Tag: qatar

  • ಅರಬ್ಬರ ನಾಡಲ್ಲಿ ಫಿಫಾ ಜ್ವರ – ಕಾಲ್ಚಳಕದ ಆಟಕ್ಕಿಲ್ಲ ಮದ್ಯದ ಅಮಲು

    ಅರಬ್ಬರ ನಾಡಲ್ಲಿ ಫಿಫಾ ಜ್ವರ – ಕಾಲ್ಚಳಕದ ಆಟಕ್ಕಿಲ್ಲ ಮದ್ಯದ ಅಮಲು

    ದೋಹಾ: ಅರಬ್ಬರ ನಾಡಿನಲ್ಲಿ ಫುಟ್‍ಬಾಲ್ (Football) ಜ್ವರ ಆರಂಭಗೊಂಡಿದೆ. ಚೊಚ್ಚಲ ಬಾರಿಗೆ ಫಿಫಾ ಫುಟ್‍ಬಾಲ್ ವಿಶ್ವಕಪ್ (FIFA World Cup) ಆತಿಥ್ಯಕ್ಕೆ ಗಲ್ಫ್ ರಾಷ್ಟ್ರ ಕತಾರ್ ಸಜ್ಜಾಗಿದೆ. ಹಲವು ವಿಶೇಷತೆಗಳೊಂದಿಗೆ ನಡೆಯಲಿರುವ ಫಿಫಾ ವಿಶ್ವಕಪ್‍ನಲ್ಲಿ ಸ್ಟೇಡಿಯಂನೊಳಗೆ ಬಿಯರ್ (Beer) ಬಾಟಲ್‍ಗಳನ್ನು ತರಲು ನಿಷೇಧ ಹೇರಲಾಗಿದೆ.

    ವಿವಾದ (Controversies), ಊಹಾಪೋಹಗಳ ನಡುವೆ ಕತಾರ್ ಅಸಾಧಾರಣ ರೀತಿಯಲ್ಲಿ ಫಿಫಾ ವಿಶ್ವಕಪ್‍ಗಾಗಿ ಸಿದ್ಧತೆ ನಡೆಸಿದೆ. ಫಿಫಾ ವಿಶ್ವಕಪ್-2022 ಅರಬ್ ರಾಷ್ಟ್ರ ಕತಾರ್ (Qatar) ಆತಿಥ್ಯದಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 18 ರವರೆಗೆ ನಡೆಯಲಿದೆ. ಅರಬ್ಬರ ನಾಡಿನಲ್ಲಿ ಇದೇ ಮೊದಲ ಬಾರಿ ಪುಟ್‍ಬಾಲ್ ವಿಶ್ವಕಪ್ ಟೂರ್ನಿ ಆಯೋಜನೆ ಆಗುತ್ತಿರುವುದು ಗಮನಾರ್ಹ. ಈ ಮೂಲಕ ಕತಾರ್ ಪ್ರತಿಷ್ಠಿತ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವ ಏಷ್ಯದ 3ನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಫಿಫಾ ವಿಶ್ವಕಪ್ ಆತಿಥ್ಯ ವಹಿಸುತ್ತಿರುವ ಅತ್ಯಂತ ಪುಟ್ಟ ರಾಷ್ಟ್ರವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

    ಇದೀಗ ಸಿದ್ಧತೆಗಳೆಲ್ಲ ಮುಗಿದು ಅಭ್ಯಾಸ ಪಂದ್ಯಗಳು ಕೂಡ ನಡೆಯುತ್ತಿದೆ. ಈ ನಡುವೆ ಕತಾರ್‌ನಲ್ಲಿ ಫುಟ್‍ಬಾಲ್ ವಿಶ್ವಕಪ್ ವೇಳೆ 8 ಕ್ರೀಡಾಂಗಣದಲ್ಲಿ ಬಿಯರ್ ಸೇಲ್ ಮಾಡದಂತೆ ನಿಷೇಧ ಹೇರಲಾಗಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ ಬಿಯರ್ ಕಂಪನಿ ಬಡ್‍ವೈಸರ್ ಜೊತೆ ಪ್ರಯೋಜಕತ್ವಕ್ಕೆ ಸಹಿ ಹಾಕಲಾಗಿತ್ತು. ಇದೀಗ ಟೂರ್ನಿ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವಂತೆ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಇದನ್ನೂ ಓದಿ:  ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

    ಫುಟ್‍ಬಾಲ್ ಎಂದರೆ ಭಾವೋದ್ವೇಗದ ಆಟದ ನಡುವೆ ಗ್ಲಾಮರ್ ಟಚ್ ಕೂಡ ಹೆಚ್ಚಾಗಿರುತ್ತದೆ. ಇಲ್ಲಿ ವಿಶ್ವದ ಶ್ರೇಷ್ಠ ಆಟಗಾರರ ಆಟದೊಂದಿಗೆ ರಂಗೀನಾಟಗಳು ಕೂಡ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕತಾರ್‌ನಲ್ಲಿ ಈ ಎಲ್ಲಾ ವೈಭೋಗಗಳಿಗೆ ಬ್ರೇಕ್ ಬಿದ್ದಿದೆ.

    ಚಳಿಗಾಲದಲ್ಲಿ ಫುಟ್‍ಬಾಲ್ ಬಿಸಿ:
    ಈ ಹಿಂದೆ ಹೆಚ್ಚಿನ ಪಿಫಾ ವಿಶ್ವಕಪ್‍ಗಳನ್ನು ಮೇನಿಂದ ಜುಲೈವರೆಗೆ ನಿಗದಿಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಫಿಫಾ ವಿಶ್ವಕಪ್ ನವೆಂಬರ್ ಹಾಗೂ ಡಿಸೆಂಬರ್‍ನಲ್ಲಿ ನಡೆಯುತ್ತಿದೆ. ಈ ಹಿಂದೆ ಮೇ ಮತ್ತು ಜುಲೈನಲ್ಲಿ ನಡೆಸಲು ತೀರ್ಮಾನಿಸಿದಾಗ ಕತಾರ್‌ನಲ್ಲಿ ಬಿಸಿಲು ಹೆಚ್ಚಾಗಿತ್ತು ಹಾಗಾಗಿ ಮುಂದೂಡಲಾಗಿತ್ತು. ಇದೀಗ ಚಳಿಗಾಲದಲ್ಲಿ ನಡೆಯುತ್ತಿದೆ. ಚಳಿಗಾಲದಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್ ಇದಾಗಿದೆ. ಅಲ್ಲದೇ ಕತಾರ್ ಫುಟ್‍ಬಾಲ್ ವಿಶ್ವಕಪ್ ಅತ್ಯಂತ ದುಬಾರಿ ವಿಶ್ವಕಪ್ ಎಂಬ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಫಿಫಾ ವಿಶ್ವಕಪ್‍ನಲ್ಲಿ ಕತಾರ್ ತಂಡ ಈವರೆಗೆ ಭಾಗವಹಿಸದಿದ್ದರೂ, ವಿಶ್ವಕಪ್ ಆಯೋಜನೆ ಕಾರಣದಿಂದಾಗಿ ಅತಿಥೇಯ ರಾಷ್ಟ್ರ ಆಡಲು ಅರ್ಹತೆ ಪಡೆದಿದೆ.

    32 ತಂಡಗಳ ಹೋರಾಟ:
    ಕತಾರ್ ವಿಶ್ವಕಪ್ ಆಡಲು ಈ ಬಾರಿ ಒಟ್ಟು 32 ತಂಡಗಳು ಅರ್ಹತೆ ಪಡೆದಿವೆ. ತಲಾ 4 ತಂಡಗಳಿರುವ 8 ಗುಂಪುಗಳನ್ನು ರಚಿಸಲಾಗಿದೆ. 32 ತಂಡಗಳು 64 ಪಂದ್ಯಗಳಲ್ಲಿ ಸ್ಪರ್ಧಿಸಲಿವೆ. ಗುಂಪು ಹಂತವು ನವೆಂಬರ್ 20 ರಿಂದ ಡಿಸೆಂಬರ್ 2ರವರೆಗೆ ನಡೆಯಲಿದೆ ನಾಕೌಟ್ ಹಂತವು ಡಿಸೆಂಬರ್ 3ರಿಂದ 18ರವರೆಗೆ ನಡೆಯಲಿದೆ. ನ.20 ರಂದು ಆತಿಥೇಯ ಕತಾರ್ ತಂಡ ಈಕ್ವೆಡಾರ್ ತಂಡವನ್ನು ಎದುರಿಸುವ ಮೂಲಕ ಫಿಫಾ ವಿಶ್ವಕಪ್‍ಗೆ ಚಾಲನೆ ಸಿಗಲಿದೆ. ಇದನ್ನೂ ಓದಿ: ಮೆಸ್ಸಿ ಈಗ ಬೈಜೂಸ್‌ ಜಾಗತಿಕ ರಾಯಭಾರಿ

    8 ಸ್ಟೇಡಿಯಂನಲ್ಲೂ ನಾಕೌಟ್ ಪಂದ್ಯ:
    ಕತಾರ್‌ನ 5 ನಗರಗಳು ವಿಶ್ವಕಪ್ ಸೆಣಸಾಟಕ್ಕೆ ಸಾಕ್ಷಿಯಾಗಲಿವೆ. ವಿಶೇಷ ಎಂದರೆ ಎಲ್ಲಾ 8 ಕ್ರೀಡಾಂಗಣಗಳಲ್ಲೂ ನಾಕೌಟ್ ಪಂದ್ಯಗಳೂ ನಡೆಯಲಿವೆ. 8 ಸ್ಟೇಡಿಯಂಗಳು 64 ಪಂದ್ಯಗಳಿಗೆ ವೇದಿಕೆಯಾಗಲಿವೆ. ಇಲ್ಲಿನ ದೋಹದ ಸ್ಟೇಡಿಯಂ ಒಂದನ್ನು ಕ್ರೀಡಾಂಗಣಗಳ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಹೊತ್ತು ತಂದ ಹಡಗುಗಳ ಕಂಟೇನರ್‌ಗಳನ್ನೇ ಬಳಸಿ ಕ್ರೀಡಾಂಗಣವೊಂದನ್ನು ಕಟ್ಟಲಾಗಿದೆ.

    ಮೊಬೈಲ್ ಸ್ಟೇಡಿಯಂ:
    ಕತಾರ್ ರಾಜಧಾನಿ ದೋಹಾದಲ್ಲಿ 974 ಕಂಟೇನರ್‌ಗಳನ್ನು ಬಳಸಿ ಕ್ರೀಡಾಂಗಣವೊಂದನ್ನು ನಿರ್ಮಿಸಲಾಗಿದೆ. ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡ ಬಳಿಕ ಈ ಕ್ರೀಡಾಂಗಣವನ್ನು ಬಿಚ್ಚಿ ಬೇರೆಡೆಗೆ ಕೊಂಡೊಯ್ಯಬಹುದು. ಮೊಬೈಲ್ ಕ್ಯಾಂಟೀನ್ ರೀತಿ ಇದು ಮೊಬೈಲ್ ಕ್ರೀಡಾಂಗಣವಾಗಿ ಮಾರ್ಪಟ್ಟಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್‌ ಸ್ಟೇಡಿಯಂಗಳಲ್ಲಿ ಬಿಯರ್‌ ಬ್ಯಾನ್‌ – ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ಕತಾರ್‌

    ಸ್ಟಾರ್ ಆಟಗಾರರ ದಂಡು:
    ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಒಟ್ಟು ಐದು ಬಾರಿ ಪ್ರಶಸ್ತಿ ಗೆದ್ದಿರುವ ಬ್ರೆಝಿಲ್ ಅತ್ಯಂತ ಯಶಸ್ವಿ ತಂಡವಾಗಿದೆ. ಜರ್ಮನಿ ಹಾಗೂ ಇಟಲಿ ತಲಾ 4 ಬಾರಿ ವಿಶ್ವಕಪ್ ಗೆದ್ದುಕೊಂಡಿವೆ. ಅರ್ಜೆಂಟೀನಾ, ಫ್ರಾನ್ಸ್ ಹಾಗೂ ಉರುಗ್ವೆ ತಲಾ 2 ಬಾರಿ ವಿಶ್ವಕಪ್ ಜಯಿಸಿದ ಇಂಗ್ಲೆಂಡ್ ಹಾಗೂ ಸ್ಪೇನ್ ತಲಾ ಒಂದು ಬಾರಿ ವಿಶ್ವಕಪ್ ಮುಡಿಗೇರಿಸಿ ಕೊಂಡಿವೆ. ಈ ಬಾರಿಯ ವಿಶ್ವಕಪ್ ಯಾರ ಪಾಲಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಈ ನಡುವೆ ಸ್ಟಾರ್ ತಂಡದಲ್ಲಿರುವ ಫುಟ್‍ಬಾಲ್ ದಂತಕಥೆಗಳಾದ ಲಿನೋನೆಲ್‌ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ, ನೇಮರ್ ಅವರತ್ತ ಎಲ್ಲರ ಚಿತ್ತ ನೆಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಫಿಫಾ ವಿಶ್ವಕಪ್‌ ಸ್ಟೇಡಿಯಂಗಳಲ್ಲಿ ಬಿಯರ್‌ ಬ್ಯಾನ್‌ – ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ಕತಾರ್‌

    ಫಿಫಾ ವಿಶ್ವಕಪ್‌ ಸ್ಟೇಡಿಯಂಗಳಲ್ಲಿ ಬಿಯರ್‌ ಬ್ಯಾನ್‌ – ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ಕತಾರ್‌

    ದೋಹಾ: ಚಿಯರ್ಸ್‌ ಹೇಳುತ್ತಾ ಥ್ರಿಲ್‌ ಆಗಿ ಫುಟ್‌ಬಾಲ್‌ (Football) ಪಂದ್ಯ ವೀಕ್ಷಿಸುವ ಆಸೆ ಹೊಂದಿದ್ದ ಅಭಿಮಾನಿಗಳಿಗೆ ಕತಾರ್‌ (Qatar 2022) ಅಧಿಕಾರಿಗಳು ಕಹಿ ಸುದ್ದಿ ನೀಡಿದ್ದಾರೆ. ಈ ಬಾರಿ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ (FIFA World Cup 2022) ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೆ ಸ್ಟೇಡಿಯಂನಲ್ಲಿ ಬಿಯರ್‌ ನಿಷೇಧಿಸಲಾಗುವುದು. ಆಲ್ಕೋಹಾಲ್‌ಯುಕ್ತವಲ್ಲದ ಪಾನೀಯಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಫಿಫಾ ವಿಶ್ವಕಪ್‌ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಆಲ್ಕೋಹಾಲ್‌ಯುಕ್ತವಲ್ಲದ ಪಾನೀಯ ಮಾರಾಟ ಮಾಡಬಾರದು ಎಂಬ ನಿರ್ಧಾರಕ್ಕೆ ಕತಾರ್‌ ಅಧಿಕಾರಿಗಳು ಬಂದಿದ್ದಾರೆ. ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಇದನ್ನೂ ಓದಿ: ಮಳೆಯಲ್ಲಿ ಕೊಚ್ಚಿ ಹೋದ IND vs NZ ಮೊದಲ ಟಿ20 ಪಂದ್ಯ – ಟಾಸ್‍ಗೂ ಅವಕಾಶವಿಲ್ಲ

    ಪಂದ್ಯಾವಳಿಯ ಸಮಯದಲ್ಲಿ ಮದ್ಯ ಮಾರಾಟ ವಿಚಾರ ಫಿಫಾ ಮತ್ತು ಆತಿಥೇಯ ರಾಷ್ಟ್ರದ ನಡುವಿನ ಪ್ರಮುಖ ಚರ್ಚೆಯಾಗಿದೆ. ಕತಾರ್‌ನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಕುಡಿಯಲು ಅನುಮತಿಯಿಲ್ಲದ ಕಾರಣ ಈವೆಂಟ್‌ನ ಸಮಯದಲ್ಲಿ ಅಭಿಮಾನಿಗಳಿಗೆ ಆಲ್ಕೋಹಾಲ್‌ ಲಭ್ಯತೆ ವಿಚಾರವಾಗಿ ಕಾಳಜಿ ವಹಿಸಲಾಗಿದೆ.

    ಸ್ಟೇಡಿಯಂಗಳಲ್ಲಿ ಬಿಯರ್ ಮಾರಾಟ ಮಾಡದಿರುವ ಹಠಾತ್ ನಿರ್ಧಾರವು ಅಭಿಮಾನಿಗಳಿಗೆ ಮಾತ್ರವಲ್ಲದೆ ಫಿಫಾಗೆ ದೊಡ್ಡ ಆಘಾತವನ್ನು ನೀಡಿದೆ. ಏಕೆಂದರೆ ಫಿಫಾ, ಅಮೆರಿಕನ್ ಬಿಯರ್ ದೈತ್ಯ ಬಡ್ವೈಸರ್ ಜೊತೆಗೆ ಬಹು ಮಿಲಿಯನ್ ಡಾಲರ್ ಪ್ರಚಾರದ ಒಪ್ಪಂದ ಮಾಡಿಕೊಂಡಿದೆ. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರ

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳು ಕತಾರ್‌ನಲ್ಲಿ ಬಂಧನ – ಎಂಇಎ

    ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳು ಕತಾರ್‌ನಲ್ಲಿ ಬಂಧನ – ಎಂಇಎ

    ನವದೆಹಲಿ: ಭಾರತೀಯ ನೌಕಾಪಡೆಯ (Indian Navy) 8 ಮಾಜಿ ಅಧಿಕಾರಿಗಳು ಕತಾರ್‌ನಲ್ಲಿ (Qatar) ಬಂಧನದಲ್ಲಿದ್ದಾರೆ. ಅವರ ಯೋಗಕ್ಷೇಮವನ್ನು ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.

    ಈ ಬಗ್ಗೆ ಮಾಹಿತಿ ನೀಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi), ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಂಧನದಲ್ಲಿರುವ 8 ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಯೋಗಕ್ಷೇಮವನ್ನು ವಿಚಾರಿಸಿದೆ. ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಗುಂಡಿನ ದಾಳಿ – ಪಿಎಂ ಸೇರಿ ಮೂವರ ಮೇಲೆ ಇಮ್ರಾನ್ ಖಾನ್‌ಗೆ ಅನುಮಾನ

    ವರದಿಗಳ ಪ್ರಕಾರ ಕತಾರ್ ಎಮಿರಿ ನೌಕಾಪಡೆಗೆ ತರಬೇತಿ ಮತ್ತು ಇತರ ಸೇವೆಗಳನ್ನು ಒದಗಿಸುವ ಕಂಪನಿಯೊಂದಿಗೆ ಅಲ್ಲಿ ಕೆಲಸ ಮಾಡುತ್ತಿರುವ 8 ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳು ಬಂಧನವಾಗಿದ್ದಾರೆ. ಈ ಬಂಧನವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ದೃಢಪಡಿಸಿದೆ. ಆದರೆ ಅವರ ವಿರುದ್ಧ ಯಾವ ಆರೋಪಗಳಿವೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಕೊಚ್ಚಿ, ತುಂಡು ಮಾಡಿ ನಾಯಿಗೆ ಬಿಸಾಕ್ತೀವಿ- ಮುತಾಲಿಕ್‌ಗೆ ಜೀವ ಬೆದರಿಕೆ

    ಬಳಿಕ ಮಾತನಾಡಿದ ಬಾಗ್ಚಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ ರಷ್ಯಾ ಭೇಟಿ ಬಗ್ಗೆ ತಿಳಿಸಿದರು. ಜೈಶಂಕರ್ ಅವರು ನವೆಂಬರ್ 7-8 ರಂದು ರಷ್ಯಾಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್ ಲಾವ್ರೋ ಅವರನ್ನು ಭೇಟಿಯಾಗಲಿದ್ದಾರೆ. ದ್ವಿಪಕ್ಷೀಯ ವಿಷಯಗಳ ಕುರಿತು ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಕೇರಳ ಮೂಲದ ಬಾಲಕಿ ದೋಹಾದ ಶಾಲಾ ಬಸ್ಸಿನೊಳಗೆ ಉಸಿರುಗಟ್ಟಿ ಸಾವು

    ಕೇರಳ ಮೂಲದ ಬಾಲಕಿ ದೋಹಾದ ಶಾಲಾ ಬಸ್ಸಿನೊಳಗೆ ಉಸಿರುಗಟ್ಟಿ ಸಾವು

    ದೋಹಾ: ಕೇರಳ(Kerala) ಮೂಲದ 4 ವರ್ಷದ ಬಾಲಕಿ ಶಾಲಾ ಬಸ್‌(School Bus)ನೊಳಗೆ ವಿಪರೀತ ಬಿಸಿಲಿನಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಕತಾರ್‌ನ(Qatar) ದೋಹಾ(Doha)ದಲ್ಲಿ ನಡೆದಿದೆ.

    ಮಿನ್ಸಾ ಮರಿಯಮ್ ಜಾಕೋಬ್ ಎಂದು ಗುರುತಿಸಲಾದ ಬಾಲಕಿ ಸ್ಪ್ರಿಂಗ್‌ಫೀಲ್ಡ್ ಶಾಲಾ ಬಸ್‌ನೊಳಗೆ ಮಲಗಿದ್ದಳು ಎನ್ನಲಾಗಿದೆ. ಬಸ್‌ನ ಸಿಬ್ಬಂದಿ ಬಾಲಕಿ ಅದರಲ್ಲಿ ಮಲಗಿದ್ದುದನ್ನು ಗಮನಿಸದೇ ಪಾರ್ಕಿಗ್ ಪ್ರದೇಶದಲ್ಲಿ ಬಿಟ್ಟು, ಲಾಕ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದ. ಬಳಿಕ ಮಧ್ಯಾಹ್ನ ಬಸ್‌ನ ಬಾಗಿಲು ತೆರೆದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ನೋಡಿದ್ದಾನೆ. ಇದನ್ನೂ ಓದಿ: ದಾಳಿ ನಡೆಸುವ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ಅನುಮತಿಗೆ ಕೇರಳ ಸರ್ಕಾರ ನಿರ್ಧಾರ

    ಕೂಡಲೇ ಆಕೆಯನ್ನು ಅಲ್ ವಕ್ರಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ, ವಿಪರೀತ ಬಿಸಿಲಿನಿಂದಾಗಿ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ದೋಹಾದ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವಾಲಯ ಸಂತಾಪ ಸೂಚಿಸಿದೆ. ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಾಹನದಲ್ಲಿ ಕುಳಿತಿದ್ದ ಪೊಲೀಸರ ಮುಂದೆಯೇ ಕಳ್ಳತನ- ಖದೀಮನಿಗೆ ಜನ ಗೂಸಾ ಕೊಟ್ರೂ ಡೋಂಟ್‍ಕೇರ್!

    Live Tv
    [brid partner=56869869 player=32851 video=960834 autoplay=true]

  • ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

    ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

    ದೋಹಾ: ನವೆಂಬರ್, ಡಿಸೆಂಬರ್‌ನಲ್ಲಿ ಕತಾರ್‌ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ವೇಳೆ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

    ಆಯೋಜಕರು ಈಗಾಗಲೇ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಯಾವುದೇ ಆಟಗಾರ ಅಥವಾ ಅಭಿಮಾನಿಗಳು ವಿವಾಹೇತರ ಲೈಂಗಿಕ ಸಂಪರ್ಕ ಹೊಂದುವುದನ್ನು ನಿಷೇಧಿಸಲಾಗಿದೆ.

    ದಂಪತಿ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಸಲಿಂಗಕಾಮವನ್ನು ಕೂಡಾ ನಿಷೇಧಿಸಿದೆ. ಫಿಫಾ ವೇಳೆ ಸೆಕ್ಸ್ ಕ್ರಿಯೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಇದೇ ಮೊದಲ ಬಾರಿ ಸೆಕ್ಸ್‌ಗೆ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಐಪಿಎಲ್‍ನಿಂದ ಔಟ್ ಆಗಿದ್ದ ಅಂಪೈರ್ ಅಸಾದ್ ರೌಫ್ ಇದೀಗ ಪಾಕ್‍ನಲ್ಲಿ ಚಪ್ಪಲಿ ವ್ಯಾಪಾರಿ

    ಕೊಕೇನ್ ಮತ್ತು ಇತರ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಿದ್ದು ಸಾಬೀತಾದರೆ ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ. ವಿಶ್ವಕಪ್‌ ಸಮಯದಲ್ಲಿ ಮದ್ಯಕ್ಕೆ ಅನುಮತಿ ನೀಡಲಾಗಿದೆ. ಮದ್ಯ ಸೇವನೆಗೆಗೆ ಪ್ರತ್ಯೇಕ ವಲಯವನ್ನು ತೆರೆಯಲಾಗುತ್ತದೆ.

    ಫುಟ್‌ಬಾಲ್‌ ಟೂರ್ನಿ ನವೆಂಬರ್ 21 ರಿಂದ ಆರಂಭವಾಗಲಿದೆ. ವಿಶೇಷವಾಗಿ 32 ತಂಡಗಳು ಆಡುತ್ತಿರುವ ಕೊನೆಯ ವಿಶ್ವಕಪ್‌ ಪಂದ್ಯ ಇದಾಗಿದೆ. ಇನ್ನು ಮುಂದೆ 48 ತಂಡಗಳು ಆಡಲಿದ್ದು 2026ರ ವಿಶ್ವಕಪ್‌ ಆತಿಥ್ಯವನ್ನು ಅಮೆರಿಕ, ಮೆಕ್ಸಿಕೋ, ಕೆನಡಾ ವಹಿಸಲಿದೆ.

    Live Tv

  • ನೂಪುರ್ ಶರ್ಮಾ ವಿರುದ್ಧ ಕತಾರ್ ಕಿಡಿ – ಟ್ರೆಂಡಿಂಗ್ ಆಯ್ತು #BycottQatarAirways ಅಭಿಯಾನ

    ನೂಪುರ್ ಶರ್ಮಾ ವಿರುದ್ಧ ಕತಾರ್ ಕಿಡಿ – ಟ್ರೆಂಡಿಂಗ್ ಆಯ್ತು #BycottQatarAirways ಅಭಿಯಾನ

    ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆಯ ಬಳಿಕ ಇದೀಗ ಭಾರತ ಹಾಗೂ ಅರಬ್ ದೇಶಗಳ ಮಧ್ಯೆ ತಿಕ್ಕಾಟ ತಾರಕಕ್ಕೇರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್‍ಕಾಟ್ ಕೂಗು ಕೇಳಿಬರುತ್ತಿದೆ.

    ನೂಪುರ್ ಶರ್ಮಾ, ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಮತ್ತು ಅವರ ಪತ್ನಿಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರಂಭಗೊಂಡ ವಿವಾದ ಬಳಿಕ ನೂಪುರ್ ಶರ್ಮಾರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸುವ ಮಟ್ಟಿಗೆ ಮುಂದುವರಿದಿತ್ತು. ಆ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‍ ಕುರಿತು ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅಮಾನತು

    ನೂಪುರ್ ಶರ್ಮಾ ಕೇವಲ ಉದಾಹರಣೆಯಾಗಿ ಪ್ರವಾದಿ ಮೊಹಮ್ಮದ್ ಕುರಿತಾಗಿ ಮಾತನಾಡಿದ್ದಾರೆ. ಹೊರತು ಅವಹೇಳನಕಾರಿ ಮಾಡಿಲ್ಲ ಎಂದು ನೂಪುರ್ ಶರ್ಮಾರ ಹೇಳಿಕೆ ಪರ ಧ್ವನಿ ಕೇಳಿ ಬರುತ್ತಿದೆ. ಈ ನಡುವೆ ಅರಬ್ ದೇಶಗಳಾದ ಕತಾರ್, ಓಮನ್, ಸೌದಿ ಅರೇಬಿಯಾದಲ್ಲಿ ಭಾರತದಿಂದ ರಫ್ತಾಗುತ್ತಿರುವ ಸರಕುಗಳು ಸೇರಿದಂತೆ ಆಹಾರ ಉತ್ಪನ್ನಗಳನ್ನು ಖರೀದಿಸದಂತೆ ಬಾಯ್‍ಕಾಟ್ ಚಳವಳಿ ಆರಂಭವಾಗಿದೆ. ಈ ನಡುವೆ ಭಾರತದಲ್ಲಿ ಕಾರ್ಯಚರಿಸುತ್ತಿರುವ ಕತಾರ್ ಏರ್ವೇಸ್‍ಗೆ ಬಹಿಷ್ಕಾರ ಹಾಕಿ. ನಾವು ಅರಬ್ ದೇಶಗಳ ಯಾವುದೇ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂಬ ಅಭಿಯಾನ ಭಾರತದಲ್ಲಿ ಆರಂಭವಾಗಿದೆ. ಇದನ್ನೂ ಓದಿ: ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ: ಒಮರ್ ಅಬ್ದುಲ್ಲಾ

    https://twitter.com/ALoanIndian/status/1533486948161323008

    ಭಾರತೀಯರ ವಾದವೇನು?
    ನಮ್ಮ ಹಿಂದೂ ದೇವರುಗಳನ್ನು ಮಾತ್ರವಲ್ಲದೆ ನಮ್ಮ ಭಾರತ ಮಾತೆಯನ್ನು ಅವಮಾನಿಸಿದ ಎಂ.ಎಫ್ ಹುಸೇನ್‍ಗೆ ಕತಾರ್ ಪೌರತ್ವ ನೀಡಿದೆ. ಈ ಬಗ್ಗೆ ಕ್ಷಮೆಯಾಚಿಸಬೇಕು. ಹುಸೇನ್ ಭಾರತ ಮಾತೆಯ ನಗ್ನ ಚಿತ್ರಕಲೆ ಬಿಡಿಸಿ ಅವಮಾನ ಮಾಡಿದ್ದ ಅಂತವರಿಗೆ ಪೌರತ್ವ ನೀಡಿದೆ. ಆದರೆ ನೂಪುರ್ ಶರ್ಮಾ ಕೇವಲ ಉದಾಹರಣೆಗಾಗಿ ಪ್ರವಾದಿ ಮೊಹಮ್ಮದ್ ಕುರಿತಾಗಿ ಆಡಿದ ಮಾತಿಗೆ ಈ ರೀತಿಯ ಪ್ರತಿಕಾರ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

    https://twitter.com/DivyaRajput060/status/1533737481798942722

    ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ನೀಡುತ್ತಿದ್ದ ಧನಸಹಾಯವನ್ನು ಸೌದಿ ಸ್ಥಗಿತಗೊಳಿಸಿದ ನಂತರ ಕತಾರ್ ಭಾರತದಲ್ಲಿ ಇಸ್ಲಾಮಿ ಭಯೋತ್ಪಾದನೆಯ ಪ್ರಮುಖ ಪ್ರಾಯೋಜಕವಾಗಿ ಹೊರಹೊಮ್ಮುತ್ತಿದೆ. ಕತಾರ್ ಮತ್ತು ಟರ್ಕಿ ಸೌದಿ ಅರೇಬಿಯಾವನ್ನು ವಿಶ್ವದ ಹೊಸ ಇಸ್ಲಾಮಿಸ್ಟ್ ನಾಯಕನಾಗಿ ಬದಲಾಯಿಸುವ ಕಾರ್ಯಕ್ಕೆ ಮುಂದಾಗುತ್ತಿದೆ. ಇದನ್ನೂ ಓದಿ: ಹಿಂದಿ ಹಿಂದುಳಿದ ರಾಜ್ಯಗಳ ಭಾಷೆ, ಇದು ಶೂದ್ರರಿಗೆ ಮಾತ್ರ: ಡಿಎಂಕೆ ಸಂಸದ

    https://twitter.com/Ajay67525201/status/1533713285618421761

    ಗಲ್ಫ್ ದೇಶಗಳ ಪ್ರಮುಖ ಆದಾಯದ ಮೂಲ ಪ್ರವಾಸೋದ್ಯಮ. ನಮ್ಮ ದೇಶದ ವಿಚಾರಕ್ಕೆ ತಲೆ ಹಾಕಿದ್ದಕ್ಕೆ ಅಲ್ಲಿನ ವಿಮಾನ ಸೇವೆಯ ಬಳಸಬಾರದು. ಜೊತೆ ಆ ದೇಶಗಳಿಗೆ ಪ್ರವಾಸ ಹೋಗುವುದನ್ನು ನಿಲ್ಲಿಸಬೇಕು ಎಂಬ ಮಾತು ಕೇಳಿಬರುತ್ತಿದೆ.

  • ಉಕ್ರೇನ್‍ನಲ್ಲಿ ಸಿಲುಕಿರುವ ಪ್ರಯಾಣಿಕರು ಕತಾರ್ ಮೂಲಕ ಭಾರತ ತಲುಪಬಹುದು

    ಉಕ್ರೇನ್‍ನಲ್ಲಿ ಸಿಲುಕಿರುವ ಪ್ರಯಾಣಿಕರು ಕತಾರ್ ಮೂಲಕ ಭಾರತ ತಲುಪಬಹುದು

    ನವದೆಹಲಿ: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ಪ್ರಯಾಣಿಕರು ಕತಾರ್ ಮೂಲಕ ವಿಮಾನದಲ್ಲಿ ಭಾರತಕ್ಕೆ ಹಿಂದಿರುಗಬಹುದು ಎಂದು ಕೇಂದ್ರ ತಿಳಿಸಿದೆ.

    ಉಕ್ರೇನ್‍ಲ್ಲಿ ವಾಯುಯಾನ ಮತ್ತೆ ಪ್ರಾರಂಭವಾದ ಬಳಿಕವಷ್ಟೇ ವಿಮಾನ ಸೇವೆಗಳು ಪುನರಾರಂಭವಾಗಲು ಸಾಧ್ಯ. ಇದೀಗ ಉಕ್ರೇನ್‍ನಲ್ಲಿ ಸಿಲುಕಿರುವ 20 ಸಾವಿರ ಭಾರತೀಯರು ಮರಳಿ ಬರಲು ಕತಾರ್ ಮಾರ್ಗ ಹಿಡಿಯುವುದು ಒಳಿತು ಎಂಬ ಸಲಹೆಯನ್ನು ವಾಯುಯಾನ ತಜ್ಞರು ನೀಡಿದ್ದಾರೆ. ಇದನ್ನೂ ಓದಿ: Russia-Ukraine War: ಯುದ್ಧ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ – ಪುಟಿನ್‍ಗೆ ಮೋದಿ ಮನವಿ

    ಉಕ್ರೇನ್ ಮೇಲೆ ರಷ್ಯಾ ದಾಳಿ ಪ್ರಾರಂಭಿಸಿದ ಬಳಿಕ ಉಕ್ರೇನ್‍ನ ವಾಯುಪ್ರದೇಶ ಮುಚ್ಚಿಹೋಗಿದೆ. ಇದೀಗ ಭಾರತೀಯರು ಕತಾರ್‍ನಿಂದ ಭಾರತಕ್ಕೆ ಮರಳಲು ಮೊದಲು ಕತಾರ್ ತಲುಪಬೇಕಾಗಿದೆ. ಆದರೆ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರು ಹೇಗೆ ಕತಾರ್ ಪ್ರವೇಶಿಸಬೇಕೆಂಬ ವಿಷಯವನ್ನು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

    ಈ ಬಗ್ಗೆ ಕತಾರ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವಿಟ್ಟರ್‍ನಲ್ಲಿ ಭಾರತೀಯ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಉಕ್ರೇನ್‍ನಲ್ಲಿರುವ ಭಾರತದ ಪ್ರಯಾಣಿಕರಿಗೆ ಕತಾರ್‍ನಿಂದ ಭಾರತಕ್ಕೆ ಹಿಂದಿರುಗಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಉಕ್ರೇನ್‍ನಿಂದ ಭಾರತೀಯರು ಏರ್ ಬಬಲ್ ವ್ಯವಸ್ಥೆಯ ಅಡಿಯಲ್ಲಿ ಸಾರಿಗೆ ಮುಖಾಂತರ ಕತಾರ್ ಪ್ರವೇಶಿಸಬಹುದು ಎಂದು ತಿಳಿಸಿದೆ.

  • ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ

    ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ

    – ರಾಯಭಾರಿಯನ್ನ ಭೇಟಿಯಾದ ತಾಲಿಬಾನಿ ನಾಯಕ

    ದೋಹಾ: ಭಾರತ ಮತ್ತು ತಾಲಿಬಾನಿಗಳ ನಡುವಿನ ಮೊದಲ ಔಪಚಾರಿಕ ಮಾತುಕತೆ ಇಂದು ದೋಹಾದಲ್ಲಿ ನಡೆದಿದೆ. ಕತಾರ್ ನಲ್ಲಿ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರನ್ನು ತಾಲಿಬಾನಿ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಭೇಟಿಯಾಗಿರುವ ಬಗ್ಗೆ ಸರ್ಕಾರ ಹೇಳಿದೆ.

    ಅಬ್ಬಾಸ್ ತಾಲಿಬಾನಿಗಳ ರಾಜಕೀಯ ವಿಭಾಗದ ಮುಖ್ಯಸ್ಥನಾಗಿದ್ದು, ಭಾರತದ ಜೊತೆಗೆ ಹಳೆಯ ಸ್ನೇಹ ಹೊಂದಿರುವ ನಾಯಕ ಎನ್ನಲಾಗಿದೆ. ಇದೀಗ ದೀಪಕ್ ಮಿತ್ತಲ್ ಮತ್ತು ಅಬ್ಬಾಸ್ ಭೇಟಿ ಹಲವು ಚರ್ಚೆಗಳಿಗೆ ಮುನ್ನಡಿಯಾಗಿದೆ. 1980ರಲ್ಲಿ ಅಬ್ಬಾಸ್ ಭಾರತದಲ್ಲಿದ್ದು, ಡೆಹರಾಡೂನ್ ನಲ್ಲಿರುವ ಮಿಲಿಟರಿ ಅಕಾಡೆಮಿಲ್ಲಿ ತರಬೇತಿ ಪಡೆದುಕೊಂಡಿದ್ದನು. ನಂತರ ಅಫ್ಘಾನಿಸ್ತಾನ ಸೇನೆ ಸಹ ಸೇರ್ಪಡೆಯಾಗಿದ್ದನು. ಅಫ್ಘಾನಿಸ್ತಾನ ತೊರೆದ ಬಳಿಕ ತಾಲಿಬಾನಿ ಗ್ಯಾಂಗ್ ಸೇರಿಕೊಂಡಿರುವ ಬಗ್ಗೆ ವರದಿಯಾಗಿದೆ.

    ಭೇಟಿಯ ವೇಳೆ ದೀಪಕ್ ಮಿತ್ತಲ್, ಭಾರತ ಪ್ರದೇಶದಲ್ಲಿ ಅಫ್ಘಾನಿಸ್ತಾನ ಉಗ್ರ ಚುಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದ ಆತಂಕ ನಮಗೆ ಗೊತ್ತಾಗುತ್ತದೆ. ತಾಲಿಬಾನ್ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಅಬ್ಬಾಸ್ ಭರವಸೆ ನೀಡಿರುವ ಬಗ್ಗೆ ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

    ಮಾತುಕತೆಯಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಹಿಂದಿರುಗಿಸುವ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಇದೇ ವೇಳೆ ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರು ಭಾರತ ಆಗಮಿಸಲು ಇಚ್ಛಿಸಿದ್ರೆ ನಾವು ಬರಮಾಡಿಕೊಳ್ಳಲು ಸಿದ್ಧರಿದ್ದೇವೆ. ಭಾರತದ ಭೌಗೋಳಿಕ ಪ್ರದೇಶದಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆ ನಡೆಸಕೂಡದು ಎಂಬ ಎಚ್ಚರಿಕೆಯನ್ನು ಮಿತ್ತಲ್ ನೀಡಿದ್ದಾರೆ. ಇದನ್ನೂ ಓದಿ: ಕಾರಿನಿಂದ ರಾಕೆಟ್ ಉಡಾಯಿಸ್ತಿದ್ದ ಉಗ್ರರು- ಫೋಟೋಗಳು ಔಟ್

  • ಕತಾರ್- ಭಾರತೀಯ ಆಡಳಿತ ಸಮಿತಿ ಚುನಾವಣೆ, ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆ

    ಕತಾರ್- ಭಾರತೀಯ ಆಡಳಿತ ಸಮಿತಿ ಚುನಾವಣೆ, ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆ

    ಉಡುಪಿ: ಕತಾರಿನಲ್ಲಿರುವ ಭಾರತ ಮೂಲದ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಭಾರತೀಯ ಸಾಂಸ್ಕೃತಿಕ ಕೇಂದ್ರದ ಮುಂದಿನ 2 ವರ್ಷಗಳ ಆಡಳಿತ ಸಮಿತಿಗೆ ಸುಬ್ರಮಣ್ಯ ಆಯ್ಕೆಯಾಗಿದ್ದಾರೆ.

    ಉಡುಪಿ ಜಿಲ್ಲೆ ಬೈಂದೂರು ಮೂಲದ ಸುಬ್ರಮಣ್ಯ, ಕಳೆದ ಒಂದು ದಶಕದಿಂದ ಕತಾರಿನಲ್ಲಿ ನೆಲೆಸಿರುವ ಭಾರತೀಯರಿಗೆ ಸಹಾಯ ಮಾಡುತ್ತಿದ್ದು, ಕೊರೊನಾ ಕಾಲದಲ್ಲಿ ಕತಾರ್ ನಲ್ಲಿ ಆಹಾರ ಕಿಟ್ ಗಳು, ಧನ ಸಹಾಯ ಮಾಡುವ ನೇತೃತ್ವ ವಹಿಸಿದ್ದರು. ಭಾರತೀಯರನ್ನು ಕತಾರ್ ನಿಂದ ವಾಪಾಸ್ ಕಳುಹಿಸುವ ಬ್ಯಾಚ್ ಗಳು, ಕೊರೊನಾ ಹೆಲ್ತ್ ರಿಪೋರ್ಟ್ ತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

    ಡಿಜಿಪೋಲ್ ಎಂಬ ತಂತ್ರಾಂಶವನ್ನು ಕತಾರ್ ಚುನಾವಣೆಗೆಂದೇ ತಯಾರು ಮಾಡಲಾಗಿತ್ತು. ಸದಸ್ಯರ ಮೊಬೈಲ್ ಮೂಲಕ ಮತದಾನ ಮಾಡಿದ್ದರು. ಕತಾರ್ ನಲ್ಲಿದ್ದ ಸುಮಾರು ಶೇ.90 ಸದಸ್ಯರು ಮತ ಚಲಾಯಿಸಿದ್ದಾರೆ.

    ಸುಬ್ರಮಣ್ಯ ಈ ಹಿಂದೆ ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್) ಯ ಆಡಳಿತ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ, ಕರ್ನಾಟಕ ಸಂಘ ಕತಾರಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

  • ಹನಿಮೂನ್‍ಗೆ ತೆರಳಿ ಜೈಲು ಸೇರಿದ ದಂಪತಿ

    ಹನಿಮೂನ್‍ಗೆ ತೆರಳಿ ಜೈಲು ಸೇರಿದ ದಂಪತಿ

    -ಸಂಬಂಧಿಕರಿಂದ ಗಿಫ್ಟ್ ಪಡೆದಿದ್ದೇ ಮುಳುವಾಯ್ತು

    ಮುಂಬೈ: ಹನಿಮೂನ್‍ಗೆ ತೆರಳಿದ್ದ ದಂಪತಿ ಕತಾರ್ ನಲ್ಲಿ ಜೈಲು ಸೇರಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಮುಂಬೈ ಮೂಲದ ಪ್ರವೀಣ್ ಕೌಸರ್ ಒಂದು ವರ್ಷದ ಹಿಂದೆ ತನ್ನ ಮಗಳ ಒನಿಬಾಗಳಿಗೆ ಶರೀಕ್‍ರೊಂದಿಗೆ ವಿವಾಹ ಮಾಡಿದ್ದರು. ಮದುವೆ ಬಳಿಕ ಮುಂಬೈನಲ್ಲೇ ನೆಲೆಸಿದ್ದ ದಂಪತಿ ಸುಖ ಸಂಸಾರ ನಡೆಸುತ್ತಿದ್ದರು. ಇತ್ತ ಒನಿಬಾ ಮದುವೆಯಾದ ಬಳಿಕ ಗರ್ಭಿಣಿಯಾಗಿದ್ದಳು, ಈ ವೇಳೆ ಅವರ ಸಂಬಂಧಿಕರು ತಡವಾಗಿ ಮದುವೆಯ ಉಡುಗೊರೆಯಾಗಿ ಕತಾರ್ ಗೆ ಹನಿಮೂನ್ ಟಿಕೆಟ್ ನೀಡಿದ್ದರು.

    ಸಂಬಂಧಿಕರಿಂದ ಟಿಕೆಟ್ ಪಡೆದು 2019ರ ಜುಲೈನಲ್ಲಿ 6 ರಂದು ಒನಿಬಾ, ಶರೀಕ್ ದಂಪತಿ ಕತಾರ್ ಗೆ ಹನಿಮೂನ್‍ಗೆ ತೆರಳಿದ್ದರು. ಆದರೆ ಅಲ್ಲಿನ ಹಮದ್ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಬಂದಿಳಿದ ವೇಳೆ ದಂಪತಿಯ ಲಗೇಜ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ 4 ಕೆಜಿ ಮಾದಕ ವಸ್ತು ಪತ್ತೆಯಾಗಿತ್ತು.

    ಮಾದಕ ವಸ್ತು ಸಗಾಣೆ ಪ್ರಕರಣದಲ್ಲಿ ದಂಪತಿಯನ್ನು ಬಂಧಿಸಿದ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದಲ್ಲಿ ನ್ಯಾಯಾಲಯ ದಂಪತಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ. ದಂಡ ವಿಧಿಸಿದ್ದರು. ಆದರೆ ದಂಪತಿಗೆ ಅವರ ಸಂಬಂಧಿ ತಬಸ್ಸುಮ್ ಲಗೇಜ್ ನೀಡಿದ್ದರು. ಈ ವೇಳೆ ಬ್ಯಾಗ್‍ನಲ್ಲಿ ತಂಬಾಕು ಇದೆ. ಕತಾರ್ ನಲ್ಲಿರುವ ಸಂಬಂಧಿಕರಿಗೆ ನೀಡಲು ತಿಳಿಸಿದ್ದರು. ಇದನ್ನೇ ನಂಬಿದ್ದ ದಂಪತಿ ಮೋಸ ಹೋಗಿ ಜೈಲು ಸೇರಿದ್ದರು.

    ಪ್ರಕರಣ ಸಂಬಂಧ ಕಳೆದ ಒಂದು ವರ್ಷದಿಂದ ವಿಚಾರಣೆ ನಡೆಸಿದ ಮುಂಬೈ ಪೊಲೀಸರು ಹಾಗೂ ಎನ್‍ಸಿಬಿ ಸದ್ಯ ಬಂಧಿತ ದಂಪತಿಗಳಿಗೆ ಅವರ ಸಂಬಂಧಿ ತಬಸ್ಸುಮ್ ಮೋಸ ಮಾಡಿರುವುದನ್ನು ಖಚಿತ ಪಡಿಸಿದ್ದಾರೆ. ಎನ್‍ಸಿಬಿ ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ, ಪ್ರಕರಣದಲ್ಲಿ ಮುಂಬೈ ಪೊಲೀಸರು ತಬಸ್ಸುಮ್ ಹಾಗೂ ಆಕೆಯ ಆಪ್ತ ನಿಜಾಮ್ ಕಾರಾ ಎಂಬಾತನನ್ನು ಸೆಪ್ಟೆಂಬರಿನಲ್ಲಿ ಬಂಧಿಸಿದ್ದು, ಬಂಧಿತರಿಂದ 13 ಗ್ರಾಂ ಕೊಕೇನ್‍ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಮಧ್ಯ ಪ್ರಾಚ್ಯ ರಾಷ್ಟ್ರಗಳ ಡ್ರಗ್ ಪೆಡ್ಲರ್ ಗಳೊಂದಿಗೆ ಬಂಧಿತರು ಲಿಂಕ್ ಹೊಂದಿರುವುದು ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.

    ಸದ್ಯ ಎನ್‍ಸಿಬಿ ಅಧಿಕಾರಿಗಳು ಕತಾರ್ ನ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಬಂಧಿತ ದಂಪತಿಯ ಬಿಡುಗಡೆ ಮಾಡಿಸುವ ಪ್ರಯತ್ನದಲ್ಲಿದ್ದಾರೆ. ತಮ್ಮ ಮಕ್ಕಳನ್ನು ಜೈಲಿನಿಂದ ಬಿಡುಗಡೆಗೊಳಿಸಲು ಹೋರಾಟ ಮಾಡಿರುವ ಕುಟುಂಬಸ್ಥರು ಸದ್ಯ ನ್ಯಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

    ಈ ನಡುವೆ ಮಾರ್ಚ್‍ನಲ್ಲಿ ಒನಿಬಾ ಜೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಜೈಲಿನ ಅಧಿಕಾರಿಗಳು ಕುಟುಂಬಸ್ಥರಿಗೆ ತಮ್ಮ ಪುತ್ರಿಯೊಂದಿಗೆ ಮಾತನಾಡಲು ಅವಕಾಶ ನೀಡಿದ್ದು, 2 ಬಾರಿ ಮಾತುಕತೆ ನಡೆಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರವೀಣ್ ಕೌಸರ್, ಸದ್ಯ ನಮ್ಮ ಜೀವನದಲ್ಲಿ ಮೂಡಿದ್ದ ಕಪ್ಪು ಮೋಡಗಳು ದೂರವಾಗುತ್ತಿದ್ದು, ಕತಾರ್ ನ ಅಧಿಕಾರಿಗಳು ನಮ್ಮ ಮಕ್ಕಳನ್ನು ತವರಿಗೆ ವಾಪಸ್ ಕಳುಹಿಸುವ ಭರವಸೆ ಇದೆ ಎಂದು ತಿಳಿಸಿದ್ದಾರೆ.