Tag: Question hour

  • ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ದಾಖಲೆ ಸೃಷ್ಟಿ

    ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ದಾಖಲೆ ಸೃಷ್ಟಿ

    ನವದೆಹಲಿ: ಬುಧವಾರ ನಡೆದ ಲೋಕಸಭಾ ಅಧಿವೇಶನದಲ್ಲಿ ದಾಖಲೆ ಸೃಷ್ಟಿಯಾಗಿದ್ದು, ಪ್ರಶ್ನೋತ್ತರ ಅವಧಿಯಲ್ಲಿ ಒಟ್ಟು 20 ಪ್ರಶ್ನೆಗಳನ್ನು ಸಂಸದರು ಕೇಳಿದ್ದಾರೆ.

    ಪ್ರಶ್ನೋತ್ತರ ಅವಧಿಯಲ್ಲಿ ಸುಮಾರು 20 ಪ್ರಶ್ನೆಗಳನ್ನು ಕೇಳಿದ್ದಕ್ಕೆ ಹಾಗೂ ಉತ್ತರಿಸಿದ್ದಕ್ಕೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರು ಹಾಗೂ ಸಚಿವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರಶ್ನೋತ್ತರ ಸಮಯದಲ್ಲಿ ನಾವು 20 ಪ್ರಶ್ನೆಗಳನ್ನು ಸ್ವೀಕರಿಸಿದ್ದೇವೆ. ಇದೆಲ್ಲ ಸಾಧ್ಯವಾಗಿದ್ದು ನಿಮ್ಮಿಂದ, ಸಹಕರಿಸಿದ ಎಲ್ಲ ಸಂಸದರು ಹಾಗೂ ಕೇಂದ್ರ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇನೆ. ಸದನಕ್ಕೆ ಶುಭ ಕೋರುತ್ತೇನೆ ಎಂದು ಓಂ ಬಿರ್ಲಾ ತಿಳಿಸಿದರು.

    ಸಂಸದರು ತಮ್ಮ ಪೂರ್ಣ ಪ್ರಶ್ನೆಯನ್ನು ಕೇಳುವಂತೆ ಹಾಗೂ ಸಂಬಂಧಿಸಿದ ಸಚಿವರು ಸಂಕ್ಷಿಪ್ತವಾಗಿ ಸರಿಯಾಗಿ ಉತ್ತರಿಸುವಂತೆ ಕೇಳಿಕೊಂಡೆ. ನಿಮ್ಮೆಲ್ಲರ ಸಹಕಾರದಿಂದ ಪ್ರಶ್ನೋತ್ತರ ಸಮಯವನ್ನು ಪೂರ್ಣಗೊಳಿಸಿದ್ದೇವೆ. ಸದನ ಸುಗಮವಾಗಿ ನಡೆಯಲು ಎಲ್ಲ ಸಂಸದರ ಸಹಕಾರ ಇದೇ ರೀತಿ ಮುಂದುವರಿಯುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಪ್ರತಿಕ್ರಿಯಿಸಿದರು.

    ಇದೇ ವೇಳೆ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಈ ಕುರಿತು ಪ್ರತಿಕ್ರಿಯಿಸಿ, ಇಂದಿನ ಸದನವು ಪ್ರಶ್ನೋತ್ತರ ಸಮಯದಲ್ಲಿ 20 ಪ್ರಶ್ನೆಗಳನ್ನು ಸ್ವೀಕರಿಸಿದೆ. ಈ ಮೂಲಕ ದಾಖಲೆ ನಿರ್ಮಾಣವಾಗಿದೆ. ಇದಕ್ಕಾಗಿ ಸ್ಪೀಕರ್ ಅವರಿಗೆ ಹಾಗೂ ಸಂಸದರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.