Tag: Puttige Shree

  • `ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಪಹಲ್ಗಾಮ್ ಘಟನೆಗೂ ವ್ಯತ್ಯಾಸವಿಲ್ಲ: ಪೇಜಾವರ ಶ್ರೀ

    `ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಪಹಲ್ಗಾಮ್ ಘಟನೆಗೂ ವ್ಯತ್ಯಾಸವಿಲ್ಲ: ಪೇಜಾವರ ಶ್ರೀ

    – ಇದು ಭಯೋತ್ಪಾದನೆ ಅಲ್ಲ, ಜಾಗತಿಕ ಷಡ್ಯಂತ್ರ; ಉಡುಪಿ ಪುತ್ತಿಗೆ ಶ್ರೀ

    ಉಡುಪಿ: ಪಹಲ್ಗಾಮ್ (Pahalgam) ದುರ್ಘಟನೆಯಿಂದ ಬಹಳ ಆಘಾತವಾಗಿದೆ. `ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಈ ಘಟನೆಗೂ ವ್ಯತ್ಯಾಸವಿಲ್ಲ ಎಂದು ಉಡುಪಿ (Udupi) ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejawara Shree) ಹೇಳಿದ್ದಾರೆ.

    ಪಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ಉಗ್ರರು ದಾಳಿ ನಡೆಸಿದ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆ ಕಡೆ ಪಶ್ಚಿಮ ಬಂಗಾಳ, ಈ ಕಡೆ ಕಾಶ್ಮೀರದಲ್ಲಿ (Kashmir) ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ವ್ಯತಿರಿಕ್ತ ಇಲ್ಲದೇ ಈ ಘಟನೆ ನಡೆದಿದೆ. ಈ ಘಟನೆ ಬಹಳ ಆಘಾತಕಾರಿ, ಸರ್ಕಾರ ಇದಕ್ಕೆ ಬಲವಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Pahalgam Terror Attack | ಭಾರತ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ – ಉಗ್ರರಿಗೆ ರಾಜನಾಥ್‌ ಸಿಂಗ್‌ ಎಚ್ಚರಿಕೆ

    ಇಂತಹ ಘಟನೆ ದೇಶದಲ್ಲೆಲ್ಲೂ ಮರುಕಳಿಸಬಾರದು. ದೇಶದೊಳಗೆ ಸೂಕ್ತ ಭದ್ರತೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ – ಪ್ರಹ್ಲಾದ್ ಜೋಶಿ

    ಜಾಗತಿಕ ಷಡ್ಯಂತ್ರ: ಪುತ್ತಿಗೆ ಶ್ರೀ
    ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದಾಳಿಯಿಂದ ವ್ಯಾಕುಲರಾಗಿದ್ದೇವೆ. ಇದು ಭಯೋತ್ಪಾದನೆ ಅಲ್ಲ ಜಾಗತಿಕ ಷಡ್ಯಂತ್ರ ಎಂದು ಉಡುಪಿ ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ (Puttige Shree) ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    ಹಿಂದೂಗಳ ಮೇಲೆ ಉಗ್ರರ ಆಕ್ರಮಣ ಆತಂಕಕಾರಿ. ಸನಾತನ ಧರ್ಮದ ಅಸ್ತಿತ್ವ ಭಾರತದಲ್ಲಿ ನಾಶವಾಗುವ ಆತಂಕ ಶುರುವಾಗಿದೆ. ಈ ಘಟನೆಯನ್ನು ಖಂಡಿಸುತ್ತೇವೆ ಸರ್ಕಾರ ಎಚ್ಚೆತ್ತು ಶಾಶ್ವತ ಪರಿಹಾರ ಮಾಡಬೇಕು. ಕೇರಳ, ಪಶ್ಚಿಮ ಬಂಗಾಳ ಕಾಶ್ಮೀರದ ಘಟನೆಯಲ್ಲಿ ಮಾಸ್ಟರ್ ಪ್ಲಾನ್ ವರ್ಕ್ ಮಾಡುತ್ತಿದೆ ದೇಶದಲ್ಲಿ ಕಾಣದ ಕೈಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದರು. ಇದನ್ನೂ ಓದಿ: ಅಸ್ಸಾಂ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಜೀವ ಉಳಿಸಿದ ಕಲಿಮಾ

    ಹಿಂದುಗಳನ್ನು ನಾಶ ಮಾಡುವ ಹುನ್ನಾರ
    ಸರ್ಕಾರ ವಿಮರ್ಶೆ ಮಾಡಿ ದುಷ್ಕೃತ್ಯಗಳ ಮೂಲಬೇರು ಕಿತ್ತೆಸೆಯಬೇಕು. ಉಗ್ರವಾದಿ ಸಮಸ್ಯೆಯನ್ನು ಪೂರ್ಣ ನಿರ್ಮೂಲನೆ ಮಾಡಲು ಒತ್ತಾಯಿಸುತ್ತೇನೆ. ಉಗ್ರರು, ನಿರಪರಾಧಿಗಳನ್ನು ಸಾರ್ವಜನಿಕರನ್ನು ಕೊಲ್ಲುತ್ತಾರೆ ಎಂಬ ಭಾವನೆ ಇತ್ತು. ಹಿಂದೂಗಳನ್ನು ನಾಶ ಮಾಡುವುದೇ ಇವರ ಹೊನ್ನಾರ ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು.

  • ‘ಇಸ್ಲಾಂ ಭಯೋತ್ಪಾದನೆ ಧರ್ಮವಲ್ಲ’ ಪುಸ್ತಕ ಬಿಡುಗಡೆ ಮಾಡಿದ ಪುತ್ತಿಗೆ ಶ್ರೀ ಫೋಟೋ ವೈರಲ್ – ಹಿಂದೂ ಸಂಘಟನೆ ಕಿಡಿ

    ‘ಇಸ್ಲಾಂ ಭಯೋತ್ಪಾದನೆ ಧರ್ಮವಲ್ಲ’ ಪುಸ್ತಕ ಬಿಡುಗಡೆ ಮಾಡಿದ ಪುತ್ತಿಗೆ ಶ್ರೀ ಫೋಟೋ ವೈರಲ್ – ಹಿಂದೂ ಸಂಘಟನೆ ಕಿಡಿ

    ಉಡುಪಿ: ಪುತ್ತಿಗೆ ಶ್ರೀಗಳು (Puttige Shree) ಇಸ್ಲಾಂ ಭಯೋತ್ಪಾದನೆ ಧರ್ಮವಲ್ಲ ಎಂಬ ಪುಸ್ತಕವನ್ನು ರಿಲೀಸ್ (Book Release) ಮಾಡಿದ್ರು. ಇದಕ್ಕೆ ಸಂಬಂಧಿಸಿದ ಫೋಟೋ (Photo), ವೀಡಿಯೋಗಳನ್ನು ಕೆಲ ಕಿಡಿಗೇಡಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಇದು ಈಗಿನದ್ದೇನೋ ಎಂಬಂತೆ ಹಿಂದೂ ಸಂಘಟನೆಗಳು ಪುತ್ತಿಗೆ ಶ್ರೀಗಳ ವಿರುದ್ಧ ಸಿಡಿದಿವೆ.

    ಕೂಡಲೇ ಪುತ್ತಿಗೆ ಶ್ರೀಗಳು ಕ್ಷಮೆ ಕೇಳಬೇಕು ಇಲ್ಲ ಅಂದ್ರೆ ನಿಮ್ಮ ಮಠ ಉಳಿಯಲ್ಲ ಎಂದು ಪ್ರಮೋದ್ ಮುತಾಲಿಕ್ (Pramod Muthalik) ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಶ್ರೀಮಠ ಸ್ಪಷ್ಟನೆ ನೀಡಿದ್ದು, ಸಮಾಜದಲ್ಲಿ ಒಡಕುಂಟು ಮಾಡಲು ಕೆಲವರು ಹತ್ತು ವರ್ಷಗಳ ಹಿಂದಿನ ಕಾರ್ಯಕ್ರಮದ ಬಗ್ಗೆ ವೈರಲ್ ಮಾಡ್ತಿದ್ದಾರೆ. ಸನಾತನ ಧರ್ಮದ ಮೊದಲ ಆದ್ಯತೆ ಕೂಡ ಶಾಂತಿ ಸೌಹಾರ್ದತೆ. ಶ್ರೀಗಳ ವಿಶ್ವತೋಮುಖ ವ್ಯಕ್ತಿತ್ವ ಅರಿಯದೆ ಕೆಲ ವಿಕೃತ ಮನಸ್ಸಿನವರು ಹೀಗೆ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನೂ ಓದಿ: ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ – ಬಿಜೆಪಿಯಿಂದ ಅಭ್ಯರ್ಥಿ ಹಾಕಬೇಡಿ: ಶ್ರೀರಾಮಸೇನೆ ಒತ್ತಾಯ

    ಪೂಜ್ಯರೇ ಯಾವ ಪುಸ್ತಕವನ್ನು ನೀವು ಬಿಡುಗಡೆ ಮಾಡಿದ್ದೀರಿ? ನಾನು ಹೇಳುತ್ತೇನೆ ನೀವು ಕ್ಷಮೆ ಕೇಳಬೇಕು. ಇಲ್ಲಾಂದ್ರೆ ನಾಳೆ ನಿಮ್ಮ ಮಠ ಕೂಡ ಉಳಿಯಲ್ಲ ಅನ್ನೋದನ್ನು ನಾನು ನೆನಪಿಸುತ್ತೇನೆ. ಹಿಂದೂ ಧರ್ಮದ ಪ್ರತಿಪಾದಕರಾದ ನೀವು ಇಸ್ಲಾಂ ಭಯೋತ್ಪಾದಕ ಧರ್ಮ ಅಲ್ಲ ಎನ್ನುವಂತ ಪುಸ್ತಕವನ್ನು ಬಿಡುಗಡೆ ಮಾಡುವಂತಹ ಅಗತ್ಯತೆ ಏನಿತ್ತು? ಮಸೀದಿಯನ್ನು ಉದ್ಘಾಟಿಸುವಂತದ್ದು ಇಂತಹ ಪ್ರವೃತ್ತಿಯಿಂದಲೇ ಇಸ್ಲಾಂ ಬೆಳೆಯುತ್ತಿದೆ. ಹಿಂದೂ ಧರ್ಮ ನಾಶವಾಗುತ್ತಿದೆ. ಇದು ನಿಮ್ಮ ಗಮನಕ್ಕೂ ಕೂಡ ಬಂದಿದೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿಡಿಗಳು ಇದ್ರೆ ಕೋವಿಡ್, ಅತಿವೃಷ್ಟಿ ಬರಲ್ಲ ದರಿದ್ರ ಬರುತ್ತದೆ: ಸಿ.ಎಂ ಇಬ್ರಾಹಿಂ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k