Tag: Puttagowri Maduve

  • ನೂತನ ಮನೆಗೆ ಕಾಲಿಟ್ಟ ‘ನಾಗಿಣಿ 2’ ಖ್ಯಾತಿಯ ನಮ್ರತಾ ಗೌಡ

    ನೂತನ ಮನೆಗೆ ಕಾಲಿಟ್ಟ ‘ನಾಗಿಣಿ 2’ ಖ್ಯಾತಿಯ ನಮ್ರತಾ ಗೌಡ

    ಪುಟ್ಟ ಗೌರಿ ಮದುವೆ, ನಾಗಿಣಿ 2 (Nagini 2) ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ನಮ್ರತಾ ಗೌಡ (Namratha Gowda) ತಮ್ಮ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ನೂತನ ಮನೆಗೆ ನಟಿ ಕಾಲಿಟ್ಟಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.‌ಇದನ್ನೂ ಓದಿ:ದರ್ಶನ್‌ ಜೊತೆ ಆಕ್ಟ್‌ ಮಾಡಿದ್ದಕ್ಕೆ ತುಂಬಾ ಖುಷಿಯಿದೆ- ‘ಕಾಟೇರ’ ನಟಿ

    ನಮ್ರತಾ ಅವರ ಹೊಸ ಮನೆ ಗೃಹಪ್ರವೇಶ (House Warming) ಸಮಾರಂಭ ಗ್ರ್ಯಾಂಡ್ ಆಗಿ ನಡೆದಿದೆ. ಕಿರುತೆರೆಯ ಹಲವು ಕಲಾವಿದರು ಭಾಗಿಯಾಗಿದ್ದಾರೆ.

    ಬಿಗ್ ಬಾಸ್ ಕಿಶನ್, ನೇಹಾ ಗೌಡ, ಕವಿತಾ ಗೌಡ, ಅನುಪಮಾ, ಸಿಂಗರ್ ಕಾರ್ತಿಕ್ ಶರ್ಮಾ, ಯಶಸ್ವಿನಿ ಸೇರಿದಂತೆ ಹಲವರು ಸಾಕ್ಷಿಯಾಗಿದ್ದಾರೆ.

    ಗೃಹಪ್ರವೇಶದ ಸಮಾರಂಭದಲ್ಲಿ ನಮ್ರತಾ ಗೌಡ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಸೀರೆಯುಟ್ಟು ನಟಿ ಕಂಗೊಳಿಸಿದ್ದಾರೆ. ಕಿಶನ್ ಜೊತೆ ಚೆಂದದ ಹಾಡಿಗೆ ಹೆಜ್ಜೆ ಕೂಡ ಹಾಕಿದ್ದಾರೆ.

    ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಮ್ರತಾ, ಟಿವಿ ಸೀರಿಯಲ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂಬರುವ ಬಿಗ್ ಬಾಸ್ ಸೀಸನ್ 10ಕ್ಕೆ (Bigg Boss Kannada) ನಮ್ರತಾ (Namratha Gowda) ಕಾಲಿಡುತ್ತಾರೆ ಎಂದು ಹೇಳಲಾಗುತ್ತಿದೆ. ದೊಡ್ಮನೆಗೆ ಕಾಲಿಡುವ ಮುನ್ನ ಹೊಸ ಮನೆಗೆ ಕಾಲಿಡುವ ನಿರ್ಧಾರಾ ಮಾಡಿದ್ರಾ? ಎಂಬ ಗುಸು ಗುಸು ಶುರುವಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ರ್ಯಾಂಡ್ ಆಗಿ ಬರ್ತ್‌ಡೇ ಆಚರಿಸಿಕೊಂಡ ನಟಿ ನಮ್ರತಾ ಗೌಡ

    ಗ್ರ್ಯಾಂಡ್ ಆಗಿ ಬರ್ತ್‌ಡೇ ಆಚರಿಸಿಕೊಂಡ ನಟಿ ನಮ್ರತಾ ಗೌಡ

    ಕಿರುತೆರೆ ನಟಿ ನಮ್ರತಾ ಗೌಡ (Namratha Gowda) ಇತ್ತೀಚಿಗೆ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ‘ನಾಗಿಣಿ 2’ ನಟಿಯ ಹುಟ್ಟುಹಬ್ಬಕ್ಕೆ ಕಿರುತೆರೆ ನಟ-ನಟಿಯರು ಭಾಗಿಯಾಗಿ ಶುಭಹಾರೈಸಿದ್ದಾರೆ. ಈ ಕುರಿತ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Namratha (@namratha__gowdaofficial)

    ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ನಮ್ರತಾ ಗೌಡ ಅವರು ಸಾಕಷ್ಟು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದಾರೆ. ಬಳಿಕ ಪುಟ್ಟಗೌರಿ ಮದುವೆ, ನಾಗಿಣಿ 2 (Nagini 2) ಸೀರಿಯಲ್‌ಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಾಗಿಣಿ 2 ಸೀರಿಯಲ್ ಮುಗಿದ ಮೇಲೆ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಹೊಸ ಬಗೆಯ ವಿಚಾರಗಳನ್ನ ಶೇರ್ ಮಾಡುತ್ತಾರೆ.

     

    View this post on Instagram

     

    A post shared by Namratha (@namratha__gowdaofficial)

    ಇತ್ತೀಚಿಗೆ ನಟಿ ನಮ್ರತಾ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಬಿಳಿ ಬಣ್ಣದ ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದರು. ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಒಂದು ಇಡ್ಲಿ, ಒಂದು ವಡೆ ತಗೊಂಡು ಗಲಾಟೆ ಮಾಡಿದ ರಾಖಿ ಸಾವಂತ್

     

    View this post on Instagram

     

    A post shared by Namratha (@namratha__gowdaofficial)

    ನಮ್ರತಾ ಬರ್ತ್‌ಡೇ ಸಂಭ್ರಮದಲ್ಲಿ ಬಿಗ್ ಬಾಸ್ ಕಿಶನ್, ನಾಗಿಣಿ ಹೀರೋ ನಿನಾದ್, ಐಶ್ವರ್ಯ, ಗಟ್ಟಿಮೇಳ ನಟ ರಕ್ಷ್, ನಟ ದೀಪಕ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನಮ್ರತಾಗೆ ವಿಶ್ ಮಾಡಿದ್ದಾರೆ.

  • ವಾರಕ್ಕೆ 10ರೂ.ನಂತೆ ಇನ್‍ಸ್ಟಾಲ್ಮೆಂಟ್‍ನಲ್ಲಿ ಸೀರೆ ಖರೀದಿಸ್ತಿದ್ದ ಅಜ್ಜಮ್ಮ!

    ವಾರಕ್ಕೆ 10ರೂ.ನಂತೆ ಇನ್‍ಸ್ಟಾಲ್ಮೆಂಟ್‍ನಲ್ಲಿ ಸೀರೆ ಖರೀದಿಸ್ತಿದ್ದ ಅಜ್ಜಮ್ಮ!

    – ಮಗನ ಆರೋಗ್ಯದ ಬಗ್ಗೆ ಕಣ್ಣೀರಿಟ್ಟ ಸ್ಪರ್ಧಿ

    ಬೆಂಗಳೂರು: ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್‍ಬಾಸ್ ಸೀಸನ್ 8ಕ್ಕೆ ಎಲ್ಲರೂ ಕುತೂಹಲದಿಂದ ಕಾದು ಕುಳಿತಿದ್ದರು. ಇದೀಗ ಈ ರಿಯಾಲಿಟಿ ಶೋ ಆರಂಭವಾಗಿದ್ದು, ಒಟ್ಟು 17 ಮಂದಿ ಸ್ಪರ್ಧಿಗಳು ಬಿಗ್ ಮನೆಯ ಒಳ ಹೊಕ್ಕಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟದ ಬೇರೆ ಬೇರೆ ಭಾಗಗಳಿಂದ ವಿವಿಧ ಟ್ಯಾಲೆಂಟ್‍ಗಳನ್ನು ಹೊತ್ತು ಸ್ಪರ್ಧಿಗಳು ಬಿಗ್ ಮನೆಯ ಒಳಗೆ ಹೋಗಿದ್ದಾರೆ. ಅವರಲ್ಲಿ ಚಂದ್ರ ಕಲಾ ಮೋಹನ್ ಕಥೆ ಸ್ವಲ್ಪ ವಿಭಿನ್ನವಾಗಿಯೇ ಕಾಣಿಸುತ್ತಿದೆ.

    ಹೌದು. ಪುಟ್ಟಗೌರಿಯ ಧಾರಾವಾಹಿಯ ಮೂಲಕ ಅಜ್ಜಮ್ಮ ಅಂತಾನೇ ಚಿರಪರಿಚಿತರಾಗಿರುವ ಚಂದ್ರಕಲಾ ನಡೆದು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಜ್ಜಮ್ಮ, ಆ ನಂತರ ಜೀವನ ನಡೆಸಿದ್ದೇ ಬಲು ರೋಚಕ. ಈ ಎಲ್ಲಾ ವಿಚಾರಗಳನ್ನು ಅಜ್ಜಮ್ಮ ಬಿಗ್ ಮನೆಯ ಒಳಗಡೆ ಹೋಗುವುದಕ್ಕೂ ಮುನ್ನ ಬಿಡುಗಡೆ ಮಾಡಿದ್ದ ಪ್ರೋಮೋದಲ್ಲಿ ಬಯಲು ಮಾಡಿದ್ದಾರೆ.

    ಚಿಕ್ಕ ವಯಸ್ಸಿನಿಂದಲೂ ಜೀವನ ಕಟ್ಟಿಕೊಳ್ಳಲು ಅಜ್ಜಮ್ಮ ಸಾಕಷ್ಟು ಹೆಣಗಾಡಿದ್ದಾರೆ. 10 ವರ್ಷವಾಗಿದ್ದಾಗಲೇ ಚಂದ್ರಕಲಾ ಡ್ರಾಮಾ ಫೀಲ್ಡ್ ಗೆ ಇಳಿದಿದ್ದಾರೆ. ಅದೊಂಥರ ಕಷ್ಟದ ಜೀವನವಾಗಿದ್ದು, ಹಳ್ಳಿಗಳ ಕಡೆ ಹೋಗಿ ನೆರೆದ ಜನರ ಮುಂದೆಯೇ ನಾಟಕ ಮಾಡಬೇಕಾಗಿತ್ತು. ಹೀಗಾಗಿ ಅಲ್ಲೆಲ್ಲಾ ನಾವು ಜಯಿಸಿ ಬರುವುದು ತುಂಬಾ ಕಷ್ಟವಾಗಿತ್ತು. ಚಿಕ್ಕವಯಸ್ಸಿನಲ್ಲಿಯೇ ಮದುವೆ ಆಯಿತು. ನಂತರ ಮಗುನೂ ಆಯ್ತು. ಆ ಬಳಿಕದ ಜೀವನ ತುಂಬಾ ಸವಾಲಾಗಿತ್ತು. ಎತ್ತರಕ್ಕೆ ದೊಡ್ಡವನಾಗಿ ಬೆಳೆದವನು ಎಲ್ಲರ ಮುಂದೆ ಚಿಕ್ಕವನಾಗಿ ಬಾಳಬೇಕು ಅನ್ನೋ ಗಾದೆ ಇದೆ. ಆ ಲೈಫ್ ತುಂಬಾ ದೊಡ್ಡದಾಗಿರುತ್ತದೆ, ಚಿಕ್ಕದಾಗಿದ್ದು, ನಾನು ತುಂಬಾ ದೊಡ್ಡದಾಗಿ ಬೆಳೆದಿದ್ದೀನಿ ಅಂತ ತೋರಿಸಿಕೊಳ್ಳುವುದು ತುಂಬಾ ತಪ್ಪು. ಅದು ನನಗೆ ಇಷ್ಟವಿಲ್ಲ ಎಂದು ಅಜ್ಜಮ್ಮ ಹೇಳುತ್ತಾರೆ.

    ಜೀವನದಲ್ಲಿ ಯಶಸ್ಸು ಸಿಗಬಹುದು ಅಥವಾ ಸಿಗದೇ ಇರಬಹುದು, ಕಷ್ಟ ಇರಬಹುದು ಅಥವಾ ಸುಖ ಇರಬಹುದು ಆದರೆ ನಾನು ಒಂದೇ ರೀತಿಯಲ್ಲಿ ಇರುತ್ತೇನೆ. ನಾನು ಯಾವುದೇ ಕಾರಣಕ್ಕೂ ಬದಲಾಗಲ್ಲ. ನಾವು ಕನ್ನಡಿ ಮುಂದೆ ನಿಂತಾಗ ಅದು ನಾವೇನು ಅನ್ನೋದನ್ನು ತೋರಿಸುತ್ತದೆ. ಇಲ್ಲಿ ನಾವು ಏನೋ ವೇಷ ಹಾಕ್ಕೊಂಡ್ರೆ ಕನ್ನಡಿ ನಿನಗೆ ಏ ಥೂ.. ಬೇಕಾ ನಿನಗೆ ಈ ಜೀವನ ಅನ್ನುತ್ತೆ. ನನಗೆ ಅದು ಮಾಡ್ಕೊಳ್ಳೋಕೆ ಇಷ್ಟವಿಲ್ಲ. ಒಬ್ಬ ಒಳ್ಳೆಯ ವ್ಯಕ್ತಿ ಕೆಟ್ಟವನಾಗುವುದಕ್ಕೂ, ಕೆಟ್ಟ ವ್ಯಕ್ತಿ ಒಳ್ಳೆಯವನಾಗುವುದಕ್ಕೂ ಮೂಲೆಯಲ್ಲಿ ಕುಳಿತಿರುವ ವ್ಯಕ್ತಿ ದುಡಿದು ತಿನ್ನಬೇಕು ಎಂಬ ಹಠ ಬರುವುದಕ್ಕೂ ಹೀಗೆ ಎಲ್ಲದಕ್ಕೂ ಕಾರಣ ಒಂದೇ ಉತ್ತರ ಜೀವನ ಎಂದು ಅಜ್ಜಮ್ಮ ವಿವರಿಸಿದ್ದಾರೆ.

    ನನಗೆ ಕಷ್ಟಪಟ್ಟು ಜೀವನ ಕಟ್ಟಿಕೊಳ್ಳಬೇಕು, ನನ್ನ ಮಕ್ಕಳನ್ನು ನನಗೆ ಸಾಕಬೇಕು ಅನ್ನೋದು ತುಂಬಾ ಹಠವಿತ್ತು. ಅಲ್ಲಿಂದ ನನ್ನ ಜೀವನ ನಾನು ಕಟ್ಟಿಕೊಂಡೆ. ಆಗ ಯಜಮಾನ್ರು ನನ್ನ ಬೆನ್ನುಲಾಬಿ ನಿಂತುಕೊಂಡ್ರು. ಇಲ್ಲ ಅಂದಿದ್ರೆ ಇಂದು ನಾನು ಒಬ್ಬ ಕಲಾವಿದೆ ಆಗಲು ಸಾಧ್ಯವೇ ಇರಲಿಲ್ಲ. 1996, 97, 98 ನನಗೆ ತುಂಬಾನೆ ಸವಾಲಾಗಿದ್ದ ವರ್ಷಗಳು. 1998ರಲ್ಲಿ ನಾನು ಸೀರಿಯಲ್ ಮಾಡಲು ಇಳಿದಾಗಲೂ ನನ್ನ ಬಳಿ ಸೀರೆಗಳಿರಲಿಲ್ಲ. ವಾರಕ್ಕೆ 10 ರೂ. ನಂತೆ ಇನ್‍ಸ್ಟಾಲ್ ಮೆಂಟ್ ನಲ್ಲಿ ಸೀರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಇಂದಿಗೂ ಆ ಸೀರೆಗಳು ನನ್ನ ಬಳಿ ಇವೆ. ಇವೆಲ್ಲವೂ ನನಗೆ ಒಳ್ಳೆಯ ಮೆಮೊರಿ ಕೊಟ್ಟಿದೆ ಎಂದು ಗದ್ಗದಿತರಾದರು.

    ಇದೇ ವೇಳೆ ಮಗನ ಆರೋಗ್ಯದ ಬಗ್ಗೆ ಗ್ದಗದಿತರಾದ ಅಜ್ಜಮ್ಮ, ಇಂದು ನನ್ನ ಒಬ್ಬ ಮಗ ಕೈತುಂಬಾ ಸಂಬಳ ತರುತ್ತಿದ್ದಾನೆ, ಖುಷಿಯಾಗಿದ್ದೀವಿ. ಮಗ ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ. ಈ ವಿಷಯದಲ್ಲಿ ನನಗೆ ನಾನೇ ಹೆಮ್ಮೆ ವ್ಯಕ್ತಪಡಿಸುತ್ತಿದ್ದೀನಿ. ಬಿಗ್ ಬಾಸ್ ತುಂಬಾ ದೊಡ್ಡ ವೇದಿಕೆಯಾಗಿದ್ದು ನನಗೆ ತುಂಬಾ ಇಷ್ಟ ಆಗಿದೆ. ಹೀಗಾಗಿ ನಾನು ಅದರಲ್ಲಿ ಭಾಗವಹಿಸಲೇಬೇಕು ಎಂಬ ಹಠ ಇತ್ತು. ಇಂದು ನನ್ನ ಕನಸು ನನಸಾಗಿದೆ. ಆದರೆ ಅಲ್ಲಿ ಹೋದ ತಕ್ಷಣ ನಾನು ವೇಷ ಹಾಕಿಕೊಳ್ಳಲ್ಲ. ಅದು ಗೊತ್ತು ಕೂಡ ಇಲ್ಲ. ನನ್ನ ತಪ್ಪಿದ್ದರೆ ಒಪ್ಪಿಕೊರ್ಳಳುತ್ತೇನೆ, ಆದರೆ ನನ್ನ ವಿರುದ್ಧ ಮಾತನಾಡಿದ್ರೆ ನಾನು ಸಹಿಸಿಕೊಳ್ಳಲ್ಲ ಎಂದು ಖಡಕ್ ಆಗಿ ತಿಳಿಸಿದ್ದಾರೆ.

  • ಪುಟ್ಟಗೌರಿ ಧಾರಾವಾಹಿ ಮುಗಿಯ್ತಿದೆ ಎಂದು ಖುಷಿಯಲ್ಲಿದ್ದವರಿಗೆ ಬಿಗ್ ಶಾಕ್

    ಪುಟ್ಟಗೌರಿ ಧಾರಾವಾಹಿ ಮುಗಿಯ್ತಿದೆ ಎಂದು ಖುಷಿಯಲ್ಲಿದ್ದವರಿಗೆ ಬಿಗ್ ಶಾಕ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಗೌರಿ ಮದುವೆ’ ಮುಗಿಯುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ ಧಾರಾವಾಹಿ ಮುಗಿಯುತ್ತಿದೆ ಎಂದು ಖುಷಿಯಲ್ಲಿದ್ದವರಿಗೆ ಈಗ ಶಾಕಿಂಗ್ ನ್ಯೂಸ್ ಸಿಕ್ಕಿದೆ.

    ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ನಟಿ ಗೌರಿ ಪಾತ್ರಧಾರಿಯ ರಂಜಿನಿ ರಾಘವನ್ ಸೀರಿಯಲ್‍ನಿಂದ ಹೊರಬಂದಿದ್ದಾರೆ. ರಂಜಿನಿ ಧಾರಾವಾಹಿಯಿಂದ ಹೊರಬಂದಿದ್ದಕ್ಕೆ ಪುಟ್ಟಗೌರಿ ಮದುವೆ ಮುಗಿಸುತ್ತಿದ್ದಾರೆ ಎನ್ನುವ ವದಂತಿಗೆ ಈಗ ಫುಲ್‍ಸ್ಟಾಪ್ ಬಿದ್ದಿದೆ. ಧಾರಾವಾಹಿ ಈಗಲೇ ಮುಗಿಯುವುದಿಲ್ಲ ಎಂದು ನಿರ್ದೇಶಕ ರಾಮ್. ಜಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕನ್ನಡ ಪ್ರೇಕ್ಷಕರಿಗೆ ಪುಟ್ಟಗೌರಿ ಕಡೆಯಿಂದ ಗುಡ್ ನ್ಯೂಸ್

    ಪುಟ್ಟಗೌರಿ ಧಾರಾವಾಹಿ ಸದ್ಯಕ್ಕೆ ಮುಗಿಯಲ್ಲ. ಈ ಧಾರಾವಾಹಿ ಇನ್ನೂ ಮುಂದುವರಿಯಲಿದೆ. ಪುಟ್ಟಗೌರಿ ಮದುವೆ ಮುಗಿಯುತ್ತದೆ ಎನ್ನುವುದು ಕೇವಲ ಗಾಸಿಪ್ ಮಾತ್ರವಾಗಿದೆ. ರಂಜಿನಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ಅವರು ಈ ಧಾರಾವಾಹಿಯಿಂದ ಹೊರ ಹೋಗಿದ್ದಾರೆ. ಅವರು ಧಾರಾವಾಹಿಯಿಂದ ಹೊರಹೋಗಿದ್ದಾರೆ ಎನ್ನುವ ಮಾತ್ರಕ್ಕೆ ನಾವು ಈ ಸೀರಿಯಲ್ ನನ್ನು ಮುಗಿಸುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಿರುತೆರೆ ವೀಕ್ಷಕರಿಗೆ ಬಿಗ್ ಶಾಕಿಂಗ್ ನ್ಯೂಸ್

    ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಒಂದು ಹೊಸ ಪಾತ್ರದ ಪರಿಚಯವಾಗಲಿದೆ. ಪುಟ್ಟಗೌರಿಯಲ್ಲಿ ಮಂಗಳ ಗೌರಿಯನ್ನು ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ. ಪುಟ್ಟಗೌರಿ ಪಾತ್ರಕ್ಕೆ ಇರುವ ಪ್ರಾಮುಖ್ಯತೆಯನ್ನು ಮಂಗಳಗೌರಿಗೂ ನೀಡಲಿದ್ದೇವೆ. ಮಂಗಳಗೌರಿ ಪಾತ್ರದಿಂದ ಈ ಧಾರಾವಾಹಿಗೆ ಒಂದು ಟ್ವಿಸ್ಟ್ ಸಿಗಲಿದೆ ಎಂದು ರಾಮ್. ಜಿ ತಿಳಿಸಿದ್ದಾರೆ.

    ಪುಟ್ಟಗೌರಿ ಮದುವೆಯಿಂದ ಹೊರಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಂಜಿನಿ, ಸಿನಿಮಾದತ್ತ ಗಮನ ಹರಿಸುವ ಸಲುವಾಗಿ ಧಾರಾವಾಹಿಯಿಂದ ಹೊರಬಂದಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧಿ ಮನೋಜ್ ನಟನೆಯ `ಟಕ್ಕರ್’ ಚಿತ್ರದಲ್ಲಿ ರಂಜಿನಿ ನಾಯಕಿಯಾಗಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿರುತೆರೆ ವೀಕ್ಷಕರಿಗೆ ಬಿಗ್ ಶಾಕಿಂಗ್ ನ್ಯೂಸ್

    ಕಿರುತೆರೆ ವೀಕ್ಷಕರಿಗೆ ಬಿಗ್ ಶಾಕಿಂಗ್ ನ್ಯೂಸ್

    ಬೆಂಗಳೂರು: ಕಿರುತೆರೆ ವೀಕ್ಷಕರಿಗೆ ಒಂದು ಬಿಗ್ ಶಾಕಿಂಗ್ ನ್ಯೂಸ್ ಕಾದಿದೆ. ಇನ್ನೊಂದೇ ತಿಂಗಳು ನಿಮಗೆ ಪುಟ್ಟಗೌರಿಯ ದರ್ಶನ ದೊರೆಯಲಿದೆ.

    ಪುಟ್ಟಗೌರಿ ಎಂದೇ ನಟಿ ರಂಜಿನಿ ರಾಘವನ್ ಜನರ ಮನಸ್ಸನ್ನು ಗೆದ್ದಿದ್ದರು. ಆದರೆ ಈಗ ಅವರು ಪುಟ್ಟಗೌರಿ ಧಾರಾವಾಹಿಯಿಂದ ಹೊರಬರುತ್ತಿದ್ದಾರೆ. ರಂಜಿನಿ ತಮ್ಮ ನಾಲ್ಕುವರೆ ವರ್ಷಗಳ ಸೀರಿಯಲ್ ಜರ್ನಿಗೆ ಬ್ರೇಕ್ ಹಾಕಲಿದ್ದಾರೆ. ಸದ್ಯ ಈ ತಿಂಗಳ ಕೊನೆಯವರೆಗೆ ಮಾತ್ರ ರಂಜಿನಿ ಪುಟ್ಟಗೌರಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಕನ್ನಡ ಪ್ರೇಕ್ಷಕರಿಗೆ ಪುಟ್ಟಗೌರಿ ಕಡೆಯಿಂದ ಗುಡ್ ನ್ಯೂಸ್

    ಪುಟ್ಟಗೌರಿ ಮದುವೆ ಕಿರುತೆರೆಯಲ್ಲಿ ನಂಬರ್ 1 ಧಾರಾವಾಹಿ ಆಗಿತ್ತು. ರಂಜಿನಿ ಒಂದು ಎಪಿಸೋಡ್‍ಗೆ ಸುಮಾರು 7 ರಿಂದ 8 ಸಾವಿರ ಸಂಭಾವನೆ ಪಡೆಯುತ್ತಿದ್ದರು. ಅಲ್ಲದೇ ಕನ್ನಡ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕನ್ನಡದ ಕಿರುತೆರೆ ನಟಿ ಎಂದು ಕರೆಸಿಕೊಳ್ಳುತ್ತಿದ್ದರು.

    ರಂಜಿನಿ ರಾಘವನ್ ಪುಟ್ಟಗೌರಿ ಧಾರಾವಾಹಿಗಾಗಿ ಕುದುರೆ ಸವಾರಿ ಸಹ ಕಲಿತಿದ್ದರು. ಅಲ್ಲದೇ ಪುಟ್ಟುಗೌರಿ ಮದುವೆ ಧಾರಾವಾಹಿಯಲ್ಲಿ ನಡುವೆಯೇ ‘ರಾಜಹಂಸ’ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಈಗ ರಂಜಿನಿ ಪುಟ್ಟಗೌರಿ ಧಾರಾವಾಹಿಯಿಂದ ಹೊರಬಂದಿದ್ದು, ಎಲ್ಲರಿಗೂ ಅನುಮಾನ ಹುಟ್ಟಿಸಿದೆ. ರಂಜಿನಿ ಬಿಗ್ ಬಾಸ್ ಮನೆಗೆ ಹೋಗಲು ಸೀರಿಯಲ್ ತೊರೆದರಾ ಎಂಬ ಅನುಮಾನ ಶುರುವಾಗಿದೆ. ಇದೇ ಅಕ್ಟೋಬರ್ 21ರಿಂದ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗುತ್ತಿದೆ. ಬಿಗ್ ಬಾಸ್ ಮನೆಗೆ ಹೋಗುವುದರ ಬಗ್ಗೆ ರಂಜಿನಿ ಗುಟ್ಟು ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ರಂಜಿನಿ ಸಿನಿಮಾದತ್ತ ಗಮನ ಹರಿಸುವ ಸಲುವಾಗಿ ಧಾರಾವಾಹಿಯಿಂದ ಹೊರಬಂದಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧಿ ಮನೋಜ್ ನಟನೆಯ ‘ಟಕ್ಕರ್’ ಚಿತ್ರದಲ್ಲಿ ರಂಜಿನಿ ನಾಯಕಿಯಾಗಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv