Tag: r ashok

  • ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ – ಆರ್‌. ಅಶೋಕ್‌

    ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ – ಆರ್‌. ಅಶೋಕ್‌

    – ಬಾಣಂತಿಯರ ಸಾವು, ಮೆಡಿಕಲ್ ಮಾಫಿಯಾ ವಿಚಾರ ಚರ್ಚೆ
    – ಸದನದಲ್ಲಿ ಗದ್ದಲ, ಕೋಲಾಹಲ

    ಬೆಂಗಳೂರು/ಬೆಳಗಾವಿ: ಬಾಣಂತಿಯರ ಸಾವು (Maternal Deaths) ಕರ್ನಾಟಕವನ್ನೇ ಬೆಚ್ಚಿ ಬೀಳಿಸುವಂತಹ ಘಟನೆಯಾಗಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ. 50% ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ಹೋಗದೇ ಖಾಸಗಿ ಆಸ್ಪತ್ರೆಗೆ ಹೋಗ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಆರೋಪಿಸಿದರು.

    ವಿಧಾನಸಭೆ ಸದನದಲ್ಲಿ ಬಾಣಂತಿಯರ ಸಾವು, ಮೆಡಿಕಲ್ ಮಾಫಿಯಾ (Medical Mafia) ವಿಚಾರವಾಗಿ ಚರ್ಚೆ ನಡೆಯಿತು. ನಿಯಮ 69 ಅಡಿಯಲ್ಲಿ ನಡೆದ ಚರ್ಚೆಯಲ್ಲಿ ವಿಪಕ್ಷ ನಾಯಕ ಆರ್.‌ ಅಶೋಕ್‌ ಮಾತನಾಡಿದರು. ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ನಡುವೆ ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ

    ಬಾಣಂತಿಯರ ಸಾವು ಪ್ರಕರಣ ಕರ್ನಾಟಕವನ್ನೇ ಬೆಚ್ಚಿ ಬೀಳಿಸುವ ಘಟನೆಯಾಗಿದೆ. ಬಳ್ಳಾರಿ ಮಾತ್ರವಲ್ಲ ರಾಯಚೂರು, ಬೆಳಗಾವಿ, ಚಿತ್ರದುರ್ಗದಲ್ಲೂ ಬಾಣಂತಿಯರ ಸಾವಾಗಿದೆ. ಆರೋಗ್ಯ ಇಲಾಖೆ ರೋಗ ಪೀಡಿತ ಇಲಾಖೆ ಆಗಿದೆ. ಘಟನೆ ಆದ 6 ದಿನದ ಬಳಿಕ ಸಚಿವರು ಜಿಲ್ಲೆಗೆ ಹೋಗಿದ್ದಾರೆ. ವೈದ್ಯರು ತಪ್ಪು ಒಪ್ಪಿಕೊಳ್ಳುತ್ತಿಲ್ಲ, ಡ್ರಗ್ ಕಂಟ್ರೋಲರ್‌ನನ್ನು ಬಲಿಪಶು ಮಾಡಲಾಗಿದೆ ಎಂದು ದೂರಿದರಲ್ಲದೇ ಒಂದೆಡೆ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಜೋರಾಗಿದೆ. ಆರೋಗ್ಯ ಇಲಾಖೆ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ವಯನಾಡ್‌ನಲ್ಲಿ ಆನೆ ತುಳಿತ ಪ್ರಕರಣಕ್ಕೆ 15 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದ್ದರು. ಆದರೆ ಬಾಣಂತಿಯರ ಸಾವಿಗೆ 2 ಲಕ್ಷ ಪರಿಹಾರ ಕೊಡಲಾಗಿದೆ ಎಂದು ಆರೋಪಿಸಿದರು.

    ಮೃತಪಟ್ಟ ಮಹಿಳೆಯರನ್ನು (ಬಾಣಂತಿಯರು) ನೋಡಿದರೆ ನೋವಾಗುತ್ತೆ. ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ. 50% ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ಹೋಗ್ತಿಲ್ಲ, ಖಾಸಗಿ ಆಸ್ಪತ್ರೆಗೆ ಹೋಗ್ತಿದ್ದಾರೆ ಎಂದರು. ಈ ವೇಳೆ ಅಶೋಕ್ ಮಾತಿಗೆ ಶಾಸಕ ಕೋನರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ವಿಪಕ್ಷ ನಾಯಕರಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಬೇಡಿ ಅಂತ ಸಂದೇಶ ಕೊಡ್ತಿದ್ದೀರಾ? ಜನರಿಗೆ ಏನು ಸಂದೇಶ ಹೋಗುತ್ತೆ? ಒಳ್ಳೆಯ ಸಲಹೆ ಕೊಡಿ. ಸರ್ಕಾರ ಆಸ್ಪತ್ರೆಗಳ ಪರಿಸ್ಥಿತಿ ಉತ್ತಮಗೊಳಿಸಿದೆ, ಸರಿಯಾಗಿ ಮಾತಾಡಿ. ಸರ್ಕಾರಿ ಆಸ್ಪತ್ರೆ, ವೈದ್ಯರ ಮೇಲೆ ಕೆಟ್ಟ ಭಾವನೆ ಬರುವಂತೆ ಮಾತನಾಡಬೇಡಿ ಎಂದರು. ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಏರ್ಪಟ್ಟಿತು.

    ಮುಂದುವರಿದು ಮಾತನಾಡಿದ ಅಶೋಕ್‌, ಅವಧಿ ಮೀರಿ 6 ತಿಂಗಳು ಮುಗಿದಿರೋ ಔಷಧಗಳ ಬಳಕೆ ಆಗಿದೆ. ಇದರ ಬಗ್ಗೆ ಡ್ರಗ್ ಕಂಟ್ರೋಲ್ ಬೋರ್ಡ್ ಹೇಳಿದೆ. ಇಂತ ಔಷಧ ಬಳಸದಂತೆ ಸೂಚಿಸಿದೆ, ಒಂದು ವೇಳೆ ಪೂರೈಸಿದ್ದರೆ ಯೂಸ್ ಮಾಡಬೇಡಿ ಎಂದಿದೆ. ಹಾಗಿದ್ದರೂ ಯೂಸ್ ಮಾಡಿದ್ದು ಸರಿಯೇ? ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: 7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಇದಕ್ಕೆ ಉತ್ತರಿಸಿದ ಸಚಿವ ದಿನೇಶ್‌ ಗುಂಡೂರಾವ್‌, ನಾವು ಈ ಔಷಧವನ್ನ ಸ್ಟಾಪ್ ಮಾಡಿದ್ದೆವು. ಕಂಪನಿಯನ್ನ ಬ್ಲಾಕ್ ಲಿಸ್‌ಗೆ ಹಾಕಿದ್ದೆವು. ಅವರು ಕೋರ್ಟ್‌ಗೆ ಹೋಗಿ ಸ್ಟೇ ತಂದ್ರು, ಸೆಂಟ್ರಲ್ ಡ್ರಗ್ ಕಮೀಷನ್ ಐವಿ ದ್ರಾವಣ ಸರಿಯಿದೆ ಅಂದಿತ್ತು. ಹೀಗಾದಾಗ ನಾವೇನು ಮಾಡಬೇಕು? ಎಂದು ಅಶೋಕ್ ಆರೋಪಕ್ಕೆ ತಿರುಗೇಟು ನೀಡಿದರು.

    ಮಾತು ಮುಂದುವರಿಸಿದ ಆರ್‌. ಅಶೋಕ್‌, ನಕಲಿ ಔಷಧ ಪೂರೈಸುವ ಕಂಪನಿಗಳಿಗೆ ಈ ಸದನದಿಂದ ಸ್ಟ್ರಾಂಗ್ ಸಂದೇಶ ರವಾನೆ ಆಗಬೇಕು. ಹಾಲಿ ಜಡ್ಜ್ ನೇತೃತ್ವದಲ್ಲಿ ಬಾಣಂತಿಯರ ಸಾವು ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮಂಡ್ಯದಲ್ಲೊಂದು ದುರಂತ ಪ್ರೇಮ ಕಥೆ | ಲವರ್‌ಗಾಗಿ ನದಿಗೆ ಹಾರಿದ ಗೃಹಿಣಿ – ಪ್ರಿಯಕರ ನೇಣಿಗೆ ಶರಣು

  • ಪ್ರತಿಪಕ್ಷ ನಾಯಕ ಅಶೋಕ್‌ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಅಪಸ್ವರ!

    ಪ್ರತಿಪಕ್ಷ ನಾಯಕ ಅಶೋಕ್‌ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಅಪಸ್ವರ!

    ಬೆಳಗಾವಿ: ವಿಧಾನ ಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashok) ಕಾರ್ಯವೈಖರಿಗೆ ಬಿಜೆಪಿಯಲ್ಲೇ (BJP) ಅಪಸ್ವರ ಕೇಳಿಬಂದಿದೆ. ಬಿಜೆಪಿಯ ಕೆಲ ಶಾಸಕರು ಅಶೋಕ್ ಕಳೆದ ವಾರ ನಡೆದ ಕಲಾಪಗಳಲ್ಲಿ ಸರಿಯಾಗಿ ಕಾರ್ಯನಿರ್ವಹಣೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಮುಖ್ಯವಾಗಿ ಆರ್‌ಎಸ್‌ಎಸ್ (RSS) ಮತ್ತು ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ (Panchamasali Reservation) ಅಶೋಕ್ ನಡೆಗೆ ಕಮಲ ಶಾಸಕರು ಅತೃಪ್ತಿ ಹೊಂದಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದುಬಂದಿದೆ.

     

    ಅಸಮಾಧಾನ ಯಾಕೆ?
    ಪಂಚಮಸಾಲಿ ಮೀಸಲಾತಿ ಪ್ರತಿಭಟನೆಯ ವೇಳೆ ಆರ್‌ಎಸ್‌ಎಸ್‌ನವರು ಬಂದು ಕಲ್ಲು ಹೊಡೆದರು ಎಂಬ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಹೇಳಿಕೆಗೆ ಸಂಘದ ಹಿನ್ನೆಲೆಯ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಶಪ್ಪನವರ್ ಹಾಗೂ ಕಾಂಗ್ರೆಸ್ ವಿರುದ್ಧ ಅಶೋಕ್ ಅವರು ಸರಿಯಾಗಿ ಖಂಡಿಸಿ ತಿರುಗೇಟು ನೀಡಬೇಕಿತ್ತು. ಆದರೆ ಅಶೋಕ್‌ ಸರಿಯಾಗಿ ಹೇಳಿಕೆಯನ್ನು ಖಂಡಿಸಲಿಲ್ಲ.

    ಸ್ಪೀಕರ್ ಅವರು ಪಕ್ಷಪಾತಿ ಧೋರಣೆ ತಳೆದಿರುವ ಆರೋಪ ವಿಚಾರದಲ್ಲೂ ಶಾಸಕರಿಗೆ ಅಶೋಕ್ ಸಾಥ್‌ ಕೊಡಲಿಲ್ಲ. ಸ್ಪೀಕರ್ ಕಚೇರಿಗೆ ಘೇರಾವ್ ಹಾಕಲು ಕೆಲ ಶಾಸಕರು ಮುಂದಾದಾಗ ಅಶೋಕ್ ದ್ವಂದ್ವ ಮನಸ್ಸಿನಿಂದ ಸಹಕಾರ ನೀಡಿದ್ದರು. ಇದನ್ನೂ ಓದಿ: ಮಂತ್ರಿ ಮಾಡದ್ದಕ್ಕೆ ಸಿಟ್ಟು – ಪಕ್ಷಕ್ಕೆ ರಾಜೀನಾಮೆ ನೀಡಿದ ಶಿವಸೇನಾ ಶಾಸಕ

    ಬೆಳಿಗ್ಗೆ ಚರ್ಚೆ ಮಾಡಿ ಬಂದಿರುತ್ತೇವೆ. ಆದರೆ ಸದನ ನಡೆಯುವಾಗ ಬೇರೆಯೇ ಆಗಿರುತ್ತದೆ. ಆಡಳಿತ ಪಕ್ಷದ ಕೆಲವು ಸದಸ್ಯರು ಚರ್ಚೆ ಹಳಿ ತಪ್ಪಿಸಲು ಪದೇ ಪದೇ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುವುದಿಲ್ಲ. ವಿರೋಧ ಪಕ್ಷದ ನಾಯಕರೆಂಬ ಬೆಲೆ ಕೊಡದೇ ವರ್ತಿಸುತ್ತಾರೆ.

    ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಮತ್ತು ಅಶೋಕ್ ಮಧ್ಯೆಯೂ ಸರಿಯಾದ ಸಮನ್ವಯತೆ ಸೃಷ್ಟಿಯಾಗುತ್ತಿಲ್ಲ. ಸದನದಲ್ಲಿ ಹಾಗೂ ಸದನದ ಹೊರಗೆ ಅಶೋಕ್ ಒಂದು ದಿಕ್ಕು, ವಿಜಯೇಂದ್ರ ಇನ್ನೊಂದು ದಿಕ್ಕು ಎಂಬಂತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

     

  • ಸರಿಯಾಗಿ ಹಣ ನೀಡದ್ದಕ್ಕೆ ಕಾಂಗ್ರೆಸ್‌ ಸದಸ್ಯರಿಂದಲೇ ಗಲಾಟೆ: ಅಶೋಕ್‌ ಕಿಡಿ

    ಸರಿಯಾಗಿ ಹಣ ನೀಡದ್ದಕ್ಕೆ ಕಾಂಗ್ರೆಸ್‌ ಸದಸ್ಯರಿಂದಲೇ ಗಲಾಟೆ: ಅಶೋಕ್‌ ಕಿಡಿ

    ಬೆಳಗಾವಿ: ಅಧಿವೇಶನ‌ (Session) ಆರಂಭವಾದಾಗಿನಿಂದ ಸದನದ ನಿಯಮ‌ ಏನೂ ಇಲ್ಲ. ಯರದ್ದೋ ಅಣತಿಯಂತೆ ಸ್ಪೀಕರ್ ಯುಟಿ ಖಾದರ್‌ (UT Khader) ಸದನ ನಡೆಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಅಶೋಕ್ ಆರೋಪಿಸಿದ್ದಾರೆ.

    ಸುವರ್ಣ ಸೌಧದಲ್ಲಿ ಮಾತನಾಡಿದ ಅವರು ಸ್ಪೀಕರ್ ಕಾಂಗ್ರೆಸ್ ಶಾಸಕರಿಗೆ ಸ್ಚೇಚ್ಛಾಚಾರ ಬಿಟ್ಟಿದ್ದಾರೆ. ನಿಯಮದಲ್ಲಿ ವಕ್ಫ್ ಬೋರ್ಡ್ ಸಂಬಂಧ ನಿಲುವಳಿ ಸೂಚನೆ ಕೊಡಲಾಗಿದೆ. ನಾಲ್ಕು ದಿನ‌ ಆಗಿದ್ದು ಉದ್ದೇಶಪೂರ್ವಕವಾಗಿ ಆಡಳಿತ ಪಕ್ಷಕ್ಕೆ ಈ ರೀತಿ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರೇ ಗಲಾಟೆ ಮಾಡುತ್ತಿದ್ದಾರೆ. ಶಾಸಕರಿಗೆ ಸರಿಯಾಗಿ ಹಣ ಕೊಡುತ್ತಿಲ್ಲ. ಆ ಕೋಪನ್ನು ಸದನದ ಮೇಲೆ ತೋರಿಸುತ್ತಿದ್ದಾರೆ. ಈ ಕಾರಣಕ್ಕೆ ನಾವು ಸದನದಿಂದ ಹೊರ ನಡೆದಿದ್ದೇವೆ ಎಂದು ದೂರಿದರು. ಇದನ್ನೂ ಓದಿ:ಕೇರಳ ಮಾದರಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹೆಚ್ಚಳ ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

     

    ಸ್ಫೀಕರ್‌ ಆಡಳಿತ ಪಕ್ಷ ಸದಸ್ಯರ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಸದನದಲ್ಲಿ ಕುಳಿತು ಏನು ಪ್ರಯೋಜನ? ವಕ್ಫ್ ಸಂಬಂಧ ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ನಿಯಮದ ಪ್ರಕಾರ ಮಾಡಲಿ, ವಕ್ಫ್ ಸಂಬಂಧ ಚರ್ಚೆಗೆ ಅವಕಾಶ ಕೊಟ್ಟ ಮೇಲೆ ಮುನಿರತ್ನ ಸಂಬಂಧ ಚರ್ಚೆಗೆ ಅವಕಾಶ ನೀಡಲಿ. ವಕ್ಫ್ ಬೋರ್ಡ್, ಬಾಣಂತಿ ವಿಚಾರ ಚರ್ಚೆಗೆ ಬರಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.

    ಸೋಮವಾರದಿಂದ ಸದನ ನಡೆದಿದೆ. ಯಾವುದೇ ನಿಯಮಗಳಂತೆ ಸದನ ನಡೆಯುತ್ತಿಲ್ಲ. ಇಂದು ಅಜೆಂಡಾದಲ್ಲಿ ವಕ್ಫ್ ವಿಚಾರ ಇದೆ. ನಾನು ಸೋಮವಾರ ಚರ್ಚೆಗೆ ಕೊಟ್ಟಿದ್ದೆ ಪ್ರಶ್ನೋತ್ತರ ಆಗುತ್ತಲೇ ನಿಲುವಳಿಗೆ ಕೊಡ್ತಾರೆ. ಹಿರಿಯರ ಚಿತಾವಣೆಯಂತೆ ಸದನ ನಡೆದಿದೆ. ಬೇಕೆಂದೇ ಸದನ ನಡೆಯದಂತೆ ತಡೆಯುತ್ತಿದ್ದಾರೆ. ಸದನದ ಸಮಯವನ್ನು ಹಾಳು‌ಮಾಡ್ತಿದ್ದಾರೆ. ಅದಕ್ಕೆ ನಾವು ಸಭಾತ್ಯಾಗ ಮಾಡಿದ್ದೇವೆ ಎಂದರು.

    ಸ್ಪೀಕರ್ ಮಾತಿಗೆ ಶಾಸಕರು ಬೆಲೆ ಕೊಡ್ತಿಲ್ಲ.ಅವರಿಗೆ ಸದನವನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ. ರೈತರು ಇಂದು ಸಾಯುತ್ತಿದ್ದಾರೆ. ಬಾಣಂತಿಯರ ಸಾವು ನಡೆದಿದ್ದು ಇದರ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ನಾನು 26 ವರ್ಷಗಳಿಂದ ಸದನದಲ್ಲಿ ಇದ್ದೇನೆ ಇಂತಹ ಸನ್ನಿವೇಶ ನೋಡಿಲ್ಲ ಎಂದರು.

  • ಸಿಎಂ ನಿದ್ದೆರಾಮಯ್ಯ ಆಗಿದ್ದಾರೆ, 17 ತಿಂಗಳಲ್ಲಿ 17 ಅವಾಂತರ ತೋರಿದ ಸರ್ಕಾರ – ಆರ್.ಅಶೋಕ್ ಕಿಡಿ

    ಸಿಎಂ ನಿದ್ದೆರಾಮಯ್ಯ ಆಗಿದ್ದಾರೆ, 17 ತಿಂಗಳಲ್ಲಿ 17 ಅವಾಂತರ ತೋರಿದ ಸರ್ಕಾರ – ಆರ್.ಅಶೋಕ್ ಕಿಡಿ

    ಬೆಳಗಾವಿ: ಸಿಎಂ ನಿದ್ದೆರಾಮಯ್ಯ ಆಗಿದ್ದಾರೆ, 12 ತಿಂಗಳ ಅವಧಿಯಲ್ಲಿ 17 ಅವಾಂತರಗಳನ್ನು ಸರ್ಕಾರ ತೋರಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಕಿಡಿಕಾರಿದ್ದಾರೆ.ಇದನ್ನೂ ಓದಿ: ಹಾಸನ| ಹೃದಯಾಘಾತದಿಂದ ಟೆಕ್ಕಿ ಸಾವು

    ಬೆಳಗಾವಿಯಲ್ಲಿ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಸರ್ಕಾರ ಆಡಳಿತಕ್ಕೆ ಬಂದು 18 ತಿಂಗಳು ಕಳೆದಿವೆ. 17 ತಿಂಗಳಾದರೂ ಸರ್ಕಾರ ಏನೂ ಅಭಿವೃದ್ಧಿ ಮಾಡಿಲ್ಲ. ಆದರೆ 17 ತಿಂಗಳಲ್ಲಿ 17 ಅವಾಂತರಗಳನ್ನು ಸರ್ಕಾರ ತೋರಿಸಿದೆ. ಸಿದ್ದರಾಮಯ್ಯ ಕಳೆದ ಬಾರಿಯ ಆಡಳಿತವನ್ನು ಕೊಡುತ್ತಿಲ್ಲ. ಈ ಬಾರಿ ಸಿದ್ದರಾಮಯ್ಯ ಅವರೇ ಮುಡಾದಲ್ಲಿ ಸಿಲುಕಿ ನರಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಇದೀಗ ನಿದ್ದೆರಾಮಯ್ಯ ಆಗಿದ್ದಾರೆ. ಜೊತೆಗೆ ಸರ್ಕಾರವು ಕೂಡ ನಿದ್ದೆಯಲ್ಲಿದೆ. ಸಿಎಂಗೆ ಯಾವುದೇ ಇಲಾಖೆಗಳ ಮೇಲೆಯೂ ಹಿಡಿತ ಇಲ್ಲ ಎಂದು ವ್ಯಂಗ್ಯವಾಡಿದರು.

    ಬೆಳಗಾವಿ (Belagavi) ಜಿಲ್ಲೆಯೊಂದರಲ್ಲಿಯೇ ಮುನ್ನೂರಕ್ಕೂ ಹೆಚ್ಚು ನವಜಾತ ಶಿಶುಗಳ ಸಾವಾಗಿದೆ. ಸಿದ್ದರಾಮಯ್ಯ ಹೊಸದಾಗಿ ಬಂದಾಗ ಪ್ರತಿ ತಿಂಗಳು ಜನತಾದರ್ಶನ ಮಾಡುತ್ತೇನೆ ಎಂದಿದ್ದರು. ಆದರೆ ಮಂತ್ರಿಗಳು ದುಡ್ಡು ಮಾಡುವುದರಲ್ಲಿ ಮುಳುಗಿದ್ದಾರೆ. ಜಿಲ್ಲೆಗಳಿಗೆ ಮಂತ್ರಿಗಳು ಭೇಟಿ ಕೊಡುತ್ತಿಲ್ಲ. ದುಡ್ಡು ಮಾಡಲು ಮಾತ್ರ ಜಿಲ್ಲೆಗಳಿಗೆ ಹೋಗುತ್ತಾರೆ. ಯಾವ ಮಂತ್ರಿಗಳು ಆಯಾ ಜಿಲ್ಲೆಗೆ ಹೋಗುತ್ತಿಲ್ಲ. ಇದು ಗುರುವಾರದ ಸರ್ಕಾರ, ಗುರುವಾರ ಮಾತ್ರ ಸಚಿವರು ವಿಧಾನಸೌಧಕ್ಕೆ ಬರುತ್ತಾರೆ. ಉತ್ತರ ಕರ್ನಾಟಕದ ಬಗ್ಗೆ ಸರ್ಕಾರ ಹೇಳಿದ್ದೇನು, ಮಾಡಿದ್ದೇನು? ಅತ್ಯಂತ ಕಳಪೆ ಸರ್ಕಾರ ಇದು. ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: 5 ಲಕ್ಷ ಹೆಕ್ಟರ್ ತೊಗರಿ ಹೂ ಬಿಡದೇ ಸರ್ವನಾಶ – ಬೆಳೆ ಹಾನಿ ಸಮೀಕ್ಷೆಗೆ ರೈತರ ಒತ್ತಾಯ

  • ಬಾಣಂತಿಯರ ಸಾವಿನಲ್ಲಿ ಕರ್ನಾಟಕ ನಂ.1 ಆಗಿದೆ – ಆರ್‌. ಅಶೋಕ್

    ಬಾಣಂತಿಯರ ಸಾವಿನಲ್ಲಿ ಕರ್ನಾಟಕ ನಂ.1 ಆಗಿದೆ – ಆರ್‌. ಅಶೋಕ್

    – 28 ಔಷಧಿಗಳು ಕಳಪೆ ಅಂದ್ಮೇಲೂ ಅದೇ ಕಂಪನಿಯಿಂದ ಔಷಧ ಖರೀದಿ
    – ಮಕ್ಕಳ, ತಾಯಂದಿರನ್ನು ಉಳಿಸದೇ ನೂರು ಸಮಾವೇಶ ಮಾಡಿದ್ರೂ ವ್ಯರ್ಥ
    – ಸರ್ಕಾರಕ್ಕೆ ಜನರ ಶಾಪ ತಟ್ಟಲಿದೆ ಎಂದು ವಿಪಕ್ಷ ನಾಯಕ ಕಿಡಿ

    ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿರುವಾಗ ಕಾಂಗ್ರೆಸ್‌ 20 ಕೋಟಿ ರೂ. ಖರ್ಚು ಮಾಡಿ ಸಮಾವೇಶ ಮಾಡಿದೆ. ಮಕ್ಕಳನ್ನು ಉಳಿಸದೇ ನೂರು ಸಮಾವೇಶ ಮಾಡಿದರೂ ಸರ್ಕಾರಕ್ಕೆ ಜನರ ಶಾಪ ತಟ್ಟದೆ ಇರುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ (R Ashoka) ಆಕ್ರೋಶ ಹೊರಹಾಕಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರೋಗ್ಯ ಇಲಾಖೆ (Health Department) ಅನಾರೋಗ್ಯ ಇಲಾಖೆಯಾಗಿ ಬದಲಾಗಿದೆ. ಬಳ್ಳಾರಿ ಆಸ್ಪತ್ರೆಯಲ್ಲಿ ಐವಿ ದ್ರಾವಣದಿಂದಾಗಿ ತಾಯಂದಿರು ಸತ್ತಿದ್ದಾರೆ. ನಾನು ಹೋಗಿ ಎಚ್ಚರಿಕೆ ನೀಡಿದ ನಂತರವೂ ತಾಯಂದಿರು ಸತ್ತಿದ್ದಾರೆ. ಹತ್ತು ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 111 ನವಜಾತ ಶಿಶುಗಳು ಹಾಗೂ ಎಂಟು ತಿಂಗಳಲ್ಲಿ ಸುಮಾರು 28 ಬಾಣಂತಿಯರು ಸಾವನ್ನಪ್ಪಿದ್ದಾರೆ. ಮಹಿಳೆಯರಿಗೆ 2 ಸಾವಿರ ರೂ. ನೀಡುವ ಬದಲು ತಾಯಂದಿರ ಸಾವಿಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಕೋವಿಡ್‌ ಸಮಯದಲ್ಲಿ ರಾಹುಲ್‌ ಗಾಂಧಿ, ಡಿ.ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ, ಜನರ ಬಳಿಗೆ ಹೋಗಿ ಟವೆಲ್‌ನಲ್ಲಿ ಕಣ್ಣೀರು ಒರೆಸಿಕೊಂಡರು. ಈಗ ತಾಯಂದಿರು ಸತ್ತಿರುವಾಗ ಜನಕಲ್ಯಾಣ ಸಮಾವೇಶ ಮಾಡಿದ್ದಾರೆ. ಆ ಸಮಾವೇಶದಲ್ಲಿ ರಾಜಕೀಯ ಮಾತಾಡುವುದು ಬಿಟ್ಟರೆ, ಜನರ ಪರವಾಗಿ ಮಾತಾಡಿಲ್ಲ. 28 ಔಷಧಿಗಳು ಕಳಪೆ ಎಂದಮೇಲೂ ಅದೇ ಕಂಪನಿಯಿಂದ ಔಷಧಿ ಖರೀದಿಸಲಾಗಿದೆ. ಮಕ್ಕಳನ್ನು ಉಳಿಸುವ ಕೆಲಸ ಮಾಡದೆ ನೂರು ಸಮಾವೇಶ ಮಾಡಿದರೂ ಶಾಪ ಹಾಗೂ ಪಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಮಾಡಿದ ನಂತರವೂ ತಾಯಂದಿರು ಸಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗೆ ಸರ್ಕಾರದಲ್ಲಿ ಹಿಡಿತವಿಲ್ಲ ಎಂದರ್ಥ. ಈ ಸಾವಿನ ಹೊಣೆಯನ್ನು ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಾಂಗ್ರೆಸ್‌ ನಾಯಕರು ಜನರ ಹಿತ ಕಡೆಗಣಿಸಿ ವಿರೋಧ ಪಕ್ಷಗಳನ್ನು ಬಗ್ಗುಬಡಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ:  ಬಿಜೆಪಿಯದ್ದು ಮನೆಯೊಂದು ಮೂರು ಬಾಗಿಲಾದ್ರೆ, ಕಾಂಗ್ರೆಸ್‌ನದ್ದು ಊರು ಬಾಗಿಲು: ಅಶೋಕ್‌ ಲೇವಡಿ

    ನಾನು ಈಗಾಗಲೇ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದೇನೆ. ಈ ಕುರಿತು ಲೋಕಾಯುಕ್ತಕ್ಕೆ ಪತ್ರ ಕೂಡ ಬರೆಯುತ್ತೇನೆ. ಇದನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡದೆ ಬಿಡುವುದಿಲ್ಲ. ಸಿಎಂ ಸಿದ್ದರಾಮಯ್ಯ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಜಿಡಿಪಿಯಲ್ಲಿ ನಂಬರ್‌ 1 ಎನ್ನುವ ಸಿಎಂ ಸಿದ್ದರಾಮಯ್ಯ ಬಾಣಂತಿಯರ ಸಾವಿನಲ್ಲೂ ನಂಬರ್‌ 1 ಎಂದು ಹೇಳಲಿ ಎಂದರು.

  • ಬಿಜೆಪಿಯದ್ದು ಮನೆಯೊಂದು ಮೂರು ಬಾಗಿಲಾದ್ರೆ, ಕಾಂಗ್ರೆಸ್‌ನದ್ದು ಊರು ಬಾಗಿಲು: ಅಶೋಕ್‌ ಲೇವಡಿ

    ಬಿಜೆಪಿಯದ್ದು ಮನೆಯೊಂದು ಮೂರು ಬಾಗಿಲಾದ್ರೆ, ಕಾಂಗ್ರೆಸ್‌ನದ್ದು ಊರು ಬಾಗಿಲು: ಅಶೋಕ್‌ ಲೇವಡಿ

    – ಬಾಣಂತಿಯರ ಸಾವಿನ ಹೊಣೆ ಹೊತ್ತು ಸಿಎಂ ರಾಜೀನಾಮೆಗೆ ಆಗ್ರಹ
    – ಹಾಸನ ಸಮಾವೇಶಕ್ಕೆ 20 ಕೋಟಿ ಎಲ್ಲಿಂದ ಬಂತು ಎಂದು ಪ್ರಶ್ನೆ

    ಬೆಂಗಳೂರು: ಬಿಜೆಪಿಯದ್ದು (BJP) ಮನೆಯೊಂದು ಮೂರುಬಾಗಿಲು ಅಂತಾರಲ್ಲ, ಕಾಂಗ್ರೆಸ್‌ನವರದ್ದು ಊರು ಬಾಗಿಲಾಗಿದೆಯಲ್ಲ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ (Congress) ಪವರ್‌ ಶೇರಿಂಗ್‌ ಫೈಟ್‌ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಉತ್ತರ ಪ್ರದೇಶದ ಪಿಲಿಭಿತ್, ಚಿತ್ರಕೂಟ್‌ನಲ್ಲಿ ರಸ್ತೆ ಅಪಘಾತ – 10 ಸಾವು, 12 ಮಂದಿ ಸ್ಥಿತಿ ಗಂಭೀರ

    ಪರಮೇಶ್ವರ್ (Parameshwar) ಈಗ ಮಾತಾಡಿದ್ದಾರಲ್ಲ, ಮೊದಲು ಸಿಎಂ ಆಗೋದಿಕ್ಕೆ ಅವರಿಗೇ ಆದ್ಯತೆ ಸಿಗಬೇಕು. ಅದಕ್ಕೇ ಅವರು ಮೊನ್ನೆ ಡಿಮ್ಯಾಂಡ್ ಇಟ್ಟಿದ್ದು. ಪರಮೇಶ್ವರ್ ಎರಡು ಸಲ ಅಧ್ಯಕ್ಷ ಆಗಿದ್ದವರು. ಸಿಎಂ ಆಗ್ತಾರೆ ಅಂತ ಅವರನ್ನು ಕಳೆದ ಸಲ ಸೋಲಿಸಲಾಯ್ತು. ಸಿಎಂ ಪೋಸ್ಟ್ ಬಿಟ್ಟುಕೊಡಲ್ಲ ಅಂತ ಸಿದ್ದರಾಮಯ್ಯ (Siddaramaiah) ಅವರೇ ಹೇಳಿದ್ದಾರಲ್ಲ, ಡಿಕೆಶಿಗೆ ಪೆನ್ನು ಪೇಪರ್ ಇನ್ನೆಲ್ಲಿ ಸಿಗುತ್ತೆ? ಬಿಜೆಪಿಯದ್ದು ಮನೆಯೊಂದು ಮೂರು ಬಾಗಿಲು ಅಂತಾರಲ್ಲ, ಕಾಂಗ್ತೆಸ್‌ನವ್ರದ್ದು ಊರು ಬಾಗಿಲಾಗಿದೆಯಲ್ಲ ಎಂದು ಲೇವಡಿ ಮಾಡಿದರು.

    ಸಿಎಂ ರಾಜೀನಾಮೆಗೆ ಆಗ್ರಹ:
    ಮುಂದುವರಿದು, ಬಾಣಂತಿಯರ ಸಾವಿನ ಹೊಣೆ ಸಿಎಂ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು. ಪುಡಿಗಳ ರಾಜೀನಾಮೆ ಬೇಡ. ಅಲ್ಲದೇ ಬಾಣಂತಿಯರ ಸಾವಿನ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ನಮ್ಮ ಪಕ್ಷದಿಂದ, ಲೋಕಾಯುಕ್ತಕ್ಕೆ ದೂರು ನೀಡಲಿದ್ದೇವೆ ಎಂದು ಹೇಳಿದರು.

    ಇನ್ನೂ ಸೆಂಟ್ರಲ್ ಲ್ಯಾಬ್‌ನಲ್ಲಿ ದ್ರಾವಣ ಬಳಕೆಗೆ ಯೋಗ್ಯ ಅಂತ ವರದಿ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇವ್ರು ಯಾವ ಸ್ಯಾಂಪಲ್ ಕಳಿಸಿದರು ಅಂತ ಬೇಕಲ್ಲ. ಕೇಂದ್ರದ ಯಾವುದೇ ಅಧಿಕಾರಿ ತಪ್ಪು ಮಾಡಿದರೂ ಕ್ರಮ ಆಗಲಿ, ಡ್ರಗ್ ಮಾಫಿಯಾ ಕೇಂದ್ರದ ಸಂಸ್ಥೆಗಳನ್ನು ಬಿಟ್ಟಿಲ್ಲ. ರಾಜ್ಯದಲ್ಲಿ ಕಳಪೆ ದ್ರಾವಣ ಖರೀದಿ ಹಿಂದೆ ಮೆಡಿಕಲ್ ಮಾಫಿಯಾ ಕೈವಾಡ ಇದೆ, ಈ ಸರ್ಕಾರದವರ ಕೈವಾಡ ಇದೆ ಎಂದು ಆರೋಪಿಸಿದರು.

    ರಾಜ್ಯ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆ ಆಗಿದೆ. ಬಳ್ಳಾರಿ ಆಸ್ಪತ್ರೆಗೆ ನಾನೂ ಕೂಡ ಭೇಟಿ ಕೊಟ್ಟಿದ್ದೆ. ಐವಿ ದ್ರಾವಣ ಕಳಪೆಯಾಗಿತ್ತು, ಆದ್ದರಿಂದ ಬಾಣಂತಿಯರ ಸಾವಾಗಿದೆ. ಒಂದೇ ಗಂಟೆಯಲ್ಲಿ ಕಿಡ್ನಿ, ಲಿವರ್ ಫೇಲ್ ಆಗಿ ಸತ್ತಿದ್ದಾರೆ ಅಂತ ವೈದ್ಯರು ಹೇಳಿದ್ರು. ಮತ್ತೆ ಒಬ್ಬರು ಬಾಣಂತಿಯರ ಸಾವಾಗಿದೆ. ರಾಜ್ಯದಲ್ಲಿ ಕಳೆದ ತಿಂಗಳಲ್ಲಿ 111 ನವಜಾತ ಶಿಶುಗಳು, 29 ಬಾಣಂತಿಯರ ಸಾವಾಗಿದೆ. ಈ ಸಾವುಗಳಿಗೆ ನ್ಯಾಯ ಕೊಡೋರು ಯಾರು? ಅಂತ ಪ್ರಶ್ನೆ ಮಾಡಿದರು.

    ಬಾಣಂತಿ ಸಾವಾದ ದಿನವೇ ಹಾಸನ ಸಮಾವೇಶ:
    ಬಿಜೆಪಿ ಅವಧಿಯಲ್ಲಿ ಕೋವಿಡ್ ವೇಳೆ ಸಾವಾಗಿದೆ ಅಂತ ಆರೋಪ ಮಾಡೋ ಕಾಂಗ್ರೆಸ್‌ನವರು ಈಗ ಬಾಣಂತಿಯರ ಸಾವಿನ ಬಗ್ಗೆ ಏನಂತಾರೆ? ಬಾಣಂತಿ ಸಾವಾದ ದಿನವೇ ಹಾಸನ ಸಮಾವೇಶ ಮಾಡಿದ್ದೀರಿ, ಸಾವಿಗೆ ಒಂದು ಹನಿ ಕಣ್ಣಲ್ಲಿ ನೀರು ಹಾಕಿಲ್ಲ. ಸಮಾವೇಶದಲ್ಲಿ ವಿಪಕ್ಷಗಳನ್ನು ಬೈಯೋದು ಬಿಟ್ಟು, ಬಾಣಂತಿಯರ ಸಾವಿನ ಬಗ್ಗೆ ಒಂದು ಮಾತು ಆಡಲಿಲ್ಲ ಸಿಎಂ. 6 ತಿಂಗಳ ಹಿಂದೆಯೇ ಡ್ರಗ್ ಇಲಾಖೆ ಕಳಪೆ ದ್ರಾವಣ ಅಂತ ವರದಿ ಕೊಟ್ಟಿತ್ತು, ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಹಸೆಮಣೆ ಏರಿದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ

    20 ಕೋಟಿ ಎಲ್ಲಿಂದ ಬಂತು?
    ಸಿದ್ದರಾಮಯ್ಯಗೆ ಕಿಂಚಿತ್ ಕರುಣೆ ಬೇಡವಾ? ಮಕ್ಕಳು, ಬಾಣಂತಿಯರನ್ನು ಉಳಿಸೋ ಕೆಲಸ ಮಾಡದೇ ಇಂಥ ನೂರು ಸಮಾವೇಶ ಮಾಡಿದರೂ ವ್ಯರ್ಥ. ಪಾಪ, ಶಾಪದಲ್ಲೇ ನಿಮ್ಮ ಸರ್ಕಾರ ಸತ್ತು ಹೋಗಲಿದೆ. ಹಾಸನ ಸಮಾವೇಶಕ್ಕೆ 20 ಕೋಟಿ ಕರ್ಚಾಗಿದೆ, ಎಲ್ಲಿಂದ ಬಂತು, ಯಾರು ಕೊಟ್ರು? ಅಂತಲೂ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮುಸ್ಲಿಮರನ್ನು ಅವರಂತೆ ಹೆದರಿಸದಿದ್ರೆ ಜಗತ್ತಿನ ಎಲ್ಲಾ ಸಂಸ್ಕೃತಿಗಳು ನಾಶವಾಗಲಿವೆ: ಸಿ.ಟಿ ರವಿ

    ಕಾಂಗ್ರೆಸ್‌ನದ್ದು ಊರು ಬಾಗಿಲು:
    ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್‌ ಫೈಟ್‌ ವಿಚಾರ ಕುರಿತು ಮಾತನಾಡಿದ ಅಶೋಕ್‌, ಪರಮೇಶ್ವರ್ ಮಾತಾಡಿದ್ದಾರಲ್ಲ, ಮೊದಲು ಸಿಎಂ ಆಗೋದಿಕ್ಕೆ ಅವರಿಗೇ ಆದ್ಯತೆ ಸಿಗಬೇಕು. ಅದಕ್ಕೇ ಅವರು ಮೊನ್ನೆ ಡಿಮ್ಯಾಂಡ್ ಇಟ್ಟಿದ್ದು. ಪರಮೇಶ್ವರ್ ಎರಡು ಸಲ ಅಧ್ಯಕ್ಷ ಆಗಿದ್ದವರು. ಸಿಎಂ ಆಗ್ತಾರೆ ಅಂತ ಅವರನ್ನು ಕಳೆದ ಸಲ ಸೋಲಿಸಲಾಯ್ತು. ಸಿಎಂ ಪೋಸ್ಟ್ ಬಿಟ್ಟುಕೊಡಲ್ಲ ಅಂತ ಸಿದ್ದರಾಮಯ್ಯ ಅವರೇ ಹೇಳಿದ್ದಾರಲ್ಲ, ಡಿಕೆಶಿಗೆ ಪೆನ್ನು ಪೇಪರ್ ಇನ್ನೆಲ್ಲಿ ಸಿಗುತ್ತೆ? ಬಿಜೆಪಿಯದ್ದು ಮನೆಯೊಂದು ಮೂರು ಬಾಗಿಲು ಅಂತಾರಲ್ಲ, ಕಾಂಗ್ತೆಸ್‌ನವ್ರದ್ದು ಊರು ಬಾಗಿಲಾಗಿದೆಯಲ್ಲ ಎಂದು ಲೇವಡಿ ಮಾಡಿದರು.

  • ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಆರ್‌.ಅಶೋಕ್‌

    ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಆರ್‌.ಅಶೋಕ್‌

    – ಕಾಂಗ್ರೆಸ್‌ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ

    ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ನಾನೂ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಶಾಸಕರು ಮಾತನಾಡಲಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು.

    ಉತ್ತರ ಕರ್ನಾಟಕ ಭಾಗದ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಹಣ ಇದೆ ಎಂದು ಹೇಳುತ್ತಲೇ ಇದೆ. ಆದರೂ ಉತ್ತರ ಕರ್ನಾಟಕಕ್ಕೆ ಯಾವುದೇ ಅನುದಾನ ನೀಡಿಲ್ಲ. ಎಷ್ಟು ಹೂಡಿಕೆ ಬಂದಿದೆ, ಎಷ್ಟು ಬೆಳೆಹಾನಿ ಪರಿಹಾರ ಸಿಕ್ಕಿದೆ, ನೀರಾವರಿ ಯೋಜನೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಬಗ್ಗೆ ಉತ್ತರ ಕರ್ನಾಟಕದ ಬಿಜೆಪಿ ಶಾಸಕರು ಚರ್ಚೆ ಮಾಡಿದ್ದಾರೆ. ನಂಜುಂಡಪ್ಪ ವರದಿಗೆ ಚಾಲನೆ ನೀಡುತ್ತೇವೆ ಎಂದು ಸರ್ಕಾರ ಹೇಳಿ ವರ್ಷವಾಗುತ್ತಾ ಬಂದಿದೆ ಎಂಬುದು ಕೂಡ ಚರ್ಚೆಯಾಗಿದೆ. ಇದನ್ನು ಸದನದಲ್ಲಿ ಪ್ರಶ್ನಿಸುವ, ಮಾತನಾಡುವ ಬಗ್ಗೆ ಶಾಸಕರು ಹೇಳಿದ್ದಾರೆ. ಕಾಂಗ್ರೆಸ್‌ ಹೇಳಿದ್ದು ಏನು, ಉತ್ತರ ಕರ್ನಾಟಕಕ್ಕೆ ನೀಡಿದ್ದೇನು ಎಂಬ ಬಗ್ಗೆ ಶಾಸಕರೇ ಮಾತನಾಡಲಿದ್ದಾರೆ ಎಂದು ತಿಳಿಸಿದರು.

    ಸಾರಿಗೆ ಇಲಾಖೆ ನೌಕರರು ಬಂದ್‌ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಬಕಾರಿ ಇಲಾಖೆ ಗುತ್ತಿಗೆದಾರರು ಕೂಡ ಬಂದ್‌ ಮಾಡಲು ಮುಂದಾಗಿದ್ದರು. ಈ ನಡುವೆ ರಸ್ತೆ ಅಭಿವೃದ್ಧಿ, ಆಸ್ಪತ್ರೆ ನಿರ್ಮಾಣ, ಬೆಳೆಹಾನಿ ಪರಿಹಾರ ಯಾವುದಕ್ಕೂ ಹಣ ಇಲ್ಲ. ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡಲು ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿತ್ತು. ಆದರೆ ಈವರೆಗೆ ಯಾವುದೇ ಯೋಜನೆಯ ಕಾರ್ಯಾದೇಶವಾಗಿಲ್ಲ ಎಂದು ದೂರಿದರು.

    ಅಬಕಾರಿ ಇಲಾಖೆಯಲ್ಲಿ ಪರವಾನಗಿಗೆ ಅರ್ಜಿ ಸಲ್ಲಿಸಿದಾಗ ಲಂಚ ಕೇಳಿದ ಧ್ವನಿಮುದ್ರಣ ಈಗ ಬಿಡುಗಡೆಯಾಗಿದೆ. ಕಾಂಗ್ರೆಸ್‌ ಕಾರ್ಯಕರ್ತ ಆಗಿರುವುದರಿಂದ 50% ರಿಯಾಯಿತಿ ಎಂದು ಅಧಿಕಾರಿ ಹೇಳಿದ್ದಾರೆ. ಇದು ಈಗ ಜಗಜ್ಜಾಹೀರಾಗಿದೆ. ಈ ಭ್ರಷ್ಟಾಚಾರದ ವಿರುದ್ಧವೂ ಬಿಜೆಪಿ ಹೋರಾಟ ಮಾಡಲಿದೆ. ಇಷ್ಟು ಸಾಕ್ಷಿ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ಪುಸ್ತಕ ಎಂದು ಹೇಳುತ್ತಿದ್ದಾರೆ. ದಾಖಲೆ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರು ರಾಜೀನಾಮೆ ನೀಡಲಿ ಎಂದು ಅಶೋಕ್ ಆಗ್ರಹಿಸಿದರು.

    ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಏರಿಕೆಯಾಗಿದೆ. ಆಸ್ಪತ್ರೆಗಳೇ ವಸೂಲಿ ಕೇಂದ್ರಗಳಾಗಿವೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಕುರಿತು ವರದಿ ತರಿಸಿಕೊಳ್ಳುತ್ತೇನೆ ಎಂದು ಅಶೋಕ್ ಹೇಳಿದರು.

  • ಡಿಚ್ಚಿ ಹೊಡಿತಿನಿ ಅಂತ ಬಂದಿದ್ಯಲ್ಲ, ಡೆಪಾಸಿಟ್ ಬಂತಾ?: ಅಶೋಕ್‍ಗೆ ಡಿಕೆಶಿ ತಿರುಗೇಟು

    ಡಿಚ್ಚಿ ಹೊಡಿತಿನಿ ಅಂತ ಬಂದಿದ್ಯಲ್ಲ, ಡೆಪಾಸಿಟ್ ಬಂತಾ?: ಅಶೋಕ್‍ಗೆ ಡಿಕೆಶಿ ತಿರುಗೇಟು

    ಬೆಂಗಳೂರು: ನನ್ನ ಮುಂದೆ ಕನಕಪುರದಲ್ಲಿ ಡಿಚ್ಚಿ ಹೊಡಿತಿನಿ ಅಂತ ಬಂದು ನಿಂತ್ಯಲ್ಲ ಡೆಪಾಸಿಟ್ ಬಂತಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರನ್ನು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.

    ವಿಕಾಸ ಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಾನು ಒಕ್ಕಲಿಗ ನಾಯಕ ಎಂದು ಎಲ್ಲಿ ಹೇಳಿದ್ದೇನೆ. ಎನಪ್ಪ ಅಶೋಕ, ಅಲ್ಲಲ್ಲ ಅಶೋಕ್ ಅಣ್ಣ. ನನಗಿಂತ ದೊಡ್ಡವನ ಚಿಕ್ಕವನ ಗೊತ್ತಿಲ್ಲ, ಅಶೋಕಣ್ಣ. ಹೌದಪ್ಪ ನನ್ನ ತಮ್ಮ ಸೋತಿದ್ದಾನೆ. ಆದರೆ ಸೋಲಿಸಿದ ಕೊಂಡಿಗಳು ಒಂದೊಂದೆ ಕಳಚಿಕೊಂಡವಲ್ಲ. ರಾಜರಾಜೇಶ್ವರಿ ನಗರದಲ್ಲಿ ಏನಾಯ್ತು? ಚನ್ನಪಟ್ಟಣದಲ್ಲಿ ಏನಾಯ್ತು? ರೆವಿನ್ಯೂ ಮಿನಿಸ್ಟರ್ ಆಗಿ ನನ್ನ ಮುಂದೆ ಕನಕಪುರಕ್ಕೆ ಬಂದು ನಿಂತ್ಯಲ್ಲ ಏನಾಯ್ತು? ಎಂದು ಟಾಂಗ್ ಕೊಟ್ಟಿದ್ದಾರೆ.

    ಬಿಜೆಪಿ (BJP)  ಅವಧಿಯಲ್ಲಿ ರೈತರಿಗೆ ವಕ್ಫ್‍ನಿಂದ ಹೆಚ್ಚು ನೋಟಿಸ್ ಹೋಗಿದೆ ಎಂಬ ವಿಚಾರವಾಗಿ, ಬಿಜೆಪಿ ನಾಯಕರಿಗೆ ಬೇಕಿದ್ದು ಪ್ರಚಾರ. ಅವರ ಮುಖಗಳನ್ನು ಕನ್ನಡಿಯಲ್ಲಿ ನೋಡಿ ಎಂದು ಹೇಳಿದ್ದೇನೆ. ಇನ್ನೂ ಚನ್ನಪಟ್ಟಣ ಚುನಾವಣೆ ಸಂದರ್ಭದಲ್ಲಿ ಕೆಲವು ಹುಡುಗರು ರೈತರ ಪಹಣಿ ಸಂಗ್ರಹ ಮಾಡಿದ್ದಾರೆ. ಅದು ನನ್ನ ಹಳೆಯ ಕ್ಷೇತ್ರ. 2020 ರಲ್ಲಿ ಅಲ್ಲಿ ತಿದ್ದುಪಡಿ ಆಗಿದೆ. ಈಗ ಅದನ್ನು ಮನೆ ಮನೆಗೆ ಹೋಗಿ ಸಂಗ್ರಹ ಮಾಡ್ತಿದ್ದಾರೆ. ಆಂತರಿಕ ಸಮಸ್ಯೆ ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ನಾವು ಸತ್ಯಾಂಶವನ್ನು ಬಿಚ್ಚಿಡುತ್ತೇವೆ. ಅವರೆಲ್ಲ ಗೋಮುಖ ವ್ಯಾಘ್ರರು ಎಂದು ತಿರುಗೇಟು ಕೊಟ್ಟಿದ್ದಾರೆ.

    ಮುಸ್ಲಿಂ ಮತಗಳು ಕೈ ಕೊಟ್ಟ ಕಾರಣ ಚನ್ನಪಟ್ಟಣದಲ್ಲಿ ಸೋಲು ಎಂಬ ನಿಖಿಲ್ ಹೇಳಿಕೆ ವಿಚಾರವಾಗಿ, ಕುಮಾರಸ್ವಾಮಿಗೆ ಪಾಪ ಆ ಜನ ಮತ ಹಾಕಿದ್ದರು. ಇವಾಗ ಬಿಜೆಪಿ ಜೊತೆಗೆ ಹೋಗಿರುವಾಗ ಯಾಕೆ ಮತ ಹಾಕ್ತಾರೆ? ಅವರು ಮುಸ್ಲಿಮರನ್ನು ನಂಬಿಲ್ಲ. ಅವರಿಗೆ ಸೀಟ್ ಕೊಟ್ರಾ? ಮಂತ್ರಿ ಮಾಡಿದ್ರಾ? 4% ಮೀಸಲಾತಿ ಕಿತ್ತು ಹಾಕಿದ್ದಾರೆ. ಅವರ ಬಳಿ ಮತ ಕೇಳುವ ಹಕ್ಕು ಅವರಿಗೆ ಇಲ್ಲ. ಈ ಬಗ್ಗೆ ನಿಖಿಲ್ ಅಲ್ಲ, ಇದರ ಬಗ್ಗೆ ದೇವೇಗೌಡರು ಮಾತನಾಡಬೇಕು ಎಂದಿದ್ದಾರೆ.

    ನಾನು ಹೋದರೂ ಕಾಂಗ್ರೆಸ್ ಹೋಗಲ್ಲ, ಯಾರು ಹೋದರು ಕಾಂಗ್ರೆಸ್ ಹೋಗಲ್ಲ. ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡಲು ಬಿಡಲ್ಲ. ಇನ್ನೂ ಜೆಡಿಎಸ್ (JDS) ಇಬ್ಭಾಗದ ಕುರಿತು ಸಿ.ಪಿ ಯೋಗೇಶ್ವರ್ ಹೇಳಿಕೆ ವಿಚಾರವಾಗಿ, ನನಗೆ ಅದು ಗೊತ್ತಿಲ್ಲ. ಅದರ ಬಗ್ಗೆ ಮಾತನಾಡಲ್ಲ. ಜಿ.ಟಿ ದೇವೇಗೌಡರು ಹಿರಿಯ ನಾಯಕರು. ಅವರು ಆ ಪಕ್ಷಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ನಾವು ಈ ಹಿಂದೆ ಆಫರ್ ಮಾಡಿದ್ದೆವು. ಆದರೆ ದಳದಲ್ಲಿ ಇರುತ್ತೇನೆ ಎಂದಿದ್ದರು. ಆದರೆ ಇವಾಗ ಅವರಿಗೆ ಅಸಮಾಧಾನ ಆಗಿದೆ. ಆದರೆ ನನ್ನ ಬಳಿ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಮುಡಾ ವಿಚಾರದಲ್ಲಿ ಐಎಎಸ್ ಅಧಿಕಾರಿಯೊಬ್ಬರು 144 ಫೈಲ್ ತಗೆದುಕೊಂಡು ಹೋಗಿದಾರೆ ಎಂಬ ವಿಚಾರವಾಗಿ, ಅದು ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ತಗೆದುಕೊಂಡು ಹೋಗ್ತಾರೆ? ಸರ್ಕಾರಿ ದಾಖಲೆ ಅದು, ಅದೆಲ್ಲಾ ಹೇಗೆ ತಗೆದುಕೊಂಡು ಹೋಗೋಕೆ ಸಾಧ್ಯ? ಲೋಕಾಯುಕ್ತ ವರದಿ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.

  • ನಮ್ಮ ಅವಧಿಯಲ್ಲಿ ರೈತರಿಗೆ ವಕ್ಫ್ ನೋಟಿಸ್ ಕೊಟ್ಟವರ ವಿರುದ್ಧವೂ ಕ್ರಮ ಆಗಲಿ: ಆರ್.ಅಶೋಕ್

    ನಮ್ಮ ಅವಧಿಯಲ್ಲಿ ರೈತರಿಗೆ ವಕ್ಫ್ ನೋಟಿಸ್ ಕೊಟ್ಟವರ ವಿರುದ್ಧವೂ ಕ್ರಮ ಆಗಲಿ: ಆರ್.ಅಶೋಕ್

    -`ಕೈ’ ನಾಯಕರು ವಕ್ಫ್ ಭೂಮಿ ಒತ್ತುವರಿ ಮಾಡಿ ಮಾರಿಕೊಂಡಿದ್ದರು ಎಂದು ಆರೋಪ

    ಬೆಂಗಳೂರು: ನಮ್ಮ ಅವಧಿಯಲ್ಲಿ ರೈತರಿಗೆ ನೋಟಿಸ್ ಕೊಟ್ಟಿದ್ದ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಲಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ (BJP) ಅವಧಿಯಲ್ಲಿ ಹೆಚ್ಚು ವಕ್ಫ್ ನೋಟಿಸ್ ಕೊಟ್ಟಿದ್ದ ವಿಚಾರವಾಗಿ ಮಾತನಾಡಿ, ನಮ್ಮ ಸರ್ಕಾರದ ಅವಧಿಯಲ್ಲಿ ಅನ್ವರ್ ಮಾನ್ಪಾಡಿ ವರದಿಯನ್ನು ಆಧರಿಸಿ ನಾವು ನೋಟಿಸ್ ಕೊಟ್ಟಿದ್ದೇವು. ಈ ವರದಿಯಲ್ಲಿ ಬಹಳಷ್ಟು ಕಾಂಗ್ರೆಸ್‌ನ (Congress) ದೊಡ್ಡ ದೊಡ್ಡ ನಾಯಕರು, ಕೇಂದ್ರ, ರಾಜ್ಯಗಳ ನಾಯಕರು ವಕ್ಫ್ ಭೂಮಿ ಒತ್ತುವರಿ ಮಾಡಿಕೊಂಡು ಮಾರಾಟ ಮಾಡಿಕೊಂಡಿದ್ದರು. ಇಂಥವರಿಗೆ ನಾವು ನೋಟಿಸ್ ಕೊಟ್ಟಿರಬಹುದು. ಕಾಂಗ್ರೆಸ್‌ನವರು ವಕ್ಫ್ ಬೋರ್ಡ್‌ನಲ್ಲಿ ಅಕ್ರಮ ಆಗಿದೆ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಈಗ ಇರುವ ವಿಚಾರ ಕಾಂಗ್ರೆಸ್ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ ಎಂದರು.ಇದನ್ನೂ ಓದಿ: ಕೊನೆಗೂ ರಿಲೇಷನ್‌ಶಿಪ್‌ ಬಗ್ಗೆ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ

    ನಮ್ಮ ಅವಧಿಯಲ್ಲಿ ತಪ್ಪಾಗಿದ್ದರೂ ಕ್ರಮ ಆಗಲಿ. ಕಾಂಗ್ರೆಸ್ ಅವಧಿಯಲ್ಲಿ ತಪ್ಪಾಗಿದ್ದರೂ ಕ್ರಮ ಆಗಲಿ. ನಾವೇನು ಅಧಿಕಾರಿಗಳ ರಕ್ಷಣೆ ಮಾಡುತ್ತಿಲ್ಲ. ನಮ್ಮ ಅವಧಿಯಲ್ಲಿ ಅಥವಾ ಕಾಂಗ್ರೆಸ್ ಅವಧಿಯಲ್ಲಿ ಅಧಿಕಾರಿಗಳು ತಪ್ಪಾಗಿ ವಕ್ಫ್ ನೋಟಿಸ್ ಕೊಟ್ಟಿದ್ದರೆ ಕ್ರಮ ಆಗಲಿ. ಈಗ ಪ್ರಶ್ನೆಯಾಗಿರುವುದು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆದರೆ ಇದು ತಪ್ಪು. ಕಾಂಗ್ರೆಸ್ ಅವಧಿಯಲ್ಲಿ ರೈತರಿಗೆ ನೋಟಿಸ್ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮಾನ್ಪಾಡಿ ವರದಿಯಲ್ಲಿ ಕಾಂಗ್ರೆಸ್ ನಾಯಕರು ಒತ್ತುವರಿ ಮಾಡಿಕೊಂಡಿದ್ದರರು. ಅದಕ್ಕೆ ನೋಟಿಸ್ ಕೊಟ್ಟಿದ್ದೇವೆ. ನಮ್ಮ ಕಾಲದಲ್ಲಿ ರೈತರಿಗೆ ನೋಟಿಸ್ ಕೊಟ್ಟಿದ್ದರೆ ಅದೂ ತಪು ಎಂದು ಕಿಡಿಕಾರಿದರು.

    ಐಎಎಸ್ ಅಧಿಕಾರಿ ಕೈವಾಡಿ ಕೇಳಿ ದಿಗ್ಭ್ರಮೆ ಆಗಿದೆ:
    ಮುಡಾ (MUDA) ಕಚೇರಿಯಿಂದ ಐಎಎಸ್ ಅಧಿಕಾರಿ 144 ಫೈಲುಗಳನ್ನು ತೆಗೆದುಕೊಂಡು ಹೋಗಿರುವ ವಿಚಾರವಗಿ, ಈ ವಿಚಾರ ನಮಗೆ ದಿಗ್ಭ್ರಮೆ ಮೂಡಿಸಿದೆ. ಬೈರತಿ ಸುರೇಶ್ ಅವರು ಎಷ್ಟು ಫೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಗೊತ್ತಿಲ್ಲ. ಅದಕ್ಕೂ ಮುಂಚೆ ಐಎಎಸ್ ಅಧಿಕಾರಿಯೊಬ್ಬರು ಮುಡಾ ಫೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅಂದರೆ ರಾಜ್ಯದಲ್ಲಿ ಆಡಳಿತ ಯಾವ ಮಟ್ಟಕ್ಕೆ ಬಂದಿದೆ? ಅಧಿಕಾರಿಗಳೇ ಮುಡಾ ಅಕ್ರಮದಲ್ಲಿ ರಕ್ಷಣೆಗೆ ಮುಂದಾಗಿರುವುದು ಸರಿಯಲ್ಲ. ಈ ಪ್ರಕರಣ ಸಿಬಿಐಗೆ ತನಿಖೆಗೆ ಕೊಡಬೇಕು ಎಂದು ಆಗ್ರಹಿಸುತ್ತೇನೆ. ಮುಡಾ ಅಕ್ರಮ ಈ ರಾಜ್ಯ ಕಂಡ ದೊಡ್ಡ ಹಗರಣ. ಸಿಎಂ, ಮತ್ತವರ ಕುಟುಂಬ ಶಾಮೀಲಾಗಿದ್ದಾರೆ. 14 ಸೈಟುಗಳಷ್ಟೇ ಅಲ್ಲ ಬಡವರ ಸೈಟುಗಳನ್ನು ಕೂಡ ಲೂಟಿ ಮಾಡಲಾಗಿದೆ. ಮುಡಾದಲ್ಲಿ 3-4 ಸಾವಿರ ಕೋಟಿ ರೂ. ಅಕ್ರಮ ಆಗಿದೆ. ಐಎಎಸ್ ಅಧಿಕಾರಿಗಳು ಮಾಡಿರುವ ತಪ್ಪನ್ನು ಸರಿಪಡಿಸಲು ದಾಖಲೆ ತಿದ್ದಿರುತ್ತಾರೆ. ವೈಟ್ನರ್ ಹಾಕಿ, ದಾಖಲೆಗಳನ್ನು ಮಾಯ ಮಾಡಿರುತ್ತಾರೆ. ಇದನ್ನು ಸಿಬಿಐ ತನಿಖೆಗೆ ಒಳಪಡಿಸಿದರೆ ಆದರೆ ಇನ್ನಷ್ಟು ಹಗರಣಗಳು ಹೊರಗೆ ಬರುತ್ತದೆ ಎಂದು ತಿಳಿಸಿದರು.

    ಇನ್ನೂ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿ, ಫಲಿತಾಂಶದಿಂದ ನಮ್ಮ ಮೇಲೆ, ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಹಿಂದೆ ನಮ್ಮ ಸರ್ಕಾರ ಇದ್ದಾಗ 18 ಉಪಚುನಾವಣೆ ಗೆದ್ದಿದ್ದೇವು. ನಂತರ ಸಾರ್ವತ್ರಿಕ ಚುನಾವಣೆ ಸೋತಿದ್ದೇವು. ಈ ಫಲಿತಾಂಶ ಕಾಂಗ್ರೆಸ್ ಅಕ್ರಮಗಳಿಗೆ ಕ್ಲೀನ್‌ಚಿಟ್ ಅಲ್ಲ. ಅದೇ ಬೇರೆ ಇದೇ ಬೇರೆ, ಉಪಚುನಾವಣೆ ಸ್ಥಳೀಯ ವಿಚಾರಗಳ ಮೇಲೆ ನಡೆದಿದೆ. ಇದು ರಾಜ್ಯದ ತೀರ್ಪಲ್ಲ. ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಸ್ಲಿಂ ವೋಟುಗಳು ಬರದೇ ಸೋಲಾಯ್ತು ಎಂಬ ನಿಖಿಲ್ ಹೇಳಿಕೆ ವಿಚಾರವಾಗಿ, ನಿಖಿಲ್ ಸತ್ಯವನ್ನೇ ಹೇಳಿದ್ದಾರೆ. ಬೂತ್‌ಗಳಲ್ಲಿ ಬೆರಳೆಣಿಕೆಯಷ್ಟು ಮುಸ್ಲಿಂ ಮತಗಳು ಜೆಡಿಎಸ್‌ಗೆ ಬಂದಿದೆ. ಆ ಸಮುದಾಯ ನಿಖಿಲ್‌ನನ್ನು ಸೋಲಿಸಲು ಮತ ಹಾಕಿಲ್ಲ. ಉಳಿದ ಸಮುದಾಯಗಳೂ ಒಟ್ಟಾಗಿ ಮತ ಚಲಾಯಿಸಿಲ್ಲ. ಮಹಾರಾಷ್ಟ್ರದಲ್ಲಿ ಆದಂತೆ ಒಟ್ಟಾಗಿ ಆಗಲಿಲ್ಲ. ಇಲ್ಲಿ ಮುಸ್ಲಿಂ ಸಮುದಾಯ ಒಟ್ಟಾಗಿ ಉಳಿದ ಸಮುದಾಯ ಒಟ್ಟಾಗಲಿಲ್ಲ. ಮುಸ್ಲಿಂ ಸಮುದಾಯದ ಥರ ಉಳಿದ ಸಮುದಾಯಗಳೂ ನಿಖಿಲ್ ಪರ ಒಟ್ಟಾಗಿ ನಿಲ್ಲಬೇಕಿತ್ತು ಎಂದು ಹೇಳಿದರು.ಇದನ್ನೂ ಓದಿ: ಸಂಸತ್‌ ಚಳಿಗಾಲದ ಅಧಿವೇಶನ – ಸುಗಮ ಕಲಾಪಕ್ಕೆ ವಿಪಕ್ಷಗಳಿಗೆ ಮೋದಿ ಮನವಿ

  • ಡಿಕೆಶಿ ತಂದಿಕ್ಕುವ ಕೆಲಸ ಮಾಡ್ತಿದ್ದಾರೆ: ಅಶೋಕ್ ಕಿಡಿ

    ಡಿಕೆಶಿ ತಂದಿಕ್ಕುವ ಕೆಲಸ ಮಾಡ್ತಿದ್ದಾರೆ: ಅಶೋಕ್ ಕಿಡಿ

    – ಬಿಜೆಪಿ-ಜೆಡಿಎಸ್ ಹಾಲು ಜೇನಿನಂತೆ ಇದ್ದೇವೆ

    ಮಂಡ್ಯ: ಡಿಕೆ ಶಿವಕುಮಾರ್ (DK Shivakumar) ತಂದಿಕ್ಕುವ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿ ಗತಿಯಿಲ್ಲದೇ ಬಿಜೆಪಿಯಿಂದ ಕರೆದುಕೊಂಡು ‘ಕೈ’ ಅಭ್ಯರ್ಥಿ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್  (R Ashok) ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.

    ಚನ್ನಪಟ್ಟಣ ಗೆಲುವಿಗೆ ಬಿಜೆಪಿ ಸಪೋರ್ಟ್ ಕಾರಣ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೆದ್ದಿದ್ದೇವೆ ಎಂದು ಕಾಂಗ್ರೆಸ್‌ನವರು ಬೀಗುತ್ತಿದ್ದಾರೆ. ಈ ಗೆಲುವು ಶಾಶ್ವತ ಅಲ್ಲ. ನಾವು 18 ಬೈ ಎಲೆಕ್ಷನ್ ಕ್ಷೇತ್ರದಲ್ಲಿ ಗೆದ್ದವರು. ಬಳಿಕ ನಡೆದ ಜನರಲ್ ಎಲೆಕ್ಷನ್‌ನಲ್ಲಿ ನಾವು ಸೋತಿದ್ದೇವೆ. ಇವರು 3 ಗೆದ್ದೇ ಹೀಗೆ ಮೆರೆಯುತ್ತಿದ್ದಾರೆ. 18 ಬೈ ಎಲೆಕ್ಷನ್ ಗೆದ್ದ ನಾವು ಹೇಗೆ ಮೆರೆಯಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: IPL Mega Auction | 14 ಕೋಟಿಗೆ ಡೆಲ್ಲಿ ಪಾಲಾದ ರಾಹುಲ್‌ – ಆರ್‌ಸಿಬಿ ಫ್ಯಾನ್ಸ್‌ಗೆ ಭಾರಿ ನಿರಾಸೆ

    ಲೋಕಸಭಾ ಎಲೆಕ್ಷನ್‌ನಲ್ಲಿ ಯಾಕೆ ಮಣ್ಣು ಮುಕ್ಕಿದ್ರಿ? ಡಿಕೆಶಿ, ಸಿದ್ದರಾಮಯ್ಯ ಚುನಾವಣೆ ಅಲ್ಲ. ಇದು ಕಂಟ್ರಾಕ್ಟ್ರ‍್ಗಳ, ಹಣದ ಚುನಾವಣಾ ಗೆಲುವು. ನಿಮ್ಮ ಪರಿಶ್ರಮದಿಂದ ಗೆದ್ದಿಲ್ಲ. ಜೆಡಿಎಸ್-ಬಿಜೆಪಿ ಪೂರ್ತಿ ಮನಸ್ಸಿಂದ ಎಲೆಕ್ಷನ್ ಮಾಡಿದ್ದೇವೆ. ಆದ್ರೆ ನಿಖಿಲ್‌ಗೆ ಅದೃಷ್ಟ ಇರಲಿಲ್ಲ. ನಿಖಿಲ್‌ಗೆ ಮುಂದೆ ಒಳ್ಳೆಯ ಭವಿಷ್ಯವಿದೆ. ಬೆಳಗ್ಗೆ ಹೆಚ್‌ಡಿಕೆ, ನಿಖಿಲ್‌ಗೆ ಕರೆ ಮಾಡಿ ಧೈರ್ಯ ಹೇಳಿದ್ದೀನಿ. ಮುಂಬರುವ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡುತ್ತೇವೆ. ಡಿಕೆ ಸುರೇಶ್ ಸೋಲೋದಕ್ಕೆ ಸಿದ್ದರಾಮಯ್ಯ ಕಾರಣ ಅಲ್ವಾ? ಅದನ್ನ ಡಿಕೆಶಿ ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: IPL 2025 Auction: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಪಂತ್‌ ಸೇಲ್‌ – 27 ಕೋಟಿಗೆ ಲಕ್ನೋ ಪಾಲು

    ಡಿಕೆ ಶಿವಕುಮಾರ್ ತಂದಿಕ್ಕುವ ಕೆಲಸವನ್ನ ಮಾಡಬಾರದು. ಕ್ಯಾಂಡಿಡೇಟ್ ಗತಿ ಇಲ್ಲದೆ ಬಿಜೆಪಿಯಿಂದ ಕರೆದುಕೊಂಡು ಹೋಗಿದ್ದೀರಿ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯಾಗಲು ಯಾರು ಇರಲಿಲ್ವಾ? ನಮ್ಮ ಪಾರ್ಟಿಯಿಂದ ತೆಗೆದುಕೊಂಡು ಕ್ಯಾಂಡಿಡೇಟ್ ಮಾಡಿದ್ದೀರಾ. ಇವತ್ತು ನಮಗೆ ಸವಾಲ್ ಹಾಕ್ತೀರಲ್ಲ. ಡಿಕೆ ಶಿವಕುಮಾರ್ ಹೇಳುತ್ತಿರುವುದೆಲ್ಲಾ ಸುಳ್ಳು. ಡಿಕೆಶಿ, ಸಿದ್ದರಾಮಯ್ಯ ಜಗಳವನ್ನು ಮೊದಲು ತೀರ್ಮಾನ ಮಾಡಿಕೊಳ್ಳಲಿ. ಬಿಜೆಪಿ-ಜೆಡಿಎಸ್ ಹಾಲು ಜೇನಿನಂತೆ ಇದ್ದೇವೆ. ಮುಂದೆ ಬರುವ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ. ಬೈ ಎಲೆಕ್ಷನ್‌ನಲ್ಲಿ ಹಿನ್ನಡೆಯಾಗಿದೆ, ಆದರೆ ಅದು ಆಧಾರವಾಗಲ್ಲ. ಸೋತಿದ್ದೇವೆಂದು ನಾವೂ ಮಲಗಲ್ಲ. ಭ್ರಷ್ಟಾಚಾರ ಹಗರಣಗಳೇನಿದೆ ಅದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸೋಲನ್ನು ಗೆಲುವಾಗಿ ಪರಿವರ್ತನೆ ಮಾಡುತ್ತೇವೆ ಎಂದು ಹರಿಹಾಯ್ದರು. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – 26.75 ಕೋಟಿ ರೂ.ಗೆ ಬಿಕರಿಯಾದ ಶ್ರೇಯಸ್‌ ಅಯ್ಯರ್‌