Tag: puttur

  • ದಕ್ಷಿಣ ಕನ್ನಡದಲ್ಲಿ ದಾಖಲೆ ಬರೆದ ಸುಳ್ಯದ ಎಸ್ ಅಂಗಾರ

    ದಕ್ಷಿಣ ಕನ್ನಡದಲ್ಲಿ ದಾಖಲೆ ಬರೆದ ಸುಳ್ಯದ ಎಸ್ ಅಂಗಾರ

    ಮಂಗಳೂರು: ಸೋಲಿಲ್ಲದ ಸರದಾರ, ಸುಳ್ಯದ ಬಂಗಾರ ಎಂದೇ ಪ್ರಸಿದ್ಧಿ ಪಡೆದಿರುವವರು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sulya) ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಅಂಗಾರ. ಸತತ 6 ಬಾರಿ ವಿಧಾನಸಭೆ ಪ್ರವೇಶಿಸಿದ ದ.ಕ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ (BJP MLA) ಎಂಬ ಹೆಗ್ಗಳಿಕೆ ಪಡೆದುಕೊಂಡಿರುವವರು ಕೂಡ ಇವರೇ. ಈ ಸಲ ಹಿರಿತನದ ನೆಲೆಯಲ್ಲಿ, ಪಕ್ಷ ನಿಷ್ಠ ಮತ್ತು ಆರ್‌ಎಸ್‌ಎಸ್ ಹಿನ್ನೆಲೆ ಇರುವ ನಿಟ್ಟಿನಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಈ ಮೂಲಕ ಸುಳ್ಯ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಸಚಿವ ಪಟ್ಟ ಅಲಂಕರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಹೇಳಿ ಕೇಳಿ ಸುಳ್ಯ ಬಿಜೆಪಿಯ ಭದ್ರಕೋಟೆ. ಬಹುಜನ ಸಮಾಜವೇ ಹೆಚ್ಚಿರುವ ಸುಳ್ಯ ಮೊದಲ ವಿಧಾನಸಭಾ ಚುನಾವಣೆಯಿಂದಲೂ ರಾಜ್ಯದ ಏಕೈಕ ದಲಿತ ಮೀಸಲು ಕ್ಷೇತ್ರ. ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಲವು ಬಾರಿಯಾದರೂ ಸುಳ್ಯದ ಮೀಸಲಾತಿ ಮಾತ್ರ ಬದಲಾಗಿಲ್ಲ. 1972ರಿಂದ ಇಲ್ಲಿ ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಅವಕಾಶ ಇದೆ. 1994ರಿಂದ ಸುಳ್ಯ ಕ್ಷೇತ್ರವನ್ನು ಆಳುತ್ತಿರುವ ಬಿಜೆಪಿ ಪಕ್ಷಕ್ಕೆ ಎಸ್ ಅಂಗಾರ (S Angara) ಒಬ್ಬರೇ ನಾಯಕ. 1994, 1999, 2004, 2008, 2013, 2018 ಹೀಗೆ ಸತತ 6 ಚುನಾವಣೆಗಳಲ್ಲಿ ಬಿಜೆಪಿಯ ಸಚಿವ ಅಂಗಾರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಾಗ ಗೆದ್ದ ಏಕೈಕ ವ್ಯಕ್ತಿ ಎಂದರೆ ಅದು ಅಂಗಾರ. ಜಿಲ್ಲೆಯಲ್ಲಿ ಬಿಜೆಪಿಯ ಮಾನ ಉಳಿಸಿದ್ದು ಕೂಡ ಇವರೇ. ಅದಕ್ಕೆ ಅಂಗಾರ ಯಾವತ್ತೂ ಸುಳ್ಯದ ಬಂಗಾರ ಎಂಬ ಮಾತಿದೆ.

    ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ಚನಿಯ ಮತ್ತು ಹುಕ್ರು ಅವರ ಮಗನಾಗಿ ಜುಲೈ 1, 1964 ರಲ್ಲಿ ಜನಿಸಿದ ಅಂಗಾರ ಅವರು ಕಡುಬಡತನದಲ್ಲಿ ಬಾಲ್ಯವನ್ನು ಕಳೆದರು. ಹೀಗಾಗಿ ಪ್ರೌಢಶಾಲೆಯವರೆಗೆ ಶಿಕ್ಷಣ ಪಡೆಯಲಷ್ಟೇ ಸಾಧ್ಯವಾಯ್ತು. ಶಾಲಾ ದಿನಗಳಲ್ಲೇ ನಾಯಕತ್ವದ ಗುಣ ಹೊಂದಿದ್ದ ಅಂಗಾರ ಅವರು ಓದಿನ ಜತೆಗೆ ಕೂಲಿ ಕೆಲಸವನ್ನು ಕೂಡ ಮಾಡುತ್ತಿದ್ದರು. ಅದರ ಜತೆಗೆ ಹೋರಾಟದ ಮನೋಭಾವ, ಪ್ರಾಮಾಣಿಕತೆ ಕೂಡ ಅವರಲ್ಲಿ ಇತ್ತು.

    ಬಡತನ, ಕೂಲಿ ಕೆಲಸ ವಿದ್ಯಾಭ್ಯಾಸದ ನಡುವೆ ಅಂಗಾರರಿಗೆ ಸಮಾಜ ಸೇವೆ ಮಾಡುವ ತುಡಿತ ಇತ್ತು. ಆ ತುಡಿತವೇ ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಲು ಪ್ರೇರಣೆಯಾಯ್ತು. ಇವರಲ್ಲಿದ್ದ ಕ್ರಿಯಾಶೀಲತೆಯನ್ನು ಗುರುತಿಸಿ ತಳೂರು ಚಂದ್ರಶೇಖರ ಸೂಕ್ತ ಪ್ರೋತ್ಸಾಹ ನೀಡಿದರು. ಸಂಘದ ಎಲ್ಲಾ ಶಿಸ್ತು,ಸಂಯಮವನ್ನು ಅಳವಡಿಸಿಕೊಂಡ ಅಂಗಾರ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಹೆಚ್ಚು ಒತ್ತು ನೀಡಿದವರು ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ. ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಅಂಗಾರ ಅವರು 1979ರಲ್ಲಿ ಬಿಜೆಪಿ ಕಾರ್ಯಕರ್ತರಾಗಿ ನಿಯೋಜನೆಯಾದರು. ಬಳಿಕ ತಾಲೂಕು ಕಾರ್ಯದರ್ಶಿಯಾಗಿ, ಜಿಲ್ಲಾ ಮತ್ತು ರಾಜ್ಯ ಸಮಿತಿಯ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದರು. ಅಂಗಾರ ಬಿಜೆಪಿಯಲ್ಲಿ ಸಕ್ರೀಯ ಸದಸ್ಯರಾಗಿ, ನಿಷ್ಠಾವಂತರಾಗಿ ಇರುವುದನ್ನು ಗುರುತಿಸಿದ ಹಿರಿಯರು 1989ರಲ್ಲಿ ಚುನಾವಣಾ ಕಣಕ್ಕಿಳಿಸಿದರು. ಪ್ರಪ್ರಥಮ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ ಅಂಗಾರ ಕಾಂಗ್ರೆಸ್ ಅಭ್ಯರ್ಥಿ ಕೆ ಕುಶಲ ಅವರ ಎದುರು ಅಲ್ಪ ಮತಗಳಿಂದ ಸೋಲು ಕಂಡರು.

    1989ರ ಚುನಾವಣೆಯ ಸೋಲನ್ನೇ ಸೋಪಾನ ಎಂದೆನಿಸಿಕೊಂಡ ಅಂಗಾರ ಮತ್ತೆ 1994ರ ವಿಧಾನಸಭೆ ಚುನಾವಣೆಯಲ್ಲಿ ಅದೇ ಕಾಂಗ್ರೆಸ್ ಅಭ್ಯರ್ಥಿ ಕುಶಲ ಅವರ ಎದುರು ಸ್ಪರ್ಧಿಸಿ ಗೆಲುವು ಕಂಡರು. ಈ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಅಂದಿನಿಂದ ಇಂದಿನವರೆಗೆ ಗೆಲ್ಲುತ್ತಲೇ ಬಂದಿರುವ ಅಂಗಾರ ಸೋಲಿಲ್ಲದ ಸರದಾರ ಮಾತ್ರವಲ್ಲ ಸುಳ್ಯದ ಬಂಗಾರ ಎನಿಸಿಕೊಂಡರು.

    ರಾಜಕೀಯ ಜೀವನ, ಸಮಾಜ ಸೇವೆಯ ನಡುವೆಯೇ 1997 ರ ಜೂನ್ 11 ರಂದು ಉಡುಪಿಯ ಕೋಟೆ ಗ್ರಾಮದ ವೇದಾವತಿ ಎಂಬವರನ್ನು ವರಿಸಿದರು. ದಂಪತಿಗೆ ಪೂಜಾಶ್ರಿ ಮತ್ತು ಗೌತಮ್ ಎಂಬ ಮಕ್ಕಳಿದ್ದಾರೆ. ಸಿಗುವ ಸ್ವಲ್ಪ ಸಮಯವನ್ನು ಕುಟುಂಬದ ಜತೆ ಕಳೆಯುತ್ತಾರೆ.

    ಉನ್ನತ ಸ್ಥಾನದಲ್ಲಿ ಇದ್ದರೂ ಇಂದಿಗೂ ಮನೆಯ ಕೃಷಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾನ್ಯ ರೈತನಂತೆ ಬದುಕುತ್ತಿರುವ ಅಂಗಾರರದ್ದು ಸರಳ ಜೀವನ, ವಿಧಾನಸೌಧಕ್ಕೆ ಕೆಲವೊಮ್ಮೆ ಬಸ್‌ನಲ್ಲೇ ಹೋಗಿ ಬರುತ್ತಾರೆ. ಶಾಸಕರ ಭವನದಲ್ಲಿ ತಾವೇ ಅಡುಗೆ ಮಾಡಿ ಊಟ ಮಾಡುತ್ತಾರೆ. ಇದು ಅವರ ಸಜ್ಜನಿಕೆ ಮತ್ತು ಸರಳತೆ. ಇದನ್ನೂ ಓದಿ: ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ

    ಅಂಗಾರದ್ದು ಮಾತು ಕಡಿಮೆ ಕೆಲಸ ಜಾಸ್ತಿ. ಸುಳ್ಯ ವಿಧಾನಸಭಾ ಕ್ಷೇತ್ರವು ಬಹುತೇಕ ಕಾಡು, ನದಿ ಬೆಟ್ಟಗಳಿಂದ ಕೂಡಿದ ಹಳ್ಳಿಗಾಡು ಪ್ರದೇಶ. ತೀರಾ ಹಿಂದುಳಿದಿದ್ದ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ಸುಲಭದ ಮಾತಾಗಿರಲಿಲ್ಲ. ಅಂಗಾರ ಶಾಸಕರಾದ ಬಳಿಕ ಸುಳ್ಯವು ಬಹಳಷ್ಟು ಅಭಿವೃದ್ಧಿ ಕಂಡಿದೆ. ಪ್ರಾರಂಭದಲ್ಲಿ ಅಭಿವೃದ್ಧಿ ಮಂದಗತಿಯಲ್ಲಿ ಇದ್ದರೂ ಬಳಿಕ ಶಿಕ್ಷಣ, ಸಾಂಸ್ಕೃತಿಕ ಮಾತ್ರವಲ್ಲ ವ್ಯಾಪಾರ, ವಾಣಿಜ್ಯ, ರಸ್ತೆಗಳು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿದೆ.

    ಸತತ 6 ಬಾರಿ ವಿಧಾನಸಭೆ ಪ್ರವೇಶಿಸಿದ ದ.ಕ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಎನಿಸಿಕೊಂಡಿರುವ ಅಂಗಾರ ಅವರು ಈ ಹಿಂದೆ 2006ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಇದ್ದಾಗ 2008ರಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ ಆದರೆ ಸಂಭಾವ್ಯರ ಪಟ್ಟಿಯಲ್ಲಿ ಇವರ ಹೆಸರಿತ್ತು. 2011ರಲ್ಲಿ ಡಿವಿ ಸದಾನಂದ ಗೌಡ ರಾಜ್ಯದ ಮುಖ್ಯಮಂತ್ರಿಯಾದಾಗ ಅಂಗಾರ ಅವರಿಗೆ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತೆ ಎಂದು ಸುಳ್ಯದ ಜನ ಭಾವಿಸಿದ್ದರು. ಏಕೆಂದರೆ ಡಿವಿ ಸದಾನಂದ ಗೌಡ ಅವರು ಸುಳ್ಯದವರು. ಎರಡು ಬಾರಿ ವಿಧಾಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂಗಾರ ಅವರಿಗೆ ಮತ ಹಾಕಿದವರು. ಇದನ್ನೂ ಓದಿ: ಆಮ್ ಆದ್ಮಿ ಪಕ್ಷದಿಂದ ಯುವ ನಿರ್ದೇಶಕ, ನಟನಿಗೆ ಟಿಕೆಟ್ ಘೋಷಣೆ

    1957ರಲ್ಲಿ ವಿಧಾನಸಭೆ ಚುನಾವಣೆ ಶುರುವಾದಾಗ ಸುಳ್ಯ ವಿಧಾನಸಭೆ ಕ್ಷೇತ್ರ ಎಂದು ಪ್ರತ್ಯೇಕ ಕ್ಷೇತ್ರ ಇರಲಿಲ್ಲ. ಆಗ ಪುತ್ತೂರು ವಿಧಾನಸಭೆ ಕ್ಷೇತ್ರದೊಂದಿಗೆ ದ್ವಿಸದಸ್ಯ ಕ್ಷೇತ್ರವಾಗಿ ಸುಳ್ಯ ಇತ್ತು. 1962ರಲ್ಲಿ ಪುತ್ತೂರು ವಿಧಾನಸಭೆ ಕ್ಷೇತ್ರದ ದ್ವಿಸದಸ್ಯತ್ವ ರದ್ದಾದಾಗ ಸುಳ್ಯ ವಿಧಾನಸಭೆ ಕ್ಷೇತ್ರವನ್ನು ಹುಟ್ಟುಹಾಕಲಾಯ್ತು, ಮಾತ್ರವಲ್ಲ ಸುಳ್ಯವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವನ್ನಾಗಿ ಚುನಾವಣೆ ಆಯೋಗ ಘೋಷಣೆ ಮಾಡಿತ್ತು. ಅಂದಿನಿಂದ ಇಂದಿನವರೆಗೂ ಸುಳ್ಯ ಮೀಸಲು ಕ್ಷೇತ್ರವಾಗಿಯೇ ಉಳಿದಿದೆ.

  • ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಎಸ್‌ಡಿಪಿಐ ಟಿಕೆಟ್ – ಜೈಲಿನಿಂದಲೇ ಸ್ಪರ್ಧೆ

    ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಎಸ್‌ಡಿಪಿಐ ಟಿಕೆಟ್ – ಜೈಲಿನಿಂದಲೇ ಸ್ಪರ್ಧೆ

    ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಶಾಫಿ ಬೆಳ್ಳಾರೆಗೆ (Shafi Bellare) ಎಸ್‌ಡಿಪಿಐ (SDPI) ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದೆ.

    ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಶಾಫಿ ಬೆಳ್ಳಾರೆಯನ್ನು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಪುತ್ತೂರಿನಲ್ಲಿ ನಡೆದ ಎಸ್‌ಡಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಈ ಘೋಷಣೆಯನ್ನು ಮಾಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಅಬ್ದುಲ್ ಮಜೀದ್, ಶಾಫಿ ಬೆಳ್ಳಾರೆಗೆ ಟಿಕೆಟ್ ಕೊಡಿ ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಶಾಫಿ ಹೆಸರನ್ನು ಸೇರಿಸಲಾಗಿದೆ. ಶಾಫಿ ರಾಜಕೀಯವಾಗಿ ಬೆಳೆಯುತ್ತಾರೆ ಎಂಬ ಕಾರಣಕ್ಕೆ ಅವರ ಮೇಲೆ ಕೊಲೆ ಆರೋಪ ಮಾಡಲಾಗಿದೆ. ಶಾಫಿ ಬಂಧನದ ಹಿಂದೆ ರಾಜಕೀಯ ದುರುದ್ದೇಶವಿದೆ. ಈ ಪ್ರಕರಣದಲ್ಲಿ ಶಾಫಿ ಕೇವಲ ಆರೋಪಿ, ಅವರ ಪರವಾಗಿ ನಿಲ್ಲುವ ಸಲುವಾಗಿ ಟಿಕೆಟ್ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂಡಿಗೆರೆ ಬಿಜೆಪಿ ಶಾಸಕ ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಶಾಫಿ ಆರೋಪಿಯಾಗಿದ್ದು ಎನ್‌ಐಎ ಬಂಧನದಲ್ಲಿದ್ದಾನೆ. ಎನ್‌ಐಎ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ಶಾಫಿಯನ್ನು ಬಂಧಿಸಿತ್ತು. ಇದೀಗ ಶಾಫಿ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾನೆ. ಇದನ್ನೂ ಓದಿ: LTTE ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತ: ಇಂದಿರಾ ಆಪ್ತ, ತಮಿಳು ನಾಯಕ ಸ್ಫೋಟಕ ಹೇಳಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪುತ್ತೂರು ಕಂಬಳದಲ್ಲಿ ಕಿರಿಕ್ – ಸಮಸ್ಯೆ ಪರಿಹಾರಕ್ಕೆ ದೇವರ ಮೊರೆಹೋದ ಕಂಬಳ ಸಮಿತಿ

    ಪುತ್ತೂರು ಕಂಬಳದಲ್ಲಿ ಕಿರಿಕ್ – ಸಮಸ್ಯೆ ಪರಿಹಾರಕ್ಕೆ ದೇವರ ಮೊರೆಹೋದ ಕಂಬಳ ಸಮಿತಿ

    ಮಂಗಳೂರು: ಪುತ್ತೂರಿನಲ್ಲಿ (Puttur) ನಡೆದ ಕಂಬಳದ ವೇಳೆ ಬಿಗ್‌ಬಾಸ್ (Bigg Boss Kannada) ಖ್ಯಾತಿಯ ಸಾನ್ಯ ಅಯ್ಯರ್ ಅವರೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದ ಘಟನೆ ಬೆಳಕಿಗೆ ಬಂದಿದ್ದು, ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಪುತ್ತೂರು ಕೋಟಿ-ಚೆನ್ನಯ ಜೋಡುಕೆರೆ ಕಂಬಳ (Kambala) ಸಮಿತಿ ದೇವರ ಮೊರೆ ಹೋಗಿದೆ. ಅಪಸ್ವರ ಮಾಡಿದವರಿಗೆ ದೇವರೇ ತಕ್ಕ ಬುದ್ಧಿ ಕಲಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದೆ.

    ಪುತ್ತೂರು ಕಂಬಳದಲ್ಲಿ ಬಿಗ್‌ಬಾಸ್ ಖ್ಯಾತಿಯ ಸಾನ್ಯ ಅಯ್ಯರ್ (Sanya Iyer) ಕಿರಿಕ್ ವಿಚಾರವಾಗಿ ಪರಿಹಾರ ಕಂಡುಕೊಳ್ಳಲು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕದಶರುದ್ರ ಸೇವೆ ಮಾಡಿಸಿ ಪ್ರಾರ್ಥನೆ ಸಲ್ಲಿಸಿದೆ. ಇದನ್ನೂ ಓದಿ: ನಾನು ರುದ್ರಾಕ್ಷಿ ಧರಿಸಿದ್ದೇನೆ, ಮದ್ಯಪಾನ ಮಾಡಲ್ಲ : ನಟಿ ಸಾನ್ಯಾ ಅಯ್ಯರ್

    ಈ ವೇಳೆ ಕಂಬಳದಲ್ಲಿ ನಡೆದ ಘಟನೆಗೂ ಕಂಬಳ (Kambala) ಸಮಿತಿಗೂ ಸಂಬಂಧವಿಲ್ಲ. ಅತಿಥಿಯಾಗಿ ಬಂದವರನ್ನ ಊಟ ಮಾಡಿಸಿ, ಸುರಕ್ಷಿತವಾಗಿ ಕಳುಹಿಸಿ, ಬಿಟ್ಟು ಬಂದಿದ್ದೇವೆ. ಆ ಬಳಿಕ ಏನಾಗಿದೆ ಅನ್ನೋದು ಮರುದಿನ ನಮಗೆ ತಿಳಿದುಬಂದಿದೆ. ಪುತ್ತೂರಿನ ದೇವರಮಾರು ಗದ್ದೆಯಲ್ಲಿ ಜಗಳ ಅಥವಾ ಅಸಭ್ಯವಾಗಿ ವರ್ತಿಸಿದರೆ ಅವರಿಗೆ ಕ್ಷೇಮವಿಲ್ಲ. ಮಹಾಲಿಂಗೇಶ್ವರ ದೇವರ ಕಾರಣಿಕ ಎಲ್ಲಾ ಜನರಿಗೂ ಗೊತ್ತಿದೆ. ಈ ಘಟನೆಗೆ ಕಂಬಳ ಸಮಿತಿಯನ್ನು ಹೊಣೆ ಮಾಡಿದವರಿಗೆ ದೇವರೇ ಬುದ್ದಿ ಕಲಿಸಲಿ ಎಂದು ಮಹಾಲಿಂಗೇಶ್ವರ ದೇವರ ಮುಂದೆ ಕಂಬಳ ಸಮಿತಿ ಪ್ರಾರ್ಥನೆ ಸಲ್ಲಿಸಿದೆ.

    ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ಅನೇಕರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಅವನು ನನಗೆ ಹೊಡೆಯಲಿಲ್ಲ, ನಾನು ಅವನಿಗೆ ಹೊಡೆಯಲಿಲ್ಲ : ನಟಿ ಸಾನ್ಯಾ ಅಯ್ಯರ್

    ಏನಿದು ಘಟನೆ?
    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ದೇವಮಾರು ಗದ್ದೆಯಲ್ಲಿ ಇತ್ತೀಚೆಗೆ ಕಂಬಳ ನಡೆದಿತ್ತು. ಈ ವೇಳೆ ಕಂಬಳಕ್ಕೆ ಅತಿಥಿಯಾಗಿ ಬಂದಿದ್ದರು. ಮಧ್ಯರಾತ್ರಿ ಮತ್ತೆ ಸಾನ್ಯ ಸ್ನೇಹಿತರೊಡನೆ ಕಂಬಳಕ್ಕೆ ಆಗಮಿಸಿದ್ದರು. ಈ ವೇಳೆ ಯುವಕನೊಬ್ಬ ಕೈಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಸಾನ್ಯ ಹಾಗೂ ಅವರ ಸ್ನೇಹಿತೆಯರು ಪ್ರಶ್ನೆ ಮಾಡಿದ್ದರು. ಬಳಿಕ ಕಂಬಳ ಆಯೋಜಕರನ್ನು ತರಾಟೆ ತೆಗೆದುಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರಿಗೆ ಡಿಕ್ಕಿ ಹೊಡೆದ ನಾಯಿ ಕ್ಷಣ ಮಾತ್ರದಲ್ಲಿ ಮಾಯ – 70 ಕಿ.ಮೀ ಸಾಗಿ ಮನೆ ತಲುಪಿದಾಗ ಪ್ರತ್ಯಕ್ಷ!

    ಕಾರಿಗೆ ಡಿಕ್ಕಿ ಹೊಡೆದ ನಾಯಿ ಕ್ಷಣ ಮಾತ್ರದಲ್ಲಿ ಮಾಯ – 70 ಕಿ.ಮೀ ಸಾಗಿ ಮನೆ ತಲುಪಿದಾಗ ಪ್ರತ್ಯಕ್ಷ!

    ಮಂಗಳೂರು: ಕಾರಿಗೆ (Car) ಡಿಕ್ಕಿಯಾದ ನಾಯಿ (Dog) ಕಾರಿನ ಬಂಪರಿನೊಳಗೆ ಸುಮಾರು 70 ಕಿಲೋಮೀಟರ್ ಸಾಗಿ ಕಾರ್ ನಿಲ್ಲಿಸಿದ ಬಳಿಕ ಪ್ರತ್ಯಕ್ಷವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur) ನಡೆದಿದೆ.

    ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ (Kukke Subramanya Temple)  ಭೇಟಿ ನೀಡಿ ಪುತ್ತೂರಿಗೆ ವಾಪಾಸಾಗುತ್ತಿದ್ದ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿದ್ದು, ಕಾರಿನ ಸುತ್ತಮುತ್ತ ನಾಯಿಗಾಗಿ ಹುಡುಕಾಡಿದ್ದಾರೆ. ಆದರೆ ನಾಯಿ ಅಲ್ಲಿಂದ ಎಲ್ಲಿ ಹೋಗಿದೆ ಎನ್ನುವುದನ್ನು ಊಹಿಸಲೂ ಸುಬ್ರಹ್ಮಣ್ಯ ಅವರಿಗೆ ಕಷ್ಟವಾಗಿತ್ತು. ಇದನ್ನೂ ಓದಿ: NIAಗೆ ತಾಲಿಬಾನ್ ಹೆಸರಲ್ಲಿ ಭಯೋತ್ಪಾದನಾ ದಾಳಿ ಸಂದೇಶ – ದೇಶಾದ್ಯಂತ ಹೈಅಲರ್ಟ್ ಘೋಷಣೆ

    ಅಲ್ಲಿಂದ ನೇರವಾಗಿ ಕಬಕದ ತನ್ನ ಮನೆಗೆ ಬಂದು ಕಾರನ್ನು ಪರಿಶೀಲಿಸಿದಾಗ ಬಂಪರ್‌ನ ಗ್ರಿಲ್ ತುಂಡಾಗಿರುವುದು ಗಮನಕ್ಕೆ ಬಂದಿತ್ತು. ಇದನ್ನು ಗಮನಿಸಿದಾಗ ತುಂಡಾದ ಗ್ರಿಲ್ ಮಧ್ಯೆ 70 ಕಿ.ಮೀ ಹಿಂದೆ ಕಾರ್‌ಗೆ ಡಿಕ್ಕಿಯಾದ ನಾಯಿ ಪ್ರತ್ಯಕ್ಷವಾಗಿದೆ. ನಾಯಿಯನ್ನು ಬಂಪರ್ ಒಳಗಿಂದ ತೆಗೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಪಕ್ಕದ ಗ್ಯಾರೇಜ್‍ಗೆ ತೆರಳಿ ನಾಯಿಯನ್ನು ಹೊರ ತೆಗೆಯಲು ವಿನಂತಿಸಿದ್ದಾರೆ. ಗ್ಯಾರೇಜ್ ಸಿಬ್ಬಂದಿ ಬಂಪರ್ ಬಿಚ್ಚಿ ನಾಯಿಯನ್ನು ಸುರಕ್ಷಿತವಾಗಿ ಕಾರಿಂದ ಹೊರ ತೆಗೆದಿದ್ದಾರೆ. ಸುಮಾರು 70 ಕಿ.ಮೀ ವರೆಗೆ ಕಾರಿನ ಬಂಪರ್ ಒಳಗೇ ಇದ್ದ ನಾಯಿ ಆರಾಮವಾಗಿ ಹೊರಗೆ ಬಂದು ಇಳಿದು ಹೋಗಿದೆ. ಇದನ್ನೂ ಓದಿ: ಕೆಲಸ ಕೊಡಿಸುವ ಆಸೆ ತೋರಿಸಿ ಸೆಕ್ಸ್- ಟೆಕ್ಕಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನ್ಯಾ ಅಯ್ಯರ್ ವಿವಾದ : ಕಂಬಳ ಸಮಿತಿಯಿಂದ ದೇವರ ಬಳಿ ದೂರು

    ಸಾನ್ಯಾ ಅಯ್ಯರ್ ವಿವಾದ : ಕಂಬಳ ಸಮಿತಿಯಿಂದ ದೇವರ ಬಳಿ ದೂರು

    ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾನ್ಯಾ (Sanya Iyer) ಇತ್ತೀಚೆಗಷ್ಟೇ ಪುತ್ತೂರಿನಲ್ಲಿ (Puttur) ನಡೆದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳಕ್ಕೆ (Kambala) ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ತಮಗೆ ತೊಂದರೆ ನೀಡಿದ ಎನ್ನುವ ಕಾರಣಕ್ಕಾಗಿ ಆಯೋಜಕರ ಮೇಲೆ ಗರಂ ಆಗಿದ್ದರು. ಸಾನ್ಯಾ ಮತ್ತು ಸ್ನೇಹಿತರು ಆಯೋಜಕರನ್ನು ತರಾಟೆಗೆ ತಗೆದುಕೊಂಡ ವಿಡಿಯೋ ಸಖತ್ ವೈರಲ್ ಕೂಡ ಆಗಿತ್ತು. ಇದೊಂದು ದೊಡ್ಡ ವಿವಾದವಾಗಿಯೇ ಮಾರ್ಪಟ್ಟಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕಂಬಳ ಸಮಿತಿ ದೇವರ ಬಳಿ ದೂರು ನೀಡಿದೆ.

    ಪುತ್ತೂರಿನ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ಸಾನ್ಯಾ ಅತಿಥಿಯಾಗಿ ಬಂದು, ತುಳು ನಾಡಿನ ಬಗ್ಗೆ ಮೆಚ್ಚಿ ಮಾತನಾಡಿದ್ದರು. ಐ ಲವ್ ಯೂ ಪುತ್ತೂರು ಎಂದು ಹೇಳುವ ಮೂಲಕ ಅಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಹೊರಟು ಹೋಗಿದ್ದರು. ಆದರೆ, ಮತ್ತೆ ಅವರು ಕಂಬಳ ನೋಡುವುದಕ್ಕಾಗಿ ಸ್ನೇಹಿತೆಯರ ಜೊತೆ ವಾಪಸ್ಸಾಗಿದ್ದಾರೆ. ಆ ವೇಳೆಯಲ್ಲಿ ಹುಡುಗನೊಬ್ಬ ಸಾನ್ಯಾ ಅಯ್ಯರ್ ಜೊತೆ ಸೆಲ್ಫಿ ತಗೆದುಕೊಳ್ಳುವ ನೆಪದಲ್ಲಿ ಕೈ ಹಿಡಿದು ಎಳೆದ ಎಂದು ಹೇಳಲಾಗುತ್ತಿದೆ. ಈ ವಿಚಾರ ಕಂಬಳ ಸಮಿತಿಯ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ ಕಂಬಳ ಸಮಿತಿ ಗೌರವಾಧ್ಯಕ್ಷೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ (Shakuntala Shetty). ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

     

    ಸುಖಾಸುಮ್ಮನೆ ಕಂಬಳ ಸಮಿತಿಯನ್ನು ಗುರಿ ಮಾಡುತ್ತಿರುವುದು ತಮಗೆ ಬೇಸರ ತಂದಿದೆ ಎನ್ನುವ ಶೆಟ್ಟಿ, ಕಂಬಳ ಸಮಿತಿಯನ್ನು ಕೆಟ್ಟ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಹಾಗಾಗಿ ನಿಂದಿಸಿದವರನ್ನು ನೀನೇ ನೋಡಿಕೋ ದೇವಾ ಎಂದು ಮಹಾಲಿಂಗೇಶ್ವರನ ಬಳಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ. ಯಾರೋ ಅಸಭ್ಯವಾಗಿ ವರ್ತಿಸಿದ್ದಾರೆಂದು ಇನ್ನ್ಯಾರನ್ನೋ ಗುರಿ ಮಾಡುವುದು ತಪ್ಪು. ಈ ಕಾರಣಕ್ಕಾಗಿಯೇ ತಾವು ದೇವರ ಬಳಿ ನ್ಯಾಯ ಕೇಳಲು ಬಂದಿದ್ದೇವೆ ಎಂದಿದ್ದಾರೆ.

    ಈ ವಿಷಯದಲ್ಲಿ ತಾವು ಸಾನ್ಯಾ ಪರವಾಗಿ ನಿಲ್ಲುತ್ತೇವೆ ಎನ್ನುವ ಕಂಬಳ ಸಮಿತಿ, ಆ ನಟಿ ಪೊಲೀಸರಿಗೆ ದೂರು ನೀಡಲಿ. ಆಕೆಗೆ ಬೇಕಿರುವ ಎಲ್ಲಾ ಸಹಾಯವನ್ನು ಸಮಿತಿ ಮಾಡುತ್ತದೆ ಎಂದೂ ಅವರು ಹೇಳಿದ್ದಾರೆ. ಕೆಲವು ಶಕ್ತಿಗಳು ಈ ಪ್ರಕರಣಕ್ಕೆ ಹಿಂದೂ, ಮುಸ್ಲಿಂ ರೂಪವನ್ನು ನೀಡಲಾಗುತ್ತಿರುವುದಕ್ಕೆ ಬೇಸರವನ್ನೂ ಅವರು ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನು ರುದ್ರಾಕ್ಷಿ ಧರಿಸಿದ್ದೇನೆ, ಮದ್ಯಪಾನ ಮಾಡಲ್ಲ : ನಟಿ ಸಾನ್ಯಾ ಅಯ್ಯರ್

    ನಾನು ರುದ್ರಾಕ್ಷಿ ಧರಿಸಿದ್ದೇನೆ, ಮದ್ಯಪಾನ ಮಾಡಲ್ಲ : ನಟಿ ಸಾನ್ಯಾ ಅಯ್ಯರ್

    ಪುತ್ತೂರಿನ (Puttur) ಕಂಬಳದಲ್ಲಿ (Kambala) ನಡೆದ ಘಟನೆಗೆ ಸಂಬಂಧಪಟ್ಟಂತೆ ಕಿರುತೆರೆ ನಟಿ ಸಾನ್ಯಾ ಅಯ್ಯರ್ (Sanya Iyer) ಮೇಲೆ ದಿನಕ್ಕೊಂದು ಆರೋಪ ಕೇಳಿ ಬಂದಿದ್ದವು. ಅದಕ್ಕೆ ಸಂಬಂಧಪಟ್ಟಂತೆ ಸ್ವತಃ ಸಾನ್ಯಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತುರ್ತು ಪತ್ರಿಕಾಗೋಷ್ಠಿ ಕರೆದಿದ್ದ ಅವರು ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದ್ದಾರೆ. ಕಂಬಳದ ವೇದಿಕೆಯಲ್ಲೇ ಅವರ ಮೇಲೆ ಹಲ್ಲೆ ಆಯಿತು ಎನ್ನುವುದರ ಜೊತೆಗೆ ಸಾನ್ಯಾ ಮದ್ಯಪಾನ ಮಾಡಿಕೊಂಡು ಬಂದಿದ್ದರು ಎಂದೂ ಹೇಳಲಾಗಿತ್ತು. ಈ ಕುರಿತು ಅವರು ಮಾತನಾಡಿದ್ದಾರೆ.

    ‘ಕಂಬಳದಲ್ಲಿ ನಾನು ಕುಡಿದುಕೊಂಡು ಬಂದಿದ್ದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಸುಳ್ಳು. ನಾನು ಜೀರೋ ಶುಗರ್ ಡಯೆಟ್ ಮಾಡುತ್ತಿದ್ದೇನೆ. ಮುಂಬೈನಲ್ಲಿ ಶೂಟಿಂಗ್ ಇರುವ ಕಾರಣಕ್ಕಾಗಿ ಇದೆಲ್ಲವನ್ನೂ ಮಾಡುತ್ತಿದ್ದೇನೆ. ಅಂಥದ್ದರಲ್ಲಿ ಮದ್ಯಪಾನ ಹೇಗೆ ಮಾಡಲಿ? ಜೊತೆಗೆ ನಾನು ರುದ್ರಾಕ್ಷಿಯನ್ನು ಧರಿಸಿದ್ದೇನೆ. ಇದನ್ನು ಧರಿಸಿದಾಗ ಮದ್ಯಪಾನ, ಧೂಮಪಾನ ಮಾಡಲ್ಲ. ಸುಮ್ಮನೆ ನನ್ನ ಮೇಲೆ ಆಪಾದನೆ ಹೊರಿಸಲಾಗುತ್ತಿದೆ’ ಎಂದರು ಸಾನ್ಯ. ಇದನ್ನೂ ಓದಿ: ಜೀನ್ಸ್ ಪ್ಯಾಂಟನ್ನೇ ಟಾಪ್ ಮಾಡಿಕೊಂಡ ಉರ್ಫಿ ಜಾವೇದ್ ಕಾಲೆಳೆದ ನೆಟ್ಟಿಗರು

    ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ. ಅವತ್ತು ಕಂಬಳವನ್ನು ಸರಿಯಾಗಿ ನೋಡಲು ಆಗದೇ ಇರುವ ಕಾರಣಕ್ಕಾಗಿ ಮತ್ತೆ ಸ್ನೇಹಿತೆಯರ ಜೊತೆ ಹೋದೆ. ಆಗ ಒಬ್ಬ ಹುಡುಗ ನನ್ನ ಫ್ರೆಂಡ್ಸ್ ಕೈ ಹಿಡಿದು ಎಳೆದ. ಭಯ ಆಯಿತು. ಆನಂತರ ಇದನ್ನು ಆಯೋಜಕರ ಗಮನಕ್ಕೆ ತಂದೆವು. ಆ ಹುಡುಗ ನಂತರ ಎಲ್ಲಿಗೆ ಹೋದ? ಏನಾದ ಎನ್ನುವ ವಿಚಾರ ಗೊತ್ತಿಲ್ಲ. ಆದರೆ, ಸುದ್ದಿ ಆದಂತೆ ಅವನ ಕಪಾಳಕ್ಕೆ ನಾನು ಹೊಡೆಯಲಿಲ್ಲ, ನನಗೂ ಅವನು ಹೊಡೆಯಲಿಲ್ಲ ಎಂದು ಸಾನ್ಯ ಮಾತನಾಡಿದ್ದಾರೆ.

    ತಮ್ಮ ಕಪಾಳಕ್ಕೆ ಆ ಹುಡುಗ ಹೊಡೆದಿದ್ದಾನೆ ಎನ್ನುವ ಸುದ್ದಿ ಹೇಗೆ ಹಬ್ಬಿತೋ ಗೊತ್ತಿಲ್ಲ ಎನ್ನುವ ಸಾನ್ಯಾ, ಅಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲವೆಂದು ಹೇಳಿದ್ದಾರೆ. ಆದರೆ, ಕಳೆದ ಎರಡು ದಿನಗಳಿಂದ ಈ ಘಟನೆಯ ಕುರಿತು ಬೇರೆಯೇ ಸುದ್ದಿ ಹಬ್ಬಿತ್ತು. ಮದ್ಯ ಸೇವಿಸಿದ್ದ ಯುವಕನೊಬ್ಬ ಸಾನ್ಯಾ ಜೊತೆ ಸೆಲ್ಫಿ ತಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ಮಾಡಿದ. ಅವನ ಮೇಲೆ ಸಾನ್ಯಾ ಕೈ ಮಾಡಿದರು. ಅವನೂ ಹೊಡೆದ. ನಂತರ ಅಲ್ಲಿದ್ದವರು ಆ ಹುಡುಗನನ್ನು ಥಳಿಸಿದರು ಎನ್ನುವುದು ವರದಿಯಾಗಿತ್ತು. ಇದೀಗ ಅಂಥದ್ದು ಏನೂ ಆಗಿಲ್ಲ ಎಂದಿದ್ದಾರೆ ಸಾನ್ಯ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅವನು ನನಗೆ ಹೊಡೆಯಲಿಲ್ಲ, ನಾನು ಅವನಿಗೆ ಹೊಡೆಯಲಿಲ್ಲ : ನಟಿ ಸಾನ್ಯಾ ಅಯ್ಯರ್

    ಅವನು ನನಗೆ ಹೊಡೆಯಲಿಲ್ಲ, ನಾನು ಅವನಿಗೆ ಹೊಡೆಯಲಿಲ್ಲ : ನಟಿ ಸಾನ್ಯಾ ಅಯ್ಯರ್

    ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾನ್ಯಾ ಅಯ್ಯರ್ (Sanya Iyer) ಮೇಲೆ ಪುತ್ತೂರಿನಲ್ಲಿ (Puttur) ಹಲ್ಲೆ ಆಗಿದೆ ಎನ್ನುವ ವಿಚಾರ ಕಳೆದ ಎರಡು ದಿನಗಳಿಂದ ಭಾರೀ ಸದ್ದು ಮಾಡಿತ್ತು. ವೇದಿಕೆಯ ಮೇಲೆ ಸಾನ್ಯಾ ಮತ್ತು ಗೆಳೆತಿಯರು ಆಯೋಜಕರ ಜೊತೆ ಗಲಾಟೆ ಮಾಡುವ ವಿಡಿಯೋ ಕೂಡ ವೈರಲ್ ಆಗಿತ್ತು. ಈ ಕುರಿತು ಸಾನ್ಯಾ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಕಪಾಳಮೋಕ್ಷ ಮಾಡುವಂಥದ್ದು ಏನೂ ನಡೆದೇ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

    ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ (Kambala) ನಾನು ಅತಿಥಿಯಾಗಿ ಹೋಗಿದ್ದೆ. ಅವತ್ತು ಕಂಬಳವನ್ನು ಸರಿಯಾಗಿ ನೋಡಲು ಆಗದೇ ಇರುವ ಕಾರಣಕ್ಕಾಗಿ ಮತ್ತೆ ಸ್ನೇಹಿತೆಯರ ಜೊತೆ ಹೋದೆ. ಆಗ ಒಬ್ಬ ಹುಡುಗ ನನ್ನ ಫ್ರೆಂಡ್ಸ್ ಕೈ ಹಿಡಿದು ಎಳೆದ. ಭಯ ಆಯಿತು. ಆನಂತರ ಇದನ್ನು ಆಯೋಜಕರ ಗಮನಕ್ಕೆ ತಂದೆವು. ಆ ಹುಡುಗ ನಂತರ ಎಲ್ಲಿಗೆ ಹೋದ? ಏನಾದ ಎನ್ನುವ ವಿಚಾರ ಗೊತ್ತಿಲ್ಲ. ಆದರೆ, ಸುದ್ದಿ ಆದಂತೆ ಅವನ ಕಪಾಳಕ್ಕೆ ನಾನು ಹೊಡೆಯಲಿಲ್ಲ, ನನಗೂ ಅವನು ಹೊಡೆಯಲಿಲ್ಲ ಎಂದು ಸಾನ್ಯಾ ಮಾತನಾಡಿದ್ದಾರೆ. ಇದನ್ನೂ ಓದಿ:ಥೈಲ್ಯಾಂಡ್‌ನಲ್ಲಿ ನಟಿ ಸೋನು ಜೊತೆ ನೇಹಾ ಗೌಡ ಮೋಜು- ಮಸ್ತಿ

    ತಮ್ಮ ಕಪಾಳಕ್ಕೆ ಆ ಹುಡುಗ ಹೊಡೆದಿದ್ದಾನೆ ಎನ್ನುವ ಸುದ್ದಿ ಹೇಗೆ ಹಬ್ಬಿತೋ ಗೊತ್ತಿಲ್ಲ ಎನ್ನುವ ಸಾನ್ಯಾ, ಅಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲವೆಂದು ಹೇಳಿದ್ದಾರೆ. ಆದರೆ, ಕಳೆದ ಎರಡು ದಿನಗಳಿಂದ ಈ ಘಟನೆಯ ಕುರಿತು ಬೇರೆಯೇ ಸುದ್ದಿ ಹಬ್ಬಿತ್ತು. ಮದ್ಯ ಸೇವಿಸಿದ್ದ ಯುವಕನೊಬ್ಬ ಸಾನ್ಯಾ ಜೊತೆ ಸೆಲ್ಫಿ ತಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ಮಾಡಿದ. ಅವನ ಮೇಲೆ ಸಾನ್ಯಾ ಕೈ ಮಾಡಿದರು. ಅವನೂ ಹೊಡೆದ. ನಂತರ ಅಲ್ಲಿದ್ದವರು ಆ ಹುಡುಗನನ್ನು ಥಳಿಸಿದರು ಎನ್ನುವುದು ವರದಿಯಾಗಿತ್ತು. ಇದೀಗ ಅಂಥದ್ದು ಏನೂ ಆಗಿಲ್ಲ ಎಂದಿದ್ದಾರೆ ಸಾನ್ಯಾ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದು, ಧರ್ಮದೇಟು ತಿಂದ ಅಭಿಮಾನಿ

    ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದು, ಧರ್ಮದೇಟು ತಿಂದ ಅಭಿಮಾನಿ

    ಪುತ್ತೂರಿನ (Puttur) ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆದ 30ನೇ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ (Kambala)ಕೂಟದಲ್ಲಿ ಬಿಗ್ ಬಾಸ್ ಸ್ಪರ್ಧಿ ಸಾನಿಯಾ ಅಯ್ಯರ್ ನ ಕೈ ಹಿಡಿದು ಎಳೆದ ಪ್ರಸಂಗ ನಡೆದಿದೆ. ಶನಿವಾರ ರಾತ್ರಿ ನಡೆದ ಕಂಬಳ ಕೂಟಕ್ಕೆ ಸಾನಿಯಾ (Sanya Iyer) ಅತಿಥಿಯಾಗಿ ಆಗಮಿಸಿದ್ದರು. ಪುತ್ತೂರು ಜನರನ್ನು ಪ್ರೀತಿಯಿಂದಲೇ ‘ಐ ಲವ್ ಯೂ ಪುತ್ತೂರು’ ಎಂದು ಘೋಷಣೆಯೊಂದಿಗೆ ಮಾತುಗಳನ್ನು ಆಡಿದ್ದರು. ಈ ಮಾತುಗಳೇ ಹುಡುಗರನ್ನು ಕೆರಳಿಸಿದ್ದವು.

    ಸಾನಿಯಾ ‘ಐ ಲವ್ ಯೂ ಪುತ್ತೂರು’ ಎಂದು ಭಾಷಣ ಮಾಡುತ್ತಿದ್ದಂತೆಯೇ ಅಲ್ಲಿಯೇ ಕೂತಿದ್ದ ಅಭಿಮಾನಿ ‘ಐ ಲವ್ ಯೂ ಸಾನಿಯಾ’ (I Love You Sanya) ಎಂದು ಪ್ರತಿಯಾಗಿ ಕೂಗಿದ್ದಾನೆ. ಐದಾರು ಬಾರಿ ಈ ರೀತಿ ಆಗಾಗ್ಗೆ ಹೇಳಿದ್ದಾನೆ. ಸಾನಿಯಾ ಭಾಷಣ ಮುಗಿದಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಆ ಅಭಿಮಾನಿಯು ಸೆಲ್ಫಿ ನೆಪದಲ್ಲಿ ಬಂದು ಸಾನಿಯಾರ ಕೈ ಹಿಡಿದಿದ್ದಾನೆ. ಸಾನಿಯಾ ಕೋಪದಿಂದಲೇ ಸೆಲ್ಫಿ ಕೊಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

    ಆ ಹುಡುಗನ ಈ ನಡೆ ಅಲ್ಲಿದ್ದವರಿಗೆ ಕೋಪ ತರಿಸಿದೆ. ಅಲ್ಲದೇ ಆ ಹುಡುಗ ನಶೆಯಲ್ಲಿ ಇದ್ದ ಎಂದು ತಿಳಿಯುತ್ತಿದ್ದಂತೆಯೇ ಅಲ್ಲಿದ್ದವರು ಅವನಿಗೆ ಧರ್ಮದೇಟು ನೀಡಿದ್ದಾರೆ. ಕಂಬಳದಿಂದಲೇ ಅವನನ್ನು ಆಚೆ ಕಳುಹಿಸಿದ್ದಾರೆ. ಧರ್ಮದೇಟು ತಿಂದ ಆ ಹುಡುಗ ಅಳುತ್ತಲೇ ಮನೆಯತ್ತ ಸಾಗಿದ ಎನ್ನುತ್ತಾರೆ ಸ್ಥಳೀಯರು. ಆದರೆ , ಈ ಕುರಿತು ಪೊಲೀಸರಿಗೆ ಯಾರೂ ಮಾಹಿತಿ ನೀಡಿಲ್ಲ ಎನ್ನುತ್ತಾರೆ ಪೊಲೀಸ್ ಮೂಲಗಳು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರಾವಳಿಯಲ್ಲಿ PFI ಟೆರರ್ ಟ್ರೈನಿಂಗ್- ಸ್ಫೋಟಕ ಸತ್ಯ ಬಯಲು

    ಕರಾವಳಿಯಲ್ಲಿ PFI ಟೆರರ್ ಟ್ರೈನಿಂಗ್- ಸ್ಫೋಟಕ ಸತ್ಯ ಬಯಲು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಫ್‍ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಸ್ಫೋಟಕ ವಿಚಾರವೊಂದು ಬಯಲಾಗಿದೆ.

    ಹೌದು. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ವಿವಿಧ ಕಡೆಗಳಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಟೆರರ್ ಆಕ್ಟಿವಿಟೀಸ್ ನಡೆಯುತ್ತಿತ್ತು. ಬಂಟ್ವಾಳ, ಪುತ್ತೂರು, ಸುಳ್ಯದ ಕೆಲ ಅಜ್ಞಾತ ಪ್ರದೇಶಗಳಲ್ಲಿ ಟ್ರೈನಿಂಗ್ ನೀಡಲಾಗುತ್ತಿತ್ತು. ಇದರಲ್ಲಿ ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ (Freedom Community Hall) ಕೂಡ ಒಂದು. ಟ್ರಸ್ಟ್ ಹೆಸರಿನಲ್ಲಿ ಇಲ್ಲಿ ಸಾಕಷ್ಟು ಯುವಕರಿಗೆ ಇಲ್ಲಿ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.  ಇದನ್ನೂ ಓದಿ: ಬ್ಯಾನ್ ಆದ ಪಿಎಫ್‌ಐ ಹೆಸರಲ್ಲಿ ಚಟುವಟಿಕೆ ನಡೆಸಿದ್ರೆ ಕಾನೂನು ಕ್ರಮ: ಆರಗ ಜ್ಞಾನೇಂದ್ರ

    ಟ್ರಸ್ಟ್ ಹೆಸರಿನಲ್ಲಿ ಈ ಹಾಲ್ 2007 ರಲ್ಲಿ ಆರಂಭವಾಗಿದ್ದು, ಅಂದಿನಿಂದ ಈವರೆಗೂ ಸಾವಿರಾರು ಯುವಕರಿಗೆ ಟ್ರೈನಿಂಗ್ ನೀಡಲಾಗುತ್ತಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರು ಕೂಡ ಇಲ್ಲೇ ತರಬೇತಿ ಆಗಿದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ (NIA) ಯಿಂದ ಈ ಹಾಲ್ ಗೆ ದಾಳಿ ಮಾಡಲಾಗಿದೆ. ದಾಳಿ ವೇಳೆ ಓರ್ವ ಟ್ರಸ್ಟಿ ಅಯೂಬ್ ಅಗ್ನಾಡಿಯನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಟ್ರಸ್ಟಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲ್ ನ್ನು ಸೀಜ್ ಮಾಡಲು ಎನ್‍ಐಎ ಸೂಚನೆ ನೀಡಿದೆ ಎನ್ನಲಾಗಿದೆ.

    ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮುಖಂಡ ಶರತ್ ಮಡಿವಾಳ ಹತ್ಯೆಗೂ ಫ್ರೀಡಂ ಕಮ್ಯುನಿಟಿ ಹಾಲ್ ಗೂ ಲಿಂಕ್ ಇದೆ ಎನ್ನಲಾಗುತ್ತಿದೆ. ಶರತ್ ಮಡಿವಾಳ (Sharath Madivvala) ಹಂತಕರು ಕೂಡ ಇಲ್ಲೇ ಟ್ರೈನಿಂಗ್ ಪಡೆದಿದ್ದು, ಇದೇ ಹಾಲ್ ನಲ್ಲಿ ಮೀಟಿಂಗ್ ಮಾಡಿ ಹತ್ಯೆಗೆ ಪ್ಲಾನ್ ಮಾಡಲಾಗಿದೆ ಎನ್ನುವ ಹಳೆಯ ಸತ್ಯ ಎನ್‍ಐಎ ತನಿಖೆಯಲ್ಲಿ ಹೊರಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ಶಿಕ್ಷಣ ನೀತಿ ಮುಂದಿನ ಪೀಳಿಗೆ ಭವಿಷ್ಯವನ್ನು ಉಜ್ವಲಗೊಳಿಸಲಿದೆ: ಗೆಹ್ಲೋಟ್

    ಹೊಸ ಶಿಕ್ಷಣ ನೀತಿ ಮುಂದಿನ ಪೀಳಿಗೆ ಭವಿಷ್ಯವನ್ನು ಉಜ್ವಲಗೊಳಿಸಲಿದೆ: ಗೆಹ್ಲೋಟ್

    ಮಂಗಳೂರು: ನವ ಭಾರತ ನಿರ್ಮಾಣದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಪಾತ್ರ ನಿರ್ಣಾಯಕವಾಗಿರುತ್ತದೆ. ಈ ನೀತಿ ನಮ್ಮ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಭವಿಷ್ಯವನ್ನು ಉಜ್ವಲ ಮತ್ತು ಸುರಕ್ಷಿತವಾಗಿಸುತ್ತದೆ. ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

    ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಂಗಸಂಸ್ಥೆ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸ್ವಾಯತ್ತತೆಯ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಮಾತೃಭಾಷೆಯಲ್ಲಿ ಅಧ್ಯಯನದ ಜೊತೆಗೆ ಆದ್ಯತೆಯ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುವ ಈ ಶಿಕ್ಷಣ ನೀತಿಯ ಗುರಿಯು ಎಲ್ಲರಿಗೂ ಉನ್ನತ ಶಿಕ್ಷಣವನ್ನು ಒದಗಿಸುವುದು. ಭಾರತದ ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸುವಲ್ಲಿ ಮತ್ತು ಈ ಶಿಕ್ಷಣ ನೀತಿಯನ್ನು ಯಶಸ್ವಿಗೊಳಿಸುವಲ್ಲಿ ನೀವು ನಿಮ್ಮ ಪಾತ್ರವನ್ನು ಮಾಡಬೇಕು, ಭಾರತವನ್ನು ಜಾಗತಿಕ ಜ್ಞಾನ-ಶಕ್ತಿಯನ್ನಾಗಿ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಗ್ರೀನ್‌ ಸಿಗ್ನಲ್‌

    ಯುವಕರು ನಮ್ಮ ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದೆ. ಯುವಕರನ್ನು ನುರಿತರನ್ನಾಗಿಸುವ ಮೂಲಕವೇ ನಾವು ವೋಕಲ್ ಫಾರ್ ಲೋಕಲ್ ಎಂಬ ದಿಕ್ಕಿನಲ್ಲಿ ಮುನ್ನಡೆಯಬಹುದು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ‘ಸ್ವಾವಲಂಬಿ ಭಾರತ’ದ ಕನಸನ್ನು ನನಸಾಗಿಸಲು ಒಗ್ಗಟ್ಟಿನಿಂದ ಕೊಡುಗೆ ನೀಡಿ. ಸ್ವಾತಂತ್ರ್ಯವನ್ನು ಅಖಂಡವಾಗಿಡಲು ಮತ್ತು ದೇಶಪ್ರೇಮದ ವಾತಾವರಣವನ್ನು ಬಲಪಡಿಸಲು ಮತ್ತು ಸೃಷ್ಟಿಸಲು ನಾವು ಒಂದು ಸಂಕಲ್ಪವನ್ನು ತೆಗೆದುಕೊಳ್ಳಬೇಕು ಮತ್ತು ಮುಂದೆ ಸಾಗಬೇಕು. ದೇಶದ ಸ್ವಾತಂತ್ರ್ಯ ಗಟ್ಟಿಯಾಗಬೇಕು, ಬಲಿಷ್ಠವಾಗಬೇಕು ಮತ್ತು ದೇಶಪ್ರೇಮದ ವಾತಾವರಣ ನಿರ್ಮಾಣವಾಗಬೇಕು ಎಂಬುದು ನಮ್ಮ ಪ್ರಯತ್ನವಾಗಬೇಕು ಎಂದು ಹೇಳಿದರು.

    ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹಸರಕಾರ್ಯವಾಹ ಮುಕುಂದ್ ಸಿ ಆರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ.ಕೃಷ್ಣಭಟ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ್ ಹೆಚ್.ಜಿ., ಸಂಚಾಲಕ ಮುರಳಿಕೃಷ್ಣ ಕೆ.ಎನ್, ಪ್ರಾಚಾರ್ಯ ವಿಷ್ಣುಗಣಪತಿ ಭಟ್ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]