Tag: queensland

  • ಆಸ್ಟ್ರೇಲಿಯಾ ಬೀಚ್‌ನಲ್ಲಿ ಭೀಕರ ಹೆಲಿಕಾಪ್ಟರ್ ದುರಂತ – ನಾಲ್ವರು ಸಾವು, ಮೂವರಿಗೆ ಗಾಯ

    ಆಸ್ಟ್ರೇಲಿಯಾ ಬೀಚ್‌ನಲ್ಲಿ ಭೀಕರ ಹೆಲಿಕಾಪ್ಟರ್ ದುರಂತ – ನಾಲ್ವರು ಸಾವು, ಮೂವರಿಗೆ ಗಾಯ

    ಕ್ಯಾನ್ಬೆರಾ: ಪ್ರವಾಸಿಗರ ಹಾಟ್‌ಸ್ಪಾಟ್ ಎಂದೇ ಖ್ಯಾತಿಯಾಗಿರುವ ಆಸ್ಟ್ರೇಲಿಯಾದ (Australia) ಗೋಲ್ಡ್‌ಕೋಸ್ಟ್‌ ಬೀಚ್‌ನ (Gold Coast Beach) ಸೀ ವರ್ಲ್ಡ್ ಥೀಮ್ ಪಾರ್ಕ್ (World Theme Park) ಬಳಿ ನಡೆದ ಹೆಲಿಕಾಪ್ಟರ್ (Helicopters) ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

    ಕಡಲತೀರದ ಪ್ರದೇಶದಲ್ಲಿ ಎರಡು ಹೆಲಿಕಾಪ್ಟರ್‌ಗಳ (Helicopters) ನಡುವೆ ಉಂಟಾದ ಘರ್ಷಣೆಯಲ್ಲಿ ಒಂದು ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ಮತ್ತೊಂದು ಹೆಲಿಕಾಪ್ಟರ್ ಸಂಪೂರ್ಣ ಛಿದ್ರ-ಛಿದ್ರವಾಗಿ, ಅವಶೇಷಗಳು ಮರಳಿನ ದಂಡೆಯ ಮೇಲೆ ಬಿದ್ದಿದೆ. ಇದನ್ನೂ ಓದಿ: ರೂಪೇಶ್ ಗೆ ಬಿಗ್ ಬಾಸ್ ಕೊಟ್ಟಿದ್ದು 60 ಲಕ್ಷ: ನಿಜವಾಗಿಯೂ ಅವರ ಕೈಗೆ ಬರೋದೆಷ್ಟು?

    ಹೆಲಿಕಾಪ್ಟರ್ (Helicopters) ಡಿಕ್ಕಿಯಾಗಿ 4 ಜನರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವುದಾಗಿ ಕ್ವೀನ್ಸ್‌ಲ್ಯಾಂಡ್‌ ರಾಜ್ಯ ಪೊಲೀಸ್ ಕಾರ್ಯನಿರ್ವಾಹಕ ಇನ್ಸ್ಪೆಕ್ಟರ್ ಗ್ಯಾರಿ ವೊರೆಲ್ ವಿವರಿಸಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಗುಟ್ಕಾ ತಿಂದು ಉಗುಳಿದಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಕ್ವೀನ್ಸ್‌ಲ್ಯಾಂಡ್‌ ರಾಜ್ಯದ ಬ್ರಿಸ್ಬೇನ್‌ನಿಂದ ದಕ್ಷಿಣಕ್ಕೆ 45 ಮೈಲುಗಳಷ್ಟು ದೂರದಲ್ಲಿ ಗೋಲ್ಡ್ ಕೋಸ್ಟ್ ಬೀಚ್ ಇದೆ. ಈ ಪ್ರದೇಶವು ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಲೆಗೆ ಸಿಕ್ಕ ಮರಿ ತಿಮಿಂಗಿಲನ್ನು ಉಳಿಸಲು ಸಮುದ್ರಕ್ಕೆ ಹಾರಿದ- ವಿಡಿಯೋ ನೋಡಿ

    ಬಲೆಗೆ ಸಿಕ್ಕ ಮರಿ ತಿಮಿಂಗಿಲನ್ನು ಉಳಿಸಲು ಸಮುದ್ರಕ್ಕೆ ಹಾರಿದ- ವಿಡಿಯೋ ನೋಡಿ

    – ಸಾರ್ವಜನಿಕರಿಂದ ಮೆಚ್ಚುಗೆ, ಅಧಿಕಾರಿಗಳಿಂದ 3 ಲಕ್ಷ ದಂಡ

    ಕ್ವೀನ್ಸ್‌ಲ್ಯಾಂಡ್: ಬಲೆಗೆ ಸಿಕ್ಕ ಮರಿ ತಿಮಿಂಗಿಲವನ್ನು ಬದುಕಿಸಲು ವ್ಯಕ್ತಿಯೋರ್ವ ಆಳದ ಸಮುದ್ರಕ್ಕೆ ಧುಮುಕಿ ದಿಟ್ಟತನ ಮೆರೆದಿರುವ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಸಮುದ್ರದಲ್ಲಿ ನಡೆದಿದೆ.

    ಈ ಸಹಾಯ ಮಾಡಿದ ವ್ಯಕ್ತಿಯನ್ನು ಜಾಂಗೊ ಎಂದು ಗುರುತಿಸಲಾಗಿದೆ. ಒಬ್ಬನೇ ಬೋಟಿನಲ್ಲಿ ಹೋಗಿ ತನ್ನ ಜೀವವನ್ನು ಲೆಕ್ಕಿಸದೆ ತಿಮಿಂಗಿಲಕ್ಕಾಗಿ ಸಮುದ್ರಕ್ಕೆ ಹಾರಿದ ಜಾಂಗೊ ಕಾರ್ಯಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆ ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಜಾಂಗೊಗೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ದಂಡವನ್ನು ವಿಧಿಸಿದ್ದಾರೆ.

    ಜಾಂಗೊ ಮಾಡಿದ ಈ ಸಹಾಸವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇದರಲ್ಲಿ ಹಂಪ್‍ಬ್ಯಾಕ್ ಜಾತಿಗೆ ಸೇರಿದ ಮರಿ ತಿಮಿಂಗಲವೊಂದು ಸಮುದ್ಯದಲ್ಲಿ ಬಿಟ್ಟಿದ್ದ ಬಲೆಯೊಂದಕ್ಕೆ ಸಿಲುಕಿ ಹೊರಗೆ ಬರಲಾರದೆ ಒದ್ದಾಡುತ್ತಿತ್ತು. ಇದನ್ನು ಕಂಡ ಜಾಂಗೊ ಒಂದು ಚಿಕ್ಕ ಬೋಟಿನಲ್ಲಿ ಹೋಗಿ ಏಕಾಏಕಿ ಸಮುದ್ರಕ್ಕೆ ಧುಮುಕಿ ಸುಮಾರು 5 ನಿಮಿಷಗಳ ಕಾಲ ಈಜಿ ತಿಮಿಂಗಿಲವನ್ನು ಬಲೆಯಿಂದ ಬಿಡಿಸಿ ವಾಪಸ್ ಬಂದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಾಂಗೊ, ನಮ್ಮ ಪರಿಸರದಲ್ಲಿ ಇರುವ ಪ್ರತಿಯೊಂದು ಜೀವರಾಶಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನನ್ನ ಜಾಗದಲ್ಲಿ ಯಾರೇ ಇದ್ದರೂ ತಿಮಿಂಗಿಲವನ್ನು ಆ ಪರಿಸ್ಥಿತಿಯಲ್ಲಿ ನೋಡಿದರೆ ನಾನು ಮಾಡಿದ ಕೆಲಸವನ್ನೇ ಮಾಡುತ್ತಿದ್ದರು. ಜೊತೆಗೆ ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಒಳ್ಳೆ ಕೆಲಸ ಮಾಡಿದರೂ ನಾವು ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಕ್ವೀನ್ಸ್‌ಲ್ಯಾಂಡ್ ಮೀನುಗಾರಿಕೆ ಇಲಾಖೆಯ ಸಚಿವ ಮಾತನಾಡಿ, ಈ ರೀತಿಯ ಘಟನೆ ನಡೆದಾಗ ಅದನ್ನು ಮೀನುಗಾರಿಕೆ ಇಲಾಖೆಗೆ ತಿಳಿಸಬೇಕು. ಅದರಲ್ಲಿ ಪರಿಣಿತಿ ಪಡೆದವರು ಹೋಗಿ ರಕ್ಷಿಸುತ್ತಾರೆ. ಅದನ್ನು ಬಿಟ್ಟು ಈ ರೀತಿ ಜನರು ಸಹಾಸಕ್ಕೆ ಕೈ ಹಾಕಬಾರದು. ಇದರಿಂದ ಅವರ ಜೀವಕ್ಕೆ ಅಪಾಯವಿರುತ್ತದೆ. ಆದ್ದರಿಂದ ನಿಯಮವನ್ನು ಉಲ್ಲಂಘನೆ ಮಾಡಿದ ಜಾಂಗೊಗೆ 3 ಲಕ್ಷ ದಂಡವನ್ನು ವಿಧಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಆದರೆ ಜಾಂಗೊ ಮಾಡಿದ ಕೆಲಸಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದ್ದು, ಜನರು ಅವರ ಬೆನ್ನಿಗೆ ನಿಂತಿದ್ದಾರೆ. ಜೊತೆಗೆ ಜಾಂಗೊಗೆ ವಿಧಿಸಿರುವ ದಂಡವನ್ನು ಜನರು ಭರಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಗೋ ಫಂಡ್‍ಮಿ ಎಂಬ ಸಂಸ್ಥೆ ಜಾಂಗೊಗೆ 3 ಲಕ್ಷ ರೂ. ಅನ್ನು ಬಹುಮಾನವಾಗಿ ನೀಡಿದೆ.

  • ಟ್ರಂಪ್ ಮುಖವಾಡ ಧರಿಸಿ ಆಭರಣ ಕಳವುಗೈದ ಕಿಲಾಡಿ!

    ಟ್ರಂಪ್ ಮುಖವಾಡ ಧರಿಸಿ ಆಭರಣ ಕಳವುಗೈದ ಕಿಲಾಡಿ!

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಯುವಕನೊಬ್ಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖವಾಡ ಧರಿಸಿ ಕಳ್ಳತನ ಮಾಡಿದ್ದಾನೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಘಟನೆ ಭಾನುವಾರ ಬೆಳಗ್ಗೆ ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡ್‍ನಲ್ಲಿ ನಡೆದಿದೆ. ಇಲ್ಲಿನ ಆಭರಣಗಳ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಯುವಕ ಈ ವಿನೂತನ ದಾರಿಯನ್ನು ಬಳಸಿಕೊಂಡಿದ್ದಾನೆ. ಇದೀಗ ಕಳ್ಳನ ಸೆರೆಗೆ ಸಹಾಯ ಮಾಡಿ ಎಂದು ಕ್ವೀನ್ಸ್ ಲ್ಯಾಂಡ್ ಪೊಲೀಸರು ಟ್ವೀಟ್ ಮಾಡುವ ಮೂಲಕ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಇತ್ತಿಚಿನ ದಿನಗಳಲ್ಲಿ ಕಳ್ಳರು ಸಿಸಿ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ವಿಭಿನ್ನ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಹಾಗೆಯೇ ಆಭರಣಗಳ ಅಂಗಡಿಯಲ್ಲಿ ಕಳ್ಳತನ ಮಾಡಲು ಬಂದ ಯುವಕ, ಟ್ರಂಪ್ ಅವರ ಮುಖವಾಡ ಧರಿಸಿ ಅಂಗಡಿಯ ಗಾಜನ್ನು ಒಡೆದು ಆಭರಣಗಳನ್ನು ಕಳ್ಳತನ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕಳ್ಳತನ ಮಾಡಲು ಬಂದ ಯುವಕ ಟ್ರಂಪ್ ಅವರ ಮುಖವಾಡದ ಜೊತೆಗೆ ಕಪ್ಪು ಬಣ್ಣದ ಕೋಟ್, ಕಪ್ಪು ಟ್ರ್ಯಾಕ್ ಪ್ಯಾಂಟ್, ಬಿಳಿ ಬಣ್ಣದ ಬೂಟ್ ಧರಿಸಿದ್ದಾನೆ. ಒಂದು ಆಭರಣದ ಅಂಗಡಿ ಮತ್ತು ಎಲೆಕ್ಟ್ರಾನಿಕ್ ಅಂಗಡಿಯ ಗಾಜನ್ನು ಒಡೆದು ಕಳವು ಮಾಡಿದ್ದಾನೆ. ದರೋಡೆಕೋರನನ್ನು ಕಂಡಲ್ಲಿ ನಮಗೆ ತಿಳಿಸಬೇಕು ಎಂದು ಕ್ವೀನ್ಸ್‍ಲ್ಯಾಂಡ್ ಪೊಲೀಸರು ಸಾರ್ವಜನಿಕರಲ್ಲಿ ರಿಕ್ವೆಸ್ಟ್ ಮಾಡಿದ್ದಾರೆ.

  • ದೈತ್ಯ ಹೆಬ್ಬಾವು ರಸ್ತೆ ದಾಟಲಿ ಎಂದು ಕಾದು ನಿಂತ ಪೊಲೀಸ್- ಫೋಟೋ ವೈರಲ್

    ದೈತ್ಯ ಹೆಬ್ಬಾವು ರಸ್ತೆ ದಾಟಲಿ ಎಂದು ಕಾದು ನಿಂತ ಪೊಲೀಸ್- ಫೋಟೋ ವೈರಲ್

    ಸಿಡ್ನಿ: ಕಾಂಗರೂಗಳು, ಭಯ ಹುಟ್ಟಿಸೋ ಜೇಡಗಳು, ಭಾರಿ ಗಾತ್ರದ ಹಾವು, ಶಾರ್ಕ್‍ಗಳಿಗೆ ಆಸ್ಟ್ರೇಲಿಯಾ ಹೆಸರುವಾಸಿ. ಇದಕ್ಕೆಲ್ಲಾ ಭಯ ಬೀಳೋರು ಆಸ್ಟ್ರೇಲಿಯಾಗೆ ಹೋಗೋಕೆ ಹಿಂದೇಟು ಹಾಕ್ತಾರೆ. ಇಷ್ಟೆಲ್ಲಾ ಸಾಕಾಗಿಲ್ಲ ಅಂದ್ರೆ ಈ ವೈರಲ್ ಫೋಟೋ ನೋಡಿದ್ಮೇಲಂತೂ ಆಸ್ಟ್ರೇಲಿಯಾಗೆ ಪ್ರವಾಸ ಹೋಗೋ ಮುನ್ನ ಒಮ್ಮೆ ಗುಂಡಿಗೆ ಗಟ್ಟಿ ಮಾಡಿಕೊಳ್ಬೇಕು.

    ಹೌದು. ಇಲ್ಲಿನ ಕ್ವೀನ್ಸ್‍ಲ್ಯಾಂಡ್‍ನ ಪೊಲೀಸರೊಬ್ಬರು ದೈತ್ಯ ಹೆಬ್ಬಾವು ರಸ್ತೆ ದಾಟಲು ಕಾದು ನಿಂತಿದ್ದ ಫೋಟೋ ಇದೀಗ ವೈರಲ್ ಆಗಿದೆ. ಇಲ್ಲಿನ ವುಜುಲ್ ವುಜುಲ್ ಬಳಿ ಇಬ್ಬರು ಪೊಲೀಸ್ ಅಧಿಕಾರಿಗಳು ರಾತ್ರಿ ಗಸ್ತಿನಲ್ಲಿದ್ದರು. ಈ ವೇಳೆ ಅತೀ ಉದ್ದದ ಹೆಬ್ಬಾವೊಂದನ್ನ ನೋಡಿದ್ದಾರೆ. ಹೆಬ್ಬಾವು ರಸ್ತೆ ದಾಟುತ್ತಿತ್ತು ಅಷ್ಟೇ.

    ಫೋಟೋ ತೆಗೆಯೋಕೆ ಇದು ಸರಿಯಾದ ಚಾನ್ಸ್ ಎಂದುಕೊಂಡು ಸರ್ಜೆಂಟ್ ಬೆನ್ ಟೋಮ್ ತನ್ನ ಸಹೋದ್ಯೋಗಿಯಾದ ಕ್ರಿಸ್ ಕೆನ್ನಿಯನ್ನ ಕಾರಿನಿಂದ ಕೆಳಗಿಳಿಸಿ ದೈತ್ಯ ಹೆಬ್ಬಾವಿನ ಪಕ್ಕ ನಿಲ್ಲಲು ಹೇಳಿದ್ದಾರೆ. ಹಾವು ಕೂಡಲೇ ಪೊಲೀಸರಿಂದ ದೂರ ಹೋಗಿದೆ. ಆದ್ರೆ ಪೊಲೀಸರು ಅಷ್ಟರಲ್ಲಿ ಫೋಟೋ ತೆಗೆದಿದ್ರು.

    ಈ ಫೋಟೋವನ್ನ ಕ್ವೀನ್ಸ್‍ಲ್ಯಾಂಡ್ ಪೊಲೀಸರು ಫೇಸ್‍ಬುಕ್‍ನಲ್ಲೂ ಹಂಚಿಕೊಂಡಿದ್ದಾರೆ. ಬಾಸ್, ನಮಗೆ ಇನ್ನೂ ಉದ್ದದ ಏಣಿ ಬೇಕು. ವಿಜುಲ್ ವುಜುಲ್ ಬಳಿ ರಾತ್ರಿ ಗಸ್ತಿನ ವೇಳೆ ಅಧಿಕಾರಿಗಳು ಈ ಹೆಬ್ಬಾವು ರಸ್ತೆ ದಾಟೋವರೆಗೆ ಕಾಯಬೇಕಾಯ್ತು ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಈ ಫೋಟೋಗೆ ಈವರೆಗೆ 32 ಸಾವಿರ ರಿಯಾಕ್ಷನ್ಸ್ ಹಾಗೂ 11 ಸಾವಿರ ಕಮೆಂಟ್ಸ್ ಬಂದಿದ್ದು, 19 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಫೋಟೋ ನೋಡಿದವರು ಒಮ್ಮೆ ಹೌಹಾರಿ, ಆ ಕಡೆ ನಾನು ಹೋಗದಂತೆ ಖಚಿತಪಡಿಸಿಕೊಳ್ಳೋಕೆ ನನಗೆ ಈ ಪ್ರದೇಶದ ಮ್ಯಾಪ್ ಬೇಕು ಅಂತ ಕಮೆಂಟ್ ಮಾಡಿದ್ದಾರೆ.

    ಈ ಹಾವು ಸ್ಕ್ರಬ್ ಪೈಥಾನ್ ಜಾತಿಗೆ ಸೇರಿದ್ದು, ಆಸ್ಟ್ರೇಲಿಯಾದಲ್ಲಿ ಇವು ಸಾಮಾನ್ಯ. ಈ ಹಾವು ಸುಮಾರು 16 ಅಡಿ(5 ಮೀಟರ್) ಉದ್ದವಿತ್ತು ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಹಾವುಗಳು 26 ಅಡಿ(8 ಮೀಟರ್)ನಷ್ಟು ಉದ್ದ ಬೆಳೆಯುತ್ತವೆ. ಇವು ವಿಷಕಾರಿಯಲ್ಲ, ಆದ್ರೆ ತನ್ನ ಬೇಟೆಯನ್ನ ಗಟ್ಟಿಯಾಗಿ ಸುತ್ತುವರಿದು ಕೊಲ್ಲಬಹುದಾಗಿವೆ ಎಂದು ವರದಿಯಾಗಿದೆ.