Tag: puttannayya

  • ಮೇಲುಕೋಟೆಯಲ್ಲಿ ಅಭ್ಯರ್ಥಿ ಕಣಕ್ಕಿಳಿಸದೇ ಸಂಕಷ್ಟಕ್ಕೀಡಾದ ಸಿದ್ದರಾಮಯ್ಯ

    ಮೇಲುಕೋಟೆಯಲ್ಲಿ ಅಭ್ಯರ್ಥಿ ಕಣಕ್ಕಿಳಿಸದೇ ಸಂಕಷ್ಟಕ್ಕೀಡಾದ ಸಿದ್ದರಾಮಯ್ಯ

    ಮಂಡ್ಯ: ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೇ ಇದ್ದಿದ್ದು ಕಾಂಗ್ರೆಸ್‍ಗೆ ಈಗ ಕಂಟಕವಾಗಿದೆ. ಅಷ್ಟೇ ಅಲ್ಲ ಈ ಮ್ಯಾಟರ್ ಈಗ ಕೋರ್ಟ್ ಮೆಟ್ಟಿಲು ಕೂಡ ಏರಲಿದೆ.

    ಹೌದು. ಮೇಲುಕೋಟೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಆನಂದ್, ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ರು. ಜೊತೆಗೆ ಇಪ್ಪತ್ತೈದು ಸಾವಿರ ದುಡ್ಡು ಕೂಡ ಕಟ್ಟಿದ್ರು. ಆದ್ರೆ ಈಗ ಕಾಂಗ್ರೆಸ್ ಮೇಲುಕೋಟೆಯಲ್ಲಿ ದಿ. ಪುಟ್ಟಣ್ಣಯ್ಯನವರ ಮಗ ದರ್ಶನ್ ಪುಟ್ಟಣಯ್ಯನವರಿಗೆ ಬೆಂಬಲ ನೀಡೋದಾಗಿ ಘೋಷಿಸಿದ್ದು, ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಕ್ರಿಯೆಯಿಂದ ಹಿಂದೆ ಸರಿದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆಗೆ ಇಂದು ಅಧಿಸೂಚನೆ – ಏಪ್ರಿಲ್ 24ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ

    ಇದ್ರಿಂದ ಸಿಟ್ಟಿಗೆದ್ದ ಟಿಕೆಟ್ ಆಕಾಂಕ್ಷಿ ಆನಂದ್, ಸಿಎಂ ಇದಕ್ಕೆಲ್ಲ ಸೂತ್ರದಾರ, ಅಭ್ಯರ್ಥಿಯನ್ನು ಕಣಕ್ಕಿಳಿಸಲ್ಲ ಅಂದ ಮೇಲೆ ಅರ್ಜಿ ಸ್ವೀಕರಿಸಿದ್ಯಾಕೆ? ಇದು ಕಾನೂನು ಬಾಹಿರ, ನಾನು ಸಿಎಂ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತೇನೆ ಅಂತಾ ಹೇಳಿದ್ದಾರೆ. ಅಷ್ಟೇ ಅಲ್ಲ ಮೇಲುಕೋಟೆಯಲ್ಲಿ ಟಿಕೆಟ್ ಸಿಗದಿರುವ ಹಿನ್ನೆಲೆ ಚಾಮುಂಡೇಶ್ವರಿಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಅಂತಾ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕೊನೆಗೂ ರಿಲೀಸ್ ಆಯ್ತು ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ -ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

     

  • ನಾವು ನಿಯತ್ತಿನ ನಾಯಿಗಳು, ಅನಂತ್‍ಕುಮಾರ್ ಹೆಗ್ಡೆ ಹುಚ್ಚು ನಾಯಿ: ಶಾಸಕ ಪುಟ್ಟಣ್ಣಯ್ಯ

    ನಾವು ನಿಯತ್ತಿನ ನಾಯಿಗಳು, ಅನಂತ್‍ಕುಮಾರ್ ಹೆಗ್ಡೆ ಹುಚ್ಚು ನಾಯಿ: ಶಾಸಕ ಪುಟ್ಟಣ್ಣಯ್ಯ

    ಮಂಡ್ಯ: ಚಳವಳಿ ಮಾಡುವವರು ನಾಯಿಗಳು ಎನ್ನುವುದಾದರೆ, ಈ ರೀತಿ ಹೇಳುವವರು ಹುಚ್ಚುನಾಯಿಗಳಾಗಿರಬೇಕು ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ವಿರುದ್ಧ ರೈತ ನಾಯಕ, ಮೇಲುಕೋಟೆ ಶಾಸಕ ಕೆ ಎಸ್ ಪುಟ್ಟಣ್ಣಯ್ಯ ವಾಗ್ದಾಳಿ ನಡೆಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಳವಳಿಗಾರರನ್ನು ಗೌರವಿಸುವ ಜ್ಞಾನವಿಲ್ಲದ ಸಚಿವರು, ನಾಯಿಗಳು ಎಂದು ಹೇಳುತ್ತಾರೆ. ಆದರೆ, ಹೋರಾಟ ಮಾಡುವ ನಾವುಗಳೆಲ್ಲಾ ನಿಯತ್ತಿನ ನಾಯಿಗಳು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತನಾಡುತ್ತಾರೆ. ಜೊತೆಗೆ ಅವರು ಸಂವಿಧಾನ ಬದಲಾಯಿಸುತ್ತೇನೆ ಎನ್ನುತ್ತಾರೆ. ನಮಗೆ ತುರ್ತಾಗಿ ಇವರು ಬದಲಾಗಬೇಕಿದೆ ಎಂದರು.

    ಇತ್ತೀಚಿಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಸಿಪಿ ಯೋಗೇಶ್ವರ್ ಅವರು ಪರಿವರ್ತನಾ ಯಾತ್ರೆ ವೇಳೆ ರೈತ ಸಂಘದ ಬಗ್ಗೆ ಮಾತನಾಡಿದ್ದಾರೆ. ಕ್ಷೇತ್ರದಲ್ಲಿ ಕೆರೆ ತುಂಬಿಸಿಲ್ಲ ಅಂತ ಟೀಕಿಸಿದ್ದಾರೆ. ಆದರೆ, ರೈತ ಸಂಘದ ಬಗ್ಗೆ ಮಾತನಾಡುವ ನೈತಿಕತೆ ಯೋಗೇಶ್ವರ್‍ಗೆ ಎಲ್ಲಿದೆ. ಆತ ಗದ್ದೆಗೆ ಯಾವತ್ತು ಹೋಗಿದ್ದರು. ಪಕ್ಷದಿಂದ ಪಕ್ಷಕ್ಕೆ ಹೋಗುವ ಅವರು ನಮ್ಮ ಬಗ್ಗೆ ಏನು ಮಾತನಾಡುತ್ತಾರೆ. ಹಿಂದೊಮ್ಮೆ ಅವರ ಚಿತ್ರದಲ್ಲಿ ನಾನು ಕೂಡ ಅಭಿನಯ ಮಾಡಿದ್ದೆ. ಆದರೀಗ ನನಗೆ ಟಾಂಗ್ ಕೊಡುತ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

    ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾತ್ರೆಗಳ ಬಗ್ಗೆಯೂ ಟೀಕಿಸಿದ ಪುಟ್ಟಣ್ಣಯ್ಯ, ಈ ಬಾರಿ ಕೆಟ್ಟ ರಾಜಕೀಯ ಪರಿಸ್ಥಿತಿ ಇದೆ. ನಮ್ಮ ಸ್ವರಾಜ್ ಇಂಡಿಯಾ ಪಕ್ಷದಿಂದ 15 ರಿಂದ 20 ಅಭ್ಯರ್ಥಿಗಳನ್ನು ಆಯ್ಮೆ ಮಾಡಿಕೊಡಲಾಗಿದೆ. ಉಳಿದ ಕ್ಷೇತ್ರಕ್ಕೂ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದೆ. ಇನ್ನು ರಾಜಕೀಯಕ್ಕೆ ನನ್ನ ಮಗ ಬರುವುದು, ಬಿಡುವುದು ಅವನಿಗೆ ಬಿಟ್ಟ ವಿಚಾರ ಎಂದರು.

    https://www.youtube.com/watch?v=ZXAssO6WKFM

  • ಕಟ್ಕೊಂಡ ಹೆಂಡ್ತಿಯನ್ನೇ ಕಾಡಿಗಟ್ಟಿದವನ ಯಾಕ್ ಪೂಜಿಸ್ತೀರಾ- ರಾಮನ ಬಗ್ಗೆ ಪುಟ್ಟಣ್ಣಯ್ಯ ಆಕ್ಷೇಪಾರ್ಹ ಹೇಳಿಕೆ

    ಕಟ್ಕೊಂಡ ಹೆಂಡ್ತಿಯನ್ನೇ ಕಾಡಿಗಟ್ಟಿದವನ ಯಾಕ್ ಪೂಜಿಸ್ತೀರಾ- ರಾಮನ ಬಗ್ಗೆ ಪುಟ್ಟಣ್ಣಯ್ಯ ಆಕ್ಷೇಪಾರ್ಹ ಹೇಳಿಕೆ

    ಬೆಂಗಳೂರು: ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ಶ್ರೀರಾಮನನ್ನು ಯಾಕೆ ಪೂಜಿಸ್ತೀರಿ ಎನ್ನೋ ಹೇಳಿಕೆ ನೀಡುವ ಮೂಲಕ ಮೇಲುಕೋಟೆ ಶಾಸಕ ಕೆ ಎಸ್ ಪುಟ್ಟಣ್ಣಯ್ಯ ಇದೀಗ ವಿವಾದಕ್ಕೀಡಾಗಿದ್ದಾರೆ.

    ಟೌನ್‍ಹಾಲ್‍ನಲ್ಲಿ ನಡೆದ ಎಡಪಂಥಿಯರ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ, ಮಹಿಳೆಯರು ಹುಷಾರಾಗಿರಬೇಕು. ಜಗತ್ತಿನಲ್ಲಿ ಗಂಡ-ಹೆಂಡಿತಿಗೆ ಜಗಳ ಆಗಿ ಯಾರಾದ್ರೂ ತುಂಬು ಬಸಿರನ್ನು ಕಾಡಿಗಟ್ಟುತ್ತಾರೆಯೇ? ಅವರ ಅಪ್ಪನ ಮನೆಗೆ ಕಳುಹಿಸಿ ಬಳಿಕ ಮತ್ತೆ ಕರೆಸಿಕೊಳ್ಳುತ್ತಾರೆ. ಹೀಗಾಗಿ ತುಂಬು ಬಸ್ರಿನ ಕಾಡಿಗಟ್ಟಿದವನ್ನ ನೀವು ಟಿವಿ ಮುಂದೆ ರಾಮ ರಾಮ ಅಂತ ರಂಗೋಲಿ ಹಾಕ್ತೀರಲ್ವಾ ಇದ್ಯಾನ ನ್ಯಾಯ ಅಂತ ಹೇಳಿದ್ದಾರೆ.

    ಕಟ್ಟಿಕೊಂಡ ಹೆಂಡ್ತಿಯನ್ನೇ ಕಾಡಿಗೆ ಅಟ್ಟಿದವನು ಅವನು, ಅವನಿಗ್ಯಾಕೆ ಪೂಜೆ-ಪುನಸ್ಕಾರ ಅಂತ ಹೇಳುವ ಮೂಲಕ `ಮರ್ಯಾದಾ ಪುರುಷೋತ್ತಮ’ ಎಂದು ಪೂಜಿಸುವ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಮತ್ತು ಮೋದಿಯನ್ನು ತೆಗಳುವ ಭರದಲ್ಲಿ ರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    https://www.youtube.com/watch?v=FnNjQckQklk