Tag: Puttarangashetty

  • ಸಿಎಂ ಮನಸ್ಸಲ್ಲಿ ನಾನಿದ್ದೇನೆ, ಈ ಬಾರಿ ಸಚಿವ ಸ್ಥಾನ ಸಿಗುತ್ತೆ: ಶಾಸಕ ಪುಟ್ಟರಂಗಶೆಟ್ಟಿ

    ಸಿಎಂ ಮನಸ್ಸಲ್ಲಿ ನಾನಿದ್ದೇನೆ, ಈ ಬಾರಿ ಸಚಿವ ಸ್ಥಾನ ಸಿಗುತ್ತೆ: ಶಾಸಕ ಪುಟ್ಟರಂಗಶೆಟ್ಟಿ

    ಚಾಮರಾಜನಗರ: ಸಿಎಂ ಮನಸ್ಸಿನಲ್ಲಿ ನಾನಿದ್ದೇನೆ, ಈ ಬಾರಿ ಸಚಿವ ಸ್ಥಾನ ಕೊಟ್ಟೆ ಕೊಡ್ತಾರೆಂದು ಚಾಮರಾಜನಗರದಲ್ಲಿ ಶಾಸಕ ಹಾಗೂ ಎಂಎಸ್ಐಎಲ್ ನಿಗಮದ ಅಧ್ಯಕ್ಷ ಪುಟ್ಟರಂಗಶೆಟ್ಟಿ ಹೇಳಿದರು.

    136 ಸೀಟು ಗೆದ್ದು ಸಂಪುಟ ರಚನೆ ವೇಳೆ ನನ್ನ ಹೆಸರಿತ್ತು. ನಂಗೆ ಕಳೆದ ಬಾರಿಯೇ ಸಚಿವ ಸ್ಥಾನ ಕೊಡಬೇಕು ಅಂತಾ ತೀರ್ಮಾನವಾಗಿತ್ತು. ಕಾರಣಾಂತರದಿಂದ ಸಚಿವ ಸ್ಥಾನ ಕೈತಪ್ಪಿ ಹೋಗಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಒಂದು ವರ್ಷ ಉಪ ಸಭಾಪತಿ ಆಗಲೂ ಹೇಳಿದ್ದರು. ಆ ವೇಳೆ ನಾನು ಉಪ ಸಭಾಪತಿ ಸ್ಥಾನ ನಿರಾಕರಿಸಿದ್ದೆ. ಒಂದು ವರ್ಷ ಕಾಲ ಸುಮ್ಮನಿರಲೂ ಸಿಎಂ ಹೇಳಿದ್ದರು ಎಂದು ತಿಳಿಸಿದರು.

    ಈ ಬಾರಿ ಸಂಪುಟ ಪುನಾರಚನೆ ಆದ್ರೆ ಸಚಿವ ಸ್ಥಾನ ಕೊಡ್ತಾರೆ. ಜಾತಿವಾರು, ಜಿಲ್ಲಾವಾರು ನೋಡಿದರು ಕೂಡ ನಂಗೆ ಸಚಿವ ಸ್ಥಾನ ಕೊಡಬೇಕು. ನಾನು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯನಿದ್ದೇನೆ‌. ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ, ಸಿಎಂ ಎಲ್ಲರ ಮೇಲೆ ನಂಬಿಕೆಯಿದೆ. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.

  • ಡೆಪ್ಯುಟಿ ಸ್ಪೀಕರ್ ಬೇಡವೆಂದಿದ್ದ ಪುಟ್ಟರಂಗಶೆಟ್ಟಿ ಯೂ ಟರ್ನ್ – ಕಾಂಗ್ರೆಸ್ ವರಿಷ್ಠರ ನಿರ್ಧಾರಕ್ಕೆ ಒಪ್ಪಿಗೆ

    ಡೆಪ್ಯುಟಿ ಸ್ಪೀಕರ್ ಬೇಡವೆಂದಿದ್ದ ಪುಟ್ಟರಂಗಶೆಟ್ಟಿ ಯೂ ಟರ್ನ್ – ಕಾಂಗ್ರೆಸ್ ವರಿಷ್ಠರ ನಿರ್ಧಾರಕ್ಕೆ ಒಪ್ಪಿಗೆ

    ಚಾಮರಾಜನಗರ: ಉಪ ಸಭಾಪತಿಯಾಗಲು (Deputy Speaker) ಶಾಸಕ ಪುಟ್ಟರಂಗಶೆಟ್ಟಿ (Puttarangashetty) ಕೊನೆಗೂ ಒಪ್ಪಿಗೆ ನೀಡಿದ್ದಾರೆ.

    ಕಾಂಗ್ರೆಸ್ (Congress) ಸರ್ಕಾರದ ಸಂಪುಟ ರಚನೆ ವೇಳೆ ಚಾಮರಾಜನಗರ (Chamarajanagar) ಶಾಸಕ ಪುಟ್ಟರಂಗಶೆಟ್ಟಿಗೆ ಉಪ ಸಭಾಪತಿ ಸ್ಥಾನ ನೀಡಲಾಗಿತ್ತು. ಈ ವೇಳೆ ನನಗೆ ನಿಭಾಯಿಸಲು ಕಷ್ಟವಾಗುತ್ತೆ, ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಳ್ಳಲ್ಲ ಎಂದು ಪುಟ್ಟರಂಗಶೆಟ್ಟಿ ತಿಳಿಸಿದ್ದರು. ಆದರೆ ಇದೀಗ ಅವರು ಯೂ ಟರ್ನ್ ಹೊಡೆದಿದ್ದಾರೆ.

    ಚಾಮರಾಜನಗರದಲ್ಲಿ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, ನಾನು ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡಿದ್ದೇನೆ. ಒಂದು ವರ್ಷದ ನಂತರ ಕಾಂಗ್ರೆಸ್ ವರಿಷ್ಠರು ಸಚಿವ ಸ್ಥಾನ ಕೊಡುವ ಬಗ್ಗೆ ಮಾತು ಕೊಟ್ಟಿದ್ದಾರೆ. ಹೀಗಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಸರಣಿ ಸಭೆ- ಸೋಲಿನ ಪರಾಮರ್ಶೆ ಮಾಡಲಿರುವ ನಾಯಕರು

    ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದು, ವರಿಷ್ಠರು ಹೇಳಿದ್ದನ್ನು ಒಪ್ಪಿಕೊಳ್ಳಲೇ ಬೇಕು. ಸಚಿವ ಸ್ಥಾನ ತಪ್ಪಿದ್ದರಿಂದ ಬೇಸರವಾದರೂ ಹೇಳಿಕೊಳ್ಳಲು ಆಗಲ್ಲ. ಹೈಕಮಾಂಡ್ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ. ಒಂದು ವರ್ಷ ಕೆಲಸ ಮಾಡು ನಂತರ ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಕೂಡ ತಿಳಿಸಿದ್ದಾರೆ ಎಂದು ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮುಂದಿನ ಚುನಾವಣೆಗೆ ಸ್ಪರ್ಧಿಸೋದು ಡೌಟ್? – ರಾಜಕಾರಣ ಬೇಕೋ ಬೇಡ್ವೋ ಎನಿಸಿದೆ ಎಂದ ಡಿಕೆ ಸುರೇಶ್

  • ಗುಜರಾತ್ ಮೂಲದ ಗಣಿ ಉದ್ಯಮಿಗೆ ಶಾಸಕನಿಂದ 9 ಕೋಟಿ ದೋಖಾ ಆರೋಪ

    ಗುಜರಾತ್ ಮೂಲದ ಗಣಿ ಉದ್ಯಮಿಗೆ ಶಾಸಕನಿಂದ 9 ಕೋಟಿ ದೋಖಾ ಆರೋಪ

    ಚಾಮರಾಜನಗರ: ಗುಜರಾತ್ (Gujarat) ಮೂಲದ ಗಣಿ ಉದ್ಯಮಿಯಿಂದ ಗಣಿ ಜಮೀನನ್ನು ಖರೀದಿಸಿ ನೀಡಬೇಕಾಗಿದ್ದ ಹಣದಲ್ಲಿ 9 ಕೋಟಿ ರೂ. ವಂಚಿಸಿರುವ (Fraud) ಆರೋಪ ಚಾಮರಾಜನಗರದ (Chamarajanagar) ಶಾಸಕ ಪುಟ್ಟರಂಗಶೆಟ್ಟಿ (Puttarangashetty) ವಿರುದ್ಧ ಮಾಡಲಾಗಿದೆ. ಶಾಸಕರ ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲಿಸದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ಗುಜರಾತ್‌ನ ಗಣಿ ಉದ್ಯಮಿ ಕಮಲೇಶ್, ನನ್ನ ಜಮೀನನ್ನು ವಾಪಸ್ ಕೊಡಿ, ಅವರು ಕೊಟ್ಟಿರುವ ಹಣವನ್ನು ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಗುಜರಾತ್‌ನ ರಾಜ್ ಕೋಟ್ ನಿವಾಸಿ ಕಮಲೇಶ್ ಅವರು ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಜಮೀನು ಖರೀದಿ ಮಾಡಿ ಸುಮಾರು 8 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು. ಕಾರಣಾಂತರದಿAದ ಶಾಸಕ ಪುಟ್ಟರಂಗಶೆಟ್ಟಿಗೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿದ್ದರು. ಶಾಸಕ ಹಾಗೂ ಶಾಸಕರ ಅಳಿಯ ರಾಮಚಂದ್ರ ಅವರು ಕಮಲೇಶ್ ಜೊತೆ 14 ಕೋಟಿ ರೂ.ಗೆ ಮಾತುಕತೆ ನಡೆಸಿದ್ದಾರೆ.

    ಒಂದು ಕೋಟಿ ರೂ. ಹಣವನ್ನು ಮುಂಗಡವಾಗಿ ಶಾಸಕರ ಖಾತೆಯಿಂದ ಕಮಲೇಶ್ ಖಾತೆಗೆ ವರ್ಗಾವಣೆ ಮಾಡಲಾಗಿದ್ದು, ಬಳಿಕ 2.5 ಕೋಟಿಯನ್ನು ಕೆಲ ತಿಂಗಳ ಬಳಿಕ ಶಾಸಕರು ನೀಡಿದ್ದಾರೆ. ಈ ನಡುವೆ ಗಲಾಟೆಯಿಂದ ಜಮೀನಿನ ಯಾವುದೇ ರಿಜಿಸ್ಟರ್ ಆಗಿಲ್ಲ. ಆದರೆ ಶಾಸಕ ಪುಟ್ಟರಂಗಶೆಟ್ಟಿ ಅಳಿಯ ರಾಮಚಂದ್ರ ಹಾಗೂ ಬೆಂಬಲಿಗ ಶಾಂತ ಕುಮಾರ್ ಕೊಲೆ ಬೆದರಿಕೆ ಹಾಕಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂದು ಕಮಲೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ವೋಟರ್ ಡೇಟಾ ಹಗರಣ ಆರೋಪ- ಸರ್ಕಾರಕ್ಕೆ ಸಿದ್ದರಾಮಯ್ಯ ವಾರ್ನಿಂಗ್

    ಸದ್ಯ 1,200 ಕ್ಯುಬಿಕ್ ಮೀಟರ್ ಕರಿ ಕಲ್ಲನ್ನು ತೆಗೆದಿದ್ದಾರೆ ಎಂದು ಆರೋಪ ಮಾಡಿರುವ ಕಮಲೇಶ್, ಜಮೀನು ವಿಚಾರದಲ್ಲಿ ನಡೆದ ಡೀಲ್‌ನಲ್ಲಿ ಕೊಟ್ಟ ಹಣವನ್ನು ವಾಪಸ್ ಶಾಸಕರಿಗೆ ಕೊಡುತ್ತೇನೆ. ನನ್ನ ಕರಿಕಲ್ಲನ್ನು ವಾಪಸ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಶಾಸಕರ ವಿರುದ್ಧ ದೂರು ನೀಡಿದರೂ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ಸ್ಪೀಕರ್ ಅನುಮತಿ ಬೇಕು ಎಂದು ಪೊಲೀಸರು ಹೇಳುತ್ತಿದ್ದಾರೆ. ಸದ್ಯ ಶಾಸಕರ ಅಳಿಯ ರಾಮಚಂದ್ರ ಹಾಗೂ ಶಾಂತ ಕುಮಾರ್ ವಿರುದ್ಧ ಅಷ್ಟೇ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಬಲ ನಾಯಕನಿಲ್ಲದಿದ್ರೆ ಅಫ್ತಾಬ್‌ನಂಥ ಹಂತಕರು ಪ್ರತಿ ನಗರದಲ್ಲೂ ಹುಟ್ತಾರೆ – ಅಸ್ಸಾಂ ಸಿಎಂ

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಮ್ ಮೆಕ್ಯಾನಿಕ್ ರಿಪೇರಿ ಮಾಡದಿದ್ರೆ ಗಾಡಿ ಓಡ್ತವಾ?: ಶಾಸಕ ಪುಟ್ಟರಂಗಶೆಟ್ಟಿ

    ಮುಸ್ಲಿಮ್ ಮೆಕ್ಯಾನಿಕ್ ರಿಪೇರಿ ಮಾಡದಿದ್ರೆ ಗಾಡಿ ಓಡ್ತವಾ?: ಶಾಸಕ ಪುಟ್ಟರಂಗಶೆಟ್ಟಿ

    ಚಾಮರಾಜನಗರ:  ಮುಸ್ಲಿಮ್ ಮೆಕ್ಯಾನಿಕ್ ರಿಪೇರಿ ಮಾಡದಿದ್ದರೆ ಗಾಡಿ ಓಡ್ತವಾ, ಗಾಡಿ ಕೆಟ್ಟರೆ ಅವರೇ ತಾನೇ ಓಡಿ ಬರೋದು. ಅವರೇನು ನಿನ್ನೆ ಮೊನ್ನೆ ಬಂದು ಸೇರ್ಕೊಂಡಿದಾರಾ? ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರದ್ದೂ ಪಾತ್ರ ಇದೆ. ಆರ್‍ಎಸ್‍ಎಸ್ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಅಂತಾ ಮಾಜಿ ಸಚಿವ, ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು.

    ರಾಜ್ಯದಲ್ಲಿ ಭುಗಿಲೆದ್ದಿರುವ ಧರ್ಮ ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮಾಂಸಾಹಾರ ತಿನ್ನೋರು ಮಾಂಸ ತಿನ್ನಲಿ, ತರಕಾರಿ ತಿನ್ನೋರು ತಿನ್ನಲಿ. ಇನ್ನೊಬ್ಬರ ಮೇಲೆ ಒತ್ತಡ ಹೇರೋಕೆ ನಾವ್ಯಾರು? ಇದೆಲ್ಲ ಬಿಜೆಪಿಯ ಬಂಡವಾಳವಾಗಿದೆ. ಬಿಜೆಪಿಯ ಒಂದೊಂದು ಮುಖವಾಡ ಈಗ ಬಯಲಾಗುತ್ತಿದೆ. ಆರ್‌ಎಸ್‌ಎಸ್‌ ಸೇರಿದಂತೆ ಇತರ ಹಿಂದೂ ಸಂಘಟನೆಗಳೆಲ್ಲ ನಿಜವಾದ ಸಂಘಟನೆಗಳಲ್ಲ. ವೋಟಿಗಾಗಿ ಬಿಜೆಪಿ ಹುಟ್ಟು ಹಾಕಿರುವ ಸಂಘಟನೆಗಳು ಇವೆಲ್ಲಾ ಎಂದರು. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ

    ಸಿದ್ದು ಮುಂದಿನ ಸಿಎಂ ಆಗುತ್ತಾರಾ? ಎನ್ನುವ ಚರ್ಚೆಗೆ ಪ್ರತಿಕ್ರಿಯಿಸಿ, ಅದೆಲ್ಲ ನಂಗೊತ್ತಿಲ್ಲ, ಅದು ವರಿಷ್ಠರಿಗೆ ಬಿಟ್ಟ ವಿಚಾರ. ಕಾಂಗ್ರೆಸ್‍ನಲ್ಲಿ ಯಾವುದೇ ಬಣಗಳಿಲ್ಲ. ಬಿಜೆಪಿಯಲ್ಲಿ 16 ಬಣ ಇವೆ. ಕಾಂಗ್ರೆಸ್‍ನಲ್ಲಿ ಹಂಗೆಲ್ಲ ಇಲ್ಲ. ಯಡಿಯೂರಪ್ಪ ಒಂದು ದಿಕ್ಕು, ಈಶ್ವರಪ್ಪ ಮತ್ತೊಂದು ದಿಕ್ಕು ಇಲ್ವಾ? ಚುನಾವಣೆ ಬಂದಾಗ ಒಗ್ಗಟ್ಟಾಗೋದು ಸಾಮಾನ್ಯ. ಅವರಲ್ಲಿ ಇರುವಷ್ಟು ಭಿನ್ನಮತ ನಮ್ಮಲ್ಲಿ ಇಲ್ಲ. ಬಿಜೆಪಿಯಲ್ಲಿ ಎಲ್ಲರೂ ಮುಸ್ಲಿಮ್‌ರನ್ನ ವಿರೋಧಿಸುತ್ತಿಲ್ಲ. ಸಚಿವ ಡಾ. ಸುಧಾಕರ್ ನೋಡಿ ಹೇಗೆ ತೇಲಿಸಿ ಮಾತನಾಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.  ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ, ಯಾವುದೇ ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ: ಸಿದ್ದರಾಮಯ್ಯ

  • ಸಿದ್ದರಾಮಯ್ಯರಿಗೆ ಕ್ಷೇತ್ರ ಬಿಟ್ಟುಕೊಡಲು ನಾನು ಸಿದ್ಧ: ಪುಟ್ಟರಂಗಶೆಟ್ಟಿ

    ಸಿದ್ದರಾಮಯ್ಯರಿಗೆ ಕ್ಷೇತ್ರ ಬಿಟ್ಟುಕೊಡಲು ನಾನು ಸಿದ್ಧ: ಪುಟ್ಟರಂಗಶೆಟ್ಟಿ

    ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಯಾವ ಜಿಲ್ಲೆಯಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಅವರು ನನ್ನ ಕ್ಷೇತ್ರಕ್ಕೆ ಬಂದರೂ ಬಿಟ್ಟುಕೊಡಲು ಸಿದ್ಧ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

    ಇಂದು ಚಾಮರಾಜನಗರದ ನಗರಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ನಾಯಕರೊಬ್ಬರು ನನ್ನ ಕ್ಷೇತ್ರಕ್ಕೆ ಬಂದರೆ ಅದು ಸೌಭಾಗ್ಯವೇ ಸರಿ. ಹೀಗಾಗಿ ಅವರು ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ನಾನು ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದರು. ಇದನ್ನೂ ಓದಿ: ಫೋಟೋ ತೆಗೆಯುವಾಗ ಪುರುಷರು ಯಾಕೆ ತುಂಬಾ ಕಷ್ಟಪಡುತ್ತಾರೆ?: ರಾಧಿಕಾ ಪಂಡಿತ್

    ಬಾದಾಮಿಯಲ್ಲಿ ಮತ್ತೆ ಸ್ಪರ್ಧಿಸಲು ಚಿಮ್ಮನಕಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ನೀಲ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಈ ನಡುವೆ ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ ಬಂದರೆ ಬಿಟ್ಟುಕೊಡಲು ಸಿದ್ಧವಿದ್ದು, ಚಾಮರಾಜನಗರ ಕ್ಷೇತ್ರ ಮತ್ತಷ್ಟು ಅಭಿವೃದ್ದಿಯಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಯುವ ಮುಖಂಡನನ್ನು ಚಾಕುವಿನಿಂದ ಇರಿದು ಕೊಂದ್ರು!

  • ಲಿಫ್ಟ್‌ನಲ್ಲಿ ಸಿಲುಕಿಕೊಂಡ ಸಚಿವ ಪುಟ್ಟರಂಗಶೆಟ್ಟಿ

    ಲಿಫ್ಟ್‌ನಲ್ಲಿ ಸಿಲುಕಿಕೊಂಡ ಸಚಿವ ಪುಟ್ಟರಂಗಶೆಟ್ಟಿ

    ಕೊಪ್ಪಳ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಕೊಪ್ಪಳದ ಬಿ.ಎಸ್ ಪವಾರ್ ಹೊಟೇಲ್ ಲಿಫ್ಟ್‌ನಲ್ಲಿ 5 ನಿಮಿಷಕ್ಕೂ ಹೆಚ್ಚು ಕಾಲ ಸಿಲುಕಿ ಹಾಕಿಕೊಂಡಿದ್ದರು.

    ಸಚಿವ ಪುಟ್ಟರಂಗಶೆಟ್ಟಿ ಪತ್ರಿಕಾಗೋಷ್ಠಿಗೆ ಲಿಫ್ಟ್‌ನಲ್ಲಿ ಬರುತ್ತಿದ್ದರು. ಈ ವೇಳೆ ಏಕಾಏಕಿ ಲಿಫ್ಟ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಲಿಫ್ಟ್ ನಿಂತು ಹೋಗಿದ್ದು, ಪುಟ್ಟರಂಗಶೆಟ್ಟಿ ಅವರು 5ಕ್ಕೂ ಹೆಚ್ಚು ನಿಮಿಷ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು.

    ಹೋಟೆಲ್ ಸಿಬ್ಬಂದಿ ಲಿಫ್ಟ್ ಕೆಟ್ಟು 5 ನಿಮಿಷದ ಬಳಿಕ ಅದನ್ನು ಸರಿಪಡಿಸಿದ್ದಾರೆ. ಲಿಫ್ಟ್ ಸರಿಪಡಿಸಿದ ಬಳಿಕ ಹೊರಬಂದ ಬಳಿಕ ಸಚಿವ ಪುಟ್ಟರಂಗಶೆಟ್ಟಿ ನಿಟ್ಟುಸಿರು ಬಿಟ್ಟಿದ್ದಾರೆ.

  • ಪಿಎಯಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ

    ಪಿಎಯಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ

    ಚಾಮರಾಜನಗರ: ಆಪ್ತ ಸಹಾಯಕನಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ಕಾರಿನಲ್ಲಿದ್ದ ಚಪ್ಪಲಿಯನ್ನು ಆತ ನನ್ನ ಬಳಿ ತಂದಾಗ ಹಾಗೆ ತರಬಾರದು ಎಂದು ಹೇಳಿದೆ. ನನ್ನ ಚಪ್ಪಲಿ ಮುಟ್ಡಿದ್ದ ಆತನನ್ನು ಮುಟ್ಟಿ ನಮಸ್ಕರಿಸಿ ನಾನೇ ಚಪ್ಪಲಿ ಧರಿಸಿಕೊಂಡಿದ್ದೇನೆ. ನಾನು ಮಾನವೀಯತೆಗೆ ಬೆಲೆ ಕೊಡುವ ಮನುಷ್ಯ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲರನ್ನು ಸರಿಸಮನಾಗಿ ಕಾಣುವ ಗುಣ ನನ್ನದು. ಮಾಧ್ಯಮಗಳಲ್ಲಿ ಬಂದ ವರದಿಯಿಂದ ಮನ ನೊಂದಿದ್ದೇನೆ ಎಂದು ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ಆದರೆ ಪುಟ್ಟರಂಗಶೆಟ್ಟಿ ಚಪ್ಪಲಿ ಹಾಕಿಸಿಕೊಳ್ಳುವಾಗ ಪಿಎಗೆ ನಮಸ್ಕಾರ ಮಾಡಿಕೊಂಡಿಲ್ಲ. ಹೀಗಿದ್ದರೂ ಸಹ ನಾನು ನಮಸ್ಕಾರ ಮಾಡಿದ್ದೇನೆ ಎಂದು ಪುಟ್ಟರಂಗಶೆಟ್ಟಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಡಿಯೋ: ಚಪ್ಪಲಿ ಹಾಕೋದ್ದಕ್ಕೂ ಪಿಎ ಇಟ್ಟುಕೊಂಡ ಸಚಿವ ಸಿ.ಪುಟ್ಟರಂಗಶೆಟ್ಟಿ!

    ಸೋಮವಾರ ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ತಮ್ಮ ಚಪ್ಪಲಿಯನ್ನು ಬಿಟ್ಟು ಎತ್ತಿನಗಾಡಿ ಏರಿದ್ದರು. ಎತ್ತಿನಗಾಡಿಯನ್ನು ಚಾಲನೆ ಮಾಡಿದ ನಂತರ ಅವರು ಕೆಳೆಗಿಳಿದು ನಡೆದು ಬರುತ್ತಿದ್ದಂತೆ ಅವರ ಆಪ್ತ ಸಹಾಯಕ ಪುಟ್ಟರಂಗಶೆಟ್ಟಿಗೆ ಚಪ್ಪಲಿ ತಂದು ತೊಡಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಚಿವ ಸಿ. ಪುಟ್ಟರಂಗಶೆಟ್ಟಿ ಸೌಜನ್ಯಕ್ಕಾದರೂ ಚಪ್ಪಲಿ ತೊಡಿಸುವ ತಮ್ಮ ಆಪ್ತ ಸಹಾಯಕನಿಗೆ ಬೇಡ ಎನ್ನದೇ ಸರ್ವಾಧಿಕಾರಿಯಂತೆ ಚಪ್ಪಲಿ ತೊಡಿಸಿಕೊಂಡು ಏನೂ ಆಗಿಲ್ಲವಂತೆ ನಡೆದು ಮುಂದೆ ಸಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=lPjIVJAvrF8

  • ಅವ್ರ ದರ್ಬಾರ್ ದಸರಾದಲ್ಲಿ ನಡಿಲಿ: ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಪುಟ್ಟರಂಗಶೆಟ್ಟಿ ಕಿಡಿ

    ಅವ್ರ ದರ್ಬಾರ್ ದಸರಾದಲ್ಲಿ ನಡಿಲಿ: ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಪುಟ್ಟರಂಗಶೆಟ್ಟಿ ಕಿಡಿ

    -ಮೈಸೂರು ದಸರಾ ಉಪಾಧ್ಯಕ್ಷ ಸ್ಥಾನಕ್ಕೆ ದೋಸ್ತಿ ಸಚಿವರಲ್ಲಿ ಜಟಾಪಟಿ

    ಚಾಮರಾಜನಗರ: ಮೈತ್ರಿ ಸರ್ಕಾರದಲ್ಲಿ ಕೈ ಹಾಗೂ ತೆನೆ ಸಚಿವರ ವಾಗ್ದಾಳಿ ಮತ್ತೆ ಮುಂದುವರಿದಿದೆ. ಈ ಬಾರಿ ಮೈಸೂರು ದಸರಾ ಸ್ಥಾನಮಾನಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ವಿರುದ್ಧ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಚಿವರು, ಪ್ರತಿ ದಸರಾದಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಶೇಷ ಸ್ಥಾನ ಮಾಡ ನೀಡುವುದು ವಾಡಿಕೆ. ಆದರೆ ಜಿ.ಟಿ.ದೇವೇಗೌಡ ಅವರು ಯಾವುದೇ ವಾಡಿಕೆ ಉಳಿಸಿಲ್ಲ. ಎಲ್ಲವನ್ನೂ ನಾನೇ ಮಾಡುತ್ತೇನೆ ಎನ್ನುತ್ತಾರೆ. ಅವರ ದರ್ಬಾರ್ ದಸರಾದಲ್ಲಿ ನಡೆಯಲಿ. ನಾನು ಮೈಸೂರು ದಸರಾಗೆ ಬರಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ನಮ್ಮನ್ನ ಕರೆಯದೆ ತಮಗೆ ಇಷ್ಟ ಬಂದ ಹಾಗೆ ಮೈಸೂರು ದಸರಾ ಸಮಿತಿಗಳನ್ನು ಮಾಡಿಕೊಂಡರು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಉಪಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಆದರೆ ಸ್ಥಾನ ನೀಡುವುದಿರಲ್ಲಿ ಎಲ್ಲಿಯೂ ನನ್ನ ಹೆಸರನ್ನು ಪ್ರಕಟಿಸಿಲ್ಲ. ಇದೆಲ್ಲ ಆಗಿದ್ದು ಜಿ.ಟಿ.ದೇವೇಗೌಡ ಅವರಿಂದ ಎಂದು ಕಿಡಿಕಾರಿದರು.

    ಈ ಹಿಂದೆ ಆಗಿದ್ದೇನು?:
    ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲವು ದಿನಗಳ ಹಿಂದೆ ಮೈಸೂರು ದಸರಾ ವಿಚಾರವಾಗಿ ಸಭೆ ನಡೆದಿತ್ತು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನನಗೆ ಮೈಸೂರು ದಸರಾದಲ್ಲಿ ಉಪಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಅಷ್ಟೇ ಆಮಂತ್ರಣ ಪತ್ರದಲ್ಲಿ ನನ್ನ ಹೆಸರು ಹಾಗೂ ಫೋಟೋವನ್ನು ಕೂಡ ಸೇರಿಸಿಲ್ಲ. ನಿಮ್ಮ ಇಷ್ಟ ಬಂದ ಹಾಗೆ ಸಮಿತಿ ರಚನೆ ಮಾಡಿರುವಿರಿ ಎಂದು ಸಚಿವ ಪುಟ್ಟರಂಗಶೆಟ್ಟಿ ಅವರು ಜಿ.ಟಿ.ದೇವೇಗೌಡ ಅವರನ್ನು ತರಾಟೆ ತಗೆದುಕೊಂಡಿದ್ದರು.

    ಪುಟ್ಟರಂಗಶೆಟ್ಟಿ ಅವರು ಅಸಮಾಧಾನ ಹೊರಹಾಕುತ್ತಿದ್ದಂತೆ ಮನವೊಲಿಕೆಗೆ ಮುಂದಾದ ಜಿ.ಟಿ.ದೇವೇಗೌಡ, ಆಮಂತ್ರಣದಲ್ಲಿ ಹೆಸರು ಹಾಗೂ ಫೋಟೋ ಹಾಕಿಸುತ್ತೇವೆ. ಉಪಾಧ್ಯಕ್ಷರಾಗಿ ಘೋಷಣೆ ಮಾಡುತ್ತೇನೆ ಎಂದು ಓಲೈಸಿದ್ದರು. ಆದರೆ ದಸರಾ ಉಪಾಧ್ಯಕ್ಷರಾಗಿ ಪುಟ್ಟರಂಗನಶೆಟ್ಟಿ ಅವರ ಹೆಸರು ಇದ್ದರೂ, ಎಲ್ಲಿಯೂ ಪ್ರಸ್ತಾಪ ಮಾಡಿಲ್ಲವಂತೆ. ಇದರಿಂದಾಗಿ ಇಬ್ಬರು ಸಚಿವರ ನಡುವೆ ಜಟಾಪಟಿ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾವು ಮನಸ್ಸು ಮಾಡಿದ್ರೆ ಅವನನ್ನು ಕಿತ್ತುಹಾಕ್ತೀವಿ: ಎನ್.ಮಹೇಶ್‍ಗೆ ಪುಟ್ಟರಂಗಶೆಟ್ಟಿ ಎಚ್ಚರಿಕೆ

    ನಾವು ಮನಸ್ಸು ಮಾಡಿದ್ರೆ ಅವನನ್ನು ಕಿತ್ತುಹಾಕ್ತೀವಿ: ಎನ್.ಮಹೇಶ್‍ಗೆ ಪುಟ್ಟರಂಗಶೆಟ್ಟಿ ಎಚ್ಚರಿಕೆ

    – ಕಾರವಾರದಲ್ಲಿ ಮತ್ತೆ ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಿದ ಸಚಿವ ಎನ್.ಮಹೇಶ್

    ಚಾಮರಾಜನಗರ/ಕಾರವಾರ: ಶಾಸಕರ ಬಂಡಾಯದ ಬಳಿಕ ಈಗ ಎಚ್‍ಡಿಕೆ ಸಂಪುಟದ ಮಂತ್ರಿಗಳೇ ಪರಸ್ಪರ ವಾಗ್ದಾಳಿ ನಡೆಸಿ ಸುದ್ದಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಏಕವಚನದಲ್ಲೇ ತಿರುಗೇಟು ಕೊಟ್ಟಿದ್ದಾರೆ.

    ಅವನ್ಯಾರು ಕಾಂಗ್ರೆಸ್ಸನ್ನು ಕಿತ್ತು ಹಾಕೋದಕ್ಕೆ. ನಾವು ಮನಸ್ಸು ಮಾಡಿದರೆ ಅವನನ್ನೇ ಕಿತ್ತು ಹಾಕುತ್ತೇವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರು ಎನ್.ಮಹೇಶ್ ವಿರುದ್ಧ ಗುಡುಗಿದ್ದಾರೆ.

    ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಚಿವ ಸಂಪುಟದ ಸಹೋದ್ಯೋಗಿ ಎನ್.ಮಹೇಶ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಸಮ್ಮಿಶ್ರ ಸರ್ಕಾರದಲ್ಲಿ 79 ಜನ ಕಾಂಗ್ರೆಸ್ ಹಾಗೂ 36 ಮಂದಿ ಜೆಡಿಎಸ್ ಶಾಸಕರಿದ್ದಾರೆ. ಅವರು ಒನ್ ಮ್ಯಾನ್ ಆರ್ಮಿ. ನಾವು ಮನಸ್ಸು ಮಾಡಿದರೆ ಸರ್ಕಾರದಿಂದ ಹೊರಗೆ ಉಳಿಯಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

    ಈಗಷ್ಟೇ ಎನ್.ಮಹೇಶ್ ಸಚಿವರಾಗಿ ನೇಮಕಗೊಂಡಿದ್ದಾರೆ. ಅದನ್ನು ಬಳಸಿಕೊಂಡು ಸಾಧನೆ ಮಾಡಲಿ. ಆದರೆ ಹೀಗೆ ಸರ್ಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ. ಸಚಿವರ ಈ ಹೇಳಿಕೆಗಾಗಿಯೇ ಪ್ರತ್ಯೇಕ ಸುದ್ದಿಗೋಷ್ಠಿ ಕರೆದು ಸೂಕ್ತ ಉತ್ತರ ಕೊಡುತ್ತೇನೆ ಎಂದರು.

    ಕಾರವಾರದಲ್ಲಿ ಎನ್ ಮಹೇಶ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ತಾನು ದೊಡ್ಡಣ್ಣ ಎನ್ನುವ ಅಹಂನಿಂದ ಕೆಳಗಿಳಿಯಬೇಕು. ಕಾಂಗ್ರೆಸ್ಸಿಗರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ಅವರು ಕೆಳಗಿಳಿದಾಗ ನಾವು ಅವರ ಜೊತೆ ಕೈಜೋಡಿಸುತ್ತೇವೆ ಎಂದು ಹೇಳಿದರು.

    ಛತ್ತಿಸ್‍ಗಢದಲ್ಲಿ ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇತ್ತ ರಾಜ್ಯದಲ್ಲಿ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತಿದೆ. ಕೊಡಗು, ಮಲೆನಾಡು ಭಾಗದ ಹಾಗೂ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಚುನಾವಣೆ ನೀತಿ ಸಂಹಿತೆಯಿಂದಾಗಿ ಮಕ್ಕಳಿಗೆ ಸೈಕಲ್ ವಿತರಣೆ ತಡವಾಗಿದ್ದು, ಶೀಘ್ರದಲ್ಲಿ ವಿತರಿಸಲಾಗುವುದು. ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಾತೃ ಭಾಷೆ ಜೊತೆಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಲು ಮುಖ್ಯಮಂತ್ರಿಗಳ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲಿಯೇ ಜಾರಿಗೆ ತರುತ್ತೇವೆ ಎಂದರು.

    ಎನ್.ಮಹೇಶ್ ಹೇಳಿದ್ದು ಏನು?
    ಚಾಮರಾಜನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು, ಕಾಂಗ್ರೆಸ್ ಗಿಡವನ್ನು ಕಡಿಯುವ ಕೆಲಸವನ್ನು ಮಾಡಿದ್ದೇವೆ ಅಂತ ಕಾಂಗ್ರೆಸ್ ವಿರುದ್ಧ ವಿಡಂಬನಾತ್ಮಕ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಗಿಡ ತುಂಬಾ ಅಪಾಯಕಾರಿ, ಹೀಗಾಗಿ ಅದನ್ನು ಕಡಿಯುವ ಕೆಲಸ ಮಾಡಿದ್ದೇವೆ ಎಂದರು. ಆಗ ಕಾರ್ಯಕರ್ತರು ಸಾರ್ ಅದು ಪಾರ್ಥೆನಿಯಂ ಗಿಡ ಎಂದಿದ್ದಾರೆ. ಆದರೂ ಸಹ ಅದು ಕಾಂಗ್ರೆಸ್ ಗಿಡ ಅದನ್ನು ಕಿತ್ತು ಹಾಕಿದ್ದೀವಿ ಎಂದು ಹೇಳಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ? ಪುಟ್ಟರಂಗ ಶೆಟ್ಟಿಗೆ ಮಾಜಿ ಸಿಎಂ ಪ್ರಶ್ನೆ

    ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ? ಪುಟ್ಟರಂಗ ಶೆಟ್ಟಿಗೆ ಮಾಜಿ ಸಿಎಂ ಪ್ರಶ್ನೆ

    ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ನಗುತ್ತಲೇ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

    ಪುಟ್ಟರಂಗಶೆಟ್ಟಿ ಅವರು ಸಿದ್ದರಾಮಯ್ಯನವರ ಮನೆಗೆ ಭೇಟಿ ಮಾಡಲು ಬಂದಾಗ, “ಏನ್ ಪುಟ್ಟರಂಗ ಶೆಟ್ಟರೇ ಅಧಿಕಾರ ಸ್ವೀಕಾರ ಮಾಡಿದ್ರಾ? ಅಧಿಕಾರಿಗಳ ಜೊತೆ ಸಭೆ ನಡೆಸಿದ್ರಾ? ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ, ಅಧಿಕಾರ ತೆಗೆದುಕೊಂಡಿದ್ದೀನಿ ಸಭೆ ನಡೆಸಿಲ್ಲ ಎಂದು ಉತ್ತರಿಸಿದ್ದಾರೆ.

    ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ ಅಥವಾ ಇಲ್ವಾ?. ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅಲ್ಲದೇ ಸಿರಿ ಬಂದೋರಿಗೆ ಜನ ಕಣ್ಣಿಗೆ ಕಾಣೋಲ್ಲ ಎಂಬ ಮಾತಿದೆ. ನೀವು ಆ ರೀತಿ ಆಗಬೇಡಿ ಎಂದು ಜನಪರ ಕೆಲಸಗಳನ್ನು ಮಾಡಿ ಎಂದು ಸಲಹೆ ನೀಡಿದರು.