ ಮಾಡಬೇಕೆಂದು ಸರ್ಕಾರ ರೈತರೊಂದಿಗೆ ಚರ್ಚಿಸಲಿ ಎಂದು ಹೇಳಿದರು. ಇದನ್ನೂ ಓದಿ: 4.8 ಕೋಟಿ ಪತ್ತೆ ಕೇಸ್‌ – ಸುಧಾಕರ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌, FIR ರದ್ದು

  • ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ವಿರೋಧಿಸಿ ರೈತರ ಹೋರಾಟ – ಬಿಜೆಪಿ ನಾಯಕರು ಸಾಥ್

    ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ವಿರೋಧಿಸಿ ರೈತರ ಹೋರಾಟ – ಬಿಜೆಪಿ ನಾಯಕರು ಸಾಥ್

    – ಪ್ರತಿಭಟನೆ ವೇಳೆ ರೈತರಿಂದ ವಿಷ ಸೇವನೆಗೆ ಯತ್ನ

    ರಾಮನಗರ: ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ (Bidadi Integrated Township) ವಿರೋಧಿಸಿ ರೈತರ (Farmers) ಅಹೋರಾತ್ರಿ ಧರಣಿ ಮುಂದುವರೆದಿದ್ದು, 5ನೇ ದಿನಕ್ಕೆ ರೈತರ ಹೋರಾಟ ಕಾಲಿಟ್ಟಿದೆ. ಬಿಡದಿಯ ಭೈರಮಂಗಲ ಗ್ರಾಮದಲ್ಲಿ ನಡೆಯುತ್ತಿರೋ ಪ್ರತಿಭಟನೆಗೆ ಇಂದು ವಿಪಕ್ಷ ನಾಯಕ ಅಶೋಕ್, ಮಾಜಿ ಡಿಸಿಎಂ ಅಶ್ವಥ್ ನಾರಾಯಣಗೌಡ ಹಾಗೂ ಸಂಸದ ಡಾ.ಮಂಜುನಾಥ್ ಸಾಥ್ ನೀಡಿದ್ದಾರೆ.

    ಗ್ರಾಮಕ್ಕೆ ಎತ್ತಿನಬಂಡಿಯಲ್ಲಿ ಆಗಮಿಸಿದ ಆರ್.ಅಶೋಕ್ (R Ashok) ರೈತರ ಜೊತೆ ಕೂತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಯಾವುದೇ ಕಾರಣಕ್ಕೂ ಟೌನ್‌ಶಿಪ್ ಯೋಜನೆಗೆ ಕೃಷಿ ಭೂಮಿ ಬಳಕೆ ಮಾಡಬಾರದು. ರೈತರನ್ನ ಒಕ್ಕಲೆಬ್ಬಿಸುವ ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ಮಾಡೋಣ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ. ರೈತರ ಪರವಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಅಶೋಕ್ ರೈತರಿಗೆ ಭರವಸೆ ನೀಡಿದರು. ಇದನ್ನೂ ಓದಿ:  ಉಳ್ಳವರು ಮೀಸಲಾತಿ ಬಿಟ್ಟು ಕೊಡಬೇಕು – ಖರ್ಗೆ ಮಗನಿಗೂ ಮೀಸಲಾತಿ, ಇದು ಸರಿನಾ: ವಿಶ್ವನಾಥ್ ಪ್ರಶ್ನೆ

    ಇನ್ನೂ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ನಾಯಕರು ಮಾತನಾಡುತ್ತಿರುವಾಗಲೇ, ರೈತರು ಭೂಸ್ವಾಧೀನ ವಿರೋಧಿಸಿ ಆತ್ಮಹತ್ಯೆಗೆ ಯತ್ನಿಸಿದರು. ಇಬ್ಬರು ರೈತ ಮಹಿಳೆಯರು ಹಾಗೂ ಓರ್ವ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಈ ವೇಳೆ ಕೂಡಲೇ ಪೊಲೀಸರು ರೈತರ ಕೈಯಿಂದ ಕ್ರಿಮಿನಾಶಕದ ಬಾಟಲಿಗಳನ್ನ ಕಿತ್ತು ಬಿಸಾಕಿದರು. ವಿಷ ಕುಡಿಯಲು ಯತ್ನಿಸಿದವರನ್ನು ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಇದನ್ನೂ ಓದಿ: ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ

    ಈ ವೇಳೆ ಯಾರೂ ಆತ್ಮಹತ್ಯೆ ನಿರ್ಧಾರ ಮಾಡಬೇಡಿ, ನಿಮ್ಮ ಭೂಮಿ ಉಳಿಸಿಕೊಡುವ ಕೆಲಸ ನಾವು ಮಾಡುತ್ತೇವೆ ಎಂದು ರೈತರಿಗೆ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಮನವಿ ಮಾಡಿದರು. ಇದನ್ನೂ ಓದಿ: Malur Election | ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತ ಗೆದ್ದವರಿಗೆ ಸೇರಿಸಿದ್ದಾರೆ: ಕೆ.ಎಸ್‌ ಮಂಜುನಾಥ್‌ ಗೌಡ

  • Hassan Tragedy | ಮೃತರೆಲ್ಲ ಹಳ್ಳಿಯವ್ರು, 10 ಲಕ್ಷ ಪರಿಹಾರ ಕೊಟ್ರೆ ಒಳ್ಳೆಯದು – ಸರ್ಕಾರಕ್ಕೆ ಆರ್.ಅಶೋಕ್ ಮನವಿ

    Hassan Tragedy | ಮೃತರೆಲ್ಲ ಹಳ್ಳಿಯವ್ರು, 10 ಲಕ್ಷ ಪರಿಹಾರ ಕೊಟ್ರೆ ಒಳ್ಳೆಯದು – ಸರ್ಕಾರಕ್ಕೆ ಆರ್.ಅಶೋಕ್ ಮನವಿ

    ಹಾಸನ/ಬೆಂಗಳೂರು: ಮೃತರೆಲ್ಲ ಹಳ್ಳಿಯವರು, 10 ಲಕ್ಷ ರೂ. ಪರಿಹಾರ ಕೊಟ್ರೆ ಒಳ್ಳೆಯದು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿಯ ಘಟನೆ ಆಗಬಾರದಿತ್ತು. ಗಣೇಶೋತ್ಸವ ಸಂದರ್ಭದಲ್ಲಿ ಹೀಗೆ ಆಗಿದ್ದು ನೋವು ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಸರ್ಕಾರ ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಮೃತರೆಲ್ಲ ಹಳ್ಳಿಯವರು, ಹೀಗಾಗಿ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ನಾನು ಹಾಸನಕ್ಕೆ ಹೋಗ್ತಿದ್ದೀನಿ, ಡಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಆಸ್ಪತ್ರೆಗೂ ಭೇಟಿ ಮಾಡುತ್ತೇನೆ. ಸರ್ಕಾರ ಗಾಯಾಳುಗಳನ್ನು ಬೆಂಗಳೂರು, ಮೈಸೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು ಎಂದಿದ್ದಾರೆ.ಇದನ್ನೂ ಓದಿ: ಹಾಸನ ದುರಂತ | ಡ್ರೈವರ್‌ಗಳ ತಪ್ಪಿನಿಂದ ಆಕ್ಸಿಡೆಂಟ್‌ ಆದ್ರೆ, ಸರ್ಕಾರ ಹೇಗೆ ಹೊಣೆ ಆಗುತ್ತೆ? – ಸಿದ್ದರಾಮಯ್ಯ

    ಇದೇ ವೇಳೆ ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆ ವಿಚಾರವಾಗಿ ಮಾತನಾಡಿ, ಚಿತ್ರದುರ್ಗದಲ್ಲಿ ಪ್ರತಿ ವರ್ಷ ಗಣೇಶ ವಿಸರ್ಜನೆ ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸುತ್ತಮುತ್ತಲಿನ ಜಿಲ್ಲೆಯ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಬೇಕು. ಯಾವುದೇ ಕಿಡಿಕೇಡಿಗಳು ಮಸೀದಿಯಿಂದ ಕಲ್ಲು ಹಾಕೋದಕ್ಕೆ ಅವಕಾಶ ಕೊಡಬಾರದು. ಎಲ್ಲಾ ರಸ್ತೆಯಲ್ಲಿ ಗಣೇಶ ಹೋಗಬಹುದು, ಯಾರು ಅಡ್ಡಿ ಮಾಡಬಾರದು ಅಂತ ಮುಸ್ಲಿಮರೇ ಹೇಳಿದ್ದಾರೆ. ಕೆಲವು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಕೋಮುಗಲಭೆ ಸೃಷ್ಟಿ ಮಾಡ್ತಾರೆ. ಸರ್ಕಾರ ಕೂಡಾ ಅಂತಹವರ ಕೇಸ್ ವಾಪಸ್ ಪಡೆಯುವುದರಿಂದ ಅವರಿಗೆ ಕುಮ್ಮಕ್ಕು ಬರ್ತಿದೆ. ಪಾಕಿಸ್ತಾನ ಗಿರಾಕಿಗಳಿಗೆ ಪಾಠ ಕಲಿಸಬೇಕು. ಆಗ ಇಂತಹ ಘಟನೆಗಳು ಆಗೋದಿಲ್ಲ ಎಂದು ಆಗ್ರಹಿಸಿದ್ದಾರೆ.

    ಧರ್ಮಸ್ಥಳ ಕೇಸ್ ತನಿಖೆ ವಿಳಂಬ ವಿಚಾರವಾಗಿ ಮಾತನಾಡಿ, ಸರ್ಕಾರ ಯಾರನ್ನೋ ರಕ್ಷಣೆ ಮಾಡೋಕೆ ತನಿಖೆಯನ್ನು ವಿಳಂಬ ಮಾಡಿಸುತ್ತಿದೆ. ಎಸ್‌ಐಟಿಗೆ ಬುರುಡೆ ಅಗೆಯೋದ್ರಲ್ಲಿ ಇದ್ದ ಉತ್ಸಾಹ ತನಿಖೆ ಮಾಡೋದ್ರಲ್ಲಿ ಇಲ್ಲ. ಜಿಂಕೆಯAತೆ ಬುರುಡೆ ಅಗೆದು ಆಮೆಗತಿಯಲ್ಲಿ ತನಿಖೆ ಮಾಡ್ತಿದ್ದಾರೆ. ತನಿಖೆ ನಡೆಯೋದು ನೋಡಿದ್ರೆ ಸರ್ಕಾರವೇ ನಿಧಾನವಾಗಿ ತನಿಖೆ ಮಾಡಿ ಅಂತ ಸೂಚನೆ ಕೊಟ್ಟಂತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಈ ಕೇಸ್‌ನಲ್ಲಿ ಕೇರಳ, ತಮಿಳುನಾಡು, ದೆಹಲಿಗೂ ಲಿಂಕ್ ಇದೆ. ಎಸ್‌ಐಟಿ ಅಲ್ಲಿಗೆ ಹೋಗಿಲ್ಲ. ಇದನ್ನ ನೋಡಿದ್ರೆ ತನಿಖೆ ಹಳ್ಳ ಹಿಡಿಸೋಕೆ, ಕೇಸ್ ಮುಚ್ಚಿ ಹಾಕೋ ಹುನ್ನಾರ ನಡೆಯುತ್ತಿದೆ ಅಂತ ಅನ್ನಿಸುತ್ತೆ. ಧರ್ಮಸ್ಥಳ ಕೇಸ್‌ನಲ್ಲಿ ದೊಡ್ಡ ತಿಮಿಂಗಿಲಗಳು ಇವೆ. ಇವುಗಳ ಬೇಟೆಯಾಡಬೇಕು. ಆದರೆ ಸರ್ಕಾರ ಯಾರದ್ದೋ ರಕ್ಷಣೆಗೆ ನಿಂತಂತೆ ಕಾಣ್ತಿದೆ. ಎಸ್‌ಐಟಿ ತನಿಖೆ ಹೀಗೆ ವಿಳಂಬ ಆದ್ರೆ ಬಿಜೆಪಿ ಮತ್ತೆ ಹೋರಾಟಕ್ಕೆ ಇಳಿಯಲಿದೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಹಾಸನ | ವಿಮಾನ ದುರಂತದಲ್ಲಾದ್ರೆ 1 ಕೋಟಿ ಕೊಡ್ತೀರಿ, ಬಡವರ ಜೀವಕ್ಕೆ ಬೆಲೆ ಇಲ್ವಾ? – ಸಚಿವರಿಗೆ ಜನರ ತರಾಟೆ

  • ಇವಿಎಂ ತಂದಿದ್ದೇ ಕಾಂಗ್ರೆಸ್‌; ಆಗ ಬೇಕಿತ್ತು ಈಗ ಬೇಡವಾ? ಚುನಾವಣಾ ಅಕ್ರಮ ಮಾಡಲೆಂದೇ ಬ್ಯಾಲೆಟ್ ಪೇಪರ್ ತರ್ತಿದ್ದಾರೆ: ಅಶೋಕ್

    ಇವಿಎಂ ತಂದಿದ್ದೇ ಕಾಂಗ್ರೆಸ್‌; ಆಗ ಬೇಕಿತ್ತು ಈಗ ಬೇಡವಾ? ಚುನಾವಣಾ ಅಕ್ರಮ ಮಾಡಲೆಂದೇ ಬ್ಯಾಲೆಟ್ ಪೇಪರ್ ತರ್ತಿದ್ದಾರೆ: ಅಶೋಕ್

    ಬೆಂಗಳೂರು: ಅಟಲ್‌ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದಾಗ ಬ್ಯಾಲೆಟ್‌ ಪೇಪರ್‌ ಇತ್ತು. ನಂತರ ಮನಮೋಹನ್‌ ಸಿಂಗ್‌ ಕಾಲದಲ್ಲಿ ಇವಿಎಂ ಬಂತು. ಆಗ ಇವರು ಅದನ್ನು ವಿರೋಧ ಮಾಡಲಿಲ್ಲ. ಈಗ ವಿರೋಧ ಏಕೆಂದು ಸರ್ಕಾರಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತಾಡಿದ ಆರ್.ಅಶೋಕ್, ಇವಿಎಂ ಬಂದ ನಂತರ ಎರಡು ಚುನಾವಣೆಗಳನ್ನು ಕಾಂಗ್ರೆಸ್‌ ಗೆದ್ದಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿ ಕೂಟದ 15 ಜನರು ವಿರುದ್ಧ ಮತ ಚಲಾಯಿಸಿದ್ದಾರೆ. ಹಾಗಾದರೆ ಮುಂದೆ ಹೆಬ್ಬೆಟ್ಟು ಚುನಾವಣೆ ತರುತ್ತಾರೆಯೇ ಎಂದು ಟೀಕಿಸಿದರು.

    ಈ ಆಧುನಿಕ ಕಾಲದಲ್ಲಿ ಮೊಬೈಲ್‌ನಲ್ಲೇ ಎಲ್ಲ ಮಾಹಿತಿ ಪಡೆಯುತ್ತಾರೆ. ಆದಿಮಾನವ ಕಾಲಕ್ಕೆ ಹೋಗುವುದಾದರೆ ಬ್ಯಾಲೆಟ್‌ ಪೇಪರ್‌ ಬಳಸಬೇಕಾಗುತ್ತದೆ. ಬಿಹಾರದಲ್ಲಿ ಕಾಂಗ್ರೆಸ್‌ನ ಅಸ್ತಿತ್ವ ಇಲ್ಲ. ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡು ಜನರ ಮನಸ್ಸಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ಇವಿಎಂ ಕಾಂಗ್ರೆಸ್‌ನ ಪ್ರನಾಳ ಶಿಶು. ಈಗ ಅದೇ ಸರಿಯಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಇದನ್ನು ತಂದಿದ್ದು ಏಕೆಂದು ತಿಳಿಸಲಿ. ಇವಿಎಂ ಸುಪ್ರೀಂ ಕೋರ್ಟ್‌ನಲ್ಲೂ ಅನುಮೋದನೆಯಾಗಿದೆ. ಚುನಾವಣಾ ಆಯೋಗ ಹಾಕಿದ ಸವಾಲನ್ನು ಸ್ವೀಕರಿಸಿಲ್ಲ. ಅಫಿಡವಿಟ್‌ ಕೊಡದೆ ಓಡಿಹೋಗಿದ್ದಾರೆ. ಯಾವುದೋ ಸುಳ್ಳು ದಾಖಲೆಗಳನ್ನು ತೋರಿಸಿದ್ದಾರೆ. ಮಹದೇವಪುರ ಕ್ಷೇತ್ರದ ಬಗ್ಗೆ ಈಗ ಯಾರೂ ಮಾತಾಡುತ್ತಿಲ್ಲ. ಜನರಿಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್‌ನ ಎಂತಹ ಹೀನಾಯ ಸ್ಥಿತಿಗೆ ಹೋಗಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅಶೋಕ್ ಹೇಳಿದರು.

    ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು, ಎಬಿವಿಪಿ ಆಯೋಜಿಸಿದ್ದ ಅಬ್ಬಕ್ಕರಾಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ ಏನೂ ತಪ್ಪಿಲ್ಲ. ಇದರಲ್ಲಿ ರಾಜಕಾರಣ ಮಾಡುವುದು ಬೇಡ ಎಂದರು.

  • ಕರ್ನಾಟಕದಲ್ಲಿ ಮುಲ್ಲಾಗಳ ಸರ್ಕಾರ ಅನ್ನೋದು ಸಾಬೀತಾಗಿದೆ: ಅಶೋಕ್

    ಕರ್ನಾಟಕದಲ್ಲಿ ಮುಲ್ಲಾಗಳ ಸರ್ಕಾರ ಅನ್ನೋದು ಸಾಬೀತಾಗಿದೆ: ಅಶೋಕ್

    ನವದೆಹಲಿ: ಕರ್ನಾಟಕ ರಾಜ್ಯ ಅವಮಾನ ಪಡುವಂತಹ ಹೇಳಿಕೆ ಶಾಸಕ ಸಂಗಮೇಶ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ (Karnataka) ಮುಲ್ಲಾಗಳ ಸರ್ಕಾರ ಅನ್ನೋದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಹೇಳಿದ್ದಾರೆ.

    ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿಯೇ ಹುಟ್ಟಬೇಕು ಎಂಬ ಶಾಸಕ ಸಂಗಮೇಶ್ ಹೇಳಿಕೆ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಗಮೇಶ್ ಹೇಳಿಕೆ ನೋಡಿದರೆ ಕಾಂಗ್ರೆಸ್‌ನ (Congress) ಎಲ್ಲಾ ಶಾಸಕರು ಮುಸ್ಲಿಮರು ಆಗಬೇಕು ಅಂತಾ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರಾ? ಇದೊಂದು ಮತಾಂತರ ಮಾಡುವ ಕೆಲಸ ಅನ್ನಿಸುತ್ತದೆ. ಸಂವಿಧಾನ ಅಡಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಈ ರೀತಿ ಹೇಳಿಕೊಡುತ್ತಿದ್ದಾರೆ. ಸಂಗಮೇಶ್ ಹೇಳಿಕೆ ಇಡೀ ಕಾಂಗ್ರೆಸ್ ಹೇಳಿಕೆ ಆಗಿದೆ. ಕರ್ನಾಟಕ ಸರ್ಕಾರ ಸತ್ತು ಹೋಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿಯೇ ಹುಟ್ಟಬೇಕು: `ಕೈ’ ಶಾಸಕ ಸಂಗಮೇಶ್

    ಹಿಂದೂ ಅಂತಾ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಬೆಂಕಿ ಹಚ್ಚುವ ಹೇಳಿಕೆ ಆಗದೆ
    ನಾಳೆ ನಾವು ಧರ್ಮದ ಉಳಿವಿಗಾಗಿ ನಾವು ಹೋಗುತ್ತಿದ್ದೇವೆ. ಇದೊಂದು ತಾಲಿಬಾನ್ ಸರ್ಕಾರ. ಹಿಂದೂಗಳನ್ನು ದ್ವಿತೀಯ ದರ್ಜೆ ನಾಗರಿಕರಾಗಿಸಿದ್ದಾರೆ. ಮಹದೇವಪ್ಪ ಅವರೇ, ನೀವು ಮನೆಯಲ್ಲಿ ಇದ್ರೆ ಸಾಕು, ಕರ್ನಾಟಕ ತಣ್ಣಗಿರುತ್ತೆ. ಕರ್ನಾಟಕ ಧಗಧಗ ಉರಿಯುವುದು ತಪ್ಪುತ್ತದೆ. ಮತಾಂಧರು ಈ ರೀತಿ ಹೇಳಿಕೆ ನೀಡಲು ನೀವೇ ಕಾರಣ. ಬಿಜೆಪಿ ಸರ್ಕಾರ ಇದ್ದಿದ್ದರೆ ಇಂಥವರನ್ನು ಒದ್ದು ಒಳಗಡೆ ಹಾಕುತ್ತಿದ್ದೆವು. ಪಾಕ್ ಜಿಂದಾಬಾದ್ ಅನ್ನೋ ಹೇಳಿಕೆಗಳು ಕಾಂಗ್ರೆಸ್ ಪ್ರಚೋದನೆಯಿಂದಲೇ ಬರುತ್ತಿರುವುದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು

  • ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು ಈಗ ಮದ್ದೂರು: ಅಶೋಕ್ ಕಿಡಿ

    ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು ಈಗ ಮದ್ದೂರು: ಅಶೋಕ್ ಕಿಡಿ

    – ಇದೇ ರೀತಿ ಮುಂದುವರಿದ್ರೆ ಸಿದ್ದರಾಮಯ್ಯ ಮುಂದಿನ ವರ್ಷ ಗಣಪತಿ ಹಬ್ಬವನ್ನೇ ಬ್ಯಾನ್ ಮಾಡ್ತಾರೆ
    – ಮದ್ದೂರು ಘಟನೆಗೆ ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು

    ಬೆಂಗಳೂರು: ಧರ್ಮಸ್ಥಳ ಆಯ್ತು, ಚಾಮುಂಡೇಶ್ವರಿ ಆಯ್ತು, ಈಗ ಮದ್ದೂರು. ಈ ಘಟನೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ರಾಜ್ಯ ಸರ್ಕಾರದ (Congress) ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಕಿಡಿಕಾರಿದ್ದಾರೆ.

    ಮದ್ದೂರಿನಲ್ಲಿ (Maddur) ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಕಲ್ಲು ತೂರಾಟ (Stone Pelting) ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದ್ದೂರು ಕಲ್ಲೆಸೆತ ಮತ್ತು ಲಾಠಿಚಾರ್ಜ್ ಹೇಯಕೃತ್ಯ. ಕಲ್ಲೆಸೆತಕ್ಕೆ ಸರ್ಕಾರದ ಕುಮ್ಮಕ್ಕಿದೆ. ಈ ಘಟನೆಗೆ ನೇರ ಕಾರಣ ಪೊಲೀಸ್ ಅವರು ಅಲ್ಲ, ಸರ್ಕಾರದ ಕುಮ್ಮಕ್ಕಿಲ್ಲದೇ ಈ ಘಟನೆಗಳು ನಡೆಯುತ್ತಿರಲಿಲ್ಲ. ನಾವು ಪಾಕಿಸ್ತಾನದಲ್ಲಿವೋ ಕರ್ನಾಟಕದಲ್ಲಿದ್ದೀವೋ ಎಂಬ ಭ್ರಮೆ ಮೂಡುತ್ತಿದೆ. ತಿಮರೋಡಿ ಗ್ಯಾಂಗ್ ಸಿದ್ದರಾಮಯ್ಯನ ಸುತ್ತ ಸುತ್ತಿಕೊಂಡಿದ್ದಾರೆ. ಗಣಪತಿ ವಿಸರ್ಜನೆ ಮಾಡುವುದು ಸಾರ್ವಜನಿಕ ರಸ್ತೆ. ಇವರ ಅಪ್ಪನ ಆಸ್ತಿನಾ? ನಾವು ಟ್ಯಾಕ್ಸ್ ಕೊಟ್ಟಿರುವುದು. ಇವರ ಯೋಗ್ಯತೆಗೆ ಅಲ್ಲಿ ಒಂದು ಮೀಸಲು ಪಡೆ ಇಟ್ಟಿದ್ದರೆ ಲಾಠಿ ಚಾರ್ಜ್ ಅವಶ್ಯಕತೆ ಇತ್ತಾ? ಹಿಂದೂಗಳ ಮೇಲೆ ಲಾಠಿ ಚಾರ್ಜ್, ದುಷ್ಕರ್ಮಿಗಳಿಗೆ ಯಾಕೆ ಬಡಿದಿಲ್ಲ? ಕಲ್ಲು ಎಸೆದವರಿಗೆ ಯಾಕೆ ಬಡಿದಿಲ್ಲ? ಈ ತರಹ ಗೂಂಡಾಗಳು ಮಸೀದಿಯಲ್ಲಿ ಇರುತ್ತಾರೆ ಅಂತಾ ನಿಮಗೆ ಜ್ಞಾನ ಬೇಡವೇ. ಮದ್ದೂರು ಘಟನೆಗೆ ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಒತ್ತಡಕ್ಕೆ ಮಣಿದರೆ ನಾನೇ ಮದ್ದೂರಿಗೆ ಬರಬೇಕಾಗುತ್ತೆ – ಮಂಡ್ಯ ಎಸ್ಪಿಗೆ ಹೆಚ್‌ಡಿಕೆ ಖಡಕ್ ವಾರ್ನಿಂಗ್

    ವಿಧಾನಸೌಧದಲ್ಲೆ ಪಾಕಿಸ್ತಾನ ಪರ ಕೂಗಿದ ಮೇಲೆ ನಮ್ಮನ್ನು ಏನೂ ಮಾಡಲ್ಲ ಅಂತಾ ಟಿಪ್ಪು ಗ್ಯಾಂಗ್‌ಗೆ ಅನ್ನಿಸಲು ಶುರುವಾಯಿತು. ಈಗ ಎಲ್ಲಾ ಕಡೆ ಗಲಭೆಗಳನ್ನು ಮಾಡುತ್ತಿದ್ದಾರೆ. ಮಂಡ್ಯದಲ್ಲಿ, ಮೈಸೂರಿನಲ್ಲಿ ಇವರು ಸ್ಕೆಚ್ ಮಾಡಿಕೊಂಡುಬಿಟ್ಟಿದ್ದಾರೆ. ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಜನರ ಮುಂದೆ ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಹಿಂದೂಗಳನ್ನೇ ಟಾರ್ಗೆಟ್, ಲಾಠಿ ಚಾರ್ಜ್ ಯಾಕೆ? ಕೇಳಿದರೆ ಹಿಂದೂಗಳು ಗಲಾಟೆ ಮಾಡುತ್ತಾರೆ ಅಂತೆ. ಹಿಂದೂಗಳು ಒಗ್ಗಟ್ಟಾಗಿಲ್ಲ ಅಂದರೆ ಇನ್ನುಮುಂದೆ ಇದೇ ಗತಿ. ವೋಟಿಗೋಸ್ಕರ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ. ಅಧಿಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಧರ್ಮಸ್ಥಳ, ಚಾಮುಂಡೇಶ್ವರಿ, ಮದ್ದೂರು ಆಯಿತು. ಇನ್ನು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ನಿಮ್ಮ ಮನೆಯಲ್ಲಿ ಬಂದು ಹೊಡೆಯುತ್ತಾರೆ, ಎಚ್ಚರಿಕೆಯಿಂದಿರಿ. ಇಲ್ಲದಿದ್ದರೆ ಪಾಕಿಸ್ತಾನ, ಟಿಪ್ಪು ಏರಿಯಾಗಳನ್ನು ಉತ್ಪತ್ತಿ ಮಾಡುತ್ತಾರೆ ಎಂದು ಕೆಂಡಕಾರಿದರು. ಇದನ್ನೂ ಓದಿ: ಮದ್ದೂರಿನಲ್ಲಿ ಗಲಾಟೆ ಮಾಡಿದವರ ಬಂಧನ ಆಗಿದೆ: ಪರಮೇಶ್ವರ್

    ಕಾಂಗ್ರೆಸ್‌ನವರು ಪೂರ್ತಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ, ಅವರಿಗೆ ವೋಟ್ ಅಷ್ಟೇ ಮುಖ್ಯ. ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲ. ಅದಕ್ಕೋಸ್ಕರ ಜಾತಿ, ಜಾತಿಗಳ ಮಧ್ಯೆ ಬೆಂಕಿ ಇಡುತ್ತಾರೆ. ಬೆಂಕಿ ಇಡುವುದೇ ಕಾಂಗ್ರೆಸ್ ಕೆಲಸ. ಹಿಂದೂಗಳು ಸಹಿಷ್ಣುಗಳು. ಕಾಂಗ್ರೆಸ್ ಸರ್ಕಾರ ಇರುವುದರಿಂದ ಹಿಂದೂ ಮೆರವಣಿಗೆ ವೇಳೆ ಗಲಾಟೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ಮಹಿಳಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲಾಗಿದೆ. ಮುಂದಿನ ವರ್ಷ ಸಿದ್ದರಾಮಯ್ಯ ಕಾನೂನು ತಂದು ಗಣಪತಿ ಹಬ್ಬವನ್ನೇ ನಿಷೇಧ ಮಾಡುತ್ತಾರೆ. ಅಂತಹ ಸಿದ್ದರಾಮಯ್ಯ ಇವರು, ಅವರನ್ನು ನಂಬಬೇಡಿ ಎಂದು ಹರಿಹಾಯ್ದರು. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನಿಗೆ ಕಲ್ಲು – ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್‌

  • ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್: ಅಶೋಕ್ ಟೀಕೆ

    ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್: ಅಶೋಕ್ ಟೀಕೆ

    ಬೆಂಗಳೂರು: ರಾಜ್ಯದಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ (Ballot Paper) ಬಳಕೆಗೆ ರಾಜ್ಯ ಸರ್ಕಾರದ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಬಿಜೆಪಿ (BJP) ನಾಯಕರು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ (R Ashok) ಎಕ್ಸ್‌ನಲ್ಲಿ ಕಿಡಿಕಾರಿದ್ದು, ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್ ಎಂದು ಟೀಕಿಸಿದ್ದಾರೆ.

    ಹ್ಯಾಟ್ರಿಕ್ ಝೀರೋ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಪೂರ್ಣ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಅವರನ್ನು ರಕ್ಷಿಸಲು, ಚುನಾವಣಾ ಆಯೋಗದ ಬಗ್ಗೆ, ಚುನಾವಣಾ ಪ್ರಕ್ರಿಯೆ ಬಗ್ಗೆ, ಮತಯಂತ್ರಗಳ ಬಗ್ಗೆ ಇಲ್ಲಸಲ್ಲದ ಅನುಮಾನ ಬಿತ್ತು ಊಹಾಪೋಹ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಲೇ ಬಂದಿದೆ. ಭಾರತದ ಪ್ರಜ್ಞಾವಂತ ಮತದಾರರು ಈ ಹತಾಶ ಪ್ರಯತ್ನವನ್ನ ತಿರಸ್ಕಾರ ಮಾಡುತ್ತಲೇ ಬಂದಿದ್ದಾರೆ. ಆದರೆ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ (ಸ್ಥಳೀಯ ಸಂಸ್ಥೆಗಳು) ಇವಿಎಂ ಯಂತ್ರ ಬದಲಾಗಿ ಮತಪತ್ರ (ಬ್ಯಾಲಟ್ ಪೇಪರ್) ಬಳಕೆಗೆ ನಿರ್ಧರಿಸಿರುವ ಕಾಂಗ್ರೆಸ್ ಸರ್ಕಾರದ ಸಂಪುಟದ ತೀರ್ಮಾನ ತೀರಾ ಕೆಳಮಟ್ಟದಾಗಿದ್ದು, ಒಬ್ಬ ವ್ಯಕ್ತಿ, ಒಂದು ಕುಟುಂಬದ ರಕ್ಷಣೆಗಾಗಿ, ಸಮರ್ಥನೆಗಾಗಿ ಇಡೀ ದೇಶದ ಪ್ರಜಾಪ್ರಭುವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪಾಪದ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿದೆ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಎನ್‌ಕೌಂಟರ್ – ಮೋಸ್ಟ್ ವಾಂಟೆಡ್ ಮಾವೋವಾದಿಯ ಹತ್ಯೆಗೈದ ಭದ್ರತಾ ಪಡೆ

    ಇನ್ನು ಕಾಂಗ್ರೆಸ್ ಗೆದ್ದ ಅವಧಿಗಳನ್ನು ಪ್ರಸ್ತಾಪಿಸಿರುವ ಅಶೋಕ್, 2004ರಲ್ಲಿ ಯುಪಿಎ-1 ಸರ್ಕಾರ ಬಂದಿದ್ದು ಇದೇ ಮತಯಂತ್ರಗಳಿಂದ, 2009ರಲ್ಲಿ ಯುಪಿಯ-2 ಸರ್ಕಾರ ಬಂದಿದ್ದು ಇದೇ ಮತಯಂತ್ರಗಳಿಂದ, 2013ರಲ್ಲಿ ತಾವು ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದು ಇದೇ ಮತಯಂತ್ರಗಳಿಂದ, 2023ರಲ್ಲಿ ತಾವು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿರುವುದು ಇದೇ ಮತಯಂತ್ರಗಳಿಂದ. ಈಗ ಅದೇ ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತೊಮ್ಮೆ ಓಬೀರಾಯನ ಕಾಲದ ಮತಪೆಟ್ಟಿಗೆಗೆ ಮರಳುವ ನಿರ್ಧಾರ ಮಾಡಿದ್ದೀರಲ್ಲ ಸ್ವಾಮಿ, ಯಾರನ್ನು ಮೆಚ್ಚಿಸಲು ಈ ನಿರ್ಧಾರ ಮಾಡಿದ್ದೀರಿ? ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುತ್ತೇನೆ ಎನ್ನುವ ಸಂದೇಶ ನೀಡುವ ಮೂಲಕ ನಿಮ್ಮ ಘನತೆ, ವ್ಯಕ್ತಿತ್ವವನ್ನ ತಾವೇ ಯಾಕೆ ಕಡಿಮೆ ಮಾಡಿಕೊಳ್ಳುತ್ತೀರಿ? ಕನ್ನಡಿಗರ ಮುಂದೆ ಯಾಕೆ ಸಣ್ಣವರಾಗುತ್ತೀರಿ? ಗೆದ್ದಾಗ ಬೀಗುವುದು, ಸೋತಾಗ ವ್ಯವಸ್ಥೆಯನ್ನ ದೂಷಿಸುವುದು ಪ್ರಜಾಪ್ರಭುತ್ವಕ್ಕೆ, ಮತದಾರರಿಗೆ, ಜನಾದೇಶಕ್ಕೆ, ಇವೆಲ್ಲವನ್ನೂ ಕೊಟ್ಟ ಸಂವಿಧಾನಕ್ಕೆ ಮಾಡುವ ಅಪಮಾನ ಅಲ್ಲವೇ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಬಾಲಕನ ಕೊಲೆ ಆರೋಪ – ಹಿಗ್ಗಾಮುಗ್ಗಾ ಥಳಿಸಿ ದಂಪತಿಯ ಹತ್ಯೆ

    ಸಿದ್ದರಾಮಯ್ಯ ತಾವು ಸಂವಿಧಾನವಾದಿ, ಪ್ರಭುವಾದಿ ಎಂದು ಇತಿಹಾಸದಲ್ಲಿ ಗುರುತಿಸಿಕೊಳ್ಳಲು ಬಯಸುತ್ತೀರೋ ಅಥವಾ ಹೈಕಮಾಂಡ್ ಗುಲಾಮಗಿರಿಗಾಗಿ, ಅಧಿಕಾರಕ್ಕಾಗಿ ಆತ್ಮಸಾಕ್ಷಿಯನ್ನೇ ಮಾರಿಕೊಂಡ ಆತ್ಮವಂಚಕ ಎಂಬ ಹಣೆಪಟ್ಟಿ ಗಳಿಸಲು ಬಯಸುತ್ತೀರೋ? ಬೇರೆ ವಿಷಯಗಳಲ್ಲಿ ರಾಜಕೀಯ ಕೆಸರೆರಚಾಟ ಏನೇ ಇರಲಿ, ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭವಾಗಿರುವ ಚುನಾವಣಾ ಪ್ರಕ್ರಿಯೆ ಬಗ್ಗೆಯೇ ಸಂದೇಹ ಮೂಡಿಸುವ ಪಾಪದ ಕೆಲಸ ಮಾಡಬೇಡಿ. ಇದು ನಿಮಗೆ ಖಂಡಿತ ಶೋಭೆ ತರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ತುಂಗಾ ನದಿಯ ಉಪನದಿಗೆ ಬಿದ್ದ ಕಾರು – ನಾಲ್ವರು ಪಾರು

  • ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಈ ಭಂಡ ಬಾಳು, ರಾಜೀನಾಮೆ ಕೊಟ್ಟು ರಾಜ್ಯ ಉಳಿಸಿ: ಅಶೋಕ್

    ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಈ ಭಂಡ ಬಾಳು, ರಾಜೀನಾಮೆ ಕೊಟ್ಟು ರಾಜ್ಯ ಉಳಿಸಿ: ಅಶೋಕ್

    – ಅನುದಾನ ವಿಚಾರವಾಗಿ ಟೀಕೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರೇ (Siddaramaiah) ಇನ್ನೆಷ್ಟು ಸಿನ ಈ ಭಂಡ ಬಾಳು, ರಾಜೀನಾಮೆ (Resign) ಕೊಟ್ಟು ರಾಜ್ಯವನ್ನು ಉಳಿಸಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಟೀಕಿಸಿದ್ದಾರೆ.

    ಅನುದಾನಕ್ಕಾಗಿ (Grant) ಸಚಿವ ಚಲುವರಾಯಸ್ವಾಮಿ (Chaluvarayaswamy) ಸಿಎಂಗೆ ಮನವಿ ವಿಚಾರದ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಕೃಷಿ ಸಚಿವರು, ನಾಲ್ಕನೇ ಬಾರಿಗೆ ಶಾಸಕರಾಗಿ ಆರಿಸಿ ಬಂದಿರುವವರು ತಮ್ಮ ಕ್ಷೇತ್ರದ ಪರಿಶಿಷ್ಟ ಪಂಗಡಗಳ ಕಾಲೋನಿ ಅಭಿವೃದ್ಧಿಗೆ ಕೇವಲ 2 ಕೋಟಿ ರೂಪಾಯಿ ಅನುದಾನ ಪಡೆಯಲು ಮುಖ್ಯಮಂತ್ರಿಗಳ ಬಳಿ ಅಂಗಲಾಚಬೇಕು ಅಂದರೆ ಕರ್ನಾಟಕ ಸರ್ಕಾರ ಎಷ್ಟು ದಿವಾಳಿ ಆಗಿದೆ ಅನ್ನುವುದನ್ನ ನೀವೇ ಊಹಿಸಿಕೊಳ್ಳಿ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಯುವತಿಯನ್ನು ಪ್ರೀತಿಸಿ, ಮದುವೆಯಾಗಿ ಕಿರುಕುಳ ಆರೋಪ – ಮಾಜಿ ಕಾರ್ಪೊರೇಟರ್ ದಂಪತಿ, ಪುತ್ರನ ವಿರುದ್ಧ FIR

    ಎಕ್ಸ್‌ನಲ್ಲಿ ಏನಿದೆ?
    ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ‘ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಕಾಲಿಗೆ ಬೀಳಬೇಕು’ ಎನ್ನುತ್ತಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರಾದ ಬಸವರಾಜ ರಾಯರೆಡ್ಡಿ ಅವರು ‘ನಿಮಗೆ ರಸ್ತೆ ಬೇಕಾದ್ರೆ ಗ್ಯಾರೆಂಟಿ ಯೋಜನೆ ಬಂದ್ ಮಾಡ್ತೀವಿ’ ಎನ್ನುತ್ತಾರೆ. ಶಾಸಕ ಗವಿಯಪ್ಪನವರಂತೂ ಪಾಪ ಒಂದು ಹೆಜ್ಜೆ ಮುಂದೆ ಹೋಗಿ ‘ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸಹೋದರಿ ಮೇಲೆ ಮೊಟ್ಟೆ ಎಸೆತ

    ಇನ್ನು ಶಾಸಕರಾದ ಬಿ.ಆರ್. ಪಾಟೀಲರು, ರಾಜು ಕಾಗೆ ಅವರು ಸೇರಿದಂತೆ ಅನೇಕ ಶಾಸಕರು ಅನುದಾನವಿಲ್ಲದೆ ತಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿಕೊಂಡು ಓಡಾಡಲೂ ಆಗುತ್ತಿಲ್ಲ ಅಂತಾರೆ. ಈ ಬಗ್ಗೆ ಸೂಪರ್ ಸಿಎಂ ಸುರ್ಜೆವಾಲಾ ಅವರಿಗೆ ದೂರು ಕೊಟ್ಟಿರುವುದನ್ನ ಮಾಧ್ಯಮಗಳು ಬಿತ್ತರಿಸಿವೆ. ಇನ್ನೆಷ್ಟು ದಿನ ಸಿಎಂ ಸಿದ್ದರಾಮಯ್ಯನವರೇ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ – ನೋಯ್ಡಾದಲ್ಲಿ ಆರೋಪಿ ಅರೆಸ್ಟ್

  • ಧರ್ಮಸ್ಥಳ ಪರ ಬಿಜೆಪಿ `ಧರ್ಮ’ ಸಮರ – ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹ

    ಧರ್ಮಸ್ಥಳ ಪರ ಬಿಜೆಪಿ `ಧರ್ಮ’ ಸಮರ – ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹ

    – ಬಿಜೆಪಿ-ಜೆಡಿಎಸ್ `ಧರ್ಮ’ ಯುದ್ಧಕ್ಕೆ `ಕೈ’ ಕೌಂಟರ್ ಯಾತ್ರೆ..?

    ಮಂಗಳೂರು: ಧರ್ಮಸ್ಥಳ (Dharmasthala) ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಪ್ರಕರಣವನ್ನ ಎನ್‌ಐಎ ತನಿಖೆಗೆ (NIA Investigation) ವಹಿಸಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ನಡೆಸಿದ್ರು. ಸಾವಿರಾರು ಕಾರ್ಯಕರ್ತರು ಕಾರು, ಟಿಟಿ, ಬಸ್‌ಗಳಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ರು. ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮಂಜುನಾಥನ ದರ್ಶನ ಪಡೆದ್ರು. ಷಡ್ಯಂತ್ರ ಮಾಡುವವರಿಗೆ ತಕ್ಕ ಶಿಕ್ಷೆ ಆಗ್ಬೇಕು ಅಂತ ಸಂಕಲ್ಪ ಮಾಡಿದ್ರು.

    `ಕೈ’ ವಿರುದ್ಧ ವಿಜಯೇಂದ್ರ, ಅಶೋಕ್ ವಾಗ್ದಾಳಿ..!
    ಧರ್ಮಸ್ಥಳ ಪರ ಬಿಜೆಪಿ ಧರ್ಮ ಸಂಗ್ರಾಮ ಜೋರಾಗಿದೆ. ಶ್ರೀಮಂಜುನಾಥನ ದರ್ಶನ ಪಡೆದ ಬಿಜೆಪಿ ನಾಯಕರು ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಮಾತನಾಡಿ, ದುಷ್ಟಶಕ್ತಿಗಳು ಅಟ್ಟಹಾಸ ಮೆರೆಯುತ್ತಿವೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ನಡೆಯುತ್ತಿದೆ. ಕೋಟ್ಯಂತರ ಭಕ್ತರು ಅಪಪ್ರಚಾರದಿಂದ ಕಣ್ಣೀರು ಹಾಕ್ತಿದ್ದಾರೆ. ಅಪಪ್ರಚಾರದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

    ಇನ್ನು ಆರ್‌. ಅಶೋಕ್ ಮಾತನಾಡಿ, ಮಧ್ಯಂತರ ವರದಿ ಕೊಡಲು ಸರ್ಕಾರ ಹಿಂದೇಟು ಹಾಕಿದೆ. ಇದು ಸರ್ಕಾರದ ವಿಫಲತೆ, ಗುಪ್ತಚರ ಇಲಾಖೆ ವೈಫಲ್ಯ ಎಂದಿದ್ದಾರೆ. ಯಾರೋ ದಾರಿಲಿ ಹೋಗುವನು ಹೇಳಿದ ತಕ್ಷಣ ತನಿಖೆಗೆ ಕೊಟ್ರು ಕಾಂಗ್ರೆಸ್ ನವರಿಗೆ ಧರ್ಮದ ಪರ ಮಾತನಾಡುವ ನೈತಿಕತೆ ಇಲ್ಲ ಅಂತ ವಾಗ್ದಾಳಿ ನಡೆಸಿದ್ರು.

    ವೀರೇಂದ್ರ ಹೆಗ್ಗಡೆ ಭೇಟಿಯಾಗಿ ಮಾತುಕತೆ
    ಧರ್ಮಸ್ಥಳ ವಿರುದ್ಧದ ಅಪಪ್ರಚಾರದ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ತೆರಳಿ ಬಿಜೆಪಿ ಸಮಾವೇಶ ನಡೆಸ್ತು. ಅದಕ್ಕೂ ಮುನ್ನ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಿದ್ರು. ಬಳಿಕ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ ನಡೀತು. ಧರ್ಮಸ್ಥಳ ದೇವಸ್ಥಾನದ ಹೊರವಲಯದಲ್ಲಿರುವ ಮೈದಾನದಲ್ಲಿ ಸಮಾವೇಶ ನಡೆದಿದ್ದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ ಭಾಗಿಯಾಗಿದ್ರು. ಈ ವೇಳೆ ಅಪಪ್ರಾಚಾರಕರ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಬಿಜೆಪಿ-ಜೆಡಿಎಸ್ `ಧರ್ಮ’ ಯುದ್ಧಕ್ಕೆ `ಕೈ’ ಕೌಂಟರ್ ಯಾತ್ರೆ..?
    ಇನ್ನೂ ಧರ್ಮಸ್ಥಳ ವಿರುದ್ಧ ಬಿಜೆಪಿ-ಜೆಡಿಎಸ್ `ಧರ್ಮ’ ಯುದ್ಧಕ್ಕೆ ಕಾಂಗ್ರೆಸ್ ಕೌಂಟರ್ ಯಾತ್ರೆ ನಡೆಸೋಕೆ ಪ್ಲ್ಯಾನ್‌ ಮಾಡಿಕೊಂಡಿದೆ. ಧರ್ಮಸ್ಥಳದಲ್ಲಿನ ಬೆಳವಣಿಗೆಯನ್ನು ವಿಪಕ್ಷಗಳು ರಾಜಕೀಯವಾಗಿ ಅಸ್ತ್ರ ಮಾಡಿಕೊಂಡಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದು ಬಿಜೆಪಿ-ಜೆಡಿಎಸ್‌ಗೆ ಕೌಂಟರ್ ಕೊಡಲು ಕಾಂಗ್ರೆಸ್ ಶಾಸಕರು ಡಿಮ್ಯಾಂಡ್ ಮಾಡ್ತಿದ್ದಾರೆ. ಹೀಗಾಗಿ ವಿಪಕ್ಷಗಳ ರಾಜಕೀಯ ಯುದ್ಧಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೂಡುತ್ತಾ? ಅನ್ನೋ ಮಾತುಗಳು ಕೇಳಿಬರುತ್ತಿವೆ. ಒಂದ್ವೇಳೆ ವಿಪಕ್ಷಗಳ ವಿರುದ್ಧ ಸಮರ ಸಾರಿದ್ದೇ ಆದ್ರೆ ಕೌಂಟರ್ ಯಾತ್ರೆಯೋ? ಧರ್ಮಸ್ಥಳಕ್ಕೆ ನಿಯೋಗ ಭೇಟಿಯೋ? ಅನ್ನೋದನ್ನು ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

    `ಕೈ’ ಶಾಸಕರು, ನಾಯಕರ ಒತ್ತಾಯ ಏನು?
    * ಧರ್ಮಸ್ಥಳ ಕೇಸ್‌ನಲ್ಲಿ ಬಿಜೆಪಿ-ಜೆಡಿಎಸ್‌ನಿಂದ ಪೊಲಿಟಿಕಲ್ ಮೈಲೇಜ್
    * ವಿಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ವಿಲನ್ ರೀತಿ ಬಿಂಬಿಸುತ್ತಿವೆ
    * ಹೀಗೆ ಆದ್ರೆ ಭಕ್ತರ ಕಣ್ಣಲ್ಲಿ ಕಾಂಗ್ರೆಸ್ ಮೇಲೆ ತಪ್ಪು ಭಾವನೆ ಮೂಡುತ್ತೆ
    * ಬಿಜೆಪಿ-ಜೆಡಿಎಸ್ ಯಾತ್ರೆಗೆ ಕಾಂಗ್ರೆಸ್‌ನಿಂದಲೂ ಕೌಂಟರ್ ಯಾತ್ರೆ
    * ಯಾತ್ರೆಗೂ ಮುನ್ನವೇ ಎಸ್‌ಐಟಿ ವರದಿ ಕೊಟ್ಟು ಕೇಸ್ ಅಂತ್ಯ ಮಾಡ್ಬೇಕು
    * ಕಾಂಗ್ರೆಸ್‌ನಿಂದಲೂ ಧರ್ಮಸ್ಥಳ ಚಲೋ ಅಥವಾ ಕ್ಷೇತ್ರ ದರ್ಶನ ಆಗ್ಬೇಕು
    * ಧರ್ಮಸ್ಥಳ ಕೇಸ್‌ನಲ್ಲಿ ವಿಪಕ್ಷಗಳ ಪ್ಲ್ಯಾನ್ ವಿಫಲ ಮಾಡುವುದು.