ಬೆಳಗಾವಿ: ಸಂತಿ ಬಸ್ತವಾಡ ಗ್ರಾಮದ ಕುರಾನ್ (Quran) ಸುಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಸ್ಲಿಮರು ನಡೆಸಿದ ಪ್ರತಿಭಟನೆಯಲ್ಲಿ (Protest) ಪೊಲೀಸರ (Police) ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದಾರೆ.
ಚಪ್ಪಲಿ ಮೈಮೇಲೆ ಬಿದ್ದರೂ ಬಂದೋಬಸ್ತ್‌ನಲ್ಲಿ ತೊಡಗಿದ್ದ ಗಡ್ಡೇಕರ್ ತಮ್ಮ ಕರ್ತವ್ಯವನ್ನು ಮುಂದುವರೆಸಿದ್ದಾರೆ. ನೂರಾರು ಜನ ಸೇರಿದ ಪ್ರತಿಭಟನಾ ರ‍್ಯಾಲಿಯಲ್ಲಿ ಚಪ್ಪಲಿ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಬೆಳಗಾವಿ ಪೊಲೀಸರು ಆರೋಪಿಗಳ ಬಂಧನಕ್ಕೆ ಮೂರು ದಿನ ಸಮಯ ಕೇಳಿದ್ದರು. ಮೂರು ದಿನವಾದರೂ ಆರೋಪಿಗಳ ಬಂಧಿಸದ ಹಿನ್ನೆಲೆ ಮುಸ್ಲಿಮ್ ಸಮುದಾಯ ಒಗ್ಗಟ್ಟು ಪ್ರದರ್ಶನ ಮಾಡಿ ಪ್ರತಿಭಟಿಸಿತು.
ಸ್ಟಾಕ್‌ಹೋಮ್: 2023 ರಲ್ಲಿ ಸ್ವೀಡನ್‌ನಲ್ಲಿ (Sweden) ಕುರಾನ್ (Quran) ಅನ್ನು ಸುಟ್ಟುಹಾಕಿದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಹಲವಾರು ಪ್ರತಿಭಟನೆಗಳಲ್ಲಿ ಕುರಾನ್ ಪ್ರತಿಗಳನ್ನು ಸುಟ್ಟುಹಾಕಿದ ಕ್ರಿಶ್ಚಿಯನ್ ಇರಾಕಿ ಸಲ್ವಾನ್ ಮೊಮಿಕಾ, ಜನಾಂಗೀಯ ದ್ವೇಷವನ್ನು ಪ್ರಚೋದಿಸಿದ ಆರೋಪದಲ್ಲಿ ತಪ್ಪಿತಸ್ಥನೇ ಎಂದು ಸ್ಟಾಕ್‌ಹೋಮ್ ನ್ಯಾಯಾಲಯ ಗುರುವಾರ ತೀರ್ಪು ನೀಡಬೇಕಿತ್ತು. ಇದನ್ನೂ ಓದಿ: ಚೀನಾ ಮತ್ಸ್ಯ ಕನ್ಯೆಯ ಮೇಲೆ ದೈತ್ಯ ಮೀನಿನ ದಾಳಿ!
ಈಗ ಸಲ್ವಾನ್ ಮೊಮಿಕಾ ಮೃತಪಟ್ಟಿರುವುದರಿಂದ ತೀರ್ಪನ್ನು ಫೆ.3ಕ್ಕೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ. ಮೊಮಿಕಾ ವಾಸಿಸುತ್ತಿದ್ದ ಸೊಡೆರ್ಟಾಲ್ಜೆ ನಗರದಲ್ಲಿ ಗುಂಡಿನ ದಾಳಿ ನಡೆಯುವ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನದಲ್ಲಿರುವ (Afghanistan) ತಾಲಿಬಾನ್ (Taliban) ಆಡಳಿತವು ಅಫ್ಘಾನ್ ಮಹಿಳೆಯರ ಸ್ವಾತಂತ್ರ‍್ಯವನ್ನು ಮತ್ತಷ್ಟು ನಿರ್ಬಂಧಿಸುವ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಮಹಿಳೆಯರು ಪರಸ್ಪರರ ಉಪಸ್ಥಿತಿಯಲ್ಲಿ ಗಟ್ಟಿಯಾಗಿ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ. ಸದ್ಗುಣ ಪ್ರಚಾರ ಮತ್ತು ದುಷ್ಕೃತ್ಯಗಳ ತಡೆಗಟ್ಟಲು ಈ ಆದೇಶವನ್ನು ಹೊರಡಿಸಲಾಗುತ್ತಿದೆ ಎಂದು ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ (Mohammad Khalid Hanafi) ಹೇಳಿದ್ದಾರೆ.
ಈ ಆದೇಶವು ಮಹಿಳೆಯರು ಇತರ ಮಹಿಳೆಯರ ಬಳಿ ಇರುವಾಗ ಕುರಾನ್ (Quran) ಅನ್ನು ಶ್ರವ್ಯವಾಗಿ ಪಠಿಸುವುದನ್ನು ತಪ್ಪಿಸಬೇಕು ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಮಹಿಳೆಯ ಧ್ವನಿಯನ್ನು ಇಲ್ಲಿ ‘ಅವ್ರಾ’ ಎಂದು ಪರಿಗಣಿಸಲಾಗುತ್ತದೆ. ಒಬ್ಬ ಮಹಿಳೆಯ ಅವ್ರಾವನ್ನು ಇತರ ಮಹಿಳೆಯರು ಸಹ ಸಾರ್ವಜನಿಕವಾಗಿ ಕೇಳಬಾರದು ಎಂದು ಹೇಳುವ ಮೂಲಕ ಹನಾಫಿ ಈ ನಿರ್ಬಂಧವನ್ನು ಸಮರ್ಥಿಸಿದ್ದಾರೆ. ಇದನ್ನೂ ಓದಿ: ಬುಲೆಟ್ ಬೈಕ್ ಡಿವೈಡರ್‌ಗೆ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು
ಈ ಹೊಸ ನಿರ್ಬಂಧವು ಮಹಿಳೆಯರಲ್ಲಿ ಮುಕ್ತವಾಗಿ ಮಾತನಾಡುವ ಸಾಮರ್ಥ್ಯವನ್ನು ಪ್ರತಿಬಂಧಿಸಬಹುದೆಂದು ತಜ್ಞರು ಕಳವಳ ವ್ಯಕ್ತಪಸಿದ್ದಾರೆ. ಇದರಿಂದಾಗಿ ಮಹಿಳೆಯರು ಸಾರ್ವಜನಿಕ ಜೀವನದಿಂದ ಮತ್ತಷ್ಟು ದೂರ ಸರಿಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತೇರದಾಳದ 111 ಮಂದಿ ರೈತರಿಗೆ ವಕ್ಫ್ ನೋಟಿಸ್
2021ರಲ್ಲಿ ಅಧಿಕಾರಕ್ಕೆ ಮರಳಿದ ತಾಲಿಬಾನ್ ಅಫ್ಘಾನ್ ಮಹಿಳೆಯರ ಮೇಲೆ ಹಲವು ನಿರ್ಬಂಧ ಹೇರಿದೆ. ಮಹಿಳೆಯರು ಸಾರ್ವಜನಿಕವಾಗಿದ್ದಾಗ ಮುಖದ ಮುಸುಕು ಸೇರಿದಂತೆ ಸಂಪೂರ್ಣ ದೇಹ ಮುಚ್ಚುವಂತೆ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮನೆಯ ಹೊರಗೆ ಕೆಲಸ ಮಾಡಲು ಅನುಮತಿಸಲಾದ ಕೆಲವು ಅಫ್ಘಾನ್ ಮಹಿಳೆಯರು ಸಾರ್ವಜನಿಕವಾಗಿ, ವಿಶೇಷವಾಗಿ ಪುರುಷ ಸಂಬಂಧಿಕರೊಂದಿಗೆ ಮಾತನಾಡುವುದನ್ನು ನಿರ್ಬಂಧಿಸಲಾಗಿದೆ. ಕೆಲಸ ಮತ್ತು ಶಿಕ್ಷಣಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕುಟುಂಬದ ಗಂಡಸಿನ ಜೊತೆ ಇಲ್ಲದಂತೆ ಮಹಿಳೆ ಏಕಾಂಗಿಯಾಗಿ ಓಡಾಡುವಂತಿಲ್ಲ ಎಂಬ ನಿಯಮ ಹೇರಿದೆ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆದ ವ್ಯಕ್ತಿಯನ್ನೇ ನೋಡಿಲ್ಲ – ಮೋದಿಗೆ ಕೇಜ್ರಿವಾಲ್ ತಿರುಗೇಟು
– ಮುಸ್ಲಿಂ ಕಾನೂನನ್ನು ಪ್ರಶ್ನಿಸುವ ಯಾವುದನ್ನೂ ನಾವು ಸ್ವೀಕರಿಸಲ್ಲ ಎಂದ ಶಮೀನಾ
ನವದೆಹಲಿ: ನಮಗೆ ಕುರಾನ್ (Quran) ಧರ್ಮಗ್ರಂಥವೇ ಮೊದಲ ಸಂವಿಧಾನ ಎಂದು ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮಹಿಳಾ ಘಟಕದ ಅಧ್ಯಕ್ಷೆ ಶಮೀನಾ ಫಿರ್ದೋಸ್ ಹೇಳಿಕೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್‌ನ ತೀರ್ಪು ಒಳ್ಳೆಯದು. ಆದರೆ ವಿಚ್ಛೇದಿತ ಮಹಿಳೆ ಜೀವನಾಂಶ ಪಡೆಯುವ ಕಾನೂನು ಮೊದಲೇ ಇದೆ. ಇದು ಮುಸ್ಲಿಂ ಕಾನೂನು ಪ್ರಕಾರವೇ ಇದೆ. ಈಗಾಗಲೇ ಮುಸ್ಲಿಂ ಮಹಿಳೆಯರು ಜೀವನಾಂಶ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ನಾನು ಇಲ್ಲಿ ಇನ್ನೊಂದು ವಿಷಯ ಹೇಳುತ್ತೇನೆ. ನಮ್ಮ ಮುಸ್ಲಿಂ ಕಾನೂನನ್ನು ಪ್ರಶ್ನಿಸುವ ಯಾವುದನ್ನೂ ನಾವು ಸ್ವೀಕರಿಸುವುದಿಲ್ಲ. ಅಲ್ಲಾ ಕಳುಹಿಸಿರುವ ದೇವದೂತ ಬರೆದ ಕುರಾನ್‌ನ ಯಾವ ವಿಷಯವನ್ನೂ ನಾವು ಬದಲಿಸುವುದಿಲ್ಲ. ಆದರೆ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ – ಸಿಐಎಸ್‌ಎಫ್ ಅಧಿಕಾರಿಗೆ ಸ್ಪೈಸ್‌ಜೆಟ್ ಮಹಿಳಾ ಸಿಬ್ಬಂದಿಯಿಂದ ಕಪಾಳಮೋಕ್ಷ
ಇಸ್ಲಾಮಾಬಾದ್: ಮುಸ್ಲಿಮರ (Muslims) ಪವಿತ್ರ ಗ್ರಂಥ ಕುರಾನ್ ಅನ್ನು ಅಪವಿತ್ರಗೊಳಿದ್ದಾರೆಂದು ಆರೋಪಿಸಿ ಉದ್ರಿಕ್ತರ ಗುಂಪೊಂದು ಠಾಣೆಯಲ್ಲೇ ವ್ಯಕ್ತಿಯೊಬ್ಬನನ್ನ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಪಾಕಿಸ್ತಾನದಲ್ಲಿ (Pakistan) ನಡೆದಿದೆ.
ಪಾಕಿಸ್ತಾನದ ಪಂಜಾಬ್‌ನ ಸಿಯಾಲ್‌ಕೋಟ್ ಜಿಲ್ಲೆಯ ವ್ಯಕ್ತಿಯೊಬ್ಬ ತೆಹಸಿಲ್‌ನಲ್ಲಿ ಪವಿತ್ರ ಕುರಾನ್ (Quran) ಗ್ರಂಥದ ಕೆಲವು ಪುಟಗಳನ್ನು ಸುಟ್ಟು ಹಾಕಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಆದ್ರೆ ಉದ್ರಿಕ್ತರ ಗುಂಪು ಠಾಣೆ ಮುಂದೆ ಜಮಾಯಿಸಿ ಆತನನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದಿತ್ತು. ಒಪ್ಪಿಸಲು ಪೊಲೀಸರು ನಿರಾಕರಿಸಿದ ನಂತರ ಆರೋಪಿಯನ್ನ ಗುಂಡಿಕ್ಕಿ ಕೊಂದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಜಹಿದುಲ್ಲಾ ತಿಳಿಸಿದ್ದಾರೆ.
ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಕುರಾನ್ ಗ್ರಂಥವನ್ನು ಅವಹೇಳನ ಮಾಡಿದ್ದಕ್ಕೆ ಮತ್ತು ಕುರಾನ್ ಗ್ರಂಥದ ಕೆಲ ಪುಟಗಳನ್ನು ಸುಟ್ಟುಹಾಕಿದ ಆರೋಪದ ಮೇಲೆ ಸ್ವಾತ್ ತಾಲೂಕಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ಮಧ್ಯಾನ್ ಠಾಣೆಗೆ ಕರೆತಂದಿದ್ದರು. ಈ ಬೆನ್ನಲ್ಲೇ ಠಾಣೆ ಎದುರು ಜಮಾಯಿಸಿದ ನೂರಾರು ಜನರ ಉದ್ರಿಕ್ತರ ಗುಂಪು ಆರೋಪಿಯನ್ನು ತಮ್ಮ ಕೈಗೊಪ್ಪಿಸುವಂತೆ ಪಟ್ಟು ಹಿಡಿದಿದ್ದರು.
ಇದಕ್ಕೆ ಪೊಲೀಸರು ಒಪ್ಪದಿದ್ದ ನಂತರ ಜನರ ನಡುವೆ ಭಾರೀ ಘರ್ಷಣೆ ಉಂಟಾಗಿತ್ತು. ಬಳಿಕ ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ತಕ್ಷಣ ಮಧ್ಯಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ದರ್ಶನ್ ಬಳಿ 70 ಲಕ್ಷ ರೂ. ಪತ್ತೆ – ʻದಾಸʼನಿಗೆ ಕೊಲೆ ಆರೋಪದ ಜೊತೆಗೆ ಐಟಿ ಸಂಕಷ್ಟ!
ಇದರಿಂದ ಮತ್ತಷ್ಟು ಉದ್ರಿಕ್ತಗೊಂಡ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿತ್ತು. ಬಳಿಕ ಕೆಲವರು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದು ಆತನ ಮೃತದೇಹವನ್ನು ಹೊರಗೆಳೆದು ಅದನ್ನು ಮರಕ್ಕೆ ನೇತು ಹಾಕಿ ವಿಕೃತಿ ಮೆರೆದಿದೆ. ಘಟನೆಯಲ್ಲಿ 8 ಮಂದಿಗೆ ಗಂಭೀರ ಗಾಯಗಳಾಗಿವೆ, ಕೆಲ ಪೊಲೀಸರೂ ಗಾಯಗೊಂಡಿದ್ದಾರೆ ಎಂದು ಜಹೀದುಲ್ಲಾ ಹೇಳಿದ್ದಾರೆ.
ಲಾಹೋರ್: ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದಲ್ಲಿ ಕುರಾನ್ ಅಪವಿತ್ರಗೊಳಿಸಿದ್ದಾರೆ ಎನ್ನುವ ಆರೋಪದಡಿ ಇಸ್ಲಾಮಿಸ್ಟ್ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (TLP) ಗುಂಪೊಂದು ಕ್ರಿಶ್ಚಿಯನ್ ವೃದ್ಧರೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದ ಘಟನೆ ನಡೆದಿದೆ.
ಘಟನೆಯಿಂದ ಗಂಭೀರ ಗಾಯಗೊಂಡ ವೃದ್ಧ ಸಾವನ್ನಪ್ಪಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಧರ್ಮನಿಂದೆಯ ಕೃತ್ಯಗಳ ಆರೋಪ ಹೊತ್ತಿರುವ ಜನರನ್ನು ಮುಲಾಜಿಲ್ಲದೇ ಹತ್ಯೆ ಮಾಡುವ ಮೂಲಕ ಪಾಕ್‌ನಲ್ಲಿ ಇಸ್ಲಾಮಿಸ್ಟ್‌ಗಳು ಆಗಾಗ್ಗೆ ಕಾನೂನು ಕೈಗೆತ್ತಿಕೊಳ್ಳುತ್ತಾರೆ.
ಈ ಘಟನೆ ಲಾಹೋರ್‌ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಪಂಜಾಬ್‌ನ ಸರ್ಗೋಧಾ ಜಿಲ್ಲೆಯ ಮುಜಾಹಿದ್ ಕಾಲೋನಿಯಲ್ಲಿ ನಡೆದಿದೆ. TLP ನೇತೃತ್ವದ ಗುಂಪು ಕೆಲವು ಕ್ರಿಶ್ಚಿಯನ್ ಸಮುದಾಯದ ಸದಸ್ಯರ ಮೇಲೆ ದಾಳಿ ಮಾಡಿದೆ. ಇದರಿಂದ ಇಬ್ಬರು ಕ್ರಿಶ್ಚಿಯನ್ನರು ಹಾಗೂ 10 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಅಲ್ಲದೇ ಈ ಗುಂಪು ಕ್ರಿಶ್ಚಿಯನ್ನರಿಗೆ ಸೇರಿದ ಆಸ್ತಿಯನ್ನು ಸಹ ದೋಚಿದೆ ಎಂಬುದಾಗಿ ವರದಿಯಾಗಿದೆ.
ನಡೆದಿದ್ದೇನು..?: ಶನಿವಾರ ಬೆಳಗ್ಗೆ ಕೆಲವು ಯುವಕರು ಮುಜಾಹಿದ್ ಕಾಲೋನಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಹಿರಿಯ ವ್ಯಕ್ತಿ ನಜೀರ್ ಗಿಲ್ ಮಸಿಹ್ ಅಲಿಯಾಸ್ ಲಾಜರ್ ಮಸಿಹ್, ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬೆನ್ನಲ್ಲೇ TLP ನೇತೃತ್ವದ ಗುಂಪೊಂದು ನಜೀರ್ ಅವರ ನಿವಾಸ ಮತ್ತು ನಜೀರ್ ನೇತೃತ್ವದ ಇಂಡಸ್ಟ್ರಿ ಕಡೆಗೆ ಧಾವಿಸಿತ್ತು. ಅಲ್ಲದೇ ಏಕಾಏಕಿ ಶೂ ಫ್ಯಾಕ್ಟರಿ ಮತ್ತು ಅವರ ಮನೆಗೆ ಬೆಂಕಿ ಹಚ್ಚಿದೆ.
ಕ್ರಿಶ್ಚಿಯನ್ನರ ಒಡೆತನದ ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಿತು. ಇತ್ತ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಗುಂಪು ವೃದ್ಧನ ಮೇಲೆ ಮನಬಂದಂತೆ ಥಳಿಸಿದೆ. ಘಟನೆಯಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ನಜೀರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್ ಬಾರಿಸಿದ 7 ಸೆಕೆಂಡುಗಳಲ್ಲಿ ಹೃದಯಾಘಾತ – ಮೈದಾನದಲ್ಲೇ ಜೀವಬಿಟ್ಟ ಕ್ರಿಕೆಟಿಗ
ನಜೀರ್ ಸಾವನ್ನು ಅವರ ಸಂಬಂಧಿ ಇರ್ಫಾನ್ ಗಿಲ್ ಮಸಿಹ್ ಖಚಿತಪಡಿಸಿದ್ದಾರೆ. ತನ್ನ ಮಾವ 4 ವರ್ಷಗಳ ನಂತರ ದುಬೈನಿಂದ ಹಿಂದಿರುಗಿದ್ದಾರೆ. ಅವರ ಮೇಲೆ ಈಗ ಕುರಾನ್ ಅಪವಿತ್ರಗೊಳಿಸಿದ್ದಾರೆಂಬ ಸುಳ್ಳು ಆರೋಪ ಹೊರಿಸಲಾಯಿತು ಎಂದು ಗಿಲ್ ಹೇಳಿದರು. ಟಿಎಲ್‌ಪಿ ಗುಂಪು ಬರುವ ವಿಚಾರ ತಿಳಿಯುತ್ತಿದ್ದಂತೆಯೇ ಕ್ರಿಶ್ಚಿಯನ್ ಕುಟುಂಬಗಳು ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿಕೊಳ್ಳುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಕುರಾನ್‌ನ ಅಪವಿತ್ರೀಕರಣದ ಆರೋಪದ ಮೇಲೆ ಗುಂಪು ಕೆಲವು ಕ್ರೈಸ್ತರ ಮನೆಗಳನ್ನುಸುತ್ತುವರಿದಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಹಲವು ಪೊಲೀಸರ ತಂಡಗಳನ್ನು ನಿಯೋಜಿಸಬೇಕಾಯಿತು.
ಅಬುಧಾಬಿ: ಪವಿತ್ರ ಕುರಾನ್ (Quran) ಬೋಧನೆಗೆ ಪರವಾನಗಿ ಪಡೆಯದ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳನ್ನು ಯುಎಇ (UAE) ನಿಷೇಧಿಸಿದೆ. ಅಧಿಕಾರಿಗಳಿಂದ ಅಗತ್ಯ ಪರವಾನಗಿಯನ್ನು ಪಡೆಯದ ಹೊರತು ಯಾವುದೇ ಕೇಂದ್ರವನ್ನು ಸ್ಥಾಪಿಸುವುದು, ನಿರ್ವಹಿಸುವುದು ಅಥವಾ ಕುರಾನ್ ಬೋಧಿಸುವುದನ್ನು ನಿಷೇಧಿಸಲಾಗಿದೆ.
ಇಸ್ಲಾಮಿಕ್ ವ್ಯವಹಾರಗಳು, ದತ್ತಿಗಳು ಮತ್ತು ಝಕಾತ್‍ನ ಜನರಲ್ ಪ್ರಾಧಿಕಾರ (The General Authority for Islamic Affairs, Endowments, and Zakat) ಯುಎಇ ನಾಗರಿಕರು ಮತ್ತು ನಿವಾಸಿಗಳಿಗೆ ಜೂನ್ 2 ರಂದು ಈ ಬಗ್ಗೆ ಸಲಹೆ ನೀಡಿದೆ. ಸಲಹೆಯಲ್ಲಿ ಕುರಾನ್-ಬೋಧನಾ ಸೇವೆಗಳನ್ನು ನೀಡುವ ಪರವಾನಗಿರಹಿತ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳಿಂದ ಉಂಟಾಗುವ ಅಪಾಯಗಳನ್ನು ಒತ್ತಿ ಹೇಳಿದೆ. ಯುವ ಪೀಳಿಗೆಯನ್ನು ರಕ್ಷಿಸಲು ಧಾರ್ಮಿಕ ಶಿಕ್ಷಣದ ನಿಖರತೆ ಮತ್ತು ಸೂಕ್ತತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಇಸ್ಲಾಮಿಕ್ ವ್ಯವಹಾರಗಳ ಸಂಸ್ಥೆ ಹೇಳಿದೆ.
ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳ ಮೂಲಕ ಖುರಾನ್ ಬೋಧನಾ ಸೇವೆಗಳನ್ನು ನೀಡುತ್ತಿರುವ ಅನೇಕ ವ್ಯಕ್ತಿಗಳು ಅನರ್ಹರಾಗಿದ್ದಾರೆ. ಅವರು ಧಾರ್ಮಿಕ ಶಿಕ್ಷಣದ ಅರ್ಹತೆ ಹೊಂದಿರುವುದಿಲ್ಲ. ಇದು ತಪ್ಪಾದ ಬೋಧನೆ, ಪವಿತ್ರ ಪುಸ್ತಕದ ತಪ್ಪಾದ ವ್ಯಾಖ್ಯಾನ, ಇಸ್ಲಾಮಿಕ್ ಬೋಧನೆಗಳು ಮತ್ತು ತತ್ವಗಳ ಬಗ್ಗೆ ಸಂಭಾವ್ಯ ತಪ್ಪುಗ್ರಹಿಕೆಗೆ ಕಾರಣವಾಗಬಹುದು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಲ್ಲದೇ ಪ್ರಾಧಿಕಾರವು ಅನೇಕ ಪರವಾನಗಿ ಪಡೆಯದ ಜನರು ತರಗತಿಗಳನ್ನು ತೆಗೆದುಕೊಳ್ಳುವುದನ್ನು ಮೇಲ್ವಿಚಾರಣೆ ಮಾಡಿದೆ. ಪ್ರಚಾರದ ಜಾಹೀರಾತುಗಳೊಂದಿಗೆ ಜನರನ್ನು ಆಮಿಷವೊಡ್ಡುತ್ತದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಪ್ರಾಧಿಕಾರ ಹೇಳಿದೆ.
ಅನರ್ಹರು ಧಾರ್ಮಿಕ ಶಿಕ್ಷಣ ನೀಡುವುದನ್ನು ತಡೆಯಲು ಅನುಮಾನಾಸ್ಪದ ಅಥವಾ ಪರವಾನಗಿ ಇಲ್ಲದ ಬೋಧನಾ ಚಟುವಟಿಕೆಗಳ ಬಗ್ಗೆ ಮಾಹಿತಿ ಸಿಕ್ಕರೆ ಅಧಿಕಾರಿಗಳಿಗೆ ವರದಿ ಮಾಡಲು ತಿಳಿಸಲಾಗಿದೆ.
ಕಾನೂನಿನ (UAE law) ಪ್ರಕಾರ, ಪರವಾನಗಿಯನ್ನು ಪಡೆಯದೆ ಕುರಾನ್‍ನ್ನು ಬೋಧಿಸುವುದು ಕಂಡು ಬಂದಲ್ಲಿ, ಎರಡು ತಿಂಗಳಿಗಿಂತ ಕಡಿಮೆಯಿಲ್ಲದ ಅವಧಿಯವರೆಗೆ ಜೈಲು ಶಿಕ್ಷೆ ಮತ್ತು 50,000 ಡಿಹೆಚ್‍ಗಿಂತ ಹೆಚ್ಚಿನ ದಂಡವನ್ನು ಅಥವಾ ಈ ಎರಡರಲ್ಲಿ ಒಂದು ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಯಾರು ಕುರಾನ್ ಕಲಿಸಬಹುದು?
ಕುರಾನ್ ಬೋಧಕನ ವಯಸ್ಸು 21 ವರ್ಷಕ್ಕಿಂತ ಕಡಿಮೆಯಿರಬಾರದು. ಆತನಿಗೆ ಒಳ್ಳೆಯ ನಡತೆ ಇರಬೇಕು. ಯಾವುದೇ ಅಪರಾಧ ಕೃತ್ಯ ಮಾಡಿರಬಾರದು, ಶಿಕ್ಷೆಗೆ ಗುರಿಯಾಗಿರಬಾರದು. ಆರೋಗ್ಯದ ಫಿಟ್ನೆಸ್‍ನ್ನು ನೀಡಬೇಕು. ಅಗತ್ಯ ಅನುಭವ, ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದಲ್ಲಿ ಉತ್ತೀರ್ಣರಾಗಿರಬೇಕು. ಸಮರ್ಥ ಅಧಿಕಾರಿಗಳ ಅನುಮೋದನೆಯನ್ನು ಪಡೆಯಬೇಕು.
ಕುರಾನ್ ಕಲಿಸುವ ಉದ್ದೇಶಕ್ಕಾಗಿ ಕೇಂದ್ರ ಸ್ಥಾಪನೆಗೆ, ಕಾನೂನಿನ ಪ್ರಕಾರ ಪರವಾನಗಿ ಪಡೆಯಬೇಕು. ಕಟ್ಟಡವು ಕಾನೂನಿನ ಕಾರ್ಯನಿರ್ವಾಹಕ ನಿಯಮಗಳು ನಿರ್ದಿಷ್ಟಪಡಿಸಿದ ತಾಂತ್ರಿಕ ಮತ್ತು ಆರೋಗ್ಯ ಅಗತ್ಯತೆಗಳನ್ನು ಹೊಂದಿರಬೇಕು. ಸಂಪೂರ್ಣವಾಗಿ ಪ್ರತ್ಯೇಕವಾದ ಲಿಂಗ ತರಗತಿಗಳನ್ನು ಸ್ಥಾಪಿಸಬೇಕು. ಈ ಕಾನೂನಿನ ಕಾರ್ಯನಿರ್ವಾಹಕ ನಿಯಮಗಳಿಂದ ನಿರ್ದಿಷ್ಟಪಡಿಸಿದ ಚಟುವಟಿಕೆಗಳನ್ನು ಅಭ್ಯಾಸ ಮಾಡಲು ಸಭಾಂಗಣಗಳಿರಬೇಕು.
ಕೋಪನ್ ಹ್ಯಾಗನ್: ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ (Quran) ಪ್ರತಿಗಳನ್ನು ಸುಡುವುದನ್ನು ತಡೆಯುವ ಮಸೂದೆಗೆ ಡೆನ್ಮಾರ್ಕ್ (Denmark) ಸಂಸತ್ ಗುರುವಾರ ಅನುಮೋದನೆ ನೀಡಿದೆ.
ಇಸ್ಲಾಂ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಮೇಲೆ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಡ್ಯಾನಿಶ್ ಭದ್ರತಾ ವ್ಯವಸ್ಥೆಯಲ್ಲಿ ಆತಂಕ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕುರಾನ್ ಪ್ರತಿಗಳನ್ನು ಸುಡುವುದನ್ನು ಕಾನೂನುಬಾಹಿರಗೊಳಿಸುವ ಮಸೂದೆಯನ್ನು ಡೆನ್ಮಾರ್ಕ್ ಸಂಸತ್ತು ಗುರುವಾರ ಅಂಗೀಕರಿಸಿತು. ಇದನ್ನೂ ಓದಿ: ಪಾಕಿಸ್ತಾನದ ಮೃಗಾಲಯದಲ್ಲಿ ಹುಲಿಗೆ ಆಹಾರವಾದ ಪ್ರವಾಸಿಗ!
ಡೆನ್ಮಾರ್ಕ್ ಮತ್ತು ಸ್ವೀಡನ್ ಈ ವರ್ಷ ಸಾರ್ವಜನಿಕ ಪ್ರತಿಭಟನೆಗಳ ಪರಿಣಾಮ ಎದುರಿಸಿದವು. ಅಲ್ಲಿ ಇಸ್ಲಾಂ ವಿರೋಧಿ ಕಾರ್ಯಕರ್ತರು ಕುರಾನ್‌ನ ಪ್ರತಿಗಳನ್ನು ಸುಟ್ಟುಹಾಕಿದರು. ಇದರಿಂದ ಮುಸ್ಲಿಮರೊಂದಿಗೆ ಉದ್ವಿಗ್ನತೆ ಉಂಟಾಯಿತು. ಇಂತಹ ನಡವಳಿಕೆಗಳಿಗೆ ಕಡಿವಾಣ ಬೀಳಬೇಕು ಎಂದು ಪ್ರಬಲವಾಗಿ ಒತ್ತಾಯಿಸಲಾಯಿತು.
ಕುರಾನ್ ಪ್ರತಿಗಳನ್ನು ಸುಡುವುದು, ಧರ್ಮವನ್ನು ಟೀಕಿಸುವುದು ಸರಿಯಲ್ಲ. ಇಂತಹ ನಡವಳಿಕೆಗಳು ಈ ನೆಲದ ಉದಾರವಾದಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಸ್ವೀಡನ್ ಮತ್ತು ಡೆನ್ಮಾರ್ಕ್‌ನ ದೇಶೀಯ ವಿಮರ್ಶಕರು ವಾದಿಸಿದ್ದಾರೆ. ಇದನ್ನೂ ಓದಿ: ಚೀನಾಗೆ ಬಿಗ್ ಶಾಕ್ – ಮಹತ್ವಾಕಾಂಕ್ಷೆಯ BRI ಯೋಜನೆಯಿಂದ ಹೊರಬಂದ ಇಟಲಿ
ಈ ಹೊಸ ನಿಯಮಗಳು ವಾಕ್ ಸ್ವಾತಂತ್ರ್ಯದ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರುತ್ತದೆ. ಇತರ ರೀತಿಯಲ್ಲಿ ಧರ್ಮವನ್ನು ಟೀಕಿಸುವುದು ಕಾನೂನುಬದ್ಧವಾಗಿ ಉಳಿಯುತ್ತದೆ ಎಂದು ಡೆನ್ಮಾರ್ಕ್‌ನ ಕೇಂದ್ರೀಯ ಸಮ್ಮಿಶ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಆದಿಪುರುಷ (Adipurush) ಸಿನಿಮಾ ವಿಚಾರವಾಗಿ ಅಲಹಾಬಾದ್ (Allahabad) ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ. ಕೇವಲ ಆದಿಪುರುಷ ಸಿನಿಮಾ ಟೀಮ್ ಗೆ ಮಾತ್ರವಲ್ಲ, ಇತರ ಸಿನಿಮಾ ಮಾಡುವ ನಿರ್ದೇಶಕರಿಗೆ ಅದು ಕಿವಿಮಾತು ಹೇಳಿದೆ. ಸಿನಿಮಾ ಮಾಡುವವರು ಧಾರ್ಮಿಕ ವಿಚಾರಗಳಿಂದ ದೂರವಿರಿ ಎಂದು ಹೇಳಿದೆ.
ಆದಿಪುರುಷ ಸಿನಿಮಾದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ (High Court) ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಶ್ರೀ ಪ್ರಕಾಶ್ ಸಿಂಗ್ ಆದಿಪುರುಷ ಚಿತ್ರತಂಡವನ್ನು ತರಾಟೆಗೆ ತಗೆದುಕೊಂಡಿದ್ದಷ್ಟೇ ಅಲ್ಲ, ‘ನೀವು ಇದೇ ರೀತಿ ತಪ್ಪಾಗಿ ಕುರಾನ್ (Quran) ಬಗ್ಗೆ ಸಣ್ಣದೊಂದು ಡಾಕ್ಯೂಮೆಂಟರಿ ಮಾಡಿ ಮುಂದೇನಾಗತ್ತೆ ಅಂತ ನೋಡಿ’ ಎಂದು ಮೌಖಿಕವಾಗಿ ಕುಟುಕಿದರು. ಇದನ್ನೂ ಓದಿ:ಹಾಲಿವುಡ್ ಸಂದರ್ಶನದಲ್ಲಿ ಆಲಿಯಾ ಭಟ್ ಹೀಗಾ ಮಾಡೋದು- ರಣ್‌ಬೀರ್ ಪತ್ನಿ ಟ್ರೋಲ್
ಮುಂದುವರೆದು ಮಾತನಾಡಿದ ನ್ಯಾಯಾಧೀಶರು, ‘ಯಾವುದೇ ಧರ್ಮದ (Religious) ವಿಷಯಗಳನ್ನು ತಪ್ಪಾಗಿ ತೋರಿಸಬೇಡಿ. ಕೋರ್ಟಿಗೆ ಯಾವುದೇ ಧರ್ಮವಿಲ್ಲ. ಬೈಬಲ್ (Bible), ಕುರಾನ್ ಅಂತ ವಿಚಾರಗಳನ್ನೂ ತೆಗೆದುಕೊಳ್ಳಬೇಡಿ’ ಎಂದು ತಾಕೀತು ಮಾಡಿದರು. ಧಾರ್ಮಿಕ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡುವುದು ತಮಾಷೆ ವಿಷಯವಲ್ಲ. ಆದಿಪುರುಷ ಸಿನಿಮಾದ ನಿರ್ಮಾಪಕರು ನ್ಯಾಯಾಲಯಕ್ಕೆ ಹಾಜರಾಗಬೇಕು’ ಎಂದು ತಿಳಿಸಿದರು.
ಆದಿಪುರುಷ ಸಿನಿಮಾದ ವಿಚಾರವಾಗಿ ಈ ಚಿತ್ರವನ್ನು ನಿಷೇಧಿಸಬೇಕು ಎಂದು ಅಲಹಾಬಾದ್ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಧೀಶರು, ಸಿನಿಮಾ ಮತ್ತು ಧರ್ಮದ ಬಗ್ಗೆ ಸಾಕಷ್ಟು ಪಾಠಗಳನ್ನು ಮಾಡಿದರು. ಸೂಕ್ಷ್ಮ ವಿಷಯಗಳನ್ನು ಸಿನಿಮಾದಲ್ಲಿ ತರದಂತೆ ಮೌಖಿಕ ಆದೇಶ ಮಾಡಿದರು.