ಬರ್ಮಿಂಗ್‌ಹ್ಯಾಮ್: ಪ್ರತಿಷ್ಟಿತ ಕಾಮನ್‌ವೆಲ್ತ್ ಗೇಮ್ಸ್‌ನ ಬಾಕ್ಸಿಂಗ್‌ನಲ್ಲಿ ಎರಡು ಚಿನ್ನದ ಪದಕಗಳು ಭಾರತದ ಪಾಲಾಗಿವೆ.
48 ಕೆಜಿ ವಿಭಾಗದ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ನೀತು ಗಂಗಾಸ್ ಹಾಗೂ 51 ಕೆಜಿ ಪುರುಷ ವಿಭಾಗದಲ್ಲಿ ಅಮಿತ್ ಪಂಗಲ್ ಭರ್ಜರಿ ಜಯ ಸಾಧಿಸಿದ್ದು, ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
🔝🥇 𝐁𝐎𝐎𝐌! It's a gold medal for Amit in the Flyweight category.
🤩 It's an upgrade for him since his 🥈 in 2018.
📸 Getty • #AmitPanghal #Boxing #B2022 #CWG2022 #TeamIndia #BharatArmy pic.twitter.com/dlV5HSOyMP
— The Bharat Army (@thebharatarmy) August 7, 2022
ಪುರುಷರ ಫ್ಲೈವೇಟ್‌ನಲ್ಲಿ ಎದುರಾಳಿಯಾಗಿದ್ದ ಯುರೋಪಿಯನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಇಂಗ್ಲೆಂಡ್‌ನ ಕಿಯಾರನ್ ಮ್ಯಾಕ್‌ಡೊನಾಲ್ಡ್ ಅವರನ್ನು 5-0 ಅಂತರದಿಂದಲ್ಲಿ ಮಣಿಸುವ ಮೂಲಕ ಪಂಗಲ್ ಚಿನ್ನದ ಹಾರಕ್ಕೆ ಕೊರಳೊಡ್ಡಿದರು. 2018ರ ಕಾಮನ್‌ವೆಲ್ತ್ ಆವೃತ್ತಿಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದ ಪಂಗಾಲ್ ಈ ಬಾರಿ ಉತ್ತಮ ಪ್ರದರ್ಶನದಿಂದ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಹಾಕಿಯಲ್ಲಿ ರೋಚಕ ಕಾದಾಟ – ಪೆನಾಲ್ಟಿ ಶೂಟೌಟ್‍ನಲ್ಲಿ ಗೆದ್ದು ಕಂಚು ಮುಡಿಗೇರಿಸಿಕೊಂಡ ಭಾರತ
Youth World Champion is now a Commonwealth Games Champion🇮🇳 Nitu Ghanghas🥇🥊 #CWG2022 #TeamIndia pic.twitter.com/u1TvIDE8UD
— Doordarshan Sports (@ddsportschannel) August 7, 2022
ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತರಾಗಿದ್ದ ನೀತು ಗಂಗಾಸ್ ಇಂಗ್ಲೆಂಡ್‌ನ ಡೆಮಿ-ಜೇಡ್ ರೆಸ್ಟನ್ ರನ್ನು 5-0 ಅಂತರದಲ್ಲಿ ಬಗ್ಗು ಬಡಿಯುವ ಮೂಲಕ ಚಿನ್ನದ ಪದಕ ಬಾಚಿಕೊಂಡಿದ್ದಾರೆ.
PV Sindhu beat Singapore's Jia Min Yeo 2-0 & enters into the FINAL 🏸#TeamIndia | #Cheer4India | #B2022 | #CWG2022India pic.twitter.com/WSFusWwvRz
— Doordarshan Sports (@ddsportschannel) August 7, 2022
ಸಿಂಧು ಫೈನಲ್‌ಗೆ ಎಂಟ್ರಿ: 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತರಾದ ಸಿಂಧು ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಸಿಂಗಾಪುರದ ಯೆಯೂ ಜಿಯಾಮಿನ್ ಅವರೊಂದಿಗೆ 49 ನಿಮಿಷಗಳ ಕಾಲ ಸೆಣಸಿದ ಸಿಂಧು ಜಿಯಾಮಿನ್ ಅವರನ್ನು 21-19, 21-17 ಅಂತರದಲ್ಲಿ ಸೋಲಿಸಿ ಫೈನಲ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆಯನ್ನೂ ಮೂಡಿಸಿದ್ದಾರೆ.


























