Tag: r ashok

  • ಜಾತಿ ಸಮೀಕ್ಷೆ ಹೆಸರಲ್ಲಿ ಕಾಂಗ್ರೆಸ್ ಸರ್ಕಾರದಿಂದ ಧಮ್ಕಿ, ರೌಡಿಸಂ – ಅಶೋಕ್ ಕಿಡಿ

    ಜಾತಿ ಸಮೀಕ್ಷೆ ಹೆಸರಲ್ಲಿ ಕಾಂಗ್ರೆಸ್ ಸರ್ಕಾರದಿಂದ ಧಮ್ಕಿ, ರೌಡಿಸಂ – ಅಶೋಕ್ ಕಿಡಿ

    – ರಸ್ತೆ ಡಾಂಬರೀಕರಣ ಮಾಡದೇ ಉದ್ಯಮಿಗಳ ಬಗ್ಗೆ ಟೀಕೆ

    ಬೆಂಗಳೂರು/ಹಾಸನ: ಜಾತಿ ಸಮೀಕ್ಷೆಗೆ (Caste Census) ಮಾಹಿತಿ ನೀಡದವರಿಗೆ ಕಾಂಗ್ರೆಸ್ (Congress) ಸರ್ಕಾರ ಧಮ್ಕಿ ಹಾಕುತ್ತಿದೆ. ಇದು ರೌಡಿಸಂ ಮಾಡುವ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಕಿಡಿಕಾರಿದರು.

    ಹಾಸನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಜಾತಿಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಿಲ್ಲ. ಇನ್ಫೋಸಿಸ್ ಸುಧಾಮೂರ್ತಿ ಜಾತಿ ಸಮೀಕ್ಷೆಗೆ ಮಾಹಿತಿ ನೀಡಿಲ್ಲವೆಂದಾಕ್ಷಣ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ್ ತಂಗಡಗಿ ಧಮ್ಕಿ ಹಾಕಿದ್ದಾರೆ. ಸರ್ಕಾರವೇ ಇಲ್ಲಿ ರೌಡಿಸಂ ಮಾಡುತ್ತಿದೆ. ಮಾಹಿತಿ ನೀಡುವುದು ಜನರ ಇಚ್ಛೆ ಎಂದು ಹೈಕೋರ್ಟ್ ಹೇಳಿದ್ದರೂ ಸರ್ಕಾರ ಅದನ್ನು ಉಲ್ಲಂಘಿಸಿ ಗೂಂಡಾಗಿರಿ ತೋರುತ್ತಿದೆ. ಜಾತಿ ಸಮೀಕ್ಷೆ ಮಾಡುವುದೇ ಅಕ್ರಮವಾಗಿದ್ದು, ಈ ರೀತಿ ಬೆದರಿಕೆ ಹಾಕುವುದು ಮತ್ತೊಂದು ಅಕ್ರಮವಾಗಿದೆ ಎಂದರು.ಇದನ್ನೂ ಓದಿ: ದೀಪಾವಳಿ ಗಿಫ್ಟ್‌ – ದುಬಾರಿ ಕಾರುಗಳನ್ನೇ ನೀಡಿ ಹೃದಯ ಶ್ರೀಮಂತಿಕೆ ಮೆರೆದ ಉದ್ಯಮಿ

    ಸುಧಾಮೂರ್ತಿ ಬರೆದುಕೊಟ್ಟಿದ್ದನ್ನು ಬಹಿರಂಗ ಮಾಡಿರುವುದು ತಪ್ಪು. ಯಾರದ್ದೇ ಮಾಹಿತಿಯನ್ನು ಬಹಿರಂಗ ಮಾಡಬಾರದು, ಗೌಪ್ಯತೆ ಕಾಪಾಡಬೇಕು ಎಂದು ಹೈಕೋರ್ಟ್ ಹೇಳಿದೆ. ಇದರ ಜೊತೆಗೆ ಶಿಕ್ಷಕರು, ಅಧಿಕಾರಿಗಳನ್ನೂ ಬೆದರಿಸುತ್ತಿದ್ದಾರೆ ಎಂದರು.

    ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಯಮಿಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ರಸ್ತೆ ಸರಿ ಇಲ್ಲ ಎಂದರೆ ನೀತಿಪಾಠ ಹೇಳುತ್ತಾರೆ. ಮೋಹನ್ ದಾಸ್ ಪೈ ಹಾಗೂ ಕಿರಣ್ ಮಜುಮ್‌ದಾರ್ ಶಾ ಪ್ರಶ್ನೆ ಮಾಡಿದರೆ ಅದನ್ನು ಟೀಕೆ ಮಾಡಿದ್ದಾರೆ. ಬೆಂಗಳೂರಿಂದ ಎಲ್ಲವನ್ನೂ ಪಡೆದಿದ್ದಾರೆ ಎನ್ನಲು ಈ ನಗರವನ್ನು ಸಿಎಂ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಕಟ್ಟಿ ಬೆಳೆಸಿಲ್ಲ. ತೆರಿಗೆ ಕಟ್ಟುವವರಿಗೆ ಪ್ರಶ್ನೆ ಕೇಳುವ ಅಧಿಕಾರವೂ ಇದೆ. ಬಿಜೆಪಿ ಸರ್ಕಾರವಿದ್ದಾಗಲೂ ಇದೇ ಉದ್ಯಮಿಗಳು ಟ್ವೀಟ್ ಮಾಡಿ ಪ್ರಶ್ನೆ ಕೇಳಿದ್ದರು. ಆಗ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕೂಡಲೇ ಹಣ ಬಿಡುಗಡೆ ಮಾಡಿ ರಸ್ತೆ ದುರಸ್ತಿ ಮಾಡಲಾಗಿತ್ತು. ಸಮಸ್ಯೆ ಬಂದಾಗ ತೆಗಳುವುದು ಬಿಟ್ಟು ಸಮಸ್ಯೆ ಬಗೆಹರಿಸಲಿ. ರಸ್ತೆಗುಂಡಿ ಮುಚ್ಚಲು 2,000 ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದರೂ ಅದರ ಫಲಿತಾಂಶ ಕಾಣುತ್ತಿಲ್ಲ. ಈ ಹಣ ಎಲ್ಲಿ ಹೋಗಿದೆ ಎಂದು ಸರ್ಕಾರ ನೋಡಬೇಕಿದೆ ಎಂದು ಆಕ್ರೋಶ ಹೊರಹಾಕಿದರು.

    ಗೂಗಲ್ ಕಂಪನಿ ಬೆಂಗಳೂರು ಬಿಟ್ಟು ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದೆ. ಉದ್ಯಮಿಗಳನ್ನು ಓಡಿಸಿ ಇವರು ಯಾವ ರೀತಿಯ ಅಭಿವೃದ್ಧಿ ಮಾಡುತ್ತಾರೆ? ನಗರದಲ್ಲಿ ಮಳೆ ನಿಂತಿದೆ. ಆದರೂ ಮಳೆ ಬರುತ್ತಿದೆ ಎಂದು ಬೃಹಸ್ಪತಿ ಸಿದ್ದರಾಮಯ್ಯ ನೆಪ ಹೇಳುತ್ತಿದ್ದಾರೆ. ಮಳೆ ಬರುವ ಮುನ್ನವೇ ರಸ್ತೆ ಡಾಂಬರೀಕರಣ ಮಾಡಬೇಕಿತ್ತು. ಉದ್ಯಮಿಗಳೇ ರಸ್ತೆ ನಿರ್ಮಿಸುತ್ತೇವೆ ಎಂದಿದ್ದು, ಇದು ಸರ್ಕಾರಕ್ಕೆ ದೊರೆತ ಛೀಮಾರಿ ಎಂದು ಹೇಳಿದರು.

    ಪ್ರವಾಹ ಬಂದಾಗ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಸಭೆ ನಡೆಸದೆ, ಕೇಂದ್ರ ಸರ್ಕಾರದ ಬಳಿ ಹೋಗದೆ ಪರಿಹಾರ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ನಿಯಮದ ಅನುಸಾರ ಪರಿಹಾರ ಬಿಡುಗಡೆ ಮಾಡಿದೆ ಎಂದರು.

    ಬಿಜೆಪಿ ಸರ್ಕಾರ ಆದೇಶ ಮಾಡಿಲ್ಲ:
    ಶಾಲಾ ಆವರಣದಲ್ಲಿ ಹೊರಗಿನ ಸಂಘಟನೆಗಳಿಂದ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸುವ ಬಗ್ಗೆ ಆಗಿನ ಸಿಎಂ ಜಗದೀಶ್ ಶೆಟ್ಟರ್ ಆದೇಶ ಮಾಡಿರುವುದಕ್ಕೆ ಸಾಕ್ಷಿ ಇಲ್ಲ. ಇದು ಅಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಚರ್ಚೆಯಾಗಿರಲಿಲ್ಲ. ಚಾಮರಾಜಪೇಟೆಯ ಒಂದು ಶಾಲೆಗೆ ಸಂಬಂಧಿಸಿದಂತೆ ಒಂದು ಆದೇಶವಾಗಿದೆ. ಇದನ್ನು ಎಲ್ಲಕ್ಕೂ ಅನ್ವಯಿಸಿ ಈಗಿನ ಸರ್ಕಾರ ಆದೇಶ ಮಾಡಿದೆ. ಜಗದೀಶ್ ಶೆಟ್ಟರ್ ಅಥವಾ ಅಂದಿನ ಸಚಿವರ ಸಹಿ ಇರುವ ಆದೇಶವಿದ್ದರೆ ಅದನ್ನು ಬಹಿರಂಗ ಮಾಡಲಿ ಎಂದು ಹೇಳಿದರು.

    ಆರ್‌ಎಸ್‌ಎಸ್ ಆರಂಭವಾಗಿ 100 ವರ್ಷದ ಬಳಿಕ ಪಥಸಂಚಲನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಬಂದಿದೆ. ಪ್ರತಿ ಶುಕ್ರವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಆಗುವುದಿಲ್ಲವೇ? ರಂಜಾನ್, ಈದ್ ಮಿಲಾದ್ ವೇಳೆ ರಸ್ತೆ ಬಂದ್ ಮಾಡುತ್ತಾರೆ. ಆಗ ಯಾರೂ ಅನುಮತಿ ಪಡೆದಿರುವುದಿಲ್ಲ. ಕೆಲವು ಕಡೆ ಮೆರವಣಿಗೆಯಲ್ಲಿ ಕತ್ತಿ ಹಿಡಿದು ಆಚರಣೆ ಮಾಡುತ್ತಾರೆ. ಅದನ್ನು ಶಸ್ತ್ರಾಸ್ತ್ರಗಳು ಎಂದು ಪರಿಗಣಿಸುವುದಿಲ್ಲ. ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಎಂದೂ ಯಾರಿಗೂ ಹಾನಿಯಾಗಿಲ್ಲ ಎಂದರು.ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣಾರ್ಭಟ – ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

  • ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಭಾಗಿಯಾದ ಆರ್‌ ಅಶೋಕ್‌

    ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಭಾಗಿಯಾದ ಆರ್‌ ಅಶೋಕ್‌

    ಬೆಂಗಳೂರು: ಸರ್ಕಾರದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ(Socio Economic Survey) ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಭಾಗವಹಿಸಿದ್ದಾರೆ.

    ಶನಿವಾರ ಅಶೋಕ್ ಅವರ ಜಾಲಹಳ್ಳಿಯ ನಿವಾಸಕ್ಕೆ ಗಣತಿದಾರರು ಆಗಮಿಸಿದ್ದಾರೆ. ಈ ವೇಳೆ ತಮ್ಮ ಹಾಗೂ ಕುಟುಂಬಸ್ಥರ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಕೆಲ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿಲ್ಲ.

    ಸಮೀಕ್ಷೆಯಲ್ಲಿ ಪಾಲ್ಗೊಂಡ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅಶೋಕ್ ಬಹಿರಂಗಗೊಳಿಸಿಲ್ಲ. ಇದನ್ನೂ ಓದಿ:  ಕಾನೂನು ಸುವ್ಯವಸ್ಥೆ ಹಾಳಾಗಬಹುದು – ಚಿತ್ತಾಪೂರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಇಲ್ಲ

     

    ಒಕ್ಕಲಿಗ(Vokkliga) ಸಮಾಜದ ಪ್ರಭಾವಿ ನಾಯಕರಾಗಿರುವ ಅಶೋಕ್‌ ಅವರು ಸಮಾಜ ಜಾತಿಗಣತಿ ವಿಚಾರದ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ಈ ಹಿಂದೆ ಭಾಗವಹಿಸಿದ್ದರು. ಇದನ್ನೂ ಓದಿ:  ಹಾಸನಾಂಬೆ ದರ್ಶನಕ್ಕೆ ಹರಿದುಬಂದ ಭಕ್ತಸಾಗರ – ಕ್ರಮವಹಿಸದೇ ಅಹಿತಕರ ಘಟನೆಯಾದ್ರೆ ನಮ್ಮ ಇಲಾಖೆ ಜವಾಬ್ದಾರಿಯಲ್ಲ ಡಿಸಿಗೆ ಎಸ್‌ಪಿ ಪತ್ರ

    ಈ ಸಭೆಯಲ್ಲಿ ಜಾತಿಗಳಿಗೆ ಕ್ರಿಶ್ಚಿಯನ್ ಸೇರಿಸಿರುವುದನ್ನ ಕೈ ಬಿಡಬೇಕು. ಸಮುದಾಯದ ಎಲ್ಲರೂ ಒಕ್ಕಲಿಗ ಎಂದೇ ಜಾತಿ ಬರೆಸಬೇಕು ಎಂಬ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.
  • ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ & ಕೊಲೆ ಪ್ರಕರಣ – ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ: ಆರ್.‌ ಅಶೋಕ್‌

    ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ & ಕೊಲೆ ಪ್ರಕರಣ – ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ: ಆರ್.‌ ಅಶೋಕ್‌

    – ಸಿಎಂ ತವರಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡದ ಸರ್ಕಾರ ಅಂತ ಕಿಡಿ

    ಮೈಸೂರು: ನಗರದಲ್ಲಿ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ (Girl Rape And Murder) ಸಿದ್ದರಾಮಯ್ಯಗೆ ಕಪ್ಪುಚುಕ್ಕೆ, ಇದು ಸರ್ಕಾರದ ವೈಫಲ್ಯದ ಪರಿಣಾಮ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashok) ಕಿಡಿಕಾರಿದ್ರು.

    ಬೆಂಗಳೂರಿನಲ್ಲಿ ಮಾತಾಡಿದ ಆರ್. ಅಶೋಕ್, ಮೈಸೂರಿನ (Mysuru) ಘಟನೆ ರಾಜ್ಯವನ್ನು ತಲ್ಲಣಗೊಳಿಸಿದೆ. ಬಾಲಕಿ ಅತ್ಯಾಚಾರ ತಡೆಯೋಕಾಗದವರು ಯಾವ ಪುರುಷಾರ್ಥಕ್ಕೆ ದಸರಾ‌ ಮೆರವಣಿಗೆ ಮಾಡಿದ್ರು? ರಾಜ್ಯದಲ್ಲಿ ರೇಪ್ ಮೆರವಣಿಗೆ ಸಾಗಿದೆ. ಸಿಎಂ ಸ್ವತಃ ತಮ್ಮ ಜಿಲ್ಲೆಯಲ್ಲೇ ಬಾಲಕಿ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.‌ ಸರ್ಕಾರ ತಲೆತಗ್ಗಿಸುವ ಘಟನೆ ಇದು ಎಂದು ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮೈಸೂರು | ಬಾಲಕಿಯ ರೇಪ್‌ ಬಳಿಕ ಎದೆ, ಹೊಟ್ಟೆ, ಮರ್ಮಾಂಗಕ್ಕೆ 19 ಬಾರಿ ಚಾಕು ಇರಿದು ಕೊಂದಿದ್ದ ಕಾಮುಕ

    ನೈಟ್ ಬೀಟ್ ಪೊಲೀಸರು ಏನ್ ಮಾಡ್ತಿದ್ರು? ಪೋಸ್ಟಿಂಗ್‌ಗಾಗಿ ಕಾಸು ಕಲೆಕ್ಷನ್‌ಗೆ ಹೋಗಿದ್ರಾ ಪೊಲೀಸರು? ಸಿಎಂ ತವರು ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣ ನಡೆದಿದ್ದರೂ ಸಿಎಂ, ಡಿಸಿಎಂ ಚಕಾರ ಇಲ್ಲ. ಕಾನೂನು ಸುವ್ಯವಸ್ಥೆ ಕಾಪಾಡದೇ ಸರ್ಕಾರ ಕೈಚೆಲ್ಲಿದೆ. ಸರ್ಕಾರ ಕ್ರಮ ಕೈಗೊಳ್ಳದೇ ನಿದ್ದೆಯಲ್ಲಿದೆ, ಇದು ಅವಮಾನವೀಯ ಘಟ‌ನೆ. ಪೊಲೀಸರು ದಸರಾ (Dasara) ಗುಂಗಲ್ಲೇ ಇದ್ದಿದ್ರೆ ಅಲರ್ಟ್ ಆಗಿರ್ಬೇಕಿತ್ತು. ಇಡೀ ಮೈಸೂರು ವಿದ್ಯುದ್ದೀಪಾಲಂಕಾರದ ಬೆಳಕಿನಿಂದ ಝಗಮಗಿಸ್ತಿತ್ತು. ನಾಲ್ಕೈದು ಜಿಲ್ಲೆಗಳ ಪೊಲೀಸರು ಭದ್ರತೆಗಿದ್ರು. ಇಷ್ಟಿದ್ರೂ ಬಾಲಕಿ ರೇಪ್ ತಡೆಯಲು ಆಗಿಲ್ಲ. ದೆಹಲಿಯಲ್ಲಿ ಮೋದಿ ಮನೆ ಮುಂದೆ ರಸ್ತೆಗುಂಡಿ ಪತ್ತೆ ಹಚ್ಚೋರು ಬಾಲಕಿ ಅತ್ಯಾಚಾರ ತಡೆಯಲು ಆಗಿಲ್ಲ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೈಸೂರಿನ ಪೊಲೀಸರಿಗೆ ಸಿಎಂ ಪುತ್ರ ಯತೀಂದ್ರನ ಕಾಟ ಹೆಚ್ಚಾಗಿದೆ: ಪ್ರತಾಪ್ ಸಿಂಹ ಆರೋಪ

    ಇನ್ನು ಮೈಸೂರು ಪೊಲೀಸರಿಗೆ ಯತೀಂದ್ರ ಕಾಟ ಎಂದು ಪ್ರತಾಪ್ ಸಿಂಹ (Pratap Simha) ಆರೋಪ ಸರಿ ಇದೆ. ಪ್ರತಾಪ್ ಸಿಂಹ ಸತ್ಯ ಹೇಳಿದ್ದಾರೆ. ಪೋಸ್ಟಿಂಗ್ ವ್ಯವಹಾರ ಸರ್ಕಾರದಲ್ಲಿ ನಡೀತಿದೆ. ಪೊಲೀಸರು ಫೀಲ್ಡ್‌ನಲ್ಲಿಲ್ಲ, ಪೋಸ್ಟಿಂಗ್‌ಗಾಗಿ ಶಾಸಕರು, ಸಚಿವರ ಮನೆ ಮುಂದೆ ಇದ್ದಾರೆ ಎಂದು ಅಶೋಕ್ ಹೇಳಿದ್ರು. ಇದನ್ನೂ ಓದಿ: ಚಾಮುಂಡಿ ತಾಯಿಗೆ ಮುಡಿ ಉತ್ಸವ; ರಾಜರ ವಜ್ರ-ವೈಡೂರ್ಯ ಅಲಂಕಾರದಲ್ಲಿ ಕಂಗೊಳಿಸಿದ ದೇವಿ

  • ನಾವು ಅಧಿಕಾರಕ್ಕೆ ಬಂದ್ರೆ ಜಿಬಿಎ ರದ್ದು ಮಾಡ್ತೀವಿ: ಆರ್.ಅಶೋಕ್

    ನಾವು ಅಧಿಕಾರಕ್ಕೆ ಬಂದ್ರೆ ಜಿಬಿಎ ರದ್ದು ಮಾಡ್ತೀವಿ: ಆರ್.ಅಶೋಕ್

    ನಾವು (BJP) ಅಧಿಕಾರಕ್ಕೆ ಬಂದ್ರೆ ಜಿಬಿಎ (Greater Bengaluru Authority) ತೆಗೆದು, ಒಂದೇ ಕಾರ್ಪೋರೇಷನ್ ಮಾಡ್ತೀವಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ.

    ಬೆಂಗಳೂರಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆಂಪೇಗೌಡ ಕಟ್ಟಿದ ನಾಡನ್ನ ಒಂದೇ ಮಾಡ್ತೀವಿ. ಜಿಬಿಎ ನಾವು ರದ್ದು ಮಾಡ್ತೀವಿ. ಅಧಿಕಾರ ವಿಕೇಂದ್ರೀಕರಣ ಅಂದರೆ 5 ಪಾಲಿಕೆ ಮಾಡಿದ ಹಾಗೇ ರಾಜ್ಯವನ್ನು ಭಾಗ ಮಾಡ್ತೀರಾ? 5 ಸಿಎಂ ಆಗೋಕೆ ಒಪ್ಪುತ್ತೀರಾ? ಬೆಂಗಳೂರು ಗೆಲ್ಲೋಕೆ ಆಗೊಲ್ಲ ಅಂತ ಕಾಂಗ್ರೆಸ್‍ಗೆ ಗೊತ್ತು. ಅದಕ್ಕೆ ಜಿಬಿಎ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ – ಹೋಮ ನೆರವೇರಿಸಿ ಬಿಜೆಪಿ ಕೌಂಟರ್‌

    ಕೆಲವು ಶಾಸಕರು ಅನುಮತಿ ಪಡೆದು ಬೇರೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಜಿಬಿಎ ಮೊದಲ ಸಭೆ ಇವತ್ತು ಸರ್ಕಾರ ಮಾಡ್ತಿದೆ. ಸರ್ಕಾರ ಅಂತ ಹೇಳಬೇಕಾ ಅಂತ ಅನುಮಾನ ಬಂದಿದೆ. ಸರ್ಕಾರ ಅಂದರೆ ಕಾನೂನು, ಸಂವಿಧಾನ ಎಲ್ಲ ಇರಬೇಕು. ನಿನ್ನೆ ಸಭೆ ಇದೆ ಅಂತ ಫೋನ್ ಮಾಡಿದ್ರು. ಇವತ್ತು ಬೆಳಗ್ಗೆ 12 ಗಂಟೆಗೆ ಅಜೆಂಡಾ ಕೊಟ್ಟರು. ಸಂಜೆ 4 ಗಂಟೆಗೆ ಮೀಟಿಂಗ್ ಅಂತ ಹೇಳಿದ್ದಾರೆ. ಸಭೆ ಮಾಡಬೇಕಾದ್ರೆ 7 ದಿನ ಮುಂಚೆ ನೊಟೀಸ್ ಕೊಡಬೇಕು ಎಂದಿದ್ದಾರೆ.

    ಅಧಿವೇಶನದಲ್ಲಿ ಬಿಲ್ ಕೊಡಬೇಕಾದ್ರೆ ಮೊದಲು ಕೊಡ್ತಾರೆ. ಜಿಬಿಎ ಅಜೆಂಡಾ ಓದೋಕೆ ಆಗೊಲ್ಲ. 12 ಗಂಟೆಗೆ ಅಜೆಂಡಾ ಕೊಟ್ಟಿದ್ದಾರೆ. ಹೇಗೆ ನಾವು ಓದೋದು? ನೋಟಿಸ್ ಕೊಟ್ಟಿರೋದು ನಮಗೆ ಗೊತ್ತಿಲ್ಲ. ಇವರ ಯೋಗ್ಯತೆ ಏನು ಅಂತ ಗೊತ್ತಾಗ್ತಿದೆ. ಇವರಿಗೆ ಜವಾಬ್ದಾರಿ ಇದೆಯಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ, GBA ಚುನಾವಣೆಗೆ ತಯಾರಿ ಎಲ್ಲಿ?: ಸರ್ಕಾರಕ್ಕೆ ವಿಜಯೇಂದ್ರ ಪ್ರಶ್ನೆ

  • ವಿಪಕ್ಷ ನಾಯಕ ಆರ್‌.ಅಶೋಕ್‌ ಎಸ್ಕಾರ್ಟ್ ವಾಹನ ಚಾಲಕ‌ ಆತ್ಮಹತ್ಯೆ

    ವಿಪಕ್ಷ ನಾಯಕ ಆರ್‌.ಅಶೋಕ್‌ ಎಸ್ಕಾರ್ಟ್ ವಾಹನ ಚಾಲಕ‌ ಆತ್ಮಹತ್ಯೆ

    ಬೆಂಗಳೂರು: ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ಅವರ ಪೊಲೀಸ್‌ ಎಸ್ಕಾರ್ಟ್‌ ವಾಹನ ಚಾಲಕ (Escort Driver) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಶರಣಪ್ಪ ರಾಮಗೋಳ್ ಆತ್ಮಹತ್ಯೆಗೆ ಶರಣಾದ ಪೊಲೀಸ್‌ ಪೇದೆ. ಇಲ್ಲಿನ ಬಾಪೂಜಿನಗರದ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದ ಬಳಿಕ ಬ್ಯಾಟರಾಯನಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜೈಲಲ್ಲಿ ರೌಡಿಶೀಟರ್ ಬರ್ತ್‌ಡೇ; 7 ಅಧಿಕಾರಿಗಳು ಸಸ್ಪೆಂಡ್

    ಮೃತ ಶರಣಪ್ಪ ಯಾರು?
    ಕಲಬರುಗಿ ಮೂಲದ ಪೇದೆ ಶರಣಪ್ಪ ರಾಮಗೋಳ್ ಬ್ಯಾಟರಾಯನಪುರದ ಕವಿಕಾ ಲೇಔಟ್ ನಲ್ಲಿ ಪತ್ನಿ, ಮಕ್ಕಳು ಹಾಗೂ ಸಹೋದರನ ಜೊತೆ ವಾಸವಿದ್ದರು. ಸಿಎಆರ್‌ನಲ್ಲಿ ಮುಖ್ಯಪೇದೆ ಆಗಿದ್ದ ಶರಣಪ್ಪ, ಕಳೆದ 5 ವರ್ಷದಿಂದ ಆರ್.ಅಶೋಕ್‌ ಅವರ ಎಸ್ಕಾರ್ಟ್ ವಾಹನದ ಚಾಲಕರಾಗಿದ್ದರು. ಮೃತರಿಗೆ ಕ್ರಮವಾಗಿ 2, 4 ವರ್ಷದ 2 ಮಕ್ಕಳಿದ್ದಾರೆ.

    ಇಂದು ಪತ್ನಿ ಕೆಲಸಕ್ಕೆ ಹೋಗಿದ್ದು, ಮಕ್ಕಳನ್ನು ಕಲಬುರಗಿಗೆ ಕಳಿಸಿದ್ರು. ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಶರಣಪ್ಪ. ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಳೆ ಬೆಳಗ್ಗೆ ಪೋಸ್ಟ್ ಮಾರ್ಟಂ ನಡೆಯಲಿದೆ. ಅತ್ತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ:  ಬಿಗ್‌ ಬಾಸ್‌ ತಂಡಕ್ಕೆ ಮತ್ತೆ ಶಾಕ್‌ – ಕೆಲವೇ ಹೊತ್ತಲ್ಲಿ ಈಗಲ್‌ಟನ್ ರೆಸಾರ್ಟ್‌ನಿಂದ 17 ಸ್ಪರ್ಧಿಗಳು ಶಿಫ್ಟ್ ಬೇರೆಡೆಗೆ ಶಿಫ್ಟ್‌

  • ನವೆಂಬರ್-ಡಿಸೆಂಬರ್ ಒಳಗೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ: ಆರ್.ಅಶೋಕ್ ಭವಿಷ್ಯ

    ನವೆಂಬರ್-ಡಿಸೆಂಬರ್ ಒಳಗೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ: ಆರ್.ಅಶೋಕ್ ಭವಿಷ್ಯ

    ಬೆಳಗಾವಿ: ನವೆಂಬರ್-ಡಿಸೆಂಬರ್ ಒಳಗೆ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಜ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಭವಿಷ್ಯ ನುಡಿದಿದ್ದಾರೆ.

    ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ನವೆಬರ್, ಡಿಸೆಂಬರ್ ತಿಂಗಳಲ್ಲಿ ಕಾಂತ್ರಿ ಅಂತ ಹೇಳಿ ಒಬ್ಬರು ಸಚಿವರು ಈಗ ಮನೆಗೆ ಹೋಗಿದ್ದಾರೆ‌. ಒಪ್ಪಂದ ಆಗಿರೋದು ನಿಜ. ಈಗ ಜಗಳ ಆರಂಭವಾಗಿದೆ‌ ಎಂದು ಲೇವಡಿ ಮಾಡಿದ್ದಾರೆ.

    ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಡಿಕೆಶಿ ಹಠ ಬಿಡ್ತಿಲ್ಲ. ಕಾಂಗ್ರೆಸ್ ಜಗಳದಲ್ಲಿ ಸರ್ಕಾರ ಪತನವಾದ್ರೆ ನಾವೇನೂ ಸರ್ಕಾರ ಮಾಡಲ್ಲ. ನಾವು ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ‌ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಂಎಂ ಹಿಲ್ಸ್‌ನಲ್ಲಿ ಮತ್ತೊಂದು ಹುಲಿ ಹತ್ಯೆ; ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ

    ಕಾಂಗ್ರೆಸ್ ಶಾಸಕರೇ ಅನುದಾನ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಹಳ್ಳ ಇಲ್ಲದೇ ರಸ್ತೆ ತೋರಿಸಿದ್ರೆ ಬಹುಮಾನ ಕೊಡಬಹುದು ಎಂದು ಸಿದ್ದರಾಮಯ್ಯ ಸರ್ಕಾರದ ವಿದುದ್ಧ ವ್ಯಂಗ್ಯವಾಡಿದ್ದಾರೆ.

    ಮಳೆ ಹಾನಿ ಮತ್ತು ಬೆಳೆ ಹಾನಿ ವೀಕ್ಷಣೆಗೆ ಬಂದ ಬಿಜೆಪಿ ನಿಯೋಗ ಅತಿವೃಷ್ಟಿಯಿಂದ ಹಾಳಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವ ಕೆಲಸ ಮಾಡಿತು. ಬೆಳಗಾವಿಯಲ್ಲಿ ಬಿಜೆಪಿ ನಾಯಕರಿಂದ ಅತಿವೃಷ್ಟಿ ಪ್ರದೇಶ ವೀಕ್ಷಣೆ ಮಾಡಲಾಯ್ತು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಎಂಎಲ್ಸಿಗಳಾದ ಸಿಟಿ ರವಿ, ಎನ್ ರವಿಕುಮಾರ್, ಸಂಸದ ರಮೇಶ್ ಜಿಗಜಿಣಗಿ ನೇತೃತ್ವದ ತಂಡದಿಂದ ಪರಿಶೀಲನೆ ಮಾಡಲಾಯ್ತು.

    ಈರಣ್ಣಗೌಡ ಮೀಸಿಪಾಟೀಲ್ ಎಂಬವರ ಜಮೀನಿಗೆ ಆಗಮಿಸಿದ ನಿಯೋಗ ಗದ್ದೆಯಲ್ಲಿ ಹಾಳಾದ ಗಜ್ಜರಿ ಬೆಳೆ ಹಾನಿ ಕುರಿತು ರೈತರಿಂದ ಮಾಹಿತಿಯನ್ನು ಪಡೆಯಿತು. ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ನಾಯಕರಿಗೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ‌ ಸಾಥ್ ನೀಡಿದರು. ರೈತರ ಜಮೀನಿಗೆ ಭೇಟಿ ನೀಡಿದರೂ ಸಹ ಪರಿಸ್ಥಿತಿ ಅವಲೋಕಿಸದೆ ರಮೇಶ್ ಜಾರಕಿಹೊಳಿ‌ ತೆರಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಆಧುನಿಕ ರಾವಣ, ಶೀಘ್ರವೇ ಅವರ ಲಂಕಾದಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ: ಕಾಂಗ್ರೆಸ್‌ ನಾಯಕ

  • ಬಿಡದಿ ಟೌನ್‌ಶಿಪ್ ಜಟಾಪಟಿ – ಡಿಕೆಶಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ

    ಬಿಡದಿ ಟೌನ್‌ಶಿಪ್ ಜಟಾಪಟಿ – ಡಿಕೆಶಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ

    -ರಿಯಲ್ ಎಸ್ಟೇಟ್ ದಂಧೆಗಾಗಿ ರೈತ ವಿರೋಧಿ ಯೋಜನೆ ಎಂದು ಕಿಡಿ

    ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi Township) ವಿರುದ್ಧ ಜೆಡಿಎಸ್ (JDS) ಹೋರಾಟ ಬೆನ್ನಲ್ಲೇ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಟೌನ್‌ಶಿಪ್ ವಿಚಾರದಲ್ಲಿ ಬಿಜೆಪಿ ನಾಯಕರು ಡಿಕೆಶಿ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಬಿಡದಿ ಟೌನ್‌ಶಿಪ್‌ಗೆ ಪ್ರಾಥಮಿಕ ನೋಟಿಫಿಕೇಷನ್ ಹೊರಡಿಸಿದ್ದೇ ಡಿಕೆಶಿ. ಈಗ ಗೊಂದಲ ಮೂಡಿಸುವ ಹೇಳಿಕೆ ಕೊಡ್ತಿರೋದು ಸರಿಯಲ್ಲ. ಡಿಕೆಶಿಯವರು ಇದರಲ್ಲಿ ಎಷ್ಟು ಹಣ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ನಮಗೆ ಮುಖ್ಯ ಅಲ್ಲ. ಆದ್ರೆ ಬೇಡಿಕೆ ಆಧರಿಸಿ ಮುಂದುವರೆಯಿರಿ, ಯಾವ ಕಂಪೆನಿಗಳು ಭೂಮಿ ಕೇಳಿದ್ದಾರೆ? ಎಷ್ಟು ಕೃಷಿ ಭೂಮಿ ಬೇಕು? ಪರಿಹಾರ ಎಷ್ಟು ಕೊಡುತ್ತೀರಿ? ಇದೆಲ್ಲದರ ಸ್ಪಷ್ಟತೆ ಕೊಡಿ ಮೊದಲು ಎಂದು ಡಿಕೆಶಿಗೆ ಕೌಂಟರ್ ಕೊಟ್ಟರು. ಇದನ್ನೂ ಓದಿ: ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ 3,000 ಕೋಟಿ ಪ್ರವಾಹ ಪರಿಹಾರ ನೀಡಬೇಕು – ಅಶೋಕ್ ಆಗ್ರಹ

    ರೈತರು ಟೌನ್‌ಶಿಪ್ ಮಾಡಬೇಡಿ ಅಂತ ಹೇಳುತ್ತಿಲ್ಲ. ಎಲ್ಲಿ ಅಗತ್ಯ ಇದೆಯೋ ಅಲ್ಲಿ ಮಾಡಬೇಕು. ಜವಾಬ್ದಾರಿಯಿಂದ ಎಷ್ಟು ಬೇಕೋ ಅಷ್ಟೇ ಭೂಸ್ವಾಧೀನ ಮಾಡಿ. ಸೂಕ್ತ ಪರಿಹಾರ ಕೊಡಿ. ಯಾರೋ ಕೆಲವರ ಅನುಕೂಲಕ್ಕಾಗಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಬೇಡ ಎಂದು ಕಿಡಿಕಾರಿದರು.  ರಿಯಲ್ ಎಸ್ಟೇಟ್ ದಂಧೆ ಮಾಡೋದು, ಕೃಷಿ ಭೂಮಿ ಸ್ವಾಧೀನ ಮಾಡೋದು, ಇದೇನಾ ಸರ್ಕಾರ ನಡೆಸುವ ರೀತಿ? ವ್ಯಾಪಾರ, ಹಣ, ಲಾಭ, ಅವರ ಅನುಕೂಲಕ್ಕೆ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದಸರಾ ಆನೆ ಬಳಿ ರೀಲ್ಸ್‌ ನಿಷೇಧ, ಕಮಾಂಡೋ ಕಾವಲು: ಈಶ್ವರ್ ಖಂಡ್ರೆ

    ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, 2009ರಲ್ಲಿ ಬಿಜೆಪಿ ಅವಧಿಯಲ್ಲಿ ಬಿಡದಿ ಟೌನ್‌ಶಿಪ್ ಪ್ರಾಜೆಕ್ಟ್ ಕೈಬಿಟ್ಟಿದ್ದೆವು. ರೈತರಿಗೆ ಸಮಸ್ಯೆ ಆಗುತ್ತೆ ಅನ್ನೋ ಕಾರಣಕ್ಕೆ ಯೋಜನೆ ಕೈಬಿಟ್ಟಿದ್ದೆವು. ನಮ್ಮ ಅವಧಿಯಲ್ಲಿ ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಆಗಿರಲಿಲ್ಲ, ಡಿಕೆಶಿ ಆರೋಪ ಸುಳ್ಳು. ಬಿಡದಿ ಟೌನ್‌ಶಿಪ್ ಸತ್ತು ಹೋಗಿದ್ದ ಪ್ರಾಜೆಕ್ಟ್. ಈಗ ಡಿಕೆಶಿ ಅವರು ರಿಯಲ್ ಎಸ್ಟೇಟ್ ದಂಧೆಗಾಗಿ ಯೋಜನೆಗೆ ಜೀವ ಕೊಟ್ಟಿದ್ದಾರೆ. ಯಾರಿಗೋಸ್ಕರ ಈ ಯೋಜನೆ, ಯಾರಿಗೆ ಸೈಟ್ ಹಂಚ್ತೀರ? ಡಿಕೆಶಿ ಹೇಳಲಿ. 20 ವರ್ಷಗಳ ಹಿಂದೆಯೇ ಈ ಪ್ರಾಜೆಕ್ಟ್ ಕೈಬಿಡಲಾಗಿತ್ತು. ನಾವು, ಜೆಡಿಎಸ್ ಇದ್ದಾಗ ಈ ಯೋಜನೆ ಮುಟ್ಟಿಲ್ಲ. ಈಗ ಡಿಕೆಶಿ ಯಾಕೆ ಈ ಯೋಜನೆಗೆ ಕೈಹಾಕಿದ್ದಾರೆ? ರಿಯಲ್ ಎಸ್ಟೇಟ್‌ಗಾಗಿ ಡಿಕೆಶಿ ಆಸಕ್ತಿ ತೋರುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: 1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ

  • ಕರೂರು ಕಾಲ್ತುಳಿದ ದುರಂತ | ಜನರ ಸಾವಿಗೆ ಡಿಎಂಕೆ ಸರ್ಕಾರ ನೇರ ಕಾರಣ: ಆರ್.ಅಶೋಕ್

    ಕರೂರು ಕಾಲ್ತುಳಿದ ದುರಂತ | ಜನರ ಸಾವಿಗೆ ಡಿಎಂಕೆ ಸರ್ಕಾರ ನೇರ ಕಾರಣ: ಆರ್.ಅಶೋಕ್

    ಬೆಂಗಳೂರು: ನಗರದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ದುರಂತದಲ್ಲಿ 11 ಜನ ಸಾವನ್ನಪ್ಪಿದ್ದರು. ಅದೇ ದೊಡ್ಡ ಆಘಾತವಾಗಿತ್ತು. ಈಗ ಕರೂರಿನಲ್ಲಿ (Karuru Stampede) ಅದಕ್ಕಿಂತಲೂ ದೊಡ್ಡ ದುರಂತವಾಗಿದೆ. ಕರೂರು ಕಾಲ್ತುಳಿದ ದುರಂತಕ್ಕೆ ಇಡೀ ದೇಶ ಬೆಚ್ಚಿಬಿದ್ದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಆತಂಕ ಹೊರಹಾಕಿದ್ದಾರೆ.

    ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ನಟ ವಿಜಯ್ (Thalapathy Vijay) ಕಾರ್ಯಕ್ರಮದಲ್ಲಿ ಕಾಲ್ತುಳಿತ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಇಂಥ ಘಟನೆ ದೇಶದ ಬೇರೆ ಕಡೆ ಎಲ್ಲೂ ಆಗಿಲ್ಲ. ದುರ್ಘಟನೆಯಲ್ಲಿ ಚಿಕ್ಕ ಮಕ್ಕಳೂ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಇಡೀ ದೇಶ ಬೆಚ್ಚಿಬಿದ್ದಿದೆ ಎಂದಿದ್ದಾರೆ. ಇದನ್ನೂ ಓದಿ: Explainer | ಕುಂಭಮೇಳದಿಂದ ತಮಿಳುನಾಡು ದುರಂತದವರೆಗೆ – ದೇಶದ ಪ್ರಮುಖ ಕಾಲ್ತುಳಿತ ದುರಂತಗಳ ಪಟ್ಟಿ ಇಲ್ಲಿದೆ

    ಕರೂರು ದುರಂತ ಸಾರ್ವಜನಿಕರಿಗೆ ದೊಡ್ಡ ದಿಗ್ಭ್ರಾಂತಿ ತಂದಿದೆ. ಡಿಎಂಕೆ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡು ವಿಜಯ್ ತಲೆಗೆ ಪ್ರಕರಣ ಕಟ್ಟುತ್ತಿದೆ. ಅವರು ಸ್ಥಳ ಕೇಳಿದ್ದೆಲ್ಲಿ? ಅಲ್ಲಿನ ಸರ್ಕಾರ ಅನುಮತಿ ಕೊಟ್ಟಿದ್ದೆಲ್ಲಿ? ವಿಜಯ್ ಬಂದು ರ‍್ಯಾಲಿ ಮಾಡಿದ್ರು ಹೋದ್ರು, ಅವರದ್ದೂ ತಪ್ಪಿದೆ. ವಿಜಯ್ ಕ್ಷಮೆ ಕೇಳಿಲ್ಲ, ಆಸ್ಪತ್ರೆಗೆ ಹೋಗಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪಾತ್ರವೇ ದೊಡ್ಡದು, ದುರಂತಕ್ಕೆ ರಾಜ್ಯ ಸರ್ಕಾರ ಕಾರಣ. ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಲ್ಲ. ಜನರ ಸಾವಿಗೆ ನೇರ ಕಾರಣ ಡಿಎಂಕೆ ಸರ್ಕಾರ. ಈ ದುರಂತ ಪ್ರಕರಣವನ್ನು ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Vijay Rally Stampede | 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ – ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಬೆಂಗ್ಳೂರಿನ ಪ್ರತ್ಯಕ್ಷದರ್ಶಿ

  • ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ: ಅಶೋಕ್‌ ಕಿಡಿ

    ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ: ಅಶೋಕ್‌ ಕಿಡಿ

    – ಹಿಂದೂಗಳನ್ನು ಒಡೆಯವುದು ಕಾಂಗ್ರೆಸ್‌ ಅಜೆಂಡಾ
    – ಕಾಂಗ್ರೆಸ್ ಸಚಿವರು, ಶಾಸಕರನ್ನು ಸಮುದಾಯಗಳು ಕ್ಷಮಿಸಲ್ಲ

    ಬೆಂಗಳೂರು: ಸಾಮಾಜಿಕ ಆರ್ಥಿಕ ಸಮೀಕ್ಷೆ ಅಂದ ಮೇಲೆ ಜಾತಿ ಉಪ ಜಾತಿ ಇನ್ನೊಂದು ಜಾತಿ (Caste) ಎಂದು ಯಾಕೆ ಕೇಳಲಾಗುತ್ತಿದೆ? ಸೋನಿಯಾ ಗಾಂಧಿ (Sonia Gandhi) ಮಾರ್ಗದರ್ಶನ ಮೇರೆಗೆ ಈ ಜಾತಿ ಗಣತಿ ನಡೆಸಲಾಗುತ್ತಿದೆ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಗಾಂಧಿ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ (Siddaramaiah) ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ (R Ashok) ಕಿಡಿಕಾರಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಿಗೆ ಸ್ಪಷ್ಟತೆಯೇ ಇಲ್ಲ. ಜಾತಿ ತೆಗೆದಿದ್ದೇವೆ ಅಂತಾರೆ, ಕೆಲವು ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ. ತೆಗೆದಿರುವ ಜಾತಿಗಳ ಹೆಸರು ಹೇಳಿದರೂ ಬರೆದುಕೊಳ್ಳುತ್ತೇವೆ ಎಂದಿದ್ದಾರೆ. ಈ ಗೊಂದಲ ಯಾಕೆ ಮೂಡಿಸಬೇಕು. ವಿವಿಧ ಜಾತಿ ಸಮುದಾಯಗಳಿಗೆ ಸಮೀಕ್ಷೆಯಿಂದ ಅಪಮಾನ ಅಗುತ್ತಿದೆ ಎಂದು ದೂರಿದರು.

    ಸಚಿವರಿಗೆ ಗೌರವ ಇದ್ದರೆ ಸಂಪುಟ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕು. ಸಮುದಾಯಗಳು ಕಾಂಗ್ರೆಸ್ ಸಚಿವರು, ಶಾಸಕರನ್ನು ಕ್ಷಮಿಸುವುದಿಲ್ಲ. ಈ ಸಮೀಕ್ಷೆಯ ಹಿಂದೆ ಕ್ರೈಸ್ತ ಮಿಷನರಿಗಳ (Christian Missionaries) ಕೈವಾಡವಿದೆ ಎಂದು ದೂರಿದರು.

     

    ಸರ್ಕಾರ ಸಮೀಕ್ಷೆ ಹೆಸರಲ್ಲಿ ಹಿಂದೂ ಧರ್ಮ ಒಡೆಯುವ, ಅವಹೇಳನ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಜೆಂಡಾದಲ್ಲೇ ಹಿಂದೂ ವಿರೋಧಿ ನೀತಿಯಿದೆ. ಹೊಸದಾಗಿ 52 ಜಾತಿಗಳನ್ನು ಸೇರಿಸಿ ಗೊಂದಲ ಮಾಡಿದ್ದರು. ಎಲ್ಲದರ ಮುಂದೆ ಕ್ರಿಶ್ಚಿಯನ್ ಹೆಸರು ತಂದಿದ್ದಾರೆ. ಹೊಸ ಜಾತಿಯನ್ನು ಸೃಷ್ಟಿಸಿದ್ದು ಹೇಗೆ? ಸಿದ್ದರಾಮಯ್ಯನವರಿಗೆ ಅಧಿಕಾರ ಹೋಗುವ ಆತಂಕ ಇರುವ ಕಾರಣ ಸೋನಿಯಾ ಗಾಂಧಿಯವರನ್ನು ಓಲೈಸಲು ಕ್ರಿಶ್ಚಿಯನ್ ಹೆಸರು ತಳುಕು ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

    ಇನ್ನೆರಡು ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲಿದೆ. ನಂತರ ಅವರ ಈ ಸಮೀಕ್ಷೆಯನ್ನು ಕೇಳುವವರು ಯಾರೂ ಇರುವುದಿಲ್ಲ. ಈಗ ಸಿದ್ದರಾಮಯ್ಯ ಏನು ಮಾಡಲು ಹೊರಟಿದ್ದಾರೋ ಇದು ಅಧಿಕೃತ ಅಲ್ಲ. ಈ ಸಮೀಕ್ಷೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಇದು ಇದು ಅಸಾಂವಿಧಾನಿಕ ಸಮೀಕ್ಷೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ಇದು ರಾಜಕಾರಣದ ಓಲೈಕೆಗಾಗಿ ಮಾಡುತ್ತಿರುವ ಸಮೀಕ್ಷೆಯಾಗಿದ್ದು ಈ ಸಮೀಕ್ಷೆಯಿಂದ ಯಾವುದೇ ಜಾತಿಗೂ ನ್ಯಾಯ ಸಿಗುವುದಿಲ್ಲ. ಲಿಂಗಾಯತ ಧರ್ಮ ಒಡೆಯುವ ಸಂಚು ಮಾಡಿದ್ದ ತಂಡವೇ ಈಗ ಹಿಂದೂ ಧರ್ಮ ಒಡೆಯಲು ಹೊರಟಿದೆ. ಇದು ಧರ್ಮ ಒಡೆಯುವ ಸಮೀಕ್ಷೆ ಎಂದರು.

    ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಿಸಿ ಹಿಂದೂಗಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರ ಹೊರಟಿದೆ. ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಧರ್ಮ ಒಡೆಯಲು ರಾಜ್ಯವನ್ನು ಪ್ರಯೋಗ ಶಾಲೆಯಾಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಹೆಡ್ ಮಾಸ್ಟರ್. ಒಂದೊಂದೇ ರಾಜ್ಯದಲ್ಲಿ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಈಗಾಗಲೇ ಗಣೇಶ ಹಬ್ಬದಲ್ಲಿ ನಿರ್ಬಂಧ ಹಾಕಿದ್ದರು. ಮುಂದಿನ ಸಲ ಗಣೇಶ ಹಬ್ಬವೇ ಇಲ್ಲ ಎನ್ನುತ್ತಾರೆ. ಹಿಂದೂಗಳ ಸಂಖ್ಯೆ ಕಡಿಮೆ ಮಾಡೋದು, ದೇವಸ್ಥಾನಗಳ ಮಲಿನ ಮಾಡೋದು, ಮತಾತಂತರ ಹೆಚ್ಚಿಸುವುದು ಈ ಮೂರು ಕಾಂಗ್ರೆಸ್‌ ಅಜೆಂಡಾ. ಹೆಡ್ ಲೈನ್ನಲ್ಲಿ ರಾಮಾಯಣ, ಒಳಗೆಲ್ಲ ಇಸ್ಲಾಂ ಬಗ್ಗೆ ಮಾಹಿತಿ ಈ ರೀತಿಯ ಸಮೀಕ್ಷೆ ಇದು ಎಂದರು.

    ಕಾಂತರಾಜ್ ಆಯೋಗಕ್ಕೆ 180 ಕೋಟಿ ರೂ. ನೀಡಿ ನುಂಗಿದ್ದೀರಿ. ಆ ಹಣ ಎಲ್ಲಿ ಹೋಯ್ತು? ಈಗ 425 ಕೋಟಿ ರೂ. ಖರ್ಚು ಮಾಡಲು ಹೊರಟಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ಸಮೀಕ್ಷೆ ಎಂದು ಪ್ರಶ್ನಿಸಿದರು.

  • ಹಿಂದೂಗಳೆಂದರೆ ಯಾಕಿಷ್ಟು ದ್ವೇಷ, ತಾತ್ಸಾರ ಸಿದ್ದರಾಮಯ್ಯನವರೇ? – ಅಶೋಕ್ ಕಿಡಿ

    ಹಿಂದೂಗಳೆಂದರೆ ಯಾಕಿಷ್ಟು ದ್ವೇಷ, ತಾತ್ಸಾರ ಸಿದ್ದರಾಮಯ್ಯನವರೇ? – ಅಶೋಕ್ ಕಿಡಿ

    ಬೆಂಗಳೂರು: ಹಿಂದೂಗಳೆಂದರೆ ತಮಗೆ ಯಾಕಿಷ್ಟು ದ್ವೇಷ, ತಾತ್ಸಾರ ಸಿದ್ದರಾಮಯ್ಯನವರೇ? ರಾಹುಲ್ ಗಾಂಧಿ (Rahul Gandhi) ಅವರ ಸಂವಿಧಾನ ಪುಸ್ತಕದಲ್ಲಿ ಹಿಂದೂಗಳು ಎರಡನೇ ದರ್ಜೆ ಪ್ರಜೆಗಳಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಕಿಡಿಕಾರಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಹಿಂದೂಗಳ ದೇವಸ್ಥಾನ, ಹಬ್ಬ, ಆಚರಣೆಗಳಿಗೆ ಅಡಚಣೆ ಉಂಟು ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಅದೆಂತಹ ವಿಕೃತ ಸಂತೋಷ ಸಿಗುತ್ತೋ ಗೊತ್ತಿಲ್ಲ. ತಾಯಿ ಚಾಮುಂಡೇಶ್ವರಿ, ತಾಯಿ ಭುವನೇಶ್ವರಿ, ನಮ್ಮ ಸಂಸ್ಕೃತಿಯ ಪ್ರತೀಕವಾದ ಅರಶಿಣ, ಕುಂಕುಮದ ಮೇಲೆ ನಂಬಿಕೆ ಇಲ್ಲದ ಅನ್ಯಧರ್ಮೀಯರಿಂದ ದಸರಾ ಉದ್ಘಾಟನೆ ಮಾಡಿಸುವ ಹಠ ಸಾಧಿಸಿದ್ದಾಯಿತು. ದುಬಾರಿ ಪಾಸ್ ನೆಪದಲ್ಲಿ ಜನಸಾಮಾನ್ಯರಿಗೆ ದಸರಾ ವೀಕ್ಷಣೆ ಕಷ್ಟಸಾಧ್ಯ ಮಾಡಿದ್ದಾಯ್ತು. ಈಗ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ 14 ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡುವ ಮೂಲಕ ಹಿಂದೂಗಳಿಗೆ ಮತ್ತೊಂದು ಪೆಟ್ಟು ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚಿನ್ನಯ್ಯನ ಜೊತೆ ಮಾತನಾಡಿದ್ದ ಪಾರ್ಟ್-2 ವಿಡಿಯೋ ರಿಲೀಸ್ – ಆರೋಪದಿಂದ ಪಾರಾಗಲು ಬುರುಡೆ ಗ್ಯಾಂಗ್‌ ಪ್ಲ್ಯಾನ್‌?

    ಕಳೆದ ಎರಡೂವರೆ ವರ್ಷಗಳಿಂದ ಡೆಡ್‌ಲೈನ್ ಮೇಲೆ ಡೆಡ್‌ಲೈನ್ ಕೊಟ್ಟರೂ ಅಧಿಕಾರಿಗಳ ಕೈಯಲ್ಲಿ ರಸ್ತೆಗುಂಡಿ ಮುಚ್ಚಿಸಲು ವಿಫಲವಾಗಿರುವ ತಾವು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಯಾವಾಗ ಡಿಸಿಎಂ ಡಿಕೆಶಿವಕುಮಾರ್ (DK Shivakumar) ಅವರೇ? ಎಂದು ಬೆಂಗಳೂರು ಗುಂಡಿ ಸಮಸ್ಯೆ ವಿಚಾರವಾಗಿ ಡಿಸಿಎಂ ಡಿಕೆಶಿ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ – ರಾಯಚೂರಲ್ಲಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ