Tag: Quetta

  • ಪಾಕಿಸ್ತಾನದಲ್ಲಿ ಬಾಂಬ್‌ ದಾಳಿ – ಕನಿಷ್ಠ 10 ಜನರು ಸಾವು

    ಪಾಕಿಸ್ತಾನದಲ್ಲಿ ಬಾಂಬ್‌ ದಾಳಿ – ಕನಿಷ್ಠ 10 ಜನರು ಸಾವು

    – 30ಕ್ಕೂ ಅಧಿಕ ಮಂದಿಗೆ ಗಾಯ

    ಇಸ್ಲಾಮಾಬಾದ್: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

    ಮಂಗಳವಾರ (ಸೆ.30) ಬೆಳಗ್ಗೆ ಕ್ವೆಟ್ಟಾದ ಜರ್ಘೂನ್ ರಸ್ತೆಯಲ್ಲಿರುವ ಅರೆಸೈನಿಕ ಪಡೆಯ ಪ್ರಧಾನಿ ಕಚೇರಿ ಮೇಲೆ ಪ್ರಬಲವಾದ ಬಾಂಬ್‌ ಸ್ಫೋಟಗೊಂಡಿದೆ. ಪೊಲೀಸರ ಮಾಹಿತಿ ಪ್ರಕಾರ, ಸ್ಫೋಟದ ತೀವ್ರತೆಯಿಂದಾಗಿ ಸಮೀಪದ ಕಟ್ಟಡಗಳ ಬಾಗಿಲು ಹಾಗೂ ಕಿಟಕಿಗಳು ಪುಡಿಪುಡಿಯಾಗಿವೆ. ಸ್ಫೋಟದ ಸ್ವಲ್ಪ ಹೊತ್ತಿನ ನಂತರ ಗುಂಡಿನ ಚಕಮಕಿಯು ಕೇಳಿಬಂದಿದೆ ಎಂದು ತಿಳಿಸಿದ್ದಾರೆ.

    ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ತಂಡಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.ಇದನ್ನೂ ಓದಿ: ನನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ, ಬೆಂಬಲಿಗರಿಗೆ ಏನು ಮಾಡ್ಬೇಡಿ: ಸ್ಟಾಲಿನ್ ವಿರುದ್ಧ ವಿಜಯ್ ಕಿಡಿ

    ಈ ಕುರಿತು ಬಲೂಚಿಸ್ತಾನದ ಆರೋಗ್ಯ ಸಚಿವ ಬಖ್ತ್ ಮುಹಮ್ಮದ್ ಕಾಕರ್ ಮಾತನಾಡಿ, ನಗರದಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ, ವೈದ್ಯರು, ನರ್ಸ್‌ಗಳು ಮತ್ತು ಸಿಬ್ಬಂದಿ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶಿಸಿದ್ದಾರೆ. ಇನ್ನೂ ಸ್ಫೋಟದ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸ್ಫೋಟದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೊಗೆಯಾವರಿಸಿಕೊಂಡಿರುವುದು ಕಂಡುಬಂದಿದೆ.

    ಇದಕ್ಕೂ ಮುನ್ನ ಸೆ.4ರಂದು ಕ್ವೆಟ್ಟಾದಲ್ಲಿ ನಡೆದ ರಾಜಕೀಯ ರ‍್ಯಾಲಿಯ ಸಂದರ್ಭದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 15 ಜನರು ಸಾವನ್ನಪ್ಪಿದರು ಮತ್ತು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ಇದನ್ನೂ ಓದಿ: RSSಗೆ 100 ವರ್ಷ – ನಾಳೆ ಪೋಸ್ಟ್ ಸ್ಟ್ಯಾಂಪ್, ನಾಣ್ಯ ಬಿಡುಗಡೆ ಮಾಡಲಿದ್ದಾರೆ ಪ್ರಧಾನಿ ಮೋದಿ

  • ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ

    ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ

    ಇಸ್ಲಾಮಾಬಾದ್‌: ಕದನ ವಿರಾಮದ (Ceasefire) ಬಳಕವೂ ಭಾರತದ ವಿರುದ್ಧ ಆಟಟೋಪ ನಡೆಸುತ್ತಿರುವ ಪಾಕಿಸ್ತಾನಕ್ಕೆ (Pakistan) ಬಲೂಚಿಸ್ತಾನ ಹೋರಾಟಗಾರರು ಶಾಕ್‌ ಮೇಲೆ ಶಾಕ್‌ ನೀಡುತ್ತಿದ್ದಾರೆ. ಭಾರತಕ್ಕೆ ಬೆಂಬಲ ಘೋಷಿಸಿದ್ದ ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನದ 51ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಾಏಕಿ ದಾಳಿ ನಡೆಸಿದೆ.

    ಪಾಕಿಸ್ತಾನಿ ಮಿಲಿಟರಿ (Paklistan Army) ಮತ್ತು ಗುಪ್ತಚರ ತಾಣಗಳನ್ನು ಗುರಿಯಾಗಿಸಿಕೊಂಡು 51ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಬಿಎಲ್‌ಎ ಅಧಿಕೃತವಾಗಿ ಹೇಳಿಕೊಂಡಿದೆ. ಇದನ್ನೂ ಓದಿ: ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    Balochistan

    ಬಿಎಲ್‌ಎ ವಕ್ತಾರ ಜಿಯಾಂಡ್ ಬಲೋಚ್ ನೀಡಿದ ಮಾಹಿತಿ ಪ್ರಕಾರ, ಈ ವಾರದ ಆರಂಭದಲ್ಲಿ ಭಾರತ-ಪಾಕಿಸ್ತಾನ (India Pakistan) ಮಿಲಿಟರಿ ಉದ್ವಿಗ್ನತೆ ತೀವ್ರತೆ ಪಡೆದುಕೊಂಡಿತ್ತು. ಇದರ ಸದುಪಯೋಗ ಪಡೆದುಕೊಂಡು ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದ 51ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಲವು ಗಂಟೆಗಳ ಕಾಲ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.

    ಈ ದಾಳಿಯಲ್ಲಿ ಪಾಕ್‌ ಬೆಂಗಾವಲು ವಾಹನ, ಗುಪ್ತಚರ ಕೇಂದ್ರಗಳು ಮತ್ತು ಖನಿಜ ಸಾಗಣೆ ವಾಹನಗಳೂ ಸೇರಿದ್ದವು. ಈ ದಾಳಿಗಳು ಶತ್ರುಗಳನ್ನ ನಿರ್ಮೂಲನೆ ಮಾಡುವುದು ಮಾತ್ರವಲ್ಲದೇ ಮುಂಬರುವ ದಿನಗಳಲ್ಲಿ ಬಲವಾದ ಯುದ್ಧಕ್ಕೆ ಸಿದ್ಧತೆ ಬಲಪಡುವ ನಿಟ್ಟಿನಲ್ಲಿ ಸೇನಾ ಸಿದ್ಧತೆಯೂ ಕೂಡ ಆಗಿದೆ ಎಂದು ಯುದ್ಧದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

    Pakistan Army

    ಇತ್ತೀಚೆಗಷ್ಟೇ ಪಾಕಿಸ್ತಾನದ ಸೇನಾ ಬೆಂಗಾಲವು ವಾಹನದ ಮೇಲೆ ಸುಧಾರಿತ ಸ್ಫೋಟಕ ಸಾಧನ (IED) ದಾಳಿ ನಡೆಸಿ 12 ಸೈನಿಕರನ್ನ ಬಿಎಲ್‌ಎ ಹತ್ಯೆಗೈದಿತ್ತು. ಈ ಬೆನ್ನಲ್ಲೇ ಬಲೂಚಿಸ್ತಾನದಾದ್ಯಂತ 39 ಸ್ಥಳಗಳಲ್ಲಿ ದಾಳಿ ನಡೆಸಿ ಪಾಕ್‌ ಪೊಲೀಸರನ್ನೇ ಅಪಹರಿಸಿತ್ತು.

    1971 ರಿಂದಲೂ ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಪಾಕಿಸ್ತಾನದ ಜತೆ ಸಂಘರ್ಷ ಜಾರಿಯಲ್ಲಿದೆ. ಪಾಕ್‌-ಭಾರತ ನಡುವಿನ ಉದ್ವಿಗ್ನತೆಯನ್ನು ಬಲೂಚ್‌ ಲಿಬರೇಷನ್‌ ಆರ್ಮಿ ಸದುಪಯೋಗಪಡಿಸಿಕೊಳ್ಳುತ್ತಿದೆ. ಇದನ್ನೂ ಓದಿ: ದೇಹದಲ್ಲಿ ಒಂದು ತೊಟ್ಟು ರಕ್ತ ಇರೋವರೆಗೂ ಯುದ್ಧ ಮಾಡ್ತೀನಿ – ಮೈ ಪರಚಿಕೊಂಡ ಪಾಕ್‌ ಪ್ರಧಾನಿ

  • ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    ಇಸ್ಲಾಮಾಬಾದ್:‌ ಇತ್ತ ಭಾರತದ ದಾಳಿಗೆ (India’s Strike) ತತ್ತರಿಸಿರುವ ಪಾಕ್‌ ಅಕ್ಷರಶಃ ನಡುಗಿಹೋಗಿದೆ. ಇದೇ ಸಮಯ ಬಳಸಿಕೊಂಡಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ತನ್ನ ಪ್ರತ್ಯೇಕ ದೇಶದ ಹೋರಾಟವನ್ನು ತೀವ್ರಗೊಳಿಸಿದೆ.

    balochistan liberation army

    ಅಂತಾರಾಷ್ಟ್ರೀಯ ಗಡಿಯಲ್ಲಿ ಹೆಚ್ಚುತ್ತಿರುವ ಘರ್ಷಣೆಗಳಿಗೆ ಭಾರತ-ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡುತ್ತಿರುವಾಗ, ಇಸ್ಲಾಮಾಬಾದ್ ಈಗ ಮತ್ತೊಂದು ಭಾಗದಿಂದ ಮುತ್ತಿಗೆಗೆ ಒಳಗಾಗಿದೆ. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪ್ರಾಂತೀಯ ರಾಜಧಾನಿ ಕ್ವೆಟ್ಟಾ ಸೇರಿದಂತೆ ಬಲೂಚಿಸ್ತಾನದಾದ್ಯಂತ (Balochistan) ಹಲವಾರು ಕಾರ್ಯತಂತ್ರದ ಸೇನಾ ಠಾಣೆಗಳನ್ನ ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ಇದು ಪಾಕಿಸ್ತಾನಿ ಸೇನೆಯನ್ನು ಹಿಮ್ಮೆಟ್ಟುವಂತೆ ಮಾಡಿದೆ ಮತ್ತು ದೇಶದ ಪಶ್ಚಿಮ ರಕ್ಷಣಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ.

    Balochistan

    ಇದಕ್ಕೂ ಮುನ್ನ ಬಲೂಚಿಸ್ತಾನದಲ್ಲಿ ಹಲವೆಡೆ ಪಾಕಿಸ್ತಾನದ ಧ್ವಜಗಳನ್ನು ಇಳಿಸಿ ಬಲೂಚಿಸ್ತಾನದ ಧ್ವಜವನ್ನು ಹೋರಾಟಗಾರರು ಹಾರಿಸಿದ್ದರು. ಜಗತ್ತು ಪಾಕಿಸ್ತಾನದಿಂದ ತಮ್ಮ ರಾಜತಾಂತ್ರಿಕ ಕಾರ್ಯಾಚರಣೆಗಳನ್ನು ಹಿಂದಕ್ಕೆ ಪಡೆದು ಹೊಸದಾಗಿ ಉದಯೋನ್ಮುಖ ರಾಷ್ಟ್ರವಾದ ಬಲೂಚಿಸ್ತಾನಕ್ಕೆ ಸ್ಥಳಾಂತರಿಸುವ ಸಮಯ ಬಂದಿದೆ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನಕ್ಕೆ ವಿದಾಯ, ಬಲೂಚಿಸ್ತಾನಕ್ಕೆ ಸ್ವಾಗತ ಎಂದು ಬಿಎಲ್‌ಹೆಚ್‌ ಹೇಳಿತ್ತು. ಇದನ್ನೂ ಓದಿ: ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್

    1971 ರಿಂದಲೂ ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಪಾಕಿಸ್ತಾನದ ಜತೆ ಸಂಘರ್ಷ ಜಾರಿಯಲ್ಲಿದೆ. ಪಾಕ್‌-ಭಾರತ ನಡುವಿನ ಉದ್ವಿಗ್ನತೆಯನ್ನು ಬಲೂಚ್‌ ಲಿಬರೇಷನ್‌ ಆರ್ಮಿ ಸದುಪಯೋಗಪಡಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌

  • ಪಾಕಿಸ್ತಾನದಲ್ಲಿ ಆತ್ಮಹತ್ಯಾ ಸ್ಫೋಟ – ಪೊಲೀಸ್, ಮಗು ಸಾವು, 24 ಮಂದಿಗೆ ಗಾಯ

    ಪಾಕಿಸ್ತಾನದಲ್ಲಿ ಆತ್ಮಹತ್ಯಾ ಸ್ಫೋಟ – ಪೊಲೀಸ್, ಮಗು ಸಾವು, 24 ಮಂದಿಗೆ ಗಾಯ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan) ಮತ್ತೆ ಆತ್ಮಹತ್ಯಾ ಸ್ಫೋಟ (Suicide Blast) ನಡೆಸಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಒಬ್ಬ ಪೊಲೀಸ್ (Police) ಹಾಗೂ ಒಂದು ಮಗು (Child) ಸಾವನ್ನಪ್ಪಿದ್ದು, ಸುಮಾರು 24 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಪಾಕಿಸ್ತಾನದ ಬಲೂಚಿಸ್ತಾನದ ಬಳಿಯ ಕ್ವೆಟ್ಟಾದ ಬಲೇಲಿ ಪ್ರದೇಶದಲ್ಲಿ ಬುಧವಾರ ಪೊಲೀಸ್ ಟ್ರಕ್ ಅನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ಸ್ಫೋಟ ನಡೆಸಲಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 20 ಪೊಲೀಸ್ ಅಧಿಕಾರಿಗಳು ಸೇರಿದಂತೆ 24 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವರದಿಗಳ ಪ್ರಕಾರ, ವಾಹನವೊಂದರ ಬಳಿ ಸ್ಫೋಟ ಸಂಭವಿಸಿದ್ದು, ಪಕ್ಕದಲ್ಲೇ ಚಲಿಸುತ್ತಿದ್ದ ಪೊಲೀಸ್ ಟ್ರಕ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದೆ. ಘಟನೆ ನಡೆಯುತ್ತಲೇ ಸ್ಥಳಕ್ಕೆ ಪೊಲೀಸರು, ರಕ್ಷಣಾ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳದವರು ಧಾವಿಸಿದ್ದಾರೆ. ಸ್ಫೋಟಕ್ಕೆ 25 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಭಾರತದೊಂದಿಗಿನ ಸಂಬಂಧದಲ್ಲಿ ಹಸ್ತಕ್ಷೇಪ ಮಾಡಬೇಡಿ – ಅಮೆರಿಕಗೆ ಚೀನಾ ವಾರ್ನಿಂಗ್

    ಕ್ವೆಟ್ಟಾ ಡಿಐಜಿ ಗುಲಾಮ್ ಅಜ್ಫರ್ ಮಹೇಸರ್ ಅವರು ಮಾಧ್ಯಮಗಳಿಗೆ ಸ್ಫೋಟವನ್ನು ಆತ್ಮಾಹುತಿ ದಾಳಿ ಎಂದು ತಿಳಿಸಿದ್ದಾರೆ. ಸ್ಥಳದಲ್ಲೇ ಆತ್ಮಹತ್ಯಾ ಬಾಂಬರ್‌ನ ಅವಶೇಷ ಕಂಡುಬಂದಿದೆ. ಸ್ಫೋಟದಿಂದಾಗಿ ಪೊಲೀಸ್ ಟ್ರಕ್ ಉರುಳಿ ಕಂದಕಕ್ಕೆ ಬಿದ್ದಿದೆ. ಸ್ಥಳದಲ್ಲಿದ್ದ ಇನ್ನೂ 2 ವಾಹನಗಳಿಗೆ ಹಾನಿಯಾಗಿದೆ ಎಂದು ಹೇಳಿದ್ದಾರೆ.

    ಆತ್ಮಹತ್ಯಾ ದಾಳಿಯ ಹೊಣೆಯನ್ನು ನಿಷೇಧಿತ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (TTP) ಹೊತ್ತುಕೊಂಡಿದೆ. ಒಂದು ದಿನದ ಹಿಂದೆಯಷ್ಟೇ ಉಗ್ರಗಾಮಿ ಗುಂಪು ಸರ್ಕಾರದೊಂದಿಗೆ ತನ್ನ ಕದನ ವಿರಾಮವನ್ನು ಹಿಂತೆಗೆದುಕೊಂಡಿತ್ತು. ಬಳಿಕ ದೇಶಾದ್ಯಂತ ದಾಳಿಗಳನ್ನು ನಡೆಸುವಂತೆ ತನ್ನ ಸೈನಿಕರಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಶ್ರದ್ಧಾ ಹತ್ಯೆ ಮಾಡಿದ್ದು ನಾನೇ, ಆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ – ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ಹೇಳಿಕೆ

    Live Tv
    [brid partner=56869869 player=32851 video=960834 autoplay=true]