Tag: puttegowda

  • ಇದು ಸಮ್ಮತಿಯ ದೈಹಿಕ ಕ್ರಿಯೆ – ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು

    ಇದು ಸಮ್ಮತಿಯ ದೈಹಿಕ ಕ್ರಿಯೆ – ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಗ್ಗೆ ದೂರು ದಾಖಲಿಸಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು ದಾಖಲಾಗಿದೆ.

    ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕರ್ನಾಟಕ ಕನ್ನಡಪರ ಸಂಘಟನೆ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಪುಟ್ಟೇಗೌಡರು ದೂರು ದಾಖಲಿಸಿದ್ದಾರೆ.

    ಇದು ಇಬ್ಬರ ಸಮ್ಮತಿಯಿಂದ ನಡೆದಿರುವ ದೈಹಿಕ ಕ್ರಿಯೆ. ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ವೈರಲ್ ಮಾಡಿಸಿದ್ದಾರೆ. ದಿನೇಶ್ ಕಲ್ಲಹಳ್ಳಿಗೂ ಈ ವೀಡಿಯೋಗೂ ಏನು ಸಂಬಂಧ? ಅವರ ಚಾರಿತ್ರ್ಯ ವಧೆ ಮಾಡಲು ನಡೆದಿರುವ ಕುತಂತ್ರ ಇದು ಎಂದು ಪುಟ್ಟೇಗೌಡರು ಆರೋಪಿಸಿದ್ದಾರೆ.

    ಖಾಸಗಿ ಜೀವನದಲ್ಲಿ ಏನು ಬೇಕಾದರೂ ಮಾಡಿಕೊಳ್ಳಬಹುದು. ಅದನ್ನು ಚಿತ್ರೀಕರಿಸಿ ಬಿತ್ತರಿಸಿರುವುದು ತಪ್ಪು. ಯುವತಿಗೆ ಅನ್ಯಾಯವಾಗಿದ್ದರೆ ಆಕೆಯೇ ದೂರು ನೀಡಬಹುದಿತ್ತು. ತಕ್ಷಣ ದಿನೇಶ್ ಕಲ್ಲಹಳ್ಳಿ ಬಂಧಿಸಿ, ವಿಚಾರಣೆ ನಡೆಸಬೇಕೆಂದು ಪುಟ್ಟೇಗೌಡರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ಮನೆಯವರ ವಿರುದ್ಧವೇ ಮಾತಾಡಲಾಗದೆ ಹೆಚ್‍ಡಿಡಿ ಸುಮ್ಮನಾಗಿದ್ದಾರೆ: ಸಿಎಸ್.ಪುಟ್ಟೇಗೌಡ

    ಮನೆಯವರ ವಿರುದ್ಧವೇ ಮಾತಾಡಲಾಗದೆ ಹೆಚ್‍ಡಿಡಿ ಸುಮ್ಮನಾಗಿದ್ದಾರೆ: ಸಿಎಸ್.ಪುಟ್ಟೇಗೌಡ

    ಹಾಸನ: ಜಿಲ್ಲೆಯ ಕೀಲಿಕೈ ಯಾರೋ ಒಬ್ಬರ ಕೈಲಿದ್ದು, ಆ ಕೀಲಿಕೈ ಕಿತ್ತುಕೊಂಡರೆ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಂತೆ ಹಾಸನ ಜಿಲ್ಲೆಗೆ ಸ್ವಾತಂತ್ರ್ಯ ಸಿಗಲಿದೆ ಎಂದು ಮಾಜಿ ಶಾಸಕ ಪುಟ್ಟೇಗೌಡ ಮಾಜಿ ಸಚಿವ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಶ್ರೀನಿವಾಸಪುರದಲ್ಲಿರುವ ಹೇಮಾವತಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಮಾಜಿ ಶಾಸಕ ಪುಟ್ಟೇಗೌಡ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಹಾಸನ ಜಿಲ್ಲೆಯ ಈ ಸ್ಥಿತಿಗೆ ಅವರ ಮನೆಯವರೇ ಕಾರಣ ಎಂದು ವಾಗ್ದಾಳಿ ನಡೆಸಿದ್ರು.

    ಈ ಕೀಲಿಕೈ ಅವರಿಗೆ ಕೊಟ್ಟು ಜಿಲ್ಲೆಯ ಜನ ಶಿಕ್ಷೆ ತಗೊಂಡ್ರು. ಎಲ್ಲರಿಗಿಂತ ಮೊದಲು ದೇವೇಗೌಡರೇ ಶಿಕ್ಷೆ ತಗೊಂಡ್ರು. ಈ ವಯಸ್ಸಲ್ಲಿ ಅವರ ಮನೆಯವರ ವಿರುದ್ಧ ಅವರೇ ಮಾತನಾಡಲಾಗದೇ ದೇವೇಗೌಡರು ಸುಮ್ಮನಾಗಿದ್ದಾರೆ. ಕೈ ಮದ್ದು ಹಾಕುವವರು ಬೇರೆಯವರು ಸಿಗದಿದ್ರೆ ತಮ್ಮ ಮನೆಯವರಿಗೇ ಹಾಕುತ್ತಾರೆ. ಅದರಂತೆ ಈ ಜಿಲ್ಲೆಯಲ್ಲಿ ನಿಮ್ಮನ್ನು ಸೋಲಿಸಲು ಯಾರಿದ್ದರು ದೇವೇಗೌಡರೇ. ಈ ಕೀ ಪಿನ್‍ನಿಂದ ಸಣ್ಣಪುಟ್ಟ ಹುಡುಗರಿಗೆಲ್ಲ ಅಧಿಕಾರ ಸಿಕ್ಕಿದೆ. ಆದರೆ ಕೀ ಪಿನ್ ನಿಯಂತ್ರಿಸಲಾಗದೆ ದೇವೇಗೌಡರು ತುಮಕೂರಿಗೆ ಹೋಗುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಯ್ತು ಎಂದು ವ್ಯಂಗ್ಯವಾಡಿದ್ರು.

    ಈ ಕೀ ಪಿನ್ನನ್ನು ಸಿಂಹದ ಮರಿಗಳಾದ ಸಿದ್ಧರಾಮಯ್ಯ, ಡಿಕೆ.ಶಿವಕುಮಾರ್, ಖರ್ಗೆಗೆ ಕೊಡಲು ಹಾಸನ ಜಿಲ್ಲೆಯ ಜನ ಸಿದ್ಧರಾಗಿದ್ದಾರೆ. ಅವರುಗಳು ಬಂದು ಹಾಸನ ಜಿಲ್ಲೆಯನ್ನು ಶುದ್ಧಿ ಮಾಡಲಿದ್ದಾರೆ ಎಂದು ಪುಟ್ಟೇಗೌಡ ಆಕ್ರೋಶ ಹೊರಹಾಕಿದ್ದಾರೆ.

  • ಮಕ್ಕಳು, ಮೊಮ್ಮಕ್ಕಳಿಂದಲೇ ದೇವೇಗೌಡರು ಸೋತರು: ಸಿ.ಎಸ್.ಪುಟ್ಟೇಗೌಡ

    ಮಕ್ಕಳು, ಮೊಮ್ಮಕ್ಕಳಿಂದಲೇ ದೇವೇಗೌಡರು ಸೋತರು: ಸಿ.ಎಸ್.ಪುಟ್ಟೇಗೌಡ

    ಹಾಸನ: ಬಡವರ ಮಕ್ಕಳು ಕೆಂಪುಕೋಟೆಗೇರಿಸಿದ್ದ ನಿಮ್ಮನ್ನು ಮತ್ತೆ ಸಂಸದನಾಗದ ಹಾಗೆ ಮಾಡಿದ್ದು ನಿಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರು. ನಿಮ್ಮ ತಾಳ್ಮೆ ಅವರಿಗಿಲ್ಲ, ಅವರ ಮಾತನ್ನು ಕೇಳಿ ನಿರ್ಧಾರ ಕೈಗೊಳ್ಳಬೇಡಿ ಎಂದು ಎಚ್.ಡಿ.ದೇವೇಗೌಡರಿಗೆ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಸಲಹೆ ನೀಡಿದ್ದಾರೆ.

    ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮಾಡಿದ 2000ನೇ ಇಸವಿಯ ಹಿಂದಿನ ರಾಜಕೀಯ ಈಗಿಲ್ಲ. ವಿನಾಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಬೆರಳು ಮಾಡಿ ತೋರಿಸಬೇಡಿ. ಕುಟುಂಬ ರಾಜಕಾರಣದಿಂದಲೇ ನೀವು ಎಂಪಿ ಆಗಲಿಲ್ಲ, ನಿಮ್ಮ ಕುಡಿಯೇ ನಿಮ್ಮನ್ನು ಸಂಸದನಾಗಲು ಬಿಡಲಿಲ್ಲ. ಕುಟುಂಬ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ಲಾಲೂ ಪ್ರಸಾದ್ ಆದಿಯಾಗಿ ಈವರೆಗೆ ಕುಟುಂಬ ರಾಜಕಾರಣ ಮಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ. ಹೀಗಾಗಿ ಪ್ರಜಾಪ್ರಭುತ್ವಕ್ಕೆ ಬೆಲೆ ನೀಡಿ ಕುಟುಂಬ ರಾಜಕಾರಣವನ್ನು ಮಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎಲ್ಲರೂ ಸಾಲಮನ್ನಾ ಮಾಡಿದ್ದೇವೆ ಎಂದು ಸಾರುತ್ತಿದ್ದೀರಿ, ಯಾರಿಗೆ ನೀವು ಸಾಲಮನ್ನಾ ಮಾಡಿರುವುದು, ಸಾಲಮನ್ನಾ ಆಗಿರುವುದು ಬಡವರಿಗಲ್ಲ. ಸೊಸೈಟಿ ಕಾರ್ಯದರ್ಶಿ, ನಿರ್ದೇಶಕರಿಗೆ ಸಾಲಮನ್ನಾ ಆಗಿದೆ. ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಯುತ್ತಿರುವುದು ಕೇವಲ 8 ಕೋಟಿ ರೂ.ಗಳಿಗಾಗಿ. ಆದರೆ ಸೊಸೈಟಿಯಲ್ಲಿ 800 ಕೋಟಿ ರೂ. ದರೋಡೆ ಮಾಡಿದ್ದಾರೆ. ನಮ್ಮ ನಾಯಕರು ಏನೂ ಮಾತನಾಡಬೇಡಿ ಸುಮ್ಮನಿರಿ ಎಂದಿದ್ದರು. ಹೀಗಾಗಿ ಸುಮ್ಮನಿದ್ದೆ. ಈಗ ಮೈತ್ರಿ ಸರ್ಕಾರ ಬಿದ್ದು, ಹೋಗಿದೆ ನಾವು ಬೇರೆಯಾಗಿದ್ದೇವೆ, ಮಾತನಾಡುವ ಸಂದರ್ಭ ಬಂದಿದೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ನಿಮ್ಮ ಪಕ್ಷದ ಜಾತಕವನ್ನು ಗುಬ್ಬಿ ಶ್ರೀನಿವಾಸ, ಜಿಟಿ ದೇವೇಗೌಡ ಬಿಚ್ಚಿಡುತ್ತಿದ್ದಾರೆ. ದೇವೇಗೌಡರು ಈಗಲಾದರೂ ಮನವರಿಕೆ ಮಾಡಿಕೊಳ್ಳಬೇಕು. ಕುಟುಂಬ ರಾಜಕಾರಣ ಒಳ್ಳೆಯದಲ್ಲ. ಎಲ್ಲದರಲ್ಲೂ ಕುಟುಂಬದವರನ್ನು ಸೇರಿಸುವುದನ್ನು ಬಿಡಿ. ಡೈರಿ, ಶುಗರ್ ಫ್ಯಾಕ್ಟರಿ, ಜಿ.ಪಂ ಸೇರಿದಂತೆ ಎಲ್ಲ ಕಡೆಯೂ ಅವರ ಕುಟುಂಬದವರೇ ಇದ್ದಾರೆ. ನಿಮಗಿದ್ದ ಸಹನಾ ಶಕ್ತಿ ನಿಮ್ಮ ಮಕ್ಕಳಿಗಿಲ್ಲ. ಡಿ.ಕೆ.ಶಿವಕುಮಾರ್ ನಿಮಗಾಗಿ ಅಷ್ಟು ಹೊಡೆದಾಡಿದರೂ ಕುಮಾರಸ್ವಾಮಿ ಅವರು ಹೋರಾಟಕ್ಕೆ ಬರಲಿಲ್ಲ. ಇನ್ನಾದರೂ ನಿಮ್ಮ ಕುಟುಂಬ ರಾಜಕಾರಣ ಪರಿಶೀಲನೆ ಮಾಡಿಕೊಳ್ಳಿ ಎಂದು ಹರಿಹಾಯ್ದಿದ್ದಾರೆ.

  • ಕಾಲಿಗೆ ಬೀಳಲು ಮುಂದಾದ ಪ್ರಜ್ವಲ್‍ಗೆ ಕಾಂಗ್ರೆಸ್ ಮುಖಂಡ ಸಲಹೆ

    ಕಾಲಿಗೆ ಬೀಳಲು ಮುಂದಾದ ಪ್ರಜ್ವಲ್‍ಗೆ ಕಾಂಗ್ರೆಸ್ ಮುಖಂಡ ಸಲಹೆ

    ಹಾಸನ: ತನ್ನ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳಲು ಮುಂದಾದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಕಾಂಗ್ರೆಸ್ ಮುಖಂಡ ಸಿ.ಎಸ್ ಪುಟ್ಟೇಗೌಡ ಸಲಹೆ ನೀಡಿದ್ದಾರೆ.

    ದೇವರಿಗೆ ಪೂಜೆ ಮಾಡೋದಕ್ಕೆ ಹೋದಾಗ ಕಾಲಿಗೆ ನಮಸ್ಕಾರ ಮಾಡು. ಆದರೆ ವೋಟು ಕೇಳೋದಕ್ಕೆ ಹೋದಾಗ ನಮಸ್ಕಾರ ಮಾಡಬೇಡ. ಹೀಗೆ ಮಾಡಿದ್ದಲ್ಲಿ ಜನ ಲೀಡರ್ ಎಂದು ನಿನ್ನನ್ನು ಒಪ್ಪಿಕೊಳ್ಳೋದಿಲ್ಲ ಎಂದು ಸಲಹೆ ನೀಡಿದ್ರು. ದಶಕಗಳ ಕಾಲ ಜೆಡಿಎಸ್‍ನಲ್ಲೇ ಇದ್ದ ಪುಟ್ಟೇಗೌಡ ಪ್ರಜ್ವಲ್‍ರನ್ನು ಬೆಂಬಲಿಸುವುದಾಗಿ ಹೇಳಿದರು.

    ಸಚಿವ ರೇವಣ್ಣ ಕುಟುಂಬ ಇಂದು ಕಾಂಗ್ರೆಸ್ ಮುಖಂಡ ಸಿ.ಎಸ್ ಪುಟ್ಟೇಗೌಡ ಅವರನ್ನು ಭೇಟಿ ಮಾಡಿತ್ತು. ಚನ್ನರಾಯಪಟ್ಟಣದಲ್ಲಿರುವ ಸಿ.ಎಸ್ ಪುಟ್ಟೇಗೌಡ ನಿವಾಸಕ್ಕೆ ಭೇಟಿ ಕೊಟ್ಟ ವೇಳೆ ಪ್ರಜ್ವಲ್, ಪುಟ್ಟೇಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳಲು ಮುಂದಾದ್ರು. ಪುಟ್ಟೇಗೌಡರು ಕಾಲಿಗೆ ಬೀಳೋದು ಬೇಡವೆಂದರೂ ಪ್ರಜ್ವಲ್ ತಾಯಿ ಭವಾನಿ ರೇವಣ್ಣ, ಆಶೀರ್ವಾದ ತೆಗೆದುಕೊ ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಪುಟ್ಟೇಗೌಡರು ಈ ಸಲಹೆ ನೀಡಿದ್ದಾರೆ.

    ಕಾಂಗ್ರೆಸ್ ಮುಖಂಡ ಸಿ.ಎಸ್ ಪುಟ್ಟೇಗೌಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರವಣಬೆಳಗೊಳದಿಂದ ಸ್ಪರ್ಧಿಸಿ ಸೋತಿದ್ದರು.