Tag: Q

  • ನಾಗಶೇಖರ್ ಚಿತ್ರಕ್ಕೆ ಬಾಲಿವುಡ್ ನಟಿ ಆವಂತಿಕಾ ದಸ್ಸಾನಿ ನಾಯಕಿ

    ನಾಗಶೇಖರ್ ಚಿತ್ರಕ್ಕೆ ಬಾಲಿವುಡ್ ನಟಿ ಆವಂತಿಕಾ ದಸ್ಸಾನಿ ನಾಯಕಿ

    ಗಾಗಲೇ ನಾಗಶೇಖರ್ (Nagasekhar) ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅದರ ಹಿಂದೆಯೇ ನಾಗಶೇಖರ್ ತಮ್ಮ ಮುಂದಿನ ಪ್ರಾಜೆಕ್ಟನ್ನು ಅನೌನ್ಸ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ೩ ಭಾಷೆಗಳಲ್ಲಿ, ಬಿಗ್ ಬಜೆಟ್ ನಲ್ಲಿ  ನಿರ್ಮಾಣವಾಗುತ್ತಿರುವ ಆ ಚಿತ್ರದ ಹೆಸರು ‘ಕ್ಯೂ’.

    ತಮ್ಮದೇ ಆದ ನಾಗಶೇಖರ್ ಮ್ಯಾಜಿಕ್ಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವ ನಾಗಶೇಖರ್ ಕಥೆ, ಚಿತ್ರಕಥೆಯ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ಸಹ ತಾವೇ  ಹೊತ್ತಿದ್ದಾರೆ. ರಾಮ್ ಚಿರು ಲೈನ್ ಪ್ರೊಡ್ಯೂಸರ್ ಆಗಿರುವ  ಈ ಚಿತ್ರವನ್ನು ಭಾವನಾ ರವಿ ಅವರು ಪ್ರೆಸೆಂಟ್ ಮಾಡುತ್ತಿದ್ದಾರೆ.

     

    ಈ ಚಿತ್ರದ ಮೂಲಕ ನಾಗಶೇಖರ್ ಅವರು, ಮೈನೆ ಪ್ಯಾರ್ ಕಿಯಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ದಸ್ಸಾನಿ  (Avantika Dassani) ಅವರನ್ನು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಉಪೇಂದ್ರ ಅಣ್ಣನ ಪುತ್ರ ನಿರಂಜನ್ ಚಿತ್ರದ ನಾಯಕ. ಮುಂದಿನ ತಿಂಗಳಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಡಿ.ಜೆ. ಚಕ್ರವರ್ತಿ ಸಂಭಾಷಣೆ ರಚಿಸಿದ್ದಾರೆ.

  • ಹೆಚ್ಚಿದ ಕೋವಿಡ್ ಮರಣ- ಚಿತಾಗಾರಗಳಲ್ಲಿ ಅಂಬುಲೆನ್ಸ್‌ಗಳ ಕ್ಯೂ

    ಹೆಚ್ಚಿದ ಕೋವಿಡ್ ಮರಣ- ಚಿತಾಗಾರಗಳಲ್ಲಿ ಅಂಬುಲೆನ್ಸ್‌ಗಳ ಕ್ಯೂ

    ಬೆಂಗಳೂರು: ಕೊರೊನಾ ಸೋಂಕಿತರ ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದು, ಬಿಬಿಎಂಪಿ ಚಿತಾಗಾರಗಳಿಗೆ ಒತ್ತಡ ಹೆಚ್ಚಿದೆ. ಬೆಳಗ್ಗೆ 7ರಿಂದ ರಾತ್ರಿ 12 ಗಂಟೆಯಾದರೂ ಸಾರ್ವಜನಿಕರು ಹೆಣ ಸುಡಲು ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ನಿತ್ಯ ಹತ್ತಾರು ಅಂಬುಲೆನ್ಸ್ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.

    ಯಲಹಂಕದ ಮೇಡಿ ಸ್ಮಶಾನದಲ್ಲಿ ಇಂತಹ ದುಸ್ಥಿತಿ ಎದುರಾಗಿದೆ. ನಗರದ ಐದು ಕಡೆ ಕೋವಿಡ್ ಶವ ಸುಡಲು ಅವಕಾಶ ನೀಡಲಾಗಿದೆ. ಆದರೆ ಎರಡು ಕಡೆ ಮಿಷನ್ ಕೆಟ್ಡಿದೆ. ಹೀಗಾಗಿ ಉಳಿದ ಶವಾಗಾರಗಳಲ್ಲಿ ಒತ್ತಡ ಹೆಚ್ಚಿದೆ. ಸರತಿಯಲ್ಲಿ ಅಂಬುಲೆನ್ಸ್ ಗಳು ನಿಲ್ಲುವುದು ಸಹ ಹೆಚ್ಚಿದೆ. ಒಂದು ಹೆಣ ಸುಡಲು 1 ಗಂಟೆ ಬೇಕು. ಹೀಗಾಗಿ ಸರತಿಯಲ್ಲಿ ನಿಲ್ಲುವವರ ಸಂಖ್ಯೆ ಹೆಚ್ಚುತ್ತಿದೆ.

    ಇತ್ತ ಕೋವಿಡ್ ಮರಣ ಪ್ರಮಾಣದಲ್ಲಿ ಸಹ ಏರಿಕೆ ಕಂಡಿದ್ದು, ಬೆಳಗ್ಗೆ 7 ರಿಂದ ರಾತ್ರಿ 12 ಗಂಟೆ ವರೆಗೆ ಕೆಲಸ ಮಾಡಿದರೂ ಸಾಕಾಗುತ್ತಿಲ್ಲ. ಹೀಗಾಗಿ ಅಂಬುಲೆನ್ಸ್ ಗಳು ಸಾಲುಗಟ್ಟಿ ನಿಲ್ಲುತ್ತಿವೆ.

    ಸೌಲಭ್ಯಗಳೂ ಇಲ್ಲ
    ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಸೌಲಭ್ಯ ಇತ್ತು. ಈ ಬಾರಿ ಸ್ಯಾನಿಟೈಸರ್, ಗ್ಲೌಸ್, ಮಾಸ್ಕ್, ಪಿಪಿಇ ಕಿಟ್ ಯಾವುದನ್ನೂ ಕೊಟ್ಟಿಲ್ಲ. ಹೀಗಾಗಿ ನಮಗೆ ರಕ್ಷಣೆ ಇಲ್ಲ, ಜೀವ ಭಯ ಕಾಡುತ್ತಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

  • ಎಣ್ಣೆಗಾಗಿ ಮದ್ಯ ಪ್ರಿಯರು ಕ್ಯೂ- ಬಾಸ್ಕೆಟ್, ಬ್ಯಾಗ್‍ಗಳಲ್ಲಿ ತುಂಬಿಕೊಳ್ಳುತ್ತಿರೋ ಜನ

    ಎಣ್ಣೆಗಾಗಿ ಮದ್ಯ ಪ್ರಿಯರು ಕ್ಯೂ- ಬಾಸ್ಕೆಟ್, ಬ್ಯಾಗ್‍ಗಳಲ್ಲಿ ತುಂಬಿಕೊಳ್ಳುತ್ತಿರೋ ಜನ

    – ಕಿಲೋ ಮೀಟರ್‌ಗಟ್ಟಲೇ ದಿನಸಿಗಾಗಿ ಕ್ಯೂ

    ಬೆಂಗಳೂರು: ಕೊರೊನಾ ಭಯದಿಂದ ಈಗಾಗಲೇ ಜನರು ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಇತ್ತ ನಾಳೆ ಸಂಜೆಯಿಂದ ಒಂದು ವಾರ ಲಾಕ್‍ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮದ್ಯದಂಗಡಿ, ದಿನಸಿ, ಬ್ಯಾಂಕ್ ಮತ್ತು ಎಟಿಎಂ ಮುಂದೆ ನೂರಾರು ಜನರು ಕ್ಯೂ ನಿಂತಿದ್ದಾರೆ.

    ಮಂಗಳವಾರ ರಾತ್ರಿಯಿಂದ ಲಾಕ್‍ಡೌನ್ ಜಾರಿಯಾಗಲಿದೆ. ಹೀಗಾಗಿ ಇಂದೇ ಎಣ್ಣೆಗಾಗಿ ಮದ್ಯ ಪ್ರಿಯರು ಮುಗಿಬಿದ್ದಿದ್ದಾರೆ. ಹೋಲ್ ಸೇಲ್ ಅಂಗಡಿಗಳ ಮುಂದೆ ಎಣ್ಣೆಗಾಗಿ ಜನ ಕ್ಯೂ ನಿಂತಿದ್ದಾರೆ. ರಾಜಾಜಿನಗರದ ವಿಕ್ಟೋರಿಯಾ ವೈನ್ಸ್ ಮುಂಭಾಗ ಜನರು ಕ್ಯೂ ನಿಂತಿದ್ದು, ವಾರಕ್ಕಾಗುವಷ್ಟು ಎಣ್ಣೆ ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಬಾಸ್ಕೆಟ್, ಬಾಕ್ಸ್, ಬ್ಯಾಗ್‍ಗಳಲ್ಲಿ ಎಣ್ಣೆ ತುಂಬಿಕೊಂಡು ಹೋಗುತ್ತಿದ್ದಾರೆ.

    ಲಾಕ್‍ಡೌನ್ ವಾರ ಇರುತ್ತೊ, ತಿಂಗಳು ಇರುತ್ತೊ ಗೊತ್ತಿಲ್ಲ. ಹಣ ಇರುವವರು ಮದ್ಯ ಖರೀದಿ ಮಾಡಿ ಇಟ್ಟಿಕೊಳ್ಳುತ್ತಾರೆ. ಆ ಮೇಲೆ ಬ್ಲಾಕ್‍ನಲ್ಲಿ ಎಣ್ಣೆಯನ್ನು ಮಾರಿ ಹಣ ಮಾಡುತ್ತಾರೆ. ಮೊದಲೇ ಮೂರ್ನಾಲ್ಕು ತಿಂಗಳಿಂದ ಕೆಲಸ ಇಲ್ಲ. ಹೀಗಾಗಿ ಬ್ಲಾಕ್‍ನಲ್ಲಿ ಮದ್ಯ ಖರೀದಿ ಮಾಡಲು ಸಾಧ್ಯವಿಲ್ಲ. ಕಳೆದ ಲಾಕ್‍ಡೌನ್‍ನಲ್ಲಿ ಹಿಂಗೆ ಮಾಡಿದ್ದರು. ಹೀಗಾಗಿ ಎಷ್ಟು ಬೇಕೋ ಅಷ್ಟು ಸ್ಟಾಕ್ ಮಾಡಿಕೊಳ್ಳುತ್ತಿದ್ದೀವಿ ಎಂದು ಮದ್ಯ ಖರೀದಿಗೆ ಬಂದ ಗ್ರಾಹಕರು ಹೇಳಿದ್ದಾರೆ.

    ದಿನಸಿಗಾಗಿ ಜನರ ಕ್ಯೂ:
    ಇತ್ತ ಜನರ ಲಾಕ್‍ಡೌನ್ ಭಯದಿಂದ ದಿನಸಿ ಸ್ಟಾಕ್ ಮಾಡಿಕೊಳ್ಳಲು ಮುಂದಾಗಿದ್ದು, ಅತ್ಯಗತ್ಯ ದಿನಸಿ ಖರೀದಿಗಾಗಿ ಜನರು ಕ್ಯೂನಲ್ಲಿ ನಿಂತಿದ್ದಾರೆ. ಟೋಲ್ ಗೇಟ್ ಡಿ ಮಾರ್ಟ್ ಮುಂದೆ ಕಿಲೋ ಮೀಟರ್‌ಗಟ್ಟಲೇ ದಿನಸಿಗಾಗಿ ಜನರು ಕ್ಯೂ ನಿಂತಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜನರು ದಿನಸಿ ಖರೀದಿ ಮಾಡುತ್ತಿದ್ದಾರೆ.

    ಇನ್ನೂ ಒಂದು ವಾರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬ್ಯಾಂಕ್ ಮತ್ತು ಎಟಿಎಂಗಳ ಮುಂಭಾಗ ಫುಲ್ ಕ್ಯೂ ನಿಂತಿದ್ದಾರೆ. ಬನಶಂಕರಿ ಬ್ಯಾಂಕ್‍ನ ಮುಂಭಾಗ ಜನರು ನಿಂತಿದ್ದು, ಲಾಕ್‍ಡೌನ್ ಇರುವುದರಿಂದ ಬ್ಯಾಂಕ್‍ಗಳಲ್ಲಿ ತುರ್ತು ಕಾರ್ಯ ಮುಗಿಸಿಕೊಳ್ಳುತ್ತಿದ್ದಾರೆ. ಇತ್ತ ಎಟಿಎಂಗಳ ಮುಂದೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಜನರು ಸಾಲಾಗಿ ನಿಂತಿದ್ದಾರೆ.

  • ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕಕ್ಕೆ ಆಗಲ್ವಾ – ಕ್ಯೂ ನಿಂತಿದ್ದ ಗರ್ಭಿಣಿಯರನ್ನ ನೋಡಿ ಸಚಿವರ ತರಾಟೆ

    ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕಕ್ಕೆ ಆಗಲ್ವಾ – ಕ್ಯೂ ನಿಂತಿದ್ದ ಗರ್ಭಿಣಿಯರನ್ನ ನೋಡಿ ಸಚಿವರ ತರಾಟೆ

    ಬೀದರ್: ಸ್ಕ್ಯಾನಿಂಗ್ ಗಾಗಿ ಎರಡು ಗಂಟೆಗಳಿಂದ ಕ್ಯೂನಲ್ಲಿ ನಿಂತಿರುವ ಗರ್ಭಿಣಿಯರು ಹಾಗೂ ರೋಗಿಗಳನ್ನು ನೋಡಿ ಕೆಂಡಾಮಂಡಲರಾದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಬ್ರಿಮ್ಸ್ ನಿರ್ದೇಶಕರಿಗೆ ಫುಲ್ ತರಾಟೆ ತೆಗೆದುಕೊಂಡು ಘಟನೆ ನಡೆದಿದೆ.

    ಕ್ಯೂನಲ್ಲಿ ನಿಂತಿರುವ ಗರ್ಭಿಣಿಯರಿಗೆ ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕುವುದಕ್ಕೆ ಆಗಲ್ವಾ. ಗರ್ಭಿಣಿಯರು ಬೆಳಗ್ಗೆಯಿಂದಲೂ ನಿಂತಿದ್ದರು ಕುರ್ಚಿ ಹಾಕಲು ನಿಮ್ಮ ಬಳಿ ಹಣ ಇಲ್ವಾ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬ್ರಿಮ್ಸ್ ನಿರ್ದೇಶಕರಿಗೆ ರೋಗಿಗಳ ಮುಂದೆಯೇ ಫಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಚಿವರು ಗರಂ ಆದ ತಕ್ಷಣ ಬ್ರಿಮ್ಸ್ ನಿರ್ದೇಶಕ ಕ್ಷೀರಸಾಗರ ಇನ್ನು ಟೆಂಡರ್ ಆಗಬೇಕು ಸರ್ ಎಂದಿದ್ದಾರೆ. ಅದಕ್ಕೆ ಸಚಿವರು ಟೆಂಡರ್ ಬಿಡ್ರೀ ಒಂದು ಗಂಟೆಯಲ್ಲಿ ಇಲ್ಲಿ ಕುರ್ಚಿ ಹಾಕಬೇಕು ಎಂದು ಸಚಿವರು ತಾಕೀತು ಮಾಡಿದ್ದಾರೆ. ಬೆಳಗ್ಗೆಯಿಂದ ನಾವು ಸ್ಕ್ಯಾನಿಂಗ್‍ಗಾಗಿ ಕ್ಯೂ ನಿಂತಿದ್ದೇವೆ. ನಮಗೆ ಹೋಗಲಿ ಗರ್ಭಿಣಿಯರು ಕ್ಯೂನಲ್ಲಿ ನಿಂತರೂ ಆರೋಗ್ಯ ಅಧಿಕಾರಿ ಸ್ಕ್ಯಾನಿಂಗ್ ಮಾಡಲು ರೆಡಿ ಇಲ್ಲಾ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.