Tag: puttur

  • 68 ವರ್ಷ ಮುಚ್ಚಿದ್ದ ದೇಶದ ಭವಿಷ್ಯದ ಬಾಗಿಲನ್ನು 2014ರಲ್ಲಿ ತೆರೆದೆವು- ಕಾಂಗ್ರೆಸ್ಸಿಗೆ ಶಾ ಪಂಚ್

    68 ವರ್ಷ ಮುಚ್ಚಿದ್ದ ದೇಶದ ಭವಿಷ್ಯದ ಬಾಗಿಲನ್ನು 2014ರಲ್ಲಿ ತೆರೆದೆವು- ಕಾಂಗ್ರೆಸ್ಸಿಗೆ ಶಾ ಪಂಚ್

    ಉಡುಪಿ: ವೇದಿಕೆಯಲ್ಲಿ ರಾಜಕಾರಣದಲ್ಲಿ ಐವತ್ತು ದಾಟಿದವರು ಇದ್ದೇವೆ. ಕೆಲವೇ ವರ್ಷದಲ್ಲಿ ಯುವಕರು ನಮ್ಮ ಜಾಗದಲ್ಲಿ ಇರಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.

    ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದಕ್ಕೂ ಮುನ್ನ ನವ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ವಿಚಾರದಲ್ಲಿ ಶಾ ಮಾತನಾಡಿದರು. ಪಕ್ಷವನ್ನು ಪಕ್ಕಕ್ಕಿಟ್ಟು ಮಾತನಾಡುತ್ತೇನೆ, ಸ್ವಾತಂತ್ರ್ಯ ಹೋರಾಟ ಸಂದರ್ಭ ಪಕ್ಷ, ಜಾತಿ ಇರಲಿಲ್ಲ. ಸ್ವರಾಜ್ಯದ ಚಿಂತನೆ ಎಲ್ಲರ ಮನದಲ್ಲಿತ್ತು. ಈಗ ನವ ಭಾರತ ನಿರ್ಮಾಣಕ್ಕೆ ಯುವ ಪಡೆ ಟೊಂಕಕಟ್ಟಿ ನಿಲ್ಲಬೇಕು ಎಂದು ಕರೆ ನೀಡಿದರು.

    68 ವರ್ಷ ಭಾರತದ ಭವಿಷ್ಯದ ಬಾಗಿಲು ಮುಚ್ಚಿತ್ತು. ಭ್ರಷ್ಟಾಚಾರ ಭಾರತ ದೇಶವನ್ನು ಆವರಿಸಿತ್ತು. ನಾಲ್ಕು ವರ್ಷದ ಹಿಂದೆ ಬಾಗಿಲು ತೆರೆದಿದ್ದೇವೆ. 2014 ಚುನಾವಣೆ ಸುವರ್ಣಾಕ್ಷರದಲ್ಲಿ ಬರೆದೆವು. 30 ವರ್ಷದ ನಂತರ ಒಂದೇ ಪಕ್ಷ ಬಹುಮತ ಪಡೆಯಿತು, ಕಿಚಡಿ ಸರಕಾರಗಳಿಂದ ಭಾರತಕ್ಕೆ ಮುಕ್ತಿಯಾಯ್ತು. ಬಿಜೆಪಿ ಪಕ್ಷ ಸರಕಾರ ಮಾಡಲು ಅಧಿಕಾರ ಕ್ಕೆ ಬಂದಿಲ್ಲ. ಭಾರತದ ಸದೃಢತೆಯ ನಿಲುವು ಬಿಜೆಪಿದ್ದು. ಓಟ್ ಬ್ಯಾಂಕ್ ರಾಜಕಾರಣ ನಾವು ಮಾಡಲ್ಲ. ಯಾರನ್ನು ಓಲೈಕೆ ಮಾಡುವ ಉದ್ದೇಶ ನಮಗಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟರು.

    ದೇಶದಲ್ಲಿ ಅಂಧಕಾರ ಕವಿದಿತ್ತು. ಬಡವರ ಮನೆಯಲ್ಲಿ ಒಲೆ ಉರಿಯುತ್ತಿರಲಿಲ್ಲ, ಈಗ ಮನೆಗಳಲ್ಲಿ ಬೆಳಕು ಬಂದಿದೆ. ಅಡುಗೆ ಮನೆಗೆ ಉಚಿತ ಸಿಲಿಂಡರ್ ಬಂದಿದೆ. ಮೋದಿಯ ಸ್ವಚ್ಛ ಆಡಳಿತ ಶುರುಮಾಡಿರೋದ್ರಿಂದ ದಿನಗಳು ಕಠಿಣವಾಗಿ ಕಾಣಿಸುತ್ತಿರಬಹುದು. ಭಾರತದ ಮುಂದಿನ ದಿನಗಳು ಒಳ್ಳೆಯದಿರುತ್ತದೆ. ದೇಶಾದ್ಯಂತ ಕೋಟ್ಯಾಂತರ ಶೌಚಾಲಯ ನಿರ್ಮಾಣವಾಗಿದೆ, ಮೋದಿ ಕೇರ್, ಮುಂದಿನ 4 ವರ್ಷಗಳಲ್ಲಿ ಎಲ್ಲಾ ಮನೆಗಳಲ್ಲಿ ಎಲ್ಲಾ ಸವಲತ್ತು ಇರುತ್ತದೆ ಎಂದು ಹೇಳಿದರು.

    ಉರಿಯಲ್ಲಿ 12 ಯೋಧರ ಹತ್ಯೆಯಾಯ್ತು. ಮೋದಿ ಭಾಷಣ ಮಾಡಲಿಲ್ಲ. ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟರು. ಅಮೇರಿಕ, ಇಸ್ರೇಲ್ ರೀತಿ ಭಾರತೀಯ ಯೋಧರಿಗೂ ವಿಶ್ವದಲ್ಲಿ ಗೌರವವಿದೆ ಎಂದರು.

    ಯೋಧರ ಕೈಯಲ್ಲಿರುವ ಬಂದೂಕಿನ ಗೋಲಿಗೆ ಗೋಲ್ ಯಾವುದೆಂದು ಗೊತ್ತಿದೆ. ವಿರೋಧಿಗರಿಗೆ ಉತ್ತರಿಸಲು ನಮಗೆ ಗೊತ್ತಿದೆ. ನಾವು ಶಾಂತಿಯನ್ನು ಅಪೇಕ್ಷಿಸುವ ಭಾರತೀಯರು ಎಂದು ಶಾ ವಿರೋಧಿ ಪಾಕ್ ಮತ್ತು ಚೀನಾ ಕುರಿತು ಹೇಳಿದರು. ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ನೆನಪಿಸಿದ ಶಾ, ಯುವಕರಿಗಾಗಿ ಕೇಂದ್ರ ಸರ್ಕಾರ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದರು.

  • ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘ ಸ್ನಾನ ಮಾಡೋದು ಅವಮಾನದ ಲಕ್ಷಣ: ಹೆಗ್ಡೆ

    ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘ ಸ್ನಾನ ಮಾಡೋದು ಅವಮಾನದ ಲಕ್ಷಣ: ಹೆಗ್ಡೆ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಭಾಷೆಯ ಕುರಿತಂತೆ ನೀಡಿದ್ದ ಹೇಳಿಕೆ ಸುದ್ದಿಯಾಗುತ್ತಿದ್ದಂತೆಯೇ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಸ್ಪಷ್ಟನೆ ನೀಡಿದ್ದಾರೆ.

    ಭಾಷೆಯ ಕುರಿತು ಮಾತನಾಡಿದರ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನಿಡಿದ್ದಾರೆ. ಅಲ್ಲದೇ ಅದರ ಜೊತೆಗೆ ಒಂದು ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.

    ಫೇಸ್‍ಬುಕ್ ನಲ್ಲಿ ಬರೆದುಕೊಂಡಿರೋದೇನು?: ಮಾತೃ ಭಾಷೆಯ ಉಳಿವು ಪ್ರಶ್ನೆಯಲ್ಲ. ಬದಲಿಗೆ ಇಂದು ಅವು ಗಟ್ಟಿಯಾಗಿ ಇನ್ನು ಹಲವಾರು ತಲೆಮಾರಿಗೆ ಶ್ರೀಮಂತವಾಗಿ ಧಾರೆಯೆರೆಯುವ ಒಂದು ಸುವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಿದೆ. ಇಂದು ಬಹುತೇಕ ಭಾಷೆಯ ಬಗ್ಗೆ ಹೋರಾಟ ಕೇವಲ ವೈಯಕ್ತಿಕ ಮತ್ತು ರಾಜಕೀಯ ಕೀಳು ದೊಂಬರಾಟವಾಗಿ ಮಾರ್ಪಟ್ಟಾಗಿರುವುದು ಪ್ರಸ್ತುತ ನಮ್ಮ ಸಮಾಜದ ಒಂದು ದೊಡ್ಡ ದುರಂತ. ಆಂಗ್ಲ ಮಾಧ್ಯಮದ ಪ್ರಭಾವ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದೆ. ಶುದ್ಧವಾಗಿ ಕನ್ನಡ ಭಾಷೆ ಮಾತನಾಡುವುದು ಸಹ ಇಂದು ಒಂದು ಅಪರೂಪದ ಕಲೆಯಾಗಿ ನೋಡಲಾಗುತ್ತಿದೆ ಮತ್ತು ಇಂದಿನ ತಲೆಮಾರಿನ ಹಲವರಿಗೆ ಶುದ್ಧ ಕನ್ನಡ ಅರ್ಥವಾಗದಿರುವ ಭಾಷೆಯು ಹೌದು. ಕನ್ನಡ ಸಂಭಾಷಣೆಯಲ್ಲಿ ಆಂಗ್ಲ ಮತ್ತು ಇನ್ನಿತರ ಭಾಷೆಯ ಕಲಸು ಮಿಶ್ರಿತ ಮಾಡದಿದ್ದರೆ ಸಂವಹನ ಪೂರ್ಣಗೊಳ್ಳುವುದಿಲ್ಲ ಮತ್ತು ಅದು ಒಂದು sಣಚಿಣus ನಿರ್ಮಾಣ ಮಾಡುವುದಿಲ್ಲವೆನ್ನುವುದು ಸಹ ಇಂದಿನ ಹದೆಗೆಟ್ಟ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇದು ಹೆಚ್ಚಾಗಿ ಬೆಂಗಳೂರು ನಗರದಲ್ಲಿ ಕಂಡು ಬರುತ್ತಿದ್ದ ಒಂದು ನಕಾರಾತ್ಮಕ ಬೆಳವಣಿಗೆ. ಇಂದು ಬೇರೆ ಗ್ರಾಮಾಂತರ ಹಳ್ಳಿ- ಪಟ್ಟಣಗಳಿಗೆ ಸಹ ದಟ್ಟವಾಗಿ ವ್ಯಾಪಿಸುತ್ತಿದೆ. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ತಿರುಗಿ ಬಿದ್ದ ಶಾಸಕ ಸುರೇಶ್ ಕುಮಾರ್

    ಭಾಷೆಯ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಮೆರೆಯಬೇಕಾದವರು ಇಂದು ಅದನ್ನು ಕಡೆಗಣಿಸುತ್ತಿದ್ದೇವೆ. ಇಂದು ಹಲವಾರು ಭಾರತೀಯರ ಮನೆಮಾತು ಆಂಗ್ಲ ಭಾಷೆಯಾಗಿ ಬದಲಾಗಿದೆ. ಹಾಗಾದರೆ ನಮ್ಮ ಎಲ್ಲ ಭಾರತೀಯ ಭಾಷೆಗಳು ನಮ್ಮ ಇಂದಿನ ಸ್ಥಿತಿ-ಗತಿಗೆ ಸಮರ್ಥವಲ್ಲವೇ? ನಮ್ಮ ಕನ್ನಡದಷ್ಟು ವೈವಿಧ್ಯ ಚೆಲುವನ್ನು ಇನ್ನೆಲ್ಲಿ ಕಾಣಲು ಸಾಧ್ಯ? ನಗರಗಳಲ್ಲಿ ಇಂದು ಅಂತರರಾಷ್ಟ್ರೀಯ ಶಾಲೆಗಳಲ್ಲಿ ನಮ್ಮ ಮಾತೃ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಐರೋಪ್ಯ ಭಾಷೆಗಳ ಹೇರಿಕೆ ನಡೆಯುತ್ತಿದೆ. ಈ ಭಾಷೆಗಳು ಇಂದು ಯುರೋಪ್ ಖಂಡದ ಆಯಾ-ಪ್ರದೇಶ ದೇಶಗಳಲ್ಲೇ ಅವನತಿಯತ್ತ ಸಾಗುತ್ತಿದೆ. ಮೂಲ ಜನಸಂಖ್ಯೆ ಕುಸಿತ, ವಲಸೆ ಭಾಷೆಯ ಬೆಳೆಯುತ್ತಿರುವ ಪ್ರಭಾವ, ಬದಲಾಗುತ್ತಿರುವ ಜನಸಂಖ್ಯೆ ಪರಿವರ್ತನೆ, ಇಂದು ಈ ಖಂಡದ ಪ್ರಮುಖ ಸವಾಲಾಗಿದೆ. ಆದರೆ ನಾವು ಇಂದು, ಅರ್ಥವಾಗದ ಮತ್ತು ನಮ್ಮ ಪರಂಪರೆಗೆ ಯಾವುದೇ ಸಂಬಂಧವಿಲ್ಲದ ಈ ವಿದೇಶಿ ಭಾಷೆಗಳಿಗೆ ಮನ್ನಣೆ ನೀಡುತ್ತಿದ್ದೇವೆ. ಹಾಗೂ ನಮ್ಮ ಮಾತೃಭಾಷೆಯನ್ನು ಕಡೆಗಣಿಸಿ ಮಕ್ಕಳಿಗೆ ಬಲವಂತದ ಮಾಘಸ್ನಾನ ಮಾಡಿಸುತ್ತಿರುವುದು ಅವಮಾನದ ಲಕ್ಷಣವೆಂದೇ ಪರಿಗಣಿಸುತ್ತೇನೆ. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ನಟ ಜಗ್ಗೇಶ್ ಟಾಂಗ್

    ಭಾಷೆ ನಮ್ಮ ಸಂಸ್ಕೃತಿಯನ್ನು ಸೂಚಿಸುತ್ತದೆ. ಇಂದು ಕನ್ನಡಿಗರಿಗೆ ಸಿಗುತ್ತಿರುವ ಸ್ಥಾನ-ಮಾನ, ಮರ್ಯಾದೆ ಎಲ್ಲವೂ ನಮ್ಮ ಶ್ರೀಮಂತ ಪರಂಪರೆಯ ಬಳುವಳಿಯಿಂದ ಬಂದದ್ದು. ಅದನ್ನು ನಾವು ಹೆಮ್ಮೆಯಿಂದ ಬಳಸಿ, ಉಳಿಸಿ ಇನ್ನಷ್ಟು ಮೆರುಗುಗೊಳಿಸುವುದು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಶುದ್ಧ ಕನ್ನಡ ಬಳಕೆ ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡುವುದು ಹಾಗೂ ಸಂವಹನದಲ್ಲಿ ಹೆಚ್ಚಿನ ಆಲೋಚನೆಯ ನಿಖರತೆಯನ್ನು ತಲುಪಬಹುದಾಗಿದೆ.

    ವಿಡಿಯೋದಲ್ಲೇನಿದೆ?: ಇದಷ್ಟು ಹೇಳಲು ಕಾರಣ ನಮ್ಮ ಕೆಲವು ದೃಶ್ಯ ಮಾಧ್ಯಮದವರು ಭಾಷೆಗೆ ಸಂಬಂಧಿಸಿದಂತೆ ಪುತ್ತೂರಿನ ಕಾರ್ಯಕ್ರಮ ಒಂದರಲ್ಲಿ ನನ್ನ ಮಾತು ಮತ್ತು ಆಲೋಚನೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿರುವುದ್ದಕ್ಕೆ ಹೃದಯಪೂರ್ವಕ ಸ್ವಾಗತ. ಹೀಗೆ ಕಳೆದ 2 ದಶಕಕ್ಕೂ ಹೆಚ್ಚಿನ ನನ್ನ ರಾಜಕಾರಣದ ಜೀವನದ ಉದ್ದಕ್ಕೂ ಸದಾ ನನ್ನ ಬಗ್ಗೆ ವಿಷಕಾರುತ್ತಲೇ ನನ್ನನ್ನು ಅನಾವರಣಗೊಳಿಸಿದ ಈ ಕೆಲವು ಮಾಧ್ಯಮದ ಮಂದಿಗೆ ಈ ವಿಷಯವನ್ನು ಇನ್ನು ಹೆಚ್ಚಾಗಿ ನಿಮ್ಮ ಅಪ್ರಬುದ್ಧ ಭಾಷೆಯಲ್ಲೇ ಚರ್ಚೆ ಮುಂದುವರಿಸುವಂತೆ ಶುಭ ಕೋರುತ್ತೇನೆ. ಅನಂತ ಧನ್ಯವಾದಗಳು ಅಂತ ಹೇಳಿದ್ದಾರೆ.

    https://www.youtube.com/watch?v=tlNDCv9myi4&feature=youtu.be

    https://www.youtube.com/watch?v=jE4xn6DpZhY

    https://www.youtube.com/watch?v=24frMpm0HGY

  • ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ತಿರುಗಿ ಬಿದ್ದ ಶಾಸಕ ಸುರೇಶ್ ಕುಮಾರ್

    ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ತಿರುಗಿ ಬಿದ್ದ ಶಾಸಕ ಸುರೇಶ್ ಕುಮಾರ್

    ಬೆಂಗಳೂರು: ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಇದೀಗ ಶಾಸಕ ಸುರೇಶ್ ಕುಮಾರ್ ತಿರುಗಿ ಬಿದ್ದಿದ್ದಾರೆ.

    ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಕನ್ನಡ ಯೋಗ್ಯ ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ. ಕೇಂದ್ರ ಸಚಿವರಾಗಿ ಆ ಕನ್ನಡ, ಈ ಕನ್ನಡ, ಯೋಗ್ಯ ಕನ್ನಡ ಅನ್ನಬಾರದು. ಚಾಮರಾಜನಗರದಿಂದ ಬೀದರ್ ತನಕವೂ ಯೋಗ್ಯ ಕನ್ನಡ ಇದೆ. ಬೆಂಗಳೂರಿಗನಾಗಿ ನಾನು ಯೋಗ್ಯ ಕನ್ನಡ ಮಾತಾಡ್ತೀನಿ. ಜವಾಬ್ದಾರಿಯುತ ಕೇಂದ್ರ ಸಚಿವರಾಗಿ ಅನಂತಕುಮಾರ್ ಹೆಗಡೆ ಈ ರೀತಿ ಮಾತನಾಡಬಾರದಿತ್ತು. ಹೀಗಾಗಿ ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

    ಹೆಗ್ಡೆ ನೀಡಿದ್ದ ಹೇಳಿಕೆಯೇನು?: ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ ಅಡಿಯಲ್ಲಿ ಆರಂಭಿಸಲಾದ ಉಚಿತ ತಾಂತ್ರಿಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದ ಹೆಗ್ಡೆಯವರು, ಇಂಗ್ಲಿಷ್ ಅನ್ನು ಶುದ್ಧ ಕನ್ನಡಕ್ಕೆ ಭಾಷಾಂತರ ಮಾಡುವುದೇ ಇಂದಿನ ಸವಾಲು. ಶುದ್ಧ ಕನ್ನಡ ಯಾರಲ್ಲೂ ಇಲ್ಲ. ಎಲ್ಲೋ ಒಂದು ಕಡೆ ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಪ್ರದೇಶದವರನ್ನು ಹೊರತುಪಡಿಸಿದರೆ ಇತರರಿಗೆ ಸರಿಯಾಗಿ ಕನ್ನಡ ಮಾತನಾಡುವ ಯೋಗ್ಯತೆಯೇ ಇಲ್ಲ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದನ್ನೂ ಓದಿ: ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸಚಿವ ಹೆಗ್ಡೆ ಯಿಂದ ಕೇಸ್ ದಾಖಲು

    ಬೆಂಗಳೂರಿನ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಅಲ್ಲಿನ ಸ್ಥಿತಿ ಚಿಂತಾಜನಕವಾಗಿದೆ. ಬೇಸಿಕ್ ಸ್ಕಿಲ್ ಇಲ್ಲದ ಸಿದ್ದಣ್ಣ ಸರಕಾರ ಇದೆ. ರೀಜನಲ್ ಸ್ಕಿಲ್ ಗ್ಯಾಪ್ ಎನಾಲಿಸಿಸ್ ಮಾಡಲು ಕೇಂದ್ರ ಸರಕಾರ ನಮ್ಮ ರಾಜ್ಯ ಸರಕಾರಕ್ಕೆ ಅನುದಾನ ನೀಡಿದೆ. ಅದನ್ನು ನಮ್ಮ ಸಿದ್ದಣ್ಣ ಸರಕಾರ ಹೇಗೆ ಬಳಸುತ್ತದೋ ನೋಡಬೇಕು. ಬೇಸಿಕ್ ಸ್ಕಿಲ್ ಇಲ್ಲದವರು ಏನು ಮಾಡುತ್ತಾರೆ ಎಂದು ಲೇವಡಿ ಮಾಡಿದ್ದರು.

    https://www.youtube.com/watch?v=24frMpm0HGY

    https://www.youtube.com/watch?v=jE4xn6DpZhY

  • ಸಚಿವ ಅನಂತ್ ಕುಮಾರ್ ಹೆಗ್ಡೆಯನ್ನು ರೂಟ್ ನಂ.4ರ ಬಸ್ ಹತ್ತಿಸ್ಬೇಕು – ರೇವಣ್ಣ ಕಿಡಿ

    ಸಚಿವ ಅನಂತ್ ಕುಮಾರ್ ಹೆಗ್ಡೆಯನ್ನು ರೂಟ್ ನಂ.4ರ ಬಸ್ ಹತ್ತಿಸ್ಬೇಕು – ರೇವಣ್ಣ ಕಿಡಿ

    ಬೆಂಗಳೂರು: ಸಾಹಿತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಸಾರಿಗೆ ಸಚಿವ ಎಚ್ ಎಂ ರೇವಣ್ಣ ಕಿಡಿಕಾರಿದ್ದಾರೆ.

    ವಿವಿಧ ಬೇಡಿಕೆ ಈಡೇರಿಸಿ ನಾಳೆ ರಾಜ್ಯ ರಸ್ತೆ ಸಾರಿಗೆ ನೌಕಕರರ ಸಂಘ (ಸಿಐಟಿಯು) ದಿಂದ ಪ್ರತಿಭಟನೆ ಹಿನ್ನಲೆಯಲ್ಲಿ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಇತ್ತೀಚೆಗೆ ಮಾತಾಡೊದನ್ನ ನಿಲ್ಲಿಸಿದ್ರು ಈಗ ಮತ್ತೆ ಸಾಹಿತಿಗಳ ಬಗ್ಗೆ ಮಾತಾಡಿದ್ದಾರೆ. ಹೀಗಾಗಿ ಅವರನ್ನು ರೂಟ್ ನಂಬರ್ 4ರ ಬಸ್ ಹತ್ತಿಸಬೇಕು. ರೂಟ್ ನಂಬರ್ 4 ಅಂದ್ರೆ ಹುಚ್ಚಾಸ್ಪತ್ರೆಗೆ ಕಳುಹಿಸಬೇಕು ಅಂತ ಸಿಡಿಮಿಡಿಗೊಂಡಿದ್ದಾರೆ.

    ಮಂಗಳೂರು-ಪುತ್ತೂರು ವಿಭಾಗಕ್ಕೆ ನೇಮಕಾತಿ:
    ಪುತ್ತೂರು-ಮಂಗಳೂರು ವಿಭಾಗದಲ್ಲಿ ಚಾಲಕರು, ನಿರ್ವಾಹಕರ ಕೊರತೆ ಇದೆ. ಆ ಭಾಗದಲ್ಲಿ ಕೆಲಸ ಮಾಡುತ್ತಿರುವವರು ವರ್ಗಾವಣೆ ಕೇಳಿದ್ದಾರೆ. ಆದರೆ ಅಲ್ಲಿ ಕೆಲಸ ಮಾಡಲು ಸಿಬ್ಬಂದಿ ಇಲ್ಲ. ಅಲ್ಲಿನವರು ಪ್ರಪಂಚದಾದ್ಯಂತ ಕೆಲಸ ಮಾಡ್ತಾರೆ. ಆದ್ರೆ ಚಾಲಕ, ನಿರ್ವಾಹಕ ವೃತ್ತಿಗೆ ಬರುವವರು ಕಡಿಮೆ. ಹೀಗಾಗಿ ಸಮಸ್ಯೆ ಸೃಷ್ಟಿಯಾಗಿದೆ. ಈ ಎಲ್ಲಾ ಕಾರಣದಿಂದ ಮಂಗಳೂರು-ಪುತ್ತೂರು ವಿಭಾಗಕ್ಕೆ ತಕ್ಷಣವೇ ನೇಮಕಾತಿಗೆ ಚಾಲನೆ ಕೊಟ್ಟಿದ್ದೇವೆ. ಇನ್ನು ರಾಜ್ಯ ರಸ್ತೆ ಸಾರಿಗೆ ನಿಗಮದ 4 ನಿಗಮಗಳು ಲಾಸ್ ನಲ್ಲಿ ನಡೀತಿದೆ. ಈಶಾನ್ಯ ಸಾರಿಗೆ ಹೆಚ್ಚು ಲಾಸ್ ನಲ್ಲಿ ನಡೀತಿದೆ ಅಂತ ತಿಳಿಸಿದ್ರು.

    ಪ್ರತಿಭಟನೆ ವಾಪಸ್:
    ಪ್ರತಿಭಟನೆ ಕುರಿತು ಮಾತನಾಡಿದ ಅವರು, ಈಗಾಗಲೇ ಸಂಘಟನೆಯವರ ಜೊತೆ ಮಾತುಕತೆ ನಡೆಸಲಾಗಿದೆ. 1.30 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನ ಹೊಂದಿರುವ ಇಲಾಖೆ ಇದು. ಈಗಾಗಲೇ ಸಂಘಟನೆಯ ಬಹುತೇಕ ಬೇಡಿಕೆ ಈಡೇರಿಸಲಾಗಿದೆ. 6 ಬೇಡಿಕೆಗಳ ಬಗ್ಗೆ ಸಂಘಟನೆಯವರು ಇಲಾಖೆ ಮುಂದೆ ಇಟ್ಟಿದ್ರು. ಇದ್ರಲ್ಲಿ ಬಹುತೇಕ ಬೇಡಿಕೆ ಈಡೇರಿಸಿದ್ದೇವೆ. ಕೆಲವು ಬೇಡಿಕೆ ಈಡೇರಿಕೆಗೆ ಸಮಯ ಕೇಳಿದ್ದೇವೆ. ಈಗಾಗಲೇ ಸರ್ಕಾರ 4 ರಸ್ತೆ ಸಾರಿಗೆ ನಿಗಮದ ನೌಕರರಿಗೆ 12.5% ವೇತನ ಹೆಚ್ಚಳ ಮಾಡಲಾಗಿದೆ. ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ಹೀಗಾಗಿ ಸಂಘಟನೆಯವರು ಪ್ರತಿಭಟನೆ ಮಾಡೋದು ಬೇಡ ಅಂತ ಮನವಿ ಮಾಡಿದ್ದೇವೆ. ಹೀಗಾಗಿ ಪ್ರತಿಭಟನೆಯನ್ನ ಸಂಘಟನೆಯವರು ವಾಪಸ್ ಪಡೆದಿದ್ದಾರೆ ಎಂದು ಅವರು ಹೇಳಿದ್ರು.

    ಚುನಾವಣೆಯಲ್ಲಿ ಸ್ಫರ್ಧೆ:
    ಇದೇ ವೇಳೆ ಮಹಾಲಕ್ಷ್ಮಿ ಲೇಔಟ್ ನಿಂದ ಚುನಾವಣೆಗೆ ಸ್ಪರ್ಧೆ ವಿಚಾರದ ಕುರಿತು ಮಾತನಾಡಿ, ನನ್ನ ಮನೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇದೆ. ದಿನ ಹೋಗಿ ಬರ್ತಿನಿ. ಹೆಬ್ಬಾಳ, ಮಾಗಡಿ ಕ್ಷೇತ್ರ ಈಗಾಗಲೇ ಬಿಟ್ಟಿದ್ದೇನೆ. ಹೈಕಮಾಂಡ್ ನಿರ್ಧಾರ ಮಾಡಿದ್ರೆ ಸ್ಪರ್ಧೆ ಮಾಡ್ತೀನಿ. ನನಗೆ ಇನ್ನು ಎರಡೂವರೆ ವರ್ಷ ಎಂಎಲ್‍ಸಿ ಅವಧಿ ಇದೆ. ನಾನೇನು ತಲೆಕೆಡಿಸಿಕೊಂಡಿಲ್ಲ. ಹೈಕಮಾಂಡ್ ಹೇಳಿದ್ರೆ ಎಲ್ಲಿಂದ ಬೇಕಾದ್ರು ಸ್ಪರ್ಧೆ ಮಾಡ್ತೀನಿ ಅಂತ ಸ್ಪಷ್ಟಪಡಿಸಿದ್ರು.

    ಅನಂತ್ ಕುಮಾರ್ ಹೆಗ್ಡೆ ಏನ್ ಹೇಳಿದ್ದರು?:
    ಸೋ ಕಾಲ್ಡ್ ಬುದ್ಧಿ ಜೀವಿಗಳು ಬರಿದಿದ್ದೆಲ್ಲಾ ಸಾಹಿತ್ಯ, ಗೀಚಿದ್ದೆಲ್ಲಾ ಕಾವ್ಯ, ಅರ್ಥವೂ ಇರೋದಿಲ್ಲಾ, ತಲೆ, ಬುಡವೂ ಇರೋದಿಲ್ಲ. ಅವರಿಗೆ ಯಾವುದು ಇಂದು ಸರ್ಕಾರಿ ಸೈಟ್ ಬೇಕಾಗಿರುತ್ತೆ, ಅದಕ್ಕೆ ವಿಚಾರವಾದಿಗಳ ಪಟ್ಟ ಕಟ್ಟಿಕೊಂಡಿರುತ್ತಾರೆ. ನಾವು ಮಾನವರಾಗಬೇಕು ಎಂದು ಸ್ಪಷ್ಟನೆ ಇಲ್ಲದವರು ಏನಾಗಬೇಕು ಎಂದು ಕೇಳಿದಾಗ ಮಾನವರಾಗಬೇಕು ಅಂತಾರೆ. ಹಾಗಾದ್ರೆ ನಾವು ದನಾನಾ ಎಂದು ಪ್ರಶ್ನಿಸಿದ ಅವರು, ನಾವು ಪ್ರಾಣಿಗಳ ತರಾ ಇದ್ದಿವಾ? ನಾವು ಹುಟ್ಟಿದ್ದೆ ಮಾನವರಾಗಿ. ಇನ್ನು ಆಗಬೇಕಾಗಿರುವುದು ದೇವರಾಗಿ. ಮನುಷ್ಯ ದೇವರಾಗಲು ಪ್ರಯತ್ನ ಮಾಡಬೇಕು. ಆದ್ರೆ ಕಲಿತಿರುವ ಸೋ ಕಾಲ್ಡ್ ಬುದ್ಧಿ ಜೀವಿಗಳು ಹೇಳ್ತಾರೆ ನಾವು ಮಾನವರಾಗಬೇಕು. ಅವರ ದೃಷ್ಟಿಯಲ್ಲಿ ನಾವು ಹೆಂಗೆ ಕಂಡಿದ್ದೇವೆ ಗೊತ್ತಿಲ್ಲ. ಅವರಿಗೆ ದೃಷ್ಟಿ ದೋಷ ಆಗಿರಬೇಕು ಅಂತ ಹೇಳಿದ್ದರು.

    https://www.youtube.com/watch?v=4JKXmwu0JR0

  • ಶಿರಾಡಿಯಲ್ಲಿ ಕಾಣಿಸಿಕೊಂಡ ಶಂಕಿತ ನಕ್ಸಲರು- ಮೂವರು ಶಸ್ತ್ರಧಾರಿಗಳನ್ನು ಕಂಡು ಸ್ಥಳೀಯರಲ್ಲಿ ಆತಂಕ

    ಶಿರಾಡಿಯಲ್ಲಿ ಕಾಣಿಸಿಕೊಂಡ ಶಂಕಿತ ನಕ್ಸಲರು- ಮೂವರು ಶಸ್ತ್ರಧಾರಿಗಳನ್ನು ಕಂಡು ಸ್ಥಳೀಯರಲ್ಲಿ ಆತಂಕ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿಘಾಟಿ ಪ್ರದೇಶದಲ್ಲಿ ಮೂವರು ನಕ್ಸಲರು ಕಾಣಿಸಿಕೊಂಡಿದ್ದಾರೆ.

    ಶಿರಾಡಿಯ ಅಡ್ಡಹೊಳೆ ಅರಣ್ಯ ವ್ಯಾಪ್ತಿಯ ಮಿತ್ತಮಜಲು ಎಂಬಲ್ಲಿ ರಾತ್ರಿ 7.30ರ ಸುಮಾರಿಗೆ ಶಸ್ತ್ರಧಾರಿ ನಕ್ಸಲರು ಪರಿಸರದ ಮನೆಗಳಿಗೆ ಭೇಟಿ ನೀಡಿದ್ದಾರೆ. ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿದ್ದ ತಂಡ ಲೀಲಾ ಎಂಬವರ ಮನೆಗೆ ಆಗಮಿಸಿ ತಾವು ಕಾಡಿನಲ್ಲಿರುವ ನಕ್ಸಲರಾಗಿದ್ದು ತುಂಬಾ ಹಸಿವಿನಿಂದ ಇದ್ದೇವೆ. ಹೀಗಾಗಿ ಆಹಾರ ತಯಾರಿಸಿಕೊಡುವಂತೆ ವಿನಂತಿಸಿದ್ದಾರೆ. ಅಲ್ಲದೆ ತಮ್ಮಲ್ಲಿದ್ದ ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್ ಮಾಡಿದ್ದಾರೆ.

    ಮನೆಯಲ್ಲಿ ಅಕ್ಕಿ ಹಿಟ್ಟು ಮಾಡಿದ್ದನ್ನು ಕಂಡು ದೋಸೆ ಮಾಡಿಕೊಡುವಂತೆ ವಿನಂತಿಸಿ, ದೋಸೆ ಮಾಡಿ ತಿಂದಿದ್ದಾರೆ. ಪರಿಸರದ ಬೇರೆ ಮನೆಗಳಿಗೂ ಭೇಟಿ ನೀಡಿದ್ದು ಅಕ್ಕಿ, ಸಕ್ಕರೆ, ತರಕಾರಿ ಕೇಳಿ ಪಡೆದು ರಾತ್ರಿಯೇ ಕಾಡಿನಲ್ಲಿ ಕಣ್ಮರೆಯಾಗಿದ್ದಾರೆ.

    ತಂಡದ ಸದಸ್ಯರು ಮಲಯಾಳಂ, ತಮಿಳು, ತುಳು ಮಾತನಾಡುತ್ತಿದ್ದರು. ನಕ್ಸಲರು ಬಂದ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ದೃಢಪಡಿಸಿದ್ದಾರೆ. ದಕ್ಷಿಣ ಕನ್ನಡ ಎಸ್‍ಪಿ ಸುಧೀರ್ ರೆಡ್ಡಿ ಸ್ಥಳಕ್ಕೆ ತೆರಳಿದ್ದು ಇಂದು ಬೆಳಗ್ಗಿನಿಂದ ಎಎನ್‍ಎಫ್ ಪಡೆ ಕೂಂಬಿಂಗ್ ಆರಂಭಿಸಲಿದೆ.

    ಈ ಹಿಂದೆ ಅಂದರೆ 2012ರಲ್ಲಿ ಪುಷ್ಪಗಿರಿ, ಆನೆ ಕರಿಡಾರ್ ನಂತಹ ವಿಷಯಗಳನ್ನು ಕೈಗೆತ್ತಿಕೊಂಡು ಜನರ ವಿಶ್ವಾಸ ಗಳಿಸಲು ನಕ್ಸಲರು ಸುಬ್ರಹ್ಮಣ್ಯ ಸಮೀಪದ ಪಳ್ಳಿಗದ್ದೆಯಲ್ಲಿ ಓಡಾಡಿದ್ದರು. ಚೇರು, ಭಾಗ್ಯ, ಎರ್ಮಾಯಿಲ್ ನಡುತೋಟ ಮುಂತಾದ ಕಡೆಗಳಲ್ಲೂ ಕಾಡಿನಂಚಿನ ಮನೆಗಳಿಗೆ ಬಂದು ಆಹಾರ ಸಾಮಗ್ರಿ ಸಾಗಿಸಿದ್ದರು.

    ಬೇರೆ ಕಡೆಗಳಲ್ಲಿನ ನಕ್ಸಲರ ಮೂಲ ಕಂಡುಕೊಳ್ಳಲು ವಿಫಲರಾಗಿದ್ದ ಎಎನ್‍ಎಫ್ ಸಿಬ್ಬಂದಿಗೆ ಪಳ್ಳಿಗದ್ದೆಗೆ ನಕ್ಸಲರು ಬಂದಿದ್ದು ಪ್ರಬಲ ಪುರಾವೆಯಾಗಿ ದೊರೆತಿತ್ತು. ನಕ್ಸಲರ ಜಾಡು ಹಿಡಿದ ಯೋಧರು, ಬಿಸಿಲೆ ಸಮೀಪ ಎನ್‍ಕೌಂಟರ್ ನಡೆಸಿ ಎಲ್ಲಪ್ಪ ಎಂಬಾತನನ್ನು ಕೊಂದು ಹಾಕಿದ್ದರು.

  • ಸಹಜ ಸ್ಥಿತಿಯತ್ತ ಕಲ್ಲಡ್ಕ- ಪ್ರಮುಖ ಆರೋಪಿ ಪೊಲೀಸರಿಂದ ಎಸ್ಕೇಪ್

    ಸಹಜ ಸ್ಥಿತಿಯತ್ತ ಕಲ್ಲಡ್ಕ- ಪ್ರಮುಖ ಆರೋಪಿ ಪೊಲೀಸರಿಂದ ಎಸ್ಕೇಪ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಗುಂಪು ಘರ್ಷಣೆಯಿಂದ ನಲುಗಿದ್ದ ಈಗ ಸಹಜ ಸ್ಥಿತಿಗೆ ಮರಳಿದೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿಂದೂ ಮುಖಂಡನೊಬ್ಬ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.

    ಇರಿತಕ್ಕೊಳಗಾಗಿ ಮಂಗಳೂರು ಜಿಲ್ಲೆಯ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಶೆಟ್ಟಿ ಪೊಲೀಸರ ಕಾವಲಿನ ಮಧ್ಯೆಯೇ ರಾತ್ರಿ ಹೊತ್ತಿನಲ್ಲಿ ಪರಾರಿಯಾಗಿದ್ದಾನೆ.

    ಪ್ರಕರಣ ಸಂಬಂಧಿಸಿ ಕಾವಲಿದ್ದ ಪುತ್ತೂರು ಠಾಣೆಯ ಪಿಎಸ್‍ಐ ಓಮನ, ಹೆಡ್ ಕಾನ್ಸ್ ಟೇಬಲ್ ರಾಧಾಕೃಷ್ಣ ಹಾಗೂ ಪೇದೆ ರಮೇಶ್ ಲಮಾಣಿ ಅವರನ್ನು ದ.ಕ. ಎಸ್ಪಿ ಭೂಷಣರಾವ್ ಬೋರಸೆ ಅಮಾನತು ಮಾಡಿದ್ದಾರೆ.

    ರಾತ್ರಿ ಹೊತ್ತಿನಲ್ಲಿ ಪೊಲೀಸರು ನಿದ್ದೆಗೆ ಜಾರಿದ್ದ ವೇಳೆ ಆರೋಪಿ ಪರಾರಿಯಾಗಿದ್ದರಿಂದ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಶಿಕ್ಷೆ ವಿಧಿಸಲಾಗಿದೆ.

     

    ಕಳೆದ ಜೂನ್ 13ರಂದು ರತ್ನಾಕರ ಶೆಟ್ಟಿ ಮತ್ತು ಖಲೀಲ್ ಎಂಬುವರ ನಡುವಿನ ಜಗಳದ ನೆಪದಲ್ಲಿ ಕಲ್ಲಡ್ಕದಲ್ಲಿ ಗುಂಪು ಘರ್ಷಣೆ, ಕಲ್ಲು ತೂರಾಟ ನಡೆದಿತ್ತು. ಇವರಿಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

  • ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅನುಷ್ಕಾ ಶೆಟ್ಟಿ

    ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅನುಷ್ಕಾ ಶೆಟ್ಟಿ

    ಮಂಗಳೂರು: ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ತನ್ನ ಆರಾಧ್ಯ ದೇವರಾದ ಮಹಾಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಅನುಷ್ಕಾ ತನ್ನ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು. ಮಹಾಲಿಂಗೇಶ್ವರನ ದರ್ಶನದ ಬಳಿಕ ದೇವಸ್ಥಾನದ ನಂದಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.

    ಸ್ವತ ಪುತ್ತೂರಿನವರೇ ಆದ ಅನುಷ್ಕಾ ಮಂಗಳವಾರ ಸಂಜೆ ಉರುವಾಲಿನ ತಮ್ಮ ಮನೆಯಲ್ಲಿ ನಡೆಯುವ ದೈವವತಂಬಿಲ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನುಷ್ಕಾ ಶೆಟ್ಟಿ ಅವರಿಗೆ ಅಣ್ಣ ಗುಣರಂಜನ್ ಶೆಟ್ಟಿ, ತಾಯಿ ಪ್ರಪುಲ್ಲ ಶೆಟ್ಟಿ ಸೇರಿದಂತೆ ಬಂಧುಗಳು ಸಾಥ್ ನೀಡಿದ್ದರು.

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

  • ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿಗೆ ಹೃದಯಾಘಾತ!

    ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿಗೆ ಹೃದಯಾಘಾತ!

    ಮಂಗಳೂರು: ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

    50 ವರ್ಷದ ವಾರಿಜಾ ಮೃತ ದುರ್ದೈವಿ. ಇವರು ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪರ ಪತ್ನಿ.

    ಇಂದು ವಾರಿಜಾ ಅವರ ಮಗಳ ಮದುವೆ ಉಪ್ಪಿನಂಗಡಿಯ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿತ್ತು. ಮಗಳ ಕೊರಳಿಗೆ ತಾಳಿ ಬೀಳುತ್ತಿದ್ದಂತೆಯೇ ವಾರಿಜಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಷ್ಟರಲ್ಲೇ ವಾರಿಜ ಮೃತಪಟ್ಟಿದ್ದಾರೆ.

    ವಾರಿಜಾ- ತನಿಯಪ್ಪ ದಂಪತಿಗೆ ಒಬ್ಬಳೇ ಮಗಳು ನವ್ಯ. ಈಕೆಗೆ ಮೊಗ್ರು ಗ್ರಾಮದ ಕಂಚಿನಡ್ಕ ನಿವಾಸಿ ಆನಂದ ಎಂಬವರ ಜೊತೆ  ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಇಂದು ನವ್ಯಳ ವಿವಾಹದಲ್ಲಿ ತಾಯಿ ವಾರಿಜಾ ಸಂತೋಷದಿಂದಲೇ ಓಡಾಡುತ್ತಿದ್ದರು. ಅತಿಯಾದ ಸಂತೋಷ ಹಾಗೂ ಭಾವದ್ವೇಗದಿಂದಲೇ ವಾರಿಜಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ.

    ವಧುವಿನ ತಾಯಿಯ ಮರಣದಿಂದಾಗಿ ಇದೀಗ ಮದುವೆ ಮನೆಯಲ್ಲಿ ಸೂತಕದ ಛಾಯೆ ನಿರ್ಮಾಣವಾಗಿದೆ.

  • ಸೌದಿಯಲ್ಲಿ ಟಯರ್ ಸ್ಫೋಟಗೊಂಡು ರಸ್ತೆಯಿಂದ ಎಸೆಯಲ್ಪಟ್ಟ ಕಾರು- ಪುತ್ತೂರು ಮೂಲದ ಮೂವರ ದುರ್ಮರಣ

    ಸೌದಿಯಲ್ಲಿ ಟಯರ್ ಸ್ಫೋಟಗೊಂಡು ರಸ್ತೆಯಿಂದ ಎಸೆಯಲ್ಪಟ್ಟ ಕಾರು- ಪುತ್ತೂರು ಮೂಲದ ಮೂವರ ದುರ್ಮರಣ

    ಮಂಗಳೂರು: ಸೌದಿ ಅರೇಬಿಯಾದ ತಬೂಕ್ ಸಮೀಪ ಹಕಲ್ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಲ್ಮರ ಮೂಲದ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ.

    ಈ ಹಿಂದೆ ಪುತ್ತೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ ಸಾಲ್ಮರದ ಅಬ್ದುಲ್ ರಹಿಮಾನ್ ಎಂಬವರ ಪುತ್ರ ವಝೀರ್ ಅಹ್ಮದ್(31) ಮತ್ತು ಅವರ ಸಹೋದರಿ ಕಮರುನ್ನೀಶ(35) ಮತ್ತು ವಝೀರ್ ಅಹ್ಮದ್ ಅವರು 8 ತಿಂಗಳ ಮಗು ನಿಹಾನ್ ದಾರುಣವಾಗಿ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಅವರ ಬಾವ ಜಬ್ಬಾರ್(42) ಗಂಭೀರವಾಗಿ ಗಾಯಗೊಂಡಿದ್ದಾರೆ.

    ವಝೀರ್ ಅವರು ಚಲಾಯಿಸುತ್ತಿದ್ದ ಟೊಯೋಟಾ ಫಾರ್ಚೂನರ್ ಕಾರಿನ ಟಯರ್ ಸ್ಪೋಟಗೊಂಡು ಕಾರು ರಸ್ತೆಯಿಂದ ಹೊರಕ್ಕೆಸೆಯಲ್ಪಟ್ಟು ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಅವರ ಪತ್ನಿ ಮತ್ತು ಸಂಬಂಧಿ ಶರೀಫ್ ನೀರ್ಕಜೆ ಮತ್ತು ಜಬ್ಬಾರ್ ಅವರ ಮೂರು ಮಕ್ಕಳು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

    ವಝೀರ್ ಅವರು ಜುಬೈಲ್ನ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ವೃತ್ತಿಯನ್ನು ಮಾಡುತ್ತಿದ್ದರು. ಅವರು ಕುಟುಂಬ ಸಮೇತ ಉಮ್ರಾ ಮತ್ತು ಮದೀನಾ ಯಾತ್ರೆ ಮುಗಿಸಿ ತಬೂಕ್ನ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಲು ತೆರಳುತ್ತಿದ್ದರು.

  • ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

    ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

    ಮಂಗಳೂರು: ಮಾಜಿ ಸಚಿವ, ಶಾಸಕರೊಬ್ಬರ ಇನ್ನೋವಾ ಕಾರು ಹಾಗೂ ಓಮ್ನಿ ನಡುವೆ ಇಂದು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೈಪಾಸ್ ಬಳಿಯ ಉರ್ಲಾಂಡಿ ಎಂಬಲ್ಲಿ ಅಫಘಾತ ಸಂಭವಿಸಿದೆ.

    ಅಪಘಾತದಿಂದ ಮಾಜಿ ಸಚಿವ ಹಾಗೂ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಸೇರಿದಂತೆ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮಾಜಿ ಸಚಿವರ ಕಾರು ಚಲಾಯಿಸುತ್ತಿದ್ದ ರವೀಂದ್ರಗೌಡ ಶಾಂತಿಗೋಡು (32) ಎಂಬವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಪರಿಣಾಮ ಮಾಜಿ ಸಚಿವರ ಕಾರು ನಜ್ಜುಗುಜ್ಜಾಗಿದೆ.

    ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.