Tag: queen elizabeth

  • ಕೊಹಿನೂರ್‌ವೊಂದೇ ಅಲ್ಲ, ರಾಣಿ ಕಿರೀಟದಲ್ಲಿರುವ ದಕ್ಷಿಣ ಆಫ್ರಿಕಾದ ವಜ್ರ ಮರಳಿಸಿ

    ಕೊಹಿನೂರ್‌ವೊಂದೇ ಅಲ್ಲ, ರಾಣಿ ಕಿರೀಟದಲ್ಲಿರುವ ದಕ್ಷಿಣ ಆಫ್ರಿಕಾದ ವಜ್ರ ಮರಳಿಸಿ

    ಕೇಪ್‍ಟೌನ್: ರಾಣಿ ಎಲಿಜಬೆತ್ (Queen Elizabeth) ನಿಧನದ ಬೆನ್ನಲ್ಲೇ ಬ್ರಿಟಿಷ್ ಕಿರೀಟದ ಆಭರಣಗಳಲ್ಲಿರುವ ಕೊಹಿನೂರ್ (Kohinoor) ವಜ್ರವನ್ನು ವಾಪಸ್ ನೀಡುವಂತೆ ಈಗಾಗಲೇ ಭಾರತದಲ್ಲಿ (India) ಅನೇಕರು ಒತ್ತಾಯಿಸಿದ್ದರು. ಆದರೆ ಇದೀಗ ರಾಣಿ ಕಿರೀಟದಲ್ಲಿರುವ ಇನ್ನೊಂದು ಪ್ರಮುಖ ವಜ್ರವನ್ನು ಮರಳಿ ನೀಡುವಂತೆ ದಕ್ಷಿಣ ಆಫ್ರಿಕಾ (South Africa) ಒತ್ತಾಯಿಸಿದೆ.

    ರಾಣಿ ಎಲಿಜಬೆತ್ 2ರ ಮರಣದ ನಂತರ, ಆಕೆಯ ಮಗ ಪ್ರಿನ್ಸ್ ಚಾಲ್ಸ್ ಬ್ರಿಟನ್ ರಾಜ ಸಿಂಹಾಸನ ಅಲಂಕರಿಸಿದ್ದು, ಈಗ 105-ಕ್ಯಾರೆಟ್ ಕೊಹಿನೂರು ವಜ್ರ ಹಾಗೂ 530.2 ಕ್ಯಾರೆಟ್ ಇರುವ ಗ್ರೇಟ್ ಸ್ಟಾರ್ ವಜ್ರ (Great Star Diamond ) ಇರುವ ಕಿರೀಟ ಅವರ ಪತ್ನಿಯಾದ ರಾಣಿ ಕ್ಯಾಮಿಲ್ಲಾಗೆ ಹೋಗುತ್ತದೆ. ಈ ಕಿರೀಟದಲ್ಲಿರುವ ವಜ್ರವನ್ನು ವಾಪಸ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿ ಬರುತ್ತಿದೆ.

    1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ಸಂದರ್ಭದಲ್ಲಿ ಗ್ರೇಟ್ ಸ್ಟಾರ್ ವಜ್ರ ಸಿಕ್ಕಿತ್ತು. ಇದು ವಿಶ್ವದ ದೊಡ್ಡ ವಜ್ರ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಈ ಗ್ರೇಟ್ ಸ್ಟಾರ್ ಅನ್ನು ಆಫ್ರಿಕಾದ ವಸಾಹತುಶಾಹಿ ಆಡಳಿತಗಾರರು ಬ್ರಿಟಿಷ್ ರಾಜಮನೆತನಕ್ಕೆ ಹಸ್ತಾಂತರಿಸಿದ್ದರು. ಪ್ರಸ್ತುತ ಈ ವಜ್ರವು ರಾಣಿಗೆ ಸೇರಿದ ಕಿರೀಟದಲ್ಲಿ ಅಳವಡಿಸಲಾಗಿದೆ. ಇದನ್ನೂ ಓದಿ: ರಸ್ತೆಗಾಗಿ ದಶಕಗಳಿಂದ ಹೋರಾಟ – ಆಸ್ಪತ್ರೆಗೆ ದಾಖಲಿಸಲು ವದ್ಧೆಯನ್ನು ಜೋಳಿಗೆಯಲ್ಲೇ ಹೊತ್ತೊಯ್ದರು

    ರಾಣಿ ಎಲಿಜಬೆತ್ ನಿಧನದ ಬೆನ್ನಲ್ಲೇ ವಜ್ರವನ್ನು ಹಿಂದಿರುಗಿಸುವಂತೆ change.orgನಲ್ಲಿ ಆನ್‍ಲೈನ್ ಅಭಿಯಾನ ಪ್ರಾರಂಭವಾಗಿದೆ. ಅದಕ್ಕೆ 6,000ಕ್ಕೂ ಹೆಚ್ಚು ಜನರು ಈಗಾಗಲೇ ಸಹಿ ಹಾಕಿದ್ದಾರೆ. ಕಲ್ಲಿನನ್ ವಜ್ರವನ್ನು ತಕ್ಷಣವೇ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಿಸಬೇಕು. ಜೊತೆಗೆ ನಮ್ಮ ದೇಶದ ಮತ್ತು ಇತರ ದೇಶಗಳ ಖನಿಜಗಳು ಅವರವರ ದೇಶಕ್ಕೆ ವಾಪಸ್ ನೀಡಬೇಕು ಎಂದರು.

    ದಕ್ಷಿಣ ಆಫ್ರಿಕಾದ ಸಂಸತ್ತಿನ ಸದಸ್ಯರಾದ ವುಯೋಲ್ವೆತು ಝುಂಗುಲಾ ಅವರು ಈ ಅಭಿಯಾನಕ್ಕೆ ಕೈಜೋಡಿಸಿದ್ದು, ಬ್ರಿಟನ್ ಮಾಡಿದ ಎಲ್ಲಾ ಹಾನಿಗಳಿಗೆ ಪರಿಹಾರ ಹಾಗೂ ಬ್ರಿಟನ್ ಕದ್ದ ಎಲ್ಲಾ ಚಿನ್ನ, ವಜ್ರಗಳನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಲಂಡನ್ ಟವರ್‍ನಲ್ಲಿರುವ ಜ್ಯುವೆಲ್ ಹೌಸ್‍ನಲ್ಲಿ ವಜ್ರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಶ್ವಾನಕ್ಕೆ ಶ್ವಾನದಿಂದಲೇ ರಕ್ತದಾನ

    Live Tv
    [brid partner=56869869 player=32851 video=960834 autoplay=true]

  • ಕಮಲ್ ಹಾಸನ್ ಸಿನಿಮಾ ಸೆಟ್‌ಗೆ ಆಗಮಿಸಿದ್ದಕ್ಕೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದ ರಾಣಿ ಎಲಿಜಬೆತ್

    ಕಮಲ್ ಹಾಸನ್ ಸಿನಿಮಾ ಸೆಟ್‌ಗೆ ಆಗಮಿಸಿದ್ದಕ್ಕೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದ ರಾಣಿ ಎಲಿಜಬೆತ್

    ಇಂಗ್ಲೆಂಡ್ ರಾಣಿ ಎಲಿಜಬೆತ್ (Queen Elizabeth) ನಿನ್ನೆ ತಡರಾತ್ರಿ ವಿಧಿವಶರಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ರಾಣಿಯಾಗಿದ್ದ ಎಲಿಜಬೆತ್ ಬಗ್ಗೆ ಇದೀಗ ಅಚ್ಚರಿಯ ವಿಚಾರವೊಂದು ಹೊರ ಬಿದ್ದಿದೆ. ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ರಾಣಿ ಎಲಿಜಬೆತ್ ತಮ್ಮ ಅಧಿಕಾರದ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಕಮಲ್ ಹಾಸನ್ (Kamal Hassan) ನಟನೆಯ ಹೊಸ ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಭಾರೀ ಟೀಕೆಗೂ ಗುರಿಯಾಗಿದ್ದರು.

    1997ರಲ್ಲಿ ಕಮಲ್ ಹಾಸನ್ ನಿರ್ದೇಶಿಸಿ, ನಿರ್ಮಿಸಿ, ನಟಿಸುತ್ತಿದ್ದ `ಮರುದನಯಾಗಂ’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗೆ ರಾಣಿ ಎಲಿಜಬೆತ್ ಭೇಟಿ ನೀಡಿದ್ದರು. ಸುಮಾರು 20 ನಿಮಿಷಗಳ ಕಾಲ ಸಿನಿಮಾ ಸೆಟ್‌ನಲ್ಲಿ ಕಾಲ ಕಳೆದರು. ಕಮಲ್ ಹಾಸನ್ ಹಾಗೂ ಇತರ ಗಣ್ಯರೊಟ್ಟಿಗೆ ಮಾತನಾಡಿದ್ದರು. ಆದರೆ ಈ ಭೇಟಿ ವಿವಾದಕ್ಕೆ ಕಾರಣವಾಗಿತ್ತು. ಸಾಕಷ್ಟು ಟೀಕೆಗೆ ಗುರಿ ಮಾಡಿತ್ತು. ಚೆನ್ನೈನ ಎಂಜಿಆರ್ ಸ್ಟುಡಿಯೋದಲ್ಲಿ ಯುದ್ಧದ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ರಾಣಿ ಎಲಿಜಬೆತ್(Queen Elizabeth) ಚಿತ್ರೀಕರಣ ಸೆಟ್‌ಗೆ ಆಗಮಿಸಿ, ಕಮಲ್ ಹಾಸನ್ ಅವರೊಟ್ಟಿಗೆ ಮಾತುಕತೆ ನಡೆಸಿದರು. ಕತೆಯ ಬಗ್ಗೆ ತಿಳಿದುಕೊಂಡರು. ಕಮಲ್‌ರ ಆಗಿನ ಪತ್ನಿ ಸಾರಿಕ ಜೊತೆಗೂ ಮಾತನಾಡಿದರು. ಇದನ್ನೂ ಓದಿ:ಸೆಟ್ಟೇರಿತು ಭಾವನಾ ಮೆನನ್- ವಿಜಯ್ ರಾಘವೇಂದ್ರ ನಟನೆಯ `ಕೇಸ್ ಆಫ್ ಕೊಂಡಾಣ’ ಚಿತ್ರ

    ಈ ಭೇಟಿ ಯಾವ ರೀತಿ ಸುದ್ದಿ ಮಾಡಿತ್ತು ಎಂದರೆ, ಬ್ರಿಟಿಷರ ವಿರುದ್ಧ ದ್ವೇಷ ಸಾರುವ ಕಥೆ, ನಮ್ಮವರನ್ನು ಕೆಟ್ಟವರೆಂದು ಬಿಂಬಿಸುವ ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ವರದಿಯಾಗಿತ್ತು. ಈ ಸಿನಿಮಾಗೆ ಭೇಟಿ ನೀಡಿರುವುದು ಬ್ರಿಟಿಷರ ಗೌರವಕ್ಕೆ ಎಲಿಜಬೆತ್ ಧಕ್ಕೆ ತಂದಿದ್ದಾರೆ ಎಂದು ಭಾರೀ ವಿವಾದಕ್ಕೆ ಗುರಿಯಾಗಿದ್ದರು. ಯಾವುದೇ ಟೀಕೆಗೂ ರಾಣಿ ಎಲಿಜಬೆತ್ ಪ್ರತಿಕ್ರಿಯೆ ನೀಡಿರಲಿಲ್ಲ.

    ಇನ್ನು ಕಮಲ್ ಹಾಸನ್ ನಟನೆಯ `ಮರುದನಯಾಗಂ’ ಸಿನಿಮಾ 85 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿತ್ತು. ಇನ್ನೂ ಈ ಚಿತ್ರದ ಅತಿಯಾದ ಬಜೆಟ್‌ನಿಂದಲೇ ಈ ಚಿತ್ರ ನಿಂತಿಹೋಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

    ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ

    ಲಂಡನ್: ಬ್ರಿಟನ್ (Britain) ರಾಣಿ ಎಲಿಜಬೆತ್-2 (Queen Elizabeth)  ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

    96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್‌ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂದು ರಾತ್ರಿ ಸ್ಕಾಟ್ಲೆಂಡ್ ಅರಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1923ರಿಂದ ಬ್ರಿಟನ್‍ನ ರಾಣಿಯಾಗಿದ್ದರು.

    ಮೋದಿ ಉತ್ತಮ ವ್ಯಕ್ತಿ; ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ – ಟ್ರಂಪ್‌ ಬಣ್ಣನೆ

    ವೈದ್ಯರ ಸಲಹೆಯಂತೆ ರಾಣಿ ಎಲಿಜಬೆತ್ ಆರೋಗ್ಯದ ಬಗ್ಗೆ ನಿಗಾ ಇಡಲಾಗಿತ್ತು. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಅವರನ್ನು ಉಳಿಯಲು ಶಿಫಾರಸು ಮಾಡಲಾಗಿತ್ತು. ಬಾಲ್ಮೋರಲ್ ಕ್ಯಾಸಲ್‍ನಲ್ಲಿ ಉಳಿದಿದ್ದ ರಾಣಿ ಎಲಿಜಬೆತ್‍ರನ್ನು ನೋಡಲು, ಆರೋಗ್ಯ ವಿಚಾರಿಸಲು ಇಂದು ಬೆಳಗ್ಗೆಯಿಂದಲೇ ಸಂಬಂಧಿಕರು ದೌಡಾಯಿಸುತ್ತಿದ್ದರು. ಇದೀಗ ನಿಧನ ಹೊಂದಿದ್ದಾರೆ. ಹಾಗಾಗಿ ಬ್ರಿಟನ್ ಸರ್ಕಾರ ಎಲ್ಲಾ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಣಿ ಎಲಿಜಬೆತ್-2 ಸಾವಿಗೆ ಕಂಬನಿ ಮಿಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್ ರಾಣಿ ಎಲಿಜಬೆತ್ ಆರೋಗ್ಯದಲ್ಲಿ ಏರುಪೇರು

    ಬ್ರಿಟನ್ ರಾಣಿ ಎಲಿಜಬೆತ್ ಆರೋಗ್ಯದಲ್ಲಿ ಏರುಪೇರು

    ಲಂಡನ್: ಬ್ರಿಟನ್ ರಾಣಿ ಎಲಿಜಬೆತ್ (Queen Elizabeth) ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ.

    96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್‍ನಿಂದ ಆರೋಗ್ಯ (Health) ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸದ್ಯ ಅವರಿಗೆ ನಡೆಯಲು ಮತ್ತು ನಿಲ್ಲಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಉಮೇಶ್ ಕತ್ತಿ ರಾಜಕೀಯ ಜೀವನ ಪುಸ್ತಕವಾಗಬೇಕು: ಅರುಣ್ ಸಿಂಗ್

    ಸದ್ಯ ರಾಣಿ ಆರೋಗ್ಯ ಸ್ಥಿರವಾಗಿದೆ, ಅವರು ಆರಾಮವಾಗಿದ್ದಾರೆ. ಹೀಗಾಗಿ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಸ್ಕಾಟ್ಲೆಂಡ್‍ನ ಬಾಲ್ಮೋರಲ್ ಕ್ಯಾಸಲ್‍ನಲ್ಲಿ ಉಳಿದಿದ್ದಾರೆ ಎಂದು ಅರಮನೆಯ ಮೂಲಗಳು ತಿಳಿಸಿದೆ. ಇತ್ತ ರಾಣಿ ಎಲಿಜಬೆತ್ ಆರೋಗ್ಯ ವಿಚಾರಿಸಲು ಸಂಬಂಧಿಕರು ದೌಡಾಯಿಸುತ್ತಿದ್ದಾರೆ.

    ವೈದ್ಯರ ಸಲಹೆಯಂತೆ ರಾಣಿ ಎಲಿಜಬೆತ್ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದೆ. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಅವರನ್ನು ಉಳಿಯಲು ಶಿಫಾರಸು ಮಾಡಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಇಂಗ್ಲೆಂಡ್ ರಾಣಿ ಎಲಿಜಬೆತ್‍ರ 2 ವರ್ಷದವರಿದ್ದಾಗಿನ ಫೋಟೋ ವೈರಲ್

    ಇಂಗ್ಲೆಂಡ್ ರಾಣಿ ಎಲಿಜಬೆತ್‍ರ 2 ವರ್ಷದವರಿದ್ದಾಗಿನ ಫೋಟೋ ವೈರಲ್

    ಲಂಡನ್: ಇಂಗ್ಲೆಂಡ್ ರಾಣಿ ಎಲಿಜಬೆತ್ ಇಂದು 96 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ರಾಜಮನೆತನವು ರಾಣಿಯ 2 ವರ್ಷದವಳಾಗಿದ್ದಾಗ ತೆಗೆದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

    ಫೋಟೋದಲ್ಲಿ ಅವರ ಮುಖದ ಮೇಲೆ ಹೊಳೆಯುವ ನಗುವಿನೊಂದಿಗೆ ತನ್ನ ಎರಡು ಕೈಗಳನ್ನು ಗದ್ದಕ್ಕೆ ಹಿಡಿದುಕೊಂಡು ನೇರವಾಗಿ ಕ್ಯಾಮೆರಾಗೆ ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಜನ್ಮದಿನದ ಶುಭಾಶಯಗಳು ಮಹಾರಾಣಿಯವರೇ. ಇಂದು, ರಾಣಿ 96 ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರು 2 ವರ್ಷದ ಮಗುವಿದ್ದಾಗ ತೆಗೆದ ಫೋಟೋವನ್ನು ನಾವು ಹಂಚಿಕೊಳ್ಳುತ್ತಿದ್ದೇವೆ ಎಂಬ ಸಾಲುಗಳನ್ನು ಬರೆದುಕೊಂಡು ಪೋಸ್ಟ್ ಮಾಡಿದೆ.

     

    View this post on Instagram

     

    A post shared by The Royal Family (@theroyalfamily)

    ನಂತರ ರಾಜಕುಮಾರಿ ಎಲಿಜಬೆತ್ ಯಾರ್ಕ್‍ನ ಡ್ಯೂಕ್ ಮತ್ತು ಡಚೆಸ್‍ನ ಹಿರಿಯ ಪುತ್ರಿಯಾಗಿದ್ದಾರೆ. ಅವರು ರಾಣಿಯಾಗಬೇಕೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ. 1936 ರಲ್ಲಿ ಅವರ ಚಿಕ್ಕಪ್ಪ ಕಿಂಗ್ ಎಡ್ವರ್ಡ್ ಪದತ್ಯಾಗ ಮಾಡಿದಾಗ ಅವರ ಜೀವನ ಬದಲಾಯಿತು. ಅವರ ತಂದೆ ಕಿಂಗ್ ಜಾರ್ಜ್ ಆಗಿ ಪಟ್ಟಕ್ಕೆ ಏರಿದಾಗ ಯುವ ರಾಜಕುಮಾರಿ ಉತ್ತರಾಧಿಕಾರಿಯಾದರು.

     

    View this post on Instagram

     

    A post shared by The Royal Family (@theroyalfamily)

    1952 ರಲ್ಲಿ ತನ್ನ ತಂದೆಯ ಮರಣದ ಸಂದರ್ಭದಲ್ಲಿ ರಾಜಕುಮಾರಿ ಎಲಿಜಬೆತ್‍ಗೆ ಕೇವಲ 25 ವರ್ಷ. ಈ ವರ್ಷ ಸಿಂಹಾಸನದ ಮೇಲೆ 70 ವರ್ಷಗಳನ್ನು ಆಚರಿಸುತ್ತಿದ್ದಾರೆ. ಇದು ಬ್ರಿಟಿಷ್ ಇತಿಹಾಸದಲ್ಲಿ ಮೊದಲನೆಯದು ಎಂದು ಶೀರ್ಷಿಕೆ ಬರೆಯಲಾಗಿದೆ.

    ಅವರ ಜನ್ಮದಿನದ ಮೊದಲು, ರಾಜಮನೆತನವು ರಾಣಿಯ ಭವ್ಯವಾದ ಭಾವಚಿತ್ರವನ್ನು ಅವರ ಎರಡು ಕುದುರೆಗಳೊಂದಿಗೆ ಹಂಚಿಕೊಂಡಿದೆ. ಕಡು ಹಸಿರು ಬಣ್ಣದ ಮೇಲಂಗಿಯನ್ನು ಧರಿಸಿದ್ದ ರಾಣಿಯು ಗಾರ್ಡನ್‍ವೊಂದರಲ್ಲಿ ಪೋಸ್ ನೀಡಿದ್ದಾರೆ. ರಾಜಮನೆತನದ ಸೊಬಗನ್ನು ಹೊರಹಾಕಿದ ಅವರು, ಬೈಬೆಕ್ ಕೇಟೀ ಮತ್ತು ಬೈಬೆಕ್ ನೈಟಿಂಗೇಲ್ ಎಂಬ ಎರಡು ಬಿಳಿ ಕುದುರೆಗಳ ನಡುವೆ ನಿಂತಿದ್ದಾರೆ.

    ಈ ವರ್ಷ ರಾಣಿ ಎಲಿಜಬೆತ್ ಅವರನ್ನು ಬಾರ್ಬಿ ಗೊಂಬೆಯಾಗಿ ಹೋಲಿಕೆ ಮಾಡಿ ಗೌರವಿಸಲಾಗಿದೆ.

  • ರಾಣಿ 2ನೇ ಎಲಿಜಬೆತ್ ಹತ್ಯೆಗೆ ಸಂಚು – ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸೇಡು!

    ಲಂಡನ್: ರಾಣಿ ಎರಡನೇ ಎಲಿಜಬೆತ್ ವಿಂಡ್ಸರ್ ಅರಮನೆಯಲ್ಲಿ ಕ್ರಿಸ್‍ಮಸ್ ದಿನಗಳನ್ನು ಕಳೆಯುತ್ತಿರುವ ಸಂದರ್ಭದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದ್ದ 19 ವರ್ಷದ ಭಾರತೀಯ ಸಿಖ್ ವ್ಯಕ್ತಿಯನ್ನು ಬಂಧಿಸಲಾಗಿದೆ.

    ವಿಂಡ್ಸನ್ ಅರಮನೆ ಮೈದಾನದಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಒಳಗೆ ಬಂದಿದ್ದ ವ್ಯಕ್ತಿ ಮಾರಕಾಸ್ತ್ರಗಳನ್ನು ಹೊಂದಿದ್ದ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

    ವ್ಯಕ್ತಿ ಜಲಿಯನ್ ವಾಲಾಬಾಗ್ ಘಟನೆಗೆ ಸೇಡು ತೀರಿಸಿಕೊಳ್ಳಲು ಬಂದಿರುವ ಬಗೆಗಿನ ವೀಡಿಯೋ ಪತ್ತೆಯಾಗಿದೆ. ಜಸ್ವಂತ್ ಸಿಂಗ್ ಚೈಲ್ ಎಂಬ ವ್ಯಕ್ತಿ ಸ್ನ್ಯಾಪ್‍ಶಾಟ್‍ನಲ್ಲಿ ಹಂಚಿಕೊಂಡಿದ್ದ ವೀಡಿಯೋದಲ್ಲಿ ಆತನ ವಿಕೃತ ಭಾವನೆ ಬಯಲಾಗಿದೆ. ಇದನ್ನೂ ಓದಿ: BMTC ಭಾರತದ ನಂ.1 ಸಾರಿಗೆ ಸಂಸ್ಥೆಯಾಗಬೇಕು: ಸಿಎಂ ಬಸವರಾಜ ಬೊಮ್ಮಾಯಿ

    ನಾನು ಏನು ಮಾಡಿದ್ದೇನೆ ಹಾಗೂ ಏನು ಮಾಡುತ್ತೇನೆ ಎಂಬುದರ ಬಗ್ಗೆ ಕ್ಷಮೆ ಇರಲಿ. ನಾನು ರಾಜಮನೆತನದ ರಾಣಿ ಎಲಿಜಬೆತ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಇದು 1919ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಮಡಿದವರಿಗೆ ಪ್ರತಿಕಾರ. ತಮ್ಮ ಜನಾಂಗದ ಕಾರಣದಿಂದ ಕೊಲ್ಲಲ್ಪಟ್ಟ, ಅವಮಾನಿತ ಹಾಗೂ ತಾರತಮ್ಯಕ್ಕೆ ಒಳಗಾದವರಿಗೆ ಇದು ಪ್ರತಿಕಾರವಾಗಿದೆ ಎಂದು ಜಸ್ವಂತ್ ಸಿಂಗ್ ಮುಖವನ್ನು ಪರದೆಯಿಂದ ಮುಚ್ಚಿಕೊಂಡು ಹೇಳಿದಂತಹ ವೀಡಿಯೋ ಪತ್ತೆಯಾಗಿದೆ. ಇದನ್ನೂ ಓದಿ: ಜ.2ರಂದು ಅನಿವಾಸಿ ಕನ್ನಡಿಗರಿಂದ ಟ್ವಿಟ್ಟರ್, ಇ-ಮೇಲ್ ಅಭಿಯಾನ

    ಕೋಟೆಯ ಮೈದಾನದಲ್ಲಿ ಪತ್ತೆಯಾಗಿದ್ದ ಜಸ್ವಂತ್‍ನನ್ನು ಮಾನಸಿಕ ಆರೋಗ್ಯ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸಾಂಪ್ರದಾಯಿಕ ಡ್ರೆಸ್ ತೊಟ್ಟು ಪಾಕ್ ಕ್ರಿಕೆಟಿಗ ಟ್ರೋಲ್!

    ಸಾಂಪ್ರದಾಯಿಕ ಡ್ರೆಸ್ ತೊಟ್ಟು ಪಾಕ್ ಕ್ರಿಕೆಟಿಗ ಟ್ರೋಲ್!

    ನವದೆಹಲಿ: ಇಂಗ್ಲೆಂಡ್ ರಾಣಿ ಎಲಿಜಬೆತ್‍ರನ್ನು ಭೇಟಿ ಮಾಡಲು ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

    2019ರ ವಿಶ್ವಕಪ್‍ಗೆಂದು ಇಂಗ್ಲೆಂಡ್‍ಗೆ ತೆರಳಿರುವ 10 ತಂಡಗಳ ನಾಯಕರನ್ನು ಬ್ರಿಟನ್ ರಾಣಿ ಎಲಿಜಬೆತ್ ಮತ್ತು ಯುವರಾಜ ಹ್ಯಾರಿ ಅವರು ಭೇಟಿ ಮಾಡಿ ಶುಭಕೋರಿದ್ದಾರೆ. ಈ ಸಮಾರಂಭದಲ್ಲಿ ಇಂಗ್ಲೆಂಡ್‍ನ ಹಲವು ರಾಜ ಮನೆತನದವರು ನಾಯಕರನ್ನು ಭೇಟಿಯಾಗಿ ಶುಭಕೋರಿದ್ದಾರೆ.

    ಈ ಸಮಾರಂಭಕ್ಕೆ ಎಲ್ಲಾ ತಂಡದ ನಾಯಕರುಗಳು ಸೂಟ್‍ಗಳನ್ನು ಧರಿಸಿ ರಾಣಿಯನ್ನು ಭೇಟಿಯಾದರೆ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರು ಮಾತ್ರ ಸಾಂಪ್ರದಾಯಿಕ ಉಡುಪು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಈ ಸಮಾರಂಭದಲ್ಲಿ ಸರ್ಫರಾಜ್ ಅವರು ತಮ್ಮ ದೇಶದ ಸಾಂಪ್ರದಾಯಿಕ ಉಡುಪಾದ ಬಿಳಿ ಬಣ್ಣದ ಸಲ್ವಾರ್ ಕಮೀಜ್‍ನ್ನು ಧರಿಸಿ ಅದರ ಮೇಲೆ ತಮ್ಮ ತಂಡದ ಹಸಿರು ಬಣ್ಣದ ಕೋಟನ್ನು ಧರಿಸಿ ಸಮಾರಂಭಕ್ಕೆ ಬಂದಿದ್ದಾರೆ.

    ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದ್ದು ಸರ್ಫರಾಜ್ ಅಹ್ಮದ್‍ರನ್ನು ಟೀಕಿಸಿ ಟ್ವೀಟ್ ಮಾಡಿರುವ ಪಾಕಿಸ್ತಾನ ಮೂಲದ ಕೆನೆಡಿಯಾನ್ ಬರಹಗಾರ ಟರೆಕ್ ಫತಾಹ್ ಪೈಜಾಮಾ ಧರಿಸಿ ಬಂದಿದ್ದಾರೆ. ಸದ್ಯ ಅವರು ಲುಂಗಿ, ಬನ್ಯನ್, ಟೋಪಿ ಧರಿಸಿ ಬಂದಿಲ್ಲ ಎಂದು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಸರ್ಫರಾಜ್ ಅಹ್ಮದ್ ನಾಯಕನಾಗಿರುವ ಪಾಕಿಸ್ತಾನ ತಂಡ ವಿಶ್ವಕಪ್‍ನ ಮೊದಲ ಪಂದ್ಯವನ್ನು ಇಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

  • ಎಲ್ಲರಿಗಿಂತ ಮೊದಲು ಬಾಹುಬಲಿಯನ್ನು ವೀಕ್ಷಿಸಲಿದ್ದಾರಾ ಇಂಗ್ಲೆಂಡಿನ ರಾಣಿ?

    ಎಲ್ಲರಿಗಿಂತ ಮೊದಲು ಬಾಹುಬಲಿಯನ್ನು ವೀಕ್ಷಿಸಲಿದ್ದಾರಾ ಇಂಗ್ಲೆಂಡಿನ ರಾಣಿ?

    ನವದೆಹಲಿ: ಇಂಗ್ಲೆಂಡಿನ ರಾಣಿ ಎಲಿಜಬೆತ್ ಬಾಹುಬಲಿ 2 ಚಿತ್ರವನ್ನು ಎಲ್ಲರಿಗಿಂತ ಮೊದಲು ವೀಕ್ಷಿಸಲಿದ್ದಾರಾ ಹೀಗೊಂದು ಪ್ರಶ್ನೆ ಈಗ ಭಾರತೀಯ ಸಿನಿಮಾ ವಲಯದಲ್ಲಿ ಹರಿದಾಡುತ್ತಿದೆ.

    ಬ್ರಿಟಿಷ್ ಫಿಲ್ಮ್ ಇನ್ಸಿಟ್ಯೂಟ್ ನಲ್ಲಿ ಆಯೋಜನೆಗೊಂಡಿರುವ  ‘ಚಲನಚಿತ್ರದಲ್ಲಿ ಭಾರತ’ ಕಾರ್ಯಕ್ರಮದಲ್ಲಿ ಎಸ್‍ಎಸ್ ರಾಜಮೌಳಿಯವರ ಬಾಹುಬಲಿ 2 ವಿಶೇಷ ಪ್ರದರ್ಶನವಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಇಂಗ್ಲೆಂಡಿನ ರಾಣಿ ಚಲನ ಚಿತ್ರವನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

    ಆದರೆ ರಾಜಮೌಳಿ ಕಡೆಯಿಂದ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ.

    ಮಹಾಶಿವರಾತ್ರಿ ಪ್ರಯುಕ್ತ ಬಾಹುಬಲಿ ಕನ್ ಕ್ಲೂಷನ್ ಟೀಸರ್ ಬಿಡುಗಡೆಯಾಗಿತ್ತು. ‘ಬಲಿ ಬಲಿ ಬಲಿ ರಾ ಬಲಿ ಸಾಹೋರೆ ಬಾಹುಬಲಿ’ ಅನ್ನೋ ಹಾಡಿನ ತುಣುಕು ಹೊಂದಿರುವ ಟೀಸರ್ ವಿಡಿಯೋವನ್ನು ರಾಜಮೌಳಿ ಟ್ವೀಟ್ ಮಾಡಿದ್ದರು. ಈ ಟೀಸರ್‍ನಲ್ಲಿ ಪ್ರಭಾಸ್ ಆನೆಯ ಮೇಲೆ ನಿಂತುಕೊಂಡಿರುವ ದೃಶ್ಯವಿದೆ.

    ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯಾಧರಿತ ಬಾಹುಬಲಿ ಭಾಗ 2 ಚಿತ್ರದಲ್ಲಿ ಪ್ರಭಾಸ್, ರಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ಸತ್ಯರಾಜ್, ತಮನ್ನಾ, ರಮ್ಯಕೃಷ್ಣ ಅಭಿನಯಿಸಿದ್ದಾರೆ. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿರುವ ಬಾಹುಬಲಿ 2 ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.

    ಬಾಹುಬಲಿ ದಿ ಬಿಗ್‍ನಿಂಗ್ ಚಿತ್ರ 2015ರ ಜುಲೈ 10ರಂದು ಬಿಡುಗಡೆಯಾಗಿತ್ತು. ಅಂದಾಜು 120 ಕೋಟಿ ಬಜೆಟ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಹುಬಲಿ- 1 ಭಾರೀ ಸದ್ದು ಮಾಡಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.