Tag: question paper

  • ಪಿಯುಸಿ ಪ್ರಶ್ನೆಪತ್ರಿಕೆ ಲೀಕ್ ಭಯ ಹಿನ್ನೆಲೆ – ಲೀಕಾಸುರರಿಗೆ ಬಿಗಿ ಮಾಡಿರೋ ಪೊಲೀಸ್ರು

    ಪಿಯುಸಿ ಪ್ರಶ್ನೆಪತ್ರಿಕೆ ಲೀಕ್ ಭಯ ಹಿನ್ನೆಲೆ – ಲೀಕಾಸುರರಿಗೆ ಬಿಗಿ ಮಾಡಿರೋ ಪೊಲೀಸ್ರು

    ಬೆಂಗಳೂರು: ಪಿಯುಸಿ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು, ಮಕ್ಕಳು ಕಷ್ಟ ಪಟ್ಟು ಓದಿ ಒಳ್ಳೆ ಮಾರ್ಕ್ಸ್ ತೆಗೆದು, ಭವಿಷ್ಯ ರೂಪಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಆದರೆ ಪ್ರಿಪರೇಟರಿ ಪೇಪರ್ ಲೀಕ್ ಆಗಿ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಮನೆ ಮಾಡಿತ್ತು. ಹೀಗಾಗಿ ಪ್ರಶ್ನೆಪತ್ರಿಕೆ ಲೀಕಾಸುರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಪಿಯುಸಿ ಪಶ್ನೆಪತ್ರಿಕೆ ಲೀಕ್ ಆಗದಂತೆ ತಡೆಯಲು ಪ್ರಯತ್ನ ನಡೆಸಿದ್ದಾರೆ.

    ಪ್ರಿಪರೇಟರಿ ಪರೀಕ್ಷೆಯ ಪೇಪರ್ ಲೀಕ್ ಮಾಡಿದ್ದವರನ್ನ ಸಹ ಅಂದರ್ ಮಾಡಲಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಸೇರಿದಂತೆ 14 ಮಂದಿಯನ್ನ ವಿಚಾರಣೆ ನಡೆಸಲಾಗಿದೆ. ಜೊತೆಗೆ ಪೊಲೀಸರು ಪೂರ್ವಸಿದ್ಧತಾ ಪತ್ರಿಕೆ ಲೀಕ್ ಮಾಡಿದವರನ್ನು ಅರೆಸ್ಟ್ ಮಾಡಿದ್ದಾರೆ. ಇದಲ್ಲದೆ ಪ್ರಶ್ನೆಪತ್ರಿಕೆ ಲೀಕಾಸುರರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

    ಕಳೆದ ಬಾರಿ ಲೀಕ್ ಮಾಡಿದ್ದ ಕಿಂಗ್‍ಪಿನ್ ಶಿವಕುಮಾರ್, ಬಸವರಾಜ್, ಅಮೀರ್ ಅಹ್ಮದ್ ಹಾಗೂ ಅನಿಲ್ ಫ್ರಾನ್ಸಿಸ್ ಚಲನವಲನದ ಮೇಲೆ ಸಹ ಕಣ್ಣಿಡಲಾಗಿದೆ. ಈ ಹಿಂದೆ ಪಿಯುಸಿ ಪತ್ರಿಕೆ ಲೀಕ್ ಮಾಡಿ ಜೈಲು ಸೇರಿದ್ದ ಕಿಂಗ್‍ಪಿನ್‍ಗಳ ಮೇಲೆ ಕೋಕಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಸದ್ಯ ಕಿಂಗ್‍ಪಿನ್‍ಗಳ ಪ್ರತಿಯೊಂದು ಚಲನವಲನದ ಮೇಲೆ ಸಿಸಿಬಿ ಕಣ್ಣಿಟ್ಟಿದ್ದು, ಪಿಯು ಪರೀಕ್ಷೆ ಸುಗಮವಾಗಿ ನಡೆಯಲು ಕಸರತ್ತು ನಡೆಸುತ್ತಿದ್ದಾರೆ.

  • ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ – 9ನೇ ತರಗತಿ ಪರೀಕ್ಷೆಯಲ್ಲಿ ಪ್ರಶ್ನೆ

    ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ – 9ನೇ ತರಗತಿ ಪರೀಕ್ಷೆಯಲ್ಲಿ ಪ್ರಶ್ನೆ

    ಗಾಂಧಿನಗರ: ಶಾಲೆಯ ಪರೀಕ್ಷೆಯಲ್ಲಿ ಮಹಾತ್ಮ ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಯನ್ನು ಕಂಡು ಗುಜರಾತ್ ಶಿಕ್ಷಣಾಧಿಕಾರಿಗಳು ಆಘಾತಕ್ಕೊಳಗಾಗಿದ್ದಾರೆ.

    ಗಾಂಧಿನಗರದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆ ‘ಸುಫಲಾಂ ಶಾಲಾ ವಿಕಾಸ ಸಂಕುಲ’ದ ಅಧೀನದಲ್ಲಿನ ಶಾಲೆಯಲ್ಲಿ ಗುಜರಾತಿ ಭಾಷೆಯ 9ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ. ಇಂಟರ್ನಲ್ ಅಸಿಸ್ಮೆಂಟ್ ಪರೀಕ್ಷೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದ್ದು, ಈ ಪ್ರಶ್ನೆಯನ್ನು ನೋಡಿ ಕೆಲ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ತಬ್ಬಿಬ್ಬಾಗಿ ಹೋಗಿದ್ದಾರೆ.

    12ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷಾ ಪತ್ರಿಕೆಯಲ್ಲಿ ಅನಧಿಕೃತ ಮದ್ಯ ಮಾರಾಟ ಮತ್ತು ಮಾದಕ ವಸ್ತುಗಳ ಸೇವನೆ ಕುರಿತು ಪ್ರಶ್ನೆ ಕೇಳಲಾಗಿದ್ದು, ನಿಮ್ಮ ಪ್ರದೇಶದಲ್ಲಿ ಮದ್ಯ ಮಾರಾಟ ಹೆಚ್ಚಳ ಸಂಬಂಧ ದೂರು ನೀಡುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆಯಿರಿ ಎಂದು ಕೇಳಲಾಗಿದೆ.

    ಖಾಸಗಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳು ಆಕ್ಷೇಪಾರ್ಹವಾಗಿದ್ದು, ತನಿಖೆ ಪ್ರಾರಂಭಿಸಿದ್ದೇವೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಾಂಧಿನಗರ ಜಿಲ್ಲೆಯ ಶಿಕ್ಷಣಾಧಿಕಾರಿ ಭರತ್ ವಾಧರ್ ತಿಳಿಸಿದ್ದಾರೆ.

    ಸುಫಲಾಂ ಶಾಲಾ ವಿಕಾಸ ಸಂಕುಲ ಎಂಬುದು ಅನುದಾನಿತ ಶಿಕ್ಷಣ ಸಂಸ್ಥೆಯಾಗಿದ್ದು, ರಾಜ್ಯ ಶಿಕ್ಷಣ ಇಲಾಖೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭರತ್ ಸ್ಪಷ್ಟಪಡಿಸಿದ್ದಾರೆ.

  • ಗುಣಾತ್ಮಕ ಕಲಿಕೆಗಾಗಿ SSLC  ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆ – ಈ ವರ್ಷದಿಂದಲೇ ಜಾರಿ

    ಗುಣಾತ್ಮಕ ಕಲಿಕೆಗಾಗಿ SSLC ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆ – ಈ ವರ್ಷದಿಂದಲೇ ಜಾರಿ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ಆಗುತ್ತಿದ್ದು, ಹೊಸ ಮಾದರಿ ಪ್ರಶ್ನೆ ಪತ್ರಿಕೆ ಜಾರಿ ಮಾಡಲು ಬೋರ್ಡ್ ನಿರ್ಧಾರ ಮಾಡಿದೆ. ಅಲ್ಲದೆ ಪ್ರಸಕ್ತ ವರ್ಷದಿಂದಲೇ ನೂತನ ಪ್ರಶ್ನೆ ಪತ್ರಿಕೆ ಮಾದರಿ ಚಾಲನೆ ನೀಡಿದೆ.

    ವಿದ್ಯಾರ್ಥಿಗಳು ಕಲಿಕಾ ಗುಣಮಟ್ಟವನ್ನು ವೃದ್ಧಿಸಲು ಕಂಠಪಾಠ ಮಾಡುವ ಪದ್ಧತಿಯನ್ನು ತಪ್ಪಿಸಿ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆಯನ್ನು ಬೆಳೆಸಲು ಬಹು ಆಯ್ಕೆ ಪ್ರಶ್ನೆಗಳನ್ನು ಕಡಿಮೆ ಮಾಡಲು ಮುಂದಾಗಿದೆ.

    ಕೌಶಲ್ಯ ಹಾಗೂ ವಿವರಣಾತ್ಮಕ ಹೊಂದಿರುವ ದೀರ್ಘಾವಧಿ ಪ್ರಶ್ನೆಗಳಿಗೆ ಆದ್ಯತೆ ನೀಡಿ, ಪ್ರಶ್ನೆಗಳ ಸಂಖ್ಯೆಗಳನ್ನು ಕಡಿಮೆ ಮಾಡಿ, ಕಠಿಣತೆಯ ಮಟ್ಟವನ್ನು ಎಲ್ಲಾ ವಿಷಯಗಳಲ್ಲೂ ಸಮಾನವಾಗಿ ರೂಪಿಸಿ, ಏಕ ರೂಪತರಲು ಮುಖ್ಯಾಂಶಾಧಾರಿತ/ವಿಷಯಾಧಾರಿತ ಅಂಕಗಳನ್ನು ಹಂಚಿಕೆ ಮಾಡಲು ಇಲಾಖೆ ಮುಂದಾಗಿದೆ.

    ಪ್ರಯೋಜನ ಏನು?
    ಪ್ರಶ್ನೆಪತ್ರಿಕೆಯಲ್ಲಿ 40 ಪ್ರಶ್ನೆಗಳ ಬದಲಾಗಿ 38 ಪ್ರಶ್ನೆಗಳಿರುತ್ತದೆಯೇ ಹೊರತು ಹೆಚ್ಚಿನ ಬದಲಾವಣೆ ಏನೂ ಇರುವುದಿಲ್ಲ. ಕಳೆದ ವರ್ಷ ನೀಲನಕಾಶೆ ನೀಡಿರುವುದಿಲ್ಲ. ಆದರೆ ಘಟಕವಾರು ಅಂಕಗಳ ಹಂಚಿಕೆ ನೀಡಲಾಗಿತ್ತು. ಇದರಿಂದ ಶಿಕ್ಷಕರು ಕಡಿಮೆ ಅಂಕಗಳ ಹಂಚಿಕೆ ಅಂದರೆ 1 ಅಥವಾ 2 ಅಂಕ ಇರುವಂತಹ ಪಾಠಗಳನ್ನು ಭೋದಿಸದೇ ಇರುವಂತಹ ಸಂದರ್ಭಗಳು ಅಧಿಕವಾಗಿರುತ್ತದೆ. ಹಾಗಾಗಿ ಈ ವರ್ಷದಿಂದ ವಿಷಯಾಧಾರಿತ(ಥೀಮ್‍ವೈಸ್) ಅಂಕಗಳ ಹಂಚಿಕೆಯನ್ನು ನಿಗದಿ ಮಾಡಲಾಗಿದ್ದು ಈ ಕ್ರಮ ಹೆಚ್ಚು ವೈಜ್ಞಾನಿಕವಾಗಿದ್ದು ಹಾಗೂ ತಾರ್ಕಿಕವಾದದ್ದು ಆಗಿದೆ.

    ಇದರಿಂದಾಗಿ ಶಿಕ್ಷಕರು ಎಲ್ಲಾ ಅಧ್ಯಾಯಗಳನ್ನು ಬೋಧನೆ ಮಾಡುವುದು ಕಡ್ಡಾಯವಾಗಿರುತ್ತದೆ. ಪ್ರಸ್ತುತ ಪರೀಕ್ಷಾ ಪದ್ಧತಿಯನ್ನು ಸಾಧಾರಣವಾಗಿ ಕೇಳಿ ಬರುವ ಸಾಮೂಹಿಕ ನಕಲನ್ನು ತಡೆಗಟ್ಟಬಹುದು. ಮಕ್ಕಳಲ್ಲಿ ತಾರ್ಕಿಕ ಚಿಂತನೆಯನ್ನು ಮೂಡಿಸಬಹುದು. ದೀರ್ಘ ಉತ್ತರದ ಪ್ರಶ್ನೆಗಳಿಂದ ಮಕ್ಕಳಲ್ಲಿ ಬರವಣಿಗೆಯ ಕೌಶಲ್ಯ ಮೂಡಿಸಬಹುದು. ಮಕ್ಕಳಲ್ಲಿ ಅಭಿವ್ಯಕ್ತಿ ಕೌಶಲ್ಯ ಬೆಳೆಸುತ್ತದೆ. ಶಿಕ್ಷಕರಲ್ಲಿ ಬೋಧನಾ ಸಾಮಥ್ರ್ಯ ಹೆಚ್ಚಾಗುತ್ತದೆ.

    ಪ್ರಶ್ನೆ ಪ್ರತಿಕೆಯ ಸ್ವರೂಪ:
    1. ಬಹು ಆಯ್ಕೆಯ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ
    2. ಒಂದು ಅಂಕದ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ
    3. ಎರಡು ಅಂಕದ ಪ್ರಶ್ನೆಗಳ ಸಂಖ್ಯೆಯನ್ನು 16 ರಿಂದ 8ಕ್ಕೆ ಇಳಿಸಲಾಗಿದೆ
    4. ಮೂರು ಅಂಕದ ಪ್ರಶ್ನೆಗಳ ಸಂಖ್ಯೆಯನ್ನಯ 6 ರಿಂದ 9ಕ್ಕೆ ಹೆಚ್ಚು ಮಾಡಲಾಗಿದೆ
    5. ಹೊಸದಾಗಿ 5 ಅಂಕದ ಪ್ರಶ್ನೆ ಒಂದನ್ನು ಸೇರಿಸಲಾಗಿದೆ
    6. ಕಠಿಣತೆಯ ಮಟ್ಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

    2017-18, 2018-19 ಹಾಗೂ ಹಿಂದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಸಹ ಈ ಮಾದರಿಯ ಪ್ರಶ್ನೆ ಪತ್ರಿಕೆಯಲ್ಲಿ ಪರೀಕ್ಷೆ ಬರೆಯಬೇಕು ಎಂದು ಬೋರ್ಡ್ ತಿಳಿಸಿದೆ.

    ಹೊಸ ಮಾದರಿಯ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ಇಲಾಖೆ ನೀಡಿರುವ ಮಾಹಿತಿಯ ಪಿಡಿಎಫ್ ಪ್ರತಿ ಪಡೆಯಲು ಕ್ಲಿಕ್ ಮಾಡಿ: SSLC-QP CHANGES2019

  • ಪ್ರೇಯಸಿಗಾಗಿ ಬಿಎಸ್‍ಪಿ ಮುಖಂಡನಿಂದ ಪ್ರಶ್ನೆ ಪತ್ರಿಕೆ ಲೀಕ್

    ಪ್ರೇಯಸಿಗಾಗಿ ಬಿಎಸ್‍ಪಿ ಮುಖಂಡನಿಂದ ಪ್ರಶ್ನೆ ಪತ್ರಿಕೆ ಲೀಕ್

    ಲಕ್ನೋ: ಪ್ರೇಯಸಿಗಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ಬಹುಜನ ಸಮಾಜವಾದಿ ಪಕ್ಷದ(ಬಿಎಸ್‍ಪಿ) ನಾಯಕನೊಬ್ಬನು ಯತ್ನಿಸಿದ್ದು, ಆತನಿಗೆ ಸಹಾಯ ಮಾಡಿದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಉತ್ತರ ಪ್ರದೇಶದ ಬಿಎಸ್‍ಪಿ ನಾಯಕ ಫಿರೋಜ್ ಅಲಾಮ್ ಬಂಧಿತ ಆರೋಪಿ. ಈತ ಎಂಬಿಎ ಓದುತ್ತಿದ್ದ ತನ್ನ ಪ್ರೇಯಸಿಗಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ಪ್ರಯತ್ನ ನಡೆಸಿದ್ದನು. ಆಲಿಗಢ್ ಮುಸ್ಲಿಂ ವಿಶ್ವವಿದ್ಯಾನಿಲಯದ(ಎಎಂವಿ) ಸಿಬ್ಬಂದಿ ಸಹಾಯದಿಂದ ಎಂಬಿಎ ಪೇಪರ್ ಲೀಕ್ ಮಾಡುವ ತಯಾರಿ ನಡೆಸಿದ್ದನು. ಪ್ರಶ್ನೆ ಪತ್ರಿಕೆ ತಂದು ಕೊಟ್ಟರೆ ವಿಶ್ವವಿದ್ಯಾಲಯದಲ್ಲಿ ಕೆಲಸ ಖಾಯಂಗೊಳಿಸುತ್ತೇನೆ ಎಂದು ಆಫರ್ ನೀಡಿದ್ದನು.

    ಪ್ರೇಯಸಿಗೆ ಪರೀಕ್ಷೆ ಮೊದಲು ಪ್ರಶ್ನೆ ಪತ್ರಿಕೆ ನೀಡುವುದಾಗಿ ಫಿರೋಜ್ ಭರವಸೆ ನೀಡಿದ್ದನಂತೆ. ಆದರೆ ಮೊದಲು ಎಎಂವಿ ಸಿಬ್ಬಂದಿ ನಕಲಿ ಪ್ರಶ್ನೆ ಪತ್ರಿಕೆ ನೀಡಿದ್ದ ಎನ್ನಲಾಗಿದೆ. ಬಳಿಕ ಇದು ಪ್ರೇಯಸಿಗೆ ತಿಳಿದು ಗಲಾಟೆ ಮಾಡಿದ್ದಾಳೆ. ಹೀಗಾಗಿ ಸ್ನೇಹಿತ ಹೈದರ್ ಜೊತೆ ಸೇರಿ ಫಿರೋಜ್ ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ಪುನಃ ಪ್ರಶ್ನೆ ಪತ್ರಿಕೆ ತೆರಲು ಹೇಳಿದ್ದಾನೆ. ಅಲ್ಲದೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ವಾಟ್ಸಾಪ್ ಗ್ರೂಪ್ ಕೂಡ ಮಾಡಲಾಗಿತ್ತು.

    ಲೀಕ್ ಆದ ಒಂದು ಪ್ರಶ್ನೆ ಪತ್ರಿಕೆಗೆ 2 ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ಇನ್ನೇನು ಪ್ರಶ್ನೆ ಪತ್ರಿಕೆಗೆ ಲೀಕ್ ಮಾಡುವಷ್ಟರಲ್ಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಎಎಂವಿ ಸಿಬ್ಬಂದಿ ಹಾಗೂ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಫಿರೋಜ್ ಮಾತ್ರ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದಾನೆ.

  • ಸಿಸಿಬಿ ಸಮಯ ಪ್ರಜ್ಞೆಯಿಂದ ತಪ್ಪಿದ ಮತ್ತೊಂದು ಮೆಗಾ ಪೇಪರ್ ಲೀಕ್ ಪ್ಲ್ಯಾನ್

    ಸಿಸಿಬಿ ಸಮಯ ಪ್ರಜ್ಞೆಯಿಂದ ತಪ್ಪಿದ ಮತ್ತೊಂದು ಮೆಗಾ ಪೇಪರ್ ಲೀಕ್ ಪ್ಲ್ಯಾನ್

    ಬೆಂಗಳೂರು: ಸಿಸಿಬಿ ಪೊಲೀಸರ ಸಮಯ ಪ್ರಜ್ಞೆಯಿಂದ ಮತ್ತೊಂದು ಮೆಗಾ ಪೇಪರ್ ಲೀಕ್ ಪ್ಲ್ಯಾನ್ ತಪ್ಪಿದ್ದು, ಈ ಸಂಬಂಧ ಸಿಸಿಬಿ ಪೊಲೀಸರು ಐವರು ಏಜೆಂಟರನ್ನು ಬಂಧಿಸಿದ್ದಾರೆ.

    ಇಂದು ರಾಜ್ಯಾದ್ಯಂತ ಪಿಎಸ್‍ಐ ಪರೀಕ್ಷೆ ಇತ್ತು. ಇದೇ ವೇಳೆ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಲು ಏಜೆಂಟ್ ಗಳು ಸಂಚು ರೂಪಿಸಿದ್ದರು. ಅದೇ ರೀತಿ ಪೊಲೀಸರ ಕಣ್ಣುತಪ್ಪಿಸಿ ಲೀಕ್ ಮಾಡಲು ಮುಂದಾಗಿದ್ದರು. ಆದರೆ ಖಚಿತ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ದಾಳಿ ಮಾಡಿ ಗದಗಿನ ಗಜೇಂದ್ರಗಡದಲ್ಲಿ ಬೆಂಗಳೂರು ಮೂಲದ ಮೂವರು ಹಾಗೂ ಗದಗ ಮೂಲದ ಇಬ್ಬರು ಸೇರಿ ಒಟ್ಟು ಐವರು ಏಜೆಂಟರನ್ನು ಬಂಧಿಸಿದ್ದಾರೆ.

    ಪೇಪರ್ ಲೀಕ್ ಬಗ್ಗೆ ಶನಿವಾರ ಸಂಜೆಯೇ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಕೂಡಲೇ ಎಂಟು ತಂಡಗಳನ್ನು ನಿಯೋಜನೆ ಮಾಡಿ ಉತ್ತರ ಕರ್ನಾಟಕ ಸೇರಿ ಹಲವೆಡೆ ಮಿಂಚಿನ ಕಾರ್ಯಾಚರಣೆ ಮಾಡಿದ್ದಾರೆ. ಆಗ ಪೇಪರ್ ಲೀಕ್ ಮಾಡಲು ಪ್ಲ್ಯಾನ್ ಮಾಡಿದ್ದವರನ್ನೆ ಸಿಸಿಬಿ ಪೊಲೀಸ್ ಬಂಧಿಸಿದ್ದಾರೆ.

    ಸಿಸಿಬಿಯ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿದೆ. ಆದರೆ ದಾಳಿ ವೇಳೆ ಇನ್ನೂ ನಾಲ್ವರು ಏಜೆಂಟ್ ಗಳು ಪರಾರಿಯಾಗಿದ್ದು, ನಾಲ್ವರು ಏಜೆಂಟ್ ಗಳಿಗೆ ಶೋಧಕಾರ್ಯ ಮುಂದುವರಿದಿದೆ. ಏಜೆಂಟ್ ಗಳು ಪೇಪರ್ ಇಲ್ಲದೆಯೇ ಅಭ್ಯರ್ಥಿಗಳ ಬಳಿ ಹಣ ಪಡೆಯಲು ಮುಂದಾಗಿದ್ದು, ನೂರಾರು ಅಭ್ಯರ್ಥಿಗಳನ್ನ ಸಂಪರ್ಕಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಮಾಹಿತಿ ಪಡೆದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

    ಸದ್ಯ ಐವರು ಏಜೆಂಟ್ ಗಳನ್ನ ಬಂಧಿಸಿ ಗದಗದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಹಿಂದೆ ಇವರು ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದರು. ಆದರೆ ಈಗ ಸಿಸಿಬಿ ಸಮಯ ಪ್ರಜ್ಞೆಯಿಂದ ಪಿಎಸ್‍ಐ ಪ್ರಶ್ನೆ ಪತ್ರಿಕೆ ಸೋರಿಕೆ ತಪ್ಪಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳೆದ ವರ್ಷದ ಪ್ರಶ್ನೆ ಪತ್ರಿಕೆಯನ್ನೇ ಈ ವರ್ಷವೂ ಕೊಟ್ಟ ಮೈಸೂರು ವಿವಿ

    ಕಳೆದ ವರ್ಷದ ಪ್ರಶ್ನೆ ಪತ್ರಿಕೆಯನ್ನೇ ಈ ವರ್ಷವೂ ಕೊಟ್ಟ ಮೈಸೂರು ವಿವಿ

    ಮೈಸೂರು: ಕಳೆದ ವರ್ಷದ ಪ್ರಶ್ನೆ ಪತ್ರಿಕೆಯ ಒಂದೆರಡು ಪ್ರಶ್ನೆಗಳು ಪ್ರಸಕ್ತ ಸಾಲಿನ ಪ್ರಶ್ನೆ ಪತ್ರಿಕೆಯಲ್ಲಿ ಪುನರಾವರ್ತನೆ ಯಾಗುವುದು ಸಾಮಾನ್ಯ. ಆದರೆ ಮೈಸೂರು ವಿವಿಯಲ್ಲಿ ಮಾತ್ರ ಕಳೆದ ವರ್ಷದ ಪ್ರಶ್ನೆ ಪತ್ರಿಕೆಯನ್ನೇ ಯಾಥವತ್ ಆಗಿ ಪ್ರಸಕ್ತ ವರ್ಷವೂ ರಿಪೀಟ್ ಆಗಿದೆ.

    ಸೋಮವಾರ ಮೈಸೂರು ವಿವಿಯ ಮೊದಲ ಸೆಮಿಸ್ಟರ್ ಎಂಎಡ್ ವಿಷಯದ ಶಿಕ್ಷಣ ವಿಷಯ ಕುರಿತ introduction of education studies exam ನಡೆದಿದೆ. ಈ ಪರೀಕ್ಷೆಯಲ್ಲಿ ಮೈಸೂರು ವಿವಿ ತನ್ನ ಸೋಮಾರಿತನವನ್ನು ಪ್ರದರ್ಶಿಸಿದೆ. ಒಂದಲ್ಲ ಎರಡಲ್ಲ ಸಿರಿಯಲ್ ನಂಬರ್ ಸಮೇತ ಕಳೆದ ವರ್ಷದ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳನ್ನೇ ಈ ವರ್ಷವೂ ಮುದ್ರಿಸಿ ಕೊಟ್ಟಿದೆ.

    2017ರಲ್ಲಿ ಕೊಟ್ಟ ಪ್ರಶ್ನೆ ಪತ್ರಿಕೆಯನ್ನೆ 2018ರ ಪರೀಕ್ಷೆಗೆ ಮರು ಮುದ್ರಿಸಿ ಕೊಟ್ಟಿದೆ. ಈ ಮೂಲಕ ಮೈಸೂರು ವಿವಿಯೂ ಪ್ರಶ್ನೆ ಪತ್ರಿಕೆ ತಯಾರಿಕೆಗೂ ಈ ಮಟ್ಟದ ಸೋಮಾರಿತನವೇ ಅಥವಾ ಇದು ಬೇಜಾವಾಬ್ದಾರಿಯೇ ಎನ್ನುವ ಪ್ರಶ್ನೆ ಎದ್ದಿದೆ.

    ಪ್ರಶ್ನೆ ಪತ್ರಿಕೆಯಲ್ಲಿ ಎಡವಟ್ಟು ಮಾಡಿದ್ದ ಬಗ್ಗೆ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಒಪ್ಪಿಕೊಂಡಿದ್ದು, 2017 ಪ್ರಶ್ನೆ ಪತ್ರಿಕೆ ಪುನರಾವರ್ತನೆಯಾಗಿದೆ. ಈ ಬಗ್ಗೆ ನನಗೂ ಮಾಹಿತಿ ಲಭ್ಯವಾಗಿದೆ. ಪರೀಕ್ಷೆಯ ಮಂಡಳಿ ಇದಕ್ಕೆಲ್ಲ ಹೊಣೆಯಾಗುತ್ತದೆ. ತಕ್ಷಣವೇ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸ್ವಾಮೀಜಿಯ ಕೈವಾಡ

    ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸ್ವಾಮೀಜಿಯ ಕೈವಾಡ

    ಬೆಂಗಳೂರು: ಇತ್ತೀಚೆಗಷ್ಟೇ ಪೊಲೀಸ್ ಪೇದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಲೀಕ್ ಮಾಡಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸ್ವಾಮೀಜಿಯೊಬ್ಬರ ಹೆಸರು ಹೊರಬಂದಿದ್ದು, ಸ್ಫೋಟಕ ಮಾಹಿತಿ ಬಯಲಾಗಿದೆ.

    ಕಲ್ಮಠ ಸ್ವಾಮಿಯ ಹೆಸರು ಕೇಳಿ ಬಂದಿದೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುವುದರಲ್ಲಿ ಎಕ್ಸ್ ಪರ್ಟ್ ಆಗಿರುವ ಶಿವಕುಮಾರ ಸ್ವಾಮೀಜಿಯನ್ನು ಸಿಸಿಬಿ ವಿಚಾರಣೆಯನ್ನು ಮಾಡುತ್ತಿದ್ದು, ಸಾಕಷ್ಟು ಅಂಶಗಳು ಬೆಳಕಿಗೆ ಬರುತ್ತಿವೆ. ಕಲ್ಮಠ ಸ್ವಾಮಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಅಭ್ಯರ್ಥಿಗಳಿಗೆ ಟ್ರೈನಿಂಗ್ ಕೊಡುತ್ತಿದ್ದ ಎಂದು ಗೊತ್ತಾಗಿದೆ.

    6 ಲಕ್ಷ ಕೊಟ್ಟವರಿಗೆ ನೂರು ಪ್ರಶ್ನೆ ಉಚಿತ ಎಂದು ಹೇಳುತ್ತಾ 15 ಕೋಟಿ ಹಣ ವಸೂಲಿ ಮಾಡಿ ಅಭ್ಯರ್ಥಿಗಳಿಗೆ ಶಿವಕುಮಾರ್ ಟ್ರೈನಿಂಗ್ ಕೊಡುತ್ತಿದ್ದನು. ಈತ ಪ್ರಶ್ನೆ ಪತ್ರಿಕೆಯ ಮುಖ್ಯ ಪೇಜ್‍ನ್ನೇ ಕದಿಯುತ್ತಿದ್ದನು. ಬಳಿಕ ಜನರಿಲ್ಲದ ರೆಸಾರ್ಟ್ ಒಂದರಲ್ಲಿ ಟ್ರೈನಿಂಗ್ ಕೊಡುತ್ತಿದ್ದನು ಎಂದು ತಿಳಿದು ಬಂದಿದೆ.

    ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದ ಹಿಂದೆ ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡನ ನಂಟು ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಬಸವರಾಜ್ ಅಲಿಯಾಸ್ ಬಸವ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದವನಾಗಿದ್ದು, 110 ಜನ ಹುಡುಗರು, 10 ಜನ ಹುಡುಗಿಯರು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಹಿಂದೆ ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಕಲ್ಮಠ ಸ್ವಾಮಿ ಈಗ ಮತ್ತೆ ಪ್ರಶ್ನೆ ಪತ್ರಿಕೆಯ ಉರುಳು ಸಿಕ್ಕಿಬಿದ್ದಿದೆ. ಪ್ರಶ್ನೆ ಪತ್ರಿಕೆಯ ಲೀಕ್ ದಂಧೆ ಗೊತ್ತಿದ್ದೇ ಸ್ವಾಮಿಜಿ ಜಾಗವನ್ನು ಬಿಟ್ಟುಕೊಟ್ಟಿದ್ರಾ.? ಅಥವಾ ಹಣವನ್ನು ಪಡೆದುಕೊಂಡಿದ್ರಾ ಅನ್ನೋ ಅನುಮಾನವನ್ನೂ ಕೂಡ ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು 7 ದಿನಗಳ ಕಾಲ ಲೀಕ್ ಕಿಂಗ್‍ಪಿನ್ ಶಿವಕುಮಾರಸ್ವಾಮಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಶ್ನೆ ಪತ್ರಿಕೆಯ ಲೀಕ್‍ಗೆ ಪಿಯು ಬೋರ್ಡ್ ಬ್ರೇಕ್

    ಪ್ರಶ್ನೆ ಪತ್ರಿಕೆಯ ಲೀಕ್‍ಗೆ ಪಿಯು ಬೋರ್ಡ್ ಬ್ರೇಕ್

    ಬೆಂಗಳೂರು: ಇನ್ನು ಮುಂದೆ ಪಿಯು ಪ್ರಶ್ನೆ ಪತ್ರಿಕೆ ಪ್ರಿಂಟ್ ಆಗಲ್ಲ. ಬದಲಿಗೆ ಹೊಸ ವಿಧಾನದ ಮೂಲಕ ಪಿಯು ಬೋರ್ಡ್ ಎಕ್ಸಾಮ್ ನಡೆಸಲು ತಯಾರಿ ನಡೆಸಿದೆ.

    ಹೌದು ಅಲ್ಲಿ ಪೇಪರ್ ಲೀಕ್ ಆಯ್ತು. ಇಲ್ಲಿ ಆಯ್ತು ಎರಡು ಪೇಪರ್ ಲೀಕಾಗಿದೆಯಂತೆ ಅನ್ನೋ ಸುದ್ದಿಗೆ ಇದೀಗ ಪಿಯು ಬೋರ್ಡ್ ಬ್ರೇಕ್ ಹಾಕಲು ಹೊರಟಿದೆ. ಇನ್ನು ಪಿಯು ಪರೀಕ್ಷೆಗಳನ್ನು ಹೈಫೈ ಮಾಡಲು ಹೊರಟಿರುವ ಇಲಾಖೆ ತಂತ್ರಜ್ಞಾನದ ಮೊರೆಹೋಗಿದೆ.

    ಪ್ರಸಕ್ತ ವರ್ಷದಿಂದ 5 ಲೆವೆಲ್ ಐ.ಪಿ- ಇಂಟರ್ ನೆಟ್ ಪ್ರೊಟೋಕಾಲ್ ಸಿಸ್ಟಮ್ ಬಳಸಿ ಪಿಯು ಪರೀಕ್ಷೆಗಳನ್ನು ನಡೆಸಲು ಪ್ಲಾನ್ ಮಾಡಲಾಗಿದೆ. ಪಿಯು ಪರೀಕ್ಷೆಗೆ ಇನ್ನು ಮುಂದೆ ಪರೀಕ್ಷಾ ಕೇಂದ್ರಗಳಲ್ಲಿಯೇ ಪ್ರಶ್ನೆ ಪತ್ರಿಕೆಯನ್ನು ಪ್ರಿಂಟ್ ಮಾಡುವ ಹೊಸ ವಿಧಾನವನ್ನ ಅಳವಡಿಸಿಕೊಳ್ಳಲು ಮುಂದಾಗಿದ್ದು, ಈಗಾಗಲೇ ಒಂದು ಪರೀಕ್ಷಾ ಕೇಂದ್ರದಲ್ಲಿ ಪ್ರಯೋಗಿಕವಾಗಿ ಜಾರಿಗೆ ಸಹ ತಂದಿದ್ದಾರೆ.

    5 ಲೆವಲ್ ಸೆಕ್ಯೂರಿಟಿ ಚೆಕ್:

    1. ಪರೀಕ್ಷೆ ನಡೆಯುವ 1 ಗಂಟೆ ಮುಂಚೆ ಪ್ರಶ್ನೆ ಪತ್ರಿಕೆ ರವಾನೆ.
    2. ಪರೀಕ್ಷಾ ದಿನ 9.30 ಕ್ಕೆ ಪ್ರಶ್ನೆ ಪತ್ರಿಕೆ ಪ್ರಿಂಟ್.
    3. ಎಲ್ಲಾ ಆಫೀಸರ್ಸ್ ಗಳಿಗೂ ಬೇರೆ ಬೇರೆ ಪಾಸ್ ವರ್ಡ್.
    4. ಪ್ರಶ್ನೆ ಪತ್ರಿಕೆ ಪ್ರಿಂಟ್ ತಗೆಯಲು ಫಿಂಗರ್ ಪ್ರಿಂಟ್ ಪಾಸ್ ವರ್ಡ್.
    5. ಎಕ್ಸಾಮ್ ನಡೆಯೋಕು ಒಂದು ಗಂಟೆ ಮುಂಚೆ ಅಧಿಕಾರಿಗಳಿಗೆ ಪರೀಕ್ಷಾ ಕೇಂದ್ರದ ಮಾಹಿತಿ

    ಈ ಪರೀಕ್ಷಾ ವಿಧಾನ ಯಶಸ್ವಿ ಮಾಡಲು ಹೈ ಎಂಡ್ ಕಂಪ್ಯೂಟರ್, ಪ್ರಿಂಟರ್‍ಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ ನೆಟ್‍ಗೆ ಸಮಸ್ಯೆಯಾಗದಂತೆ ಹೈಸ್ಪೀಡ್ ಇಂಟರ್ ನೆಟ್ ಸಹ ಅಳವಡಿಕೆಗೆ ಮುಂದಾಗಿದೆ. ಇದರ ಜೊತೆ ವಿದ್ಯುತ್ ಸಮಸ್ಯೆ ಉದ್ಭವವಾಗದಂತೆ ಮಿನಿ ಜನರೇಟರ್ ಬಳಕೆ ಮಾಡಿಕೊಳ್ಳಲು ಸಹ ನಿರ್ಧಾರ ಮಾಡಲಾಗಿದೆ. ಈ ಮೂಲಕ ಎಕ್ಸಾಮ್ ಶುರುವಾಗುವುದಕ್ಕೆ 30 ನಿಮಿಷಗಳ ಮೊದಲು ಪ್ರಶ್ನೆ ಪತ್ರಿಕೆಗಳನ್ನು ಪ್ರಿಂಟ್ ತಗೆಯುವ ಹೊಸ ವ್ಯವಸ್ಥೆಗೆ ಪಿಯು ಬೋರ್ಡ್ ಸಜ್ಜಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಸಿ ಶಿಖಾ ತಿಳಿಸಿದ್ದಾರೆ.

  • SSLC ಪರೀಕ್ಷೆಯ ಮೊದಲ ದಿನವೇ ಪ್ರಶ್ನೆಪತ್ರಿಕೆ ಲೀಕ್- ಒಂದೇ ವಿಷಯದ ಕುರಿತು 2 ಬಾರಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    SSLC ಪರೀಕ್ಷೆಯ ಮೊದಲ ದಿನವೇ ಪ್ರಶ್ನೆಪತ್ರಿಕೆ ಲೀಕ್- ಒಂದೇ ವಿಷಯದ ಕುರಿತು 2 ಬಾರಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    ವಿಜಯಪುರ: ರಾಜ್ಯಾದ್ಯಂತ ಶುಕ್ರವಾರ SSLC ಪರೀಕ್ಷೆ ಆರಂಭವಾಗಿದೆ. ಆದರೆ ಪರೀಕ್ಷೆ ಮೊದಲ ದಿನವೇ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಎಸ್‍ಎಸ್‍ಎಲ್‍ಸಿ ಪ್ರಥಮ ಭಾಷೆಯ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ.

    ಮುದ್ದೇಬಿಹಾಳ ಪಟ್ಟಣದ ಜಮೀನೊಂದರಲ್ಲಿ ಪ್ರಶ್ನೆ ಪತ್ರಿಕೆ ಹೊರಗೆ ತಂದು ನಕಲು ಮಾಡಿ, ವಿದ್ಯಾರ್ಥಿಗಳಿಗೆ ಕಾಪಿ ಚೀಟಿಗಳನ್ನು ಸಿದ್ಧಪಡಿಸುತ್ತಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಕನ್ನಡ ಪರೀಕ್ಷೆ ಆರಂಭಗೊಂಡ ಒಂದೂವರೆ ಗಂಟೆ ಸಮಯದಲ್ಲಿ ಪ್ರಶ್ನೆಪತ್ರಿಕೆ ಬಹಿರಂಗವಾಗಿತ್ತು. ವಿದ್ಯಾರ್ಥಿಗಳಿಗೆ ನಕಲು ಮಾಡಲು ಚೀಟಿ ಕೊಡುತ್ತಿದ್ದ ಮುದ್ದೇಬಿಹಾಳ ತಾಲೂಕಿನ ಚಿಲಮಿ ಗ್ರಾಮದ ನಿವಾಸಿ ಸುನೀಲ್ ಬಿರಾದಾರನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಈ ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದಾರೆ.

    ಮಹಾ ಯಡವಟ್ಟು: ಶಿಕ್ಷಣ ಇಲಾಖೆಯ ಮಹಾ ಯಡವಟ್ಟಿನಿಂದ ಧಾರವಾಡ ಜಿಲ್ಲೆಯ ಕುಂದಗೋಳದ ಶಿವಾನಂದ ಶಾಲೆಯ ಕೆಲ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆ ಬರೆದರು. ಶುಕ್ರವಾರ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆದ ವೇಳೆ ರೆಗ್ಯುಲರ್ ವಿದ್ಯಾರ್ಥಿಗಳಿಗೆ, ಹೆಚ್ಚುವರಿ ಪ್ರಶ್ನಾಪತ್ರಿಕೆ ವಿತರಣೆ ಮಾಡಿ ಶಿಕ್ಷಕರು ಯಡವಟ್ಟು ಮಾಡಿದ್ದರು. ತಕ್ಷಣ ವಿದ್ಯಾರ್ಥಿಗಳು ಎಚ್ಚೆತ್ತು ಶಿಕ್ಷಕರಿಗೆ ಮನವಿ ಮಾಡಿಕೊಂಡರು ಕೂಡ ಅದೇ ಪ್ರಶ್ನೆ ಪತ್ರಿಕೆಯಿಂದ ಪರೀಕ್ಷೆ ಬರೆಸಲಾಗಿದೆ. ಆದರೆ ಪರೀಕ್ಷೆ ಮುಗಿದ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಪ್ರಶ್ನೆಪತ್ರಿಕೆ ನೀಡಿ ಪರೀಕ್ಷೆ ಬರೆಸಿದ್ದಾರೆ.

    ಪರೀಕ್ಷಾ ಸಿಬ್ಬಂದಿಯ ಈ ಯಡವಟ್ಟಿನ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡರು. ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇಷ್ಟೆಲ್ಲಾ ನಡೆದರು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

  • ಗುಲ್ಬರ್ಗಾ ವಿವಿಯಿಂದ ಮತ್ತೆ ಯಡವಟ್ಟು- ಬಿಕಾಂ ಪ್ರಶ್ನೆ ಪ್ರತಿಕೆ ಸೋರಿಕೆ

    ಗುಲ್ಬರ್ಗಾ ವಿವಿಯಿಂದ ಮತ್ತೆ ಯಡವಟ್ಟು- ಬಿಕಾಂ ಪ್ರಶ್ನೆ ಪ್ರತಿಕೆ ಸೋರಿಕೆ

    ರಾಯಚೂರು: ಗುಲ್ಬರ್ಗಾ ವಿಶ್ವವಿದ್ಯಾಲಯ ಯಡವಟ್ಟುಗಳ ಮೇಲೆ ಯಡವಟ್ಟುಗಳನ್ನ ಮಾಡುತ್ತಿದೆ. ವಿವಿಯ ಪದವಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಪದೇ ಪದೇ ಸೊರಿಕೆಯಾಗುತ್ತಿವೆ. ಎರಡು ದಿನಗಳ ಹಿಂದೆಯಷ್ಟೇ ಬಿ.ಕಾಂ 3ನೇ ಸೇಮಿಸ್ಟರ್ ನ ಸಂಖ್ಯಾಶಾಸ್ತ್ರ ಪತ್ರಿಕೆ ಲೀಕ್ ಆಗಿತ್ತು. ಈಗ ಪುನಃ ಬಿ.ಕಾಂ. ಮೂರನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದೆ.

    ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಬೇಕಾಗಿದ್ದ `ಸ್ಮಾಲ್ ಬಿಸಿನೆಸ್ ಮ್ಯಾನೇಜ್‍ಮೆಂಟ್’ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಸೋರಿಕೆಯಾದ ಪ್ರಶ್ನೆ ಪತ್ರಿಕೆ ರಾಯಚೂರು ಸೇರಿದಂತೆ ವಿವಿ ವಿದ್ಯಾರ್ಥಿಗಳ ವಾಟ್ಸಪ್‍ನಲ್ಲಿ ಹರಿದಾಡುತ್ತಿದೆ. ಈ ಹಿಂದೆ ಸ್ಟಾಟಿಸ್ಟಿಕ್ಸ್ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.

    ಇಂದು ನಡೆಯಬೇಕಾಗಿದ್ದ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದರಿಂದ ಸ್ಮಾಲ್ ಬಿಸಿನೆಸ್ ಮ್ಯಾನೇಜ್‍ಮೆಂಟ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಗುಲ್ಬರ್ಗಾ ವಿವಿ ಕುಲಪತಿ ಎಸ್.ನಿರಂಜನ್ ಆದೇಶ ಹೊರಡಿಸಿದ್ದಾರೆ.