Tag: Qualcomm

  • ಜಿಯೋದಿಂದ 5ಜಿ ಪರೀಕ್ಷೆ ಯಶಸ್ವಿ: ಪ್ರಯೋಗದಲ್ಲಿ 1ಜಿಬಿಪಿಎಸ್‌ಗೂ ಹೆಚ್ಚಿನ ವೇಗದ ಸಾಧನೆ

    ಜಿಯೋದಿಂದ 5ಜಿ ಪರೀಕ್ಷೆ ಯಶಸ್ವಿ: ಪ್ರಯೋಗದಲ್ಲಿ 1ಜಿಬಿಪಿಎಸ್‌ಗೂ ಹೆಚ್ಚಿನ ವೇಗದ ಸಾಧನೆ

    ಮುಂಬೈ / ಸ್ಯಾನ್ ಡಿಯಾಗೋ : 5ಜಿ ಪರೀಕ್ಷೆಯಲ್ಲಿ 1 ಜಿಬಿಪಿಎಸ್‌(ಗಿಗಾ ಬೈಟ್‌ ಪರ್‌ ಸೆಕೆಂಡ್‌) ಮೈಲಿಗಲ್ಲನ್ನು ದಾಟಿರುವುದಾಗಿಯೂ ಕ್ವಾಲ್‌ಕಾಮ್ ಟೆಕ್ನಾಲಜೀಸ್ ಮತ್ತು ಜಿಯೋ ಪ್ರಕಟಿಸಿವೆ.

    ಕ್ವಾಲ್‌ಕಾಮ್ ಟೆಕ್ನಾಲಜೀಸ್, ಇಂಕ್ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ರಾಡಿಸಿಸ್ ಕಾರ್ಪೊರೇಷನ್‌ನೊಂದಿಗೆ ವರ್ಚುವಲೈಸ್ಡ್ ರಾನ್‌ನೊಂದಿಗೆ ಮುಕ್ತ ಮತ್ತು ಇಂಟರ್‌ಆಪರಬಲ್ ಇಂಟರ್‌ಫೇಸ್ ಕಂಪ್ಲಯಂಟ್ ಆರ್ಕಿಟೆಕ್ಚರ್ ಆಧಾರಿತ 5ಜಿ ಸಲ್ಯೂಶನ್‌ಗಳನ್ನು ಅಭಿವೃದ್ಧಿಪಡಿಸುವ ವಿಸ್ತೃತ ಪ್ರಯತ್ನಗಳನ್ನು ಪ್ರಕಟಿಸಿವೆ. ಭಾರತದಲ್ಲಿ ಸ್ಥಳೀಯ 5ಜಿ ನೆಟ್‌ವರ್ಕ್ ಮೂಲಸೌಕರ್ಯ ಮತ್ತು ಸೇವೆಗಳ ಅಭಿವೃದ್ಧಿ ಹಾಗೂ ಪ್ರಾರಂಭವನ್ನು ತ್ವರಿತಗೊಳಿಸುವುದು ಈ ಪ್ರಯತ್ನಗಳ ಉದ್ದೇಶವಾಗಿದೆ.

    5ಜಿ ತಂತ್ರಜ್ಞಾನದೊಂದಿಗೆ, ಬಳಕೆದಾರರು 5ಜಿ-ಸಶಕ್ತ ಸ್ಮಾರ್ಟ್‌ಫೋನ್‌ಗಳಿಂದ ಎಂಟರ್‌ಪ್ರೈಸ್ ಲ್ಯಾಪ್‌ಟಾಪ್‌ಗಳವರೆಗೆ, ಎಆರ್/ವಿಆರ್ ಉತ್ಪನ್ನಗಳಿಂದ ವರ್ಟಿಕಲ್ ಐಒಟಿ ಪರಿಹಾರಗಳವರೆಗೆ ಹೆಚ್ಚಿನ ವೇಗದ ಡೇಟಾ, ಕಡಿಮೆ ವಿಳಂಬವಿರುವ ಸಂವಹನ ಮತ್ತು ಸಂಪರ್ಕಿತ ಸಾಧನಗಳ ವ್ಯಾಪಕ ಶ್ರೇಣಿಯಾದ್ಯಂತ ವರ್ಧಿತ ಡಿಜಿಟಲ್ ಅನುಭವಗಳ ಅನುಕೂಲವನ್ನು ಪಡೆಯುತ್ತಾರೆ.

    ರಿಲಯನ್ಸ್ ಜಿಯೋ ಇನ್‌ಫೋಕಾಮ್‌ನ ಅಧ್ಯಕ್ಷ ಮ್ಯಾಥ್ಯೂ ಊಮ್ಮೆನ್, “ನಿಜವಾಗಿಯೂ ಮುಕ್ತ ಮತ್ತು ಸಾಫ್ಟ್‌ವೇರ್ ವ್ಯಾಖ್ಯಾನಿತವಾದ ಹೊಸ ತಲೆಮಾರಿನ ಕ್ಲೌಡ್-ನೇಟಿವ್ 5ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಕ್ವಾಲ್‌ಕಾಮ್ ಟೆಕ್ನಾಲಜೀಸ್‌ನೊಂದಿಗೆ ಕೆಲಸ ಮಾಡುವ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಕ್ವಾಲ್‌ಕಾಮ್ ಟೆಕ್ನಾಲಜೀಸ್‌ನೊಂದಿಗೆ ಸುರಕ್ಷಿತ ಸಲ್ಯೂಶನ್‌ಗಳ ಅಭಿವೃದ್ಧಿಯು ಜಿಯೋ ಪ್ಲಾಟ್‌ಫಾರ್ಮ್ಸ್ ಮತ್ತು ಪ್ರಮಾಣದೊಂದಿಗೆ ಸೇರಿ, ಎಲ್ಲರನ್ನೂ ಒಳಗೊಳ್ಳುವ 5ಜಿ ರಾಷ್ಟ್ರಕ್ಕಾಗಿ ಸ್ಥಳೀಯ ಉತ್ಪಾದನೆ ಹಾಗೂ ಆತ್ಮನಿರ್ಭರ ಭಾರತದ ಸಾಧನೆಯ ವೇಗವರ್ಧನೆಗೆ ಸೂಕ್ತವಾದ ಸಂಯೋಜನೆಯನ್ನು ಒದಗಿಸುತ್ತದೆ.” ಎಂದು ಹೇಳಿದ್ದಾರೆ.

    ಕ್ವಾಲ್‌ಕಾಮ್ ಟೆಕ್ನಾಲಜೀಸ್ 4G/5G ಹಿರಿಯ ಉಪಾಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕ ದುರ್ಗಾ ಮಲ್ಲಾಡಿ, “ಕ್ವಾಲ್‌ಕಾಮ್ ಟೆಕ್ನಾಲಜೀಸ್ ಜಗತ್ತಿನಾದ್ಯಂತ ವರ್ಚುವಲೈಸ್ಡ್, ಫ್ಲೆಕ್ಸಿಬಲ್ ಮತ್ತು ಇಂಟರ್‌ಆಪರಬಲ್ 5ಜಿ ಮೂಲಸೌಕರ್ಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವ ಗುರಿ ಹೊಂದಿದೆ. ಕ್ವಾಲ್‌ಕಾಮ್ 5G ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ರಿಲಯನ್ಸ್ ಜಿಯೋ 5G ಉತ್ಪನ್ನದಲ್ಲಿ ನಾವು 1 ಜಿಬಿಪಿಎಸ್‌ ಮೈಲಿಗಲ್ಲನ್ನು ಸಾಧಿಸಿದ್ದೇವೆ ಮತ್ತು ಫ್ಲೆಕ್ಸಿಬಲ್ ಹಾಗೂ ಸ್ಕೇಲಬಲ್ 5G ನಿಯೋಜನೆಗಳನ್ನು ಸಕ್ರಿಯಗೊಳಿಸಲು ರಿಲಯನ್ಸ್ ಜಿಯೋ ಜೊತೆಗಿನ ಪ್ರಯತ್ನಗಳನ್ನು ವಿಸ್ತರಿಸುವುದನ್ನು ನಾವು ಎದುರು ನೋಡುತ್ತೇವೆ. ಆಪರೇಟರ್‌ಗಳು ಮತ್ತು ಉದ್ಯಮದ ವರ್ಟಿ‌ಕಲ್‌ಗಳು 5ಜಿ ನೆಟ್‌ವರ್ಕ್ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ಬೇಕಾದಾಗ ಬೇಕಾದಲ್ಲಿ ತ್ವರಿತ ಮತ್ತು ಸುಲಭವಾಗಿ ಅಳವಡಿಸಿಕೊಳ್ಳುವಲ್ಲಿ ಈ ರೀತಿಯ ಇಕೋಸಿಸ್ಟಮ್ ಸಹಯೋಗಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.” ಎಂದು ಹೇಳಿದ್ದಾರೆ.  ಇದನ್ನೂ ಓದಿ: ಕೆಲವರ ಹಿತಾಸಕ್ತಿಗೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ವಿಳಂಬ – ಕೇಂದ್ರಕ್ಕೆ ಜಿಯೋ ಪತ್ರ

    ಕ್ವಾಲ್‌ಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ಮತ್ತು ಕ್ವಾಲ್‌ಕಾಮ್ ಇಂಡಿಯಾದ ಅಧ್ಯಕ್ಷ ರಾಜೇನ್ ವಾಗಾಡಿಯಾ, 5ಜಿಗಾಗಿ ನಮ್ಮ ಏಕೀಕೃತ ದೂರದೃಷ್ಟಿಯನ್ನು ಮುಂದುವರೆಸಲು ಹಾಗೂ ಭಾರತದ ಡಿಜಿಟಲ್ ರೂಪಾಂತರವನ್ನು ಬೆಂಬಲಿಸಲು ರಿಲಯನ್ಸ್ ಜಿಯೋ ಜೊತೆಗಿನ ನಮ್ಮ ದೀರ್ಘಕಾಲದ ಸಂಬಂಧದಲ್ಲಿ ಹೊಸ ಹಂತವನ್ನು ಪ್ರವೇಶಿಸುತ್ತಿರುವುದು ನಮಗೆ ಸಂತಸ ತಂದಿದೆ. ಭಾರತದಾದ್ಯಂತ ವಿಶ್ವಾಸಾರ್ಹ, ಸದೃಢ ಮತ್ತು ಶಕ್ತಿಯುತ ಮೊಬೈಲ್ ಅನುಭವಗಳ ಅಗತ್ಯ ಹೆಚ್ಚಾದಂತೆ, ಉತ್ಪಾದನೆ, ಆರೋಗ್ಯ ರಕ್ಷಣೆ ಮತ್ತು ರೀಟೇಲ್‌ನಂತಹ ಉದ್ಯಮಗಳು ಮತ್ತು ಬಳಕೆದಾರರಿಂದ 5ಜಿ ಸೇವೆಗಳಿಗಾಗಿ ಬೇಡಿಕೆಯ ಹೊಸ ಅಲೆಯನ್ನು ನಾವು ನಿರೀಕ್ಷಿಸುತ್ತೇವೆ. ತನ್ನ ಚಂದಾದಾರರಿಗೆ ಸುಲಭ ಬೆಲೆಯ ಮತ್ತು ವ್ಯಾಪಕವಾದ 4 ಜಿ ನೆಟ್‌ವರ್ಕ್ ವ್ಯಾಪ್ತಿಯನ್ನು ತಲುಪಿಸುವಲ್ಲಿ ಗೇಮ್ ಚೇಂಜರ್ ಎಂದು ಹೆಸರಾಗಿರುವ ಜಿಯೋ ಜೊತೆಗೆ ಭಾರತೀಯ ಗ್ರಾಹಕರಿಗೆ ಮುಂದುವರೆದ 5ಜಿ ಮೂಲಸೌಕರ್ಯ ಮತ್ತು ಸೇವೆಗಳನ್ನು ಪರಿಚಯಿಸುವ ಪ್ರಯಾಣದಲ್ಲಿ ನಿಕಟವಾಗಿ ಕೆಲಸ ಮಾಡುವುದನ್ನು ನಾವು ಎದುರು ನೋಡುತ್ತೇವೆ.” ಎಂದು ಹೇಳಿದ್ದಾರೆ.

    ಭಾರತವು ಮೊಬೈಲ್ ಬ್ರಾಡ್‌ಬ್ಯಾಂಡ್‌ನ ವಿಶ್ವದ ಅತಿದೊಡ್ಡ ಗ್ರಾಹಕರ ಸಾಲಿಗೆ ಸೇರುವಂತೆ ಪರಿವರ್ತನೆಯಾಗುವಲ್ಲಿ ಜಿಯೋದ ಹೊಸ ಕಲ್ಪನೆಗಳು ಪ್ರಮುಖ ಪಾತ್ರ ವಹಿಸಿವೆ. ಒಟ್ಟುಗೂಡಿಲ್ಲದ ಮತ್ತು ವರ್ಚುವಲೈಸ್ಡ್ 5ಜಿ ಸಲ್ಯೂಶನ್‌ಗಳೊಂದಿಗೆ, ಕ್ಯಾರಿಯರ್-ಗ್ರೇಡ್ ಸಾಫ್ಟ್‌ವೇರ್-ಆಧಾರಿತ ಸಲ್ಯೂಶನ್‌ಗಳ ಪರಿಸರ ವ್ಯವಸ್ಥೆಯನ್ನು ಜಿಯೋ ಅಭಿವೃದ್ಧಿಪಡಿಸುತ್ತಿದ್ದು, 5ಜಿ ಸೇವೆಗಳು ಮತ್ತು ಅನುಭವಗಳನ್ನು ಭಾರತದಾದ್ಯಂತ ಮತ್ತು ಭಾರತದ ಹೊರಗೂ ಸಶಕ್ತಗೊಳಿಸಲು ಸಾಧ್ಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

    ಕ್ವಾಲ್‌ಕಾಮ್ 5ಜಿ ಪ್ಲಾಟ್‌ಫಾರ್ಮ್‌ಗಳನ್ನು ಫ್ಲೆಕ್ಸಿಬಲ್, ವರ್ಚುವಲೈಸ್ಡ್, ಸ್ಕೇಲಬಲ್ ಮತ್ತು ಇಂಟರ್‌ಆಪರಬಲ್ ಸೆಲ್ಯುಲರ್ ಜಾಲದ ಮೂಲಸೌಕರ್ಯಗಳಿಗೆ ತಳಹದಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಬೃಹತ್ MIMO ಹೊಂದಿರುವ ಮ್ಯಾಕ್ರೋ ಬೇಸ್ ಸ್ಟೇಷನ್‌ಗಳಿಂದ ಪ್ರಾರಂಭಿಸಿ ಸಣ್ಣ ಸೆಲ್‌ಗಳವರೆಗಿನ ವ್ಯಾಪಕ ಶ್ರೇಣಿಯ ಮೂಲಸೌಕರ್ಯ ವಿಭಾಗಗಳಿಗೆ ಈ ಪ್ಲಾಟ್‌ಫಾರ್ಮ್‌ಗಳು ಸ್ಕೇಲಬಲ್ ಬೆಂಬಲವನ್ನು ನೀಡುತ್ತವೆ, ಮತ್ತು ಸಬ್-6 GHz ಹಾಗೂ mmWave ಸ್ಪೆಕ್ಟ್ರಂ‌ನಲ್ಲಿನ ಎಲ್ಲ ಪ್ರಮುಖ ಫ್ರೀಕ್ವೆನ್ಸಿ ಬ್ಯಾಂಡ್‌ಗಳನ್ನೂ ಬೆಂಬಲಿಸುತ್ತವೆ.

  • ಡೇಟಾ, 4ಜಿ ಫೀಚರ್ ಫೋನ್ ಆಯ್ತು, ಈಗ ಜಿಯೋದಿಂದ ಸಿಮ್ ಇರೋ ಲ್ಯಾಪ್‍ಟಾಪ್!

    ಡೇಟಾ, 4ಜಿ ಫೀಚರ್ ಫೋನ್ ಆಯ್ತು, ಈಗ ಜಿಯೋದಿಂದ ಸಿಮ್ ಇರೋ ಲ್ಯಾಪ್‍ಟಾಪ್!

    ನವದೆಹಲಿ: ಕಡಿಮೆ ಬೆಲೆಯಲ್ಲಿ ಡೇಟಾ, 4ಜಿ ಫೀಚರ್ ಫೋನ್ ಬಿಡುಗಡೆ ಮಾಡಿದ್ದ ಜಿಯೋ ಈಗ ಕಡಿಮೆ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಸಿಮ್ ಹೊಂದಿರುವ ಲ್ಯಾಪ್ ಟಾಪ್ ಬಿಡುಗಡೆ ಮಾಡಲು ಮುಂದಾಗಿದೆ.

    ಹೌದು. ಚಿಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಟಿತ ಹಾರ್ಡ್ ವೇರ್ ಕಂಪನಿ ಕ್ವಾಲ್ಕಾಮ್ ಜೊತೆ ವಿಂಡೋಸ್ 10 ಆಪರೇಟಿಂಗ್ ವ್ಯವಸ್ಥೆ ಇರುವ ಲ್ಯಾಪ್ ಟಾಪ್‍ಗಳಲ್ಲಿ ಸಿಮ್‍ಗಳನ್ನು ಅಳವಡಿಸುವುದರ ಕುರಿತು ರಿಲಯನ್ಸ್ ಜಿಯೋ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

    ಈಗಾಗಲೇ ಕ್ವಾಲ್ಕಾಮ್ ಕಂಪನಿಯು ಹೆಚ್‍ಪಿ, ಏಸಸ್, ಲೆನೊವೊ ಲ್ಯಾಪ್ ಟಾಪ್ ಕಂಪೆನಿಗಳ ಜೊತೆ ಇದೇ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದೆ. ಲ್ಯಾಪ್ ಟಾಪ್ ಸದಾ ಇಂಟರ್‍ನೆಟ್ ಸಂಪರ್ಕದಲ್ಲಿರುವಂತೆ ಈ ಹೊಸ ವ್ವವಸ್ಥೆ ನೋಡಿಕೊಳ್ಳಲಿದೆ. ಈ ಹೊಸ ವ್ಯವಸ್ಥೆಗೆ ಬಹಳಷ್ಟು ದೇಶಗಳ ಮೊಬೈಲ್ ಸೇವಾ ಆಪರೇಟರ್ ಗಳು ಬೆಂಬಲ ಸೂಚಿಸಿವೆ.

    ಸಿಮ್ ಯಾಕೆ?
    ಲ್ಯಾಪ್ ಟಾಪ್ ನೊಂದಿಗೆ ಹೊರಗಡೆ ಹೋದಾಗ ಇಂಟರ್ ನೆಟ್ ಸಂಪರ್ಕ ಬೇಕಾದರೆ ವೈಫೈ ವ್ಯವಸ್ಥೆ ಇರಬೇಕಾಗುತ್ತದೆ. ವೈಫೈ ಸಂಪರ್ಕ ಸಿಗದ ಕಡೆ ಇಂಟರ್ ನೆಟ್ ಪಡೆಯಬೇಕಾದರೆ ಮೊಬೈಲ್ ಮೂಲಕ ಹಾಟ್ ಸ್ಪಾಟ್ ಓಪನ್ ಮಾಡಿ ವೈಫೈ ಸಂಪರ್ಕ ಕಲ್ಪಿಸಬೇಕಾಗುತ್ತದೆ ಅಥವಾ ಹಾಟ್ ಸ್ಪಾಟ್ ಸಾಧನಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಎಂಬಂತೆ ಲ್ಯಾಪ್ ಟಾಪ್ ನಲ್ಲೇ ಸಿಮ್ ಅಳವಡಿಸುವ ಪ್ರಯತ್ನ ನಡೆಯುತ್ತಿದೆ.

    ಕೌಂಟರ್ ಪಾಯಿಂಟ್ ಸಂಸ್ಥೆಯ ನೀಡಿದ ಡೇಟಾಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 50 ಲಕ್ಷ ಲ್ಯಾಪ್ ಟಾಪ್ ಗಳು ಮಾರಾಟವಾಗುತ್ತಿದ್ದು, ಇವುಗಳಿಗೆ ಕಚೇರಿ, ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿರುವ ವೈಫೈ ಹಾಟ್ ಸ್ಪಾಟ್ ಗಳು ಕನೆಕ್ಟ್ ಆಗುತ್ತದೆ.

    ಸೈಬರ್ ಭದ್ರತೆ ಮತ್ತು ಖಾಸಗಿ ಮಾಹಿತಿ ಸೋರಿಕೆಯಾಗದೇ ಇರಲು ಯಾವಾಗಲೂ ವೈಫೈ ನೆಟ್‍ವರ್ಕ್ ಗಿಂತ ಸೆಲ್ಯುಲರ್ ನೆಟ್‍ವರ್ಕ್ ಹೆಚ್ಚು ಸುರಕ್ಷಿತ. ಈ ಕಾರಣಕ್ಕಾಗಿ ಟೆಲಿಕಾಂ ಕಂಪೆನಿಗಳು ಸಿಮ್ ಆಧಾರಿತ ಲ್ಯಾಪ್ ಟಾಪ್ ಬಿಡುಗಡೆ ಮುಂದಾಗುತ್ತಿದೆ. ಇದರ ಜೊತೆ ಡೇಟಾದ ಮೂಲಕ ಟೆಲಿಕಾಂ ಕಂಪೆನಿಗಳು ಆದಾಯ ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ.  ಇದನ್ನೂ ಓದಿ: ಜಿಯೋಫಿ ಹೊಸ ಸಾಧನ ಬಿಡುಗಡೆ: ಬೆಲೆ ಎಷ್ಟು? ಎಷ್ಟು ಡಿವೈಸ್ ಕನೆಕ್ಟ್ ಮಾಡಬಹುದು?