Tag: queue

  • ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ಲಂಡನ್: ಕ್ಯೂನಲ್ಲಿ ನಿಂತು ಕಾಯುವುದು ಎಂದರೆ ಎಲ್ಲರಿಗೂ ಕಷ್ಟ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಕ್ಯೂನಲ್ಲಿ ನಿಲ್ಲೊದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ. ಕ್ಯೂನಲ್ಲಿ ನಿಂತ್ರೆ ಸಾಕು ದಿನಕ್ಕೆ 16 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾನೆ. ವಿಚಿತ್ರ ಎನಿಸಿದರು ಇದು ಸತ್ಯ, ಹಿಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಲಂಡನ್‍ನ ವ್ಯಕ್ತಿಯೊಬ್ಬ ದಿನವೊಂದಕ್ಕೆ ಸಾವಿರಾರು ರೂಪಾಯಿ ಗಳಿಸುತ್ತಾನೆ. ಕ್ಯೂನಲ್ಲಿ ನಿಲ್ಲಲಾಗದ ಶ್ರೀಮಂತರ ಪರ ತಾನೇ ಕ್ಯೂನಲ್ಲಿ ನಿಂತು ಅವರ ಕೆಲಸ ಮಾಡುತ್ತಾನೆ. ಈ ಕೆಲಸಕ್ಕೆ 2,028 ರೂಪಾಯಿ ಚಾರ್ಜ್ ಮಾಡುತ್ತಾನೆ. ಹೀಗೆ ಪ್ರತಿದಿನವು 16 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾನೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ಲಂಡನ್ ನಿವಾಸಿ ಫ್ರೆಡ್ಡಿ ದಿನದ 8 ಗಂಟೆಗಳ ಕಾಲ ಕ್ಯೂನಲ್ಲಿ ನಿಲ್ಲುತ್ತಾನೆ. ಹೆಚ್ಚಿನ ಹಣವಿದ್ದರು ಕೆಲವು ಶ್ರೀಮಂತರಿಗೆ ಸಮಯ ಇರುವುದಿಲ್ಲ. ಥಿಯೇಟರ್‌ಗಳಲ್ಲಿ ಟಿಕೆಟ್‍ಗಾಗಿ, ಹಿರಿಯನಾಗರಿಕರಿಗೆ ಸಹಾಯವನ್ನು ಮಾಡುತ್ತಾನೆ. ಇದನ್ನೂ ಓದಿ: ಆಟವಾಡುತ್ತಾ ಚರಂಡಿಗೆ ಬಿದ್ದು ಪ್ರಾಣ ಬಿಟ್ಟ ಅಕ್ಕ, ತಮ್ಮ

    ಈ ಕುರಿತಾಗಿ ಮಾತನಾಡಿದ ಫ್ರೆಡ್ಡಿ ಕ್ಯೂನಲ್ಲಿ ನಿಲ್ಲುವುದು ಸುಲಭದ ಮಾತು ಅಲ್ಲ. ಕೊರೆಯುವ ಚಳಿಯಲ್ಲಿ ಕ್ಯೂ ನಿಲ್ಲಬೇಕಾದ ಸಂದರ್ಭವನ್ನು ಎದುರಿಸಿದ್ದೇನೆ. ಬೆಸಿಗೆ ಬಿಸಿಲಿನ ಸಮಯದಲ್ಲಿ ತುಂಬಾ ಕೆಲಸವಿರುತ್ತದೆ. ಕ್ಯೂ ನಿಲ್ಲುವ ಕೆಲಸಕ್ಕೆ ನಾನು  ಜಾಹೀರಾತು ನೀಡಿದ್ದೆ. 2,028 ರೂಪಾಯಿಗಿಂತ ಹೆಚ್ಚಿನ ಹಣವನ್ನು ನಾನು ಕೇಳುವುದಿಲ್ಲ ಎಂದಿದ್ದಾನೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು

  • ಲಾಕ್‍ಡೌನ್ ಆತಂಕ- ವಾರಕ್ಕಾಗುವಷ್ಟು ಮದ್ಯ ಖರೀದಿಯಲ್ಲಿ ಕುಡುಕರು ಫುಲ್ ಬ್ಯುಸಿ

    ಲಾಕ್‍ಡೌನ್ ಆತಂಕ- ವಾರಕ್ಕಾಗುವಷ್ಟು ಮದ್ಯ ಖರೀದಿಯಲ್ಲಿ ಕುಡುಕರು ಫುಲ್ ಬ್ಯುಸಿ

    ಮಡಿಕೇರಿ: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಷಯ ಮುನ್ನೆಲೆಗೆ ಬಂದಿದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಮಡಿಕೇರಿಯಲ್ಲಿ ಮದ್ಯ ಪ್ರಿಯರು ಇಷ್ಟದ ಬ್ರಾಂಡ್‍ಗಳನ್ನು ಖರೀದಿಸುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಒಂದು ವೇಳೆ ಇಡೀ ರಾಜ್ಯ ಅಥವಾ ಆಯ್ದ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಿಸಿದರೆ ಎಂಬ ಮುಂದಾಲೋಚನೆಯಿಂದ ಮದ್ಯ ಪ್ರಿಯರು ತಮ್ಮಿಷ್ಟದ ಮದ್ಯದ ಬ್ರ್ಯಾಂಡ್‍ಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ.

    ಹಲವರು ಒಂದು ವಾರಕ್ಕೆ ಸಾಕಾಗುವಷ್ಟು ಮದ್ಯ ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ. ವಾರದಿಂದ ಅಷ್ಟೇನು ವ್ಯಾಪಾರ ಇಲ್ಲದ ಬಾರ್‍ಗಳಲ್ಲಿ ಇಂದು ದಿಡೀರ್ ಅಗಿ ಜನ ಮದ್ಯದ ಅಂಗಡಿಗಳಿಗೆ ಹೆಚ್ಚಾಗಿ ಬರುತ್ತಿದ್ದಾರೆ. ಹೀಗಾಗಿ ಬಾರ್‍ಗಳಲ್ಲಿನ ಸ್ಟಾಕ್ ಕ್ಲೀಯರ್ ಆಗುತ್ತಿದೆ. ಈ ಬಗ್ಗೆ ಬಾರ್ ಸಿಬ್ಬಂದಿಯೊಬ್ಬರು ಮಾತಾನಾಡಿ, ಬೆಂಗಳೂರಿನಲ್ಲಿ ಸಿಎಂ ತೆಗೆದುಕೊಂಡ ನಿರ್ಧಾರದ ಬಳಿಕ ವ್ಯಾಪಾರ ಬಿರುಸಾಗಿದೆ. ಒಂದು ಲಕ್ಷ ವ್ಯಾಪಾರಕ್ಕೆ ಸಂಜೆವರಗೆ ಕಾಯುತ್ತಿದ್ದೆವು. ಆದರೆ ಇವತ್ತು ಮಧ್ಯಾಹ್ನದ ವೇಳೆಗಾಗಲೇ ಲಕ್ಷ ವ್ಯಾಪಾರವಾಗಿದೆ ಎಂದಿದ್ದಾರೆ.

    ರಾಜ್ಯಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈಗಾಗಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರ ಸಂಪೂರ್ಣ ಲಾಕ್‍ಡೌನ್ ಮಾಡಿ ಸರ್ಕಾರ ಆದೇಶಿಸಿದೆ. ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಿಸುವಂತೆ ಜನತೆ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳೂ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.

    ಲಾಕ್‍ಡೌನ್ ಅಗತ್ಯವಿದೆಯೋ ಅಥವಾ ಬೇಡವೋ ಎನ್ನುವ ಬಗ್ಗೆ ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಕೊಡಗಿನಲ್ಲೂ ಕೊರೊನಾ ಪ್ರಕರಣಗಳು ಹರಡುತ್ತಿವೆ. ಬಹುಶಃ ಲಾಕ್‍ಡೌನ್ ಮಾಡಬಹುದುದೇನೋ ಎಂದು ಮದ್ಯ ಪ್ರಿಯರು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ ಎಂದು ಬಾರ್ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ಮಧ್ಯೆ ಮೀನಿಗಾಗಿ ಕ್ಯೂ..!

    ಕೊರೊನಾ ಮಧ್ಯೆ ಮೀನಿಗಾಗಿ ಕ್ಯೂ..!

    ಉಡುಪಿ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಜನರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಈ ಟೈಮ್‍ನಲ್ಲಿ ನಾನ್‍ವೆಜ್ ಪ್ರಿಯರ ಪಾಡು ಕೇಳುವುದೇ ಬೇಡ. ಅದರಲ್ಲೂ ಮೀನಿನೂಟ ಇಲ್ಲದೇ ಬಹುತೇಕ ಕರಾವಳಿಯವರಿಗೆ ಊಟ ಸಪ್ಪೆ ಸಪ್ಪೆ. ಈಗ ಲಾಕ್‍ಡೌನ್ ಎಫೆಕ್ಟ್ ಇರುವ ಹಿನ್ನೆಲೆಯಲ್ಲಿ ಮೀನು ಸಿಗುವುದೆ ಅಪರೂಪ.

    ಮೀನು ಸಿಗುವ ಮೀನಿನಂಗಡಿಯಲ್ಲಿ ಈಗ ಕಿಲೋ ಮೀಟರ್‌ಗಟ್ಟಲೇ ಉದ್ದದ ಕ್ಯೂ ಇರುತ್ತದೆ. ಹೆಬ್ರಿ ಮುದ್ರಾಡಿಯ ಮೀನಿನಂಗಡಿಯಲ್ಲಿ ಪ್ರತಿನಿತ್ಯವೂ ಜನ ಮೀನುಕೊಳ್ಳಲು ಸೋಷಿಯಲ್ ಡಿಸ್ಟೆನ್ಸ್‌ನಲ್ಲಿ ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಲ್ಲುತ್ತಾರೆ. ಮೀನು ಬಂದ ಒಂದು ಗಂಟೆಯೊಳಗೆ ಖಾಲಿ ಖಾಲಿಯಾಗುತ್ತದೆ. ಇದನ್ನೂ ಓದಿ: ಲಾಕ್‍ಡೌನ್ ನಡುವೆಯೂ ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭ

    ಮೀನಿನಂಗಡಿ ತೆರೆಯುವ ಮುನ್ನವೇ ಗಂಟೆಗಟ್ಟಲೆ ಜನ ಕ್ಯೂನಲ್ಲಿ ಕಾದುನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ಡಿಮ್ಯಾಂಡ್‍ಗೆ ತಕ್ಕಂತೆ ರೇಟ್ ಕೂಡ ಕೊಂಚ ಜಾಸ್ತಿಯಾಗಿದೆ.

  • ದೇಶಕ್ಕೆ ಕೊರೊನಾ ಟೆನ್ಶನ್, ಇವ್ರಿಗೆ ಮಟನ್ ಟೆನ್ಶನ್!

    ದೇಶಕ್ಕೆ ಕೊರೊನಾ ಟೆನ್ಶನ್, ಇವ್ರಿಗೆ ಮಟನ್ ಟೆನ್ಶನ್!

    – 1 ಕೆಜಿ ಮಟನ್‍ಗೆ 800 ರೂ. ಇದ್ರೂ ಜನರ ಸಾಲೋಸಾಲು

    ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲೂ ಕೆಲವರಂತೂ ಸಾಮಾಜಿಕ ಅಂತರವಿಲ್ಲದೆ ಮಟನ್ ಅಂಗಡಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

    ನಗರದ ನಂದಿನಿ ಲೇಔಟ್‍ನಲ್ಲಿ ತರಕಾರಿ ಅಷ್ಟೇ ಅಲ್ಲದೆ ನಾನ್ ವೆಜ್‍ಗೂ ದೊಡ್ಡ ಸರದಿಯೇ ನಿಂತಿದೆ. ಕೊರೊನಾ ವೈರೆಸ್ ಭೀಕರತೆಯಿಂದ ತಪ್ಪಿಸಿಕೊಳ್ಳುವುದಕ್ಕಿಂತ ಮಟನ್ ಮುಖ್ಯ ಎಂಬಂತೆ ಜನರು ವರ್ತಿಸುತ್ತಿದ್ದಾರೆ.

    ಸಾಮಾಜಿಕ ಅಂತರದ ಮಾತಿರಲಿ ಕ್ಯೂನಲ್ಲಿ ನಿಂತಿದ್ದ ಹಲವರು ಮಾಸ್ಕ್ ಹಾಕಿರಲಿಲ್ಲ. ಮಟನ್ ಖರೀದಿಗೆ ಗ್ರಾಹಕರು ಕಿ.ಮೀ ಗಟ್ಟಲೆ ಕ್ಯೂ ನಿಂತಿದ್ದರು. ಭಾರತ ಲಾಕ್‍ಡೌನ್ ಅಂದ್ರೆ ಇದೇನಾ? ಸಂಡೆ ಒಂದು ದಿನ ಮಟನ್ ತಿನ್ನದೆ ಇದ್ದರೆ ಇವರು ಸತ್ತೇ ಹೋಗ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

    ಚಿಕನ್ ಬೆಲೆ ಕೆಜಿಗೆ 100 ರೂ. ಹಾಗೂ ಮಟನ್ ಬೆಲೆ ಕೆಜಿಗೆ 800 ರೂ. ಆಗಿದೆ. ಮಟನ್ ಬೆಲೆ ದುಬಾರಿಯಾದ್ರೂ ತಿನ್ನುವರರ ಸಂಖ್ಯೆ ಮಾತ್ರ ಇಳಿಕೆಯಾಗಿಲ್ಲ. ಸಂಡೇ ಸ್ಪೆಷಲ್ ಎಂಬ ಕಾರಣಕ್ಕೆ ಜನರು ಮಾಂಸ ಖರೀದಿಗೆ ಮುಗಿಬಿದ್ದಾರೆ.

  • ಒಂದು ಕೆಜಿ ಮಟನ್‍ಗೆ ಎರಡು ಭದ್ರಕೋಟೆ ಭೇದಿಸಬೇಕು

    ಒಂದು ಕೆಜಿ ಮಟನ್‍ಗೆ ಎರಡು ಭದ್ರಕೋಟೆ ಭೇದಿಸಬೇಕು

    ಹಾಸನ: ಕೊರೊನಾ ಎಫೆಕ್ಟ್‌ನಿಂದಾಗಿ ಮಟನ್ ಮಾರಲು ಅವಕಾಶ ಕೊಡುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲಿ ಹಾಸನದಲ್ಲಿ ಬಹುತೇಕ ಮಟನ್ ಅಂಗಡಿ ಮಾಲೀಕರು ಇಂದು ವ್ಯಾಪರಕ್ಕೆ ಇಳಿಯಲು ಹಿಂದೇಟು ಹಾಕಿದರು. ಇದರಿಂದಾಗಿ ಜನ ಕಿ.ಮೀ.ಗಟ್ಟಲೆ ಕ್ಯೂ ನಿಂತು ಮಟನ್ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹಾಸನ ಜಿಲ್ಲಾಡಳಿತ ಇಂದು ಮಧ್ಯಾಹ್ನದವರೆಗೆ ಮಟನ್ ಮಾರಲು ಅವಕಾಶ ನೀಡುವುದಾಗಿ ಬುಧವಾರವೇ ತಿಳಿಸಿತ್ತು. ಆದರೆ ಮಟನ್ ಮಾರ್ಕೆಟ್‍ನಲ್ಲಿ ಕೇವಲ ಮೂರು ಅಂಗಡಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದರಿಂದಾಗಿ ಏಕಾಏಕಿ ಮಟನ್‍ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಮಟನ್ ಖರೀದಿಗಾಗಿ ಜನರು ಈಗ ಎರಡು ಕೋಟೆಯನ್ನು ಭೇದಿಸಿ ಯಶಸ್ವಿಯಾಗಬೇಕಿದೆ.

    ಮೊದಲು ಮಟನ್ ಮಾರ್ಕೆಟ್ ಒಳಗೆ ಹೋಗಲು ಗ್ರಾಹಕರು ಕ್ಯೂ ನಿಲ್ಲಬೇಕು. ಈ ಕ್ಯೂ ಸುಮಾರು ಒಂದು ಕಿ.ಮೀ.ನಷ್ಟು ದೂರ ವ್ಯಾಪಿಸಿದೆ. ಕ್ಯೂ ಭೇದಿಸಿ ಬಂದವರು ನಂತರ ಮಟನ್ ಅಂಗಡಿ ಮುಂದೆ ಮತ್ತೊಂದು ಕ್ಯೂನಲ್ಲಿ ನಿಂತು ಮಟನ್ ಖರೀದಿಸಬೇಕು. ಮಟನ್ ಮಾರ್ಕೆಟ್ ಒಳಗೆ ಏಕಾಏಕಿ ನೂಕುನುಗ್ಗಲು ನಿಯಂತ್ರಿಸಲು ನಗರಸಭೆ ಈ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇಷ್ಟೆಲ್ಲ ಕಷ್ಟದ ನಡುವೆ ಮಟನ್ ಸಿಗಲು ಹಾಸನದಲ್ಲಿ ಕನಿಷ್ಠ ಒಂದು ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಪ್ರಯತ್ನಿಸಿದರೂ ಮಟನ್ ಸಿಗುವ ಭರವಸೆ ಕೂಡ ಇಲ್ಲದಂತಾಗಿದ್ದು ಜನ ಕೊರೊನಾ ವೈರಸ್‍ಗೆ ಹಿಡಿಶಾಪ ಹಾಕುತ್ತಿದ್ದಾರೆ.

  • ಧರ್ಮಸ್ಥಳದಲ್ಲಿ ಭದ್ರತಾ ಸಿಬ್ಬಂದಿ, ಭಕ್ತರ ನಡುವೆ ಹೊಡೆದಾಟ: ವಿಡಿಯೋ ವೈರಲ್

    ಧರ್ಮಸ್ಥಳದಲ್ಲಿ ಭದ್ರತಾ ಸಿಬ್ಬಂದಿ, ಭಕ್ತರ ನಡುವೆ ಹೊಡೆದಾಟ: ವಿಡಿಯೋ ವೈರಲ್

    ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಭಕ್ತರು ಮತ್ತು ಭದ್ರತಾ ಸಿಬ್ಬಂದಿ ಹೊಡೆದಾಡಿದ ಘಟನೆ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಭಕ್ತರ ದಟ್ಟಣೆ ಹೆಚ್ಚಿರುವಾಗ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಹೋಗಬೇಕಾಗುತ್ತದೆ. ದೇವಸ್ಥಾನದ ಬಲ ಬದಿಯಿಂದ ಆರಂಭಿಸಿ ಒಂದು ಸುತ್ತು ಸಾಲು ಇರುತ್ತದೆ. ಈ ಸರತಿ ಸಾಲಿನ ಮಧ್ಯೆ ಮಾತಿಗೆ ಮಾತು ಬೆಳೆದು ಭದ್ರತಾ ಸಿಬ್ಬಂದಿ ಹಾಗೂ ಭಕ್ತರು ಹೊಡೆದಾಡಿದ್ದಾರೆ. ಮಹಿಳೆಯರು, ಯುವಕರು ಸೇರಿ ಭದ್ರತಾ ಸಿಬ್ಬಂದಿ ಮೇಲೆ ಕೈ ಮಾಡಿದ್ದಲ್ಲದೇ, ದೇವಸ್ಥಾನ ಎನ್ನುವುದನ್ನು ಲೆಕ್ಕಿಸದೇ ಬೈದಾಡಿಕೊಂಡಿದ್ದರು. ಕೊನೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಮತ್ತು ಧರ್ಮಸ್ಥಳ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಗಲಾಟೆ ನಡೆಸಿದ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳವನ್ನು ನೋಡಿ ಕಲಿಯಿರಿ: ಪುರಿ ದೇವಾಲಯಕ್ಕೆ ಸುಪ್ರೀಂ ಸೂಚನೆ

    ಎರಡು ದಿನಗಳ ಹಿಂದೆ ನಡೆದಿದ್ದ ಘಟನೆಯನ್ನು ಸಾಲಿನಲ್ಲಿ ನಿಂತಿದ್ದ ಭಕ್ತರು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಭದ್ರತಾ ಸಿಬ್ಬಂದಿ ದರ್ಪದಿಂದಾಗಿ ಘಟನೆ ಸಂಭವಿಸಿದೆ ಎನ್ನುವಂತೆ ಫೇಸ್ ಬುಕ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ. ಯುವಕರ ವರ್ತನೆಗೆ ಟೀಕೆ ವ್ಯಕ್ತವಾಗಿದೆ.

    https://youtu.be/JZTfaP1hyss