Tag: r ashok

  • ‘ಆತ್ಮಹತ್ಯೆ ಭಾಗ್ಯ’ ಖಂಡಿಸಿ ವಿಪಕ್ಷ ನಾಯಕರ ಪ್ರತಿಭಟನೆ!

    ‘ಆತ್ಮಹತ್ಯೆ ಭಾಗ್ಯ’ ಖಂಡಿಸಿ ವಿಪಕ್ಷ ನಾಯಕರ ಪ್ರತಿಭಟನೆ!

    ಬೆಂಗಳೂರು: ರಾಜ್ಯದ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದೆ ಎಂದು ಆರೋಪಿಸಿ ವಿಪಕ್ಷ ನಾಯಕರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಮತ್ತು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಈ ವಿನೂತನ ಮಾದರಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಆರ್.ಅಶೋಕ್ ಅವರು ‘ಸಿದ್ದು ಸರ್ಕಾರದಲ್ಲಿ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ’ ಎಂಬ ಘೋಷಣೆಯುಳ್ಳ ಭಿತ್ತಿಪತ್ರ ಹಿಡಿದಿದ್ದರು. ಛಲವಾದಿ ನಾರಾಯಣಸ್ವಾಮಿ ಅವರು ‘ನಿಷ್ಠಾವಂತ ಅಧಿಕಾರಿಗಳಿಗೆ ರಕ್ಷಣೆ ಕೊಡಿ’ ಎಂಬ ಭಿತ್ತಿಪತ್ರ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಈ ವೇಳೆ ಮಾತನಾಡಿದ ಅಶೋಕ್‌, ನಿಷ್ಠಾವಂತ ಅಧಿಕಾರಿಗಳು ಕೆಲಸ ಮಾಡಲು ಆಗದ ಪರಿಸ್ಥಿತಿ ಇದೆ. ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಬ್ ಇನ್‍ಸ್ಪೆಕ್ಟರ್ ಒಬ್ಬರು ಪ್ರಾಣ ಕಳಕೊಂಡಿದ್ದಾರೆ. ನಿರಂತರವಾಗಿ ಸರಣಿ ರೀತಿ ಆತ್ಮಹತ್ಯೆ ನಡೆಯುತ್ತಿದೆ. ಬೆದರಿಸುವ ಕೆಲಸ ಮುಂದುವರೆದಿದೆ ಎಂದು ಟೀಕಿಸಿದ್ದಾರೆ.

    ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಇದರ ಕುರಿತು ಚಕಾರ ಎತ್ತಿಲ್ಲ. ಸಿ.ಟಿ.ರವಿ ಅವರ ವಿಷಯದಲ್ಲಿ ಯಾಕೆ ಕಾನೂನು ರೀತಿ ಬಿಟ್ಟು ಕ್ರಮ ಕೈಗೊಂಡಿದ್ದೀರಿ? ನಿನ್ನೆಯ ಎರಡು ಪ್ರಮುಖ ಘಟನೆಗಳಲ್ಲಿ ಯಾರನ್ನು ಬಂಧಿಸಿದ್ದೀರಿ? 500- 600 ಜನ ಠಾಣೆ ಮೇಲೆ ದಾಳಿ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದೂಗಳಿಗೆ ಒಂದು ಕಾನೂನು, ಮುಸ್ಲಿಮರಿಗೆ ಇನ್ನೊಂದು ಕಾನೂನಿದೆಯೇ? ಸರ್ಕಾರ ಪೊಲೀಸರ ವಿರುದ್ಧ ಮಾತನಾಡಿದರೆ ಅವರ ಆತ್ಮಸ್ಥೈರ್ಯ ಉಳಿಯುವುದು ಹೇಗೆ ಎಂದು ಕಿಡಿಕಾರಿದ್ದಾರೆ.

    ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ಹಾಗೂ ರಾಜ್ಯದ ಗಮನ ಸೆಳೆಯಲು ಈ ಪ್ರದರ್ಶನ ಮಾಡಿದ್ದೇವೆ. ವಿಪಕ್ಷ ನಾಯಕರ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಸರ್ಕಾರ ಉತ್ತರ ಕೊಡುತ್ತಿಲ್ಲ. ನಾವೀಗ ಜನರಿಂದ ಉತ್ತರ ಬಯಸುವಂತಾಗಿದೆ. ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿಸುವಾಗ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ದೊಡ್ಡ ವಿಷಯವನ್ನಿಟ್ಟು ನಿರ್ಮಿಸಿದ್ದಾರೆ. ಹೆಣ್ಣೂ ಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ದೇವರ ಕೆಲಸವೇ? ನಾವು ಹೇಳಿದಂತೆ ನಡೆದುಕೊಳ್ಳದಿದ್ದರೆ ಲಾರಿ ಹತ್ತಿಸುತ್ತೇವೆ ಎಂದು ಬೆದರಿಸುವುದು ದೇವರ ಕೆಲಸವೇ? ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ನುಂಗಿದ್ದಾಗಿ ಹೇಳಿದಾಗ 87 ಕೋಟಿ ರೂ. ಮಾತ್ರ ನುಂಗಿದ್ದಾಗಿ ಹೇಳುವುದು ದೇವರ ಕೆಲಸವೇ? ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳು ಬರೆದಿಟ್ಟ ಹೆಸರುಗಳನ್ನು ಮರೆಮಾಚಿದ್ದು ದೇವರ ಕೆಲಸವೇ ಎಂದು ಪ್ರಶ್ನಿಸಿದ್ದಾರೆ.

  • ಬಿಜೆಪಿ ಭಿನ್ನಮತಕ್ಕೆ ನಮ್ಮವರದ್ದೇ ಕುಮ್ಮಕ್ಕು: ಮುನಿರತ್ನ ಆರೋಪ

    ಬಿಜೆಪಿ ಭಿನ್ನಮತಕ್ಕೆ ನಮ್ಮವರದ್ದೇ ಕುಮ್ಮಕ್ಕು: ಮುನಿರತ್ನ ಆರೋಪ

    ಬೆಂಗಳೂರು: ಬಿಜೆಪಿ (BJP) ಭಿನ್ನಮತಕ್ಕೆ ನಮ್ಮವರೇ ಹಿಂಬಾಗಿಲ ಮೂಲಕ ಕುಮ್ಮಕ್ಕು ಕೊಡ್ತಿದ್ದಾರೆ ಎಂದು ಶಾಸಕ ಮುನಿರತ್ನ (Munirathna) ಆರೋಪಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತಾಡಿದರು. ಈ ವೇಳೆ, ಕಿತ್ತಾಟ ಶಮನವಾಗೋದು ನಮ್ಮ ಪಕ್ಷದ ಕೆಲವರಿಗೆ ಇಷ್ಟವಿಲ್ಲ. ಗಲಾಟೆ ನಿಲ್ಲಿಸಬೇಡಿ ಮುಂದುವರೆಸಿ ಅಂತ ಎತ್ತಿ ಕಟ್ಟುವ ಕೆಲಸ ಮಾಡ್ತಿದ್ದಾರೆ. ಅಲ್ಲೂ ಹೇಳೋದು ಇಲ್ಲೂ ಹೇಳೋದು ಮಾಡುವ ಮೂಲಕ ಗೊಂದಲವನ್ನು ಜೀವಂತವಾಗಿ ಇಡೋ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರತಿಪಕ್ಷ ನಾಯಕ ಆರ್ ಅಶೋಕ್ (R.Ashok) ಬಗ್ಗೆಯೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಹಿರಿಯರೂ, ವಿಪಕ್ಷ ನಾಯಕ ಸ್ಥಾನದಲ್ಲೂ ಇರುವ ಅಶೋಕ್ ಅವರು ಪಕ್ಷದ ಗೊಂದಲಗಳನ್ನು ನೋಡಿಕೊಂಡು ತಟಸ್ಥರಾಗಿರೋದು ಸರಿಯಲ್ಲ. ಹಿರಿಯರಾಗಿರುವ ಅವರು, ಎಲ್ಲಾ ಶಾಸಕರ ಸಭೆ ಕರೆದು ಗೊಂದಲ, ಸಮಸ್ಯೆ ಬಗೆಹರಿಸಬೇಕು. ಆಗಲೇ ಅವರಿಗೂ ಅವರ ಹುದ್ದೆಗೂ ಗೌರವ, ಅವರಿಗೆ ಮಧ್ಯಸ್ಥಿಕೆ ವಹಿಸಿ ಕಲಹ ಬಗೆಹರಿಸುವ ಅಧಿಕಾರ ಇದೆ ಎಂದಿದ್ದಾರೆ.

    ನಾವು ಒಗ್ಗಟ್ಟು ಕಾಯ್ದುಕೊಳ್ಳದಿದ್ದರೆ ಪಕ್ಷಕ್ಕೆ ಕಷ್ಟ ಕಟ್ಟಿಟ್ಟ ಬುತ್ತಿ. ನಮ್ಮಲ್ಲಿ ಒಗ್ಗಟ್ಟು ಬಂದರೆ ರಾಜ್ಯದಲ್ಲೂ ದೆಹಲಿಯಂತೆ ಕಾಂಗ್ರೆಸ್‍ನ್ನು ಶೂನ್ಯಕ್ಕೆ ಇಳಿಸುವ ಸಾಮಥ್ರ್ಯ ಪಕ್ಷಕ್ಕೆ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  • ದೆಹಲಿಯಲ್ಲಿ ಬಿಜೆಪಿ ಗೆಲುವು, ರಾಜ್ಯದ ಮುಂದಿನ ಚುನಾವಣೆಗೆ ದಿಕ್ಸೂಚಿ – ಆರ್.ಅಶೋಕ್

    ದೆಹಲಿಯಲ್ಲಿ ಬಿಜೆಪಿ ಗೆಲುವು, ರಾಜ್ಯದ ಮುಂದಿನ ಚುನಾವಣೆಗೆ ದಿಕ್ಸೂಚಿ – ಆರ್.ಅಶೋಕ್

    ಬೆಂಗಳೂರು: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದು ಕರ್ನಾಟಕ ಬಿಜೆಪಿಗೆ ಶಕ್ತಿ ತುಂಬಿದಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ದೆಹಲಿ ಚುನಾವಣಾ ಫಲಿತಾಂಶವು ಮುಂದಿನ ಕರ್ನಾಟಕ, ತೆಲಂಗಾಣದ ಚುನಾವಣೆಗೆ ದಾರಿದೀಪವಾಗಲಿದೆ. ಇದು ದೇಶಕ್ಕೆ ಸಿಕ್ಕಿರುವ ಗೆಲುವು. ಡಿಕೆಶಿ ಗ್ಯಾರಂಟಿ ದೆಹಲಿಯಲ್ಲಿ ಠುಸ್ ಪಟಾಕಿ ಆಗಿದೆ ಎಂದು ವ್ಯಂಗ್ಯವಾಡಿದರು.ಇದನ್ನೂ ಓದಿ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಕರ್ನಾಟಕದಲ್ಲಿ 5 ಗ್ಯಾರಂಟಿ ಕೊಟ್ಟು ಅಭಿವೃದ್ಧಿ ಇಲ್ಲವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದೇ ಕೇಜ್ರಿವಾಲ್ 25 ಉಚಿತಗಳನ್ನು ನೀಡಿದ್ದರು. ಅವರ ಸ್ಥಿತಿ ಏನಾಗಿದೆ? ಎಂದು ಪ್ರಶ್ನಿಸಿದರು. ಇದು ದೇಶಕ್ಕೆ ದಿಕ್ಸೂಚಿ ಎಂದು ತಿಳಿಸಿದರು.

    ಇದೇ ವೇಳೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಮಾತನಾಡಿ, ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಸರ್ಕಾರ ಭ್ರಷ್ಟಾಚಾರಕ್ಕೆ ಬಲಿಯಾಗಿದೆ. ಬಿಜೆಪಿ ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿಚಾರದಲ್ಲಿ ಒಂದೇ ಒಂದು ಆಪಾದನೆಯನ್ನೂ ಹೊತ್ತಿಲ್ಲ. ಕರ್ನಾಟಕದಲ್ಲಿ ನಮ್ಮ ವಿರುದ್ಧ ಶೇ.40 ಕಮೀಷನ್, ಪೇ ಸಿಎಂ ಮತ್ತಿತರ ಆರೋಪ ಮಾಡಿ ಚುನಾವಣಾ ತಂತ್ರ ಹೆಣೆದಿದ್ದ ಕಾಂಗ್ರೆಸ್ಸಿನದು ದೆಹಲಿಯಲ್ಲಿ ಶೂನ್ಯ ಸಂಪಾದನೆಯಾಗಿದೆ. ಈಗ ಅವರು ಖಾತೆ ತೆರೆದಿಲ್ಲ. ಆದರೆ ಕ್ಯಾತೆ ತೆಗೆಯುವುದನ್ನು ಬಿಡುವುದಿಲ್ಲ ಎಂದು ತಿಳಿಸಿದರು.

    ಇನ್ನೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಅವರು ಮಾತನಾಡಿ, ಕೇಜ್ರಿವಾಲ್ ಪ್ರಾಮಾಣಿಕ ಅಲ್ಲ. ಭ್ರಷ್ಟ ಎಂಬುದು ಜನರಿಗೆ ಮನವರಿಕೆ ಆಗಿದೆ. ಸುಳ್ಳಿನ ಮುಖವಾಡ ಕಳಚಿಬಿದ್ದಿದೆ. ಕೇವಲ ನಕಾರಾತ್ಮಕ ಪ್ರಚಾರದಿಂದ ಚುನಾವಣೆ ಗೆಲ್ಲಲು ಅಸಾಧ್ಯ ಎಂದು ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಬೇಕಿದೆ. ಅಂಬೇಡ್ಕರರ ಸಂವಿಧಾನ, ಜನತೆಯ ಸಂವಿಧಾನ ಗೆದ್ದಿದೆ ಎಂದು ವಿಶ್ಲೇಷಿಸಿದರು.ಇದನ್ನೂ ಓದಿ: ದೆಹಲಿ ಚುನಾವಣೆಯಲ್ಲಿ ಸೋತ AAPಯನ್ನು ಕೌರವರಿಗೆ ಹೋಲಿಸಿದ ಸ್ವಾತಿ ಮಲಿವಾಲ್‌

  • ಬಿಜೆಪಿ ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ: ಅಶೋಕ್

    ಬಿಜೆಪಿ ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ: ಅಶೋಕ್

    ಬೆಂಗಳೂರು: ಬಿಜೆಪಿ (BJP) ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. 15-20 ದಿನಗಳಲ್ಲಿ ಎಲ್ಲಾ ಗೊಂದಲಗಳು ಪರಿಹಾರ ಆಗಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ತಿಳಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಹ ಉಸ್ತುವಾರಿ ಸುಧಾಕರ್ ರೆಡ್ಡಿಯವರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಪಕ್ಷದ ವಿಚಾರವನ್ನ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು ಎಂದು ಹೈಕಮಾಂಡ್ ಹೇಳಿದೆ. ನಮ್ಮ ಸಹ ಉಸ್ತುವಾರಿ ಸುಧಾಕರ್ ರೆಡ್ಡಿಯವರು ಕೂಡ ಇದೇ ಹೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರು – ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆ

    ಕಾಂಗ್ರೆಸ್  (Congress) ನಿತ್ಯ ಅಕ್ರಮದಲ್ಲಿ ತೊಡಗಿದೆ. ಲೂಟಿ, ಕಮಿಷನ್, ಮೈಕ್ರೋ ಫೈನಾನ್ಸ್ ಸಾವು, ಬಾಣಂತಿಯರ ಸಾವು ಸೇರಿ ಅನೇಕ ವಿಷಯಗಳಿವೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕು. ನಮ್ಮ ಆಂತರಿಕ ಕಿತ್ತಾಟದಿಂದ ನಮಗೆ ಸ್ವಲ್ಪ ಅಡೆತಡೆ ಆಗಿದೆ. 15-20 ದಿನಗಳಲ್ಲಿ ಗೊಂದಲಗಳಿಗೆ ತೆರೆ ಬೀಳಲಿದ್ದು, ನಾರ್ಮಲ್ ಬಿಜೆಪಿ ರೀತಿ ಕೆಲಸ ಮುಂದುವರೆಸುತ್ತೇವೆ ಎಂದಿದ್ದಾರೆ.

    ಎಲ್ಲಾ ನಾಯಕರು ಒಟ್ಟಾಗಿ ಹೋಗಬೇಕು. ಇಂತಹ ಘಟನೆ ಅಗಬಾರದಿತ್ತು ಆಗಿದೆ. ಇಂತಹ ಕಿತ್ತಾಟ ಪ್ರಾರಂಭದಲ್ಲೇ ಕಡಿಮೆ ಆಗಬೇಕಿತ್ತು. ಈಗ ಎಲ್ಲವೂ ಸರಿ ಆಗುತ್ತದೆ. ಎಲ್ಲವನ್ನೂ ಸರಿ ಮಾಡಿಕೊಂಡು ಹೋಗುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಹೈಕೋರ್ಟ್ ತೀರ್ಪುನ್ನು ನಾವು ಗೌರವಿಸುತ್ತೇವೆ: ಅಶೋಕ್

  • ಮುಡಾ ಕೇಸ್‌ನಲ್ಲಿ ಹೈಕೋರ್ಟ್ ತೀರ್ಪುನ್ನು ನಾವು ಗೌರವಿಸುತ್ತೇವೆ: ಅಶೋಕ್

    ಮುಡಾ ಕೇಸ್‌ನಲ್ಲಿ ಹೈಕೋರ್ಟ್ ತೀರ್ಪುನ್ನು ನಾವು ಗೌರವಿಸುತ್ತೇವೆ: ಅಶೋಕ್

    ಬೆಂಗಳೂರು: ಮುಡಾ ಕೇಸ್ (MUDA Scam) ಸಿಬಿಐ(CBI) ತನಿಖೆಗೆ ಕೊಡಲು ಹೈಕೋರ್ಟ್ (High Court) ನಿರಾಕರಿಸಿದ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ಮುಡಾ ಅಕ್ರಮದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ.

    ಹೈಕೋರ್ಟ್ ತೀರ್ಪಿ‌ನ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡಿದರು. ಈ ವೇಳೆ, ಮುಡಾ ಕೇಸ್ ತನಿಖೆ ಸಿಬಿಐಗೆ ಕೊಡಬೇಕು ಎಂಬ ಅರ್ಜಿಯನ್ನು ಹೈಕೋರ್ಟ್ ತಿರಸ್ಕಾರ ಮಾಡಿದೆ. ಈಗಾಗಲೇ ಲೋಕಾಯುಕ್ತ, ಇಡಿ ತನಿಖೆ ನಡೆಸುತ್ತಿದೆ. ಸದ್ಯ ಹೈಕೋರ್ಟ್ ಕೊಟ್ಟಿರೋ ತೀರ್ಪು ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಕ್ಕಿದೆ. ಮುಡಾ ಹೆಸರಿನಲ್ಲಿ ಲೂಟಿ ಆಗಿರೋದು ರಾಜ್ಯದ ಖಾಜಾನೆಗೆ ಬರುತ್ತೆ ಎಂಬ ನಂಬಿಕೆ ಇದೆ. ಕಾನೂನಿನ ಮೇಲೆ ನಮಗೆ ಗೌರವ ಇದೆ. ಮುಡಾ ಪ್ರಕರಣವನ್ನ ಸಿಬಿಐಗೆ ಕೊಡಬೇಕು ಎಂದು ನಾವು ಹೋರಾಟ ಮಾಡಿದ್ವಿ. ಮತ್ತೆ ಕಾನೂನು ಪ್ರಕಾರ ಏನು ಹೋರಾಟ ಮಾಡಬೇಕೋ ಅದನ್ನ ಮುಂದುವರೆಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್‌ ರಿಲೀಫ್‌ – CBI ತನಿಖೆಗೆ ವಹಿಸಲು ಹೈಕೋರ್ಟ್‌ ನಕಾರ

    ಇದೇ ವೇಳೆ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ಬಗ್ಗೆ ಪ್ರತಿಕ್ರಿಯಿಸಿ, ಈ ಕೇಸ್‌ನಲ್ಲಿ ಯಡಿಯೂರಪ್ಪಗೆ ಕೋರ್ಟ್ ರಿಲೀಫ್ ಕೊಟ್ಟಿದೆ. ತೀರ್ಪು ಸಮಾಧಾನ ತಂದಿದೆ. ಮುಂದಿನ ತನಿಖೆ ಏನು ನಡೆಯಬೇಕೋ ಅದು ನಡೆಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ ರಾಜ್ಯಪಾಲರು – ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆ

  • ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಬಲಿಯಾದವರಿಗೆ ನ್ಯಾಯ ಕೊಡಿ: ಆರ್‌.ಅಶೋಕ್‌ 

    ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಬಲಿಯಾದವರಿಗೆ ನ್ಯಾಯ ಕೊಡಿ: ಆರ್‌.ಅಶೋಕ್‌ 

    – ನ್ಯಾಯಾಂಗ ತನಿಖೆಗೆ ಆಗ್ರಹ

    ಬೆಂಗಳೂರು: ಮೈಕ್ರೋ ಫೈನಾನ್ಸ್‌ಗಳ (Microfinance) ಕಿರುಕುಳದಿಂದಾಗಿ ಬಡಜನರು ಸಾಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಣ್ಣು ತೆರೆದಿಲ್ಲ. ಮೈಕ್ರೋ ಫೈನಾನ್ಸ್‌ನಿಂದ ಸತ್ತವರಿಗೆ ನ್ಯಾಯ ನೀಡಲು ನ್ಯಾಯಾಂಗ ತನಿಖೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ (R.Ashok) ಆಗ್ರಹಿಸಿದ್ದಾರೆ.

    ಮಂಡ್ಯದ (Mandya) ಕೊನ್ನಾಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ತಾಯಿ ಮತ್ತು ಮಗನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸುಗ್ರೀವಾಜ್ಞೆ ತರುತ್ತೇವೆಂದು ಹೇಳಿ ಒಂದು ತಿಂಗಳು ಕಳೆದಿದೆ. ಮಂಡ್ಯ ಜಿಲ್ಲೆಯಲ್ಲಿ ದಲಿತರ ಪ್ರದೇಶದಲ್ಲಿ 6 ಮಂದಿ ಊರು ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಜನರು ಓಡಿಹೋಗಿರಬಹುದು. ಸರ್ಕಾರ ಸುಗ್ರೀವಾಜ್ಞೆ ತರಲಿಲ್ಲ, ಸಾವುಗಳು ನಿಲ್ಲಲಿಲ್ಲ ಎಂದು ದೂರಿದ್ದಾರೆ.

    ಕೊನ್ನಾಪುರದಲ್ಲಿ ತಾಯಿ ಪ್ರೇಮಾ ಮತ್ತು ಮಗ ರಂಜಿತ್‌ ಮೈಕ್ರೋ ಫೈನಾನ್ಸ್‌ನ ಸಾಲ ತೀರಿಸಲಾಗದೆ ಕೊನ್ನಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡವರ ಪರ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರಿಗೆ ಕಣ್ಣಿಲ್ಲ. ಕೊನ್ನಾಪುರ ಗ್ರಾಮದಲ್ಲಿ ಚಾಮುಂಡೇಶ್ವರಿ, ನವಚೇತನ, ಸೂರ್ಯೋದಯ, ಯುನಿಟಿ, ಪ್ರಗತಿ ಸೇರಿದಂತೆ 24 ಮೈಕ್ರೋ ಫೈನಾನ್ಸ್‌ಗಳು ಈ ಹಳ್ಳಿಗೆ ಬಂದು ವರ್ಷಕ್ಕೆ 12% ರಂತೆ ಸಾಲ ನೀಡಿವೆ. ಒಬ್ಬರಿಗೆ ಒಂಬತ್ತು ಜನರು ಶೂರಿಟಿ ನೀಡಿದ್ದಾರೆ. ಒಬ್ಬರು ಸಾಲ ಮರುಪಾವತಿ ಮಾಡಿಲ್ಲವೆಂದರೆ ಉಳಿದವರು ಹೊಣೆಯಾಗುತ್ತಾರೆ. ಸಾಲ ಕಟ್ಟದೆ ಮಾನ ಹೋದಾಗ ನೊಂದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪೊಲೀಸರು ಕೂಡ ಇಲ್ಲಿ ಮೈಕ್ರೋ ಫೈನಾನ್ಸ್‌ಗೆ ಬೆಂಬಲ ನೀಡಿದ್ದಾರೆ. ಮನೆ ವಶಕ್ಕೆ ಪಡೆಯುವ ಸಮಯದಲ್ಲಿ ಪೊಲೀಸರು ಕುಟುಂಬದ ಸದಸ್ಯರನ್ನು ಎಳೆದು ಹೊರಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಡ್ಯದಲ್ಲಿ 60 ಮೈಕ್ರೋ ಫೈನಾನ್ಸ್‌ಗಳಿದ್ದು, ಕೇವಲ 18 ಮಾತ್ರ ಅಧಿಕೃತವಾಗಿವೆ. ಉಳಿದವುಗಳಲ್ಲಿ ರೌಡಿಗಳಿದ್ದಾರೆ. ತಹಶೀಲ್ದಾರ್‌ ಹಾಗೂ ಪೊಲೀಸರು ಎಲ್ಲಾ ಹಳ್ಳಿಗೂ ಹೋಗಿ ಕ್ರಮ ಕೈಗೊಳ್ಳಬೇಕಿತ್ತು. ಈ ಸಾವುಗಳಿಗೆ ನ್ಯಾಯ ನೀಡಲು ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಬೇಕು. ಅನಧಿಕೃತ ಮೈಕ್ರೋ ಫೈನಾನ್ಸ್‌ಗಳನ್ನು ಪತ್ತೆ ಮಾಡಿ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

  • ಅಶೋಕ್ ವಿಪಕ್ಷ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ ವಿರುದ್ಧ ನಿತ್ಯ ಆರೋಪ – ಲಕ್ಷ್ಮಣ ಸವದಿ

    ಅಶೋಕ್ ವಿಪಕ್ಷ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ ವಿರುದ್ಧ ನಿತ್ಯ ಆರೋಪ – ಲಕ್ಷ್ಮಣ ಸವದಿ

    ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ವಿರುದ್ಧ ನಿತ್ಯ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ವಾಗ್ದಾಳಿ ನಡೆಸಿದ್ದಾರೆ.

    ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗುತ್ತಾರೆ ಎಂಬ ಅಶೋಕ್ ಹೇಳಿಕೆ ವಿಚಾರಕ್ಕೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಶೋಕ್ ಅವರು ವಿಪಕ್ಷಗಳ ನಾಯಕ. ಅವರು ನಿತ್ಯ ಏನಾದರೂ ಹೇಳಬೇಕು. ಇಲ್ಲದೇ ಹೋದರೆ ಮೇಲಿನವರು ಏನು ಮಲಗಿದ್ದೀರಾ ಎಂದು ಕೇಳುತ್ತಾರೆ. ಹೀಗಾಗಿ ಸುದ್ದಿಯಲ್ಲಿ ಇರಬೇಕು ಎಂದು ಈ ರೀತಿಯಾಗಿ ಹೇಳುತ್ತಾರೆ. ಅಶೋಕ್ ಅವರೇ ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನ ಮೊದಲು ತೆಗೆದುಕೊಳ್ಳಿ. ಅವರ ತಟ್ಟೆಯ ನೊಣದ ಬಗ್ಗೆ ಯಾಕೆ ಚಿಂತೆ ಮಾಡ್ತೀರಾ? ನಿಮ್ಮ ಪಕ್ಷದಲ್ಲಿ ಏನು ನಡೆದಿದೆ ನೋಡಿಕೊಳ್ಳಿ. ಬೇರೆ ಪಕ್ಷದ ಬಗ್ಗೆ ಮಾತಾಡುವ ಯಾವ ನೈತಿಕತೆ ನಿಮಗಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಜಾತಿ ಸಮೀಕರಣ – ಭಿನ್ನರ ಪಟ್ಟಿಯಲ್ಲಿ ಯಾರಿದ್ದಾರೆ?

    ವಿಪಕ್ಷ ನಾಯಕ ಆಗಿ ಅವರ ಪಕ್ಷ ಸರಿ ಮಾಡಿಕೊಳ್ಳೋ ಬಗ್ಗೆ ಅಶೋಕ್ ಗಮನ ಕೊಡಲಿ. ನಿನ್ನ ಟೆಂಟ್ ಕಿತ್ತು ಹೊರಟಿದೆ. ಬೇರೆಯವರ ಟೆಂಟ್ ಬಗ್ಗೆ ಯಾಕೆ ಆಲೋಚನೆ ಮಾಡ್ತೀಯಾ? ಬಿಜೆಪಿಯಲ್ಲಿ ಅಧ್ಯಕ್ಷನ ಜೊತೆಗೆ ವಿಪಕ್ಷ ನಾಯಕನ ಬದಲಾವಣೆ ಬಗ್ಗೆಯೂ ಚರ್ಚೆ ಆಗ್ತಿದೆ. ಬಿಜೆಪಿಯಲ್ಲಿ ಅಧ್ಯಕ್ಷರು ಬದಲಾವಣೆ ಆದ ಸಮಯದಲ್ಲಿ ವಿಪಕ್ಷ ನಾಯಕ ಬದಲಾವಣೆ ಆಗಬೇಕು ಅಂತ ಚರ್ಚೆ ನಡೆದಿದೆ. ಬಿಜೆಪಿಯಲ್ಲಿ ಬಹಳಷ್ಟು ಸ್ನೇಹಿತರು ನನಗೆ ಇದ್ದಾರೆ. ಅವರೇ ಹೇಳಿದ್ದಾರೆ. ಬಿಜೆಪಿಯಲ್ಲಿ ಎರಡು ಕುರ್ಚಿ ಮೇಲೆ ಟವಲ್ ಹಾಕಿ ಕೂತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಜನರ ದಿಕ್ಕು ಬೇರೆಡೆಗೆ ಸೆಳೆಯಲು ಹೀಗೆ ಮಾತಾಡ್ತಿದ್ದಾರೆ. ಅಶೋಕ್ ಅಣ್ಣ ನಿನ್ನ ಸೀಟನ್ನು ಭದ್ರವಾಗಿ ಇಟ್ಟುಕೋ, ಆಮೇಲೆ ಬೇರೆ ಅವರ ಸೀಟಿನ ಬಗ್ಗೆ ಚರ್ಚೆ ಮಾಡಿ ವ್ಯಂಗ್ಯವಾಡಿದರು.

    ಬಿಜೆಪಿಯಲ್ಲಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಕಾರ ಮಾಡಿದ ಅವರು, ನಾನು ಯಾಕೆ ಆ ಪಕ್ಷದ ಬಗ್ಗೆ ಮಾತಾಡಲಿ. ಅವರಿಗೇನು ಕೆಲಸ ಇಲ್ಲ. ಬೇರೆ ಪಕ್ಷದ ಬಗ್ಗೆ ಮಾತಾಡ್ತಾರೆ. ಬಿಜೆಪಿ ಅವರ ತಟ್ಟೆಯಲ್ಲಿ ಬಿದ್ದಿರೋ ಹೆಗ್ಗಣ ತೆಗೆಯಲು ನಾನು ಯಾಕೆ ಹೋಗಲಿ ಎಂದರು.ಇದನ್ನೂ ಓದಿ: ಬೀದರ್ ದರೋಡೆ ಕೇಸ್ – ಗಾಯಗೊಂಡಿದ್ದ ಶಿವಕುಮಾರ್‌ಗೆ ಬಿಜೆಪಿಯಿಂದ 1 ಲಕ್ಷ ಪರಿಹಾರ

  • ನವೆಂಬರ್ ಗೂಗ್ಲಿ ಹಾಕಿದ ಆರ್.ಅಶೋಕ್; ಕಾಂಗ್ರೆಸ್ ಸಚಿವರು ಕೆಂಡ, ಇತ್ತ ದೆಹಲಿಗೆ ಹೋಗ್ತಾರಾ ಪರಂ ಟೀಂ?

    ನವೆಂಬರ್ ಗೂಗ್ಲಿ ಹಾಕಿದ ಆರ್.ಅಶೋಕ್; ಕಾಂಗ್ರೆಸ್ ಸಚಿವರು ಕೆಂಡ, ಇತ್ತ ದೆಹಲಿಗೆ ಹೋಗ್ತಾರಾ ಪರಂ ಟೀಂ?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಲಿಗೆ ನವೆಂಬರ್ ಡೆಡ್‌ಲೈನ್ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಸಿಡಿಸಿದ ಬಾಂಬ್‌ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಸಚಿವರು ಕಿಡಿಕಾರಿದ್ರೆ, ನೋಡ್ತಾ ಇರಿ ಅಂತಾ ಬಿಜೆಪಿ ರಾಜಕೀಯ ಮೇಲಾಟ ಶುರು ಮಾಡಿದೆ. ಈ ನಡುವೆ ಸಚಿವ ಜಿ. ಪರಮೇಶ್ವರ್‌ ಆಪ್ತರ ಟೀಂ ದೆಹಲಿ ಪ್ರವಾಸಕ್ಕೆ ಸಜ್ಜಾಗ್ತಿದೆ.

    ಕಾಂಗ್ರೆಸ್ ನಲ್ಲಿ ಮೊದಲೇ ಪವರ್ ಶೇರಿಂಗ್ ಫೈಟ್ ಜೋರಾಗಿದೆ. ಹೈಕಮಾಂಡ್ ಸೂಚನೆ ಬೆನ್ನಲ್ಲೇ ಎಲ್ಲವೂ ಮೇಲ್ನೋಟಕ್ಕೆ ತಣ್ಣಗಾದಂತಿದೆ. ಆದರೆ ಈಗ ಅಶೋಕ್, ಸಿದ್ದರಾಮಯ್ಯ ಸಿಎಂ ಸ್ಥಾನದ ಅವಧಿ ನವೆಂಬರ್ ವರೆಗೆ ಮಾತ್ರ ಎಂದು ಬಾಂಬ್ ಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ| ಭವಿಷ್ಯ ಹೇಳೋದನ್ನ ಯಾವಾಗ ಕಲಿತ್ರೋ ಗೊತ್ತಿಲ್ಲ: ಅಶೋಕ್‌ಗೆ ಪರಮೇಶ್ವರ್ ಟಾಂಗ್

    ಸಿದ್ದರಾಮಯ್ಯ ಸಿಎಂ ಆಗುವಾಗಲೇ ಅವರ ಅಧಿಕಾರ ಅವದಿ 2.5 ವರ್ಷ ನಿಗದಿ ಆಗಿದೆ ಎನ್ನಲಾಗಿತ್ತು. ನವೆಂಬರ್‌ಗೆ ಸಿದ್ದರಾಮಯ್ಯ ಸಿಎಂ ಅವಧಿ ಖಚಿತವಾಗಿ ಮುಗಿಯಲಿದೆ ಎಂಬ ಅಶೋಕ್ ಹೇಳಿಕೆ ಈಗ ಹೊಸ ಚರ್ಚೆ ಹುಟ್ಟು ಹಾಕಿದೆ.‌ ಇನ್ನೂ ಹೈಕಮಾಂಡ್ ದೆಹಲಿ ಬುಲಾವ್‌ಗೆ ಮೊದಲೇ ಪರಮೇಶ್ವರ್ ಆಪ್ತ ಸಚಿವರ ದೆಹಲಿ ಚಲೋ ಕೈಗೊಳ್ಳಲು‌ ಮುಂದಾಗಿದ್ದಾರೆ. ಫೆಬ್ರವರಿ 10ರ ಒಳಗೆ ದೆಹಲಿ ತೆರಳಿ ಹೈಕಮಾಂಡ್ ಭೇಟಿಗೆ ನಾಲ್ವರು ಸಚಿವರು ಮುಂದಾಗಿದ್ದಾರೆ.

    ದಲಿತ ನಾಯಕರ ಸಭೆಗೆ ಬ್ರೇಕ್ ಹಾಕಿದ್ದನ್ನೇ ಮುಂದಿಟ್ಟುಕೊಂಡು ಹೈಕಮಾಂಡ್ ಭೇಟಿ ಮಾಡ್ತಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಪವರ್ ಶೇರಿಂಗ್ ಫೈಟ್, ಪವರ್ ಸೆಂಟರ್ ಪಾಲಿಟಿಕ್ಸ್ ಎಲ್ಲ ವಿಚಾರ ಹೈಕಮಾಂಡ್ ಮುಂದಿಡುವ ಲೆಕ್ಕಾಚಾರ ಇದೆ ಎನ್ನಲಾಗಿದೆ. ಆದ್ರೆ ಆರ್.ಅಶೋಕ್ ಹೇಳಿಕೆಗೆ ಕಾಂಗ್ರೆಸ್ ಸಚಿವರಾದ ಪರಮೇಶ್ವರ್, ಬೋಸರಾಜು ವಾಗ್ದಾಳಿ ನಡೆಸಿದ್ದಾರೆ.

    ಈ ನಡುವೆ ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಬಿ.ಆರ್ ಪಾಟೀಲ್ ರಾಜೀನಾಮೆ ವಿಚಾರ ಕಾಂಗ್ರೆಸ್ ನಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.
    ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ಬಳಿಕ ಇವತ್ತು ಬಿ.ಆರ್ ಪಾಟೀಲ್ ಮೊದಲ ಪ್ರತಿಕ್ರಿಯೆ ನೀಡಿದ್ದು, ನಾನು ಯಾವತ್ತೋ ರಾಜೀನಾಮೆ ಕೊಡಬೇಕು ಅಂತಾ ಇದ್ದೆ. ರಾಜ್ಯಪಾಲರ ತೂಗು ಕತ್ತಿ ಮೇಲಿತ್ತು. ಹಾಗಾಗಿ ರಾಜಿನಾಮೆ ನೀಡಿದೆ. ಆದ್ರೆ ರಾಜೀನಾಮೆ ವಾಪಸ್ ಪಡೆಯಲ್ಲ ಅನುದಾನ ಕೂಡ ಸರಿಯಾಗಿ ಬರ್ತಿಲ್ಲ, ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡೋಕೆ ಆಗ್ತಿಲ್ಲ, ಸಿಎಂ ಜೊತೆ ಮಾತಾಡ್ತೀನಿ ಅಂತ ಹೇಳಿದ್ದಾರೆ.

    ಕಲಬುರಗಿ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಬಿ.ಆರ್ ಪಾಟೀಲ್ ಸಂಪರ್ಕಕ್ಕೆ ಸಿಗಲಿಲ್ಲ, ಸಿಎಂ ಮತ್ತು ಬಿ.ಆರ್ ಪಾಟೀಲ್ ಚೆನ್ನಾಗಿದ್ದಾರೆ. ಅವರೇ ಮಾತಾಡ್ತಾರೆ ಅಂತೇಳಿದ್ರು. ಇದನ್ನೂ ಓದಿ: ಬಿಹಾರ ಬಜೆಟ್ ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಪ್ರಿಯಾಂಕ್ ಖರ್ಗೆ

    ಒಟ್ಟಿನಲ್ಲಿ ಪವರ್ ಶೇರ್ ವಾರ್ ಬೂದಿ ಮುಚ್ಚಿದ ಕೆಂಡದಂತೆ ಇರುವಾಗಲೇ ಅಶೋಕ್ ಬಾಂಬ್ ನಾನಾ ಲೆಕ್ಕಾಚಾರಗಳಿಗೆ ಕಾರಣವಾಗಿದ್ದು, ಅಡ್ಡೇಟಿನ‌ ಮೇಲೆ ಗುಡ್ಡೇಟಿನ ಹೇಳಿಕೆಯೋ? ನಿಜಕ್ಕೂ ನವೆಂಬರ್ ಡೆಡ್ ಲೈನೋ? ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

  • ಸಿಎಂ ಬದಲಾವಣೆ| ಭವಿಷ್ಯ ಹೇಳೋದನ್ನ ಯಾವಾಗ ಕಲಿತ್ರೋ ಗೊತ್ತಿಲ್ಲ: ಅಶೋಕ್‌ಗೆ ಪರಮೇಶ್ವರ್ ಟಾಂಗ್

    ಸಿಎಂ ಬದಲಾವಣೆ| ಭವಿಷ್ಯ ಹೇಳೋದನ್ನ ಯಾವಾಗ ಕಲಿತ್ರೋ ಗೊತ್ತಿಲ್ಲ: ಅಶೋಕ್‌ಗೆ ಪರಮೇಶ್ವರ್ ಟಾಂಗ್

    – ಕೇಂದ್ರದ ಬಜೆಟ್ ಕರ್ನಾಟಕಕ್ಕೆ ನಿರಾಶೆ ತಂದಿದೆ ಎಂದ ಗೃಹ ಸಚಿವ

    ಬೆಂಗಳೂರು: ಸಿಎಂ ಬದಲಾವಣೆ ಹೇಳಿಕೆಗೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್‌ಗೆ ಗೃಹ ಸಚಿವ ಜಿ.ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ. ಅಶೋಕ್ ಯಾವಾಗ ಭವಿಷ್ಯ ಹೇಳೋದನ್ನ ಕಲಿತರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ನವೆಂಬರ್‌ನಲ್ಲಿ ಸಿದ್ದರಾಮಯ್ಯ ಸಿಎಂ ಅವಧಿ ಮುಕ್ತಾಯ ಎಂಬ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಯಾವಾಗ ಭವಿಷ್ಯ ಹೇಳೋದನ್ನು ಕಲಿತರು ಎಂದು ನಮಗೆ ಗೊತ್ತಿಲ್ಲ. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ. ನಾವೆಲ್ಲ 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ ಅಂತ ಅಂದುಕೊಂಡಿದ್ದೇವೆ. ಸಿಎಲ್‌ಪಿ ಸಭೆಯಲ್ಲಿ ಸಿಎಂ ಆಯ್ಕೆ ಆಯ್ತು. ಆ ಸಂದರ್ಭದಲ್ಲಿ ಅವರು ಎರಡೂವರೆ ವರ್ಷ ಮಾತ್ರ ಇರುತ್ತಾರೆ ಎಂದು ನಮಗೇನೂ ಹೈಕಮಾಂಡ್ ಹೇಳಿಲ್ಲ. ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಅಂದುಕೊಂಡಿದ್ದೇವೆ. ಈ ಮಧ್ಯೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

    ಬಿ.ಆರ್.ಪಾಟೀಲ್ ರಾಜೀನಾಮೆ ವಿಚಾರವಾಗಿ ಮಾತನಾಡಿ, ಅವರು ಯಾಕೆ ರಾಜೀನಾಮೆ ಕೊಟ್ರು ಅಂತ ಗೊತ್ತಿಲ್ಲ. ಯಾಕೆ ರಾಜೀನಾಮೆ ಕೊಟ್ರು ಅಂತ ಸಿಎಂಗೆ ಹೇಳಿರುತ್ತಾರೆ. ಅವರಿಗೆ ಏನು ಅಸಮಾಧಾನ ಅಂತ ಗೊತ್ತಿಲ್ಲ. ರಾಜೀನಾಮೆ ಕೊಟ್ಟ ಬಗ್ಗೆಯೂ ಗೊತ್ತಿಲ್ಲ ಎಂದು ಹೇಳಿದರು.

    ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಮಸೂದೆ ಬಗ್ಗೆ ಪ್ರತಿಕ್ರಿಯಿಸಿ, ಮಸೂದೆ ಮಾಡಿದ ಮೇಲೆ ಕೋರ್ಟ್ನಲ್ಲಿ ತಡೆ ಆಗಬಾರದು. ಈಗ ಇರುವ ಬೇರೆ ಬೇರೆ ಕಾನೂನುಗಳನ್ನು ಲಿಂಕ್ ಮಾಡಿ ಹೊಸ ಮಸೂದೆ ಮಾಡಲು ಅಧಿಕಾರಿಗಳಿಗೆ ಸಿಎಂ ಹೇಳಿದ್ದಾರೆ. ಆದಷ್ಟು ಬೇಗ ಮಸೂದೆಯ ಕರಡು ರಚನೆ ಮುಗಿದರೆ ರಾಜ್ಯಪಾಲರ ಒಪ್ಪಿಗೆಗೆ ಕಳಿಸಲಾಗುತ್ತದೆ ಎಂದರು.

    ಈ ಬಾರಿಯ ಕೇಂದ್ರದ ಬಜೆಟ್ ಕರ್ನಾಟಕಕ್ಕೆ ನಿರಾಶೆ ತಂದಿದೆ. ಕರ್ನಾಟಕಕ್ಕೆ ಯಾವುದೇ ಕಾರ್ಯಕ್ರಮ ಕೊಟ್ಟಿಲ್ಲ. ಪ್ರಮುಖ ಬೇಡಿಕೆಗಳನ್ನು ಕೇಂದ್ರದ ಮುಂದೆ ಇಟ್ಟಿದ್ದೆವು. ಆಶ್ರಯ ಮನೆಗಳಿಗೆ ಹೆಚ್ಚಿನ ಹಣ ಕೇಳಿದ್ದೆವು. ಸಮಾಜ ಕಲ್ಯಾಣ ಇಲಾಖೆಗೆ ಇನ್ನೂ ಹೆಚ್ಚಿನ ಹಣ ಕೇಳಿದ್ದೆವು. ಕೇಂದ್ರದ ಯೋಜನೆಗಳಲ್ಲಿ ಹೆಚ್ಚಿನ ಅನುದಾನ ಕೇಳಿದ್ದೆವು. ಐಐಎಂ, ಐಐಟಿಗಳನ್ನು ರಾಜ್ಯಕ್ಕೆ ಕೊಡುವಂತೆ ಸಹ ಕೇಳಿದ್ದೆವು. ನೀರಾವರಿ ಯೋಜನೆಗಳಲ್ಲಿ ಭದ್ರ ಮೇಲ್ದಂಡೆಗೆ 5300 ಕೋಟಿ ರೂ. ಕೊಡೋದಾಗಿ ಕಳೆದ ಸಲ ಘೋಷಣೆ ಮಾಡಿದ್ದರು. ಈ ಸಲ ಅದರ ಪ್ರಸ್ತಾಪವೇ ಮಾಡಿಲ್ಲ ಎಂದು ಗುಡುಗಿದರು.

    ಮೇಕೆದಾಟು ಪ್ರಸ್ತಾಪ ಮಾಡಿಲ್ಲ. ಬೆಂಗಳೂರು ಅಭಿವೃದ್ಧಿಗೆ ಏನೂ ಕೊಟ್ಟಿಲ್ಲ. ಪೆರಿಫೆರಲ್, ಸಿಆರ್‌ಆರ್ ಯೋಜನೆಗಳಿಗೂ ಏನೂ ಕೊಟ್ಟಿಲ್ಲ. ಸಿಎಂ ಹೇಳಿದ ಹಾಗೆ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ಚೊಂಬು ಕೊಟ್ಟಿದೆ. ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಸಹಾಯ ಆಗಿಲ್ಲ ಎಂದರು.

    ನಮ್ಮದು ಕೃಷಿ ಪ್ರಧಾನ ದೇಶ. ಇದನ್ನು ಪರಿಗಣಿಸಿ ಕೃಷಿ ಉತ್ಪಾದನೆ ಹೆಚ್ಚಿಸುವ ಕೃಷಿಕರಿಗೆ ಸಾಲ ಕೊಡುವ ಪ್ರಸ್ತಾಪ ಮಾಡಿಲ್ಲ. ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ತಿರಸ್ಕಾರ ಮಾಡಲಾಗಿದೆ. ಕೃಷಿಗೆ ಉತ್ತೇಜನ ಕೊಟ್ಟಿಲ್ಲ ಎಂದು ದೂರಿದರು.

    ಇಡೀ ದೇಶಕ್ಕೆ 50.68 ಲಕ್ಷ ಕೋಟಿ ರೂ. ಬಜೆಟ್ ಕೊಟ್ಟಿದ್ದಾರೆ. ಒಂದರಲ್ಲಿ 15 ಲಕ್ಷ ಕೋಟಿ ರೂ.ಗೆ ಹೆಚ್ಚು ಸಾಲ ತೋರಿಸಲಾಗಿದೆ. 200 ಲಕ್ಷ ರೂ.ಗೆ ಹೆಚ್ಚು ಸಾಲ ಇದೆ ಅದನ್ನು ತೀರಿಸಿಕೊಳ್ಳಲು ಪೂರಕ ಮಾಡಿಕೊಂಡಿದ್ದಾರೆ ಎಂದರು.

    ದೆಹಲಿ ಭೇಟಿ ಬಗ್ಗೆ ಮಾತನಾಡಿದ ಅವರು, ನಾನು ದೆಹಲಿಗೆ ಹೋಗಬೇಕು ಅಂತ ಅಂದುಕೊಂಡಿದ್ದೇನೆ. ಇನ್ನೂ ಯಾವಾಗ ಅಂತ ನಿಗದಿಯಾಗಿಲ್ಲ. ಆದ್ರೆ ದೆಹಲಿಗೆ ನಾನು ರಾಜಕೀಯ ಕಾರಣಕ್ಕೆ ಹೋಗ್ತಿಲ್ಲ. ಇಲಾಖೆ ಕೆಲಸಗಳಿಗೆ ದೆಹಲಿಗೆ ಹೋಗಬೇಕಿದೆ. ರಾಜಕೀಯ ಕಾರಣಕ್ಕೆ ಹೋಗಲ್ಲ, ಯಾಕಂದ್ರೆ ಇಲ್ಲಿಗೇ ನಮ್ಮ ಎಐಸಿಸಿ ಅಧ್ಯಕ್ಷರು, ಉಸ್ತುವಾರಿಗಳು ಬರ್ತಾರೆ. ಆಗಲೇ ಏನಾದ್ರೂ ಇದ್ದರೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

  • ನವೆಂಬರ್ 15, 16ಕ್ಕೆ ಸಿಎಂ ಬದಲಾವಣೆ – ವಿಪಕ್ಷ ನಾಯಕ ಅಶೋಕ್ ಭವಿಷ್ಯ

    ನವೆಂಬರ್ 15, 16ಕ್ಕೆ ಸಿಎಂ ಬದಲಾವಣೆ – ವಿಪಕ್ಷ ನಾಯಕ ಅಶೋಕ್ ಭವಿಷ್ಯ

    – ಕಾಂಗ್ರೆಸ್‌ ಸ್ನೇಹಿತರಿಂದಲೇ ವಿಚಾರ ಗೊತ್ತಾಗಿದೆ ಎಂದು ಬಾಂಬ್‌
    – 5ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

    ಮೈಸೂರು: ಮುಂದಿನ ನವೆಂಬರ್ 15, 16ಕ್ಕೆ ಸಿಎಂ ಸಿದ್ದರಾಮಯ್ಯ ಗಂಟು ಮೂಟೆ ಕಟ್ಟಬೇಕಾಗುತ್ತೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ಭವಿಷ್ಯ ನುಡಿದಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಅಂಗನವಾಡಿ ಪ್ರತಿಭಟನೆಯಲ್ಲಿ ಮಾತಾನಾಡಿದ ಅವರು ಡಿಕೆಶಿ ವರ್ಸಸ್ ಸಿದ್ದು ಮ್ಯೂಸಿಕಲ್ ಚೇರ್ ಸ್ಪರ್ಧೆ ಇರುತ್ತದೆ. ಇದು ಪಕ್ಕಾ ನ್ಯೂಸ್ ಅಂತಾ ವಿಪಕ್ಷ ನಾಯಕ ಆರ್. ಅಶೋಕ್ ಹೊಸ ಬಾಂಬ್ ಹಾಕಿದ್ದಾರೆ. ಇದನ್ನೂ ಓದಿ: Budget 2025 | ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಬಲ ನೀಡುತ್ತಾ ʻಮಿಡಲ್ ಕ್ಲಾಸ್ʼ ಬಜೆಟ್‌

    ಕಾಂಗ್ರೆಸ್‌ನಲ್ಲಿ (Congress) ಈಗಾಗಲೇ ಒಪ್ಪಂದ ಆಗಿದೆ. ನಾನು ಜ್ಯೋತಿಷಿ ಅಲ್ಲ ಆದ್ರೆ ನಂಗೆ ಕಾಂಗ್ರೆಸ್‌ನಲ್ಲಿ ಸ್ನೇಹಿತರು ಇದ್ದಾರೆ, ಹೀಗಾಗಿ ಈ ವಿಚಾರ ತಿಳಿದಿದೆ. ಡಿಕೆಶಿ ಕುರ್ಚಿ ಒದ್ದಾದ್ರೂ ಅಧಿಕಾರ ಕಿತ್ತುಕೊಳ್ತಾರೆ ಅಂತಾ ಆಶೋಕ್ ಹೇಳಿದ್ದಾರೆ. ಇದನ್ನೂ ಓದಿ: Budget 2025: ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೇಕೇರ್‌ ಕ್ಯಾನ್ಸರ್‌ ಕೇಂದ್ರ ಸ್ಥಾಪನೆ

    ಇದೇ ವೇಳೆ ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ವಂಚನೆ ಮಾಡಿದೆ. 5ನೇ ಗ್ಯಾರಂಟಿ ಘೋಷಣೆ ಮಾಡ್ತೀವಿ ಅಂತಾ ಭರವಸೆ ಕೊಟ್ಟು ಮೋಸ ಮಾಡಿದೆ. ಬೇಡಿಕೆ ಈಡೇರುವ ತನಕ ಪಕ್ಷ ನಿಮ್ಮೊಂದಿಗೆ ಇರಲಿದೆ ಅಂದ್ರು. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಅಡ್ಡಿಪಡಿಸಿ ಟೆಂಟ್ ಕಿತ್ತುಕೊಳ್ಳೋಕೆ ಸಿದ್ದು ಸರ್ಕಾರ ಮುಂದಾಗಿದೆ. ನಿಮ್ಮ ಟೆಂಟ್ ಕಿತ್ತುಕೊಳ್ತಾರೆ ಇರೋ ಸ್ವಲ್ಪ ದಿನದಲ್ಲಿ ಇವರಿಗೆ ಒಳ್ಳೆಯದು ಮಾಡಿ ಅಂತಾ ಲೇವಡಿ ಮಾಡಿದ್ರು.

    ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಸಾಥ್‌:
    ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ 5 ದಿನ ಪೂರೈಸಿದೆ. ಇಂದಿನ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕರಾದ ಆರ್.ಅಶೋಕ್, ಚಲವಾದಿ ನಾರಾಯಣ ಸ್ವಾಮಿ ಸೇರಿ ಹಲವರು ಭಾಗಿಯಾಗಿದ್ರು. ನಿನ್ನೆ ಪೊಲೀಸರು ಬಂದು ಟೆಂಟ್ ಕಿತ್ತು ಹಾಕಲು ನೋಡಿದ್ದನ್ನು ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ರು. ಇದನ್ನೂ ಓದಿ: ದುಬೈನಲ್ಲಿ ಅರಳಿದ ಪ್ರೀತಿ, ವಿಜಯಪುರದಲ್ಲಿ ಅಂತ್ಯ – ಹಣ, ಮೊಬೈಲ್ ದೋಚಿ ಪತಿ ಪರಾರಿ

    5 ದಿನಗಳಾದ್ರೂ ಸ್ಪಂದಿಸದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಜ್ಯದಲ್ಲಿ ಒಂದು ಹುದ್ದೆಯೂ ಭರ್ತಿ ಆಗ್ತಿಲ್ಲ, ಇವರ ಜೇಬು ಭರ್ತಿಯಾಗುತ್ತಿದೆ ಅಂತ ಆರೋಪಿಸಿದ್ರು. ಅತ್ತ, ಚಿತ್ರದುರ್ಗದಲ್ಲಿ ಸಚಿವ ಡಿ.ಸುಧಾಕರ್‌ಗೆ ಅಂಗನವಾಡಿ ಕಾರ್ಯಕರ್ತೆಯರು ಕ್ಲಾಸ್ ತಗೊಂಡಿದ್ದಾರೆ. ನಿಮ್ಮ ಗ್ಯಾರಂಟಿ ಸಕ್ಸಸ್ ಆಗಲು ನಾವು ಕಾರಣ. ಎಲೆಕ್ಷನ್ ಟೈಮಲ್ಲಿ ಘೋಷಣೆ ಮಾಡಿದ್ದನ್ನು ಮಾಡಿಕೊಡಿ ಎಂದು ಗರಂ ಆಗಿದ್ದಾರೆ. ಇದು ಕೇಂದ್ರದ ಯೋಜನೆ. ಅವರು ಕೊಟ್ಟಿಲ್ಲ. ಆದ್ರೂ ನಾವು ನಿಮ್ಮ ಜೊತೆ ಇರ್ತೀವಿ.. 100 ಪರ್ಸೆಂಟ್ ಕೊಡ್ತೀವಿ.. ಸ್ವಲ್ಪ ಟೈಂ ಕೊಡ್ರಮ್ಮ.. ಎನ್ನುತ್ತಾ ಸಚಿವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.