Tag: puttur

  • ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಮನಸ್ಸೋ ಇಚ್ಛೆ 58 ಬಾರಿ ಇರಿದು ಕೊಂದ್ರು!

    ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಮನಸ್ಸೋ ಇಚ್ಛೆ 58 ಬಾರಿ ಇರಿದು ಕೊಂದ್ರು!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಲ್ಲೇಗ ಟೈಗರ್ಸ್ ಟೀಂನ (Kallega Tigers Team) ಅಕ್ಷಯ್ ಕಲ್ಲೇಗ (Akshay Kallega) ಅವರನ್ನು ದುಷ್ಕರ್ಮಿಗಳು ಮನಸ್ಸೋ ಇಚ್ಛೆ 58 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿರುವುದು ಬಯಲಾಗಿದೆ.

    ಪ್ರಕರಣ ಸಂಬಂಧ ಇದೀಗ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಚೇತನ್, ಮನೀಶ್, ಮಂಜ ಹಾಗೂ ಕೇಶವ ಎಂದು ಗುರುತಿಸಲಾಗಿದೆ. ಗಾಂಜಾ ಮತ್ತಿನಲ್ಲಿ ಅಕ್ಷಯ್ ಮೇಲೆ ಮಚ್ಚು ಬೀಸಿರೋ ಶಂಕೆ ವ್ಯಕ್ತವಾಗುತ್ತಿದೆ. 58 ಬಾರಿ ತಲವಾರಿನಿಂದ ಹಲ್ಲೆ ಮಾಡಿರುವುದು ಮರಣೋತ್ತರ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ. ಅಕ್ಷಯ್ ದೇಹದ ಮೇಲಿನ ಗಾಯ ಕಂಡು ವೈದ್ಯರೇ ಶಾಕ್ ಆಗಿದ್ದಾರೆ. ಹಂತಕರು ಮನಸೋ ಇಚ್ಛೆ ಅಕ್ಷಯ್ ಮೇಲೆ ತಲವಾರು ಬೀಸಿದ್ದಾರೆ.

    ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಪುತ್ತೂರಿನ ನೆಹರುನಗರದ ಅಕ್ಷಯ್ ಮನೆಗೆ ಮೃತದೇಹ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ಇದನ್ನೂ ಓದಿ: ಪುತ್ತೂರು ಜಂಕ್ಷನ್‌ನಲ್ಲಿ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ – ಆರೋಪಿಗಳು ಪೊಲೀಸರಿಗೆ ಶರಣು

    ಪುತ್ತೂರು ಶಾಸಕ ಅಶೋಕ್ ರೈ ಸಹಿತ ಹಲವರು ಅಂತಿಮ ದರ್ಶನ ಪಡೆದರು. ಈ ನಡುವೆ ಅಕ್ಷಯ್ ಸ್ನೇಹಿತರು ದಾರಿ ಮಧ್ಯೆ ಕೂಡ ಶವಯಾತ್ರೆಗೆ ಸಿದ್ದತೆ ನಡೆಸಿದ್ದರು. ಪುತ್ತೂರಿನ ಕಬಕ ವೃತ್ತದಿಂದ ನಗರದ ಶೇವಿರೆಯಲ್ಲಿರುವ ಮನೆವರೆಗೆ ಶವಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಶವಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ. ಹೀಗಾಗಿ ಪೊಲೀಸ್ ಹಾಗೂ ಅಕ್ಷಯ್ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮನವೊಲಿಕೆ ಬಳಿಕ ಯುವಕರ ಗುಂಪು ಚದುರಿದ್ದು, ಮೃತದೇಹವನ್ನು ಆಸ್ಪತ್ರೆಯಿಂದ ನೇರವಾಗಿ ಮನೆಗೆ ರವಾನಿಸಲಾಯಿತು.

    ಹತ್ಯೆ ಯಾಕೆ?: ಪುತ್ತೂರಿನ ನೆಹರು ನಗರದಲ್ಲಿ ನಡೆದ ಅಪಘಾತ ವಿಚಾರದಲ್ಲಿ ಆರೋಪಿಗಳು ಹಾಗೂ ಅಕ್ಷಯ್ ನಡುವೆ ಗಲಾಟೆ ನಡೆದಿತ್ತು. ದೂರುದಾರ ವಿಖ್ಯಾತ್ ಹಾಗೂ ಆರೋಪಿ ಚೇತನ್ ಚಲಾಯಿಸುತ್ತಿದ್ದ ಬಸ್ಸಿನ ನಡುವೆ ಅಪಘಾತ ನಡೆದಿತ್ತು. ಈ ವಿಚಾರದಲ್ಲಿ ಅಕ್ಷಯ್ ಹಾಗೂ ಆರೋಪಿಗಳಾದ ಮನೀಶ್, ಚೇತನ್ ಜೊತೆ ಫೋನ್ ಮೂಲಕ ನಡೆದಿದ್ದ ಮಾತಿನ ಚಕಮಕಿ ನಡೆದಿತ್ತು.

    ಚಕಮಕಿ ಬಳಿಕ ರಾತ್ರಿ ವೇಳೆ ಕಾರಿನಲ್ಲಿ ನೆಹರುನಗರಕ್ಕೆ ನಾಲ್ವರು ಆರೋಪಿಗಳು ಬಂದಿದ್ದರು. ಇತ್ತ ಅಕ್ಷಯ್ ಹಾಗೂ ವಿಖ್ಯಾತ್ ರಾತ್ರಿ ವೇಳೆ ನೆಹರುನಗರದ ಎಟಿಎಂ ಬಳಿ ನಿಂತಿದ್ದರು. ಈ ಸಂದರ್ಭ ಮತ್ತೆ ತಕರಾರು ತೆಗೆದು ಆರೋಪಿಗಳು ಜಗಳ ಆರಂಭಿಸಿದರು. ಜಗಳ ತಾರಕಕ್ಕೇರಿ ತಾವು ತಂದಿದ್ದ ಎರಡು ತಲಾವಾರು ಮೂಲಕ ಆರೋಪಿಗಳು, ಅಕ್ಷಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಅಕ್ಷಯ್ ಸ್ನೇಹಿತ ವಿಖ್ಯಾತ್ ಓಡಿ ತಪ್ಪಿಸಿಕೊಂಡಿದ್ದನು.

    ಘಟನೆ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ (Puttur Police Station) ಪ್ರಕರಣ ದಾಖಲಾಗಿದ್ದು, ಆರೋಪಿಗಳಲ್ಲಿ ಕೆಲವರು ಪೊಲೀಸರಿಗೆ ಶರಣಾಗಿದ್ದಾರೆ.

  • ಪುತ್ತೂರು ಜಂಕ್ಷನ್‌ನಲ್ಲಿ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ – ಆರೋಪಿಗಳು ಪೊಲೀಸರಿಗೆ ಶರಣು

    ಪುತ್ತೂರು ಜಂಕ್ಷನ್‌ನಲ್ಲಿ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ – ಆರೋಪಿಗಳು ಪೊಲೀಸರಿಗೆ ಶರಣು

    ಮಂಗಳೂರು: ಪ್ರಖ್ಯಾತ ಹುಲಿವೇಷ ತಂಡವಾದ ಕಲ್ಲೇಗ ಟೈಗರ್ಸ್‌ನ (Kallega Tigers) ಮುಖ್ಯಸ್ಥ ಬರ್ಬರವಾಗಿ ಹತ್ಯೆಯಾದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ನೆಹರೂ ನಗರ (Nehru Nagar) ಜಂಕ್ಷನ್‌ನಲ್ಲಿ ನಡೆದಿದೆ.

    ಅಕ್ಷಯ್ ಕಲ್ಲೇಗ (26) ಬರ್ಬರವಾಗಿ ಹತ್ಯೆಯಾದ ಯುವಕ. ಹುಲಿಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್‌ನನ್ನು ಮಾಣಿ-ಮೈಸೂರು ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಅಟ್ಟಾಡಿಸಿ ಕೊಲೆ (Murder) ಮಾಡಲಾಗಿದೆ. ಹತ್ಯೆಗೈದ ಬನ್ನೂರು ನಿವಾಸಿ ಮನೀಷ್ ಹಾಗೂ ಚೇತು ಘಟನೆಯ ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿರುವ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಪ್ರೇಮಕ್ಕೆ ಕುಟುಂಬಸ್ಥರ ವಿರೋಧ – ಪ್ರೇಮಿಯೊಂದಿಗೆ ಬೆಂಕಿ ಹಚ್ಚಿಕೊಂಡು ವಿವಾಹಿತೆ ಆತ್ಮಹತ್ಯೆ

    ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದ ವಿಚಾರದಲ್ಲಿ ಆರೋಪಿಗಳು ಹಾಗೂ ಅಕ್ಷಯ್ ನಡುವೆ ಗಲಾಟೆಯಾಗಿತ್ತು. ಈ ಸಂದರ್ಭ ಎರಡು ಸಾವಿರ ರೂ. ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ತಿರುಗಿದೆ. ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೊನೆಗೆ ಮೂರಕ್ಕೂ ಅಧಿಕ ಮಂದಿಯ ತಂಡದಿಂದ ದಾಳಿ ನಡೆಸಿ ಅಕ್ಷಯ್‌ನನ್ನು ಅಟ್ಟಾಡಿಸಿ ತಲವಾರಿನಿಂದ ಹತ್ಯೆ ಮಾಡಲಾಗಿದೆ. ಹತ್ಯೆಗೆ ಬೇರೆ ಕಾರಣಗಳು ಇದೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

  • ವಿವಾಹಿತ ಮಹಿಳೆ ಜೊತೆಗಿನ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ – ಮಂಗಳೂರು ಮೂಲದ ವ್ಯಕ್ತಿ ಬಂಧನ

    ವಿವಾಹಿತ ಮಹಿಳೆ ಜೊತೆಗಿನ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ – ಮಂಗಳೂರು ಮೂಲದ ವ್ಯಕ್ತಿ ಬಂಧನ

    ಕಾರವಾರ: ಬಣ್ಣದ ಮಾತಿನಿಂದ ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಹಣ ಕೊಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಯನ್ನು ಕಾರವಾರದ (Karwar) ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ದಕ್ಷಿಣಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಆರ್ಲಪದವು ಮೂಲದ ಪ್ರಶಾಂತ್ ಭಟ್ ಮಾಣಿಲ ಬಂಧಿತ ಆರೋಪಿ. ಉತ್ತರ ಕನ್ನಡ (Uttara Kannada) ಜಿಲ್ಲೆಯ ವಿವಾಹಿತ ಮಹಿಳೆಯೊಬ್ಬಳು ಸಂಗೀತದಲ್ಲಿ ಆಸಕ್ತಿ ಹೊಂದಿದ್ದಳು. ಹೀಗಾಗಿ ಈಕೆ ಕ್ಲಬ್ ಹೌಸ್ ಆ್ಯಪ್‌ನಲ್ಲಿ ಹಾಡುತ್ತಿದ್ದಳು. ಈ ವೇಳೆ ಪ್ರಶಾಂತ್ ಭಟ್ ಪರಿಚಯವಾಗಿದ್ದಾನೆ. ಈ ಪರಿಚಯ ಇಬ್ಬರಲ್ಲೂ ಪ್ರೀತಿಗೆ ತಿರುಗಿದೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

    2023ರ ಜನವರಿ ತಿಂಗಳಲ್ಲಿ ಆರೋಪಿ ಪ್ರಶಾಂತ್ ಮಹಿಳೆಯನ್ನು ಭೇಟಿಯಾಗಲು ಬಂದು ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದ. ಈ ವೇಳೆ ಅಲ್ಲಿಗೆ ಬಂದಿದ್ದ ಮಹಿಳೆಯನ್ನು ಪ್ರೀತಿಯ ನಾಟಕವಾಡಿ ಸೆಕ್ಸ್‌ಗೆ ಬಳಸಿಕೊಂಡಿದ್ದಾನೆ. ನಂತರ ಫೆಬ್ರವರಿ ತಿಂಗಳಲ್ಲಿ ಅದೇ ಲಾಡ್ಜ್ ನಲ್ಲಿ ರೂಮ್ ಮಾಡಿ ಆಕೆಯನ್ನು ಕರೆಸಿಕೊಂಡು ಕಾಮದಾಟವಾಡಿ ಆಕೆಯ ಖಾಸಗಿ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ. ಇದನ್ನೂ ಓದಿ: ಬೈಕ್‌ಗಳ ಅಪಘಾತದಲ್ಲಿ ನೆಲಕ್ಕೆ ಬಿದ್ದ ಸವಾರರ ಮೇಲೆ ಹರಿದ ಲಾರಿ – ಮೂವರು ಸ್ಥಳದಲ್ಲೇ ಸಾವು

    ಇದಲ್ಲದೇ ಈಕೆ ಮನೆಯಲ್ಲಿದ್ದಾಗ ವಿಡಿಯೋ ಕಾಲ್ ಮಾಡಿ ಆಕೆಯನ್ನು ಬೆತ್ತಲಾಗುವಂತೆ ಹೇಳಿ ಪೋಟೋಗಳನ್ನು ತೆಗೆದುಕೊಂಡಿದ್ದಾನೆ. ನಂತರ ಈಕೆಗೆ ತಾನು ಸೆಕ್ಸ್ ಮಾಡಿದ್ದ ವಿಡಿಯೋವನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಮೊದಲು ಆ ವಿವಾಹಿತ ಮಹಿಳೆಯಿಂದ 25 ಸಾವಿರ ಹಣ ಪಡೆದಿದ್ದಾನೆ. ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ – ಸ್ಥಳದಲ್ಲಿಯೇ ಯುವಕ ಸಾವು

    ಬಳಿಕ ಮಹಿಳೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ 7 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಲ್ಲದೇ ಮಹಿಳೆಯ ತಾಯಿ ಹಾಗೂ ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದಾನೆ. ಇದನ್ನೂ ಓದಿ: ಉದ್ಯಮಿ ಜಯಶೀಲ್ ಶೆಟ್ಟಿ ಸೊಸೆ ನೇಣಿಗೆ ಶರಣು

    ಪರಪುರುಷನೊಂದಿಗೆ ಮಾಡಿದ ತಪ್ಪಿನಿಂದಾಗಿ ಪಶ್ಚಾತ್ತಾಪ ಪಟ್ಟು ತಾನು ಮೋಸ ಹೋಗಿದ್ದನ್ನು ಅರಿತು ತನ್ನ ಪತಿಗೆ ಹಾಗೂ ಕುಟುಂಬಕ್ಕೆ ನಡೆದ ಘಟನೆಯನ್ನು ಮಹಿಳೆ ವಿವರಿಸಿದ್ದಾಳೆ. ನಂತರ ಆಕೆಯ ಪತಿ ಕಾರವಾರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಆತನನ್ನು ಕಾರವಾರದ ಮಹಿಳಾ ಠಾಣೆ ಪೊಲೀಸರ ತಂಡ ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಇದನ್ನೂ ಓದಿ: ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆ ಮಂದಿಯನ್ನು ಕಟ್ಟಿ ಹಾಕಿ ಫಿಲ್ಮಿ ಸ್ಟೈಲ್‌ನಲ್ಲಿ ದರೋಡೆ

    ಮನೆ ಮಂದಿಯನ್ನು ಕಟ್ಟಿ ಹಾಕಿ ಫಿಲ್ಮಿ ಸ್ಟೈಲ್‌ನಲ್ಲಿ ದರೋಡೆ

    ಮಂಗಳೂರು: ಮನೆಯೊಂದನ್ನು ನುಗ್ಗಿದ ಖತರ್ನಾಕ್ ದರೋಡೆಕೋರರ ಗ್ಯಾಂಗ್ ಒಂದು ಮನೆ ಮಂದಿಯನ್ನು ಕಟ್ಟಿ ಹಾಕಿ, ಫಿಲ್ಮಿ ಸ್ಟೈಲ್‌ನಲ್ಲಿ ದರೋಡೆ (Robbery) ನಡೆಸಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಕುದ್ಕಾಡಿ ಎಂಬಲ್ಲಿ ನಡೆದಿದೆ.

    ಗುರುಪ್ರಸಾದ್ ರೈ ಎಂಬವರಿಗೆ ಸೇರಿದ ಮನೆಗೆ ನುಗ್ಗಿದ ಸುಮಾರು 8 ಜನರ ಗ್ಯಾಂಗ್ ಮನೆ ಮಂದಿಯನ್ನು ಕಟ್ಟಿ ಹಾಕಿ ನಗ-ನಗದನ್ನು ಎಗರಿಸಿದ್ದಾರೆ. ಮನೆಯಲ್ಲಿ ಗುರುಪ್ರಸಾದ್ ಹಾಗೂ ಅವರ ತಾಯಿ ಇದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಗುರುಪ್ರಸಾದ್ ಕುತ್ತಿಗೆಗೆ ಚಾಕು ಹಿಡಿದು ಮನೆ ದರೋಡೆ ಮಾಡಿದ್ದಾರೆ.

    ನಸುಕಿನ ಜಾವ ಸುಮಾರು 2 ಗಂಟೆಗೆ ಮನೆಯ ಮುಂದಿನ ಬಾಗಿಲನ್ನು ಮುರಿದು ನುಗ್ಗಿರುವ ಖದೀಮರು 40 ಸಾವಿರ ನಗದು ಹಾಗೂ 120 ಗ್ರಾಂ ಚಿನ್ನಾಭರಣವನ್ನು ಹೊತ್ತೊಯ್ದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ-ಸಾಗರ ರೈಲ್ವೆ ಹಳಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ – ರೈಲು 2 ಗಂಟೆ ವಿಳಂಬ

    ದರೋಡೆಕೋರರು ತುಳು ಹಾಗೂ ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರು ಎಂದು ಮನೆ ಮಂದಿ ತಿಳಿಸಿದ್ದಾರೆ. ಸ್ಥಳಕ್ಕೆ ವಿಧಿ ವಿಜ್ಞಾನ, ಬೆರಳಚ್ಚು ಮತ್ತು ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್, ಪುತ್ತೂರು ಡಿವೈಎಸ್‌ಪಿ ಗಾನ.ಪಿ. ಕುಮಾರ್ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಮತ್ತೊಂದು ವಿವಾದ – ಸನಾತನ ಧರ್ಮವನ್ನ HIV, ಕುಷ್ಠರೋಗಕ್ಕೆ ಹೋಲಿಸಿದ ಸಂಸದ ಎ. ರಾಜಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾಡಹಗಲೇ ಯುವತಿಯ ಕತ್ತು ಸೀಳಿ ಯುವಕ ಪರಾರಿ – ಚಿಕಿತ್ಸೆ ಫಲಿಸದೇ ಯುವತಿ ಸಾವು

    ಹಾಡಹಗಲೇ ಯುವತಿಯ ಕತ್ತು ಸೀಳಿ ಯುವಕ ಪರಾರಿ – ಚಿಕಿತ್ಸೆ ಫಲಿಸದೇ ಯುವತಿ ಸಾವು

    – ಆರೋಪಿ ಪೊಲೀಸರ ಬಲೆಗೆ

    ಮಂಗಳೂರು: ಹಾಡಹಗಲೇ ಯುವಕನೋರ್ವ ಬೈಕ್‌ನಲ್ಲಿ ಬಂದು ಯುವತಿಯ ಕತ್ತು ಸೀಳಿ ಪರಾರಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ (Puttur) ನಡೆದಿದೆ.

    ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ವಿಟ್ಲದ (Vitla) ಅಳಿಕೆ ನಿವಾಸಿ ಗೌರಿ (25) ಮೃತಪಟ್ಟಿದ್ದಾರೆ. ಆರೋಪಿ ಪದ್ಮರಾಜ್ (30) ವಿಟ್ಲ ನಿವಾಸಿಯಾಗಿದ್ದು, ಕಳೆದ ಕೆಲ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಗುರುವಾರ ಮಧ್ಯಾಹ್ನ ಪುತ್ತೂರು ಬಸ್ ನಿಲ್ದಾಣದ ಬಳಿ ಇವರಿಬ್ಬರ ನಡುವೆ ವಾಗ್ವಾದ ನಡೆದಿದ್ದು, ಯುವತಿ ಮಹಿಳಾ ಠಾಣೆಗೆ ದೂರು ನೀಡಲೆಂದು ಬರುತ್ತಿದ್ದ ಸಂದರ್ಭ ಆರೋಪಿ ಪದ್ಮರಾಜ್ ಬೈಕ್‌ನಲ್ಲಿ ಬಂದು ಯುವತಿಯನ್ನು ತಡೆದು ಮೂರರಿಂದ ನಾಲ್ಕು ಬಾರಿ ಆಕೆಯ ಕುತ್ತಿಗೆಗೆ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಶಾಸಕ ಅಜಯ್ ಸಿಂಗ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮನೆ ಕೆಲಸದಾತನ ಶವ ಪತ್ತೆ

    ಚಾಕು ಇರಿತಕ್ಕೊಳಗಾದ ಯುವತಿ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಕೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದು, ಪ್ರೇಮ (Love) ವೈಫಲ್ಯವೇ ಕೃತ್ಯಕ್ಕೆ ಕಾರಣ ಎಂದು ತಿಳಿದು ಬಂದಿದೆ. ಈ ಕುರಿತು ಪುತ್ತೂರು ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕುಡಿದು ಬಂದು ಮದುವೆ ಮಾಡಿಸುವಂತೆ ಕಿರಿಕ್ – ತಂದೆಯಿಂದಲೇ ಮಗನ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಂತಾಜನಕ

    ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಂತಾಜನಕ

    ಮಂಗಳೂರು: ಯುವಕನೋರ್ವ ವೀಡಿಯೋ (Video) ಮಾಡಿ ತನ್ನ ಸಾವಿಗೆ ಯಾರೆಲ್ಲ ಕಾರಣ ಎಂದು ಹೇಳಿ ಆತ್ಮಹತ್ಯೆಗೆ ಯತ್ನಿಸಿದ (Suicide Attempt) ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ (Putturu) ನಡೆದಿದೆ.

    ಪುತ್ತೂರಿನ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಇದೀಗ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಅದ್ರಾಮ ಎಂಬವರ ಮನೆಯಲ್ಲಿ ನಾಸಿರ್ ಕಾರು ಚಾಲಕನಾಗಿದ್ದು, ಇತ್ತೀಚೆಗೆ ಅದ್ರಾಮನ ಕುಟುಂಬದ ಹೆಣ್ಣಿನ ಜೊತೆ ಸಂಬಂಧ ಇದೆಯೆಂದು ಹೇಳಿ ಅದ್ರಾಮ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸಿರೋದಾಗಿ ಆರೋಪಿಸಿದ್ದಾನೆ. ಅದ್ರಾಮ ಹಾಗೂ ಹೆಣ್ಣಿನ ಗಂಡ, ಮತ್ತೋರ್ವನ ಜೊತೆ ಕಾರಿನಲ್ಲಿರುವಾಗಲೇ ಅವರ ಎದುರೇ ಮೊಬೈಲ್ ವೀಡಿಯೋ ಮೂಲಕ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: Cauvery Water : ಇಂದು ಸಿಎಂ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ

    ನನಗೆ ಯಾವುದೇ ಹೆಣ್ಣಿನ ಜೊತೆ ಸಂಬಂಧ ಇಲ್ಲ, ಆಕೆಯ ಗಂಡನೇ ಈ ಕಾರಿನಲ್ಲಿದ್ದಾನೆ ಎನ್ನುತ್ತಾ ಮೂವರನ್ನೂ ವೀಡಿಯೋದಲ್ಲಿ ತೋರಿಸಿ ಇವರೇ ನನ್ನ ಸಾವಿಗೆ ಕಾರಣ, ನಾನು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿ ವೀಡಿಯೋವನ್ನು ಕೊನೆಗೊಳಿಸಿದ್ದಾನೆ.

    ಬಳಿಕ ನಾಸಿರ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: Chandrayaan-3ಕ್ಕೆ ಇಂದು ಕ್ಲೈಮ್ಯಾಕ್ಸ್; ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುತ್ತೂರಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‍ಗೆ ದಂತದಿಂದ ತಿವಿದ ಕಾಡಾನೆ!

    ಪುತ್ತೂರಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‍ಗೆ ದಂತದಿಂದ ತಿವಿದ ಕಾಡಾನೆ!

    ಮಂಗಳೂರು: ಪುತ್ತೂರಿಂದ ಬೆಂಗಳೂರಿಗೆ (Puttur- Bengaluru) ತೆರಳುತ್ತಿದ್ದ ಕೆಎಸ್‍ಆರ್‌ಟಿ ಸಿ ಸ್ಲೀಪರ್ ಕೋಚ್ ಬಸ್‍ (KSRTC Sleeper Coach Bus) ಗೆ ಕಾಡಾನೆಯೊಂದು ದಂತದಿಂದ ತಿವಿದ ಘಟನೆ ನಡೆದಿದೆ.

    ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪ ತಡರಾತ್ರಿ ಘಟನೆ ನಡೆದಿದೆ. ಕಾಡಾನೆ (Wild Elephant) ದಾಳಿಯಿಂದ ಬಸ್‍ಗೆ ಹಾನಿಯಾಗಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇದನ್ನೂ ಓದಿ: ಆಡಳಿತ ಮಂಡಳಿಯವರು ಮಾಡಿದ ಸಾಲಕ್ಕೆ ಶಾಲೆಯನ್ನೇ ಸೀಜ್ ಮಾಡಿದ ಬ್ಯಾಂಕ್ ಸಿಬ್ಬಂದಿ!

    ಬಸ್ ಪುತ್ತೂರಿನಿಂದ ಕಾಣಿಯೂರು (Kaniyoor) ಮಾರ್ಗವಾಗಿ ಸುಬ್ರಹ್ಮಣ್ಯ (Subrahmanya) ಮೂಲಕ ಬೆಂಗಳೂರಿಗೆ ತೆರಳುತ್ತಿತ್ತು. ಬಸ್ ಚಾಲಕ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡು ತಪ್ಪಿಸಲು ಯತ್ನಿಸಿದ್ದಾರೆ. ಆದರೂ ಬಸ್ಸಿನ ಎಡಭಾಗಕ್ಕೆ ಆನೆ ತನ್ನ ದಂತದಿಂದ ತಿವಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.

    ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ, ಪರಿಶೀಲನೆ ನೀಡಿಸಿದ್ದಾರೆ. ಪರಿಶೀಲನೆ ಬಳಿಕ ಬಸ್ ಬೆಂಗಳೂರಿನತ್ತ ತೆರಳಿದೆ.

  • ಸ್ಕಾರ್ಪಿಯೋ ಕಾರಿನಲ್ಲಿ ವಿಶ್ವಪರ್ಯಟನೆಗೆ ಮಂದಾದ ಪುತ್ತೂರಿನ ಯುವಕ

    ಸ್ಕಾರ್ಪಿಯೋ ಕಾರಿನಲ್ಲಿ ವಿಶ್ವಪರ್ಯಟನೆಗೆ ಮಂದಾದ ಪುತ್ತೂರಿನ ಯುವಕ

    75 ರಾಷ್ಟ್ರಗಳನ್ನ ಏಕಾಂಗಿಯಾಗಿ ಸಂಚರಿಸಲಿರೋ ಮುಹಮ್ಮದ್

    ಬೆಂಗಳೂರು: ಸ್ಕಾರ್ಪಿಯೋ ಕಾರಿನಲ್ಲೇ (Scorpio Car) ವಿಶ್ವಪರ್ಯಟನೆಗೆ ಪುತ್ತೂರಿನ (Puttur) ಯುವಕ ಮುಂದಾಗಿದ್ದಾರೆ. ಕರ್ನಾಟಕದಿಂದ ಲಂಡನ್‌ವರೆಗೂ (Karnataka To London) ಯುವಕ ವಿಶ್ವಪರ್ಯಟನೆ ಮಾಡಲಿದ್ದಾರೆ.

    ಮುಹಮ್ಮದ್ ಸಿನಾನ್ ಎಂಬ ಯುವಕ ಹೊಸ ಚರಿತ್ರೆ ಸೃಷ್ಟಿಸಲು ಮುಂದಾಗಿದ್ದು, ಬೈ ರೋಡ್ ಕಾರಿನಲ್ಲಿ 75 ರಾಷ್ಟ್ರಗಳನ್ನ ಏಕಾಂಗಿಯಾಗಿ ಸಂಚರಿಸಲು ನಿರ್ಧರಿಸಿದ್ದಾರೆ. ಇದೇ ತಿಂಗಳು 29 ರಿಂದ ಕರ್ನಾಟಕದಿಂದ ಲಂಡನ್‌ವರೆಗೂ ಪರ್ಯಟನೆ ಆರಂಭ ಆಗಲಿದೆ. ಇದನ್ನೂ ಓದಿ: ವಿನಾಶ ಕಾಲದಲ್ಲಿ ಕಾಂಗ್ರೆಸ್‌ಗೆ ವಿಪರೀತ ಬುದ್ಧಿ: ಸದಾನಂದ ಗೌಡ ವಾಗ್ದಾಳಿ

    ಕನ್ನಡ ನಾಡಿನ ಆಚಾರ-ವಿಚಾರ, ಸಂಸ್ಕೃತಿ ಮತ್ತು ಹಿರಿಮೆಯನ್ನ ಸಾರುವ ಉದ್ದೇಶದಿಂದ ಈ ಸಂಚಾರ ಆರಂಭಿಸಲಾಗಿದೆಯಂತೆ. ಸುಮಾರು 2 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಿ.ಮೀ ವರೆಗೂ 75 ದೇಶಗಳನ್ನ ಸುತ್ತಲಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಇರುವ ಕನ್ನಡಿಗರನ್ನ ಭೇಟಿ ಮಾಡಿ ಕನ್ನಡಿನ ಹಿರಿಮೆಯನ್ನ ಸಾರಲಿದ್ದಾರೆ. ಇದೇ ತಿಂಗಳ 29 ರಿಂದ‌ ಮಂಗಳೂರಿನ ಮೂಲಕ ದುಬೈ ತಲುಪಿ ಅಲ್ಲಿಂದ ಬೇರೆ ಬೇರೆ ರಾಷ್ಟ್ರಗಳಿಗೆ ಸಂಚರಿಸಲಿದ್ದಾರೆ.

    ಮುಹಮ್ಮದ್ ಸಿನಾನ್ ಇಂಟಿರಿಯರ್‌ ಡಿಸೈನರ್ ಆಗಿದ್ದು, ಯುಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯದವರು ಈ ರೀತಿ ಕಾರಿನಲ್ಲಿ ವಿಶ್ವಪರ್ಯಟನೆ ಮಾಡುವುದನ್ನ ನೋಡಿ ತಾನೂ ಈ ನಿರ್ಧಾರ ಮಾಡಿದ್ದರಂತೆ. ಇದನ್ನೂ ಓದಿ: ಬಜರಂಗ ಬಲಿ ಕೀ ಜೈ ಘೋಷಣೆ ಮಾಡಿ ತುಳುವಿನಲ್ಲಿ ಭಾಷಣ ಮಾಡಿದ ಮೋದಿ

    2018 ರಲ್ಲೇ ವಿಶ್ವಪರ್ಯಟನೆಗೆ ಪ್ಲ್ಯಾನ್ ಮಾಡಿದ್ದೆ. ಆದರೆ ಕೊರೊನಾದಿಂದ ಸಾಧ್ಯ ಆಗಿರಲಿಲ್ಲ.‌ ಈಗ ಸಾಧ್ಯ ಆಗಿದ್ದು, ಕರ್ನಾಟಕ ಮತ್ತು ಭಾರತದ ಪ್ರವಾಸೋದ್ಯಮವನ್ನ ಉತ್ತೇಜನ ಮಾಡೋದು ನನ್ನ ಉದ್ದೇಶ ಆಗಿದೆ‌. ಇದಕ್ಕೆ 1 ಕೋಟಿ ಖರ್ಚಾಗಲಿದೆ ಎಂದು ಮುಹಮ್ಮದ್‌ ತಿಳಿಸಿದ್ದಾರೆ.

  • ಪುತ್ತಿಲ ಕಾಂಗ್ರೆಸ್, ಭಯೋತ್ಪಾದನೆ, ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ: ಕಲ್ಲಡ್ಕ ಪ್ರಭಾಕರ ಭಟ್‌

    ಪುತ್ತಿಲ ಕಾಂಗ್ರೆಸ್, ಭಯೋತ್ಪಾದನೆ, ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ: ಕಲ್ಲಡ್ಕ ಪ್ರಭಾಕರ ಭಟ್‌

    ಮಂಗಳೂರು: ಅರುಣ್ ಕುಮಾರ್ ಪುತ್ತಿಲ (Arun Kumar Puthila) ಕಾಂಗ್ರೆಸ್ (Congress) ವಿರುದ್ಧ, ಭಯೋತ್ಪಾದನೆ ಹಾಗೂ ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ. ಆದರೆ ಹಿಂದುತ್ವಕ್ಕೋಸ್ಕರ ಕೆಲಸ ಮಾಡುವ ಬಿಜೆಪಿ ವಿರುದ್ಧ ಮಾತನಾಡುವುದು ಎಂತಹ ಹಿಂದುತ್ವ (Hindutva) ಎಂದು ಆರ್‌ಎಸ್‌ಎಸ್ (RSS) ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಪುತ್ತೂರು ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪುತ್ತೂರಿನಲ್ಲಿ (Puttur) ಅರುಣ್ ಕುಮಾರ್ ಪುತ್ತಿಲ ಹಿಂದುತ್ವದ ರಕ್ಷಣೆ ಮಾಡುವುದಾಗಿ ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗಿಂತ (BJP) ದೊಡ್ಡ ಹಿಂದುತ್ವ ಯಾವುದು? ಬಿಜೆಪಿಯ ಗೆಲುವೇ ಹಿಂದುತ್ವದ ಗೆಲುವು. ಬಿಜೆಪಿಯ ಗೆಲುವಿಗಾಗಿ ಆರ್‌ಎಸ್‌ಎಸ್ ಕಾರ್ಯಕರ್ತರು ಎಲ್ಲಾ ಕಡೆಯಿಂದ ಬಂದಿದ್ದಾರೆ. ಹಾಗಾಗಿ ನಾವು ಶೇ.100ರಷ್ಟು ಬಿಜೆಪಿಗೋಸ್ಕರ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಮೋದಿ ನಾಗರಹಾವು ಆದ್ರೆ ಸೋನಿಯಾ ಗಾಂಧಿ ವಿಷಕನ್ಯೆನಾ – ಯತ್ನಾಳ್ ಪ್ರಶ್ನೆ

    2008ರಲ್ಲಿ ಶಕುಂತಲಾ ಶೆಟ್ಟಿ (Shakunthala Shetty) ಸಹ ಇದೇ ರೀತಿ ನಿಂತಿದ್ದರು. ಪುತ್ತೂರಿನಲ್ಲಿ ಬಿಜೆಪಿ ಬೆಳೆಸಿದ ರಾಮ್ ಭಟ್ ಜೊತೆಗಿದ್ದರು. ಆಗಲೂ ಏನೂ ಆಗಿಲ್ಲ. ಈಗಿನದ್ದು ಭ್ರಮೆ. ಇಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ನಾನು ಬಿಜೆಪಿ ಸದಸ್ಯ ಅಲ್ಲ. ಆದರೆ ಎಲ್ಲರಿಗೂ ಜವಾಬ್ದಾರಿಯಿದೆ. ಚುನಾವಣೆ (Election) ಹೊತ್ತಲ್ಲಿ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ನಾವು ನಿಷ್ಕ್ರಿಯರಾದರೆ ಭಯೋತ್ಪಾದಕರು ಬೆಳೆದುಬಿಡುತ್ತಾರೆ. ಪುತ್ತಿಲ ಅಫಿಡವಿಟ್‌ನಲ್ಲಿ ದೇವಸ್ಥಾನದ ಹಣದ ಅವ್ಯವಹಾರ ಕೇಸ್ ಇದೆ. ಒಬ್ಬರಿಗೆ ಹೊಡೆದ ಕೇಸ್ ಹಾಗೂ ಒಬ್ಬ ಹೆಣ್ಣು ಮಗಳಿಗೆ ಅಪಘಾತ ಮಾಡಿ ಮಾನವೀಯತೆ ಇಲ್ಲದೆ ಓಡಿಹೋದ ಕೇಸ್ ಇವರ ಮೇಲಿದೆ. ಇವರ ಮೇಲೆ 307ರಂತಹ ಸೆಕ್ಷನ್ ಇದೆ. ಇವರದ್ದು ಹಿಂದುತ್ವನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮೋದಿ ರೋಡ್ ಶೋಗೆ ಸಿದ್ಧವಾಗಿದೆ ಸ್ಪೆಷಲ್‌ ಬುಲೆಟ್ ಪ್ರೂಫ್ ವಾಹನ

  • ಹಾವು ಕಚ್ಚಿದ ಭಾಗದಿಂದ ರಕ್ತ ಹೀರಿ ತಾಯಿ ಜೀವ ಉಳಿಸಿದ ಮಗಳು!

    ಹಾವು ಕಚ್ಚಿದ ಭಾಗದಿಂದ ರಕ್ತ ಹೀರಿ ತಾಯಿ ಜೀವ ಉಳಿಸಿದ ಮಗಳು!

    ಮಂಗಳೂರು: ಮಗಳ ಸಮಯಪ್ರಜ್ಞೆಯಿಂದ ತಾಯಿ ಭಾರೀ ಅವಘಡದಿಂದ ಪಾರಾದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಕೆಯ್ಯೂರು ಗ್ರಾಮ (Keyyur) ದಲ್ಲಿ ನಡೆದಿದೆ.

    ವಿಷಯುಕ್ತ ಹಾವೊಂದು ತಾಯಿಗೆ ಕಚ್ಚಿದ್ದು, ಕೂಡಲೇ ಎಚ್ಚೆತ್ತ ಮಗಳು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಣೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

    ನಡೆದಿದ್ದೇನು..?: ಕೆಯ್ಯೂರು ಗ್ರಾಮಪಂಚಾಯತ್ ಸದಸ್ಯೆ ಮಮತಾ ರೈ (Mamatha Rai) ಯವರು ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಮಾವಿನ ತೋಟಕ್ಕೆ ನೀರು ಬಿಡಲೆಂದು ಪಂಪ್‍ಸೆಟ್‍ಗೆ ಸ್ವಿಚ್ ಹಾಕಲು ತೆರಳಿದ್ದರು. ಈ ವೇಳೆ ಅವರ ಕಾಲಿಗೆ ವಿಷಯುಕ್ತ ಹಾವೊಂದು ಕಚ್ಚಿದೆ. ಪರಿಣಾಮ ಕಾಲಿನಿಂದ ರಕ್ತ ಸೋರುತ್ತಿತ್ತು. ಕೂಡಲೇ ಅವರು ಮನೆಗೆ ಬಂದು ವಿಚಾರ ತಿಳಿಸಿದ್ದಾರೆ.

    ಮನೆಯಲ್ಲಿದ್ದ ಕೆಲಸದವರು ಮಮತಾ ಅವರ ಕಾಲಿಗೆ ಬೈಹುಲ್ಲಿನಿಂದ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಮಗಳು ಶ್ರಾವ್ಯಾ (Shravya), ಹಾವು ಕಚ್ಚಿದ ಭಾಗದಿಂದ ಬಾಯಿ ಮೂಲಕ ರಕ್ತ ಹೀರಿದ್ದಾರೆ. ಇದಾದ ಬಳಿಕ ಮಮತಾರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚೇತರಿಸಿಕೊಂಡಿದ್ದಾರೆ.

    ಇತ್ತ ಮಮತಾಗೆ ಚಿಕಿತ್ಸೆ ನೀಡಿದ ವೈದ್ಯರು, ಶ್ರಾವ್ಯಾಳ ಕಾರ್ಯಕ್ಕೆ ಮಚ್ಚುಗೆ ಸೂಚಿಸಿದ್ದಾರೆ. ಕೂಡಲೇ ರಕ್ತ ಹೀರಿದ್ದರಿಂದ ಮಮತಾ ಭಾರೀ ಅಪಾಯದಿಂದ ಪಾರಾಗಲು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ- ಐತಿಹಾಸಿಕ ದೇವಾಲಯದಲ್ಲಿ ಕೌತುಕ

    ಶ್ರಾವ್ಯಾ ಅವರು ಪುತ್ತೂರು ವಿವೇಕಾನಂದ ಕಾಲೇಜಿ (Vivekananda Collage) ನಲ್ಲಿ ದ್ವಿತೀಯ ಬಿಎಸ್‍ಸಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಶ್ರಾವ್ಯಾ ದಿಟ್ಟತನಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.