Tag: PVsindhu

  • ನಿಮ್ಮದು ಅದ್ಭುತ ಸಾಧನೆ – ಪಿ.ವಿ ಸಿಂಧುರನ್ನ ಹೊಗಳಿದ ಆಸ್ಟ್ರೇಲಿಯಾ ಸ್ಟಾರ್ ಡೇವಿಡ್ ವಾರ್ನರ್

    ನಿಮ್ಮದು ಅದ್ಭುತ ಸಾಧನೆ – ಪಿ.ವಿ ಸಿಂಧುರನ್ನ ಹೊಗಳಿದ ಆಸ್ಟ್ರೇಲಿಯಾ ಸ್ಟಾರ್ ಡೇವಿಡ್ ವಾರ್ನರ್

    ಬರ್ಮಿಂಗ್‌ಹ್ಯಾಮ್: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆಯಾಗಿದ್ದ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಕಾಮನ್‌ವೆಲ್ತ್ನಲ್ಲಿ ಚಿನ್ನ ಗೆದ್ದ ಸಾಧನೆಯನ್ನು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಹೊಗಳಿದ್ದಾರೆ.

    ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಎದ್ದು ಬಿದ್ದು ಬ್ಯಾಟಿಂಗ್‌ಗೆ ಆಗಮಿಸಿದ ಯಾಸ್ತಿಕಾ ಭಾಟಿಯಾ – ಬಿದ್ದು ಬಿದ್ದು ನಕ್ಕ ಸ್ಮೃತಿ, ಕೌರ್

    ಫೈನಲ್ ಪಂದ್ಯದಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಸೆಟ್‌ಗಳಿಂದ ಪಂದ್ಯವನ್ನು ಗೆದ್ದು ಸತತ ಮೂರು ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಸಿಂಧು ಅವರ ಈ ಸಾಧನೆಯನ್ನು ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಹೊಗಳಿದ್ದಾರೆ. ಇದನ್ನೂ ಓದಿ: ಮನವಿ ಮಾಡಿದ್ರೂ ನನಗೆ ದೆಹಲಿ ಸರ್ಕಾರದಿಂದ ಸಹಾಯವೇ ಸಿಗಲಿಲ್ಲ; ಗೆದ್ದಾಗ ಪ್ರಶಂಸಿಸುತ್ತಿದ್ದಾರೆ – ಕಾಮನ್‌ವೆಲ್ತ್‌ನಲ್ಲಿ ಕಂಚು ಗೆದ್ದ ಕ್ರೀಡಾಪಟು ಬೇಸರ

    `ಸಿಂಧು ಅವರು ಪದಕ ಪಡೆದ ಚಿತ್ರವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, `ವೆಲ್‌ಡನ್ ಪಿ.ವಿ.ಸಿಂಧು, ಕಾಮನ್‌ವೆಲ್ತ್ನಲ್ಲಿ ಚಿನ್ನಗೆದ್ದು ಅದ್ಭುತ ಸಾಧನೆ ಮಾಡಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

    ಪಿ.ವಿ.ಸಿಂಧು ಈ ಹಿಂದೆ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದರು. 2018 ರಲ್ಲಿ ಸೈನಾ ನೆಹ್ವಾಲ್ ವಿರುದ್ಧ ಸೋತು ಬೆಳ್ಳಿ ಗೆದ್ದಿದ್ದ ಸಿಂಧು, ಈ ಬಾರಿ ಚಿನ್ನದ ಪದಕಕ್ಕೆ ಮುತ್ತಿಡುವ ಮೂಲಕ ಕನಸು ನನಸು ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈ ಒಂದು ಸಣ್ಣ ತಪ್ಪಿನಿಂದ ಚಿನ್ನದ ಪದಕ ಕೈತಪ್ಪಿತು – ಪಿ.ವಿ.ಸಿಂಧು ವಿಷಾದ

    ಈ ಒಂದು ಸಣ್ಣ ತಪ್ಪಿನಿಂದ ಚಿನ್ನದ ಪದಕ ಕೈತಪ್ಪಿತು – ಪಿ.ವಿ.ಸಿಂಧು ವಿಷಾದ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ನ ಗುಂಪು ಹಂತದ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಕೈಚೆಲ್ಲಿದ್ದ ಭಾರತ ಫೈನಲ್ಸ್‌ನಲ್ಲಿ ಮಲೇಷ್ಯಾ ವಿರುದ್ಧ 1-3 ಅಂತರದಲ್ಲಿ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

    ಬೆಳ್ಳಿಪದಕಕ್ಕೆ ಕೊರಳೊಡ್ಡಿದ್ದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಮಲೇಷ್ಯಾ ಸೋಲಿಸೋದು ಅಷ್ಟು ಸುಲಭವಾಗಿರಲಿಲ್ಲ. ನಾವು ಫೈನಲ್‌ನಲ್ಲಿ ಆಡುತ್ತಿದ್ದರಿಂದ ಪ್ರತಿ ಪಂದ್ಯವೂ ನಮಗೆ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: CWG2022: ಗುಂಪು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತ, ಸಿಂಗಲ್ಸ್‌ನಲ್ಲಿ ಸಿಂಧು ಪರಾಕ್ರಮ

    ಎಲ್ಲರೊಂದಿಗೆ ನಾನೂ ಒಂದು ತಂಡವಾಗಿ ಚೆನ್ನಾಗಿ ಆಡಿದ್ದೇನೆ. ದುರದೃಷ್ಟವಶಾತ್ ತಂಡದಲ್ಲಿ ನಡೆದ ಸಣ್ಣಪುಟ್ಟ ಬದಲಾವಣೆಯಿಂದಾಗಿ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿತ್ತು. ನಾವು ಬೆಳ್ಳಿ ಪದಕ ಪಡೆದಿದ್ದು, ನನ್ನ ತಂಡ ಸಂತೋಷವಾಗಿದೆ. ಇದು ಕೇವಲ ದಿನದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಈ ದಿನ ನಮ್ಮದಲ್ಲ ಎಂದು ನಾನು ಭಾವಿಸುತ್ತೇನೆ. ಮತ್ತೊಮ್ಮೆ ಬಲವಾದ ತಂಡವಾಗಿ ಹೊರ ಹೊಮ್ಮುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈಗ ವೈಯಕ್ತಿಕ ಆಟದ ಮೇಲೆ ಕೇಂದ್ರೀಕರಿಸುವುದು ಬಹಳ ಮುಖ್ಯ. ಅದರಲ್ಲಿ ನಾನು ನೂರಕ್ಕೆ ನೂರರಷ್ಟು ಫಲಿತಾಂಶ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ 8ನೇ ಪದಕ – ವಿಕಾಸ್ ಠಾಕೂರ್‌ಗೆ ಬೆಳ್ಳಿ

    ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಮಲೇಷ್ಯಾದ ಕೆಳಕ್ರಮಾಂಕದ ಆಟಗಾರ ತ್ಸೆಯಾಂಗ್ ಜಿ-ವಿರುದ್ಧ ಸೋಲು ಅನುಭವಿಸಿದ್ದು, ತಂಡದ ಸೋಲಿಗೆ ಕಾರಣವಾಯಿತು. ಅಲ್ಲದೇ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಸೋಲನುಭವಿಸಿದರು. ಇದರಿಂದ ತಂಡ 2-0 ಯಿಂದ ಹಿನ್ನಡೆ ಕಾಯ್ದುಕೊಂಡಿತು.

    Live Tv
    [brid partner=56869869 player=32851 video=960834 autoplay=true]

  • CWG2022: ಗುಂಪು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತ, ಸಿಂಗಲ್ಸ್‌ನಲ್ಲಿ ಸಿಂಧು ಪರಾಕ್ರಮ

    CWG2022: ಗುಂಪು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ಭಾರತ, ಸಿಂಗಲ್ಸ್‌ನಲ್ಲಿ ಸಿಂಧು ಪರಾಕ್ರಮ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನ ಗುಂಪು ಹಂತದ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಕೈಚೆಲ್ಲಿದ್ದ ಭಾರತ ಫೈನಲ್ಸ್‌ನಲ್ಲಿ ಮಲೇಷ್ಯಾ ವಿರುದ್ಧ 1-3 ಅಂತರದಲ್ಲಿ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

    ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಮಲೇಷ್ಯಾದ ಕೆಳಕ್ರಮಾಂಕದ ಆಟಗಾರ ತ್ಸೆಯಾಂಗ್ ಜಿ-ವಿರುದ್ಧ ಸೋಲು ಅನುಭವಿಸಿದ್ದು, ತಂಡದ ಸೋಲಿಗೆ ಕಾರಣವಾಯಿತು. ಅಲ್ಲದೇ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಸೋಲನುಭವಿಸಿದರು. ಇದರಿಂದ ತಂಡ 2-0 ಯಿಂದ ಹಿನ್ನಡೆ ಕಾಯ್ದುಕೊಂಡಿತು. ಇದನ್ನೂ ಓದಿ: ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ 8ನೇ ಪದಕ – ವಿಕಾಸ್ ಠಾಕೂರ್‌ಗೆ ಬೆಳ್ಳಿ

    ಮಹಿಳಾ ಸಿಂಗಲ್ಸ್‌ನಲ್ಲಿ ಮಲೇಷ್ಯಾದ ಗೋಹ್ ಜಿನ್ ವೀ ಅವರು, 2 ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧುಗೆ ಸುಲಭ ತುತ್ತಾದರು. ಮೊದಲು ನಡೆದ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಒಲಿಂಪಿಕ್ ಕಂಚಿನ ಪದಕ ವಿಜೇತ ಜೋಡಿಯಾದ ಮಲೇಷ್ಯಾದ ಟೆಂಗ್ ಫಾಂಗ್ ಆರನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಎದುರಿಸಿತು. ಕಠಿಣ ಸವಾಲು ಒಡ್ಡಿದ ಚಿಯಾ ಸೋಹ್ ಜೋಡಿ ಭಾರತದ ಎದುರು 21-18, 21-15 ನೇರ ಸೆಟ್‌ಗಳಿಂದ ಪಂದ್ಯ ಜಯಿಸಿತು. ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.

    ಸಿಂಗಲ್ಸ್‌ನಲ್ಲಿ ಸಿಂಧುಗೆ ಜಯ: ನಂತರ ನಡೆದ ಮಹಿಳೆಯರ ಸಿಂಗಲ್ಸ್ನಲ್ಲಿ ಪಿವಿ ಸಿಂಧು, ಗೋಹ್ ಜಿನ್ ವೀ ಸವಾಲು ಎದುರಿಸಿದರು. 22-20, 21-17 ನೇರ ಸೆಟ್‌ಗಳಿಂದ ಸಿಂಧು ಜಯಿಸುವ ಮೂಲಕ 1-1 ರಲ್ಲಿ ಸಮಬಲ ಸಾಧಿಸಿದರು. ವಿಶ್ವ ಕ್ರಮಾಂಕದಲ್ಲಿ 40ನೇ ಸ್ಥಾನದಲ್ಲಿದ್ದ ಮಲೇಷ್ಯಾದ ಗೋಹ್, 7ನೇ ಕ್ರಮಾಂಕದಲ್ಲಿರುವ ಸಿಂಧುಗೆ ಕಠಿಣ ಸವಾಲು ಒಡ್ಡಿದರು. ಇದನ್ನೂ ಓದಿ: ಇಂದು ಸುವರ್ಣ ದಿನ- ಟೇಬಲ್ ಟೆನಿಸ್‍ನಲ್ಲಿ ಚಿನ್ನ ಗೆದ್ದ ಭಾರತ

    ಶ್ರೀಕಾಂತ್‌ಗೆ ಸೋಲು: ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ 14 ನೇ ಶ್ರೇಯಾಂಕಿತ, ಭಾರತದ ಅಗ್ರ ಶೆಟ್ಲರ್ ಕಿಡಂಬಿ ಶ್ರೀಕಾಂತ್ ತ್ಸೆಯಾಂಗ್ ಜಿ ವಿರುದ್ಧ ಸೋತು ಶಾಕ್ ನೀಡಿದರು. 21-19, 6-21, 21-16 ಮೂರು ಸೆಟ್‌ಗಳಲ್ಲಿ ನಡೆದ ಆಟದಲ್ಲಿ ತ್ಸೆಯಾಂಗ್ ಜಿ ಗೆಲುವು ಸಾಧಿಸಿದರು.

    ನಿರ್ಣಾಯಕ ಪಂದ್ಯವಾದ ಮಹಿಳೆಯರ ಮಿಶ್ರ ಡಬಲ್ಸ್‌ನಲ್ಲಿ ವಿಶ್ವದ 11ನೇ ಶ್ರೇಯಾಂಕದ ಮಲೇಷ್ಯಾ ಜೋಡಿಯಾದ ಥಿನಾ ಮುರಳೀಧರನ್ ಮತ್ತು ಕೂಂಗ್‌ಲೆ ಪರ್ಲಿ ತಾನ್ ಭಾರತದ ಜೋಡಿಯಾದ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ವಿರುದ್ಧ 21-18, 21-17ರ ನೇರ ಸೆಟ್‌ಗಳಿಂದ ಸುಲಭ ಜಯ ಸಾಧಿಸಿದರು. ಈ ಮೂಲಕ ತಂಡ 1-3ರ ಅಂತರದಲ್ಲಿ ಚಿನ್ನಕ್ಕೆ ಕೊರಳೊಡ್ಡಿತು. ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

    Live Tv
    [brid partner=56869869 player=32851 video=960834 autoplay=true]

  • ಒಲಿಂಪಿಕ್ಸ್ ಸೋಲಿಗೆ ಭಾರತದಲ್ಲಿ ಸೇಡು ತೀರಿಸಿಕೊಂಡ ಸಿಂಧು

    ಒಲಿಂಪಿಕ್ಸ್ ಸೋಲಿಗೆ ಭಾರತದಲ್ಲಿ ಸೇಡು ತೀರಿಸಿಕೊಂಡ ಸಿಂಧು

    ನವದೆಹಲಿ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ವಿಶ್ವದ ಐದನೇ ಶ್ರೇಯಾಂಕದ ಪಿ.ವಿ ಸಿಂಧು ಇಂದು ದೆಹಲಿಯಲ್ಲಿ ನಡೆದ ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‍ನಲ್ಲಿ ಒಲಿಂಪಿಕ್ ಚಾಂಪಿಯನ್, ಮೂರನೇ ಶ್ರೇಯಾಂಕದ ಸ್ಪೇನ್‍ನ ಕ್ಯಾರೋಲಿನಾ ಮರಿನ್ ಅವರನ್ನು ನೇರ ಸೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದ್ದಾರೆ.

    21- 19 ಅಂಕಗಳಿಂದ ಮೊದಲ‌‌ ಸೆಟ್‌ ಜಯಿಸಿದ ಬಳಿಕ ಎರಡನೇ ಸೆಟ್ ನಲ್ಲಿ ಸಿಂಧು‌ 4-0 ಅಂತರದಲ್ಲಿ ಆರಂಭಿಕ ಮುನ್ನಡೆಯಲ್ಲಿದ್ದರು. ಆದರೆ ಮರಿನಾ ತೀವ್ರ ಪೈಪೋಟಿಯನ್ನು ನೀಡಿದ್ದು ಸತತವಾಗಿ ವೇಗದ ತಮ್ಮ ಶೈಲಿಯ ಅತಿ ವೇಗದ ಸ್ಮ್ಯಾಶ್ ಗಳನ್ನು ಹೊಡೆಯುವ ಮೂಲಕ ಅಂಕಗಳನ್ನು ಗಳಿಸುವಲ್ಲಿ ಯಶ್ವಸಿಯಾದರು. ಆದರೆ ಸಿಂಧು ತಮ್ಮ ನೇರ ಸ್ಮ್ಯಾಶ್‍ಗಳನ್ನು ಮರಿನಾ ಕಡೆ ನೆಟ್ ಕ್ಲೋಸ್ ಬಾರಿಸುವ 20-16 ರಲ್ಲಿ ಮುನ್ನಡೆ ಪಡೆದಿದ್ದರು.

    ನಿರ್ಣಾಯಕ ಗೇಮ್‍ನ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಬಂದ ಸಿಂಧು ಕೊನೆಯ ತನಕವೂ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ಕಲ್ಪಿಸದೇ ಮುನ್ನುಗ್ಗಿ ಜಯಭೇರಿ ಬಾರಿಸಿದರು.

    ಮೊದಲ ಪಂದ್ಯದಲ್ಲಿ 21-19 ಮತ್ತು ಎರಡನೇ ಪಂದ್ಯದಲ್ಲಿ 21-16ರ ಸೆಟ್‍ಗಳ ನೇರ ಅಂತರಗಳಿಂದ ಗೆಲವು ಸಾಧಿಸುವ ಮೂಲಕ ಸಿಂಧು ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಕಿರೀಟವನ್ನು ಮುಡಿಗೇರಿಸಿಕೊಂಡರು.

    ಇಂದಿನ ಪಂದ್ಯ ಸೇರಿ ಸಿಂಧು ಮತ್ತು ಮರಿನ್ 9 ಬಾರಿ ಮುಖಾಮುಖಿಯಾಗಿದ್ದರು. ಸಿಂಧು 4 ಬಾರಿ ಜಯಗಳಿಸಿದ್ದರೆ, 5 ಬಾರಿ ಮರೀನ್ ಗೆದ್ದಿದ್ದಾರೆ. ರಿಯೋ ಫೈನಲ್‍ನಲ್ಲಿ ಮರಿನ್‍ಗೆ ಶರಣಾಗಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದ ಸಿಂಧು ದುಬೈ ಯಲ್ಲಿ ನಡೆದ ಕೂಟದಲ್ಲಿ ಮರಿನ್ ಅವರನ್ನು ನೇರ ಗೇಮ್‍ಗಳಿಂದ ಸೋಲಿಸಿದ್ದರು.